ಹುಬ್ಬಳ್ಳಿ ಡಿ.20: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಧಾರವಾಡ ಮತ್ತು ಹುಬ್ಬಳ್ಳಿಯ ರಾಜ್ಯ ಸಮಾಚಾರ ಕೇಂದ್ರ ಕಚೇರಿಯಲ್ಲಿ 26 ವರ್ಷಗಳ ಕಾಲ ವಾಹನ ಚಾಲಕರಾಗಿ ಸೇವೆ ಸಲ್ಲಿಸಿದ ರಾಮಚಂದ್ರ ಉಕ್ಕಲಿ ಮತ್ತು 25 ವರ್ಷಗಳಿಂದ ವಾಹನ ಚೊಕಟ್ಟಗಾರ್ತಿಯಾಗಿ ಸೇವೆಯಲ್ಲಿ ನಿರತರಾಗಿರುವ ಧರ್ಮಾಬಾಯಿ ನಗರಿ ಅವರಿಗೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಮುಂಬಡ್ತಿ ಹೊಂದಿರುವುದರಿAದ ಅವರನ್ನು ಇಂದು ರಾಜ್ಯ ಸಮಾಚಾರ ಕೇಂದ್ರದಲ್ಲಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಸುಳ್ಳೊಳ್ಳಿ ಅವರು ಮುಂಬಡ್ತಿ ಹೊಂದಿರುವ ನೌಕರರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಹುಬ್ಬಳ್ಳಿ ರಾಜ್ಯ ಸಮಾಚಾರ ಕೇಂದ್ರ ಕಚೇರಿಯಲ್ಲಿ ನಿಮ್ಮ ಸೇವೆ ಅಪಾರವಾದದ್ದಾಗಿದೆ. ಮುಂದಿನ ದಿನಗಳಲ್ಲಿ ನೀವು ಮುಂಬಡ್ತಿ ಹೊಂದಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಅಲಂಕರಿಸಲಿದ್ದು, ಜವಾಬ್ದಾರಿಯುತ ಪ್ರಾಮಾಣಿಕ ಸೇವೆ ಸಲ್ಲಿಸಬೇಕೆಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಥಮ ದರ್ಜೆ ಸಹಾಯಕಿಯರಾದ ಭಾರತಿ.ಎಸ್.ಮಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಪ್ರಥಮ ದರ್ಜೆ ಸಹಾಯಕರಾದ ಸಿ.ವಿ.ಭೋವಿ, ವಾಹನ ಚಾಲಕರಾದ ಮಲ್ಲಿಕಾರ್ಜುನ ಕಂಪ್ಲಿ, ಶಿವಪ್ಪ ಕಮತಿ, ಛಾಯಾಗ್ರಾಹಕರಾದ ಕಿರಣ ಬಾಕಳೆ, ಶಿವಾನಂದ ಭೀಮಪ್ಪನವರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.