Author: AIN Author

ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬೆಂಕಿ ಹಚ್ಚಿ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಸಂದೀಪ್ ರೆಡ್ಡಿ ವಂಗ ಅವರ ಮ್ಯಾಜಿಕ್ ಮತ್ತೊಮ್ಮೆ ಮೋಡಿ ಮಾಡಿದ್ದು ಯಾರೂ ಅಲ್ಲಗಳೆಯುವಂತಿಲ್ಲ. ಅನಿಮಲ್ ಚಿತ್ರದಲ್ಲಿ ರಣಬೀರ್ ತನ್ನ ನಟನಾ ಪರಾಕ್ರಮದಿಂದ ಪ್ರೇಕ್ಷಕರನ್ನು ಆಕರ್ಷಿಸಿದರೆ, ಬಾಬಿ ಡಿಯೋಲ್ ಗರಿಷ್ಠ ಗಮನ ಸೆಳೆದರು ಜಮಾಲ್ ಕೂಡುನಲ್ಲಿ ಅಬ್ರಾರ್ ಹಕ್ ಆಗಿ ಬಾಬಿ ಡಿಯೋಲ್ ಅವರ ನೃತ್ಯ ಇಂಟರ್ನೆಟ್ ಅನ್ನು ತೆಗೆದುಕೊಂಡಿದೆ. ಇನ್‌ಸ್ಟಾಗ್ರಾಮ್ ರೀಲ್‌ಗಳು, ಎಕ್ಸ್ ಅಥವಾ ವಾಟ್ಸಾಪ್ ಆಗಿರಲಿ, ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹೆಚ್ಚು ಪ್ರಸಾರ ಮಾಡಲಾಗಿದೆ. ಟ್ರೆಂಡಿಂಗ್ ಹಾಡಿನಲ್ಲಿ ಸೆಲೆಬ್ರಿಟಿಗಳು ತಮ್ಮ ನೃತ್ಯದ ಚಲನೆಯನ್ನು ಪ್ರದರ್ಶಿಸುತ್ತಿದ್ದರೆ ಅಭಿಮಾನಿಗಳು ಅದರಲ್ಲಿ ರೀಲ್‌ಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ. ಕುತೂಹಲಕಾರಿಯಾಗಿ, ಬಾಬಿ ಡಿಯೋಲ್ ಪಾತ್ರದ ಅಬ್ರಾರ್ ಹಕ್ ಅನಿಮಲ್‌ನಲ್ಲಿ ಮೂವರು ಹೆಂಡತಿಯರನ್ನು ಹೊಂದಿದ್ದಾರೆ. ಆಕ್ಷನ್ ಡ್ರಾಮಾ ಚಿತ್ರದಲ್ಲಿ ಶಬಾನಾ ಹರೂನ್, ಶಫಿನಾ ಷಾ ಮತ್ತು ಮಾನ್ಸಿ ತಕ್ಸಾಕ್ ಅವರ ಮೂವರು ಆನ್-ಸ್ಕ್ರೀನ್ ಪತ್ನಿಯರಾಗಿ ನಟಿಸಿದ್ದಾರೆ, ಇದು ಬಾಲಿವುಡ್‌ನಲ್ಲಿ…

Read More

ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೈತರಿಗಾಗಿ ಕೇಂದ್ರ ಸರ್ಕಾರ ಪರಿಚಯು ಪ್ರಮುಖ 10 ಯೋಜನೆಗಳು ಇಲ್ಲಿವೆ. ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟವು  eNAM ಅನ್ನು ಅನುಷ್ಠಾನಗೊಳಿಸುವ ಪ್ರಮುಖ ಪಾತ್ರ ವಹಿಸುತ್ತದೆ.ಇದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೃಷಿ ಮಾರಾಟದಲ್ಲಿ ಏಕರೂಪತೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಭಾರತದ ಕೃಷಿಯಲ್ಲಿ ನಿಯಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯುವ ಕೃಷಿ ವಿಧಾನಗಳನ್ನು ಉತ್ತೇಜಿಸಲು ಉದ್ದೇಶದಿಂದ  ಭಾರತ ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಯೋಜನೆಯೇ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ. ಇದರ ಘೋಷಾವಾಕ್ಯವು ಪ್ರತಿ   ಜಮೀನಿಗೂ ನೀರು. ಪರಂಪರಾಗತ್ ಕೃಷಿ ವಿಕಾಸ ಯೋಜನೆ (PKVY) ದೇಶದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಪರಂಪರಾಗತ್ ಕೃಷಿ ವಿಕಾಸ ಯೋಜನೆಯನ್ನು ಕೇಂದ್ರ ಸರ್ಕಾರವು 2015ರಲ್ಲಿ  ಪ್ರಾರಂಭಿಸಿತು. ಈ ಯೋಜನೆಯು ರೈತರು ದೊಡ್ಡ ಪ್ರದೇಶಗಳಲ್ಲಿ ಸಾವಯವ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಇದರ ಲಾಭವನ್ನು ಪಡೆಯಲು ಪ್ರತಿ ಕ್ಲಸ್ಟರ್ ಅಥವಾ ಗುಂಪು ಪರಂಪರಾಗತ್ ಕೃಷಿ ವಿಕಾಸ ಯೋಜನೆ…

Read More

ಬೆಂಗಳೂರು: ರಾಜ್ಯದಲ್ಲಿ ಹಿಜಬ್‌ (Hijab) ನಿಷೇಧ ವಾಪಸ್‌ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಘೋಷಿಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹಿಜಬ್‌ ನಿಷೇಧಿಸಿತ್ತು. ಅದನ್ನು ವಾಪಸ್‌ ಪಡೆಯಲಾಗುವುದು. ಹಿಜಬ್‌ ನಿಷೇಧ ವಾಪಸ್‌ಗೆ ತಿಳಿಸಿದ್ದೇನೆ ಎಂದು ಸಿಎಂ ತಿಳಿಸಿದರು. ಉಡುಪು ಅವರವರ ಇಷ್ಟ. ಹಿಜಬ್ ನಿಷೇಧ ವಾಪಸ್‌ಗೆ ಹೇಳಿದ್ದೀನಿ. ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬೋಗಸ್. ಬಟ್ಟೆ, ಉಡುಪು, ಜಾತಿ ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಾವು ಅಂತಹ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. https://ainlivenews.com/saturday-rashi-prediction-december-232023/ ಹಿಜಬ್ ನಿಷೇಧದ ಆದೇಶ ವಾಪಸ್ ಪಡೆಯುತ್ತೇವೆ. ಹಿಜಬ್ ಧರಿಸಿ ಶಾಲಾ-ಕಾಲೇಜುಗಳಿಗೆ, ಪರೀಕ್ಷೆ ಬರೆಯಲು ಹೋಗಬಹುದು ಎಂದು ತಿಳಿಸಿದರು. ಹಿಜಬ್‌ ನಿಷೇಧದ ಆದೇಶ ಹಿಂಪಡೆಯಲು ಹೇಳಿದ್ದೇನೆ. ಡ್ರೆಸ್, ಊಟ‌ ಮಾಡುವುದು ನಿಮಗೆ ಸೇರಿದ್ದು. ನಾನೇಕೆ ನಿಮಗೆ ಅಡ್ಡಿಪಡಿಸಲಿ? ನೀನು ಯಾವ್ ಡ್ರೆಸ್ ಹಾಕಿಕೊಳ್ಳುತ್ತೀಯಾ ಹಾಕಿಕೋ. ನೀನು ಯಾವ ಊಟ ಮಾಡುತ್ತೀಯಾ ಮಾಡು.…

Read More

Redmi Smart Fire TV 4K ಅನ್ನು ಶುಕ್ರವಾರ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಕಂಪನಿಯ ಹೊಸ 43-ಇಂಚಿನ ಸ್ಮಾರ್ಟ್ ಟಿವಿ ದೇಶದಲ್ಲಿ ಪಾದಾರ್ಪಣೆ ಮಾಡಿದೆ. ಇದು 60Hz ರಿಫ್ರೆಶ್ ದರ ಮತ್ತು HDR10 ವಿಷಯಕ್ಕೆ ಬೆಂಬಲದೊಂದಿಗೆ 4K ಪ್ರದರ್ಶನವನ್ನು ಹೊಂದಿದೆ. ಸ್ಮಾರ್ಟ್ ಟಿವಿ 3,840 x 2,160 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. Redmi Smart Fire TV 4K ಮಾಲಿ G52 MC1 GPU ಜೊತೆಗೆ ಕ್ವಾಡ್-ಕೋರ್ A55 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು ಬ್ಲೂಟೂತ್ 5.0, ವೈ-ಫೈ, ಏರ್‌ಪ್ಲೇ 2 ಮತ್ತು ಮಿರಾಕಾಸ್ಟ್ ಸಂಪರ್ಕ ಆಯ್ಕೆಗಳನ್ನು ನೀಡುತ್ತದೆ. ಹೊಸದಾಗಿ ಬಿಡುಗಡೆಯಾದ ಸ್ಮಾರ್ಟ್ ಟಿವಿಯು ಡಾಲ್ಬಿ ಆಡಿಯೋ, ಡಿಟಿಎಸ್ ವರ್ಚುವಲ್ ಎಕ್ಸ್ ಮತ್ತು ಡಿಟಿಎಸ್-ಎಚ್‌ಡಿ ತಂತ್ರಜ್ಞಾನದೊಂದಿಗೆ 24W ಸ್ಪೀಕರ್‌ಗಳನ್ನು ಒಳಗೊಂಡಿದೆ. ಭಾರತದಲ್ಲಿ Redmi Smart Fire TV 4K ಬೆಲೆಯಲ್ಲ ಲಭ್ಯ ಭಾರತದಲ್ಲಿ Redmi Smart Fire TV 4K ಬೆಲೆಯನ್ನು ರೂ. 26,999. ಸ್ಮಾರ್ಟ್ ಟಿವಿ Mi.com ಮತ್ತು Amazon ಮೂಲಕ…

Read More

ಚಳಿಗಾಲದಲ್ಲಿ ನಾವು ನಿತ್ಯ ಸೇವನೆ ಮಾಡುವ ಆಹಾರದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಹವಾಮಾನ ಬದಲಾದಂತೆ,ನಮ್ಮ ದೇಹ ಬದಲಾವಣೆಗಳಿಗೆ ಒಗ್ಗಬೇಕಿರುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ನಾವು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತೇವೆ. ಆದ್ದರಿಂದ ಈ ಸಮಯದಲ್ಲಿ ನಾವು ಸೇವಿಸುವ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಿದೆ. ಬ್ರೇಕ್‌ಫಾಸ್ಟ್‌: ಡ್ರೈ ಫ್ರೂಟ್ಸ್‌ ಹಾಗೂ ತುಪ್ಪದಿಂದ ತಯಾರಿಸಿದ ಸಿಹಿ ಪೊಂಗಲ್‌. ಇದರಲ್ಲಿ ವಿಟಮಿನ್‌ ಬಿ2, ವಿಟಮಿನ್‌ ಇ, ಮೆಗ್ನೀಷಿಯಂ ಅಂಶಗಳಿವೆ. ಮಧ್ಯಾಹ್ನದ ಊಟ: ಜೋಳದ ರೊಟ್ಟಿ, ಸಾಸಿವೆ ಸೊಪ್ಪು-ಪಾಲಕ್‌ ಸೊಪ್ಪಿನ ಗೊಜ್ಜು ರಾತ್ರಿ ಊಟ: ಕಾಳುಗಳಿಂದ ತಯಾರಿಸಿದ ಕರಿ, ಅನ್ನ ತರಕಾರಿ ಸಾಂಬಾರ್‌ ಹಾಗೂ ಅನ್ನ. ನಿಮಗೇನಾದರೂ ಸಿಹಿ ತಿನ್ನಬೇಕು ಎನಿಸಿದರೆ ಕ್ಯಾರೆಟ್‌ ಹಲ್ವಾ ಸೇವಿಸಬಹುದು. ಗೋಧಿ ಗಂಜಿ ಇದಕ್ಕೆ ನೀವು ಬೆಲ್ಲ ಅಥವಾ ಉಪ್ಪು ಏನಾದರೂ ಸೇರಿಸಿ ತಿನ್ನಬಹುದು. ಇದರೊಂದಿಗೆ ನೀವು ವಿವಿಧ ಡ್ರೈ ಫ್ರೂಟ್ಸ್‌ ಸೇವಿಸಬಹುದು. ಗೋಧಿಯಿಂದ ತಯಾರಿಸಿದ ಯಾವುದೇ ಆಹಾರ. ಜೊತೆಗೆ ತರಕಾರಿ ಸಲಾಡ್‌ ಹೆಸರುಕಾಳಿನ ದೋಸೆ ಅಥವಾ ಅವಲಕ್ಕಿಯಿಂದ ತಯಾರಿಸಿದ ಆಹಾರ

Read More

ಮಧುಮೇಹಿಗಳಿಗೆ ನೆರವಾಗುವ ಹಾಗೂ ಇತರ ಅಂಗಗಳು ಮಧುಮೇಹದಿಂದ ಹಾನಿಗೆ ಒಳಗಾಗುವುದನ್ನು ತಡೆಯುವ ಕೆಲವು ಆಹಾರಗಳಿವೆ ಹಾಗೂ ಬೆಂಡೆಕಾಯಿ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ. ಬೆಂಡೆಕಾಯಿಯನ್ನು ಎಳತಾಗಿದ್ದಾಗ ಖಾದ್ಯಗಳ ರೂಪದಲ್ಲಿ ಸೇವಿಸಬಹುದು. ಇವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಯೂ ಸೇವಿಸಬಹುದು. ಈ ಎರಡೂ ವಿಧಾನಗಳ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದೆ ಹಾಗೂ ಫಲಿತಾಂಶಗಳು ಮಧುಮೇಹಿಗಳ ಪಾಲಿಗೆ ಸಂತೋಷಕರವಾಗಿಯೇ ಇವೆ. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ: ಬೆಂಡೆಕಾಯಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ, ಅಂದರೆ ಇದು ತ್ವರಿತ ಸ್ಪೈಕ್ಗಳನ್ನು ತಡೆಯುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದೆ: ಬೆಂಡೆಕಾಯಿಯಲ್ಲಿರುವ ಫೈಬರ್ ಜೀರ್ಣಕ್ರಿಯೆ ಮತ್ತು ಕಾರ್ಬೋಹೈಡ್ರೇಟ್ ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಸ್ಪೈಕ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ: ಬೆಂಡೆಕಾಯಿಯಲ್ಲಿ ಕ್ವೆರ್ಸೆಟಿನ್ ಮತ್ತು ಕ್ಯಾಟೆಚಿನ್ ಗಳಂತಹ ಉತ್ಕರ್ಷಣ ನಿರೋಧಕಗಳಿವೆ, ಇದು ಅಧಿಕ…

Read More

ನವದೆಹಲಿ: 60 ವರ್ಷದ ಮಹಿಳೆಯೊಂದಿಗೆ (Woman) ದೈಹಿಕ ಸಂಪರ್ಕ (ಲೈಂಗಿಕ ಕ್ರಿಯೆಯೂ ಸೇರಿದಂತೆ) ಬೆಳೆಸಿ, ಆಕೆಯನ್ನೇ ಕೊಂದು ಶವವನ್ನು ಬೆಡ್‌ರೂಮಿನಲ್ಲಿ ಬಚ್ಚಿಟ್ಟಿದ್ದ 31 ವರ್ಷದ ವ್ಯಕ್ತಿಯನ್ನ ಬಂಧಿಸಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದೆ. ಆಶಾದೇವಿ ಕೊಲೆಯಾದ ಮಹಿಳೆ, 31 ವರ್ಷದ ದೇವೇಂದ್ರ ಅಲಿಯಾಸ್‌ ದೇವ್‌ ಕೊಲೆ ಆರೋಪಿ ಎಂದು ಗುರುತಿಸಲಾಗಿದೆ. 31 ವರ್ಷದ ದೇವೇಂದ್ರ 60 ವರ್ಷದ ಮಹಿಳೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಎಂದು ದೆಹಲಿ ಪೊಲೀಸರು (Delhi Police) ತಿಳಿಸಿದ್ದಾರೆ. ಮೃತ ಮಹಿಳೆಯು ದೇವೇಂದ್ರ ಬೇರೋಬ್ಬಾಕೆ ವಿವಾಹವಾಗುವುದನ್ನು ತಡೆದಿದ್ದಕ್ಕೆ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. https://ainlivenews.com/apple-watch-series-9-watch-ultra-2-sales-halt-in-us-why/ ಡಿಸಿಪಿ ಜಾಯ್ ಟಿರ್ಕಿ ಪ್ರಕಾರ, ಆರೋಪಿಯನ್ನು ಉತ್ತರ ಪ್ರದೇಶದ (Uttar Pradesh) ಅಲಿಗಢದಲ್ಲಿ ಬಂಧಿಸಲಾಗಿದೆ. ಹತ್ಯೆಯಾದ ಐದು ದಿನಗಳ ನಂತರ ಶುಕ್ರವಾರ ಈಶಾನ್ಯ ದೆಹಲಿಯ ನಂದ ನಗರ ಪ್ರದೇಶದ ಅವರ ಮನೆಯಿಂದ ಆಶಾದೇವಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.  ಆರೋಪಿ ದೇವೇಂದ್ರ 2015ರಲ್ಲಿ ಕೆಲಸ ಹುಡುಕಿಕೊಂಡು ಅಲಿಗಢಕ್ಕೆ ಬಂದು, ತಾಮ್ರದ ತಂತಿ ಪ್ಯಾಕಿಂಗ್‌ ಮಾಡುವ ಬಿಸಿನೆಸ್‌…

Read More

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ (Corona Virus) ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಶುಕ್ರವಾರ ಒಂದೇ ದಿನ 78 ಕೊರೊನಾ (Covid-19) ಸೋಂಕು ಪ್ರಕರಣಗಳು ವರದಿಯಾಗಿವೆ. ಕೊರೊನಾ ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ. ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 175 ಕ್ಕೆ ಏರಿಕೆಯಾಗಿದೆ. ಕೋವಿಡ್‌-19 ರಿಂದ ಗುಣಮುಖರಾಗಿ ಇಂದು 7 ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 3.29 % ಗೆ ಏರಿಕೆಯಾಗಿದೆ. https://ainlivenews.com/saturday-rashi-prediction-december-232023/ ಬೆಂಗಳೂರಿನಲ್ಲಿ ಇಂದು 68 ಕೊರೊನಾ ಪಾಸಿಟಿವ್‌ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ. ರಾಜಧಾನಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 156 ಕ್ಕೆ ತಲುಪಿದೆ. ಶುಕ್ರವಾರ ಬೆಂಗಳೂರು ಗ್ರಾಮಾಂತರದಲ್ಲಿ 1, ಚಿಕ್ಕಮಗಳೂರಿನಲ್ಲಿ 4, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2, ಮೈಸೂರಿನಲ್ಲಿ 1, ರಾಮನಗರದಲ್ಲಿ 2 ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. 

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರಾದ ಜಮೀರ್ ಅಹ್ಮದ್‌‌ಖಾನ್ ಮತ್ತು ಕೃಷ್ಣಬೈರೇಗೌಡ ಖಾಸಗೀ ವಿಮಾನಯಾನದಲ್ಲಿ ದೆಹಲಿಗೆ ಹೋಗಿಬಂದ ವಿಚಾರ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಬರಗಾಲ ತಾಂಡವವಾಡ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷದ ಪ್ರಮುಖರು ಐಶಾರಾಮಿ ಪ್ರಯಾಣದ ನೆಪದಲ್ಲಿ ಮೋಜು ಮಸ್ತಿ ಬೇಕಿತ್ತಾ ಎಂದು  ವಿಪಕ್ಷ ಬಿಜೆಪಿ ಆಕ್ರೋಶ ಹೊರಹಾಕ್ತಿದೆ. ಇದು ಆಡಳಿತ ಹಾಗೂ ವಿಪಕ್ಷದ ನಡುವೆ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ.. https://ainlivenews.com/saturday-rashi-prediction-december-232023/ ರಾಜ್ಯದಲ್ಲಿ ಬರ ತಾಂಡವವಾಡ್ತಿದೆ ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಬರಬೇಕಾದ ಪರಿಹಾರವನ್ನು ಕೇಳಲು ಸಿಎಂ‌ ಸಿದ್ದರಾಮಯ್ಯ, ಸಚಿವರಾದ ಜಮೀರ್ ಅಹ್ಮದ್ ಖಾನ್, ಕೃಷ್ಣಬೈರೇಗೌಡ ಸೇರಿದಂತೆ ಪ್ರಮುಖ ನಾಯಕರು ದೆಹಲಿಗೆ ಹೋಗಿ ಪ್ರಧಾನಿ ಮೋದಿಯವರನ್ನ ಭೇಟಿ ಮಾಡಿ ಬಂದಿದ್ದಾರೆ. ಇವರೆಲ್ಲಾ ದೆಹಲಿಗೆ ಹೋಗಿಬಂದ ಪ್ರೈವೇಟ್ ಜೆಟ್ ನ ಐಶಾರಾಮಿ ವಿಡಿಯೋವನ್ನ ಸಚಿವ ಜಮೀರ್ ಅಹ್ಮದ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ, ಇದೇ ವಿಚಾರ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು ಇಂತಹ ಸಂಕಷ್ಟದ ಸಮಯದಲ್ಲಿ ಈ ಮೋಜು ಮಸ್ತಿ ಬೇಕಿತ್ತಾ…

Read More

ಪ್ರೇಗ್ ನಗರದ ವಿಶ್ವವಿದ್ಯಾಲಯವೊಂದರಲ್ಲಿ ಭೀಕರ ಶೂಟೌಟ್ ಘಟನೆ ಸಂಭವಿಸಿದೆ. ಚಾರ್ಲ್ಸ್ ಯೂನಿವರ್ಸಿಟಿಯಲ್ಲಿ ಡೇವಿಡ್ ಕೋಝಕ್ ಎಂಬ ವಿದ್ಯಾರ್ಥಿ ತನ್ನ ಸಹಪಾಠಿಗಳನ್ನೇ ಗುಂಡಿಟ್ಟು ಕೊಂದಿದ್ದಾನೆ. ಈ ಶೂಟೌಟ್​ನಲ್ಲಿ 14 ಮಂದಿ ಬಲಿ ಯಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ತಿಳಿದುಬಂದಿದೆ. 24 ವರ್ಷದ ಆರೋಪಿ ಡೇವಿಡ್ ಕೋಝಕ್ ಕೂಡ ಸತ್ತಿದ್ದಾನೆ. ಈ ನರಮೇಧಕ್ಕೆ ಮುನ್ನ ಡೇವಿಡ್ ತನ್ನ ಮನೆಯಲ್ಲಿ ಅಪ್ಪನನ್ನೇ ಕೊಂದು ಹೋಗಿದ್ದ ಘಟನೆಯೂ ಬೆಳಕಿಗೆ ಬಂದಿದೆ. ಒಟ್ಟಾರೆ ಈ ಘಟನೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. https://ainlivenews.com/can-diabetics-eat-dates-here-is-useful-information/ ಯೂನಿವರ್ಸಿಟಿಯಲ್ಲಿ ತನ್ನ ಸಹ-ವಿದ್ಯಾರ್ಥಿಗಳ ಮೇಲೆ ಡೇವಿಡ್ ಕೋಝಕ್ ಯಾಕೆ ಗುಂಡಿನ ದಾಳಿ ಎಸಗಿದ ಎಂದು ಕಾರಣ ಗೊತ್ತಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರಂಭಿಕ ತನಿಖೆಯಲ್ಲಿ, ಡೇವಿಡ್ ಯಾವುದಾದರೂ ಉಗ್ರ ಸಂಘಟನೆ ಜೊತೆ ಸಂಬಂಧ ಹೊಂದಿರುವ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ ಎನ್ನಲಾಗಿದೆ.

Read More