ಚಳಿಗಾಲದಲ್ಲಿ ನಾವು ನಿತ್ಯ ಸೇವನೆ ಮಾಡುವ ಆಹಾರದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಹವಾಮಾನ ಬದಲಾದಂತೆ,ನಮ್ಮ ದೇಹ ಬದಲಾವಣೆಗಳಿಗೆ ಒಗ್ಗಬೇಕಿರುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ನಾವು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತೇವೆ. ಆದ್ದರಿಂದ ಈ ಸಮಯದಲ್ಲಿ ನಾವು ಸೇವಿಸುವ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಿದೆ.
ಬ್ರೇಕ್ಫಾಸ್ಟ್: ಡ್ರೈ ಫ್ರೂಟ್ಸ್ ಹಾಗೂ ತುಪ್ಪದಿಂದ ತಯಾರಿಸಿದ ಸಿಹಿ ಪೊಂಗಲ್. ಇದರಲ್ಲಿ ವಿಟಮಿನ್ ಬಿ2, ವಿಟಮಿನ್ ಇ, ಮೆಗ್ನೀಷಿಯಂ ಅಂಶಗಳಿವೆ.
ಮಧ್ಯಾಹ್ನದ ಊಟ: ಜೋಳದ ರೊಟ್ಟಿ, ಸಾಸಿವೆ ಸೊಪ್ಪು-ಪಾಲಕ್ ಸೊಪ್ಪಿನ ಗೊಜ್ಜು
ರಾತ್ರಿ ಊಟ: ಕಾಳುಗಳಿಂದ ತಯಾರಿಸಿದ ಕರಿ, ಅನ್ನ
ತರಕಾರಿ ಸಾಂಬಾರ್ ಹಾಗೂ ಅನ್ನ. ನಿಮಗೇನಾದರೂ ಸಿಹಿ ತಿನ್ನಬೇಕು ಎನಿಸಿದರೆ ಕ್ಯಾರೆಟ್ ಹಲ್ವಾ ಸೇವಿಸಬಹುದು.
ಗೋಧಿ ಗಂಜಿ ಇದಕ್ಕೆ ನೀವು ಬೆಲ್ಲ ಅಥವಾ ಉಪ್ಪು ಏನಾದರೂ ಸೇರಿಸಿ ತಿನ್ನಬಹುದು. ಇದರೊಂದಿಗೆ ನೀವು ವಿವಿಧ ಡ್ರೈ ಫ್ರೂಟ್ಸ್ ಸೇವಿಸಬಹುದು.
ಗೋಧಿಯಿಂದ ತಯಾರಿಸಿದ ಯಾವುದೇ ಆಹಾರ. ಜೊತೆಗೆ ತರಕಾರಿ ಸಲಾಡ್
ಹೆಸರುಕಾಳಿನ ದೋಸೆ ಅಥವಾ ಅವಲಕ್ಕಿಯಿಂದ ತಯಾರಿಸಿದ ಆಹಾರ