Author: AIN Author

ನವದೆಹಲಿ:- ಡಿಸೆಂಬರ್ 30ಕ್ಕೆ ಅಯೋಧ್ಯೆಯಲ್ಲಿ ಮೋದಿ ರೋಡ್​ಶೋ ನಡೆಸಲಿದ್ದಾರೆ ಎಂದು ಅಯೋಧ್ಯೆ ಆಯುಕ್ತ ಗೌರವ್ ದಯಾಳ್ ಹೇಳಿದ್ದಾರೆ. ಅಂದು ಪ್ರಧಾನಿ ಅಯೋಧ್ಯೆ ರೈಲು ನಿಲ್ದಾಣ ಮತ್ತು ‘ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಮುಂದಿನ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ರೋಡ್ ಶೋ ನಡೆಸಲಿದ್ದಾರೆ. ಅಲ್ಲದೇ ಪ್ರಧಾನಿ ತಮ್ಮ ಭೇಟಿ ವೇಳೆ 3,284.60 ಕೋಟಿ ರೂ.ಗೂ ಅಧಿಕ ಮೊತ್ತದ 29 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದರು. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ವಿುಸಲಾದ ದೇವಾಲಯದಲ್ಲಿ ಜ. 22ರಂದು ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಡಿ. 30ರಿಂದ ಜನವರಿ ಕೊನೆಯವರೆಗೆ ನಡೆಯುವ ಕಾರ್ಯಕ್ರಮಗಳ ಸರಣಿಯ ರಾಮೋತ್ಸವಕ್ಕಾಗಿ 100 ಕೋಟಿ ರೂಪಾಯಿಯನ್ನು ಉತ್ತರ ಪ್ರದೇಶ ಸರ್ಕಾರ ತೆಗೆದಿರಿಸಿದೆ. ಇದಕ್ಕೆ ಮುಂಚಿತವಾಗಿ, ನಗರದ ಸೌಂದಯೀಕರಣ, ರಸ್ತೆಗಳ ಅಗಲೀಕರಣ, ಮೂಲಸೌಕರ್ಯಗಳ ನವೀಕರಣ ನಡೆಯುತ್ತಿದೆ. ಸಮಾರಂಭಕ್ಕೆ 3000 ಅತಿ ಗಣ್ಯರು ಸೇರಿದಂತೆ 7000…

Read More

ಸುತ್ತ ಬರಡು ಜಮೀನು, ಸುತ್ತ ಹೊಲಗಳು ಅವುಗಳಲ್ಲಿ ದ್ವಿದಳಧಾನ್ಯ ಬೆಳೆಗಳಾದ ಹುರುಳಿ, ತಡಣೆ , ಅವರೆ, ಹೊಲದ ಸುತ್ತ ನಳನಳಿಸುವ ಅರ್ಕಿಲೇಸ ಮರ, ಅದರ ಮಧ್ಯ ತೆಂಗು,ಮಧ್ಯ ತೊಂಡೆ ಕೃಷಿ ಹಾಗೂ ಅಲ್ಲಲ್ಲಿ ಪುಪ್ಟ ಕೃಷಿ ಇದೆಲ್ಲವೂ ಬೆಳೆದಿರುವುದು ಸಾವಯವ ಕೊಟ್ಟಿಗೆ ಗೊಬ್ಬರದಲ್ಲಿ. ಸಾವಯವ ಕೃಷಿಯ ವಿಧಗಳು : ಸಂಯೋಜಿತ ಸಾವಯವ ಕೃಷಿ. ಕೃಷಿಯು ಪರಿಸರ ಅಗತ್ಯತೆಗಳು ಮತ್ತು ಆರ್ಥಿಕ ಬೇಡಿಕೆಗಳನ್ನು ಸಾಧಿಸಲು ಕೀಟ ನಿರ್ವಹಣೆ ಮತ್ತು ಪೋಷಕಾಂಶಗಳ ನಿರ್ವಹಣೆಯ. ಶುದ್ಧ ಸಾವಯವ ಕೃಷಿ : ಎಲ್ಲಾ ಅಸ್ವಾಭಾವಿಕ ರಾಸಾಯನಿಕಗಳನ್ನು ತಪ್ಪಿಸುವುದು. ಈ ಸಾವಯವ ಕೃಷಿಯ ಪ್ರಯೋಜನಗಳು : ಪ್ರಪಂಚದಾದ್ಯಂತ ಸಾವಯವ ಉತ್ಪನ್ನಕ್ಕೆ ಭಾರಿ ಬೇಡಿಕೆ ಇದು ಪರಿಸರಕ್ಕೆ ಹಾನಿ ಮಾಡುವುದಿಲ್ಲ ದುಬಾರಿ ರಸಗೊಬ್ಬರಗಳು, ಕೀಟನಾಶಕಗಳು, ಬೀಜಗಳ ಅಗತ್ಯವಿಲ್ಲ ಹೆಚ್ಚುವರಿ ಖರ್ಚು ಇಲ್ಲ. ಉತ್ತಮ ಲಾಭ ಆರೋಗ್ಯಕರ ಮಣ್ಣನ್ನು ನಿರ್ಮಿಸುತ್ತದೆ ಜೀವವೈವಿಧ್ಯತೆಯನ್ನು ಉತ್ತೇಜಿಸುತ್ತದೆ ಸಾವಯವ ಫಾರ್ಮ್ ಪ್ರಾರಂಭಿಸುವ ವಿಧಾನ :ನಿಮ್ಮ ಜಮೀನಿನಲ್ಲಿ ಸಾವಯವ ಗೊಬ್ಬರವನ್ನು ಬಳಸಲು ಪ್ರಾರಂಭಿಸಬೇಕು. ಗೊಬ್ಬರವನ್ನು ತಯಾರಿಸಲು ಮುಖ್ಯ ಪದಾರ್ಥಗಳು ಹಸುವಿನ…

Read More

 ಗೃಹ ಖರೀದಿಗೆ ಸಾಲ ನೀಡುವ ಖಾಸಗಿ ಬ್ಯಾಂಕ್‌ಗಳು, ಸಂಬಳ ಪಡೆಯುವವರ ಸಾಲಗಳ ಮೇಲೆ ಶೇ. 9.25 ಬಡ್ಡಿ ವಿಧಿಸಿದೆ. ಅದೇ ಬ್ಯಾಂಕ್‌ಗಳು ಸ್ವಂತ ಉದ್ಯೋಗಿಗಳಿಗೆ ಅಷ್ಟೇ ಮೊತ್ತದ ಸಾಲಕ್ಕೆ ಶೇ. 9.40ರಷ್ಟು ಹೆಚ್ಚಿನ ಬಡ್ಡಿ ವಿಧಿಸಿದೆ. ಬ್ಯಾಂಕ್‌ಗಳು ಉದ್ಯೋಗದಾತರಿಗೆ ಅಂದರೆ ಸಂಬಳ ಪಡೆಯುವವರಿಗೆ ಹಾಗೂ ಸ್ವಂತ ಉದ್ಯೋಗ ಮಾಡುವವರಿಗೆ ಈ ತಾರತಮ್ಯ ಮಾಡಲು ಕೆಲವು ಕಾರಣಗಳಿವೆ. ಅವು ಯಾವುವೆಂದರೆ, ಸಾಮಾನ್ಯವಾಗಿ ಸಾಲ ಒದಗಿಸುವ ಬ್ಯಾಂಕ್‌ಗಳು ಅದರಿಂದ ಬರುವ ಬಡ್ಡಿ ದರವನ್ನೇ ಅವಲಂಬಿಸಿವೆ. ಸಾಲಗಾರ ಬಡ್ಡಿ ಕಟ್ಟುವುದರಲ್ಲಿ ಏನಾದರೂ ಹೆಚ್ಚು ಕಡಿಮೆ ಮಾಡಿದರೆ ಬ್ಯಾಂಕ್‌ಗಳ ಬಡ್ಡಿ ಅಂದರೆ ಆದಾಯ ಖೋತವಾಗುತ್ತದೆ. ಹೀಗಾಗದಂತೆ ತಡೆಯುವುದೇ ಬ್ಯಾಂಕ್‌ಗಳ ಮಹಾನ್‌ ಧ್ಯೇಯ. ಇದಕ್ಕಾಗಿ ಉದ್ಯೋಗ ಭದ್ರತೆ ಇರುವ ವೇತನದಾರರನ್ನು ಬ್ಯಾಂಕ್‌ಗಳು ಹೆಚ್ಚು ನೆಚ್ಚಿಕೊಳ್ಳುತ್ತವೆ ಮತ್ತು ಅಂತಹವರನ್ನು ಕರೆದು ಸಾಲ ಕೊಡುತ್ತವೆ. ವೇತನದಾರರಿಗೆ ನಿಗದಿತ ಆದಾಯವಿರುತ್ತದೆ. ಆದರೆ ಸ್ವಂತ ಉದ್ಯೋಗಿಗಳಲ್ಲಿ ಆದಾಯ ಏರಿಳಿತವಾಗುತ್ತಿರುತ್ತದೆ. ಈ ಕಾರಣ ಬ್ಯಾಂಕ್‌ಗಳು ಸಾಲ ನೀಡುವ ವಿಷಯದಲ್ಲಿ ವೇತನದಾರರಿಗೆ ಮಣೆ ಹಾಕುತ್ತವೆ.ಬ್ಯಾಂಕ್‌ ಖಾತೆಗೆ ಸಂಬಂಧಿಸಿದಂತೆ…

Read More

ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನವನ್ನು ಎಸ್ಟಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಿರೇಸೂರು ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಗ್ರಾಮೀಣ ಕಾರ್ಯಾಧ್ಯಕ್ಷರು ಜಗದೀಶ್ ಉಪ್ಪಿನ ಅವರು ಇದು ಬೆಂಗಳೂರಿನಲ್ಲಿ ಪೌರಾಡಳಿತ ಸಚಿವರಾದ ರಹೀಮ್ ಖಾನ್ ರವರಿಗೆ ಕುಂದಗೋಳ ಪಟ್ಟಣ ಪಂಚಾಯಿತಿ ಮೀಸಲಾತಿ ಕುರಿತು ಇಲ್ಲಿಯವರಿಗೆ ಎಸ್ ಟಿ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಿಲ್ಲ ಆ ಸಮಾಜಕ್ಕೆ ಅನ್ನ್ಯಾಯ ಒಳಗಾಗುತ್ತಿದೆ ಅದಕ್ಕಾಗಿ ಈ ಬಾರಿ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನ ಎಸ್ಟಿ ನೀಡಬೇಕೆಂದು ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು ಮೀಸಲಾತಿ ಕುರಿತು ಪರಿಶೀಲಿಸಿ ಪರಿಶಿಷ್ಟ ಪಂಗಡ ಪಂಗಡಕ್ಕೆ ರಾಜಕೀಯವಾಗಿ ಸ್ನಾನಮಾನಗಳು ನ್ಯಾಯ ಬದ್ಧವಾಗಿ ಒದಗಿಸುವುದಾಗಿ ಬರವಸೆ ನೀಡಿದರು

Read More

ಬೆಂಗಳೂರು: ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಋತುರಾಜ್ ಗಾಯಕ್ವಾಡ್‌ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯಿಂದ ಹೊರ ಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಋತುರಾಜ್ ಗಾಯಕ್ವಾಡ್‌ ಅವರು ತಮ್ಮ ಬಲಗೈ ಬೆರಳಿಗೆ ಚೆಂಡನ್ನು ತಗುಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಮೂರನೇ ಏಕದಿನ ಪಂದ್ಯದಲ್ಲಿ ಗಾಯಕ್ವಾಡ್‌ ಅವರ ಬದಲು ರಜತ್ ಪಾಟಿದಾರ್‌ ಅವರು ಇನಿಂಗ್ಸ್ ಆರಂಭಿಸಿದ್ದರು. ಅಂದ ಹಾಗೆ ಋತುರಾಜ್‌ ಗಾಯಕ್ವಾಡ್‌ ಅವರು ಬೆಂಗಳೂರಿನ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದಾರೆ. ಗಾಯಕ್ವಾಡ್‌ ಅವರ ಬದಲು ಅಭಿಮನ್ಯು ಈಶ್ವರನ್‌ ಅವರು ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಗಾಯಕ್ವಾಡ್‌ ಅವರು ಕೆಲವೇ ದಿನಗಳ ಬೆಂಗಳೂರಿನ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ವರದಿ ಮಾಡಿಕೊಳ್ಳಲಿದ್ದಾರೆ. ಬಿಸಿಸಿಐ ಪುರುಷರ ಆಯ್ಕೆ ಸಮಿತಿಯು ಋತುರಾಜ್‌ ಗಾಯಕ್ವಾಡ್‌ ಅವರ ಸ್ಥಾನಕ್ಕೆ ಅಭಿಮನ್ಯು ಈಶ್ವರನ್ ಅವರನ್ನು ಆಯ್ಕೆ ಮಾಡಿದೆ,” ಎಂದು ಬಿಸಿಸಿಐ ತನ್ನ…

Read More

ಹುಬ್ಬಳ್ಳಿ: ಬಟ್ಟೆ ಖರೀದಿಸುವ ವೇಳೆ ವಿದ್ಯಾರ್ಥಿನಿಯೊಬ್ಬರ ಬ್ಯಾಗ್‌ನಲ್ಲಿದ್ದ 1.10 ಲಕ್ಷ ರೂ. ಮೌಲ್ಯದ ಆಭರಣ ಹಾಗೂ 20 ಸಾವಿರ ರೂ. ನಗದು ಕಳ್ಳತನವಾದ ಘಟನೆ ನಗರದ ಗೌಳಿಗಲ್ಲಿ ಕ್ರಾಸ್ ಬಳಿ ನಡೆದಿದೆ. ಆನಂದ ನಗರದ ವಿದ್ಯಾರ್ಥಿನಿ ತನ್ನ ಸ್ನೇಹಿತೆಯೊಂದಿಗೆ ಮಾರುಕಟ್ಟೆಗೆ ಬಂದಿದ್ದರು. ಬಟ್ಟೆ ಖರೀದಿಸಲು ಮುಂದಾದಾಗ ಕಳ್ಳರು ಬ್ಯಾಗ್‌ನಲ್ಲಿದ್ದ 16.71 ಗ್ರಾಂ ಬಂಗಾರ, 40 ಗ್ರಾಂ ಬೆಳ್ಳಿ, 20 ಸಾವಿರ ರೂ. ನಗದು ಕಳ್ಳತನ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ರೋಟಿ, ಬಟರ್ ನಾನ್, ಕುಲ್ಚಾ ಮುಂತಾದ ಆಹಾರಗಳೊಂದಿಗೆ ಗ್ರೇವಿ ತಿಂದಿರುತ್ತೀರಿ. ಗ್ರೇವಿಗಳಲ್ಲಿ ಅನೇಕ ವಿಧಗಳಿವೆ. ಕಾಜೂ ಗ್ರೇವಿ, ಪನೀರ್ ಗ್ರೇವಿ, ಪಾಲಕ್ ಪನೀರ್ ಮುಂತಾದವುಗಳು ರೋಟಿಗಳಿಗೆ ಅದ್ಭುತ ಕಾಂಬಿನೇಷನ್ ಆಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪಾಲಕ್ ಪನೀರ್ ಮಾಡೋದು ಹೇಗಂತೀರಾ ಇಲ್ಲಿದೆ ತಿಳಿಯಿರಿ! ಬೇಕಾಗುವ ಸಾಮಗ್ರಿಗಳು: ಪಾಲಕ್ ಸೊಪ್ಪು – 1 ಕಪ್ ಪನೀರ್ ಕ್ಯೂಬ್ಸ್ – 100 ಗ್ರಾಂ ಪಲಾವ್ ಎಲೆ -2 ಜೀರಿಗೆ – ಅರ್ಧ ಚಮಚ ಚೆಕ್ಕೆ – ಸ್ವಲ್ಪ ಏಲಕ್ಕಿ – 1 ಬೆಣ್ಣೆ – 2 ಚಮಚ ಕಸೂರಿ ಮೇತಿ – 2 ಚಮಚ ಹಸಿರು ಮೆಣಸಿನ ಕಾಯಿ – 3 ಬೆಳ್ಳುಳ್ಳಿ – 5 ಎಸಳು ಶುಂಠಿ – ಅರ್ಧ ಇಂಚು ಗರಂ ಮಸಾಲ – ಅರ್ಧ ಚಮಚ ಅಚ್ಚ ಖಾರದ ಪುಡಿ – ಅರ್ಧ ಚಮಚ ಅರಶಿಣ – ಕಾಲು ಚಮಚ ಫ್ರೆಶ್ ಕ್ರೀಮ್ – 2 ಚಮಚ…

Read More

ಕಪ್ಪು ಒಣದ್ರಾಕ್ಷಿಯನ್ನು ನಿಯಮಿತವಾಗಿ ತಿನ್ನುವುದರಿಂದ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ, ಶಾಶ್ವತವಾಗಿ ಬಿಳಿಕೂದಲು ಕಪ್ಪಾಗಿ ಉಳಿಯುತ್ತದೆ. ಕಪ್ಪು ಒಣದ್ರಾಕ್ಷಿಗಳು ಅನೇಕ ವಿಧದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಒಣದ್ರಾಕ್ಷಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಕಬ್ಬಿಣದ ಪ್ರಮಾಣವು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಚಿಕ್ಕ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಬಣ್ಣಕ್ಕೆ ತಿರುಗುತ್ತಿದ್ದರೆ, ಕಪ್ಪು ಒಣದ್ರಾಕ್ಷಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಒಣದ್ರಾಕ್ಷಿ ಸೇವನೆಯಿಂದ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಹೀಗಾಗಿ ಇದನ್ನು ನಿಯಮಿತವಾಗಿ ಸೇವಿಸಿದರೆ ಕೂದಲಿನ ಬೆಳವಣಿಗೆಯು ಉತ್ತಮಗೊಳ್ಳುತ್ತದೆ. ನಿಗದಿತ ಪ್ರಮಾಣದಲ್ಲಿ ಕಪ್ಪು ಒಣದ್ರಾಕ್ಷಿಗಳನ್ನು ಸೇವಿಸುವುದರಿಂದ ಕೂದಲು ಹೊಳಪು ಮತ್ತು ಮೃದುವಾಗಿರುತ್ತದೆ. ಕಪ್ಪು ಒಣದ್ರಾಕ್ಷಿ ವಿಟಮಿನ್ ಸಿ ಮತ್ತು ವಿಟಮಿನ್ ಇ ಅನ್ನು ಹೊಂದಿರುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 20-15 ಗ್ರಾಂ ಕಪ್ಪು ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ನೆನೆಸಿ, ಬೆಳಿಗ್ಗೆ ತಿನ್ನಿ.

Read More

ಕೆಲವು ಜನರಲ್ಲಿ ಶ್ರವಣ ದೋಷದ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಅಂತವರು ನಿಮ್ಮ ಶ್ರವಣದ ಶಕ್ತಿಯನ್ನು ಹೆಚ್ಚಿಸಲು ಈ ಆಹಾರ ಸೇವಿಸಿ. ಶ್ರವಣ ಶಕ್ತಿ ಹೆಚ್ಚಾಗಲು ಮೆಗ್ನೀಶಿಯಂ ಸಮೃದ್ಧವಾಗಿರುವ ಆಹಾರ ಸೇವಿಸಿ. ಇದು ನರಗಳನ್ನು ಬಲಗೊಳಿಸುತ್ತದೆ. ದೊಡ್ಡ ಶಬ್ದದಿಂದಾಗುವ ಹಾನಿಯನ್ನು ತಡೆಯುತ್ತದೆ. ಹಾಗಾಗಿ ಆವಕಾಡೊ, ಬಾದಾಮಿ, ಅಂಜೂರ, ಪಾಲಕ್ ಮುಂತಾದವುಗಳನ್ನು ಸೇವಿಸಿ. ಪೊಟ್ಯಾಶಿಯಂ ಸೇವನೆಯಿಂದ ಕಿವಿಯಲ್ಲಿ ದ್ರವದ ಸಮತೋಲನ ಉತ್ತಮವಾಗಿರುತ್ತದೆ. ಇದು ಕಿವಿಯ ಕೇಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಬಾಳೆಹಣ್ಣು, ಆಲೂಗಡ್ಡೆ, ಕಿತ್ತಳೆ, ಎಳನೀರನ್ನು ಕುಡಿಯಿರಿ. ಸತುವು ಸಮೃದ್ಧವಾಗಿರುವ ಆಹಾರ ಸೇವನೆಯಿಂದ ಕಿವಿಯಲ್ಲಿ ಸೋಂಕಿನ ಸಮಸ್ಯೆಯನ್ನು ನಿವಾರಿಸಬಹುದು.

Read More

ವಿಜಯಪುರ:- ಸಿದ್ದರಾಮಯ್ಯ ಸರ್ಕಾರ ಲಂಚ ಕೇಳುವ ಲಜ್ಜೆಗೆಟ್ಟ ಸರ್ಕಾರ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್‌ ಬಂದ್ ಮಾಡಿ ಲಂಚ ತಿನ್ನುತ್ತಿದೆ. ಸಿದ್ದರಾಮಯ್ಯ ಸರ್ಕಾರ ಲಂಚ ಕೇಳುವ ಲಜ್ಜೆಗೆಟ್ಟ ಸರ್ಕಾರವಾಗಿದೆ. ಜನರ ಅಸಮಾಧಾನವನ್ನು ಬೇರೆಡೆಗೆ ಸೆಳೆಯಲು ಗಿಮಿಕ್ ಮಾಡುತ್ತಿದ್ದಾರೆ ಎಂದರು. ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ. ರಾಜ್ಯ-ರಾಷ್ಟ್ರ ನಾಯಕರೊಂದಿಗೆ ಸೇರಿ ರಾಜ್ಯದ 28 ಕ್ಷೇತ್ರದಲ್ಲಿಯೂ ನಮ್ಮ ಅಭ್ಯರ್ಥಿಗಳು ಗೆಲ್ಲಲು ಎಲ್ಲ ಪ್ರಯತ್ನ ಮಾಡುತ್ತೇನೆ. ಗಾಳಿ ಸುದ್ದಿಗಳನ್ನು ಮಾಧ್ಯಮಗಳು ನಂಬಬಾರದು ಎಂದರು. ನೂತನ ಪದಾಧಿಕಾರಿಗಳ ನೇಮಕ ಅಸಮಾಧಾನ ವಿಚಾರ ಸತ್ಯಕ್ಕೆ ದೂರವಾದದ್ದು, ಯಾರಿಗೆ ಅವಕಾಶ ಸಿಕ್ಕಿಲ್ಲ, ಅವರಿಗೆಲ್ಲಾ ಅಸಮಾದಾನ ಆಗಬಾರದು. ಎಲ್ಲರೂ ಸೇರಿ ಪಕ್ಷವನ್ನು ಸಂಘಟಿಸಿ ಮುಂದಿನ ಲೋಕಸಭೆ ಚುನಾವಣೆ ಎದುರಿಸಬೇಕು ಎಂದರು. ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 25ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ. ಕಡಿಮೆ ಸ್ಥಾನ ಸಾಧ್ಯವೇ ಇಲ್ಲ. ಹೊಸ ತಂಡ ಕಟ್ಟಲಾಗಿದೆ ಹೊಸಬರನ್ನು ಮುಂದೆ ತರುವ ಕೆಲಸ…

Read More