Author: AIN Author

ಚಿರು ಸರ್ಜಾ ಮತ್ತು ಮೇಘನಾ ರಾಜ್ ದಂಪತಿ ಪುತ್ರ ರಾಯನ್ ರಾಜ್ ಸರ್ಜಾ ಸಮಸ್ತ ಜನತೆಗೆ ಕಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ತಾಯಿ ಮತ್ತು ಅಜ್ಜ ಅಜ್ಜಿಯೊಂದಿಗೆ ಕೋರಮಂಗಲ ಸಂತ ಫ್ರಾಯರಿ ಚರ್ಚ್ ಆಗಮಿಸಿದ್ದ ರಾಯನ್, ತಾಯಿಯ ಜೊತೆ ಜೊತೆಗೆ ಎಲ್ಲರಿಗೂ ಮೇರಿ ಕ್ರಿಸ್ಮಸ್ ಎಂದು ಶುಭಾಶಯ ತಿಳಿಸಿದರು. ಚರ್ಚ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ನಟಿ ಮೇಘನಾ ರಾಜ್, ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು. ಹೊಸ ವರ್ಷಕ್ಕೆ ಮತ್ತೆ ಕಾಲಿಡ್ತಿದ್ದೀವಿ. ಈ ಕ್ರಿಸ್ ಮಸ್ ಎಲ್ಲರಿಗೂ ಮಿರಾಕಲ್ ತರಲಿ. ಎಲ್ಲರೂ ಸೇಫ್ ಆಗಿರಲಿ, ಎಲ್ಲರಿಗೂ ಒಳ್ಳೆಯದಾಗಲಿ. ನಾನೆಲ್ಲಿದ್ದರೂ ನನ್ನ ಮಗ ಇರಲೇಬೇಕು. ನಾವಿಬ್ರು ಒಂಥರ ಬೆಸ್ಟ್ ಫ್ರೆಂಡ್ಸ್ ಇದ್ದಂಗೆ’ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ರಾಯನ್ ರಾಜ್ ಸರ್ಜಾ ಮೇರಿ ಕ್ರಿಸ್ ಮಸ್ ಎಂದರು. ಅದನ್ನು ಕಂಡ ಮೇಘನಾ, ಇವನು ಸಿಂಗಲ್ ಟೇಕ್ ಆರ್ಟಿಸ್ಟ್ ಎಂದು ಹಾಸ್ಯ ಚಟಾಕಿ ಹಾರಿಸಿದರು. ಕ್ರಿಸ್ ಮಸ್ ಹಬ್ಬ ಕ್ರಿಶ್ಚಿಯನ್ನರು ಮಾತ್ರ ಆಚರಿಸೋದಲ್ಲ.…

Read More

ಕೊಡಗು: ಚಾರಣಕ್ಕೆ ತೆರಳಿದ್ದ ಯುವಕ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟದಲ್ಲಿ ನಡೆದಿದೆ. ಹರಿಯಾಣ ಮೂಲದ ಜತಿನ್ (25) ಮೃತಪಟ್ಟ ಯುವಕ. ಜತಿನ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ‌ ಮಾಡುತ್ತಿದ್ದನು. 5 ಮಂದಿ ಸ್ನೇಹಿತರ ಜೊತೆ ತಡಿಯಂಡಮೋಳ್ ಬೆಟ್ಟಕ್ಕೆ ಬಂದಿದ್ದನು. ಬೆಟ್ಟದ ಮೇಲೆ ತಲುಪಿದಾಗ ತೀವ್ರತರಹದ ಎದೆನೋವಿಗೆ ಒಳಗಾದ ಜತಿನ್ ಹೃದಯಾಘಾತದಿಂದ ಬೆಟ್ಟದ ಮೇಲೆ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ನಾಪೋಕ್ಲು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ದುರ್ಗಮ ಹಾದಿಯಲ್ಲೆ ಪ್ರವಾಸಿಗನ ಮೃತದೇಹ ಹೊತ್ತು ತಂದಿದ್ದಾರೆ.

Read More

Ayodhya Ram Mandir: ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನಾ (Ramlala Pran Pratishtha) ಕಾರ್ಯಕ್ಕೆ ಆಯೋಧ್ಯೆಗೆ ಅಯೋಧ್ಯೆಯೇ (Ayodhya) ಸಿಂಗಾರಗೊಳ್ಳುತ್ತಿದೆ. ರಾಮಮಂದಿರದಲ್ಲಿ ಅಂತಿಮ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಯೋಧ್ಯೆಯನ್ನು ರಾಮಾಯಣದ ಕತೆಯಲ್ಲಿರುವ ಪ್ರತೀಕದಂತೆಯೇ ಸಜ್ಜುಗೊಳಿಸಲಾಗುತ್ತಿದೆ.ರಾಮಾಯಣ ಕಾಲದ ಬಹುದೊಡ್ಡ ಸಾಕ್ಷಿಯಾಗಿ ಉಳಿದಿರುವ ರಾಮ್ ಕೀ ಪೌರಿ (Ram ki Pauri) ಯನ್ನು ಸುಂದರವಾಗಿ ಅಲಂಕರಿಸುತ್ತಿದ್ದಾರೆ. ಈ ಜಾಗದ ಐತಿಹಾಸಿಕ ಹಿನ್ನೆಲೆ ರಾಮ ಭಕ್ತರಿಗೆ ತಿಳಿಸಲು ಎಲ್ಲ ರೀತಿಯ ಸಿದ್ಧತೆಗಳೂ ಶುರುವಾಗಿವೆ ರಾಮನ ಮೆಟ್ಟಿಲು (ರಾಮ್ ಕೀ ಪೌರಿ) ಎಂದರೇನು?: ಹಿಂದಿ ಭಾಷೆಯಲ್ಲಿ ಬರುವ ಪೌರಿಗೆ ಕನ್ನಡದಲ್ಲಿ ಮೆಟ್ಟಿಲು ಎಂದು ಅರ್ಥ. ರಾಮನ ಮೆಟ್ಟಿಲು ಎನ್ನುವುದು ಸರಯೂ ನದಿಯ ತಟದಲ್ಲಿರುವ ಪ್ರದೇಶ. ಹುಣ್ಣಿಮೆಯ ದಿನ ಈ ಜಾಗ ಮತ್ತಷ್ಟು ಸುಂದರವಾಗಿ ಕಾಣಿಸುತ್ತದೆ. ಸರಯೂ ನದಿ ತಟದಲ್ಲಿರುವ ಈ ಘಟ್ಟದಲ್ಲಿ ಸ್ನಾನ ಮಾಡಿದರೆ ನಮ್ಮೆಲ್ಲ ಪಾಪ ಕಳೆದುಹೋಗುತ್ತದೆ ಎಂಬುದು ಭಕ್ತರ ಪ್ರತೀತಿ. ಈ ಮೆಟ್ಟಿಲುಗಳ ಮೂಲಕ ಸರಯೂ ನದಿಯಲ್ಲಿ ಸ್ನಾನಕ್ಕಿಳಿಯಬಹುದು. ಪೌರಾಣಿಕ ಕಥೆಗಳ ಪ್ರಕಾರ, ಪ್ರಭು ಶ್ರೀರಾಮಚಂದ್ರನೂ ಕೂಡಾ ಇದೇ…

Read More

ದೆಹಲಿ: ಮಿಮಿಕ್ರಿ ಮಾಡುವುದು ಒಂದು ಕಲೆಯಾಗಿದ್ದು, ಬೇಕಿದ್ರೆ ನಾನು ಸಾವಿರ ಬಾರಿ ಅದನ್ನು ಮಾಡುತ್ತೇನೆ. ಹೀಗೆ ಮಾಡಲು ನನಗೆ ಹಕ್ಕಿದೆ ಎಂದು ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ (Kalyan Banerjee) ಮತ್ತೆ ಉದ್ಧಟತನ ಮೆರೆದಿದ್ದಾರೆ. ಪಶ್ಚಿಮ ಬಂಗಾಳದ (West Bengal) ಶ್ರೀರಾಮ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ , ಕ್ಷುಲ್ಲಕ ವಿಚಾರದಲ್ಲಿ ಅಸಮಾಧಾನಗೊಂಡಿದ್ದಕ್ಕಾಗಿ ಧನ್ಕರ್ ಅವರನ್ನು ಟೀಕಿಸಿದರು. ನಾನು ಮಿಮಿಕ್ರಿ ಮಾಡುತ್ತಲೇ ಇರುತ್ತೇನೆ. ಅದೊಂದು ಕಲೆ. ಬೇಕಾದರೆ ಸಾವಿರ ಬಾರಿ ಮಾಡುತ್ತೇನೆ. ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನನಗೆ ಎಲ್ಲಾ ಹಕ್ಕುಗಳಿವೆ. ನೀವು ನನ್ನನ್ನು ಜೈಲಿಗೆ ಹಾಕಬಹುದು. ಆದರೆ ನಾನು ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. ಬ್ಯಾನರ್ಜಿಯವರ ಮಿಮಿಕ್ರಿಯಿಂದ ರೈತ ಸಮುದಾಯಕ್ಕೆ ಅವಮಾನವಾಗಿದೆ ಎಂಬ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ (Jagadeep Dhankar) ಹೇಳಿಕೆಯನ್ನು ಉಲ್ಲೇಖಿಸಿದ ಟಿಎಂಸಿ ಸಂಸದರು, ಧನ್ಕರ್‌ ಅವರು‌ ಜೋಧ್‌ಪುರದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಮತ್ತು ದೆಹಲಿಯಲ್ಲಿ ಐಷಾರಾಮಿ ಫ್ಲ್ಯಾಟ್ ಹೊಂದಿದ್ದಾರೆ. ಅಲ್ಲದೇ ಅವರು ಲಕ್ಷ ರೂಪಾಯಿ ಮೌಲ್ಯದ ಸೂಟ್ ಧರಿಸುತ್ತಾರೆ ಎಂದು…

Read More

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 1 ಲಕ್ಷ ಜನರು ಸಾಮೂಹಿಕವಾಗಿ ಭಗವದ್ಗೀತೆಯ (Bhagavad Gita) ಪವಿತ್ರ ಶ್ಲೋಕಗಳನ್ನು ಪಠಿಸಿ, ದಾಖಲೆ ಬರೆದಿದ್ದಾರೆ. ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಪಾಲ್ಗೊಂಡಿದ್ದ ವಿವಿಧ ವಯೋಮಾನದ ಜನರು ಸಾಂಪ್ರದಾಯಿಕ ಸ್ಥಳದಲ್ಲಿ ಸಮಾವೇಶಗೊಂಡು, ಪೂಜ್ಯ ಋಷಿಗಳೊಂದಿಗೆ ಪವಿತ್ರ ಪುಸ್ತಕದ ಶ್ಲೋಕಗಳನ್ನು ಪಠಿಸಿದ್ದಾರೆ. ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್, ‘ಭಗವದ್ಗೀತೆ ಜಗತ್ತಿಗೆ ಭಾರತ ನೀಡಿದ ಬಹುದೊಡ್ಡ ಕೊಡುಗೆ. ಈ ಕಾರ್ಯಕ್ರಮವನ್ನು ಅಪಹಾಸ್ಯ ಮಾಡುವವರಿಗೆ ಹಿಂದೂ ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ಗೌರವವಿಲ್ಲ. ಹಿಂದೂಗಳನ್ನು ವಿಭಜಿಸಿದರೆ ಅವರ ಪ್ರಯತ್ನಗಳು ವಿಫಲವಾಗುತ್ತವೆ ಎಂದು ತಿಳಿಸಿದ್ದಾರೆ. ಬಂಗಾಳದ ಬಿಜೆಪಿ ಘಟಕ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಾಯಕತ್ವದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಮಾರು 1,20,000 ವ್ಯಕ್ತಿಗಳು ನೋಂದಾಯಿಸಿಕೊಂಡಿದ್ದರು ಎಂದು ಸಂಘಟಕರು ತಿಳಿಸಿದ್ದಾರೆ. ಕೋಲ್ಕತ್ತಾದಲ್ಲಿ ಭಾನುವಾರ ನಡೆದ ‘ಲೋಕೇ ಕೊಂಥೆ ಗೀತಾ ಪಥ’ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಪ್ರಧಾನಿ ನರೇಂದ್ರ…

Read More

ಕಠ್ಮಂಡು: ಮುಂದಿನ ತಿಂಗಳು ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ಉದ್ಘಾಟನೆ ಆಗಲಿದ್ದು, ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಅಯೋಧ್ಯೆ ವಿಶೇಷ ಉಡುಗೊರೆ ನೀಡಿ ವಿಶ್‌ ಮಾಡಲು ನೆರೆ ರಾಷ್ಟ್ರ ನೇಪಾಳ (Nepal) ಸಿದ್ಧತೆ ಮಾಡಿಕೊಂಡಿದೆ. ಅಯೋಧ್ಯೆಯಲ್ಲಿ ಹೊಸ ವರ್ಷದ ಜನವರಿ 22 ರಂದು ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗಾಗಿ ನೇಪಾಳ ರಾಷ್ಟ್ರ ವಿವಿಧ ರೀತಿಯ ಆಭರಣಗಳು, ವಸ್ತುಗಳು, ವಸ್ತ್ರ ಹಾಗೂ ಸಿಹಿ ತಿನಿಸುಗಳು ಸೇರಿ ಹಲವು ಸ್ಮರಣಿಕೆಗಳನ್ನು ಕಳುಹಿಸಲಿದೆ. ಸ್ಮರಣಿಕೆಗಳನ್ನು ತಲುಪಿಸಲು ಜನಕಪುರಧಾಮ್-ಅಯೋಧ್ಯಧಾಮ ಪ್ರಯಾಣವನ್ನು ಕೈಗೊಳ್ಳಲಾಗುವುದು ಎಂದು ನೇಪಾಳದ ಮೈ ರಿಪಬ್ಲಿಕಾ ಪತ್ರಿಕೆ ವರದಿ ಮಾಡಿದೆ. ಜನವರಿ 18 ರಂದು ಪ್ರಾರಂಭವಾಗುವ ಪ್ರಯಾಣವು ಜನವರಿ 20 ರಂದು ಅಯೋಧ್ಯೆಯಲ್ಲಿ ಕೊನೆಗೊಳ್ಳಲಿದೆ. ಜನಕ್‌ಪುರಧಾಮ್‌ನಿಂದ ಜಲೇಶ್ವರನಾಥ್, ಮಲಂಗ್ವಾ, ಸಿಮ್ರೌಂಗಧ್, ಗಧಿಮಾಯಿ, ಬಿರ್‌ಗುಂಜ್ ಮೂಲಕ ಬೇಟಿಯಾ, ಕುಶಿನಗರ, ಸಿದ್ಧಾರ್ಥನಗರ, ಗೋರಖ್‌ಪುರ ಮೂಲಕ…

Read More

ವಾಷಿಂಗ್ಟನ್‌: ಕೆಂಪು ಸಮುದ್ರದಲ್ಲಿ (Red Sea) ಯೆಮೆನ್‌ನ ಹೌತಿ ಬಂಡುಕೋರರು (Yemen’s Houthi rebels) ಭಾರತದ ಧ್ವಜವುಳ್ಳ ಕಚ್ಚಾ ತೈಲ ಟ್ಯಾಂಕರ್‌ (Indian-Flagged Oil Tanker) ಮೇಲೆ ಡ್ರೋನ್‌ ದಾಳಿ (Drone Attack) ನಡೆಸಿದ್ದಾರೆ ಎಂದು ಅಮೆರಿಕ (USA) ತಿಳಿಸಿದೆ. ಎಂ/ವಿ ಸಾಯಿಬಾಬಾ ಹೆಸರಿನ ಗ್ಯಾಬನ್‌ ಒಡೆತನದ ಹಡಗಿನ (Ship) ಮೇಲೆ ದಾಳಿ ನಡೆಸಿದ್ದು ಯಾವುದೇ ಗಾಯಗಳಾಗಿಲ್ಲ ಎಂದು ಹೇಳಿದೆ. ಭಾರತೀಯ ಕಾಲಮಾನ ರಾತ್ರಿ 10:30ರ ವೇಳೆಗೆ ಈ ದಾಳಿ ಸಂಭವಿಸಿದೆ. ಭಾರತೀಯ ಹಡಗಿನ ಮೇಲೆ ದಾಳಿ ನಡೆದ ಬಳಿಕ ಮತ್ತೊಂದು ಹಡಗಿನ ಮೇಲೆ ಈ ದಾಳಿ ನಡೆದಿದೆ. ಶನಿವಾರ ಎರಡು ಹಡಗಿನ ಮೇಲೆ ಡ್ರೋನ್‌ ದಾಳಿ ನಡೆದಿದೆ. ನಾರ್ವೇ ಧ್ವಜದ ಹೊಂದಿದ್ದ ಹಡಗಿನ ಮೇಲೆ ಡ್ರೋನ್‌ ದಾಳಿ ನಡೆದಿತ್ತು. ಆದರೆ ಈ ಹಡಗು ಸ್ವಲ್ಪದರಲ್ಲೇ ಪಾರಾಗಿದೆ ಎಂದು ಅಮೆರಿಕ ತಿಳಿಸಿದೆ ಹೌತಿ ಬಂಡುಕೋರರಿಗೆ ಇರಾನ್ ಬೆಂಬಲ ನೀಡುತ್ತಿದೆ. ಹಮಾಸ್‌ ವಿರುದ್ಧ ಇಸ್ರೇಲ್‌ ಯುದ್ಧ ಸಾರಿದ್ದನ್ನು ಖಂಡಿಸಿ ಹೌತಿ ಬಂಡುಕೋರರು ಈಗ ಕೆಂಪು…

Read More

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಗ್ಯಾಸ್ ಗೀಸರ್ ದುರಂತ ಸಂಭವಿಸಿದ್ದು  ಗ್ಯಾಸ್ ಗೀಸರ್ ನಿಂದಾಗಿ‌ ಯುವತಿ ಸಾವನ್ನಪ್ಪಿದ್ದಾಳೆ. ರಾಜೇಶ್ವರಿ (23) ಮೃತಪಟ್ಟ ಯುವತಿಯಾಗಿದ್ದು  ಬಸವೇಶ್ವರ ನಗರ ಕೃಷ್ಣ ಕಲ್ಯಾಣ ಮಂಟಪ ಬಳಿ  ಡಿಸಂಬರ್ 20 ರಂದು ನಡೆದಿರುವ ದುರಂತ ಮಧ್ಯಾಹ್ನ 1.45 ರಿಂದ 1 ಗಂಟೆ ಸಮಯದಲ್ಲಿ ನಡೆದ ಘಟನೆ  ಸ್ನಾನ ಮಾಡಲು ಹೋಗಿದ್ದ ರಾಜೇಶ್ವರಿ 15 ನಿಮಿಷ ಆದರು ಹೊರಗೆ ಬಂದಿರಲಿಲ್ಲ ನಂತರ ಬಾಗಿಲು ತೆಗೆದು ನೋಡಿದಾಗ ಘಟನೆ ಗೊತ್ತಾಗಿದೆ ತಕ್ಷಣ ಆಸ್ಪತ್ರೆಗೆ ಕರೆದೊಯ್ದ ಕುಟುಂಬಸ್ಥರು ಅಷ್ಟರಲ್ಲಾಗಲೇ ಮೃತಪಟ್ಟಿರೋದಾಗಿ ತಿಳಿಸಿದ ವೈದ್ಯರು ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Read More

ಕ್ರಿಶ್ಚಿಯನ್​ ಜನಾಂಗದವರು ಪ್ರತಿ ವರ್ಷ ಡಿಸೆಂಬರ್ 25ರಂದು ಮಾಡಲಾಗುತ್ತದೆ. ಈ ದಿನ ಯೇಸುಕ್ರಿಸ್ತ್ ಜನಿಸಿದ ದಿನ ಎನ್ನಲಾಗುತ್ತದೆ. ಡಿಸೆಂಬರ್ 24ರ ರಾತ್ರಿಯಿಂದಲೇ ಆಚರಣೆಗಳು ಆರಂಭವಾಗುತ್ತವೆ. ಚರ್ಚ್‌ಗಳಲ್ಲಿ, ಮನೆಗಳಲ್ಲಿ ಕಣ್ಮನ ಸೆಳೆಯುವಂತಹ ಅಲಂಕಾರ ಮಾಡಲಾಗುತ್ತದೆ. ಯೇಸು ಜನಿಸಿದ ದಿನ ಎಲ್ಲರೂ ಮನೆಗೆ ಹೊಸ ಅತಿಥಿ ಬಂದಷ್ಟೇ ಸಂತಸಗೊಂಡು ಹೊಸ ಬಟ್ಟೆ ಧರಿಸಿ, ಸಿಹಿ ಖಾದ್ಯಗಳನ್ನು ತಯಾರಿಸಿ ಎಲ್ಲರ ಒಳಿತಿಗಾಗಿ ಇಂದು ಪ್ರಾರ್ಥನೆ ಮಾಡುತ್ತಾರೆ. ಇತಿಹಾಸ ಕ್ರೈಸ್ತ ಬಾಂಧವರ ಆರಾಧ್ಯ ದೈವ ಯೇಸುಕ್ರಿಸ್ತ. ಯೇಸು ಜನರ ಒಳಿತಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿ ಮತ್ತೆ ಹುಟ್ಟಿಬಂದ ಎಂದು ಕ್ರಿಶ್ಚಿಯನ್ನರ ಪವಿತ್ರ ಗ್ರಂಥವಾದ ಬೈಬಲ್ ನಲ್ಲಿ ಹೇಳಲಾಗುತ್ತದೆ. ಇಸ್ರೇಲಿಯಾದ ಬೆಡ್ಲೆಹೆಮ್ ನಗರದಲ್ಲಿ ಕ್ರಿ.ಪೂ 4ರಲ್ಲಿ ಯೇಸು ಜನಿಸಿದ ಎಂದು ಹೇಳಲಾಗುತ್ತದೆ. ಜೋಸೆಫ್ ಮತ್ತು ಮೇರಿ ಮಾತ ಯೇಸುಕ್ರಿಸ್ತನ ತಂದೆ ತಾಯಿ. ಈ ದಂಪತಿಗೆ ದೇವರ ಆಶೀರ್ವಾದದಿಂದ ಯೇಸು ಜನಿಸಿದನು. ಯೇಸು ತಂದೆ ಜೋಸೆಫ್ ವೃತ್ತಿಯಲ್ಲಿ ಬಡವನಾಗಿದ್ದರು. ಆದರೆ ತಂದೆ ಕೆಲಸದಲ್ಲಿ ಸಹಾಯ ಮಾಡುವ ಮೂಲಕ ಯೇಸು…

Read More

ಹುಬ್ಬಳ್ಳಿ: ಬಿ.ಕೆ.ಹರಿಪ್ರಸಾದ್ ಅವರ ಮಾನಸಿಕ ಸ್ಥಿತಿ ಸರಿ ಇಲ್ಲ ಎಂದು ಹಾಗಾಗಿ ಏನೇನು ಮಾತನಾಡುತ್ತಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಓರ್ವ ಹಿರಿಯ ನಾಯಕ ಆದರೆ ಈಗ ಕಾಂಗ್ರೆಸ್ ನಲ್ಲಿ ಲೆಕ್ಕಕ್ಕೆ ಇಲ್ಲದ ನಾಯಕ. ಅಲ್ಲಿ ಅವರಿಗೆ ಮಾನಸಿಕ ಹಿಂಸೆ ಅಗುತ್ತಿದೆ. ಅದನ್ನು ತಡೆಯಲು ಆಗದೆ ಈ ರೀತಿ ಮಾತನಾಡುತ್ತಿದ್ದಾರೆ. ಅದಕ್ಕೆ ಹೆಚ್ಚು ಬೆಲೆ ಕೊಡುವ ಅವಶ್ಯಕತೆ ಇಲ್ಲ ಎಂದು ಹಿರಿಯ ರಾಜಕಾರಣಿಯಾಗಿ ನಾಲಿಗೆ ಮೇಲೆ ಹಿಡಿತ ಇರಬೇಕು. ಈ ರೀತಿ ಮಾತನಾಡಿದರೆ ಅವರು ದೊಡ್ಡವರಾಗುವುದಿಲ್ಲ. ಇದು ಅವರ ಹೀನ ಸಂಸ್ಕೃತಿ ತೋರಿಸುತ್ತದೆ. ಬಿಜೆಪಿಯವರು ಗೋಡ್ಸೆ ಅನುಯಾಯಿಗಳು ಎಂಬ ಹೇಳಿಕೆ ವಿಚಾರ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು ಕಾಂಗ್ರೆಸ್ ನಲ್ಲಿ ಅವರಿಗೆ ಮಾನಸಿಕ ಹಿಂಸೆ ಆಗಿದೆಹಿಂಸೆ ತಾಳಲಾರದೆ ಈ ರೀತಿಯಾಗಿ ಮಾತಾಡತಾ…

Read More