Author: AIN Author

ಬೆಂಗಳೂರು: ಕಣ್ಣಿಗೆ ಕಾಣದಂತೆ ಗುಪ್ತಗಾಮಿನಿಯಂತೆ ಎಲ್ಲೆಡೆ ಹರಿದಾಡುತ್ತಿರುವ ಕೊರೊನಾ ದಿನೆ ದಿನೇ ಆತಂಕ ಹುಟ್ಟಿಸಿದೆ. ಬೆಂಗಳೂರಿನಲ್ಲಿ ಇದರ ಪ್ರತಾಪ ಹೆಚ್ಚಾಗಿದ್ದು ಸಾವು-ನೋವುಗಳು ಸಹ ಹೆಚ್ಚಿವೆ.ಇದ್ರ ನಡುವೆ ಚಿತಾಗಾರ ಸಿಬ್ಬಂದಿ ಬಿಬಿಎಂಪಿಗೆ ಶಾಕ್ ಕೊಟ್ಟಿದ್ದಾರೆ. ಜನವರಿ ಮೊದಲ ವಾರದಿಂದ ಚಿತಾಗಾರದಲ್ಲಿ ಹಣ ಸುಡೋದಿಲ್ಲ ಅಂತ ಎಚ್ಚರಿಸಿರೋದು ಮೃತದೇಹ ಸುಡೋದಕ್ಕೂ ಹಣಗಾಟದ ಭೀತಿ ಎದುರಾಗಿದೆ. ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಐಟಿಬಿಟಿ ಸಿಟಿ ಎಂದು ಜಗದ್ವಿಖ್ಯಾತವಾಗಿರುವ ಬೆಂಗಳೂರು ಎಂಬ ಮಾಯಾನಗರಿಯ ಗರ್ಭದಲ್ಲಿ, ಸಮಾಜದ ಮುಖ್ಯವಾಹಿನಿಯಿಂದ ದೂರವಾಗಿ ಸ್ಮಶಾನದಲ್ಲಿ ವಾಸವಾಗಿರುವ ರುದ್ರಭೂಮಿ  ಕುಟುಂಬಗಳ ಬದುಕು ಅಕ್ಷರಶಃ ಸುಡುಗಾಡಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 40ಕ್ಕೂ ಅಧಿಕ ಸ್ಮಶಾನಗಳಿವೆ. ಇವುಗಳಲ್ಲಿ ವಂಶ ಪಾರಂಪರ್ಯವಾಗಿ ಗುಂಡಿ ತೆಗೆದು ಶವಗಳಿಗೆ ಮುಕ್ತಿ ಕಾಣಿಸುವ ಕಾಯಕದಲ್ಲಿ ತೊಡಗಿರುವ ನೂರಾರು ಕುಟುಂಬಗಳಿವೆ. ಹಲವು ದಶಕಗಳಿಂದ ಇಂತಹ ಪವಿತ್ರ ಕಾರ್ಯಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡಿರುವ ಈ ರುದ್ರಭೂಮಿ ನೌಕರರನ್ನು ಖಾಯಂ ಗೊಳಿಸುವತ್ತ ಬಿಬಿಎಂಪಿಯಾಗಲಿ, ಸರ್ಕಾರ ಯಾಗಲಿ ಇದುವರೆಗೆ ಯೋಚನೆ ಯನ್ನೇ ಮಾಡಿಲ್ಲ.ಇದರಿಂದ ಕೆರಳಿರುವ  ಪಾಲಿಕೆಯ ಗುತ್ತಿಗೆ ರುದ್ರಭೂಮಿ ಸಿಬ್ಬಂದಿ…

Read More

ಬೆಂಗಳೂರು: ಕ್ರಿಕೆಟಿಗ ಕೆಸಿ ಕಾರಿಯಪ್ಪ ಮೇಲೆ ಗಂಭೀರ ಆರೋಪ ಮಾಡಿದ ಪ್ರೇಯಸಿ ಪ್ರಕರಣ ಕಾರಿಯಪ್ಪಗೆ ಮುಳುವಾಗುವ ಲಕ್ಷಣ ಗೋಚರಿಸಿದೆ. ಐಪಿಎಲ್ ನಲ್ಲಿ ಅನ್ ಸೋಲ್ಡ್ ಆಗಿರೋ ಕಾರಿಯಪ್ಪರ ಕ್ರಿಕೆಟ್ ಕೆರಿಯರ್ ಪ್ರೇಯಸಿಯ ಆರೋಪಗಳು ಅಡ್ಡಿಯಾಗಿದೆ.. ಇತ್ತ ಕೌಟಂರ್ ದೂರುಗಳತ್ತ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕ್ರಿಕೆಟಿಗ ಕೆಸಿ ಕಾರಿಯಪ್ಪ ಪ್ರೇಮ ಪುರಾಣ ಪ್ರಕರಣದಲ್ಲಿ ಕಾರಿಯಪ್ಪಗೆ ಸಂಕಷ್ಟ ಎದರುರಾಗಿದೆ.ಯಾವುದೇ ಕ್ಷಣದಲ್ಲೂ ಬೇಕಾದ್ರು  ಕೆಸಿ ಕಾರಿಯಪ್ಪಗೆ “NADA” ಸಂಕಷ್ಟ ಎದುರಾಗೋ ಸಾಧ್ಯತೆಯಿದೆ. National anti doping agencyಯು ಕರ್ನಾಟಕ ರಣಜಿ ತಂಡದ ಆಟಗಾರನಾಗಿರುವ ಕೆಸಿ ಕಾರಿಯಪ್ಪರನ್ನ  ಯಾವುದೇ ಕ್ಷಣದಲ್ಲಾದ್ರು Nada ಪರೀಕ್ಷೆಗೆ ಒಳಪಡಿಸಬಹುದು. ಕಾರಿಯಪ್ಪ ಗಾಂಜಾ ಸೇವನೆ ಮಾಡ್ತಾರೆ ಎಂದು ಮಾಜಿ ಪ್ರೇಯಸಿ ದಿಶಾ ಗಂಭೀರವಾಗಿ ಆರೋಪ ಮಾಡಿದ್ದಾರೆ. ಮ್ಯಾಚ್ ಮುಗಿದಾಗ ರಿಕ್ರಿಯೇಷನ್ ಗಾಗಿ ಕಾರಿಯಪ್ಪ ಗಾಂಜ ತಗೋತಾರೆ ತನ್ನ ಕಣ್ಣಮುಂದೇಯೆ ಗಾಂಜ ಸೇವನೆ ಮಾಡಿದ್ದಾರೆ ಎಂದು ದಿಶಾ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡಿದ್ರು‌. ಈ ಹಿನ್ನೆಲೆ NADAಯಾವೂದೇ ಕ್ಷಣದಲ್ಲಾದ್ರು ವಿಚಾರಣೆ ನಡೆಸಿ ಪರೀಕ್ಷಿಸಬಹುದು.…

Read More

ಬೆಂಗಳೂರು: ಹೊಸವರ್ಷಾಚರಣೆಗೆ ಕ್ಷಣಗಣನೇಶುರುವಾಗಿದೆ 2023 ಕ್ಕೆ ಬಾಯ್…ಬಾಯ್ ಹೇಳಿ 2024 ಹಾಯ್ ಹೇಳೋ ಕೇ ಕೆಲವೇ ದಿನಗಳು ಇದ್ದು ಬೆಂಗಳೂರಿನಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ. ಕಲರ್ ಫುಲ್ ಹೊಸವರ್ಷಾಚರಣೆಗೆ ಯಾವುದು ಹಿತ ಯಾವುದು ಅಹಿತ ಅನ್ನೋದನ್ನು ಪರಿಗಣಿಸಿ ಮಾರ್ಗಸೂಚಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದು ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ… ಈ ಬಾರಿ ಸಿಲಿಕಾನ್ ಸಿಟಿಯ ಜನರು ಜಗತ್ತಿನ ಯಾವುದೇ ಭಾಗಕ್ಕಿಂತಲೂ ಕಡಿಮೆಯಿಲ್ಲದಂತೆ ನೂತನ ವರ್ಷವನ್ನು ಬರಮಾಡಿಕೊಳ್ಳಲಿದ್ದಾರೆ.. ಡಿ ಸೆಂಬರ್ 31 ರಾತ್ರಿ ಜಗಮಗಿಸೋ ಬೆಳಕಿನ ಕಲರವದ ನಡುವೆ ಸಹಸ್ರಾರು ಜನ 2024ರ ಆಗಮನಕ್ಕೆ ಸ್ವಾಗತ ಕೋರಲಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆಗೆ ಬೆಂಗಳೂರು ಸಾಕ್ಷಿಯಾಗ ದಿರಲಿ ಎಂದು ನಗರ ಪೊಲೀಸ್ ಆಯುಕ್ತರು ಗೈಡ್ ಲೈನ್ ಬಿಡುಗಡೆ ಮಾಡಿದಾರೆ. ಬೆಂಗಳೂರಿನಲ್ಲಿ ನೂತನ ವರ್ಷದ ಸಂಭ್ರಮ ಆಚರಿಸುವ ಪ್ರಮುಖ ರಸ್ತೆಗಳು ಅಂದ್ರೆ ಅದು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ , ರಿಜ್ಮಂಡ್ ರಸ್ತೆ, ಕಬ್ಬನ್ ರಸ್ತೆ, ಟ್ರಿನಿಟಿ ರಸ್ತೆ , ಫೀನಿಕ್ಸ್…

Read More

ಬೆಂಗಳೂರು: ಹಾಡಹಗಲೇ ನಡು ರಸ್ತೆಯಲ್ಲಿ ಹೊತ್ತಿ ಉರಿದ ಮಾರುತಿ ಕಾರು ತಪ್ಪಿಸಿಕೊಳ್ಳಲಾಗದೆ ಕಾರು ಚಾಲಕ ಸುಟ್ಟು ಕರಕಲಾದ ಘಟನೆ ನೆಲಮಂಗಲದ ಟೋಲ್ ಬಳಿ ಇರುವ ಪಾರ್ಲೆಜಿ ಬಳಿ ಘಟನೆ ನೋಡ ನೋಡುತ್ತಲೇ ಸಂಪೂರ್ಣವಾಗಿ ಕಾರನ್ನು ಆವರಿಸಿಕೊಂಡ ಬೆಂಕಿ ಕಣ್ಣೇದುರೇ ಚಾಲಕ ಸುಟ್ಟು ಕರಕಲು ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿಗಳು ದೌಡು, ಮುಂದುವರೆದ ಕಾರ್ಯಾಚರಣೆ

Read More

ಮಂಡ್ಯ: ಬರದ ನಡುವೆಯೇ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (Manmul) ರೈತರಿಗೆ ಶಾಕ್‌ ನೀಡಿದೆ. ಲೀಟರ್‌ ಹಾಲಿಗೆ 1.50 ರೂ. ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಇತ್ತ ಮನ್ಮುಲ್‌ ಹಾಲಿನ ದರ (Milk Price) ಇಳಿಕೆ ಮಾಡಿದೆ. ಆದರೆ ಅತ್ತ ಪಶು ಆಹಾರದ ಬೆಲೆ ಏರಿಕೆಯಾಗಿದೆ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಹೈನುಗಾರಿಕೆ ನಂಬಿಕೊಂಡಿರುವ ಮಂಡ್ಯ ರೈತರು ಕಂಗಾಲಾಗಿದ್ದಾರೆ. ಮನ್ಮುಲ್ ಆಡಳಿತ ಮಂಡಳಿ ನಿರ್ಧಾರಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ KMF ಪಶು ಆಹಾರದ ಬೆಲೆ ಚೀಲಕ್ಕೆ 50 ರೂ. ಏರಿಕೆ ಮಾಡಿದೆ. ಡಿಸೆಂಬರ್ 1 ರಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ.

Read More

ಬೆಂಗಳೂರು: ಕ್ರಿಕೆಟಿಗ ಕಾರಿಯಪ್ಪ (K.C.Cariappa) ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದ ಮಹಿಳೆಗೆ ಆರ್‌.ಟಿ. ನಗರ ಪೊಲೀಸರು ನೋಟಿಸ್‌ ನೀಡಿದ್ದಾರೆ. ಘಟನೆ ಬಗ್ಗೆ ವಿವರ ನೀಡುವಂತೆ ಕಾರಿಯಪ್ಪ ಪ್ರೇಯಸಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ಈಕೆಯಿಂದ ಮಾಹಿತಿ ಪಡೆದ ಬಳಿಕ ಕ್ರಿಕೆಟಿಗ ಕಾರಿಯಪ್ಪಗೆ ನೋಟಿಸ್‌ ನೀಡಲು ಆರ್‌.ಟಿ. ನಗರ ಪೊಲೀಸರು ಮುಂದಾಗಿದ್ದಾರೆ. ಏನಿದು ಪ್ರಕರಣ? ಒಂದೂವರೆ ವರ್ಷಗಳ ಹಿಂದೆ ಕ್ರಿಕೆಟಿಗ ಕಾರಿಯಪ್ಪ ಮತ್ತು ಮಹಿಳೆಗೆ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಅಲ್ಲದೇ ಪರಸ್ಪರರ ವಿರುದ್ಧ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ ಎಂದು ಆರ್‌.ಟಿ. ನಗರ ಪೊಲೀಸರು ತಿಳಿಸಿದ್ದಾರೆ. 2018 ರಲ್ಲಿ ಮೊದಲ ಮದುವೆಯಾಗಿತ್ತು. ಕಾರಣಾಂತರಗಳಿಂದ 2020 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದೂವರೆ ವರ್ಷದ ಹಿಂದೆಯಷ್ಟೇ ಕಾರಿಯಪ್ಪ ಪರಿಚಯವಾಗಿತ್ತು. ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದರು. ನಾನು ಗರ್ಭಿಣಿಯಾಗಿದ್ದೆ. ನಂತರ ಒತ್ತಾಯದಿಂದ ಗರ್ಭಪಾತ ಮಾಡಿಸಿದ್ದರು. ಈ ಸಂಬಂಧ ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆ. ಮದುವೆಯಾಗುವುದಾಗಿ…

Read More

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ಕೋವಿಡ್‌ ಮಾರ್ಗಸೂಚಿ ಇಲ್ಲ,ಬಿಗಿ ಭದ್ರತೆ ಮಾತ್ರ ಎಂದು ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದಾರೆ. ಮಾಧ್ಯಮ ಗೋಷ್ಠಿಯನ್ನು ಮಾತನಾಡಿದ ಅವರು,ಹೊಸ ವರ್ಷಾಚರಣೆಗೆ ಸಂಬಂಧಿಸಿ ಎರಡು ಸುತ್ತಿನ ಸಭೆ ಮಾಡಿದ್ದೇವೆ. ಗೃಹಮಂತ್ರಿಯ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಯ ಜೊತೆಗೆ ಚರ್ಚೆ ನಡೆಸಿದ್ದೇವೆ. ಚರ್ಚೆಗಳ ಒಟ್ಟು ಹಿನ್ನೆಲೆಗಳನ್ನು ಇಟ್ಟುಕೊಂಡು ಭದ್ರತೆ, ಸುರಕ್ಷತೆಯ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು. ಹೊಸ ವರ್ಷಾಚರಣೆಗೆ ಬೆಂಗಳೂರಿಗೆ ಗೈಡ್​ಲೈನ್ಸ್​​​ ಹೀಗಿದೆ ಹೊಸ ವರ್ಷಾಚರಣೆಯ ಕೇಂದ್ರ ಬಿಂದುವಾಗಿರುವ ಎಂ.ಜಿ ರೋಡ್‌, ಬ್ರಿಗೇಡ್ ರೋಡ್‌, ಇಂದಿರಾ ನಗರ, ಕೋರಮಂಗಲ ಸೇರಿದಂತೆ ಎಲ್ಲಾ ಕಡೆ ಸೂಕ್ತ ಬಂದೋಬಸ್ತ್ ನಿಯೋಜನೆ ಮಾಡಲಾಗುತ್ತದೆ. ಹೆಚ್ಚುವರಿ ಪೊಲೀಸ್ ಆಯುಕ್ತರು, ಒಬ್ಬರು ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿ 15, ಎಸಿಪಿ 45, ಪೊಲೀಸ್ ಇನ್ಸ್ ಪೆಕ್ಟರ್ 160, ಪಿಎಸ್‌ಐ 600, ಎಎಸ್‌ಐ 600 ಸೇರಿ 5200 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ವರ್ಷಾಚರಣೆಯಲ್ಲಿ ಭಾಗವಹಿಸುವ ಮಹಿಳೆಯರ ಸುರಕ್ಷತೆಯ ಹಿನ್ನೆಲೆಯಲ್ಲಿ ಪೊಲೀಸ್ ಕಿಯೋಸ್ಕ್ ಗಳನ್ನು…

Read More

ಐದು ಬೆರಳು ಸೇರಿ ಒಂದು ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಅರಳಿದ ಕಮಲದ ಹೂವು ಇದನ್ನು ನೋಡಿ ಉದುರಿ ಹೋಯಿತು, ಐದು ಗ್ಯಾರಂಟಿ ನೋಡಿ ಮಹಿಳೆ ತಾನು ಹೊತ್ತ ತೆನೆಯ ಎಸೆದು ಹೋದಳು ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು ಕರ್ನಾಟಕ ಸಮೃದ್ಧವಾಯಿತು ಕರ್ನಾಟಕ ಪ್ರಬುದ್ಧವಾಯಿತು ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳ ಸಂಪೂರ್ಣ ಅನುಷ್ಠಾನ ಮತ್ತು ಅದನ್ನು ನೋಡಿ ವಿರೋಧ ಪಕ್ಷಗಳ ಪರಿಸ್ಥಿತಿ, ಸಂಕಟವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕವನದ ಮೂಲಕ ಛೇಡಿಸಿದ್ದು ಹೀಗೆ. ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ಕಾಂಗ್ರೆಸ್ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿವಕುಮಾರ್ ಅವರು ಈ ಕವನ ವಾಚಿಸಿದಾಗ ಸಭಿಕರು ನಗೆಗಡಲಲ್ಲಿ ತೇಲಿದರು. ಕಾರ್ಯಕ್ರಮದ ನಂತರ ಮಾಧ್ಯಮದವರು ಕೇಳಿ ಮತ್ತೊಮ್ಮೆ ಡಿಸಿಎಂ ಅವರಿಂದ ಈ ಮೇಲಿನ ಕವನ ವಾಚಿಸಿದರು.ಉಳಿದಂತೆ ಯುವನಿಧಿ ಯೋಜನೆ ನೋಂದಣಿಗೆ ಚಾಲನೆ ಕಾರ್ಯಕ್ರಮದಲ್ಲಿ ಡಿಸಿಎಂ ಅವರು ಹೇಳಿದ್ದಿಷ್ಟು; “ಈ ಕಾಲದ…

Read More

ಬೆಂಗಳೂರು: ಪ್ರಧಾನಿ ಮೋದಿಯವರೇ ಕರ್ನಾಟಕ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ನಿಮ್ಮ ಮಾತು ಸುಳ್ಳಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯ ಸರ್ಕಾರದ ಐತಿಹಾಸಿಕ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವನಿಧಿ ಜತೆಗೆ ಉಚಿತ ತರಬೇತಿ, ಅರ್ಜಿ ಶುಲ್ಕವೂ ಉಚಿತ. ರಾಜ್ಯದ ಜನರಿಗೆ ಇದು ಮುಟ್ಟಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ ಮೋದಿಯವರೇ ನೀವು ಉದ್ಯೋಗ ಸೃಷ್ಟಿಸಿದ್ರಾ ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಅಂದ್ರೆ ಇಷ್ಟೊತ್ತಿಗೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಎಲ್ಲಿ ಸೃಷ್ಟಿಯಾಯ್ತು ಮೋದಿಯವರೇ ? ನೀವು ಮಾತಿಗೆ ತಪ್ಪಿದ ಮೋದಿ ಎಂದು ಸಿಎಂ ವ್ಯಾಪಕ ಟೀಕಿಸಿದರು. ಭಾರತದ ಇತಿಹಾಸದಲ್ಲಿ ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಇವತ್ತಿನವರೆಗೂ ಬಂದಿಲ್ಲ ಎಂದು ಟೀಕಿಸಿದರು. ಮೋದಿಯವರೇನು ಆರ್ಥಿಕ ತಜ್ಞರಾ ? ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೆ ರಾಜ್ಯ…

Read More

ಬಳ್ಳಾರಿ: ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಾರಾ ಪ್ರತಾಪ್ ರೆಡ್ಡಿಯವರಿಗೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಘೋಷಿಸಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1985ರಲ್ಲಿ ನಾನು ಮತ್ತು ಪ್ರತಾಪ್ ಜನತಾ ಪಾರ್ಟಿಯಲ್ಲಿ ಇದ್ದೆವು. ಇಬ್ಬರು ಬೇರೆ ಬೇರೆ ದಾರಿಯಲ್ಲಿ ನಡೆದರು ಚಿಂತನೆ ಒಂದೇ ಆಗಿದೆ. ಪಾರದರ್ಶಕ ಆಡಳಿತ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆ, ಶೋಷಿತರ ಧ್ವನಿಯಾಗಬೇಕು, ಒಳ್ಳೇ ಕೆಲಸ ಮಾಡಬೇಕು ಎನ್ನವ ಚಿಂತನೆಯನ್ನು ಪ್ರತಾಪ್ ರೆಡ್ಡಿ ಹೊಂದಿದ್ದಾರೆ ಎಂದರು. ಪಾರದರ್ಶಕ, ಪ್ರಾಮಾಣಿಕ ವ್ಯಕ್ತಿಗಳಿಗೆ ಬೆಂಬಲ ಕೊಡಲು ನಿರ್ಧರಿಸಿದಾಗ ಪ್ರತಾಪ್ ರೆಡ್ಡಿ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ. ಪ್ರತಾಪ್ ರೆಡ್ಡಿ ಹೋರಾಟದ ಹಿನ್ನೆಲೆಯಿಂದ ಬಂದವರು. ನೀರಿಗಾಗಿ, ಮೂಲ ಸೌಕರ್ಯಗಳಿಗಾಗಿ ಹೋರಾಡಿ ಜನರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಜೊತೆ ಆಮ್ ಆದ್ಮಿ ಪಕ್ಷ ಕೈ ಜೋಡಿಸಲಿದೆ. ಏಳು ಜಿಲ್ಲೆಯ ಜಿಲ್ಲಾಧ್ಯಕ್ಷರಿಗೆ ಬೆಂಬಲ ನೀಡಲು ಮನವಿ ಮಾಡಿದ್ದೇವೆ. ಕೇಂದ್ರದ ನಾಯಕರಿಗೆ ಕೂಡ…

Read More