Author: AIN Author

ಬೆಂಗಳೂರು: ಕೋವಿಡ್ ಮರೆತು ಬಾಳುತ್ತಿದ್ದ ಜನರ ನಡುವೆ ಈಗ ಜೆಎನ್.1ಉಪತಳಿ ದಿನೇದಿನೇ ಹೆಚ್ಚುತ್ತಿದೆ. ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ.ಈ ಹೊಸತಳಿಯ ವೈರಸ್ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯ ಇಲ್ಲದಿದ್ದರೂ ಎಚ್ಚರಿಕೆಯಿಂದ ಇರಬೇಕು ಎನ್ನುವುದು ವೈದ್ಯರ ಅಭಿಪ್ರಾಯ. ಕೊರೋನ  ಮರೆತು ಆರಾಮವಾಗಿ ಬದುಕುತ್ತಿದ್ದ ಜನರಲ್ಲಿ ಈಗ ಮತ್ತೆ ಆತಂಕದ ವಾತಾವರಣ ಸೃಷ್ಟಿಸುತ್ತಿರುವ ಹೊಸ ವೈರಸ್ ಜೆಎನ್ 1. ಆದರೆ ಈ ವೈರಸ್ ನಿಂದ ದೊಡ್ಡ ಮಟ್ಟದ ತೊಂದರೆ ಇಲ್ಲ,ಜಾಗತಿಕ ಪಿಡುಗಾಗುವ ಸಾಧ್ಯತೆ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದರು ಸಹ ಈ ವೈರಾಣು ಹೆಚ್ಚು ಬೇಗ ಹರಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.ಇನ್ನೂ ಈ ವೈರಾಣುವಿನ ಸಾಮಾನ್ಯ ಲಕ್ಷಣಗಳು ಶೀತ,ಜ್ವರ,ತಲೆನೋವು, ಮೂಗು ಕಟ್ಟುವುದು, ಕೆಮ್ಮು,ಕಫ ಮತ್ತು ವಾಸನೆ ಗೊತ್ತಾಗದಿರುವುದು. ಇನ್ನೂ 60 ರಿಂದ65 ವರ್ಷ ಮೇಲ್ಪಟ್ಟವರು, ಮಧು ಮೇಹಿಗಳು,ಕ್ಯಾನ್ಸರ್ ಗೆ ಚಿಕಿತ್ಸೆಪಡೆಯುತ್ತಿರುವವರು,ಅಂಗಾಂಗ ಕಸಿ ಪಡೆದವರಲ್ಲಿ ಸೋಂಕು ತೀವ್ರ ವಾಗುವ ಸಾಧ್ಯತೆ ಹೆಚ್ಚಿದ್ದು,ಜಾಗ್ರತೆ ವಹಿಸಬೇಕು . ಹಾಗೂ  ಜನದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ, ಆಸ್ಪತ್ರೆಗೆ ಭೇಟಿ…

Read More

ರಾಮನಗರ:- ಸರಿಯಾಗಿ ಕೆಲಸಕ್ಕೆ ಬರದ ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸಿಕೊಂಡ ಘಟನೆ ಮೆಹಬೂಬ ನಗರದ ಎಸ್‌ಐಯು ರೇಷ್ಮೆ ಕಾರ್ಖಾನೆಯಲ್ಲಿ ಜರುಗಿದೆ. ಕೆಲಸದ ಅವಧಿ ಮುಗಿದ ನಂತರವು ಆತನನ್ನು ಮನೆಗೆ ಕಳುಹಿಸದೆ ಕಾರ್ಖಾನೆಯಲ್ಲಿಯೇ ಸರಪಳಿ ಕಟ್ಟಿ ಕೂಡಿ ಹಾಕಿದ್ದು, ಜೀತದಾಳು ರೀತಿ ಹಗಲು ರಾತ್ರಿ ಕೆಲಸ ಮಾಡಿಸಿಕೊಂಡಿದ್ದಾರೆ. ಮುಂಗಡವಾಗಿ ಸಾಲ ಪಡೆದಿದ್ದ ಕಾರ್ಮಿಕ ಸರಿಯಾಗಿ ಕೆಲಸಕ್ಕೆ ಬರಲಿಲ್ಲ ಎಂದು ಕೋಪಗೊಂಡಿದ್ಡ, ಇಲ್ಲಿನ ಮೆಹಬೂಬ ನಗರದ ಎಸ್‌ಐಯು ರೇಷ್ಮೆ ಕಾರ್ಖಾನೆಯ ಮಾಲೀಕರು ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸಿಕೊಂಡಿದ್ದಾರೆ. ಸಹ ಕಾರ್ಮಿಕರು ನೀಡಿದ ದೂರಿನ ಮೇರೆಗೆ ರಾಮನಗರ ಪುರ ಠಾಣೆ ಪೊಲೀಸರು ಸೋಮವಾರ ಸಂಜೆ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದಾರೆ. ಕಾರ್ಖಾನೆಯಲ್ಲಿ ಕೂಡಿ ಹಾಕಲಾಗಿದ್ದ ಮೊಹಮ್ಮದ್ ವಸೀಂ (24) ಎಂಬ ಕಾರ್ಮಿಕನನ್ನು ರಕ್ಷಿಸಿದ್ದಾರೆ. ಮಾಲೀಕ ಸಯ್ಯದ್ ಇಸಾಮ್ ಮತ್ತು ಮೇಲ್ವಿಚಾರಕ ಸಯ್ಯದ್ ಅಮ್ಜದ್‌ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಬಂಧಿಸಿದ್ದಾರೆ.

Read More

ಸೆಂಚೂರಿಯನ್‌: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ (First Test) ಮೊದಲ ದಿನವೇ ಭಾರತ (Team India) 8 ವಿಕೆಟ್‌ ಕಳೆದುಕೊಂಡು 208 ರನ್‌ ಗಳಿಸಿದೆ. ವೇಗಿ ರಬಾಡ ಮಾರಕ ಬೌಲಿಂಗ್‌ ದಾಳಿಗೆ ಭಾರತ ತತ್ತರಿಸಿದೆ. 24 ರನ್‌ ಗಳಿಸುವಷ್ಟರಲ್ಲೇ ಭಾರತ ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌ ಅವರ ವಿಕೆಟ್‌ ಕಳೆದುಕೊಂಡಿತ್ತು. ಈ ಹಂತದಲ್ಲಿ ವಿರಾಟ್‌ ಕೊಹ್ಲಿ (Virat kohli) ಮತ್ತು ಶ್ರೇಯಸ್‌ ಅಯ್ಯರ್‌ ನಾಲ್ಕನೇ ವಿಕೆಟಿಗೆ 68 ರನ್‌ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಕೊಹ್ಲಿ 38 ರನ್‌, ಶ್ರೇಯಸ್‌ ಅಯ್ಯರ್‌ 31 ರನ್‌ ಗಳಿಸಿ ಔಟಾದರು. ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ಕೆಎಲ್‌ ರಾಹುಲ್‌ (KL Rahul) ತಾಳ್ಮೆಯ ಆಟವಾಡಿ ಔಟಾಗದೇ 70 ರನ್‌ ಹೊಡೆದರೆ, ಶಾರ್ದೂಲ್‌ ಠಾಕೂರ್‌ 24 ರನ್‌ ಹೊಡೆದು ಸಾಥ್‌ ನೀಡಿದರು. ಸದ್ಯ ಮೊಹಮ್ಮದ್‌ ಸಿರಾಜ್‌ 0 ರನ್‌ ಹೊಡೆದು ಬುಧವಾರಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ರಾಹುಲ್‌ ಕ್ರೀಸ್‌ಗ ಬರುವಾಗ ತಂಡದ ಮೊತ್ತ…

Read More

ಹೊಸದಿಲ್ಲಿ:- ಪ್ರಧಾನಿ ಮೋದಿಯವರ ಯೂಟ್ಯೂಬ್ ಚಾನೆಲ್ ಎರಡು ಕೋಟಿ ಸಬ್​ಸ್ಕ್ರೈಬರ್ಸ್​​ ಸಂಖ್ಯೆಯನ್ನು ತಲುಪಿದೆ. ಈ ಮೂಲಕ ವಿಶ್ವದ ದೊಡ್ಡ ದೊಡ್ಡ ನಾಯಕರ ಪೈಕಿ ಸದ್ಯ ಮೋದಿ ಅವರು ಮುಂಚೂಣಿಯಲ್ಲಿದ್ದಾರೆ. ಮೋದಿ ಅವರ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊಗಳು 4.5 ಶತಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿವೆ. ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಸುಮಾರು 64 ಲಕ್ಷ ಚಂದಾದಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇದು ಮೋದಿಯವರ ಮೂರನೇ ಒಂದು ಭಾಗಕ್ಕಿಂತ ಕಡಿಮೆಯಾಗಿದೆ. ವೀಕ್ಷಣೆಗೆ ಸಂಬಂಧಿಸಿದಂತೆ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು 22.4 ಕೋಟಿಗಳೊಂದಿಗೆ ಭಾರತದ ಪ್ರಧಾನಿಯ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ 7.89 ಲಕ್ಷ ಚಂದಾದಾರರನ್ನು ಹೊಂದಿದ್ದರೆ, ಅವರ ಟರ್ಕಿಯ ಕೌಂಟರ್ ರೆಸೆಪ್ ತಯ್ಯಿಪ್ ಎರ್ಡೋಗನ್ 3.16 ಲಕ್ಷ ಸಬ್​ಸ್ಕ್ರೈಬರ್ಸ್ ಅನ್ನು ಹೊಂದಿದ್ದಾರೆ.

Read More

ಬೆಂಗಳೂರು: ಕೊರೊನಾ ಕಾಲದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಂದಾಜು 40 ಸಾವಿರ ಕೋಟಿ ರೂಪಾಯಿಗಳ ಭ್ರಷ್ಟಾಚಾರ ಎಸಗಿದೆ ಎಂದು  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೇರವಾಗಿ ಆರೋಪಿಸುವ ಮೂಲಕ ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರವಾಗಿತ್ತು ಎನ್ನುವ ನಮ್ಮ ಆರೋಪಕ್ಕೆ ಸಾಕ್ಷಿ ಒದಗಿಸಿದ್ದಾರೆ. ಕೊರೊನಾ ಚಿಕಿತ್ಸೆ ಮತ್ತು ನಿಯಂತ್ರಣದ ಹೆಸರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಸುಮಾರು ರೂ.4,000 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಮಾಡಿದೆ ಎಂದು ಪತ್ರಿಕಾಗೋಷ್ಠಿ ಕರೆದು ದಾಖಲೆಗಳ ಸಮೇತ ನಾವು ಆರೋಪ ಮಾಡಿದ್ದೆವು. ಯತ್ನಾಳ್ ಅವರ ಆರೋಪವನ್ನು ಗಮನಿಸಿದರೆ ನಮ್ಮ ಅಂದಾಜಿಗಿಂತಲೂ ಹತ್ತು ಪಟ್ಟು ಹೆಚ್ಚಿನ ಭ್ರಷ್ಟಾಚಾರ ನಡೆದಿರುವಂತೆ ಕಾಣುತ್ತಿದೆ. ನಮ್ಮ ಆರೋಪ ಕೇಳಿ ಹೌಹಾರಿ ಬಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಆಗಿನ ಸಚಿವರ ದಂಡು ಈಗ ಎಲ್ಲಿ ಅಡಗಿ ಕೂತಿದೆ? ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಟ್ ಎಂಡ್ ರನ್ ಮಾಡಬಾರದು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕೆಂಬ ಬದ್ಧತೆಯನ್ನು ಅವರು ಹೊಂದಿದ್ದರೆ ತಮ್ಮ ಆರೋಪವನ್ನು…

Read More

ಬೀದರ್:- ನಗರದ ಹಾರೋಗೆರಿ ಬಳಿ ಕಾರು ಹರಿದ ಪರಿಣಾಮ 2 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ‌ ಜರುಗಿದೆ. ಬಸವಚೇತನ ಮೃತಪಟ್ಟ ದುರ್ದೈವಿ ಮಗು ಎನ್ನಲಾಗಿದೆ. ಹಾರೊಗೇರಿ‌ ನಿವಾಸಿ ಸತೀಶ ಪಾಟೀಲ ಹಾಗೂ ಸಂಗೀತಾ ದಂಪತಿ ಪುತ್ರ ಬಸವಚೇತನ. ಆಟವಾಡುತ್ತ ರಸ್ತೆ ಬದಿಯಲ್ಲಿ‌ ಮಗು ಬಂದಿದ್ದ ವೇಳೆ ಇನ್ನೋವಾ ಕಾರು ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮಗುವಿನ ಮೇಲೆ ಕಾರು ಹರಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಗಾಂಧಿಗಂಜ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಅನ್ನದಾತರಾದ ರೈತರ ಬಗ್ಗೆ ನಾವು ಎಚ್ಚರಿಕೆಯಿಂದ ಮಾತ್ರವಲ್ಲ ಗೌರವದಿಂದ ಮಾತನಾಡಬೇಕು. ಹಗುರ ಮಾತುಗಳ ಮೂಲಕ ರೈತರಿಗೆ ಅವಮಾನವಾಗುವಂತೆ ಮಾಡಬಾರದು. ಇದು ಪ್ರತಿಯೊಬ್ಬರು ಕಡ್ಡಾಯವಾಗಿ ಅನುಸರಿಸಿಕೊಂಡು ಬರಬೇಕಾದ ನೀತಿ ಸಂಹಿತೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. https://m.facebook.com/story.php?story_fbid=pfbid0E9TNy7oqDk6EogjWJ5fiNd4djsgDxz6HgaM9LPA4AGWv2oVF6iGseLhc6FbgGmVrl&id=100044576433033&mibextid=Nif5oz ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಅವರು,  ರೈತ ಕುಟುಂಬದಿಂದ ಬಂದಿರುವ  ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ರೈತರನ್ನು ಅವಮಾನಿಸಬೇಕೆಂಬ ದುರುದ್ದೇಶ ಖಂಡಿತ ಇರಲಾರದು. ತನ್ನ ಜೊತೆಗಿದ್ದ ರೈತರೊಂದಿಗಿನ ಸಲಿಗೆಯಿಂದ ಕೆಲವು ಮಾತುಗಳನ್ನು ಆಡಿದ್ದಾರೆ. ಆದರೆ ಇದು ಸಮಸ್ತ ರೈತ ಸಮುದಾಯಕ್ಕೆ ಅನ್ವಯಮಾಡುವಾಗ ವಿಪರೀತ ಅರ್ಥಕ್ಕೆ ಕಾರಣವಾಗುತ್ತದೆ. ಇದು ಸಲ್ಲದು. ರೈತರ ಕಲ್ಯಾಣಕ್ಕಾಗಿ ಕಿಂಚಿತ್ತೂ ಕೆಲಸ ಮಾಡದೆ ಇರುವ, ಮೂಲತ: ರೈತ ವಿರೋಧಿಯಾಗಿರುವ ಬಿಜೆಪಿಯ ನಾಯಕರು ಇಂತಹದ್ದೇ ಅವಕಾಶಕ್ಕಾಗಿ ಕಾದು ಕೂತವರಂತೆ ಶಿವಾನಂದ ಪಾಟೀಲರ ಮಾತುಗಳನ್ನು ವಿವಾದವನ್ನಾಗಿ ಮಾಡಿದ್ದಾರೆ. ಬೀಜ-ಗೊಬ್ಬರ ಕೊಡಿ ಎಂದು ಕೇಳಿದ ರೈತರನ್ನು ಗುಂಡಿಕ್ಕಿ ಸಾಯಿಸಿದ ಮತ್ತು  ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ ನೋಟ್…

Read More

ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್‌ 26ರಂದು ಯೋಜನೆ ನೋಂದಣಿಗೆ ಚಾಲನೆ ನೀಡಿದ್ದಾರೆ. 2024ರ ಜನವರಿ 12ರಂದು ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯುವ ನಿಧಿ ಯೋಜನೆ ಉದ್ಘಾಟನೆಗೊಳ್ಳಲಿದೆ. ಅದುವರೆಗೆ ನೋಂದಣಿ ಮಾಡಿಕೊಂಡು ದೃಢೀಕರಿಸಲ್ಪಟ್ಟ ಪದವೀಧರ/ಡಿಪ್ಲೊಮಾ ಹೋಲ್ಡರ್‌ ನಿರುದ್ಯೋಗಿ ಯುವಕ ಯುವತಿಯರಿಗೆ ಅಂದೇ ಡಿಬಿಟಿ ಮೂಲಕ ಭತ್ಯೆಯನ್ನು ವಿತರಿಸಲಾಗುತ್ತದೆ. ಹಾಗಿದ್ದರೆ ನೀವು ಅರ್ಜಿ ಸಲ್ಲಿಸಬೇಕಲ್ಲ! ಅರ್ಜಿ ಸಲ್ಲಿಸಬೇಕು ಅಂದರೆ ಏನು ಮಾಡಬೇಕು? ಅರ್ಜಿ ಸಲ್ಲಿಕೆಗೆ ಅರ್ಹತೆಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಏನಿದು ಯುವನಿಧಿ ಯೋಜನೆ? ಯಾರಿಗೆ ಸಿಗುತ್ತದೆ ಹಣ? ಯುವ ನಿಧಿ ಯೋಜನೆಯ ಫಲಾನುಭವಿಯಾಗುವುದಕ್ಕೆ ಇರಬೇಕಾದ ಅರ್ಹತೆ ಮತ್ತು ಸಿಗುವ ಭತ್ಯೆ ವಿವರ ಹೀಗಿದೆ. 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ ಲಾಭ ಸಿಗಲಿದೆ. ವೃತ್ತಿಪರ ಕೋರ್ಸ್‌ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ. ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ. ಈ ಭತ್ಯೆಯು…

Read More

ಶಿರಸಿ:- ಲೋಕಸಭಾ ಚುನಾವಣೆಗೆ ಮತ್ತೆ ನಾನೇ ಸ್ಪರ್ಧಿಸಿದರೆ ಆ ಭಗವಂತ ಒಪ್ಪಲ್ಲ ಎಂದು ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ಕಾರ್ಯಕರ್ತರು ಮಂಗಳವಾರ ಅವರ ಮನೆಗೆ ತೆರಳಿ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಗೆ ಸೂಚಿಸದಿದ್ದರೆ ನಾವು ಸ್ಥಳದಲ್ಲೇ ಉಪವಾಸ ಕೂರುತ್ತೇವೆ ಎಂದು ಪಟ್ಟುಹಿಡಿದರು. ಆದರೆ ಅನಂತ ಕುಮಾರ್‌ ಮಾತ್ರ ಇನ್ನೂ ಸ್ಪರ್ಧಿಸಿದರೆ ಭಗವಂತ ಒಪ್ಪುವುದಿಲ್ಲ. ನಿಮ್ಮ ಪ್ರೀತಿ, ವಿಶ್ವಾಸ ತಿರಸ್ಕರಿಸುವಂಥ ಮೂರ್ಖತನವನ್ನು ಭಗವಂತ ನನಗೆ ನೀಡದಿರಲಿ ಎಂದು ಮಾರ್ಮಿಕವಾಗಿ ನುಡಿದರು. ಆರು ಬಾರಿ ನನ್ನನ್ನು ಗೆಲ್ಲಿಸಿದ್ದೀರಿ, ನನಗೆ ಇನ್ನೇನು ಬೇಕು? ರಾಜಕೀಯದಿಂದ ದೂರ ಆಗಬೇಕು ಎಂದು ಕಳೆದ ಮೂರು ಅವಧಿಯಿಂದ ಹೇಳಿಕೊಂಡು ಬಂದಿದ್ದೇನೆ. ಜನ ನನ್ನನ್ನು ತಿರಸ್ಕರಿಸಿ ಹೊಸಬರ ಹೆಸರು ಹೇಳಲಿ ಎಂದು ಮೂರು ವರ್ಷಗಳಿಂದ ಸಾರ್ವಜನಿಕರ ಭೇಟಿ ಸಹ ಮಾಡಿರಲಿಲ್ಲ. ನಾನೇ ಮತ್ತೆ ಮತ್ತೆ ಸ್ಪರ್ಧೆ ಮಾಡುವುದನ್ನು ಭಗವಂತನೂ ಒಪ್ಪುವುದಿಲ್ಲ. ಜಿಲ್ಲೆಯಲ್ಲಿ ಸಾಮರ್ಥ್ಯ ಉಳ್ಳವರು, ಆಕಾಂಕ್ಷಿತರು ಜಾಸ್ತಿ ಇದ್ದಾರೆ. ಅವರಿಗೂ ಅವಕಾಶ ಸಿಗಬೇಕು ಎಂದರು.

Read More

ಸೆಂಚುರಿಯನ್​ನಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಕನ್ನಡಿಗ ಪ್ರಸಿದ್ಧ ಕೃಷ್ಣ ಪಾದಾರ್ಪಣೆ ಮಾಡಿದ್ದು, ಬೆನ್ನುನೋವಿನಿಂದ ಜಡೇಜಾ ಗೈರಾಗಿದ್ದಾರೆ. ಆಲ್ರೌಂಡರ್​ ರವೀಂದ್ರ ಜಡೇಜಾ ಬೆನ್ನುನೋವಿನ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್​ ಪಂದ್ಯಕ್ಕೆ ಅಲಭ್ಯರಾದರು. ಅವರ ಗೈರಿನಲ್ಲಿ ಅನುಭವಿ ಸ್ಪಿನ್ನರ್​ ಆರ್​. ಅಶ್ವಿನ್​ ಆಡುವ 11ರ ಬಳಗದಲ್ಲಿ ಸ್ಥಾನ ಸಂಪಾದಿಸಿದರು. ದಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಪಂದ್ಯದ ಮೊದಲ ದಿನದಾಟದ ವೇಳೆ ಗಾಯದಿಂದಾಗಿ ಮೈದಾನ ತೊರೆದರು. ಮಾಕೋರ್ ಜಾನ್ಸೆನ್​ ಎಸೆದ 20ನೇ ಓವರ್​ನಲ್ಲಿ ವಿರಾಟ್​ ಕೊಹ್ಲಿ ಹೊಡೆದ ಚೆಂಡನ್ನು ಡೈವ್​ ಮಾಡಿ ತಡೆಯುವ ಯತ್ನದ ವೇಳೆ ಬವುಮಾನ ಎಡಗಾಲಿನ ಸ್ನಾಯುಸೆಳೆತಕ್ಕೆ ಒಳಗಾದರು. ಇದರಿಂದಾಗಿ ಬವುಮಾ ಪಂದ್ಯದಲ್ಲಿ ಮರಳಿ ಕಣಕ್ಕಿಳಿಯುವುದು ಅನುಮಾನವೆನಿಸಿದೆ. ಬವುಮಾ ಗೈರಿನಲ್ಲಿ ಅನುಭವಿ ಬ್ಯಾಟರ್​ ಡೀಲ್​ ಎಲ್ಗರ್​ ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸಿದರು. ಬವುಮಾ ಬದಲಿಗೆ ವಿಯಾನ್​ ಮುಲ್ಡರ್​ ಫೀಲ್ಡಿಂಗ್​ ನಿರ್ವಹಿಸಿದರು.

Read More