ಸೆಂಚುರಿಯನ್ನಲ್ಲಿ ಟೆಸ್ಟ್ ಕ್ರಿಕೆಟ್ಗೆ ಕನ್ನಡಿಗ ಪ್ರಸಿದ್ಧ ಕೃಷ್ಣ ಪಾದಾರ್ಪಣೆ ಮಾಡಿದ್ದು, ಬೆನ್ನುನೋವಿನಿಂದ ಜಡೇಜಾ ಗೈರಾಗಿದ್ದಾರೆ.
ಆಲ್ರೌಂಡರ್ ರವೀಂದ್ರ ಜಡೇಜಾ ಬೆನ್ನುನೋವಿನ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾದರು. ಅವರ ಗೈರಿನಲ್ಲಿ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಆಡುವ 11ರ ಬಳಗದಲ್ಲಿ ಸ್ಥಾನ ಸಂಪಾದಿಸಿದರು.
ದಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಪಂದ್ಯದ ಮೊದಲ ದಿನದಾಟದ ವೇಳೆ ಗಾಯದಿಂದಾಗಿ ಮೈದಾನ ತೊರೆದರು. ಮಾಕೋರ್ ಜಾನ್ಸೆನ್ ಎಸೆದ 20ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಹೊಡೆದ ಚೆಂಡನ್ನು ಡೈವ್ ಮಾಡಿ ತಡೆಯುವ ಯತ್ನದ ವೇಳೆ ಬವುಮಾನ ಎಡಗಾಲಿನ ಸ್ನಾಯುಸೆಳೆತಕ್ಕೆ ಒಳಗಾದರು. ಇದರಿಂದಾಗಿ ಬವುಮಾ ಪಂದ್ಯದಲ್ಲಿ ಮರಳಿ ಕಣಕ್ಕಿಳಿಯುವುದು ಅನುಮಾನವೆನಿಸಿದೆ. ಬವುಮಾ ಗೈರಿನಲ್ಲಿ ಅನುಭವಿ ಬ್ಯಾಟರ್ ಡೀಲ್ ಎಲ್ಗರ್ ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸಿದರು. ಬವುಮಾ ಬದಲಿಗೆ ವಿಯಾನ್ ಮುಲ್ಡರ್ ಫೀಲ್ಡಿಂಗ್ ನಿರ್ವಹಿಸಿದರು.