Author: AIN Author

ನವದೆಹಲಿ: ಹೊಸವರ್ಷಕ್ಕೆ (New Year) ಕಾಲಿಡಲು ಕೇವಲ 3 ದಿನಗಳಷ್ಟೇ ಬಾಕಿ ಉಳಿದಿವೆ. ಈ ಹೊತ್ತಲ್ಲೇ ನರೇಂದ್ರ ಮೋದಿ (Narendra Modi) ಸರ್ಕಾರ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಜನವರಿಗೂ ಮೊದಲೇ ಪೆಟ್ರೋಲ್ ಬೆಲೆಯಲ್ಲಿ ಪ್ರತೀ ಲೀಟರ್‌ಗೆ 10 ರೂ. ಕಡಿತಗೊಳಿಸುವ ಸಾಧ್ಯತೆಯಿದೆ. ವರದಿಗಳ ಪ್ರಕಾರ ಪೆಟ್ರೋಲಿಯಂ ಸಚಿವಾಲಯ (Petroleum Ministry) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 8 ರೂ. ನಿಂದ 10 ರೂ.ವರೆಗೆ ಕಡಿತವನ್ನು ಒಳಗೊಂಡ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಇದಕ್ಕೆ ಪ್ರಧಾನಿ ಮೋದಿಯ ಅನುಮೋದನೆ ಸಿಗಬೇಕಿದೆ. https://ainlivenews.com/attention-students-mphil-not-recognized-ugc-notice-to-stop-admission/ 2023-24ರ ಹಣಕಾಸು ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಕೇವಲ 2 ತಿಂಗಳು ಹೊರತುಪಡಿಸಿ ಪ್ರತಿ ಬ್ಯಾರೆಲ್‌ಗೆ ಸರಾಸರಿ 77.14 ಡಾಲರ್ (ಸುಮಾರು 6,415.71 ರೂ.) ಇತ್ತು. ಇನ್ನು ಸೆಪ್ಟೆಂಬರ್‌ನಲ್ಲಿ 93.54 ಡಾಲರ್ (7,779.69 ರೂ.) ಹಾಗೂ ಅಕ್ಟೋಬರ್‌ನಲ್ಲಿ 90.08 ಡಾಲರ್‌ನಷ್ಟು (7,491.92 ರೂ.) ಏರಿಕೆಯಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಸರಾಸರಿ ಕಚ್ಚಾತೈಲದ ಬೆಲೆ…

Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆ ಆಗಿದೆ. ಅಭಿಮಾನಿಗಳು ಈ ಚಿತ್ರವನ್ನ ಗ್ರ್ಯಾಂಡ್ ಆಗಿ ಬರಮಾಡಿಕೊಂಡಿದ್ದಾರೆ. ‘ರಾಬರ್ಟ್​’ ಬಳಿಕ ನಿರ್ದೇಶಕ ತರುಣ್ ಸುಧೀರ್ ಮತ್ತು ದರ್ಶನ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ಸಿನಿಮಾ ಎಂಬ ಕಾರಣಕ್ಕೆ ಫ್ಯಾನ್ಸ್ ನಿರೀಕ್ಷೆ ಹೆಚ್ಚಿತ್ತು. ಗುರುವಾರ ಮಧ್ಯ ರಾತ್ರಿಯೇ ಅನೇಕ ಕಡೆಗಳಲ್ಲಿ ಶೋ ಆರಂಭ ಆಗಿದೆ. ದರ್ಶನ್​ ಅಭಿಮಾನಿಗಳು ಆ್ಯಕ್ಷನ್ ದೃಶ್ಯಗಳನ್ನು ಬಯಸುತ್ತಾರೆ. ಅಂಥವರಿಗೆ ಈ ಸಿನಿಮಾ ಖಂಡಿತಾ ನಿರಾಸೆ ಮಾಡುವುದಿಲ್ಲ. ಈ ಚಿತ್ರದಲ್ಲಿ ಹೊಡಿಬಡಿ ಸನ್ನಿವೇಶಕ್ಕೆ ಕಾರಣ ಆಗುವಂತಹ ಟ್ವಿಸ್ಟ್​ ಬರಬೇಕು ಎಂದರೆ ಪ್ರೇಕ್ಷಕರು ಬಹಳ ಹೊತ್ತು ಕಾಯಬೇಕು. ಆಮೇಲೆ ಕಾದಿದ್ದಕ್ಕೂ ಸಾರ್ಥಕ ಆಯ್ತು ಎಂಬಷ್ಟು ಆ್ಯಕ್ಷನ್​ ಸೀನ್​ಗಳನ್ನು ತರುಣ್​ ಸುಧೀರ್​ ತೋರಿಸುತ್ತಾರೆ. ಮಾಸ್​ ಪ್ರೇಕ್ಷಕರು ಈ ಚಿತ್ರವನ್ನು ಎಂಜಾಯ್​ ಮಾಡುತ್ತಾರೆ. ಸಿನಿಮಾ ನೋಡಿ ಹೊರ ಬಂದ ಬಳಿಕ ಅಭಿಮಾನಿಗಳು ತಮ್ಮ ವಿಮರ್ಶೆ ತಿಳಿಸಿದ್ದಾರೆ. ‘ಅದ್ಭುತ ಸಿನಿಮಾ’ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ‘ಒಳ್ಳೆಯ ಸಿನಿಮಾ ಕೊಟ್ಟ ಡಿ ಬಾಸ್​ಗೆ ಧನ್ಯವಾದ’ ಎಂದಿದ್ದಾರೆ

Read More

ವ್ಯೂಹಂ ಸಿನಿಮಾ ನಿರ್ದೇಶನ ಮಾಡಿದ್ದಕ್ಕೆ ತಮಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು ಎನ್ನುವವರು ಮಾಧ್ಯಮದಲ್ಲಿ ಕೂತು ಬಹಿರಂಗವಾಗಿ ತಮ್ಮನ್ನು ಕೊಲ್ಲಲು ಪ್ರಚೋದನೆ ನೀಡಿದ್ದಾರೆ. ನನ್ನ ತಲೆ ಕತ್ತರಿಸಿದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಆಂಧ್ರ ಪೊಲೀಸ್ ರಿಗೆ ಮೊರೆ ಹೋಗಿದ್ದಾರೆ. ಅಧಿಕಾರಿಗಳನ್ನು ಭೇಟಿ ಮಾಡಿ ದೂರಿನ ಪತ್ರವನ್ನು ಸಲ್ಲಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ವಿರುದ್ಧ ಟಿಡಿಪಿ ಕಾರ್ಯಕರ್ತರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವರ್ಮಾ ನಿರ್ದೇಶನ ಮಾಡಿರುವ ವ್ಯೂಹಂ ಸಿನಿಮಾ ರಿಲೀಸ್ ಮಾಡದಂತೆ ಪ್ರತಿಭಟಿಸಲಾಗುತ್ತಿದೆ. ಈ ಕುರಿತಂತೆ ಮಾಧ್ಯಮದೊಂದಿಗಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿರುವ ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು (Kolikapudi Srinivas Naidu), ಎಡವಟ್ಟಿನ ಹೇಳಿಕೆಯನ್ನು ನೀಡಿದ್ದರು. ವರ್ಮಾ ತಲೆ ಕಡಿದು ತಂದಿವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದರ ವಿರುದ್ಧ ವರ್ಮಾ ದೂರು…

Read More

ಚಾಲೆಂಜಿಂಗ್ ಸ್ಟಾರ್​ ದರ್ಶನ್ ಅಭಿನಯದ ಬಹುನಿರೀಕ್ಷಿತ ಕಾಟೇರ ಸಿನಿಮಾ (Kaatera Cinema) ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಚಕ್ರವರ್ತಿಯ ಅಬ್ಬರ ಶುರುವಾಗಿದೆ. ಸಿನಿಮಾ ಥಿಯೇಟರ್, ಮಾಲ್‌ಗಳ ಮುಂದೆ ಕಿಕ್ಕಿರಿದು ನಿಂತಿರುವ ಅಭಿಮಾನಿಗಳು (Darshan Fans) ದರ್ಶನ್‌ ಕಟೌಟ್‌ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಡಿಬಾಸ್‌ ಡಿಬಾಸ್‌ ಎಂದು ಜಯಘೋಷ ಹಾಕುತ್ತಾ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗಾಗಿ ಫ್ಯಾನ್ಸ್ ಶೋ ಆಯೋಜನೆ ಮಾಡಲಾಗಿತ್ತು. ಸಿನಿಮಾ ನೋಡಿ ಹೊರ ಬಂದ ಅಭಿಮಾನಿಗಳು ಸಾರಥಿಗೆ ಜೈಕಾರ ಕೂಗತೊಡಗಿದ್ದಾರೆ. ಈ ನಡುವೆ ಕಾಟೇರಮ್ಮನ ಗುಡಿ ಮಾಡಿ ದೇವಿ ಪ್ರತಿಮೆ ಸ್ಥಾಪಿಸಿರುವ ದೃಶ್ಯಗಳು ಕಂಡುಬಂದಿವೆ. ದರ್ಶನ್‌ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಟೇರ ದರ್ಬಾರ್‌ ಮಧ್ಯರಾತ್ರಿಯಿಂದಲೇ ಶುರುವಾಗಿದೆ. ರಾಜ್ಯದ 21 ಕಡೆ ಮಧ್ಯರಾತ್ರಿ 12 ಗಂಟೆಯಿಂದಲೇ ಶೋ ಆರಂಭಿಸಲಾಗಿದೆ. 43 ಥಿಯೇಟರ್‌ಗಳಲ್ಲಿ ಮುಂಜಾನೆ 3 ಗಂಟೆಯಿಂದ, 77 ಥಿಯೇಟರ್‌ಗಳಲ್ಲಿ ಬೆಳಗ್ಗಿನ ಜಾವ 4 ಗಂಟೆಯಿಂದ ಶೋ ಆರಂಭವಾಗಿದೆ. ಸೂರ್ಯೋದಯವಾಗುವುದಕ್ಕೂ ಮುನ್ನವೇ ಕಾಟೇರ 335 ಶೋಗಳಲ್ಲಿ…

Read More

 ‘ಕುಲವಧು’ (Kulavadhu) ಸೀರಿಯಲ್ ನಟಿ ದಿಶಾ ಮತ್ತೆ ಹೊಸ ಸೀರಿಯಲ್ ಮೂಲಕ ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದಾರೆ. ‘ಲಕ್ಷ್ಮಿ ನಿವಾಸ’ (Lakshmi Nivasa) ಸೀರಿಯಲ್ ಮೂಲಕ ಮತ್ತೆ ನಟನೆಗೆ ದಿಶಾ ಮರಳಿದ್ದಾರೆ. ಸೀರಿಯಲ್‌ನಲ್ಲಿ ಪ್ರಮುಖ ಪಾತ್ರಕ್ಕೆ ನಟಿ ಬಣ್ಣ ಹಚ್ಚಿದ್ದಾರೆ. ಈ ಸೀರಿಯಲ್ ಸಕಲ ತಯಾರಿ ಮಾಡಿಕೊಂಡಿದ್ದೆ ಬಂದಿದ್ದಾರೆ. ಸದ್ಯದಲ್ಲೇ ಪ್ರಸಾರದ ದಿನಾಂಕ ರಿವೀಲ್ ಆಗಲಿದೆ. ಶಶಾಂಕ್ ಜೊತೆ ಪ್ರೀತಿಸಿ ಮದುವೆಯಾದ ಮೇಲೆ ವೈವಾಹಿಕ ಬದುಕಿನಲ್ಲಿ ದಿಶಾ ಬ್ಯುಸಿಯಾಗಿದ್ದರು. 2 ಮಕ್ಕಳ ತಾಯಿಯಾಗಿರುವ ನಟಿ ಈಗ ಕುಟುಂಬದ ಬೆಂಬಲದ ಮೇರೆಗೆ ಮತ್ತೆ ನಟನೆಗೆ ಮರಳಿದ್ದಾರೆ. ‘ಕುಲವಧು’ ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್‌ನಲ್ಲಿ ದಿಶಾ ನಟಿಸಿದ್ದರು. ‘ಇಸ್ಮಾರ್ಟ್ ಜೋಡಿ’ ಎಂಬ ರಿಯಾಲಿಟಿ ಶೋನಲ್ಲಿ ಪತಿ ಜೊತೆ ದಿಶಾ ಭಾಗವಹಿಸಿದ್ದರು.  ‘ಹಂಬಲ್ ಪೋಲಿಟಿಷಿಯನ್’ ನೊಗರಾಜ್ ಸೇರಿದಂತೆ ಹಲವು ವೆಬ್ ಸಿರೀಸ್‌ನಲ್ಲಿ ದಿಶಾ ನಟಿಸಿದ್ದಾರೆ.

Read More

ಚಿಕ್ಕಬಳ್ಳಾಪುರ: ಶೈಕ್ಷಣಿಕ ಅಧ್ಯಯನ ಪ್ರವಾಸಕ್ಕೆ ತೆರಳಿದ್ದ ವೇಳೆ ಶಾಲಾ ಮುಖ್ಯ ಶಿಕ್ಷಕಿಯೊಬ್ಬರು ಹದಿಹರೆಯದ ವಿದ್ಯಾರ್ಥಿಯೊಂದಿಗೆ ಮುದ್ದಾಡಿ, ರೊಮ್ಯಾಟಿಕ್ ಆಗಿ ವಿಡಿಯೋ ಹಾಗೂ ಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದ ಘಟನೆಚಿಂತಾಮಣಿ ತಾಲೂಕಿನ ಮುರಗಮಲ್ಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಂಭವಿಸಿದೆ. ಇತ್ತೀಚೆಗೆ ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ಶಾಲಾ ವಿದ್ಯಾರ್ಥಿಯೊಂದಿಗೆ ಮುಖ್ಯ ಶಿಕ್ಷಕಿ ಈ ರೀತಿ ವರ್ತಿಸಿದ್ದು ಆ ಪೋಟೋಗಳು ಸೋರಿಕೆಯಾಗಿ ವಿದ್ಯಾರ್ಥಿ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯ ಮುಖ್ಯ ಶಿಕ್ಷಕಿ ಪುಪ್ಪಲತಾ ಈ ರೀತಿ ತಾನೊಬ್ಬ ಗುರು ಎಂಬುದನ್ನು ಮರೆತು ಶಾಲೆಯ ಹದಿಹರೆಯದ ವಿದ್ಯಾರ್ಥಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾಳೆ. https://ainlivenews.com/attention-students-mphil-not-recognized-ugc-notice-to-stop-admission/ ಈ ವೇಳೆ ಬಾಲಕನೊಂದಿಗೆ ವಿವಿಧ ಭಂಗಿಗಳಲ್ಲಿ ಪೋಟೋ ತೆಗೆಸಿಕೊಂಡಿರುವ ಶಿಕ್ಷಕಿ, ವಿದ್ಯಾರ್ಥಿ ಕೂಡ ಶಿಕ್ಷಕಿಯರನ್ನು ಮುದ್ದಾಡಿದ್ದು, ಶಿಕ್ಷಕಿ ಕೂಡ ಬಾಲಕನಿಗೆ ಕಿಸ್ ಕೊಟ್ಟಿರುವ ಫೋಟೋಗಳು ಈಗ ಎಲ್ಲೆಡೆ ವೈರಲ್ ಆಗಿದೆ. ಶಿಕ್ಷಕಿಯ ವರ್ತನೆ ಬಗ್ಗೆ ಪೋಷಕರು ಕಿಡಿಕಾರಿದ್ದಾರೆ. ಅಲ್ಲದೇ ಬುಧವಾರ ಬೆಳಗ್ಗೆ ಈ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿ ಪೋಷಕರು ಕೂಡ…

Read More

ದಕ್ಷಿಣ ಅಮೆರಿಕದ ಪರಾಗ್ವೆಯ ಹಿರಿಯ ಅಧಿಕಾರಿಯೊಬ್ಬರು ಅಸ್ತಿತ್ವದಲ್ಲಿಲ್ಲದ ದೇಶದೊಂದಿಗೆ ಸಹಕಾರ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದ ನಂತರ ಅವರನ್ನು ವಜಾ ಮಾಡಲಾಗಿದೆ. ಭಾರತದಿಂದ ತಲೆಮರೆಸಿ ಕೊಂಡಿರುವ ಸ್ವಾಮಿ ನಿತ್ಯಾನಂದನ ಕಪೋಕಲ್ಪಿತ ದೇಶ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಅಧಿಕೃತ ದೇಶವೆಂದು ತಿಳಿದುಕೊಂಡು ಅಧಿಕಾರಿ ಅಲ್ಲಿನ ಅಧಿಕಾರಿಗಳು ಎಂದು ಹೇಳಿಕೊಂಡು ಬಂದವರ ಜತೆ ಮಾತುಕತೆ ನಡೆಸಿದ್ದಾರೆ.  ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಉದ್ದೇಶಿತ ಅಧಿಕಾರಿಗಳೊಂದಿಗೆ ಡಾಕ್ಯುಮೆಂಟ್‌ಗೆ ಸಹಿ ಹಾಕಿದ ನಂತರ ಕೃಷಿ ಸಚಿವರ ಸಿಬ್ಬಂದಿಯ ಮುಖ್ಯಸ್ಥ ಹುದ್ದೆಯಿಂದ ತನ್ನನ್ನು ವಜಾಗೊಳಿಸಲಾಗಿದೆ ಎಂದು ಅರ್ನಾಲ್ಡೊ ಚಮೊರೊ ಸುದ್ದಿಗಾರರಿಗೆ ತಿಳಿಸಿದರು. ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ದಕ್ಷಿಣ ಅಮೆರಿಕದ ದ್ವೀಪ ಹಾಗೂ ಅಧಿಕೃತ ದೇಶವೆಂದು ಅವರಿಗೆ ಪ್ರಸ್ತುತಪಡಿಸಲಾಗಿದೆ. https://ainlivenews.com/sabarimala-ayyappa-swami-temple-earned-204-crore-rupees-in-39-days/ ಅಲ್ಲಿನ ಅಧಿಕಾರಿಗಳೆಂದು ಹೇಳಿಕೊಂಡು ಬಂದು ಪರಾಗ್ವೆಗೆ ಸಹಾಯ ಮಾಡಲು ಇಚ್ಛೆಯನ್ನು ವ್ಯಕ್ತಪಡಿಸಿದರು. ಅವರು ಹಲವಾರು ಯೋಜನೆಗಳನ್ನು ಪ್ರೆಸೆಂಟೇಷನ್‌ ಮಾಡಿದರು, ನಾವು ಅದನ್ನು ಕೇಳಿದೆವು, ಅಷ್ಟೇ ಎಂದು ತಾವು ಮೂರ್ಖರಾಗಿ ರುವುದನ್ನು ಒಪ್ಪಿಕೊಂಡರು. ಅವರನ್ನು ವಜಾಗೊಳಿಸಲಾಗಿದೆ ಎಂದು…

Read More

ಇಸ್ಲಾಮಾಬಾದ್:- ಪಾಕ್ ನಲ್ಲಿ ಈ ಬಾರಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ. ಗಾಜಾದಲ್ಲಿರುವ ಜನರೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಲು ಪಾಕಿಸ್ತಾನದ ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಅವರು ಗುರುವಾರ ದೇಶದಲ್ಲಿ ಹೊಸ ವರ್ಷಾಚರಣೆಯನ್ನು ನಿಷೇಧಿಸುವುದಾಗಿ ಘೋಷಿಸಿದ್ದಾರೆ. ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಸಂಕ್ಷಿಪ್ತ ಭಾಷಣದಲ್ಲಿ ಕಾಕರ್ ಅವರು ಪ್ಯಾಲೆಸ್ಟೀನಿಯಾದವರಿಗೆ ಒಗ್ಗಟ್ಟನ್ನು ತೋರಿಸಲು ಮತ್ತು ಹೊಸ ವರ್ಷದಲ್ಲಿ ಸಮಚಿತ್ತತೆ ಮತ್ತು ನಮ್ರತೆಯನ್ನು ಪ್ರದರ್ಶಿಸಲು ದೇಶದ ಜನರಲ್ಲಿ ಒತ್ತಾಯಿಸಿದ್ದಾರೆ. “ಪ್ಯಾಲೆಸ್ತೀನ್‌ನಲ್ಲಿನ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ನಮ್ಮ ಪ್ಯಾಲೆಸ್ತೀನ್ ಸಹೋದರ ಸಹೋದರಿಯರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು, ಹೊಸ ವರ್ಷಕ್ಕೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ನಡೆಸದಂತೆ ಸರ್ಕಾರವು ಕಟ್ಟುನಿಟ್ಟಾದ ನಿಷೇಧವನ್ನು ವಿಧಿಸುತ್ತದೆ” ಎಂದು ಅವರು ಹೇಳಿದರು. ಅಕ್ಟೋಬರ್ 7 ರಂದು ಇಸ್ರೇಲಿ ಬಾಂಬ್ ದಾಳಿ ಪ್ರಾರಂಭವಾದಾಗಿನಿಂದ ಸುಮಾರು 9,000 ಮಕ್ಕಳು ಸೇರಿದಂತೆ ಇಸ್ರೇಲ್ ಪಡೆಯ ಹಿಂಸಾಚಾರದಲ್ಲಿ ಇದುವರೆಗೆ 21,000 ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು. ಇಡೀ ಪಾಕಿಸ್ತಾನಿ ರಾಷ್ಟ್ರ ಮತ್ತು ಮುಸ್ಲಿಂ ಜಗತ್ತು ಗಾಜಾ ಮತ್ತು ಪಶ್ಚಿಮ…

Read More

ವಿಜಯಪುರ: ಸಚಿವ ಎಂ.ಬಿ.ಪಾಟೀಲ ನಾಲ್ಕನೇ ಟಿಪ್ಪು ಸುಲ್ತಾನ್ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೂರನೇ ಟಿಪ್ಪು ಎಂಬ ಸಚಿವ ಎಂ.ಬಿ.ಪಾಟೀಲರ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು. ಹಿಜಾಬ್‌ ನಿಷೇಧ ಆದೇಶ ವಾಪಸ್ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, https://ainlivenews.com/sabarimala-ayyappa-swami-temple-earned-204-crore-rupees-in-39-days/ ಇದೇ ರೀತಿ ಸಮವಸ್ತ್ರ ಇರಬೇಕು ಎಂದು ಈ ಹಿಂದೆ ಬಿಜೆಪಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ. ಇಡಿ ದೇಶದಲ್ಲಿ ಎಲ್ಲಿಯೂ ಈ ವಿಷಯ ಇಲ್ಲ, ಕರ್ನಾಟಕದಲ್ಲಿ ಯಾಕೆ ಎಂದು ಪ್ರಶ್ನಿಸಿದರು. ಇದು ಇವರೇ ತೆಗೆದಿದ್ದು, ಈ ವಿಚಾರ ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ ನಿಶ್ಚಿತವಾಗಿ ಮುಳುವಾಗಲಿದೆ. ಈ ರೀತಿ ಕೋಮು ಆಧಾರದ ಮೇಲೆ ಮಕ್ಕಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ದಲಿತರು, ಹಿಂದುಳಿದ ವರ್ಗದ ಶಾಲಾ ಮಕ್ಕಳಿಗೆ ಪ್ರವಾಸಕ್ಕೆ ಕಳಿಸುತ್ತೀರಿ.  ಬಡವರು ಸೇರಿದಂತೆ ಎಲ್ಲಾ ಮಕ್ಕಳನ್ನೂ ಕಳಿಸಬೇಕು. ಆಗ ಮಕ್ಕಳಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ. ಪ್ರತ್ಯೇಕವಾಗಿ ಕಳಿಸುವುದರಿಂದ…

Read More

ಬೆಂಗಳೂರು:- ವಿಕಲಚೇತನರಿಗೆ ಬಿಎಂಟಿಸಿ ಸಾರಿಗೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಸಾರಿಗೆ ಇಲಾಖೆ ನಿರ್ದೇಶನದಂತೆ 2024 ರ ಅವದಿಗೆ ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಪಾಸ್ ವಿತರಣೆ ಮಾಡಲು ಸಜ್ಜಾಗಿದೆ. ಒಂದು ವರ್ಷಕ್ಕೆ 660 ರೂ ದರವನ್ನು ಬಿಎಂಟಿಸಿ ನಿಗದಿ ಮಾಡಿದೆ. ಡಿಸೆಂಬರ್ 29 ರಿಂದ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಗತ್ಯ ಇರುವ ನಿಲ್ದಾಣ ಆಯ್ಕೆ ಮೂಲಕ ಸೇವಾಸಿಂಧು ಪೂರ್ಟಲ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ ಒಂದು ವರ್ಷವಿಡಿ ವಿಲಕನಚೇತನರಿಗೆ ರಿಯಾಯಿತಿ ದರದ ಪಾಸ್ BMTC ನೀಡಲಿದೆ. ನೂತನ ಪಾಸ್ ಅರ್ಜಿ ಸಲ್ಲಿಸಲು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ಪಾಸ್ ನವೀಕರಣಕ್ಕೆ ಅರ್ಜಿ ಸಲ್ಲಿಸದರೆ ನಗರದ 12 ಕಡೆ ಪಾಸ್ ಲಭ್ಯವಾಗಿದೆ. ನೂತನ ಪಾಸ್ & ನವೀಕರಣ ಪಾಸ್ ಎಲ್ಲೆಲ್ಲಿ ಸಿಗಲಿದೆ:- ನೂತನ ಪಾಸ್ ಕೆಂಪೇಗೌಡ ಬಸ್ ನಿಲ್ದಾಣ ಲಭ್ಯ ವಿಕಲಚೇತನರಿಗೆ ನವೀಕರಣ ಪಾಸ್ ಸಿಗುವ ಸ್ಥಳ ಕೆ.ಆರ್ ಮಾರ್ಕೆಟ್ ಟಿಟಿಎಂಸಿ ಬನಶಂಕರಿ ಟಿಟಿಎಂಸಿ…

Read More