‘ಕುಲವಧು’ (Kulavadhu) ಸೀರಿಯಲ್ ನಟಿ ದಿಶಾ ಮತ್ತೆ ಹೊಸ ಸೀರಿಯಲ್ ಮೂಲಕ ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದಾರೆ.
‘ಲಕ್ಷ್ಮಿ ನಿವಾಸ’ (Lakshmi Nivasa) ಸೀರಿಯಲ್ ಮೂಲಕ ಮತ್ತೆ ನಟನೆಗೆ ದಿಶಾ ಮರಳಿದ್ದಾರೆ. ಸೀರಿಯಲ್ನಲ್ಲಿ ಪ್ರಮುಖ ಪಾತ್ರಕ್ಕೆ ನಟಿ ಬಣ್ಣ ಹಚ್ಚಿದ್ದಾರೆ.
ಈ ಸೀರಿಯಲ್ ಸಕಲ ತಯಾರಿ ಮಾಡಿಕೊಂಡಿದ್ದೆ ಬಂದಿದ್ದಾರೆ. ಸದ್ಯದಲ್ಲೇ ಪ್ರಸಾರದ ದಿನಾಂಕ ರಿವೀಲ್ ಆಗಲಿದೆ.
ಶಶಾಂಕ್ ಜೊತೆ ಪ್ರೀತಿಸಿ ಮದುವೆಯಾದ ಮೇಲೆ ವೈವಾಹಿಕ ಬದುಕಿನಲ್ಲಿ ದಿಶಾ ಬ್ಯುಸಿಯಾಗಿದ್ದರು. 2 ಮಕ್ಕಳ ತಾಯಿಯಾಗಿರುವ ನಟಿ ಈಗ ಕುಟುಂಬದ ಬೆಂಬಲದ ಮೇರೆಗೆ ಮತ್ತೆ ನಟನೆಗೆ ಮರಳಿದ್ದಾರೆ.
‘ಕುಲವಧು’ ಸೀರಿಯಲ್ನಲ್ಲಿ ನೆಗೆಟಿವ್ ಶೇಡ್ನಲ್ಲಿ ದಿಶಾ ನಟಿಸಿದ್ದರು. ‘ಇಸ್ಮಾರ್ಟ್ ಜೋಡಿ’ ಎಂಬ ರಿಯಾಲಿಟಿ ಶೋನಲ್ಲಿ ಪತಿ ಜೊತೆ ದಿಶಾ ಭಾಗವಹಿಸಿದ್ದರು.
‘ಹಂಬಲ್ ಪೋಲಿಟಿಷಿಯನ್’ ನೊಗರಾಜ್ ಸೇರಿದಂತೆ ಹಲವು ವೆಬ್ ಸಿರೀಸ್ನಲ್ಲಿ ದಿಶಾ ನಟಿಸಿದ್ದಾರೆ.