Author: AIN Author

ಕೆಆರ್ ಪುರ: ಸಾವಿರಾರು ವರ್ಷಗಳ ಇತಿಹಾಸವಿರುವ ಧೀಮಂತ ಭಾಷೆ ಕನ್ನಡವಾಗಿದೆ ಎಂದು ಸಮಾಜಸೇವಕ ಆರ್.ಮಂಜುನಾಥ್ ತಿಳಿಸಿದರು. ರಾಮಮೂರ್ತಿನಗರ ಅಂಬೇಡ್ಕರ್ ನಗರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಕನ್ನಡದ ಇತಿಹಾಸ ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಜೊತೆ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದು ತಿಳಿಸಿದರು. ಕನ್ನಡವನ್ನು ಹೆಚ್ಚು ಬಳಸುವ ಮುಖಾಂತರ ಬೆಳೆಸುವ ಕಾರ್ಯವನ್ನು ಮಾಡಬೇಕಿದೆ, ಕನ್ನಡ ಭಾಷೆಯ ಮಹತ್ವ ತಿಳಿದು ಬಾಳಿದರೆ ಮಾತ್ರ ರಾಜ್ಯೋತ್ಸವ ಆಚರಣೆ ಸಾರ್ಥಕವಾಗುತ್ತದೆ, ಕರ್ನಾಟಕ ಏಕೀಕರಣವಾಗಲು ನಾಡಿನ ಹಲವು ಕವಿಗಳು,ನಟರು,ವಿಚಾರವಂತರು ಸಾಹಿತಿಗಳು ಸೇರಿದಂತೆ ಹಲವರ ಕೊಡುಗೆ ಅಪಾರವಾಗಿದ್ದು, ಅವರ ಹೋರಾಟದಿಂದಲೇ ನಾವಿಂದ ಏಕೀಕೃತ ನಾಡನ್ನು ಕಟ್ಟಿಕೊಂಡಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಬಿ.ವಿ.ಭಾರತಿ ಮುಖಂಡರಾದ ಎಮ್.ಭಕ್ತಣ್ಣ, ಚಂದ್ರು,ಹರಿ,ಪರಮೇಶ್ವರಯ್ಯ,ಲೋಕೇಶ್ ಮುಂತಾದವರು ಇದ್ದರು.

Read More

ತುಮಕೂರು: ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಶುಕ್ರವಾರ ದಿಢೀರನೆ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಪೂರ್ವ ನಿಗದಿತ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಅವರು ದಿಢೀರನೆ ತುಮಕೂರು‌ ನಗರದ ಬಾರ್ ಲೈನ್ ರಸ್ತೆಯಲ್ಲಿರೋ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.

Read More

ಹುಬ್ಬಳ್ಳಿ ; ನಗರದಲ್ಲಿ ಶ್ರೀಶೈಲ ಪೀಠದ ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮಸಮಾವೇಶದ ಅಂಗವಾಗಿ ಮೂರನೇ ದಿನದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿತು ಅನೇಕ ಜನರಿಗೆ ಲಿಂಗ ದೀಕ್ಷೆಯನ್ನು ಮಾಡುವ ಮೂಲಕ ಲಿಂಗದ ಮಹಿಮೆಯನ್ನು ತಿಳಿಸಿಕೊಟ್ಟರು ದೇವಾನುದೇವತೆಗಳು ಕೂಡ ಇಷ್ಟ ಲಿಂಗ ಮಹಾಪೂಜೆಯನ್ನು ಮಾಡಿಕೊಳ್ಳುತ್ತಿದ್ದರು. ಕೂಡ ತಾವು ನೋಡಬಹುದು ಪಂಡರಾಪುರದಲ್ಲಿ ವಿಠಲನ ಶರದ ಮೇಲೆ ಲಿಂಗ ಇರುವುದು ಕಂಡು ಬರುತ್ತದೆ ಅಲ್ಲಿ ಪ್ರತಿದಿನ ಬಿಲ್ವಾರ್ಚಿನ್ನು ಅರ್ಪಿಸುವ ಮೂಲಕ ಪೂಜೆ ನೆರವೇರುವುದು ಲಿಂಗದ ಮಹಿಮೆಯನ್ನು ಅರಿತವರು ಲಿಂಗದ ಮಾಹಿತಿಯನ್ನು ತಿಳಿಯದವರಿಗೆ ನೀಡಿ ವೀರಶೈವ ಲಿಂಗಾಯತರು ಪ್ರತಿಯೊಬ್ಬರು ಲಿಂಗಧಾರಣೆಯನ್ನು ಮಾಡಿಕೊಳ್ಳಬೇಕು ಹಾಗೂ ಲಿಂಗವನ್ನು ಧರಿಸಿಯೇ ಇರಬೇಕು ಅಂದಾಗ ಮಾತ್ರ ಅವನು ಲಿಂಗವಂತ ಅಥವಾ ವೀರಶೈವ ಆಗುವನು ಎಂದು ತಿಳಿಸಿದರು. ಇವತ್ತಿನ ಪೂಜೆ ಯಲ್ಲಿ ಪ್ರಕಾಶ್ ಬೆಂಡಿಗೇರಿ ದಂಪತಿಗಳು ಜಗದ್ಗುರುಗಳ ಪಾದಪೂಜೆಯನ್ನು ನೆರವೇರಿಸಿದರು ಅಂಬಿಕಾ ನಗರದ ಶ್ರೀ ಷ ಬ್ರ ಈಶ್ವರ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು ನೋ ನೂರಾರು ಮಹಿಳೆಯರು ಲಿಂಗ ದೀಕ್ಷೆಯನ್ನು ಮಾಡಿಕೊಂಡರು ಹುಬ್ಬಳ್ಳಿಯ…

Read More

ಕಲಬುರಗಿ: ಕೊರೊನಾ ಕನವರಿಸುವ ವಚನಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ಇವತ್ತು ಕಲಬುರಗಿಯಲ್ಲಿ ನಡೆಯಿತು.. ಪತ್ರಕರ್ತ ಸಂಗಮನಾಥ ರೇವತಗಾಂವ್ ಬರೆದಿರುವ ಪುಸ್ತಕವನ್ನು ಮಾದನ ಹಿಪ್ಪರಗಾ ಶ್ರೀಗಳು ಬಿಡುಗಡೆ ಮಾಡಿದ್ರು.. ಕಲಬುರಗಿ ವಿವಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಈ ಪುಸ್ತಕದಲ್ಲಿ ಇನ್ನೂರಕ್ಕೂ ಅಧಿಕ ವಚನಗಳಿವೆ ಎಲ್ಲರೂ ಓದಿ ಅಂತ ಶ್ರೀಗಳು ಹೇಳಿದ್ರು. ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ವಿವಿ ಪ್ರೊಫೆಸರ್ ಹೆಚ್ ಟಿ ಪೋತೆ ಹಾಗು ಆರ್ ಎಸ್ಎಸ್ ಮುಖಂಡರಾದ ಲಿಂಗರಾಜಪ್ಪ ಅಪ್ಪಾ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು..

Read More

ಬೆಂಗಳೂರು: ಕನ್ನಡಕ್ಕಾಗಿ ಕೈ ಎತ್ತು ನಿಮ್ಮ ಕೈ ಕಲ್ಪವೃಕ್ಷವಾಗಲಿದೆ ಅಂತ ರಾಷ್ಟ್ರಕವಿ ಕುವೆಂಪು ಹೇಳಿದ್ರು. ಆದ್ರೆ ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕೆ ಸರ್ಕಾರ, ಕನ್ನಡ ಪರ ಹೋರಾಟಗಾರರನ್ನ ಜೈಲಿಗೆ ಹಾಕಿದೆ. ಇದು ಕನ್ನಡ ಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದು,ಬೀದಿಗಿಳಿಯಲು ಸಜ್ಜಯಾಗ್ತಿದ್ದಾರೆ. ಕರವೇ ನಾರಾಯಣ ಗೌಡ ಬಂಧನ ಬೆನ್ನಲ್ಲೇ ಕನ್ನಡಪರ ಹೋರಾಟಗಾರರು ಒಂದಾಗಿ ಖಂಡನಾ ಸಭೆ ನಡೆಸಿ ಬೆಂಗಳೂರು ಬಂದ್ ಎಚ್ಚರಿಕೆ ನೀಡಿದ್ದಾರೆ. ಜನಿಸು ಬಾ ಮನುಜನೆ ಕನ್ನಡ ಮಣ್ಣಲ್ಲಿ, ಸ್ವರ್ಗವ ಕಾಣುವೇ ನನ್ನ ಈ ಕರುನಾಡಲ್ಲಿ. ಅಳಿದರು ಕನ್ನಡ, ಉಳಿದರು ಕನ್ನಡ, ಎದೆಯನೇ ಸೀಳಿದರು ಹರಿಯುವುದು ಕನ್ನಡ ಅಂತ ಅನ್ಯಭಾಷೆ ನಾಮಫಲಕವನ್ನ ಹೊಡೆದಾಕಿ, ಕಿತ್ತಾಕಿ, ಕಲ್ಲೆತ್ತಾಕಿ ಕನ್ನಡಪರ ಹೋರಾಟಗಾರರು ಆಕ್ರೋಶ ಹೊರಹಾಕಿದ್ರು. ಹೀಗೆ ಬೆಂಗಳೂರಿನಲ್ಲಿ ಅಂಗಡಿಗಳು, ಮಾಲ್‌ಗಳ ಮೇಲೆ ದಾಳಿ ಮಾಡಿದ್ದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ ವಿವಿಧ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ರು. ಇದೀಗ ಕರವೇ ಕಾರ್ಯಕರ್ತರ ಬಂಧನದ ಬೆನ್ನಲ್ಲೇ ಕನ್ನಡ ಪರ ಒಕ್ಕೂಟಗಳು ಹಾಗೂ ಸಾಹಿತೆಗಳು ಒಂದಾಗಿ ಸರ್ಕಾರ ವಿರುದ್ದ ಸಮರಕ್ಕೆ…

Read More

ಬೆಂಗಳೂರು :  ಕೋಟಿ ಕೋಟಿ ತೆರಿಗೆಯಿಂದ ಬಾಕಿ ಇದ್ದ ಹಿನ್ನೆಲೆಯಲ್ಲಿ ಬಿಬಿಎಂಪಿಯವರು ಬೆಂಗಳೂರಿನ ಪ್ರತಿಷ್ಠಿತ ಮಾಲ್ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್‌ʼನನ್ನು ಕ್ಲೋಸ್‌ ಮಾಡಿಸಿದ್ದರು ಆದರೆ ಇಂದಿನಿಂದ ಮತ್ತೆ ಓಪನ್‌ ಮಾಡಲಾಗಿದೆ. https://ainlivenews.com/big-shock-for-our-metro-passengers-on-new-year-ticket-price-will-be-expensive/ ಕಳೆದ ಎರಡು ದಿನಗಳಿಂದ ಮಂತ್ರಿ ಸ್ಕ್ವಾರ್‌ ಮಾಲ್‌ಗೆ ಬೀಗ ಹಾಕಲಾಗಿದ್ದು, ಗ್ರಾಹಕರು ಭೇಟಿ ನೀಡಿ ವಾಪಸ್‌ ಆಗುತ್ತಿದ್ದಾರೆ. ಬುಧವಾರ ಹಾಗೂ ಗುರುವಾರ ಎರಡೂ ದಿನಗಳು ಮಾಲ್‌ ಬಂದಾಗಿದ್ದು, ವೀಕೆಂಡ್‌ನಲ್ಲಿ ಮಾಲ್‌ನ ಕಥೆಯೇನು..? ಎನ್ನುವುದು ಸದ್ಯದ ಪ್ರಶ್ನೆಯಾಗಿತ್ತು ಆದರೆ ಇದೀಗ ಖುಷಿ ವಿಚಾರವೆಂದರೆ ಮತ್ತೆ ಓಪನ್‌ ಆಗಿರುವುದರಿಂದ ಅಲ್ಲಿನ ಗ್ರಾಹಕರು ಮತ್ತು ಕೆಲಸದ ಸಿಬ್ಬಂದಿಗಳು ಫುಲ್‌ ಖುಷಿಯಾಗಿದ್ದಾರೆ. ಮಂತ್ರಿ ಮಾಲ್‌ ಬಂದ್‌ ಆಗಿದ್ದೇಕೆ..? 2019-20ರಿಂದ 50.63 ಕೋಟಿ ರೂಪಾಯಿ ತೆರಿಗೆ ಪಾವತಿಸದ ಕಾರಣ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿದ್ದಾರೆ. ಮಂತ್ರಿ ಮಾಲ್‌ ಆಡಳಿತ ಮಂಡಳಿಯ ಅಭಿಷೇಕ್‌ ಪ್ರೊಪ್‌ಬಿಲ್ಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಹಾಗೂ ಹಮಾರಾ ಶೆಲ್ಟರ್ಸ್‌ ಪ್ರೈ. ಲಿ.…

Read More

ದಾವಣಗೆರೆ: ಪಕ್ಷದೊಳಗೆ ಏನೇ ಭಿನ್ನಾಭಿಪ್ರಾಯ, ದೂರುಗಳಿದ್ದರೂ ಕೇಂದ್ರ ನಾಯಕರ ಜೊತೆ ಮಾತನಾಡಲಿ. ಯಾರೇ ಆಗಲಿ ಪಕ್ಷದ ವಿರುದ್ಧವಾಗಿ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂದು ಬಿಎಸ್‌ವೈ ವಿರುದ್ಧ ಯತ್ನಾಳ್ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು. ಅಮಿತ್ ಶಾ, ರಾಜ್ ನಾಥ್ ಸಿಂಗ್, ರಾಷ್ಟ್ರೀಯ ಅಧ್ಯಕ್ಷರಿದ್ದಾರೆ ಏನಾದರೂ ಸಮಸ್ಯೆಗಳಿದ್ದಲ್ಲಿ ಅವರ ಜೊತೆ ಮಾತನಾಡಲಿ. ವಿಜಯೇಂದ್ರ ಅವರನ್ನ ರಾಷ್ಟ್ರೀಯ ನಾಯಕರು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅದರ ಬಗ್ಗೆ ವಿರೋಧ ಮಾಡೋದು ತಪ್ಪು. ಈ ಬಗ್ಗೆ ಹೈಕಮಾಂಡ್ ನಾಯಕರು ಕ್ರಮ ಕೈಗೊಳ್ತಾರೆ ಎಂದರು. ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಕೋರರ ಪೊಲೀಸರನ್ನೇ ಕೊಲ್ಲಲು, ಠಾಣೆಯನ್ನು ಸುಟ್ಟುಹಾಕಲು ಹೊರಟಿದ್ದರು. ಇದು ಚಾರ್ಜ್ ಸೀಟ್ ನಲ್ಲಿ ಉಲ್ಲೇಖವಿದೆ. ಅಂತಹ ಸಮಾಜಘಾತುಕರನ್ನು ಬಿಡುಗಡೆ ಮಾಡುವ ಕಾಂಗ್ರೆಸ್ ಸರ್ಕಾರ, ಕನ್ನಡಕ್ಕಾಗಿ ಹೋರಾಟ ನಡೆಸಿದವರನ್ನ ಬಂಧಿಸುತ್ತದೆ. ಡಿಜೆಹಳ್ಳಿ ಕೆಜಿ ಹಳ್ಳಿ ಹುಬ್ಭಳ್ಳಿ ಗಲಭೆ ದಾಂಧಲೆ ಮಾಡಿದವರ ಕೇಸ್ ವಾಪಸ್ ಪಡೆಯಲು ಹೇಳ್ತಾರೆ. ಆದರೆ ಕನ್ನಡಕ್ಕಾಗಿ ಹೋರಾಟ ಮಾಡಿದವರನ್ನು ಬಂಧಿಸಿ ನ್ಯಾಯಾಂಗ ಬಂಧಕ್ಕೆ…

Read More

ಗದಗ: ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಬಂಧನ ಖಂಡಿಸಿ ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕರವೇ ಜಿಲ್ಲಾಧ್ಯಕ್ಷ ಶರಣು ಗೋಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಸಿ ಎಂ ಸಿಧ್ಧರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುಧ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿರು. ಕೂಡಲೇ ಟಿ‌ ಎ ನಾರಾಯಣಗೌಡರನ್ನ ಬಿಡುಗಡೆ ಮಾಡಲು ಒತ್ತಾಯ ಮಾಡಿ ಗದಗ ತಹಶಿಲ್ದಾರ ಮೂಲಕ ಸಿಎಂ ಗೆ ಮನವಿ ಸಲ್ಲಿಕೆ ಮಾಡಿದರು.

Read More

ಬೆಂಗಳೂರು: ಕೇಂದ್ರ ಸರಕಾರ ಕೊಬರಿಗೆ ಬೆಂಬಲ ಬೆಲೆ ನೀಡಿರುವುದನ್ನು ಸ್ವಾಗತಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ರಾಜ್ಯದಲ್ಲಿ ನಾಫೆಡ್ ಮೂಲಕ 1.5 ಲಕ್ಷ ಮೆಟ್ರಿಕ್ ಟನ್ ಕೊಬರಿ ಖರೀದಿಸಬೇಕು ಎಂದು ಕೇಂದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು; ಕೊಬರಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರಕಾರ ಹಾಗೂ ಪ್ರಧಾನಿಗಳಾದ ಮೋದಿ ಅವರಿಗೆ ರಾಜ್ಯದ ಸಮಸ್ತ ರೈತರ ಪರವಾಗಿ ಕೃತಜ್ಞತೆಗಳು ಹಾಗೂ ಅಭಿನಂದನೆಗಳು. ಮಿಲ್ಲಿಂಗ್‌ ಕೊಬರಿಗೆ 300 ರೂ. ಹಾಗೂ ಉಂಡೆ ಕೊಬರಿಗೆ 250 ರೂ. (ಪ್ರತಿ ಕ್ವಿಂಟಾಲ್‌ಗೆ) ಏರಿಕೆ ಮಾಡಿರುವ ಕೇಂದ್ರದ ನಿರ್ಧಾರ ಸ್ವಾಗತಾರ್ಹ ಎಂದು ತಿಳಿಸಿದ್ದಾರೆ ಡಿಸೆಂಬರ್ 21ರಂದು ನವದೆಹಲಿಯಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರ ನೇತೃತ್ವದಲ್ಲಿ ಪ್ರಧಾನಿಗಳಾದ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಕೊಬರಿ ರೈತರ ಸಂಕಷ್ಟ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮಾನ್ಯ ಪ್ರಧಾನಿಗಳು ನಮ್ಮ ಮನವಿಗೆ ಅತ್ಯಂತ…

Read More

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಕನ್ನಡ ಹೋರಾಟಗಾರರನ್ನು ಜೈಲಿಗೆ ಹಾಕಿರುವುದು ದುಃಖವಾಗಿದೆ. ಕನ್ನಡ ಹೋರಾಟಗಾರನ್ನು ನಾವು ಬೆಂಬಲಿಸಬೇಕು. ಸರ್ಕಾರ ಸರಿಯಾಗಿ ಕಾನೂನು ಅನುಷ್ಠಾನ ಮಾಡದಿರುವುದಕ್ಕೆ ಕನ್ನಡಪರ ಸಂಘಟನೆಗಳು ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು (Kuvempu) ಅವರ ನವೀಕೃತ ಸಭಾಂಗಣ ಹಾಗೂ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಸುಮಾರು ಎರಡು ಸಾವಿರ ಕನ್ನಡ ಹೋರಾಟಗಾರರ ಪ್ರಕರಣಗಳನ್ನು ವಾಪಸ್ ಪಡೆದಿದ್ದೆವು. ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಅನುಷ್ಠಾನ ಮಾಡದಿರುವುದರಿಂದ ಈ ಪರಿಸ್ಥಿತಿ ಬಂದಿದೆ. ಆಡಳಿತಗಾರರಿಗೆ ಸೂಕ್ಷ್ಮತೆ ಇರಬೇಕು ಎಂದಿದ್ದಾರೆ. ನಾವು ಕನ್ನಡದ ಅನುಷ್ಠಾನಕ್ಕಾಗಿ ವಿಧೇಯಕ ಜಾರಿಗೊಳಿಸಿದ್ದೆವು. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಕನ್ನಡನಾಡಿನಲ್ಲಿ ಕನ್ನಡದ ಅನುಷ್ಠಾನಕ್ಕಾಗಿ ಕಾನೂನು ಮಾಡುವ ಅನಿವಾರ್ಯತೆ ಬಂದಿರುವುದು ಬೇಸರದ ಸಂಗತಿ. ಈಗ ಕಾನೂನೂ ಮಾಡದಿದ್ದರೆ ನಮ್ಮ ಮಕ್ಕಳಿಗೆ…

Read More