Author: AIN Author

ನಯನತಾರಾ (Nayanthara) ನಟನೆಯ ಅನ್ನಪೂರ್ಣಿ ಸಿನಿಮಾದಲ್ಲಿ ಶ್ರೀರಾಮನಿಗೆ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ಆಗುವಂತಹ ಸನ್ನಿವೇಶಗಳ ಇವೆ ಎನ್ನುವ ಕಾರಣಕ್ಕಾಗಿ ಹಲವಾರು ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು. ಇದೀಗ ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಟಿ ನಯನತಾರಾ ಅವರ ಮೇಲೂ ಪ್ರಕರಣ ದಾಖಲಾಗಿದೆ. ಮಧ್ಯ ಪ್ರದೇಶದ ಜಬಲ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿವಾದ (Controversy) ಭುಗಿಲೇಳುತ್ತಿದ್ದಂತೆಯೇ ‘ಅನ್ನಪೂರ್ಣಿ’ (Annapurni)  ಸಿನಿಮಾವನ್ನು ಕೊನೆಗೂ ನೆಟ್ ಫಿಕ್ಸ್ ತೆಗೆದು ಹಾಕಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೇ, ಸಿನಿಮಾ ಬಗ್ಗೆ ದೂರು ಕೂಡ ದಾಖಲಾಗಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ಚಿತ್ರದ ವಿರುದ್ಧ ಪ್ರತಿಭಟನೆ ಕೂಡ ಮಾಡಲಾಗಿತ್ತು. ನಾನಾ ಕಡೆಗಳಲ್ಲಿ ಅನ್ನಪೂರ್ಣಿ ಸಿನಿಮಾ ಬಗ್ಗೆ ದೂರುಗಳು ದಾಖಲಾಗುತ್ತಿದ್ದಂತೆಯೇ ಒಟಿಟಿಯಿಂದಲೇ ಚಿತ್ರವನ್ನು ತೆಗೆದು ಹಾಕಲಾಗಿದೆ. ಈ ಚಿತ್ರದಲ್ಲಿ ಶ್ರೀರಾಮನನ್ನು ಮಾಂಸಾಹಾರಿಯಾಗಿ ತೋರಿಸಲಾಗಿತ್ತು. ಇಂತಹ ವಿವಾದಿತ ದೃಶ್ಯಗಳನ್ನು ತೆಗೆದು ಹಾಕುವವರೆಗೂ ಅನ್ನಪೂರ್ಣಿ ಒಟಿಟಿಯಲ್ಲಿ ಸಿಗಲಾರದು.

Read More

ಬಳ್ಳಾರಿ:- ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ರಾಮಮಂದಿರ ಉದ್ಘಾಟನೆ ಮಾಡುತ್ತಿದೆ ಎಂದು ಹೇಳುವ ಮೂಲಕ ಉಗ್ರಪ್ಪ ಕಿಡಿಕಾರಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ರಾಮನಂತೆ ಮಾತಿಗಾಗಿ ನಡೆಯುವವರು ಯಾರದರು ಇದ್ದರೆ ಅವರು ಕಾಂಗ್ರೇಸ್ ನವರು,ರಾಮನ ಮಾದರಿಯಲ್ಲಿ ಸಮಸಮಾಜವನ್ನು ನಿರ್ಮಾಣ ಮಾಡುವ ಕಾರ್ಯ ಕಾಂಗ್ರೇಸ್ ಮಾಡುತ್ತಿದೆ. ಕಾಂಗ್ರೇಸ್ ಅವರು ಸಹ ಹಿಂದುಗಳು, ಹಿಂದು ವಿರೋಧಿಗಳ್ಳ. ಆದರೆ ಬಿಜೆಪಿ ಅವರು ವಿರೋಧ ಪಕ್ಷ ಕಾಂಗ್ರೇಸ್ ನ್ನು ಹಿಂದು ವಿರೋಧಿ ಎಂದು ಬಿಂಬಿಸಲಾಗಿದೆ. ರಾಮನಿಗೆ ಮೊದಲು ಪೂಜೆ ಮಾಡಿದ್ದು ನಮ್ಮ ಕಾಂಗ್ರೇಸ್. ಕಟ್ಟಡ ಪೂರ್ಣವಾಗದೇ, ಏಕಾಏಕಿಯಾಗಿ ಉದ್ಘಾಟನೆ ಮಾಡುವುದು ಸರಿಯಲ್ಲ. ಹಿಂದು ಸಂಪ್ರದಾಯದಂತೆ ಉದ್ಘಾಟನೆ ನಡೆಯುತ್ತಿಲ್ಲ ಎಂದು ಶಂಕರಾಚಾರ್ಯ ಮಠಾಧೀಶರೇ ಹೇಳಿದ್ದಾರೆ. ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲಿಕೆ ಬಿಜೆಪಿಯವರು ರಾಮಮಂದಿರ ಉದ್ಘಾಟನೆ ಮಾಡುತ್ತಿದ್ದಾರೆ. ರಾಮಮಂದಿರ ಕಾರ್ಯ ಇನ್ನು ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಇಂದು ದೇಶದ ಜನರ ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿದೆ. ಅಷ್ಟೇ ಅಲ್ಲದೇ ವಿರೋಧ ಪಕ್ಷದ ಮೇಲೆ ಕೇಸರು ಎರಚುವ ಕಾರ್ಯವನ್ನು ಮಾಡಿದೆ. ದೇಶದ ಅಭಿವೃದ್ದಿಗಿಂತ…

Read More

ಬೆಂಗಳೂರು : ಸ್ಪರ್ಧಾತ್ಮಕ ಪರಿಕ್ಷೆಗೆ ತಯಾರಾದವನು ಮಾಡಿದ್ದು ಮಾತ್ರ ಕಿಡ್ನಾಪ್ ಮಾಡುವ ಉದ್ಯೋಗ ಮಗನ ಐಎಎಸ್, ಐಪಿಎಸ್ ಕನಸು ಕಂಡ ಪೊಷಕರೇ ಈಗ ಶಾಕ್‌ ಆಗಿ ಕುಳಿತಿದ್ದಾರೆ ಈ ಯುವಕನ ತಂದೆ ತಾಯಿ ಐಎಎಸ್, ಐಪಿಎಸ್ ಆಗುವ ಕನಸು ಕಾಣುತ್ತಿದ್ದನು. ಅದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಕೂಡ ನಡೆಸುತ್ತಿದ್ದನು. ದೊಡ್ಡ ಹುದ್ದೆಯ ಕನಸು ಕಂಡಿದ್ದ ಈತ ಮಾಡಿದ್ದು ಉದ್ಯಮಿಯ ಕಿಡ್ನಾಪ್. ಸದ್ಯ ಪ್ರಕರಣ ಸಂಬಂಧ ಪೊಲೀಸರು ಯುವಕ ಸೇರಿದಂತೆ ಇಬ್ಬರನ್ನು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಸಚಿನ್, ಗೌರಿಶಂಕರ್​ ಬಂಧಿತ ಆರೋಪಿಗಳಾಗಿದ್ದು,ರಾಜಾಜಿನಗರದಲ್ಲಿ ಇದೇ ತಿಂಗಳ 5ರಂದು ಕಿಡ್ನಾಪ್‌ ಮಾಡುವ ಪ್ಲಾನ್‌ ಹಾಕಿ ಕೆಲಸ ಮುಗಿಸಿದ್ದಾರೆ. ಸೆಂಟ್ ಜೋಸೆಫ್ ಕಾಲೇಜಿನ ಬಿಬಿಎ ಸೀಟ್ ಗೆ ಓಡಾಡುತಿದ್ದ ಉದ್ಯಮಿ ಈ ವೇಳೆ ಸಚಿನ್ ನನ್ನು ಸಂಪರ್ಕಿಸಿದ್ದ ಉದ್ಯಮಿ.. ಆದರೆ ಕಾಲೇಜಿನ ನಿಯಮದ ಪ್ರಕಾರವೇ ಉದ್ಯಮಿ ಮಗಳಿಗೆ ಸೀಟ್ ಸಿಕ್ಕಿತ್ತು ಆದರೇ ಆ ಸೀಟ್ ನನ್ನಿಂದಲೇ ಸಿಕ್ಕಿದೆ ಎಂದು ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಸಚಿನ್ ಆದರೆ ಹಣಕೊಡಲು…

Read More

ಗದಗ: ಜಿಲ್ಲೆಯ ಮುಂಡರಗಿಯ ಹಿಂದೂ ರಾಷ್ಟ್ರ ಸಂಕಲ್ಪ ಸಮಿತಿಯಿಂದ ಮುಖಂಡ ದೇವಪ್ಪ ಇಟಗಿ ಅವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಿನ್ನೆಲೆ ಮಹತ್ತರ ಉದ್ದೇಶದ ಸಂಕಲ್ಪಕ್ಕಾಗಿ ರಾಮರಾಜ್ಯಕ್ಕಾಗಿ ಮತ್ತೊಮ್ಮೆ ಮೋದಿ ಎಂಬ ಘೋಷ ವಾಕ್ಶದೊಂದಿಗೆ ಆಂಜನೇಯ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆಯನ್ನ ಆರಂಭಿಸಲಾಗಿದೆ. ಮುಂಡರಗಿ ನಗರದ ಕೋಟೆ ಭಾಗದ ಆಂಜನೇಯನ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಿದ್ದು ಸಂಘದ ಪ್ರಮುಖರಾದ ಎಸ್.ಆರ್.ರಿತ್ತಿ ಮತ್ತು ಮಂಜುನಾಥ ಇಟಗಿ ಅವರು ಪಾದಯಾತ್ರೆಗೆ ಚಾಲನೆಯನ್ನ ನೀಡಿದ್ರು. ನಾಳೆ ರಾತ್ರಿ 8 ಘಂಟೆಗೆ ಪಾದಯಾತ್ರಿಗಳ ತಂಡ ಅಂಜನಾದ್ರಿ ತಲುಪಲಿದ್ದು ಪ್ರಧಾನಿ ನರೇಂದ್ರ ಮೋದಿಗಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

Read More

ಬೆಳಗಾವಿ:- ಕಾಂಗ್ರೆಸ್ ನಲ್ಲಿ ಟಿಕೆಟ್ ಫೈಟ್ ತೀವ್ರಗೊಂಡಿದ್ದು, ಬೆಳಗಾವಿ ಲೋಕಸಭೆ ಅಖಾಡಕ್ಕೆ ಅಚ್ಚರಿ ಹೆಸರು ಎಂಟ್ರಿ ಕೊಟ್ಟಿದೆ. ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮೋಹನ ಕಾತರಕಿ ಅವರು ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಮಹದಾಯಿ, ಕೃಷ್ಣಾ, ಕಾವೇರಿ ಸೇರಿದಂತೆ ಅನೇಕ ವಿಚಾರದಲ್ಲಿ ಕರ್ನಾಟಕ ಪರ ಕಾತರಕಿ ವಾದ ಮಾಡಿದರು. ಬೆಳಗಾವಿ ಜಿಲ್ಲೆಯವರೇ ಆಗಿರೋ ಮೋಹನ ಕಾತರಕಿ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಘಟಾನುಟಿ ಕೈ ನಾಯಕರೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ. ಕಳೆದ 40 ವರ್ಷಗಳಿಂದ ಕಾಂಗ್ರೆಸ್ ನೊಂದಿಗೆ ಮೋಹನ್ ಕಾತರಕಿ ನಂಟು ಹೊಂದಿದ್ದಾರೆ. ಈಗಾಗಲೇ ಬೆಳಗಾವಿ ಲೋಕಸಭೆಗೆ 12 ಜನ ಅರ್ಜಿ ಸಲ್ಲಿಕೆ ಮಾಡಿದ್ದು, ಇದರಲ್ಲಿ ಐವರ ಮಧ್ಯೆ ಈಗ ತೀವ್ರ ಪೈಪೋಟಿ ಕಾದಿದೆ. ಸತೀಶ್ ಜಾರಕಿಹೊಳಿ‌ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ‌, ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್‌ ಹೆಬ್ಬಾಳಕರ, ಕಿರಣ ಸಾಧುನವರ, ಗಿರೀಶ್ ಸೋನವಾಲಕರ, ಸುಪ್ರೀಂ ಕೋರ್ಟ್ ವಕೀಲ ಮೋಹನ ಕಾತರಕಿ ಮಧ್ಯೆ…

Read More

ಬೆಂಗಳೂರು: ಕರ್ನಾಟಕದ ಅಧಿಕಾರ ಕಾಂಗ್ರೆಸ್‌ ‘ಕೈ’ಗೆ ಸಿಗುತ್ತಿದ್ದಂತೆ ರಾಮ ರಾಜ್ಯ ತುಘಲಕ್ ರಾಜ್ಯವಾಗಿ ಬದಲಾಗಿದೆ.ಇದರ ಪರಿಣಾಮ ಅರಾಜಕತೆ ಸೃಷ್ಟಿಯಾಗಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಹಾವೇರಿ ಗ್ಯಾಂಗ್​ ರೇಪ್​ ಪ್ರಕರಣವಾಗಿ ಎಕ್ಸ್‌ ತಾಣದಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ಮಹಿಳೆಯರ ಮಾನಭಂಗ, ಹಲ್ಲೆ, ಅತ್ಯಾಚಾರದಂತಹ ಪ್ರಕರಣಗಳು ಕಾಂಗ್ರೆಸ್‌ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿವೆ ಎಂದು ಆರೋಪಿಸಿದೆ. ಪಿಎಫ್ಐ ಗೂಂಡಾಗಳು ದಲಿತರ ಮನೆ ಸುಟ್ಟು ಹಾಕಿದರೂ, ಪೊಲೀಸ್ ಠಾಣೆಗೆ ಬೆಂಕಿ ಇಟ್ಟರೂ, ಯುವತಿ ಮೇಲೆ ಅತ್ಯಾಚಾರ ಮಾಡಿದರೂ, ಹಿಂದೂಗಳ ಕೊಲೆ ಮಾಡಿದರೂ, ಭರತ ಭೂಮಿಯಲ್ಲಿ ಹುಟ್ಟಿ ಬಾಂಬ್ ಸ್ಫೋಟಿಸಿದರೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಅವರ ವೋಟ್ ಬ್ಯಾಂಕ್‌ಗಾಗಿ ಅವರು ಅಮಾಯಕರರು ಇದೇ ಕರುನಾಡಿನ ದುರಂತ ಎಂದು ಟೀಕಿಸಿದ್ಧಾರೆ.

Read More

ಹೊಸ ವರ್ಷದ ಆರಂಭದಲ್ಲಿ ಏರಿಕೆಯಾಗಿದ್ದ ಚಿನ್ನದ ದರ ಇತ್ತೀಚಿನ ದಿನಗಳಲ್ಲಿ ಇಳಿಕೆಯಾಗಿತ್ತು. ಇದೀಗ ಹೊಸ ವರ್ಷದ ಎರಡನೇ ವಾರದ ಮೊದಲ ದಿನವಾದ ಇಂದು  ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎರಡೂ ಸ್ಥಿರವಾಗಿದೆ. 22 ಕ್ಯಾರೆಟ್‌ ಚಿನ್ನದ ದರ ಇಂದು 1 ಗ್ರಾಂ ಚಿನ್ನದ ಬೆಲೆ 5,800 ರೂ. ಆಗಿದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,400 ರೂ. ನೀಡಬೇಕು. ಇಂದಿನ 10 ಗ್ರಾಂ ಚಿನ್ನದ ಬೆಲೆ 58,000 ಆಗಿದ್ದರೆ, ನಿನ್ನೆ 58,100 ರೂ. ಇತ್ತು. 100 ಗ್ರಾಂ ಚಿನ್ನದ ಬೆಲೆ 5,80,000 ರೂ. ಇದೆ. 24 ಕ್ಯಾರೆಟ್‌ ಚಿನ್ನದ ದರ 1 ಗ್ರಾಂ 24 ಕ್ಯಾರೆಟ್‌ ಚಿನ್ನಕ್ಕೆ ಇಂದು 6,327 ರೂ ಆಗಿದೆ. 8 ಗ್ರಾಂ ಚಿನ್ನಕ್ಕೆ ಇಂದು 50,616 ರೂ ನೀಡಬೇಕು. 10 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 63,270 ರೂ. ಕೊಡಬೇಕು. ಇವತ್ತು 100 ಗ್ರಾಂ ಚಿನ್ನದ ದರ 6,32,700 ರೂ. ಇದೆ. ಕರ್ನಾಟಕದಲ್ಲಿ ಇಂದಿನ…

Read More

ಬೆಂಗಳೂರು: ಮೈತ್ರಿಗೆ ಮುದ್ರೆ ಹಾಕಿರೋದು ದೇವೇಗೌಡರು. ಹೀಗಾಗಿ, ನಾವು ಮೈತ್ರಿ ಧರ್ಮ ಪಾಲನೆ ಮಾಡಲೇಬೇಕು ಎಂದು ಜೆಡಿಎಸ್​ ನಾಯಕರು, ಮುಖಂಡರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ  ಮಾತನಾಡಿದ ಅವರು, ಬಿಜೆಪಿ ಜೊತೆ ನಾವು ಮೈತ್ರಿಯಾಗಿದ್ದೇವೆ. ಯಾವ ಕ್ಷೇತ್ರ ಸಿಗುತ್ತೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಸಂಕ್ರಾಂತಿ ಬಳಿಕ ಸೀಟು ಹಂಚಿಕೆ ಫೈನಲ್ ಆಗಲಿದೆ. ಯಾವ ಯಾವ ಕ್ಷೇತ್ರ ಅಂತ ಆಗ ಅಂತಿಮ ಆಗುತ್ತದೆ. ಯಾವುದೇ ಕ್ಷೇತ್ರ ನಮಗೆ ಸಿಗಲಿ, ನಾವು ಒಟ್ಟಾಗಿ ಕೆಲಸ ಮಾಡಬೇಕು. ಬಿಜೆಪಿ ಜೊತೆ ಒಟ್ಟಾಗಿ ಕೆಲಸ ಮಾಡಿ ಎಂದು ಮಂಡ್ಯ ನಾಯಕರು, ಮುಖಂಡರಿಗೆ ಮನವಿ ಮಾಡಿದ್ದಾರೆ. ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡಿದ್ದೀರಿ. ದೇವೇಗೌಡರು, ಕುಮಾರಸ್ವಾಮಿ ಅವರಿಗೆ ನಿಮ್ಮ ಭಾವನೆ ತಿಳಿಸುತ್ತೇನೆ‌. ಅಂತಿಮವಾಗಿ ದೇವೇಗೌಡರು ಸ್ಪರ್ಧೆ ಬಗ್ಗೆ ನಿರ್ಧಾರ ಮಾಡ್ತಾರೆ. ನೀವೆಲ್ಲ ಏನು ಹೇಳ್ತಿರೋ ವರಿಷ್ಠರು ಹಾಗೆಯೇ ಮಾಡ್ತಾರೆ. ಕ್ಷೇತ್ರಗಳಲ್ಲಿ ಏನಾದ್ರು ಸಮಸ್ಯೆಗಳು ಇದ್ದರೆ, ಸರಿ ಮಾಡಿಕೊಂಡು ಬಿಜೆಪಿ ಜತೆ ಒಟ್ಟಾಗಿ…

Read More

ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram mandir) ಜನವರಿ 22 ರ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಮೊದಲು 11 ದಿನಗಳ ವ್ರತ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ತಿಳಿಸಿದ್ದಾರೆ. https://ainlivenews.com/a-direct-bus-from-noida-to-ayodhya-will-be-plying-soon/ ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠೆಗೆ ಕೇವಲ 11 ದಿನಗಳು ಉಳಿದಿವೆ. ಶುಭ ಸಮಾರಂಭಕ್ಕೆ ಸಾಕ್ಷಿಯಾಗುವ ಸೌಭಾಗ್ಯ ನನ್ನದು. ಸಮಾರಂಭದಲ್ಲಿ ಭಾರತದ ಜನರನ್ನು ಪ್ರತಿನಿಧಿಸಲು ಭಗವಂತ ನನ್ನನ್ನು ಕೇಳಿದ್ದಾನೆ. ಅದನ್ನು ಗಮನದಲ್ಲಿಟ್ಟುಕೊಂಡು ನಾನು ಇಂದಿನಿಂದ 11 ದಿನಗಳ ವಿಶೇಷ ಆಚರಣೆಯನ್ನು ಪ್ರಾರಂಭಿಸುತ್ತಿದ್ದೇನೆ. ಇದಕ್ಕಾಗಿ ನಾನು ನಿಮ್ಮೆಲ್ಲರ ಆಶೀರ್ವಾದವನ್ನು ಕೋರುತ್ತೇನೆ. ಈ ಕ್ಷಣದಲ್ಲಿ ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ತುಂಬಾ ಕಷ್ಟ, ಆದರೆ ನಾನು ನನ್ನ ಕಡೆಯಿಂದ ಪ್ರಯತ್ನಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆಡಿಯೋ ಸಂದೇಶದಲ್ಲಿ ಪ್ರಧಾನಿ ಹೇಳಿದ್ದಾರೆ. ವ್ರತದ ಮಹತ್ವ ಏನು..?: ಹಿಂದೂ ಶಾಸ್ತ್ರಗಳ ಪ್ರಕಾರ, ದೇವರ ವಿಗ್ರಹದ ‘ಪ್ರಾಣ ಪ್ರತಿಷ್ಠೆ’ ಒಂದು ವಿವರವಾದ ಆಚರಣೆಯಾಗಿದೆ. ಇದಕ್ಕೂ ಮುನ್ನ ಸಾಕಷ್ಟು ನಿಯಮಗಳನ್ನು ಅನುರಿಸಬೇಕಾಗುತ್ತದೆ.…

Read More

ಉಡುಪಿ:- ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದಿದ್ದ ಬಾಗಲಕೋಟೆ ಮೂಲದ ಸಂತೋಷ್ ಎಂಬ ಭಕ್ತನೊಬ್ಬ ಆಯತಪ್ಪಿ ಬಾವಿಗೆ ಬಿದ್ದ ಘಟನೆ ಜರುಗಿದೆ. ನಿನ್ನೆ ಸಂಜೆ ವೇಳೆ ಶೀರಿಬೀಡು ಬಳಿ ಆವರಣದಲ್ಲಿರುವ ಬಾವಿ ಬಳಿ ಕುಳಿತಿದ್ದರು. ಈ ವೇಳೆ ಸಂತೋಷ್‌ ಆಯತಪ್ಪಿ ಬಾವಿಗೆ ಉರುಳಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಬಾವಿಗೆ ಬಿದ್ದವನ ರಕ್ಷಣೆಗೆ ಧಾವಿಸಿದ್ದಾರೆ. ಬಾವಿಯಲ್ಲಿ ನೀರು ಕಡಿಮೆ ಇರುವ ಹಿನ್ನೆಲೆಯಲ್ಲಿ ಸಂತೋಷ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾವಿಗೆ ಬಿದ್ದ ಸಂತೋಷ್‌ನ ರಕ್ಷಣೆ ಧಾವಿಸಿದ ನಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, ಬಾವಿಗೆ ಹಗ್ಗಇಳಿ ಬಿಟ್ಟು ಸ್ಥಳೀಯರ ಸಹಾಯದಿಂದ ಮೇಲಕ್ಕೆತ್ತಿದ್ದಾರೆ. ಬಾವಿಗೆ ರಭಸವಾಗಿ ಬಿದ್ದ ಪರಿಣಾಮ ಸಂತೋಷ್‌ ಗಾಯಗೊಂಡಿದ್ದು, ಕೂಡಲೇ ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.

Read More