Author: AIN Author

ಕನ್ನಡದ ಹೆಸರಾಂತ ನಟ ರಕ್ಷಿತ್ ಶೆಟ್ಟಿ (Rakshit Shetty) ಸಾಲು ಸಾಲು ಚಿತ್ರಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೂ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನಲ್ಲಿ ರಕ್ಷಿತ್ ನೆಲೆಸಿದ್ರೂ ಹುಟ್ಟೂರಿನ ನಂಟನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಶನಿವಾರ ಮತ್ತು ಭಾನುವಾರ ಬೆಂಗಳೂರಿನಿಂದ ಬಿಡುವು ತೆಗೆದುಕೊಂಡು ಅವರು ತಮ್ಮ ಹುಟ್ಟೂರಿಗೆ ಹೋಗಿದ್ದರು. ದೈವ ದೇವರು ಊರಿನ ಉತ್ಸವ ಹಬ್ಬದಲ್ಲಿ ಅವರು ಭಾಗಿಯಾಗಿದ್ದರು. ದೈವ ದೇವರು ಅಂದ್ರೆ ಮಿಸ್ ಮಾಡಿಕೊಳ್ಳೋದೇ, ಅಷ್ಟಮಿ ಬಂದ್ರೆ ತಪ್ಪದೆ ಅವರು ಊರಲ್ಲಿ ಹಾಜರಾಗ್ತಾರೆ. ಈ ನಡುವೆ ಕರಾವಳಿಯ ಕಾರ್ಣಿಕದ ಬಬ್ಬು ಸ್ವಾಮಿ (Babbuswamy) ದೈವದ (Daiva) ನೇಮೋತ್ಸವದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಭಾಗಿಯಾಗಿದ್ದಾರೆ. ಅಲೆವೂರು ಜೋಡು ರಸ್ತೆಯಲ್ಲಿ ನಡೆದ 118ನೇ‌ ನೇಮೋತ್ಸವದಲ್ಲಿ  ಭಾಗವಹಿಸಿ, ಕೆಲಕಾಲ ದೈವಸ್ಥಾನದ ಕಾರ್ಯಕ್ರಮದಲ್ಲಿ ಪ್ರಸಾದ ಸ್ವೀಕರಿಸಿದರು

Read More

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ  ಹಳ್ಳಿ ಟಾಸ್ಕ್‌ ಈ ಸೀಸನ್‌ ಅತಿ ಹೆಚ್ಚು ಸದ್ದು ಮಾಡಿದ ಕೆಲವು ಗಳಿಗೆಳಲ್ಲಿ ಹಳ್ಳಿ ಟಾಸ್ಕ್‌ ಕೂಡ ಒಂದು. ಮನೆಯೊಳಗೆ ಹಳ್ಳಿಯ ವಾತಾವರಣವನ್ನು ಸೃಷ್ಟಿ ಮಾಡಿ ಎರಡು ಕುಟುಂಬಗಳಾಗಿ ಮನೆಯ ಸದಸ್ಯರನ್ನು ವಿಂಗಡಿಸಲಾಗಿತ್ತು. ಅವರ ನಡುವೆ ವಿವಿಧ ಟಾಸ್ಕ್‌ಗಳನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ವಿನಯ್ ಒಂದು ಕುಟುಂಬದ ಯಜಮಾನನಾಗಿದ್ದರೆ, ಇನ್ನೊಂದು ಕುಟುಂಬಕ್ಕೆ ಸಂಗೀತಾ (Sangeetha) ಯಜಮಾನ್ತಿಯಾಗಿದ್ದರು. ಈ ಸಂದರ್ಭದಲ್ಲಿ ವಿನಯ್ ಮತ್ತು ಕಾರ್ತಿಕ್ ನಡುವೆ ಜಗಳ ನಡೆದಿತ್ತು. ಆ ಸಂದರ್ಭದಲ್ಲಿ ವಿನಯ್, ‘ನಾವೇನು ಬಳೆ ತೊಟ್ಕೊಂಡು ಕೂತಿಲ್ಲ’ ಎಂದು ಮಾತಾಡಿದ್ದರು. ಇದರಿಂದ ಸಿಟ್ಟಿಗೆದ್ದ ಸಂಗೀತಾ ಅವರ ಮಾತನ್ನು ಪ್ರತಿಭಟಿಸಿದ್ದಲ್ಲದೇ ಉಳಿದ ಟಾಸ್ಕ್‌ಗಳನ್ನು ಕೈ ತುಂಬ ಬಳೆ ತೊಟ್ಟುಕೊಂಡೇ ಆಡಿದ್ದರು. ಹಾಗೂ ವಿನಯ್ ಅವರಿಗೆ ‘ಬಳೆ ತೊಟ್ಕೊಂಡಿದೀನಿ ಬಳೆ’ ಎಂದು ಕೈಯೆತ್ತಿ ತೋರಿಸಿದ್ದರು ಕೂಡ. ಬಳೆಯ ಕುರಿತ ತಪ್ಪು ಮಾತುಗಳಿಗೆ ಸಂಗೀತಾ ನೀಡಿದ ಉತ್ತರ ಮನೆಯೊಳಗಷ್ಟೇ ಅಲ್ಲ, ಮನೆಯ ಹೊರಗೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ವಿನಯ್…

Read More

ಬೆಂಗಳೂರು: ಮಂಡ್ಯದಲ್ಲಿ ಹನುಮ ಧ್ವಜ ಇಳಿಸಿದ ವಿಚಾರ ಬಗ್ಗೆ ವಿಧಾನ ಪರಿಷತ್‌ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,  ರಾಜ್ಯ ಹೊತ್ತಿ ಉರಿಯುತ್ತಿದೆ. ಕೆರೆಗೋಡುಗೆ ನಾನೇ ಹೋಗಿದ್ದೆ. ಈ ದೇಶದಲ್ಲಿ ರಾಷ್ಟ್ರ ಧ್ವಜ ಹಾರಿಸಲು ನಿಯಮ ಇದೆ. ನಿಯಮದ ಪ್ರಕಾರ ಧ್ವಜ ಹಾರಿಸಿಲ್ಲ. ನೀವು ಯಾರನ್ನ ಓಲೈಕೆ ಮಾಡಲು ಹೀಗೆ ಮಾಡ್ತಿದ್ದೀರಿ. ಪೊಲೀಸರು ಬೂಟು ಕಾಲಲ್ಲೇ ಹೋಗಿ ಧ್ವಜವನ್ನ ಮಧ್ಯಾಹ್ನ 3 ಗಂಟೆಗೆ ಹಾರಿಸಿದ್ದಾರೆ ಜಮ್ಮು, ಕಾಶ್ಮೀರದಲ್ಲಿ ಕಾಂಗ್ರೆಸ್ ಅವರ ಯೋಗ್ಯತೆಗೆ ಬಾವುಟ ಹಾರಿಸಲು ಆಗಲಿಲ್ಲ. ದಲಿತರಿಗೆ ಮೀಸಲಾತಿ ಕೊಟ್ಟಿರಲಿಲ್ಲ. ಮೀಸಲಾತಿ ಕೊಡಿಸಿದವರು ಮೋದಿ. ಬಿಜೆಪಿ ಮೀಸಲಾತಿ ವಿರೋಧಿ ಅಂತ ಹೇಳ್ತಾರೆ. ಯಾವುದಕ್ಕೂ ಇತಿಮಿತಿ ಇರಬೇಕು. ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ನುಚ್ಚು, ನೂರು ಆಗಲಿದೆ. ಇಂಡಿ ಒಕ್ಕೂಟ ಚುನಾವಣೆ ಮೊದಲೇ ಉದುರಿಹೋಗುತ್ತೆ. ಇದನ್ನ ನೀವು ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್ ನಾಯಕರಿಗೆ  ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.

Read More

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಒಣಹವೆ ಮುಂದುವರಿದಿದೆ. ಸೋಮವಾರ ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 12 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ರಾಜ್ಯದಲ್ಲಿ ಮುಂದಿನ 24 ಗಂಟೆಯ ಅವಧಿಯಲ್ಲಿ ರಾಜ್ಯದಾದ್ಯಂತ ಒಣಹವೆ ಮುಂದುವರಿಯಲಿದೆ. ಇನ್ನು ಮುಂದಿನ 48 ಗಂಟೆಯ ಅವಧಿಯಲ್ಲೂ ರಾಜ್ಯದಾದ್ಯಂತ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ. ರಾಜ್ಯದಲ್ಲೂ ಮೈಕೊರೆವ ಚಳಿ: ಉತ್ತರ ಕರ್ನಾಟಕದ ವಿವಿಧೆಡೆ ಹಾಗೂ ಒಳನಾಡಿನಲ್ಲಿ ಚಳಿ ವಾತಾವರಣ ಇದೆ. ರಾಜ್ಯದಲ್ಲಿ ಇನ್ನೂ ಎರಡರಿಂದ ಮೂರು ದಿನಗಳ ಕಾಲ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಬೆಂಗಳೂರಿನಲ್ಲಿ ಗುರುವಾರ ಹಾಗೂ ಶುಕ್ರವಾರ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು,ಕೆಲವು ಕಡೆ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇದೆಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

Read More

ಸುರಪುರ: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಯಾವುದೇ ಕಡೆತಗಳು ಸಹಿ ಆಗಬೇಕಾದರೆ ಅಥವಾ ಪಹಣಿ ತಿದ್ದುಪಡಿ ಮತ್ತಿತರ ಯಾವುದೇ ಕೆಲಸಗಳಾದರೆ ಹಣ ಕೊಡದೆ ಯಾವುದೇ ಕಾರ್ಯಗಳು ಆಗುವುದಿಲ್ಲ. ಇದರಿಂದಾಗಿ ಜನರು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದಕ್ಕೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ. ತಾಲೂಕು ಕಚೇರಿಯಲ್ಲಿ ರೈತರ ಜಮೀನುಗಳ ಕಡತಗಳ ತಿದ್ದುಪಡಿ, ಪಹಣಿ, ಆಧಾರ್, ಜಾತಿ ಪ್ರಮಾಣ ಪತ್ರ, ರೆಕಾರ್ಡ್ ಯಾವುದೇ ತರಹದ ಕೆಲಸಗಳನ್ನು ಮಾಡಿಕೊಡಬೇಕಾದರೆ ಹಣ ಹಣ ಕೊಡಬೇಕಾಗಿದೆ. ಸರ್ಕಾರಿ ನೌಕರರು ಖಾಸಗಿ ವ್ಯಕ್ತಿಗಳನ್ನು ಇಟ್ಟುಕೊಂಡು ಹಣ ವಸಲಿ ದಂಧೆಗೆ ಮುಂದಾಗುತ್ತಿದ್ದಾರೆ. ಯಾವುದೇ ಕೆಲಸಕ್ಕೂ ಕೂಡ ಸರ್ಕಾರಿ ನೌಕರರ ಮುಂದೆ ಬರದೆ ತಮಗೆ ಬೇಕಾದಂತಹ ಆಪ್ತ ಖಾಸಗಿ ವ್ಯಕ್ತಿಗಳನ್ನು ಇಟ್ಟುಕೊಂಡು ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಯಾವುದೇ ಒಂದು ಕೆಲಸವನ್ನು ಮಾಡಿಕೊಳ್ಳಬೇಕಾದರೆ ಇಂತಿಷ್ಟು ನಿಗದಿ ಮಾಡಿ ವಸೂಲಿ ತ ನೀವು ಮಾಡಿಕೊಂಡು ಬರಲೇಬೇಕೆಂದು ಖಾಸಗಿ ವ್ಯಕ್ತಿಗಳಿಗೆ ಸರ್ಕಾರಿ ನೌಕರರು ತಾಕೀತು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತದೆ. ತಾಲೂಕು ಕಚೇರಿಯಲ್ಲಿ…

Read More

ಶಹಾಪುರ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಇಳಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಆರೋಪಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಕೆರೆಗೂಡು ಗ್ರಾಮದ ಪಂಚಾಯ್ತಿಯಲ್ಲಿ ಎಲ್ಲಾ ಸದಸ್ಯರು ಒಟ್ಟಿಗೆ ಚರ್ಚಿಸಿ, ತೀರ್ಮಾನ ಮಾಡಿ 108 ಅಡಿ ಧ್ವಜದ ಸ್ತಂಭ ನಿರ್ಮಿಸಿ, ಹನುಮಾನ್ ಧ್ವಜ ಹಾರಿಸಬೇಕೆಂದುಕೊಂಡಿದ್ದರು. https://ainlivenews.com/are-you-thinking-of-buying-a-home-low-interest-home-loan-available-in-these-banks/ ಏಕಾಏಕಿ ಪೊಲೀಸರು ಗ್ರಾಮಕ್ಕೆ ನುಗ್ಗಿ ಲಾಠಿ ಚಾರ್ಚ್ ಮಾಡಿ, ಏರಿಸಿದ ಧ್ವಜವನ್ನು ಇಳಿಸಿರುವುದು ಖಂಡನಿಯ ಎಂದರು. ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಪೊಲೀಸರ ಮೂಲಕ ಗೂಂಡಾಗಿರಿ ಮಾಡುತ್ತಿದೆ. ಪೊಲೀಸರು ಗ್ರಾಮಸ್ಥರ ಮೇಲೆ ಲಾಠಿ ಚಾರ್ಚ್ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಅವರು ಭೇಟಿ ನೀಡಿದ್ದ ವೇಳೆ ಮತ್ತೊಮ್ಮೆ ಗ್ರಾಮಸ್ಥರ ಮೇಲೆ ಲಾಠಿ ಚಾಜ್ ಮಾಡಿ ಅವರನ್ನು ಬಂಧಿಸಿರುವುದು ಸರಿಯಲ್ಲ ಎಂದರು.

Read More

ಬೆಂಗಳೂರು: ನಗರದಲ್ಲಿ ಟ್ರಾಫಿಕ್‌ ಜಾಂ ಎಷ್ಟಿದೆ ಅಂದರೆ ತಮ್ಮ ತಮ್ಮ ಕೆಲಸಕ್ಕೆ ಹೋಗಲು ಅಷ್ಟು ಕಷ್ಟವಾಗುತ್ತಿದ್ದು ಹಾಗೆ ಇಲ್ಲೊಬ್ಬ ಮಹಿಳೆ  ಟ್ರಾಫಿಕ್‌ ಜಾಂನಿಂದ  ತನ್ನ ಮದುವೆಗೆ ಮುಹೂರ್ತಕ್ಕೆ ಸರಿಯಾಗಿ ಹೋಗಕ್ಕೆ ಆಗಲ್ಲವೆಂದು ಮೆಟ್ರೋ ಹತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಮುಹೂರ್ತ ಮಿಸ್ ಆಗಬಾರದೆಂದು ಮೆಟ್ರೋ ಹತ್ತಿದ ಮದುಮಗಳು ಟ್ರಾಫಿಕ್ ನಿಂದ ಮುಕ್ತಿ ಪಡೆಯಲು ಮೆಟ್ರೋ ಏರಿದ ವಧು ಇದು ಸೋ಼ಿಯಲ್‌ ಮಿಡಿಯಾದಲ್ಲಿ ಫುಲ್‌ ವೈರಲ್‌ ಆಗಿದೆ. ಟ್ರಾಫಿಕ್ ನಲ್ಲಿ ಸಿಲುಕಿ ಮದುಮಗಳು ಸುಸ್ತೋ ಸುಸ್ತು ಕಾರ್ ನಲ್ಲಿ ಮಂಟಪಕ್ಕೆ ಹೋಗುವಾಗ ಟ್ರಾಫಿಕ್ ಜಾಮ್ ಎದುರಾಗಿದೆ ಸಂಚಾರ ದಟ್ಟಣೆಯನ್ನ ದಾಟುವಷ್ಟರಲ್ಲಿ ಮುಹೂರ್ತ ಮಿಸ್ ಆಗುತ್ತೆ ಅನ್ನೋದು ಗೊತ್ತಾಗಿದೆ ಕೂಡಲೇ ಹತ್ತಿರವಿದ್ದ ಮೆಟ್ರೋ ನಿಲ್ದಾಣದ ಕಡೆ ಹೊರಟ ವಧು ನಂತರ ಮೆಟ್ರೋ ಮೂಲಕ ಸಂಚಾರ ಕೆಲ ದಿನಗಳ ಹಿಂದೆ ನಡೆದಿರುವ ಘಟನೆಯಾಗಿದ್ದು  ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

Read More

ಬಳ್ಳಾರಿ: ಸಾಂಸ್ಕøತಿಕ ರಾಜಧಾನಿ ಎಂದು ಕರೆಯುವ ಮೈಸೂರು ಅರಸರ ನಾಡಿನಲ್ಲಿರುವ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜಸ್ತಂಭ ತೆರವುಗೊಳಿಸಿದ್ದನ್ನು ವಿರೋಧಿಸಿ, ಬಂಡೆ ಬಾಲದ ಹನುಮಪ್ಪ ನಾಯಕನ ತವರೂರು ಬಳ್ಳಾರಿಯಲ್ಲಿ ಬಿಜೆಪಿಗರು ಉಗ್ರ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಅವರ ನೇತೃತ್ವದಲ್ಲಿ ಬೆಳಿಗ್ಗೆ 11:30 ಗಂಟೆಗೆ ಬಿಜೆಪಿ ಕಚೇರಿಯಿಂದ ಹೊರಟ ಕಾರ್ಯಕರ್ತರು ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಘೋಷಣೆಗಳನ್ನು ಕೂಗಿದರು. ಬಳಿಕ ನಗರದ ಹೃದಯಭಾಗವಾದ ರಾಯಲ್ ಸರ್ಕಲ್‍ನಲ್ಲಿ ಜಮಾಯಿಸಿದ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಮತ್ತು ಪ್ರತಿಭಟನಾ ನಿರತರು ಕೆಲಹೊತ್ತು ರಸ್ತೆ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯದ ಕೆರಗೋಡುನಲ್ಲಿ ನಡೆದ ಹನುಮಾನ್ ಧ್ವಜವನ್ನು ಇಳಿಸಿದ ದುಷ್ಟ, ಭ್ರಷ್ಟ, ತುಘಲಕ್ ಕಾಂಗ್ರೆಸ್ ವಿರುದ್ಧ ಅತ್ಯಂತ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅನಿಲ್ ಕುಮಾರ್ ಮೋಕಾ ತಿಳಿಸಿದರು. ಇದೇವೇಳೆ ಮಾನವ ಸರಪಳಿ ನಿರ್ಮಿಸಿ…

Read More

ಮಂಡ್ಯ: ಗೌರವ ಸಲ್ಲಿಸುವುದನ್ನು ತಾವು ಕಾಂಗ್ರೆಸ್ ನಿಂದ ಕಲಿಯಬೇಕಿಲ್ಲ ಎಂದು ಮಾಜಿ ಸಚಿವ ಸಿಟಿ ರವಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು. ಕೆರಗೋಡುನಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದನ್ನು ವಿರೋಧಿಸಿ  ಸಿಟಿ ರವಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪಾದಯಾತ್ರೆ ನಡೆಸುತ್ತಿದ್ದು, ಈ ವೇಳೆ ಮಾತನಾಡಿದ ಅವರು,  ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದ ಬಳಿಕ ಮುಂದಿನ ಹೋರಾಟವನ್ನು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ನಿರ್ಧರಿಸಲಿದ್ದೇವೆ ಎಂದರು. ರಾಷ್ಟ್ರಧ್ವಜ ಹಾರಿಸಿದ್ದಕ್ಕೆ ಬಿಜೆಪಿಯ ಅಭ್ಯಂತರವಿಲ್ಲ, ರಾಷ್ಟ್ರಧ್ಚಜ ಸರ್ವಮಾನ್ಯ, ಅದಕ್ಕೆ ಗೌರವ ಸಲ್ಲಿಸುವುದನ್ನು ತಾವು ಕಾಂಗ್ರೆಸ್ ನಿಂದ ಕಲಿಯಬೇಕಿಲ್ಲ, ತಮ್ಮ ಹೋರಾಟವಿರೋದು ಹನುಮ ಧ್ವಜವನ್ನು ತೆರವುಗೊಳಿಸಿರುವುದರ ವಿರುದ್ಧ ಎಂದು ಹೇಳಿದರು. ಕೆರಗೋಡುನಲ್ಲಿ ಧ್ವಜಸ್ತಂಭ ಇರೋದು ಸರ್ಕಾರಿ ಜಾಗ ಅಂತ ಸರ್ಕಾರ ಈಗ ಹೇಳುತ್ತಿದೆ, ಅದರೆ ಹಿಂದೂ ಕಾರ್ಯಕರ್ತರು ಚಂದಾ ಎತ್ತಿ ಧ್ವಜಸ್ತಂಭದ ನಿರ್ಮಾಣ ಮಾಡಿದ್ದಾರೆ, https://ainlivenews.com/are-you-thinking-of-buying-a-home-low-interest-home-loan-available-in-these-banks/ ಹಿಂದೆ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ ಆಗಿನ ಕಾಂಗ್ರೆಸ್ ಸರ್ಕಾರ ತಮ್ಮ ಕಾರ್ಯಕರ್ತರ ಮೇಲೆ ಗುಂಡು ಹಾರಿಸಿ ಕೊಂದು ಹಾಕಿತ್ತು…

Read More

ತುಮಕೂರು: ಬೇರೆ ಕಡೆ ಹನುಮಾನ್‌ ಧ್ವಜ ಹಾರಿಸಲು ಯಾರದ್ದೂ ತಕರಾರು ಇಲ್ಲ. ಸರ್ಕಾರಿ ಜಾಗದಲ್ಲಿ ಹನುಮಾನ್‌ ಧ್ವಜ ಹಾರಿಸಲು ಅವಕಾಶವಿಲ್ಲ ಎಂದು ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ಮಂಡ್ಯದಲ್ಲಿ ಹನುಮಾನ ಧ್ವಜ ಇಳಿಸಿದ ಕುರಿತು ಪ್ರತಿಕ್ರಿಯಿಸಿ, ರಾಷ್ಟ್ರಧ್ವಜ ಹಾರಿಸುತ್ತೇವೆಂದು ಗ್ರಾಮ ಪಂಚಾಯಿತಿ ನಿಂದ ಅನುಮತಿ ಪಡೆದಿದ್ದರು. ಆದರೆ ರಾಷ್ಟ್ರಧ್ವಜ ಬದಲು ಹನುಮ ಧ್ವಜ ಹಾರಿಸಿದ್ದಾರೆ. ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಿದ್ದರಿಂದ ತೆರವುಗೊಳಿಸಿದ್ದಾರೆ. ಬಳಿಕ ಕೆಲವು ಪ್ರತಿಭಟನೆಗಳು ನಡೆದವು ” ಎಂದು ಸ್ಪಷ್ಪಪಡಿಸಿದರು. https://ainlivenews.com/are-you-thinking-of-buying-a-home-low-interest-home-loan-available-in-these-banks/ ” ಲಘು ಲಾಠಿ ಪ್ರಹಾರ ನಡೆಸಿ ರಾಷ್ಟ್ರೀಯ ಧ್ವಜವನ್ನ ಹಾರಿಸಲಾಗಿದೆ. ಸಮಾಜದಲ್ಲಿ ಇದು ಒಂದು ರೀತಿಯಲ್ಲಿ ಶಾಂತಿ ಕದಡುವ ಕೆಲಸವಾಗಿದೆ. ಕಾನೂನಿಗೆ ವಿರುದ್ಧವಾದ ಕೆಲಸವೆಂದು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಶಾಂತಿಕಾಪಾಡುವಂತೆ ಮನವಿ ಮಾಡಿದ್ದೇನೆ ” ಎಂದರು. ರಾಜ್ಯ ಸರ್ಕಾರ ಹಿಂದೂ ವಿರೋಧಿಗಳು ಎಂದು ಪದೇ ಪದೇ ಹೇಳುತ್ತಿದ್ದಾರೆ. ಆದರೆ ನಾವು ಕೂಡ ಹೇಳುತ್ತಿದ್ದೇವೆ. ನಾವು ಕೂಡ ಹಿಂದೂಗಳೇ, ನಾವೇನು ಬೇರೆಯವರಲ್ಲ ಎಂದು ತಿರುಗೇಟು…

Read More