Author: AIN Author

ಚಿತ್ರದುರ್ಗ: ಕ್ಷುಲ್ಲಕ‌ ಕಾರಣಕ್ಕೆ ಗಂಡ ಹೆಂಡತಿ‌ ನಡುವೆ ಜಗಳ‌ ನಡೆದು‌ ಪತ್ನಿ ಕತ್ತು ಕೊಯ್ದು ಪರಾರಿಯಾಗಿರುವ ಘಟನೆ ಚಿತ್ರದುರ್ಗದ ಭರಮಸಾಗರದಲ್ಲಿ ನಡೆದಿದೆ. ಚಿತ್ರದುರ್ಗದ ಭರಮಸಾಗರದ ಸುಲ್ತಾನಿಪುರದ ದಾದಾಪೀರ್ ಮತ್ತು ಸಮೀನಾ ನಡುವೆ ಕ್ಷುಲ್ಲಕ‌ ಕಾರಣಕ್ಕೆ ಜಗಳ‌ ನಡೆದಿದೆ.   ಜಗಳ ಮಧ್ಯೆ ಗಂಡ ಪತಿ ದಾದಾಪೀರ್ ಹೆಂಡತಿ ಸಮೀನಾಳ ಕತ್ತನ್ನು ಮಚ್ಚಿನಿಂದ ಕೊಯ್ದು ಪರಾರಿಯಾಗಿದ್ದಾನೆ. ಭರಮಸಾಗರದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

Read More

ಬೆಂಗಳೂರು : ನಗರ ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ ನಡೆದಿದ್ದು  ಸಂಚಾರಿ ನಿಮಯ ಉಲ್ಲಂಘನೆ ಮಾಡ್ತಿದ್ದ ನೀರಿನ‌ ಟ್ಯಾಂಕರ್ ಗಳ ವಿರುದ್ಧ ಸ್ಪೆಷಲ್ ಡ್ರೈವ್ ಮಾಡಲಾಗಿದೆ. ಸಂಚಾರಿ ಪೋಲಿಸರ ಕಾರ್ಯಾಚರಣೆ ವೇಳೆ ನಿಮಯ ಉಲ್ಲಂಘಿಸಿದವರ ವಿರುಧ್ಧ 595 ಪ್ರಕರಣ ದಾಖಲು ಮಾಡಿ 3,33,550 ರೂ. ದಂಡ ಕಲೆ ಹಾಕಿದ ಪೊಲೀಸರು ಸಮವಸ್ತ್ರ ಧರಿಸದೆ ಇರೋದು, ಸೀಟ್ ಬೆಲ್ಟ್, ನೋ ಎಂಟ್ರಿಯಲ್ಲಿ ಸಂಚಾರ, ದೋಷಪೂರಿತ ನಂಬರ್ ಪ್ಲೇಟ್, ನೋ ಪಾರ್ಕಿಂಗ್, ಫುಟ್ ಪಾತ್ ಪಾರ್ಕಿಂಗ್, ಕರ್ಕಶ ಹಾರ್ನ್, ಡ್ರಂಕ್ ಅಂಡ್ ಡ್ರೈವ್ ಸೇರಿದಂತೆ 595 ಕೇಸ್ ಬುಕ್ ಒಂದು ಡ್ರಂಕ್ & ಡ್ರೈವ್ ಪ್ರಕರಣ ದಾಖಲು ನಿಮಯ ಉಲ್ಲಂಘಿಸಿದವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ.

Read More

ಮೈಸೂರು: ಹಸು ಮೇಲೆ ಹುಲಿ ದಾಳಿ ನಡೆಸಿದ ಘಟನೆ ಹೆಚ್ ಡಿ ಕೋಟೆ ತಾಲ್ಲೂಕಿನ ಮೊತ್ತ ಗ್ರಾಮದಲ್ಲಿ ನಡೆದಿದೆ. ಬೆಲೆಬಾಳುವ ಹಸು ಕಳೆದುಕೊಂಡ ರೈತ ಕಣ್ಣೀರಿಟ್ಟಿದ್ದಾರೆ. ಗ್ರಾಮದ ಸಮೀಪ ಇತ್ತೀಚೆಗೆ ಹುಲಿ ದಾಳಿಗೆ ಮಗುವೊಂದು ಬಲಿಯಾಗಿತ್ತು.  https://ainlivenews.com/big-shock-5-free-guarantee-cancellation-kai-mlas-explosive-statement/ ಇದೀಗ ಗ್ರಾಮದ ಬಸವರಾಜಪ್ಪ ಎಂಬುವವರಿಗೆ ಸೇರಿದ ಹಸು ಬಲಿಯಾಗಿದ್ದು, ಅಕ್ಕಪಕ್ಕದ ಗ್ರಾಮದ ರೈತರಲ್ಲಿ ಆತಂಕ ಮನೆಮಾಡಿದೆ. ಇನ್ನು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಕೂಡಲೇ ಹುಲಿ ಸೆರೆಯಿಡಿಯುವಂತೆ ಆಗ್ರಹಿಸಿದ್ದಾರೆ.

Read More

ವೆಂಕಟ್ ಭಾರದ್ವಾಜ್ ನಿರ್ದೇಶನದ ನಗುವಿನ ಹೂಗಳ ಮೇಲೆ ಚಿತ್ರ ಇದೇ ಫೆಬ್ರವರಿ ತಿಂಗಳ 9ರಂದು ತೆರೆಗಾಣುತ್ತಿದೆ. ಈಗಾಗಲೇ ಹಾಡುಗಳ ಮೂಲಕ, ಒಟ್ಟಾರೆ ಕಥೆಯ ಒಂದಷ್ಟು ಸುಳಿವುಗಳ ಮೂಲಕ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿರುವ ಈ ಸಿನಿಮಾ ಟ್ರೈಲರ್ ಅನ್ನು ಇಂದು ಖ್ಯಾತ ನಿರ್ದೇಶಕ ಎ.ಹರ್ಷ ಬಿಡುಗಡೆಗೊಳಿಸಿದ್ದಾರೆ. ಎ ಹರ್ಷ ಅನಾವರಣಗೊಳಿಸಿರುವ ಈ ಟ್ರೈಲರ್ ಜೀ ಮ್ಯೂಸಿಕ್ ಮೂಲಕ ಪ್ರೇಕ್ಷಕರನ್ನು ತಲುಪಿದೆ. ಈಗಾಲೇ ಒಂದಷ್ಟು ಭಿನ್ನ ಸಿನಿಮಾಗಳ ಮೂಲಕ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು ವೆಂಕಟ್ ಭಾರದ್ವಾಜ್. ಅವರೀಗ ನಗುವಿನ ಹೂಗಳ ಮೇಲೆ ಚಿತ್ರದ ಮೂಲಕ ಪರಿಶುದ್ಧವಾದ ಪ್ರೇಮಕಥಾನಕದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಪ್ರೇಮ ಕಥನದ ಚಿತ್ರಗಳೆಂದರೇನೇ ಯಾವತ್ತಿಗೂ ಮುಸುಕಾಗದಂಥಾ ಮೋಹವೊಂದು ಪ್ರೇಕ್ಷಕರಲ್ಲಿರುತ್ತದೆ. ಅದನ್ನು ಮತ್ತಷ್ಟು ಮುದಗೊಳಿಸುವ ಲಕ್ಷಣಗಳಿರೋ ಈ ಸಿನಿಮಾ ಟ್ರೈಲರ್, ಒಂದಿಡೀ ಚಿತ್ರದ ಸಾರವನ್ನು ಪ್ರೇಕ್ಷಕರ ಮುಂದಿಟ್ಟಿದೆ. ಕಿರುತೆರೆಯಲ್ಲಿ ಒಂದಷ್ಟು ಹೆಸರು ಮಾಡಿರುವ ಅಭಿದಾಸ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಶರಣ್ಯಾ ಶೆಟ್ಟಿ ನಾಯಕಿಯಾಗಿ ಜೊತೆಯಾಗಿದ್ದಾರೆ. ಎಲ್ಲ…

Read More

ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗಕ್ಕೆ ಬಣ್ಣ ಹಂಚಿ ಒರೋಬ್ಬರಿ 28 ವರುಷಗಳು ಉರುಳಿವೆ ಎಂದು ಬಾದ್ ಷಾ ಕಿಚ್ಚ ಸುದೀಪ್​ ಭಾವುಕರಾಗಿ ಸಿನಿ ಜರ್ನಿ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ಸುದೀಪ್​ವರ ತಂದೆ ಸಂಜೀವ್ ಅವರು ಹೋಟೆಲ್ ಉದ್ಯಮ ಹೊಂದಿದ್ದರು. ಗಾಂಧಿ ನಗರದಲ್ಲಿ ಈ ಹೋಟೆಲ್ ಇತ್ತು. ಹೀಗಾಗಿ, ಚಿತ್ರರಂಗದವರ ಒಡನಾಟ ಬೆಳೆಯಿತು. ಸುದೀಪ್​ಗೂ ಸಿನಿಮಾಗೆ ಕಾಲಿಡಬೇಕು ಎನ್ನುವ ಕನಸು ಹುಟ್ಟಿದ್ದು ಅಲ್ಲಿಯೇ.. ‘ಬ್ರಹ್ಮ’ ಸುದೀಪ್ ನಟನೆಯ ಮೊದಲ ಸಿನಿಮಾ ‘ಬ್ರಹ್ಮ’ ಸುದೀಪ್ ನಟನೆಯ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಅಂಬರೀಷ್ ಅವರು ನಟಿಸಿದ್ದರು. ಆದರೆ, ಈ ಚಿತ್ರ ರಿಲೀಸ್ ಆಗಲೇ ಇಲ್ಲ. ಸುದೀಪ್ ಈ ಚಿತ್ರಕ್ಕಾಗಿ ಕ್ಯಾಮೆರಾ ಎದುರುಸಿದ ದಿನವನ್ನು ಚಿತ್ರರಂಗದಲ್ಲಿ ಮೊದಲ ದಿನ ಎಂದು ಪರಿಗಣಿಸಿದ್ದಾರೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದಿಗೆ (ಜನವರಿ 31) 28 ವರ್ಷಗಳು ಕಳೆದಿವೆ ಎಂದು ಮೊದಲ ದಿನ ಕ್ಯಾಮೆರಾ ಎದುರಿಸಿದ್ದನ್ನು ಸುದೀಪ್ ನೆನಪಿಸಿಕೊಂಡಿದ್ದಾರೆ. ಎಲ್ಲರಿಗೂ ಧನ್ಯವಾದ  ನಾನು ಕಂಠೀರವ ಸ್ಟುಡಿಯೋದಲ್ಲಿ…

Read More

ಬೆಳಗಾವಿ: ಲಕ್ಷ್ಮಣ ಸವದಿಯವರನ್ನು ಕರೆದುಕೊಂಡು ಬರುವ ಜವಾಬ್ದಾರಿ ಎಲ್ಲರ ಹೆಗಲಿಗಿದೆ. ನಾನಿರಬಹುದು, ಈರಣ್ಣಾ ಕಡಾಡಿ, ಮಹಾಂತೇಶ್ ದೊಡ್ಡಗೌಡರ, ರಮೇಶ್ ಕತ್ತಿ ಸೇರಿ ಜಿಲ್ಲೆಯ ಎಲ್ಲ ನಾಯಕರ ಮೇಲಿದ್ದು ಸವದಿ ಬಿಜೆಪಿ ಬಂದ್ರೆ ಅನುಕೂಲ ಆಗುತ್ತದೆ ಎಂದ ಸಂಸದ ಅಣ್ಣಾಸಾಹೇಬ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿಯನ್ನ (Laxman Savadi) ಕರೆದುಕೊಂಡು ಬರುವ ಜವಾಬ್ದಾರಿ ಎಲ್ಲರ ಹೆಗಲಿಗಿದೆ. ಈ ಬಗ್ಗೆ ಸವದಿ ಅವರು ಒಪ್ಪಿಗೆ ಕೊಡಬೇಕು. ಕೇಂದ್ರದರ ಮುಖಂಡರ ಜೊತೆಗೆ ಚರ್ಚೆ ಆಗಬೇಕು. ಸವದಿಯವರು ಬರಲಿ ಅನ್ನೋದು ನಮ್ಮ ಆಶಯ ಬಂದರೆ ಪಕ್ಷಕ್ಕೆ, ಬೆಳಗಾವಿ (Belagavi) ಜಿಲ್ಲೆಗೆ ಒಳ್ಳೆಯದಾಗುತ್ತೆ. ನಮ್ಮ ಪಕ್ಷದಿಂದ ಹೊರ ಹೋದವರಿಗೆ ನಾವು ಆಹ್ವಾನ ಕೊಟ್ಟಿದ್ದೇವೆ. ಸವದಿಯರಿಗೆ ನಾವು ಕೂಡ ಆಹ್ವಾನ ಕೊಟ್ಟಿದ್ದೇವೆ. ನಮ್ಮ ರಾಜ್ಯಾಧ್ಯಕ್ಷರು, ಎಲ್ಲರು ಕೂಡ ಪ್ರಯತ್ನ ಮಾಡುತ್ತಿದ್ದಾರೆ ಎಂದರು. https://ainlivenews.com/big-shock-5-free-guarantee-cancellation-kai-mlas-explosive-statement/ ಅದೇ ರೀತಿ ಎಷ್ಟು ಜನ ಬಿಜೆಪಿಗೆ ಬರ್ತಾರೆ ಅಂತಾ ಹೇಳಲು ಆಗಲ್ಲ. ಬಿಟ್ಟು ಹೋದವರು ಎಲ್ಲರೂ ಬರಬಹುದು. ಯಾಕೆಂದರೆ ಬಿಜೆಪಿಯಲ್ಲಿದ್ದವರು ಹೊರಗೆ ಇರುವುದೇ…

Read More

ಕಮರ್ಶಿಯಲ್ ಸಿನಿಮಾ ಹೀರೋ ಆಗಿ ಮಿಂಚಿರುವ ನಟ, ನಿರ್ದೇಶಕ ಅನೀಶ್ (Anish Tejaswar) ರೋಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸದ್ಯ ‘ಆರಾಮ್ ಅರವಿಂದ್ ಸ್ವಾಮಿ’ಆಗಿ ತೆರೆ ಮೇಲೆ ನಯಾ ಅವತಾರದಲ್ಲಿ ಬರಲು ರೆಡಿಯಾಗಿರುವ ಅವರು,  ಧಿಡೀರನೇ ಟಾಲಿವುಡ್ ಮೆಗಾ ಸ್ಟಾರ್ ಚಿರಜೀವಿ (Megastar Chiranjeevi) ಜೊತೆ ಪ್ರತ್ಯಕ್ಷರಾಗಿದ್ದಾರೆ. ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಗೆ ಭಜನರಾಗಿರುವ ಮೆಗಾಸ್ಟಾರ್ ಚಿರಂಜೀವಿ ಅವರನ್ನು ನಟ ಅನೀಶ್ ಭೇಟಿಯಾಗಿದ್ದಾರೆ (Meets), ಇಂದು ಚಿರು  ಹೈದ್ರಾಬಾದ್ ನಿವಾಸದಲ್ಲಿ ಭೇಟಿಯಾಗಿರುವ ಅವರು, ಮೆಗಾಸ್ಟಾರ್ ಗೆ ಶುಭಾಶಯ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಬಹುನಿರೀಕ್ಷಿತ ಆರಾಮ್ ಅರವಿಂದ ಸ್ವಾಮಿ ಚಿತ್ರದ ಕಂಟೆಂಟ್ ತೋರಿಸಿದ್ದಾರೆ. ಸಿನಿಮಾದ ಕಂಟೆಂಟ್ ನೋಡಿ ಮೆಚ್ಚಿಕೊಂಡ ಚಿರಂಜೀವಿ ಅನೀಶ್ ಚಿತ್ರಕ್ಕೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ. ಅನೀಶ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾಗಿದ್ದ  ಆರಾಮ್ ಅರವಿಂದ ಸ್ವಾಮಿ ಟೈಟಲ್ ಟ್ರ್ಯಾಕ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅರ್ಜುನ್ ಜನ್ಯ ಮ್ಯೂಸಿಕ್, ನಾಗಾರ್ಜುನ್ ಶರ್ಮಾ…

Read More

ಬಿಗ್ ಬಾಸ್ ಕನ್ನಡದ (Bigg Boss Kannada 10) ಈ ಸೀಸನ್‌ನಲ್ಲಿ ಅತ್ಯಂತ ಮುಗ್ಧತೆಯಿಂದಲೇ ಜನರ ಮನಸ್ಸು ಗೆದ್ದಿರುವ ಸ್ಪರ್ಧಿ ವರ್ತೂರು ಸಂತೋಷ್. ಕೆಲವು ಕಹಿ ಘಟನೆಗಳು ನಡೆದಾಗಲೂ, ಮತ್ತೆ ಅದರ ನೋವಿನಿಂದ ಹೊರಬಂದು ಆಡಿದ ವರ್ತೂರು (Varthur Santhosh) ಅವರು 4ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಜಿಯೋ ಸಿನಿಮಾ ನಡೆಸಿದ ಸಂದರ್ಶನದಲ್ಲಿ ಅವರು ಆಡಿದ ಮಾತುಗಳು ಹೀಗಿವೆ ನಮಸ್ಕಾರ ನನ್ನ ಹೆಸರು ಸಂತೋಷ್ ಕುಮಾರ್. ವರ್ತೂರು ಸಂತೋಷ್ ಮತ್ತು ಹಳ್ಳಿಕಾರ್ ಸಂತೋಷ್ ಅಂತ ಕರೀತಾರೆ. ನನಗಂತೂ ರಿಯಾಲಿಟಿ ಶೋಗಳ ಬಗ್ಗೆ ಅಷ್ಟು ಗೊತ್ತಿಲ್ಲ. ಆದರೆ ಬಿಗ್ ಬಾಸ್ ಅಂದರೆ ವ್ಯಕ್ತಿತ್ವದ ಆಟ. ಅಂದರೆ ನಮ್ಮ ವ್ಯಕ್ತಿತ್ವವನ್ನು ನಾವು ಹೇಗೆ ತೋರಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಒಂದು ರಿಯಾಲಿಟಿ ಶೋ ಕಂಪ್ಲೀಟ್ ಆಗುವುದು ಡೇ ಒಂದರಿಂದ ಲಾಸ್ಟ್ ವೀಕ್‌ವರೆಗೆ ಇರುವುದು. ವೀಕೆಂಡ್‌ನಲ್ಲಿ ಎಲಿಮಿನೇಟ್ ಆಗುವುದು, ಮಿಡ್ ವೀಕ್ ಎಲಿಮಿನೇಟ್ ಆಗುವುದೆಲ್ಲ ಇನ್ನೊಂದು ರೀತಿ. ಆದರೆ ಇಡೀ ಸೀಸನ್ ಕಂಪ್ಲೀಟ್ ಮಾಡುವುದು ಬೆರಳೆಣಿಕೆಯಷ್ಟು…

Read More

ದಿಟ್ಟ ಹುಡುಗಿ, ಗಟ್ಟಿ ವ್ಯಕ್ತಿತ್ವದ ಸಂಗೀತಾ ಶೃಂಗೇರಿ (Sangeetha) ಬಿಗ್‌ಬಾಸ್‌ (Bigg Boss Kannada) ಈ ಸೀಸನ್‌ನ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಮನೆಯೊಳಗೆ ಕಾಣಿಸುತ್ತಿದ್ದ ಹಾಗೆಯೇ ಹೊರಗೂ ಅವರದ್ದು ನೇರ ಮಾತು, ದಿಟ್ಟ ವ್ಯಕ್ತಿತ್ವ. ಜಿಯೊಸಿನಿಮಾಗೆ ಅವರು ನೀಡಿದ ಸಂದರ್ಶನದಲ್ಲಿಯೂ ಆ ನೇರವಂತಿಕೆಯ ಕಿಡಿ ಕಾಣಿಸುತ್ತದೆ. ಅವರ ಜೊತೆಗಿನ ಸಂದರ್ಶನದ ಪೂರ್ಣಪಾಠ ಇಲ್ಲಿದೆ. ತುಂಬಾ ಅಂದ್ರೆ ತುಂಬ ಖುಷಿಯಾಗ್ತಿದೆ. ಬಿಗ್‌ಬಾಸ್ ಕನ್ನಡ 10ನೇ ಸೀಸನ್‌ ಸೆಕೆಂಡ್ ರನ್ನರ್ ಅಪ್ ನಾನು. ಇಲ್ಲಿವರೆಗೂ ನನ್ನನೋಡ್ತಾನೇ ಬಂದಿದೀರಾ… ಇನ್ಮುಂದೆ ನನ್ನ ಲೈವ್ ನೋಡಕ್ಕಾಗಲ್ಲ. ಹಾಗಾಗಿ ನನ್ನನ್ನು ನೂರ ಹನ್ನೆರಡು ದಿನಗಳವರೆಗೆ ನೇರವಾಗಿ ತೋರಿಸಿ, ಎಲ್ಲಜನರ ಜೊತೆಗೆ ಸಂಪರ್ಕದಲ್ಲಿ ಇರಿಸಿದ್ದಕ್ಕೆ ನಾನು ಜಿಯೊಸಿನಿಮಾಗೆ ಥ್ಯಾಂಕ್ಸ್ ಹೇಳಲೇಬೇಕು. ಈ ಸಲ ಒಂದು ಹೊಸ ಅನಭವ ಇತ್ತು. ಫಿನಾಲೆ ವಾರದಲ್ಲಿ ಆರು ಸ್ಪರ್ಧಿಗಳಿದ್ದರು, ಐದಲ್ಲ. ಆರರಿಂದ ಟಾಪ್‌ 5 ಸೆಲೆಕ್ಟ್ ಆದಾಗಲೂ ಸಾಕಷ್ಟು ಎಕ್ಸೈಟ್‌ಮೆಂಟ್ ಇತ್ತು. ನರ್ವಸ್‌ನೆಸ್ ಕೂಡ ಇತ್ತು. 4ರಿಂದ 3ಬಂದ ನಂತರ ಸುದೀಪ್…

Read More

ಬೆಂಗಳೂರು: ಬಡವರ ಪಾಲಿನ ಆಶಾಕಿರಣ ಡಾ.ಸಿ.ಎನ್.ಮಂಜುನಾಥ್‌ (CN Manjunath) ಅವರಿಗೆ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಘೋಷಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ವಿಪಕ್ಷ ನಾಯಕ ಆರ್‌.ಅಶೋಕ್‌ (R Ashok) ಮನವಿ ಮಾಡಿದ್ದಾರೆ. ಜಯದೇವ ಆಸ್ಪತ್ರೆ (Jayadeva Hospital) ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಮಂಜುನಾಥ್‌ ಅವರು ಇಂದು (ಬುಧವಾರ) ನಿವೃತ್ತರಾಗಲಿದ್ದಾರೆ. ಅವರ ಸಾಧನೆ ಸ್ಮರಿಸಿರುವ ಆರ್‌.ಅಶೋಕ್‌ ಸೋಷಿಯಲ್‌ ಮೀಡಿಯಾದ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತರಾಗುತ್ತಿರುವ ನಾಡಿನ ಪ್ರಖ್ಯಾತ ವೈದ್ಯರಾದ ಡಾ.ಸಿ.ಎನ್.ಮಂಜುನಾಥ್ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಮನಸಾರೆ ಶುಭ ಹಾರೈಸುತ್ತೇನೆ ಎಂದಿದ್ದಾರೆ. ಬಡರೋಗಿಗಳ ಪಾಲಿನ ಆಶಾಕಿರಣವಾಗಿ “ಟ್ರೀಟ್ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್” ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಸಾವಿರಾರು ಬಡ ರೋಗಿಗಳಿಗೆ ಚಿಕಿತ್ಸೆ ಕೊಟ್ಟ ಡಾ.ಮಂಜುನಾಥ್ ಅವರು ಬಡವರ ಪಾಲಿನ ಧನ್ವಂತರಿ ಅಂದರೆ ಅತಿಶಯೋಕ್ತಿಯಲ್ಲ ಎಂದು ಹೇಳಿದ್ದಾರೆ.

Read More