Author: AIN Author

ಬಳ್ಳಾರಿ: ಸಚಿವರೇ… ಶಾಸಕರೇ…. ಈ ಕಡೆ ಸ್ವಲ್ಪ ಗಮನಹರಿಸಿ.. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವಿದೆ, ಜಿಲ್ಲೆಯಲ್ಲಿ ಕಾಂಗ್ರೇಸ್ ಸರ್ಕಾರವಿದೆ. ಆದರೆ ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಗಳು ಮಾತ್ರ ಬಂದಾಗಿವೆ. ಹೌದು ಸಿಎಂ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್ ಗ್ಯಾರಂಟಿ ಎಫೆಕ್ಟ್‌ʼನಿಂದ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆಯೇ ಎಂದು ಅನುಮಾನ ಮೂಡುತ್ತಿದೆ. ಸರ್ಕಾರ ಬಾಕಿ ಬಿಲ್ ಪಾವತಿಸದ ಹಿನ್ನೆಲೆ ಬಳ್ಳಾರಿ ನಗರದಲ್ಲಿ 5 ಇಂದಿರಾ ಕ್ಯಾಂಟೀನ್‍ʼಗಳು ಬಂದ್ ಆಗಿದೆ. ಒಟ್ಟು ಎಂಟು ಕ್ಯಾಂಟೀನ್‍ಗಳು ಸೇರಿದಂತೆ 4.5 ಕೋಟಿ ರೂ. ಬಿಲ್ ಬಾಕಿ ಇದೆ. ಪ್ರತಿ ತಿಂಗಳ ಕ್ಯಾಂಟಿನ್ ನಿರ್ವಹಣೆಗೆ ಸುಮಾರು 10 ಲಕ್ಷ ರೂ.ಗಳಿಗೂ ಅಧಿಕ ಹಣ ವ್ಯಯಿಸಬೇಕಿದೆ. ಇದೇ ಕಾರಣಕ್ಕೆ, ಇಂದಿರಾ ಕ್ಯಾಂಟಿನ್ ನಿರ್ವಹಣೆ ವಹಿಸಿಕೊಂಡಿದ್ದ ಎಜೆನ್ಸಿಗಳು ತರಕಾರಿ, ಗ್ಯಾಸ್, ಸಿಬ್ಬಂದಿಗೂ ಕೊಡಲು ಹಣವಿಲ್ಲದೆ ಈಗ ಬಂದ್ ಮಾಡಿದ್ದಾರೆ. ನಗರದ ಮೋತಿ ಸರ್ಕಲ್, ಜಿಲ್ಲಾ ಆಸ್ಪತ್ರೆ, ಎಪಿಎಂಸಿ, ವಿಮ್ಸ್‌ನಲ್ಲಿರುವ ಐದು ಕ್ಯಾಂಟೀನ್‍ಗಳನ್ನು ಬಂದ್ ಮಾಡಲಾಗಿದೆ. ಬಂದ್ ಆಗಿರುವ…

Read More

ಕಲಬುರಗಿ: ಗೋ ಶಾಲೆಯಲ್ಲಿನ ಆರು ಹಸುಗಳನ್ನ ಬೆಳಗಾಗೋದ್ರಲ್ಲಿ ಕದ್ದೊಯ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಹೊರವಲಯದ ಮಾಧವ ಗೋಶಾಲೆಯಲ್ಲಿ  ಕಳ್ಳತನ ನಡೆದಿದ್ದು ನಿನ್ನೆ ತಡರಾತ್ರಿ ಒಂದು ಗಂಟೆ ಸುಮಾರಿಗೆ ಹಸುಗಳನ್ನ ಟೆಂಪೋದಲ್ಲಿ ಹೊತ್ತೊಯ್ದಿದ್ದಾರೆ. ಈ ಎಲ್ಲ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ..ಇದು ಮಹೇಶ್ ಎಂಬುವವರಿಗೆ ಸೇರಿದ ಗೋಶಾಲೆ ಎನ್ನಲಾಗಿದೆ.ಮಧ್ಯರಾತ್ರಿ ಎಂಟ್ರಿ ಕೊಟ್ಟ ನಾಲ್ಕು ಜನರ ಗ್ಯಾಂಗ್ ಒಂದೊಂದೆ ಹಸುಗಳನ್ನ ಬಿಚ್ಚಿಕೊಂಡು ಗೂಡ್ಸ್ ವಾಹನದಲ್ಲಿ ಹಾಕಿಕೊಂಡು ಎಸ್ಕೇಪ್ ಆಗಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..

Read More

ಬೆಂಗಳೂರು:   ಶ್ರೀಕಂಠೇಶ್ವರನಗರದಲ್ಲಿ ಗೃಹಿಣಿ ಪ್ರೇಮಲತಾ ಸಾವು ಪ್ರಕರಣವನ್ನು   ಆತ್ಮಹತ್ಯೆ ಎಂದುಕೊಂಡ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿಸಿ ಆತ್ಮಹತ್ಯೆ ಎಂದು ಡ್ರಾಮ ಮಾಡಿದ್ದ ಪತಿ ಅಂದರ್ ಆಗಿದ್ದು  ಸ್ನೇಹಿತನಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಖತರ್ನಾಕ್ ಪತಿ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಇತ್ತು ಅದರ ಮೇಲೆ ಸಾಕಷ್ಟು ಅನುಮಾನ ಇತ್ತು 200 ಸಿಸಿಟಿವಿ ಪರಿಶೀಲಿಸಿ ವಿನಯ್ ಬಂಧನ ಮಾಡಲಾಗಿತ್ತು ವಿನಯ್ ಜೊತೆಗೆ ಪತಿ ಶಿವಶಂಕರ್ ಕೂಡ ಬಂಧನ ಮಾಡಲಾಗಿದೆ 2023 ರಲ್ಲಿ ವಿನಯ್ ಪತ್ನಿ ಕೆರೆಯಲ್ಲಿ ಬಿದ್ದಿದ್ದಾಗಿ ಮಾಹಿತಿ ಇತ್ತು ಆಗ ಆಕಸ್ಮಿಕ ಸಾವು ಅಂತಾ ಹುಣಸಮಾರನಹಳ್ಳಿಯಲ್ಲಿ ಕೇಸ್ ಆಗಿತ್ತು ಆ ಪ್ರಕರಣದ ಅಸಲಿಯತ್ತು ಕೂಡ ಈಗ ಬಯಲಾಗಿದೆ ವಿನಯ್ ಈತನೆ ಕೆರೆಗೆ ತಳ್ಳಿರೋದಾಗಿ ಒಪ್ಪಿಕೊಂಡಿದ್ದಾನೆ ಶಿವಶಂಕರ್ ಮನೆಯಲ್ಲಿಯೇ ಸಿಸಿಟಿವಿ ಇತ್ತು ಅದನ್ನ ಆಫ್ ಮಾಡಿ ಕೊಲೆ ಮಾಡಿದ್ದಾರೆ ಬ್ಯಾಂಕ್ ನಲ್ಲಿ ಐದು ವರ್ಷದ ಹಿಂದೆ ಇಬ್ಬರು ಪರಿಚಯವಾಗಿದ್ರು ಆರೋಪಿ ಶಿವಶಂಕರ್ ಬಟ್ಟೆ ವ್ಯಾಪಾರಿಯಾಗಿದ್ದಾನೆ ಇಬ್ಬರನ್ನು ಬಂಧಿಸಿ…

Read More

ಬೆಂಗಳೂರು:  ಕೊನೆಗೂ ಅಂಗನವಾಡಿ ಕಾರ್ಯಕರ್ತೆಯರ ಕೈ ಸೇರಲಿವೆ ಸ್ಮಾರ್ಟ್‌ಫೋನ್‌ಗಳು ಕಳೆದ ಕೆಲ ವರ್ಷಗಳಿಂದ ಸ್ಮಾರ್ಟ್ ‌ಫೋನ್‌ಗಾಗಿ ಬೇಡಿಕೆ ಇಡುತ್ತಿದ್ದ ಕಾರ್ಯಕರ್ತೆಯರು ಸ್ಮಾರ್ಟ್‌ಫೋನ್‌ಗಳಿಗಾಗಿ ಅನೇಕ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದ ಕಾರ್ಯಕರ್ತೆಯರ ಕೊನೆಗೂ ಸ್ಮಾರ್ಟ್‌ಫೋನಿಗೆ ಸಚಿವ ಸಂಪುಟದಲ್ಲಿ ಸಿಕ್ತು ಅನುಮೋದನೆ…! ಸುಮಾರು 75938 ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಲು ಅನುಮೋದನೆ ಒಂದು ಸ್ಮಾರ್ಟ್‌ ಪೋನಿನ ಬೆಲೆ 11,800 ಸುಮಾರು 89.61 ಕೋಟಿ ವೆಚ್ಚದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್‌ ವಿತರಣೆ

Read More

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಪರಿಣಾಮ ಹೆಚ್ಚಾಗಿದ್ದು, ಇನಷ್ಟು ಉಷ್ಣಾಂಶ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬರುವ ದಿನಗಳಲ್ಲಿ ಬಿಸಿಲಿನ ತಾಪಮಾನ ಇನ್ನೂ ಹೆಚ್ಚಾಗಲಿದೆ. ಮುಂದಿನ 2 ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ತಾಪಮಾನ ಏರಿಕೆಯಾಗಲಿದೆ. ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರಲಿದೆ. ಚಾಮರಾಜನಗರದಲ್ಲಿ 13.2 ರಷ್ಟು ಡಿಗ್ರಿ ಸೆಲ್ಸಿಯಸ್ ಇದ್ದು ಅತ್ಯಂತ ಕನಿಷ್ಠ ಉಷ್ಣಾಂಶ ಇರುವ ನಗರವಾಗಲಿದೆ. ಕಾರವಾರದಲ್ಲಿ ಗರಿಷ್ಠ 37 ಇರಲಿದ್ದು, 21 ಕಿನಿಷ್ಠ ಉಷ್ಣಾಂಶ ಇರಲಿದ್ದು ಬೇರೆ ಜಾಗಗಳಿಗೆ ಹೋಲಿಸಿದರೆ ಅತೀ ಹೆಚ್ಚು ಉಷ್ಣಾಂಶ ಇರಲಿದೆ. ಹಾಗೇಯೇ ರಾಯಚೂರು ಮತ್ತು ಶಿವಮೊಗ್ಗದಲ್ಲಿ 35 ಗರಿಷ್ಠ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Read More

ಮುಂಬೈ: ಫೆಬ್ರವರಿ 29, 2024ರ ನಂತರ ಪೇಟಿಎಂ, ತನ್ನ ಯಾವುದೇ ಗ್ರಾಹಕ ಖಾತೆ, ಪ್ರಿಪೇಯ್ಡ್ ಉಪಕರಣಗಳು, ವ್ಯಾಲೆಟ್‌ಗಳು ಮತ್ತು ಫಾಸ್ಟ್‌ಟ್ಯಾಗ್‌ಗಳಲ್ಲಿ ಠೇವಣಿ ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸದಂತೆ ಆರ್​ಬಿಐ ನಿರ್ಬಂಧ ವಿಧಿಸಿದೆ. Paytm ಪಾವತಿಗಳ ಬ್ಯಾಂಕ್ ಲಿಮಿಟೆಡ್ PPBL ನ ಸಮಗ್ರ ಆಡಿಟ್ ವರದಿ ಮತ್ತು ಬಾಹ್ಯ ಲೆಕ್ಕಪರಿಶೋಧನೆ ನಂತರ ರಿಸರ್ವ್ ಬ್ಯಾಂಕ್‌ ಈ ಕ್ರಮ ತೆಗೆದುಕೊಂಡಿದೆ. ನಿರಂತರ ಅನುವರ್ತನೆಗಳು ಮತ್ತು ಮುಂದುವರಿದ ಮೇಲ್ವಿಚಾರಣೆಗಳ ವರದಿಯನ್ನು ಆಧರಿಸಿ ಈ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ತನ್ನ ಹೇಳಿಕೆಯಲ್ಲಿ ಆರ್​​ಬಿಐ ತಿಳಿಸಿದೆ. ಆರ್​ಬಿಐನ ನಿರ್ಬಂಧ ಕ್ರಮಕ್ಕೆ ಕಾರಣಗಳಿವು… ಕೆವೈಸಿ ದಾಖಲೆಗಳು ಸರಿಯಾಗಿರಲಿಲ್ಲ ಮನಿ ಲಾಂಡರಿಂಗ್ ಕಾನೂನುಗಳ ಪಾಲನೆಯಾಗಿಲ್ಲ ರಿಲೇಟೆಡ್ ಪಾರ್ಟಿ ವಹಿವಾಟು ನಿಯಮಗಳ ಉಲ್ಲಂಘನೆಯಾಗಿದೆ. ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಈ ಪೇಮೆಂಟ್ಸ್ ಬ್ಯಾಂಕ್ ಮೇಲೆ ಪರೋಕ್ಷ ನಿಯಂತ್ರಣ ಹೊಂದಿರುವ ಸಾಧ್ಯತೆ ಏನಿದು ಕೆವೈಸಿ ಲೋಪ? ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಸಿಸ್ಟಂ ಆಡಿಟ್ ಅನ್ನು ಆರ್​ಬಿಐ ನಡೆಸಿದಾಗ ಹಲವು ಲೋಪದೋಷಗಳು ಬೆಳಕಿಗೆ ಬಂದಿದ್ದವು. ಅದರಲ್ಲಿ…

Read More

ಬೆಂಗಳೂರು (ಆನೇಕಲ್):‌ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರು ಬಳಸಿಕೊಂಡು ಬ್ಯಾಂಕ್​ಗಳಿಂದ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬಳು ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಘಟನೆ ಬೆಂಗಳೂರಿನ ಆನೇಕಲ್, ಚಂದಾಪುರ, ಸೂರ್ಯ ನಗರ ,ಹೊಸಕೋಟೆ ಅತ್ತಿಬೆಲೆಯಲ್ಲಿ  ಪ್ರಕರಣ ಬೆಳಕಿಗೆ ಬಂದಿದೆ. ಬ್ಲೂ ವಿಂಗ್ಸ್ ಎಂಬ ಹೆಸರಿನ ಟ್ರಸ್ಟ್ ಮಾಡಿಕೊಂಡಿರುವ ತಮಿಳುನಾಡಿನ ಹೊಸೂರು ಮೂಲದ ಪವಿತ್ರ ಆ್ಯಂಡ್ ಗ್ಯಾಂಗ್ ವಿರುದ್ಧ  ಅತ್ತಿಬೆಲೆ ಪೋಲಿಸ್ ಠಾಣೆಯಲ್ಲಿ ದೂರು  ಪ್ರಕರಣ ದಾಖಲಾಗಿದೆ. ಈಕೆಯೇ ನೋಡಿ ಆ ಮಹಾ ವಂಚಕಿ ಪವಿತ್ರ ಸ್ವತಹ ತಮಿಳುನಾಡಿನ ಹೊಸೂರು ಮೂಲದವಳು ಅಮಾಯಕರನ್ನು ವಂಚಿಸುವುದೇ ಈ ಮಹಿಳೆಯ ಕಾಯಕ ಹಣದ ಆಸೆ ತೋರಿಸಿ ಕೋಟಿ ಕೋಟಿ ವಂಚಿಸಿರುವ ನಯ ವಂಚಕಿ ಆನೇಕಲ್, ಚಂದಾಪುರ, ಸೂರ್ಯ ನಗರ ,ಹೊಸಕೋಟೆ ಅತ್ತಿಬೆಲೆಯಲ್ಲಿ ವಂಚನೆ ಪ್ರಕರಣ ಬೆಳಕಿಗೆ… ನಾವು ಹೊಸೂರಿನಲ್ಲಿ ಟ್ರಸ್ಟ್ ಓಪನ್ ಮಾಡಿದ್ದೇವೆ ನಮ್ಮ ಟ್ರಸ್ಟ್ ಗೆ ಕೇಂದ್ರ ಸರ್ಕಾರದಿಂದ ಹಣ ಬಂದಿದೆ ಅಮೆರಿಕದಿಂದಲೇ ನಮ್ಮ ಟ್ರಸ್ಟ್ ಗೆ ಹಣ ಸಂದಾಯ ಆಗಿದೆ ಆ…

Read More

ದಾವಣಗೆರೆ: ರಾಜ್ಯದಲ್ಲಿ ಬಿಜೆಪಿಯಿಂದ 28ಕ್ಕೆ 28ಸ್ಥಾನ ಗೆಲ್ಲುವ ಸಂಕಲ್ಪ ಮಾಡಿದೆ, ಸಂಸದ ಜಿಎಂ ಸಿದ್ದೇಶ್ವರ್ ದಾವಣಗೆರೆ ಮಾತ್ರವಲ್ಲದೇ ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ, ಈ ಹಿನ್ನಲೆ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಬೇಕಿದೆ ಎಂದು ಪರೋಕ್ಷವಾಗಿ ಸಿದ್ದೇಶ್ವರ್ ರನ್ನ ಗೆಲ್ಲಿಸಿ ಎಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದು ವಿರೋಧಿ ಬಣಕ್ಕೆ ಶಾಕ್ ನೀಡಿ. ದಾವಣಗೆರೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ನೂತನ ಜಿಲ್ಲಾಧ್ಯಕ್ಷ ರಾಜಶೇಖರ್ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಬಿಎಸ್ ವೈ, ಸಂಸದ ಜಿಎಂ ಸಿದ್ದೇಶ್ವರ್ ಈ ಸಮಾರಂಭಕ್ಕೆ ಗೈರಾಗಿದ್ದಾರೆ ಎಂದು ತಪ್ಪು ತಿಳಿಯಬೇಡಿ, ಅವರು ದೆಹಲಿ ಸಂಸತ್ ಸಭೆಯಲ್ಲಿದ್ದಾರೆ, ಜಿಲ್ಲೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿ ಬಿಜೆಪಿ ಗೆಲ್ಲಿಸಬೇಕು, ಸಿದ್ದೇಶ್ವರ್ ಉತ್ತಮವಾಗಿ ಕೆಲಸ ಮಾಡಿದ್ದಾರೆ, ಸಿದ್ದೇಶ್ವರ್ ಜೊತೆ ದೂರವಾಣಿ ಕರೆ ಮೂಲಕ ಮಾತನಾಡಿ ಬಂದಿದ್ದೇನೆ, ದೆಹಲಿಯಲ್ಲಿ ಇರುವ ಕಾರಣ ಗೈರಾಗಿದ್ದಾರೆ, ಮತ್ತೊಮ್ಮೆ ನರೇಂದ್ರ ಮೋದಿಯವರೇ ಪ್ರದಾನಿ ಅನ್ನೋ ಮಾತು ಎಲ್ಲೆಲ್ಲೂ ಕೇಳಿ ಬರುತ್ತಾ ಇದೆ, ಬರುವ…

Read More

ಬೆಂಗಳೂರು : ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಒಂದು ನಾಲಗೆ, ಪ್ರಧಾನಿ ಆಗಿದ್ದಾಗ ಮತ್ತೊಂದು ನಾಲಗೆನಾ..? ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಧಾನಿ ಮೋದಿ ನಿನ್ನೆ ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ. ಹಿಂದೆ ಇದೇ ಮೋದಿಯವರು ಗುಜರಾತ್ ಬೆಗ್ಗರ್ಸ್ ರಾಜ್ಯನಾ ಅಂತ ಟ್ವೀಟ್ ಮಾಡಿದ್ದರು ಎಂದು ಚಾಟಿ ಬೀಸಿದರು. ಬಿಜೆಪಿ ಅವ್ರು ಕರ್ನಾಟಕಕ್ಕೆ ಅನ್ಯಾಯವಾಗಿದೆ ಅಂದ್ರೆ ಒಪ್ಪಿಕೊಳ್ತಾರಾ..? ನಷ್ಟವನ್ನು ಸರಿ ಅನ್ನಲ್ಲ ಅವ್ರು. ನರೇಂದ್ರ ಮೋದಿ ಅವ್ರು ಭಾಷಣ ಮಾಡಿದ್ದಾರೆ. ದೇಶ ವಿಭಜನೆ ಮಾಡಲು ಈ ರೀತಿ ಮಾಡ್ತಿದ್ದಾರೆ ಎಂದಿದ್ದಾರೆ. ಗುಜರಾತ್ ಸಿಎಂ ಆಗಿದ್ದಾಗ ಮೋದಿ ಏನ್ ಹೇಳಿದ್ರು ಗೊತ್ತಾ..? ಎಂದು ಗುಡುಗಿದರು. ಅದಕ್ಕೆ ನಾನು ಕೋಲೆ ಬಸವ ಅಂದಿದ್ದು ತೆರಿಗೆಯೇ ಒಂದು ವರ್ಷ ಸಂಗ್ರಹ ಮಾಡಬೇಡಿ ಅಂತ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಹೇಳಿದ್ದರು. ಅವರು ಹಿಂದೆ ದೇಶ ವಿಭಜನೆ ಮಾಡುವುದಕ್ಕೆ ಹೊರಟಿದ್ದರಾ..? ರಾಜ್ಯದ ಹಿತಾಸಕ್ತಿ ಕಾಪಾಡಲು ಇದ್ದೇವೆ ನಾವು. 4.30 ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡುತ್ತದೆ…

Read More

ಬೆಂಗಳೂರು : ಒಂದಲ್ಲ, ಎರಡಲ್ಲ, ಬರೋಬ್ಬರಿ 94ಬಾರಿ ಸಂಚಾರ ನಿಯಮ ಉಲ್ಲಂಘನೆ. ಖಾಕಿ ಕಣ್ತಪ್ಪಿಸಿ ರಾಜಾರೋಷವಾಗಿ ಓಡಾಡುತ್ತಿದ್ದ ಭೂಪ. ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಈ ಕಿರಾತಕನಿಂದ ಬಿತ್ತು 50,500 ದಂಡ! ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ಇಂದು ದಂಡಾಸ್ತ್ರ ಪ್ರಯೋಗಿಸಿದ್ದಾರೆ. ಈ ವೇಳೆ ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸಿದ್ದ ಕಾರು ​ಚಾಲಕ ಪೊಲೀಸರ ಖಜಾನೆ ತುಂಬಿಸಿದ್ದಾನೆ. ಈ ಘಟನೆ ಪುಲಿಕೇಶಿನಗರ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಂದೇ ಕಾರಿ​ಗೆ ಬರೋಬ್ಬರಿ 50,500 ರೂಪಾಯಿ ದಂಡ ವಿಧಿಸಲಾಗಿದೆ. ದಂಡದ ಬಿಲ್ ಉದ್ದ ನೋಡಿ ಕಾರು ಚಾಲಕ ಒಂದು ಕ್ಷಣ ಶಾಕ್ ಆಗಿದ್ದಾನೆ. ಪುಲಿಕೇಶಿನಗರ ಪೊಲೀಸರು ಇಂದು ಅತಿ ಹೆಚ್ಚು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರುಗಳನ್ನು ಪತ್ತೆ ಹಚ್ಚಲು ರಸ್ತೆಗಿಳಿದಿದ್ದರು. ದಂಡ ಸಂಗ್ರಹಿಸುವ ವೇಳೆ ಸುಮಾರು 94 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಕಾರು ಚಾಲಕ ಇವರ ಕೈಗೆ ಸಿಕ್ಕಿದ್ದಾನೆ. ಮಾರುದ್ದದ ದಂಡದ…

Read More