Author: AIN Author

ಬೆಂಗಳೂರು ಫೆ 11: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸು ಮತ್ತು ಕಾಳಜಿಯ ಗ್ಯಾರಂಟಿ ಯೋಜನೆಗಳ ಯಶಸ್ವೀ ಜಾರಿಗೆ ರೈತ ಮುಖಂಡರು ಮತ್ತು ರೈತ ಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದರು.‌ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಬಜೆಟ್ ಪೂರ್ವ ರೈತ ಮುಖಂಡರು ಮತ್ತು ರೈತ ಹೋರಾಟಗಾರರ ಸಭೆಯಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸುವ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ವೀ ಜಾರಿಯ ಬಗ್ಗೆ ಅಪಾರ ಮೆಚ್ಚುಗೆ ಸೂಚಿಸಿ ಮುಖ್ಯಮಂತ್ರಿಗಳಿಗೆ ಅಭಿನಂದಿಸಿದರು. ರೈತ ಮಹಿಳೆಯರ ಮತ್ತು ರೈತ ಕುಟುಂಬಗಳ ಆರ್ಥಿಕ ಶಕ್ತಿ-ಚೈತನ್ಯವನ್ನು ಗ್ಯಾರಂಟಿ ಯೋಜನೆಗಳು ಹೆಚ್ಚಿಸಿರುವುದನ್ನು ವಿವರಿಸಿದ ಬಡಗಲಾಪುರ ನಾಗೇಂದ್ರ ಅವರು, ರೈತರ ಮತ್ತು ಜನ ಸಮುದಾಯದ ಪೌಷ್ಠಿಕತೆ ಹೆಚ್ಚಿಸುವ ದಿಕ್ಕಿನಲ್ಲಿ ಸಲಹೆ ನೀಡಿದರು. ಅವರ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ತಿಳಿಸಿ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು. https://ainlivenews.com/impress-your-partner-with-this-promise-here-are-the-tips/ ಬಹಳ ಕಷ್ಟ ಪಟ್ಟು ಗ್ಯಾರಂಟಿ ಯೋಜನೆಗಳನ್ನು ಇಷ್ಟು ಶೀರ್ಘವಾಗಿ ಜಾರಿ ಮಾಡಿದ್ದೀರಿ. ಇದರ ಅನುಕೂಲ ರಾಜ್ಯದ ಜನರಿಗೆ ಆಗುತ್ತಿರುವ ಹೊತ್ತಲ್ಲಿ ಟೀಕೆಗಳಿಗೆ ಅಂಜುವ ಅಗತ್ಯವಿಲ್ಲ ಎನ್ನುವ…

Read More

ಬೆಂಗಳೂರು: ಇನ್ನೇನು ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಶುರುವಾಗ್ತಾಯಿದೆ ..ವಿದ್ಯಾರ್ಥಿಗಳು ತಾವು ಪರೀಕ್ಷೆಯಲ್ಲಿ ಪಾಸ್ ಆಗ್ಬೇಕು ಅಂತ ಶತಾಯಗತಾಯ ಹರಸಾಹಸ ಪಡ್ತಾ ಇದ್ದಾರೆ . ಇದರ ನಡುವೆ ವಿಧ್ಯಾರ್ಥಿಗಳೇ ಒಂದು ಶಾಕ್ ಕಾದಿದೆ.ಅದೇನು ಅಂತೀರಾ ಆಗುತ್ತೆ ಈ ಸ್ಟೋರಿ ನೋಡಿ.. 2023 24ನೇ ಸಾಲಿನ ಪರೀಕ್ಷೆಗೆ ಎಲ್ಲ ಶಾಲಾ ಕಾಲೇಜುಗಳು ಸಿದ್ಧಗೊಳ್ಳುತ್ತಿದೆ..ಆದರೆ ಕೆಲವೊಂದು ಶಾಲೆಗಳು ತಮ್ಮ ಮಾನ್ಯತೆ ನವೀಕರಣ ಮಾಡಿಸಿಕೊಂಡಿಲ್ಲ ..ಅನಧಿಕೃತವಾಗಿ ಶಾಲೆ ನಡೆಸುತ್ತಿರುವ ಕಾರಣ ಮಂಡಳಿಯಿಂದ ಎಚ್ಚರಿಕೆ ನೀಡಿದ್ದಾರೆ .. ಈ ಕೂಡಲೇ ಪರೀಕ್ಷೆಯ ಮುನ್ನವೇ ಮಾನ್ಯತೆಯನ್ನು ನವೀಕರಣಗೊಳಿಸಬೇಕು ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ .. ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಮಾನ್ಯತೆ ನವೀಕರಣ ಮಾಡಿಕೊಳ್ಳದೇ ಇರುವ 129 ಖಾಸಗಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಡೆಹಿಡಿದಿದೆ.ಇದರಿಂದ ಇವು ಅನಧಿಕೃತ ಎಂಬುದನ್ನು ಮಂಡಳಿ ಸ್ಪಷ್ಟಪಡಿಸಿದ್ದು, ಅಂತಿಮ ಪ್ರವೇಶ ಪತ್ರ ವಿತರಿಸುವುದಕ್ಕೆ 15 ದಿನಗಳ ಮುಂಚಿತವಾಗಿ ಸಲ್ಲಿಕೆಯಾದಲ್ಲಿ…

Read More

ಬೆಂಗಳೂರು: ಮುಂಜಾನೆ ಕೂಲ್ ಆಗಿರೋ ಸಿಲಿಕಾನ್ ಸಿಟಿ ಮಧ್ಯಾಹ್ನ ಹೊತ್ತಿದೆ ಕಾವೇರಿರುತ್ತೆ. ಸಿಲಿಕಾನ್ ಸಿಟಿಯ ವಾತಾವರಣ ಉಷ್ಣಾಂಶ ಹೆಚ್ಚಿಸಿಕೊಳುತ್ತಿದ್ದು ಜನ ಜೀವನವನ್ನು ಅಸ್ತವ್ಯಸ್ತ ಮಾಡಿದೆ, ಇದರ ಜೊತೆಗೆ ಜನ ಸೂರ್ಯದೇವನಿಗೆ ಹಿಡಿ ಶಾಪ ಹಾಕಲು ಶುರು ಮಾಡಿದದ್ದು‌ ಬೇಸಿಯ ಬಿಸಿ ಜನರನ್ನು ಕಾಡಲು ಆರಂಭಿಸಿದೆ.ಹಾಗಿದ್ರೆ ಸಿಲಿಕಾನ್ ಸಿಟಿಯಲ್ಲಿ ವಾತಾವರಣದ ತಾಪಮಾನ ಹೇಗಿದೆ ಅನ್ನೋದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ ರಾಜ್ಯದಲ್ಲಿ ಸಂಪೂರ್ಣ ಬೇಸಿಗೆ ಆರಂಭ ಆಗುವುದಕ್ಕೂ ಮುನ್ನವೇ ಬೇಸಿಗೆ ಧಗೆ ಜನರನ್ನು ಹೈರಾಣುಗೊಳಿಸಿದೆ. ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಜನ ತತ್ತರಿಸೋ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ರಾಜ್ಯದ ಹಲವೂ ಭಾಗಗಳಲ್ಲಿ ಈಗಾಗಲೇ ನೀರಿಗೆ ಹಾಹಾಕಾರ ಆರಂಭವಾಗಿದ್ದು‌ ಇದರ ಜೊತೆ ಬಿಸಿಲಿನ ಶಾಕಕ್ಕೆ ಹಲವಾರು ತೊಂದರೆಗಳು ಶುರುವಾಗಿದೆ. ಇನ್ನೂ ತಂಪಾದ ವಾತಾವರಣವನ್ನ ಹೊಂದಿರಿವ ಸಿಲಿಕಾನ್ ಸಿಟಿ ಕೂಡ ಈ ಬಾರಿ ಸುಡಲು ಆರಂಭಿಸಿದ್ದೆ. https://ainlivenews.com/impress-your-partner-with-this-promise-here-are-the-tips/ ಸಿಲಿಕಾನ್ ಸಿಲಿಕಾನ್ ಗರಿಷ್ಟ ಉಷ್ಣಾಂಶ ತಾಪಮಾನವನ್ನು ಕಳೆದ ವಾರ ದಾಟಿದ್ದು, ಸಿಲಿಕಾನ್ ಸಿಟಿಯಲ್ಲಿ 35 ಡಿಗ್ರಿ ಸೆಲ್ಸಿಯಸ್ ಬಿಸಿಲು…

Read More

ಧಾರವಾಡ : ಶರಣರ ವಿಚಾರಗಳನ್ನು ವಿಮರ್ಶೆ ಮಾಡುವ ಅವಶ್ಯಕತೆ ಇದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ತಿಳಿಸಿದರು. ಧಾರವಾಡದಲ್ಲಿ ಮುರುಘಾಮಠದ ಶ್ರೀ ಮುರುಘೇಂದ್ರ ಮಹಾ ಶಿವಯೋಗಿಗಳ 94 ನೇಯ ಜಾತ್ರಾ ಮಹೋತ್ಸವದ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, https://ainlivenews.com/impress-your-partner-with-this-promise-here-are-the-tips/ ತಲೆ ತಲಾಂತರದಿಂದ ಶರಣರ ಆಚಾರ ವಿಚಾರ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಾ ಬಂದಿದೆ. ನಾಡಿನ ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಧಾರವಾಡ ಮುರುಘಾಮಠವು ಅಕ್ಷರ ದಾಸೋಹ ಮೂಲಕ ಮಾಡಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಜಿ, ಇಳಕಲ್ಲ ಗುರುಮಹಾಂತ ಸ್ವಾಮೀಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Read More

ಭದ್ರಾವತಿ: ತುಂಬಿದ ಗ್ಯಾಸ್ ಸಿಲಿಂಡರ್ ನ್ನು ರಸ್ತೆಯಲ್ಲಿ ಪದೇ ಪದೇ ಎತ್ತಿ ಹಾಕಿ ಸ್ಪೋಟಿಸಲು ಮುಂದಾದ ಪಾನಮತ್ತ ಯುವಕ. ಗ್ಯಾಸ್ ಸಿಲಿಂಡರ್ ನಿಂದಲೇ ಮನೆ ಬಾಗಿಲು ತೆಗೆದು ಕಾಲೊನಿ ನಿವಾಸಿಗಳನ್ನು ಕೆಲ ಕಾಲ ಆತಂಕದಲ್ಲಿಟ್ಟ ದುರಳ.. ಹೌದು ಭದ್ರಾವತಿಯ ಆ ಕಾಲೊನಿ ಪಾಲಿಗೆ ತಪ್ಪಿದ ಭಾರಿ ದುರಂತವೇ ಸರಿ. ಪಾನಮತ್ತ ಯುವಕನೊಬ್ಬ ತುಂಬಿದ ಗ್ಯಾಸ್ ಸಿಲಿಂಡರ್ ನ್ನು ರಸ್ತೆಯ ಮದ್ಯೆ ದಲ್ಲಿ ಎತ್ತಿಹಾಕಿ ಸ್ಪೋಟಿಸಲು ಮುಂದಾಗಿದ್ದಾನೆ. ಭದ್ರಾವತಿಯ ಹೊಸಮನೆ ಕಾಲೋನಿಯ ಎನ್ಎಂಸಿ ಮೂರನೇ ತಿರುವಿನಲ್ಲಿ ಈ ಘಟನೆ ನಡೆದಿದ್ದು, https://ainlivenews.com/attention-students-you-will-get-scholarship-up-to-rs-25000-per-year-from-lic/ ತಡವಾಗಿ ಬೆಳಕಿಗೆ ಬಂದಿದೆ. ಮಂಜ ಎಂಬಾತ ಪಾನಮತ್ತನಾಗಿ ಕುಡಿದು ಸಿಲಿಂಡರ್ ಸ್ಪೋಟಿಸಲು ಮುಂದಾದ ಯುವಕನಾಗಿದ್ದಾವೆ. ಮಂಜ ರಾತ್ರಿ ಸಂದರ್ಭದಲ್ಲಿ ಅವಾಚ್ಯವಾಗಿ ಬೈಯುತ್ತಾ ಗ್ಯಾಸ್ ಸಿಲಿಂಡರ್ ಎತ್ತಿಹಾಕುವ ದೃಷ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಈತ ಗ್ಯಾಸ್ ಸಿಲಿಂಡರ್ ಎತ್ತಿ ಹಾಕುತ್ತಿದ್ದ ಸಂದರ್ಭದಲ್ಲಿ ಜನರು ಆತಂಕದಿಂದ ಮನೆಯಿಂದ ಹೊರಬಂದಿದ್ದಾರೆ. ಹೆಣ್ಣು ಮಕ್ಕಳಾದಿಯಾಗಿ ಹೊರಬಂದ ಸಂದರ್ಭದಲ್ಲಿ ಈತ ಬೈಯ್ಯುತ್ತಿದ್ದ ಮಾತುಗಳನ್ನು ಅವರು ಕೇಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.…

Read More

ವಿಶಾಖಪಟ್ಟಣಂ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೇ ದ್ವಿಶತಕ ಸಿಡಿಸಿದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್‌ (England) ತಂಡಕ್ಕೆ ಮುಳುವಾಗಿದ್ದಾರೆ. ಈ ಬಗ್ಗೆ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕೆಲ್‌ ವಾನ್‌ (Michael Vaughan) ಅವರೇ ಖುದ್ದಾಗಿ ಹೇಳಿಕೊಂಡಿದ್ದಾರೆ. ಪಾಡ್‌ಕಾಸ್ಟ್‌ ಸಂದರ್ಶನವೊಂದರಲ್ಲಿ ಮಾತನಾಡಿರುವ ಮೈಕೆಲ್‌ ವಾನ್‌, ಶುಭಮನ್‌ ಗಿಲ್‌, ರೋಹಿತ್‌ ಶರ್ಮಾ ಅಲ್ಲ, ಯಶಸ್ವಿ ಜೈಸ್ವಾಲ್‌ (Yashasvi Jaiswal) ಇಂಗ್ಲೆಂಡ್‌ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದ್ದಾರೆ. ನಂಬಲಸಾಧ್ಯವಾದ ಆಟಗಾರ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.  https://ainlivenews.com/attention-students-you-will-get-scholarship-up-to-rs-25000-per-year-from-lic/ 2023ರ ಐಪಿಎಲ್‌ (IPL) ಟೂರ್ನಿಯಲ್ಲಿ ಯಶಸ್ವಿ ಜೈಸ್ವಾಲ್‌ ಅವರನ್ನು ನಾನು ಭೇಟಿಯಾಗಿದ್ದೆ. ಮರುದಿನವೇ ಅವರು ಮುಂಬೈ ಇಂಡಿಯನ್ಸ್‌ ವಿರುದ್ಧ ಚೊಚ್ಚಲ ಐಪಿಎಲ್‌ ಶತಕ (62 ಎಸೆತಗಳಲ್ಲಿ 124 ರನ್‌) ಸಿಡಿಸಿದ್ದರು. ಇದೀಗ ವಿಶ್ವದ ಅತ್ಯುತ್ತಮ ತಂಡದ ವಿರುದ್ಧ ದ್ವಿಶತಕ ಸಿಡಿಸಿದ್ದಾರೆ. ಈತ ಇಂಗ್ಲೆಂಡ್‌ ತಂಡಕ್ಕೆ ಸಮಸ್ಯೆ ಎಂದು ನಾನು ಖುದ್ದಾಗಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

Read More

ವಿಜಯಪುರ:- ಸಿಂದಗಿ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ಕು ಜನ ಬೈಕ್ ಕಳ್ಳರನ್ನು ಬಂಧಿಸಿ, ಲಕ್ಷಾಂತರ ಮೌಲ್ಯದ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬಸವರಾಜ ಹುಣಸಿಗಿಡದ, ಹುಲುಗಪ್ಪ ಕೂಕಲೋರ, ಕೊಂಡಯ್ಯ ಪಾರ್ವತಿದೊಡ್ಡಿ, ರವಿಕುಮಾರ ಪಾರ್ವತಿದೊಡ್ಡಿ ಬಂಧಿತ ಆರೋಪಿಗಳು. ಆರೋಪಿಗಳು ಯಂಕಂಚಿ ಬೈಪಾಸ್ ಬಳಿ ಸಂಶಯಾಸ್ಪದವಾಗಿ ಎರಡು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ. ಬಳಿಕ ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಸತ್ಯಾಂಶ ಹೊರ ಬಂದಿದ್ದು, ವಿಜಯಪುರ, ಕಲಬುರಗಿ ಸೇರಿದಂತೆ ವಿವಿಧ ಕಡೆಗೆ ಕಳ್ಳತನ ಮಾಡಿದ 16 ಲಕ್ಷದ 65 ಸಾವಿರ ಮೌಲ್ಯದ 37 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಎಸ್ ಪಿ ಋಷಿಕೇಶ ಸೋನಾವಣೆ ಹೇಳಿಕೆ ನೀಡಿದ್ದಾರೆ

Read More

ಬೆಂಗಳೂರು:- ಉಚಿತ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗುತ್ತಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧವಿದ್ದರೆ ಬಿಜೆಪಿ ನಾಯಕರು ಅದನ್ನು ಕಂತುಗಳಲ್ಲಿ ಹೇಳುವುದನ್ನು ಬಿಟ್ಟು ಒಂದೇ ಬಾರಿ ನೇರವಾಗಿ, ಸ್ಪಷ್ಟವಾಗಿ ಹೇಳಿಬಿಡಬೇಕು. ಅದೇ ರೀತಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಜಾರಿಯಲ್ಲಿರುವ ಎಲ್ಲ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಾಗಿ ಆ ರಾಜ್ಯಗಳಲ್ಲಿ ಘೋಷಣೆ ಮಾಡಬೇಕು. ಈ ಮೂಲಕ ತಮ್ಮ ದಮ್ಮು, ತಾಕತ್ತು ತೋರಿಸಬೇಕು. ಆಗಾಗ ಗೊಣಗಾಡಿಕೊಂಡರೆ ಏನು ಫಲ? ಇದೀಗ ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ‘ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಿದೆ’ ಎಂದು ನಮ್ಮ ಸರ್ಕಾರದ ಬಗ್ಗೆ ಇರುವ ಈರ್ಷ್ಯೆಯನ್ನು ಹೊರಹಾಕಿದ್ದಾರೆ. ಇದು ಅಮಿತ್ ಶಾ ಅವರ ಖಚಿತ ಅಭಿಪ್ರಾಯವಾಗಿದ್ದರೆ ಅವರು ನನ್ನ ಜೊತೆ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಳ್ಳಲಿ. ಗ್ಯಾರಂಟಿ ಯೋಜನೆಗಳಿಂದ ನಮ್ಮ ಖಜಾನೆ ಬರಿದಾಗಿಲ್ಲ ಬದಲಿಗೆ ತೆರಿಗೆ ಹಂಚಿಕೆ ಮತ್ತು ಅನುದಾನ ವಿತರಣೆಯಲ್ಲಿ ಕೇಂದ್ರದಿಂದ…

Read More

ಬೆಂಗಳೂರು:- ರಾಜ್ಯಕ್ಕೆ ಭೇಟಿ ನೀಡಿರುವ ಅಮಿತ್ ಶಾ ಅವರು ಇಂದೇ ಪರಿಹಾರ ಘೋಷಣೆ ಮಾಡಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ ಗೃಹ ಸಚಿವರು ಘೋಷಣೆ ಮಾಡಿದರೆ ರೈತರ ಪರ ಕಾಳಜಿ ಇದೆ ಅಂತ ಒಪ್ಪುತ್ತೇವೆ. ಇಲ್ಲದಿದ್ದರೆ ರೈತರ ಪರ ಯಾವುದೇ ಕಾಳಜಿ ಇಲ್ಲ, ಕೇವಲ ನಾಟಕ ಮಾಡುತ್ತಿದ್ದಾರೆ ಅಂತ ಅನಿಸುತ್ತದೆ ಎಂದರು. ಬರ ಪೀಡಿತ ತಾಲೂಕುಗಳನ್ನು ಸೆಪ್ಟೆಂಬರ್ 13 ರಂದು ಘೋಷಣೆ ಮಾಡಿದ್ದು, 18,172 ಕೋಟಿ ಬರ ಪರಿಹಾರಕ್ಕಾಗಿ ಸೆಪ್ಟೆಂಬರ್ 23 ರಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಕೃಷಿ ಕಾರ್ಯದರ್ಶಿಯನ್ನೂ ಭೇಟಿ ಮಾಡಿದ್ದೇವೆ. ಡಿಸೆಂಬರ್​ನಲ್ಲಿ ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಮಾಡಿದ್ದೇವೆ. ಜನವರಿಯಲ್ಲೂ ಸಿದ್ದರಾಮಯ್ಯ ಭೇಟಿಯಾಗಿ ಮನವಿ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಸಭೆ ಮಾಡಿ ಯಾವ ತೀರ್ಮಾನವೂ ಕೈಗೊಂಡಿಲ್ಲ ಎಂದರು. ಕೇಂದ್ರ ಸರ್ಕಾರ ಎನ್​ಡಿಆರ್​ಎಫ್​ ಅಡಿ ಹಣ ಕೊಡುವುದು ವಿಳಂಬ ಆಗುತ್ತಿದೆ. ಕಳೆದ ವರ್ಷ ರೈತರಿಗೆ ಕೊಬೇಕಾದ ಹಣ ಲೂಟಿ ಆಗಿದೆ. ದುರುಪಯೋಗ ತಡೆಗಟ್ಟಲೂ…

Read More

ಚಾಮರಾಜನಗರ:- ಫೆಬ್ರವರಿಯಲ್ಲಿಯೇ ಬೇಸಿಗೆಯ ಬಿರುಬಿಸಿಲು ಇದ್ದು, ಬಿರುಬಿಸಿಲಿನ ಶಾಖ ತಾಳಲಾರದೆ ವನ್ಯಜೀಬಿಗಳು ಪರದಾಡುತ್ತಿವೆ. ಮರದ ನೆರಳು ಕೂಡ ಶಾಖದ ಗೂಡಾಗುತ್ತಿದೆ. ಹೀಗಾಗಿ ಹೈರಾಣಾದ ವನ್ಯಜೀವಿಗಳು ನೀರಿನತ್ತ ಪಯಣ ಬೆಳೆಸಿವೆ. ನೀರು ಕಂಡ ಕೂಡಲೆ ನೀರಿಗಿಳಿದು ತಣಿಸಿಕೊಳ್ಳುತ್ತಿವೆ. ಚಾಮರಾಜನಗರ ಜಿಲ್ಲೆಯ ಪಿಜಿ ಪಾಳ್ಯದ ಸಫಾರಿ ವಲಯದಲ್ಲಿ ಪ್ರವಾಸಿಗರಿಗೆ ಈ ದೃಶ್ಯ ಕಂಡು ಬಂದಿದೆ. ಬೇಸಿಗೆಯ ಬಿರುಬಿಸಿಲು ತಾಳಲಾರದೆ ಆನೆಗಳ ದಂಡು ನೀರಿಗಿಳಿದಿದೆ. ಪಿಜಿಪಾಳ್ಯದ ಸಫಾರಿ ಮಾರ್ಗದಲ್ಲಿ ವನ್ಯ ಜೀವಿಗಳು ನೀರಿರುವ ಕಡೆ ವಲಸೆ ಹೋಗುತ್ತಿದ್ದು, ಕಾಡಾನೆ ಮತ್ತು ಕಾಡೆಮ್ಮೆ ಸೇರಿ ಹಲವು ಪ್ರಾಣಿಗಳ ಬೇಸಿಗೆ ಸಂಚಾರ ಮಾಡುತ್ತಿದೆಸಫಾರಿ ವಿಕ್ಷಣೆಗೆ ಆಗಮಿಸಿದ್ದವರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Read More