Author: AIN Author

ನವದೆಹಲಿ: ಮರ್ಯಾದಾ ಪುರುಷೋತ್ತಮ್ ರಾಮನನ್ನು ನಾನು ಗೌರವಿಸುತ್ತೇನೆ, ಆದರೆ ನನ್ನ ಜನರು ನಾಥುರಾಮ್ ಗೋಡ್ಸೆಯನ್ನು ದ್ವೇಷಿಸುತ್ತಲೇ ಇರುತ್ತಾರೆ. ಮೋದಿ ಸರ್ಕಾರ ಒಂದು ಸಮುದಾಯದ ಸರ್ಕಾರವೇ ಅಥವಾ ಒಂದು ಧರ್ಮದ ಸರ್ಕಾರವೇ ಅಥವಾ ಇಡೀ ದೇಶದ ಎಲ್ಲಾ ಧರ್ಮಗಳನ್ನು ಅನುಸರಿಸುವ ಜನರ ಸರ್ಕಾರವೇ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.  ಸರ್ಕಾರಕ್ಕೆ ಯಾವುದಾದರೂ ಧರ್ಮವಿದೆಯೇ ಜನವರಿ 22 ರ ಸಂದೇಶವನ್ನು ನೀಡುವ ಮೂಲಕ, ಈ ಸರ್ಕಾರವು ಒಂದು ಧರ್ಮವು ಇನ್ನೊಂದು ಧರ್ಮದ ಅನುಯಾಯಿಗಳನ್ನು ಗೆದ್ದಿದೆ ಎಂದು ತೋರಿಸಲು ಬಯಸುತ್ತದೆಯೇ? ಇದಕ್ಕೆ ಸಂವಿಧಾನ ಅವಕಾಶ ನೀಡುತ್ತದೆಯೇ? ಎಂದು ವಾಗ್ದಾಳಿ ನಡೆಸಿದರು. https://ainlivenews.com/bcci-notice-to-give-rest-to-jaspreet-bumrah/ ನಮಗೆ 1949 ರಲ್ಲಿ ಮೋಸ, 1986 ರಲ್ಲಿ ಮೋಸ, 1992 ಮತ್ತು 2019 ರಲ್ಲಿ ನಾವು ಈ ಲೋಕಸಭೆಯಲ್ಲೂ ಮೋಸ ಹೋಗಿದ್ದೇವೆ. ಭಾರತದ ನಾಗರಿಕರಾಗಲು ಮುಸ್ಲಿಮರು ಯಾವಾಗಲೂ ಭಾರೀ ಬೆಲೆ ತೆರಬೇಕಾಗಿತ್ತು. ನಾನು ಬಾಬರ್, ಔರಂಗಜೇಬ್ ಅಥವಾ ಜಿನ್ನಾ ಅವರ ವಕ್ತಾರನೇ? ಮರ್ಯಾದಾ ಪುರುಷೋತ್ತಮ್ ರಾಮನನ್ನು ನಾನು ಗೌರವಿಸುತ್ತೇನೆ, ಆದರೆ ನನ್ನ…

Read More

ಕ್ಯಾನ್ಬೆರಾ: ಇಲ್ಲಿನ ಅಡಿಲೇಡ್ ಓವೆಲ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಆಸೀಸ್ ಸ್ಟಾರ್ ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್‌ (Glenn Maxwell) 120 ರನ್ ಸಿಡಿಸುವ ಮೂಲಕ 5 ಅಂತಾರಾಷ್ಟ್ರೀಯ ಟಿ20 (T20I Cricket) ಶತಕ ಸಿಡಿಸಿದ ವಿಶ್ವದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ 4 ಶತಕ ಸಿಡಿಸಿರುವ ಸೂರ್ಯಕುಮಾರ್ ಯಾದವ್‌ (Suryakumar Yadav) ಅವರ ದಾಖಲೆಯನ್ನ ಮುರಿದಿದ್ದಾರೆ. ಜೊತೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಶತಕ ದಾಖಲೆಯನ್ನು ಸರಿಗಟ್ಟಿದ್ದಾರೆ. ಇತ್ತೀಚೆಗೆ ಆಫ್ಘಾನಿಸ್ತಾನ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ 121 ರನ್ ಸಿಡಿಸುವ ಮೂಲಕ ತಮ್ಮ 5ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದ್ದರು.  https://ainlivenews.com/bcci-notice-to-give-rest-to-jaspreet-bumrah/ ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಆಸೀಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 241 ರನ್ ಬಾರಿಸಿತು. 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಗ್ಲೇನ್ ಮ್ಯಾಕ್ಸ್‌ವೆಲ್‌…

Read More

ನವದೆಹಲಿ: 17ನೇ ಲೋಕಸಭೆ ಅವಧಿಯಲ್ಲಿ ಉಭಯ ಸದನಗಳಲ್ಲಿ ಐದು ವರ್ಷಗಳ ಕಾಲ ಒಟ್ಟು 221 ಮಸೂದೆಗಳನ್ನು  ಅಂಗೀಕರಿಸಲಾಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. 17ನೇ ಲೋಕಸಭೆ  ಸಂಸತ್ ಕಲಾಪದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, 5 ವರ್ಷಗಳಲ್ಲಿ 545 ಸಭೆಗಳಲ್ಲಿ ಸಕ್ರೀಯವಾಗಿ ಭಾಗಿಯಾಗಿದೆ ಹೇಳಿದ್ದಾರೆ. 5 ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಸಮರ್ಥ ನಾಯಕತ್ವದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುವ ಸುಯೋಗಕ್ಕಾಗಿ ಕೃತಜ್ಞನಾಗಿರುತ್ತೇನೆ ಎಂದರು. https://ainlivenews.com/pakistan-election-result-would-not-have-been-delayed-if-evm-had-been-used-president-arif-alvi/ ಕಳೆದ 5 ವರ್ಷಗಳಲ್ಲಿ ಉಭಯ ಸದನಗಳ ವ್ಯವಹಾರಕ್ಕೆ ಕೊಡುಗೆ ನೀಡಿ, 545 ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಪ್ರತಿಯೊಬ್ಬ ಸದಸ್ಯರು ಮತ್ತು ರಾಜಕೀಯ ಪಕ್ಷಗಳಿಗೆ ಜೋಶಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಉಭಯ ಸದನಗಳಿಂದ ಒಟ್ಟು 221 ಮಸೂದೆಗಳು ಅಂಗೀಕರಿಸಲ್ಪಟ್ಟಿವೆ ಮತ್ತು ಕಾಯ್ದೆಗಳಾಗಿ ಮಾರ್ಪಟ್ಟಿವೆ ಎಂದ ವಿವರಿಸಿದರು.

Read More

ಬೆಂಗಳೂರು: ನಾಳೆಯಿಂದ ರಾಜ್ಯದ ಬಜೆಟ್ ಅಧಿವೇಶನ ಪ್ರಾರಂಭವಾಗುತ್ತಿದೆ. ನಾಳೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಫೆ.16ರಂದು ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಹಲವು ವಿಧೇಯಕಗಳು ಮಂಡನೆಯಾಗಲಿದ್ದು ಇದರ ಜೊತೆಗೆ ಈ ಬಾರಿಯ ಅಧಿವೇಶನದಲ್ಲಿ ಕಾಂಗ್ರೆಸ್- ಮೈತ್ರಿ ನಾಯಕರ ಹೋರಾಟಗಳು ಕೂಡ ನಡೆಯಲಿವೆ.. ರಾಜ್ಯದಲ್ಲಿ ನಾಳೆಯಿಂದ ಬಜೆಟ್ ಅಧಿವೇಶನ ಪ್ರಾರಂಭವಾಗ್ತಾ ಇದೆ. ಲೋಕಸಭೆ ಚುನಾವಣೆಗೆ ಹೊತ್ತಲ್ಲೇ ಬಜೆಟ್ ಅಧಿವೇಶ ಇರೋದ್ರಿಂದ ಈ ಬಾರಿಯ ಬಜೆಡ್ ಮಹತ್ವ ಪಡೆದುಕೊಂಡಿದೆ. ಫೆಬ್ರವರಿ 16 ರಂದು ರಾಜ್ಯದ ಬಜೆಟ್ ಅನ್ನ ಸಿಎಂ ಸಿದ್ದರಾಮಯ್ಯ ಮಂಡಣೆ ಮಾಡಲಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ 15 ನೇ ಬಾರಿಯ ಬಜೆಟ್ ಮಂಡಣೆ ಇದಾಗಿರಲಿದ್ದು ಕರ್ನಾಟಕದ ಮಟ್ಟಿಗೆ ಇದೊಂದು ಹೊಸ ದಾಖಲೆ ಸಿದ್ದರಾಮಯ್ಯ ಅವರ ಪಾಲಿಗೆ ಬರಲಿದೆ. ಈ ಬಾರಿಯ ಬಜೆಟ್ ಅಧಿವೇಶನ ಚುನಾವಣೆ ಜೊತೆಗೆ ಪ್ರತಿಭಟನೆಗಳಿಂದಲೂ ಹೆಚ್ಚು ಮಹತ್ವ ಪಡೆಯುತ್ತಿದೆ. ಅತ್ತ ಅನುದಾನ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ಕೇಂದ್ರದ ವಿರುದ್ಧ ಶ್ವೇತ ಪತ್ರ…

Read More

ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ರಾಘವ ಚೈತನ್ಯರು ಪ್ರತಿಷಠಾಪನೆ ಮಾಡಿದ ಈಶ್ವರ ಲಿಂಗವಿದೆ. ಈ ಹಿಂದೆ ಕೋರ್ಟ್ ಇಲ್ಲಿ ಪೂಜೆಗೆ ಅನುಮತಿ ನೀಡಿದೆ. ಈ ಜಾಗದಲ್ಲಿ ನಾವು ಶಿವರಾತ್ರಿ ದಿನ ಗುದ್ದಲಿ ಪೂಜೆ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ. ನಗರದಲ್ಲಿ (Kalaburagi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಮ್ಮದೇ ಸ್ಥಾನ, ಮುಸ್ಲಿಂ ಸಮುದಾಯ ಅತಿಕ್ರಮಣ ಮಾಡಿಕೊಂಡು, ದರ್ಗಾ ಮಾಡಿ ಉರುಸ್ ನಡೆಸುತ್ತಿದ್ದಾರೆ. ಈ ಜಾಗದಲ್ಲಿ ಪೂಜೆಗೆ ಕೋರ್ಟ್ ಅನುಮತಿ ಕೊಟ್ಟಿದೆ. ನಾವು ಶಿವರಾತ್ರಿ ದಿನ ಇಲ್ಲಿ ಗುದ್ದಲಿ ಪೂಜೆ ನೆರವೇರಿಸುತ್ತೇವೆ ಎಂದು ಅವರು ಹೇಳಿದ್ದಾರೆ. https://ainlivenews.com/pakistan-election-result-would-not-have-been-delayed-if-evm-had-been-used-president-arif-alvi/ ಸಂಸದ ಡಿ.ಕೆ ಸುರೇಶ್ ಅವರ ದೇಶ ವಿಭಜನೆ ಹೇಳಿಕೆ ವಿಚಾರವಾಗಿ, ದೇಶ ತುಂಡು ಮಾಡೋದು ದೇಶ ದ್ರೋಹದ ಹೇಳಿಕೆಯಾಗಿದೆ. ದೇಶ ತುಂಡು ಮಾಡೋಕೆ ನಿಮಗೆ ಯಾರು ಹಕ್ಕು ಕೊಟ್ಟಿದ್ದಾರೆ? ಆರ್ಥಿಕತೆ ಹೆಸರಲ್ಲಿ ದೇಶ ತುಂಡು ಮಾಡೋದಾದ್ರೆ, ಸ್ವಾತಂತ್ರ್ಯ ಹೋರಾಟ ಯಾಕೆ ಮಾಡಬೇಕಾಗಿತ್ತು? ನೀವು…

Read More

ಬೆಂಗಳೂರು: ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಚುನಾವಣೆ ಇದ್ದಾಗ ರಾಜ್ಯಕ್ಕೆ ಬಂದೇ ಬರುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ. ಅಮಿತ್ ಶಾ ಅವರ ಮೈಸೂರು (Mysuru) ಪ್ರವಾಸ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಮಿತ್ ಶಾ ಚುನಾವಣೆ ಇದ್ದಾಗ ಬಂದೇ ಬರ್ತಾರೆ. ಪ್ರಧಾನಿಯದ್ದು ಇಷ್ಟರಲ್ಲೇ ಟಿಪಿ ಬರುತ್ತೆ. ಅವರು ಏನ್ ಮಾಡಬೇಕೋ ಮಾಡಲಿ, ನಾವೇನ್ ಮಾಡಬೇಕೋ ಮಾಡ್ತೀವಿ. https://ainlivenews.com/pakistan-election-result-would-not-have-been-delayed-if-evm-had-been-used-president-arif-alvi/ ಸಂದರ್ಭ ಬಂದಾಗ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡ್ತೀವಿ ಎಂದು ಹೇಳಿದ್ದಾರೆ. ನೂರು ನೋಟಿಸ್ ಕೊಟ್ಟರೂ ಹೆದರುವುದಿಲ್ಲ ಎಂಬ ಈಶ್ವರಪ್ಪ (Eshwarappa) ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಅವರನ್ನು ಹೆದರಿಸಲು ಯಾರೂ ಹೋಗಿಲ್ಲ. ಕಾನೂನಿನ ಪ್ರಕಾರ, ನೋಟೀಸ್ ಕೊಟ್ಟಿದ್ದೀವಿ. ಮೊದಲು ಅದಕ್ಕೆ ಸಮಜಾಯಿಷಿ ಕೊಡಲಿ. ಈಶ್ವರಪ್ಪ ಅವರು ಬಹಳ ದೊಡ್ಡವರು, ಹೆದರಿಸೋಕೆ ಆಗುತ್ತಾ? ಎಂದು ತಿರುಗೇಟು ನೀಡಿದ್ದಾರೆ. 

Read More

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವದಂತಿ, ಸುದ್ದಿಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು; ನಾನು ಯು ಟರ್ನ್ ಹೊಡೆಯುವ ಗಿರಾಕಿ ಅಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ಡಿಜಿಟಲ್ ಯೋಧ ರ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು. ನಾನು ಮಂಡ್ಯ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ. ನಾನು ಇದನ್ನು ಹಿಂದೆಯೂ ಹೇಳಿದ್ದೆ. ಅತ್ಯಂತ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದೇನೆ. ನಾನು ಯು ಟರ್ನ್ ಹೊಡೆಯುವ ಗಿರಾಕಿ ಅಲ್ಲ. 2019ರಲ್ಲಿ ನಾನು ಕ್ಷೇತ್ರದ ಅಭ್ಯರ್ಥಿ ಆಗಿದ್ದೆ, ಸೋತಿದ್ದೆ. ಈಗಲೂ ನನ್ನ ಸ್ಪರ್ಧೆಗೆ ಸಹಜವಾಗಿ ಮಂಡ್ಯ ಮುಖಂಡರ ಒತ್ತಾಯ ಇದೆ, ಕಾರ್ಯಕರ್ತರ ಪ್ರೀತಿ ಇದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು. ಕಳೆದ ನಾಲ್ಕು ದಿನಗಳಿಂದಲೂ ನಾನು ಈ ಬಗ್ಗೆ ಬರುತ್ತಿರುವ ಸುದ್ದಿ, ವದಂತಿಗಳನ್ನು ಗಮನಿಸುತ್ತಿದ್ದೇನೆ. ಆದರೆ, ನಾನು ಯು ಟರ್ನ್…

Read More

ನವದೆಹಲಿ: ಮುಂದಿನ 25 ವರ್ಷಗಳಲ್ಲಿ ‘ವಿಕಸಿತ ಭಾರತ’ದ ಕನಸು ನನಸಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಭರವಸೆ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ 25 ವರ್ಷಗಳು ನಮಗೆ ಅತ್ಯಂತ ನಿರ್ಣಾಯಕ. ರಾಜಕೀಯವನ್ನು ಒಂದೆಡೆ ಇರಿಸಿ, ನಮ್ಮ ರಾಷ್ಟ್ರದ ಆಶಯಗಳು ಈಗ ಮುಖ್ಯವಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತವು ತನ್ನ ವಿಕಸಿತ ಭಾರತದ ಕನಸನ್ನು ನನಸಾಗಿಸಲಿದೆ ಎಂದು ತಿಳಿಸಿದ್ದಾರೆ. ರಾಜಕೀಯ ವಿಚಾರಗಳನ್ನು ಬದಿಗಿಟ್ಟು, ನಮ್ಮ ರಾಷ್ಟ್ರದ ಆಶಯಗಳ ಈಡೇರಿಕೆ ಉದ್ದೇಶದಿಂದ ಕೆಲಸ ಮಾಡಬೇಕಿದೆ. ಭಾರತವು ಈ ವರ್ಷಗಳಲ್ಲಿ ತನ್ನ ಆಕಾಂಕ್ಷೆಗಳು ಮತ್ತು ನಿರ್ಣಯಗಳನ್ನು ಪೂರೈಸಲು ನಿರ್ಧರಿಸಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. https://ainlivenews.com/prakash-rai-is-the-father-of-darling-krishna/ ಚುನಾವಣೆಗಳು ಬಹಳ ದೂರವಿಲ್ಲ. ಕೆಲವರು ಆತಂಕಕ್ಕೊಳಗಾಗಬಹುದು. ಆದರೆ ಇದು ಪ್ರಜಾಪ್ರಭುತ್ವದ ಅತ್ಯಗತ್ಯ ಅಂಶವಾಗಿದೆ. ನಾವೆಲ್ಲರೂ ಇದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇವೆ. ನಮ್ಮ ಚುನಾವಣೆಗಳು ದೇಶದ ಹೆಮ್ಮೆಯನ್ನು ಹೆಚ್ಚಿಸುತ್ತವೆ. ಪ್ರಜಾಪ್ರಭುತ್ವ ಸಂಪ್ರದಾಯವನ್ನು ಅನುಸರಿಸುತ್ತವೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

Read More

ಮೈಸೂರು: ಅಯೋಧ್ಯೆಯಲ್ಲಿಸುತ್ತೂರಿನ ಶಾಖಾ ಮಠ ನಿರ್ಮಾಣ ಮಾಡಲು ಸ್ವಾಮೀಜಿ ತೀರ್ಮಾನ ಮಾಡಿದ್ದಾರೆ. ಇದಕ್ಕೆ ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ  ಅವರು ಹೇಳಿದ್ದಾರೆ. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊಟ್ಟಮೊದಲು ಜಗದ್ಗುರು ಪೂಜ್ಯ ಸ್ವಾಮೀಜಿಯವರಿಗೆ ನನ್ನ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ಈ ಮೊದಲು 24 ಮಠಾಧೀಶರು ಈ ಮಠದಲ್ಲಿ ಪೀಠಾಧಿಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನೆಲ್ಲರನ್ನು ನಾನು ಸ್ಮರಿಸುತ್ತೇನೆ. ಇದರ ಜೊತೆಗೆ ಕರ್ನಾಟಕದ ಈ ಪವಿತ್ರ ಮಣ್ಣಿನಲ್ಲಿ ನಿಂತು ನಾನು ಬಸವಣ್ಣನವರನ್ನು ನೆನೆಸುತ್ತೇನೆ. ಬಸವಣ್ಣನವರು ಕೇವಲ ಒಂದು ವರ್ಗಕ್ಕೆ ಅಲ್ಲ. ದೇಶದ ಹಾಗೂ ಜಗತ್ತಿನ ಕೋಟಿಕೋಟಿ ಜನಕ್ಕೆ ಪ್ರೇರಣೆ, ಭಕ್ತಿಯ ಭಾವನೆಯನ್ನು ತುಂಬಿದಂತಹ ಒಬ್ಬ ಮಹಾಪುರುಷರು. ಸುತ್ತೂರು ಮಠದ 24 ಮಠಾಧೀಶರು ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ. ಲಕ್ಷಾಂತರ ಜನರ ಮನಸ್ಸಲ್ಲಿ ಒಂದು ಬೆಳಕನ್ನು ಚೆಲ್ಲುವ ಕೆಲಸವನ್ನು ಮಾಡಿದ್ದಾರೆ. ಬಿಜೆಪಿ ಅವರ ಈ ಸೇವೆ ಹಾಗೂ ಕೊಡುಗೆಯನ್ನು ಸದಾ ಗುರುತಿಸುತ್ತದೆ ಎಂದರು. https://ainlivenews.com/prakash-rai-is-the-father-of-darling-krishna/ ನಾನು ಶನಿವಾರ…

Read More

ನೀವು ಹೊರಗಿನಿಂದ ಬಂದರೆ ಅಥವಾ ಸಾಕಷ್ಟು ದಣಿದಿದ್ದರೆ, ರಿಫ್ರೆಶ್ ಆಗಲು ಮನಸ್ಸಿನಲ್ಲಿ ಸ್ನಾನ ಮಾಡಲು ಯೋಚಿಸುವುದು ಅಗತ್ಯ. ಸ್ನಾನ ಮಾಡುವುದರಿಂದ ಮನಸ್ಸು ಹಗುರಾಗುತ್ತದೆ. ಇದು ಧೂಳು, ಕೀಟಾಣುಗಳು, ಕೊಳಕು ಇತ್ಯಾದಿಗಳನ್ನು ತೊಡೆದು ಹಾಕುವ ಮೂಲಕ ಸ್ವಚ್ಛ ಮತ್ತು ಆರಾಮದಾಯಕ ಭಾವನೆಯನ್ನು ಅನುಭವಿಸಲು ಸಹಾಯ ಮಾಡುತ್ತದೆ. https://ainlivenews.com/prakash-rai-is-the-father-of-darling-krishna/ ಸ್ನಾನ ಮಾಡುವುದರಿಂದ ದೇಹದ ಮೇಲಿನ ಬೆವರು ಮತ್ತು ಬ್ಯಾಕ್ಟೀರಿಯಾಗಳು ನಿವಾರಣೆಗೊಳ್ಳುತ್ತವೆ, ಇದನ್ನು ಸ್ವಚ್ಛಗೊಳಿಸದಿದ್ದರೆ ಚರ್ಮದ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಸ್ನಾನ ಮಾಡುವುದು ತುಂಬಾ ಪ್ರಯೋಜನಕಾರಿ, ಆದರೆ ಕೆಲವು ತಪ್ಪುಗಳು ಅದರ ಎಲ್ಲಾ ಪ್ರಯೋಜನಗಳನ್ನು ತೆಗೆದುಹಾಕಬಹುದು. ಹೆಚ್ಚಿನ ಜನರು ಪ್ರತಿದಿನ ಈ ತಪ್ಪುಗಳನ್ನು ಪುನರಾವರ್ತಿಸುತ್ತಾರೆ. ಆದ್ದರಿಂದ ಸ್ನಾನ ಮಾಡುವಾಗ ಮಾಡುವ ತಪ್ಪುಗಳ ಬಗ್ಗೆ ತಿಳಿಯೋಣ. ಸ್ನಾನ ಮಾಡಲು ಸಂಬಂಧಿಸಿದ ಕೆಲವು ತಪ್ಪುಗಳು ಕೆಲವರು ಪ್ರತಿದಿನ ಸ್ನಾನ ಮಾಡುವಾಗ ತಮ್ಮ ಕೂದಲನ್ನು ತೊಳೆಯುತ್ತಾರೆ, ಇದು ನಿಮ್ಮ ಕೂದಲನ್ನು ದುರ್ಬಲಗೊಳಿಸಬಹುದು. ವಾಸ್ತವವಾಗಿ, ನೈಸರ್ಗಿಕ ತೈಲ ನಮ್ಮ ತಲೆಯ ಚರ್ಮದ ಮೇಲೆ ಇರುತ್ತದೆ. ಇದು ಕೂದಲಿಗೆ ಪೋಷಣೆ ಮತ್ತು ರಕ್ಷಣೆಯನ್ನು ಒದಗಿಸುತ್ತದೆ. ಪ್ರತಿದಿನ ಕೂದಲನ್ನು…

Read More