ನವದೆಹಲಿ: ಮರ್ಯಾದಾ ಪುರುಷೋತ್ತಮ್ ರಾಮನನ್ನು ನಾನು ಗೌರವಿಸುತ್ತೇನೆ, ಆದರೆ ನನ್ನ ಜನರು ನಾಥುರಾಮ್ ಗೋಡ್ಸೆಯನ್ನು ದ್ವೇಷಿಸುತ್ತಲೇ ಇರುತ್ತಾರೆ. ಮೋದಿ ಸರ್ಕಾರ ಒಂದು ಸಮುದಾಯದ ಸರ್ಕಾರವೇ ಅಥವಾ ಒಂದು ಧರ್ಮದ ಸರ್ಕಾರವೇ ಅಥವಾ ಇಡೀ ದೇಶದ ಎಲ್ಲಾ ಧರ್ಮಗಳನ್ನು ಅನುಸರಿಸುವ ಜನರ ಸರ್ಕಾರವೇ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಸರ್ಕಾರಕ್ಕೆ ಯಾವುದಾದರೂ ಧರ್ಮವಿದೆಯೇ ಜನವರಿ 22 ರ ಸಂದೇಶವನ್ನು ನೀಡುವ ಮೂಲಕ, ಈ ಸರ್ಕಾರವು ಒಂದು ಧರ್ಮವು ಇನ್ನೊಂದು ಧರ್ಮದ ಅನುಯಾಯಿಗಳನ್ನು ಗೆದ್ದಿದೆ ಎಂದು ತೋರಿಸಲು ಬಯಸುತ್ತದೆಯೇ? ಇದಕ್ಕೆ ಸಂವಿಧಾನ ಅವಕಾಶ ನೀಡುತ್ತದೆಯೇ? ಎಂದು ವಾಗ್ದಾಳಿ ನಡೆಸಿದರು.
ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾಗೆ ರೆಸ್ಟ್ ನೀಡುವಂತೆ BCCI ಖಡಕ್ ಸೂಚನೆ..!
ನಮಗೆ 1949 ರಲ್ಲಿ ಮೋಸ, 1986 ರಲ್ಲಿ ಮೋಸ, 1992 ಮತ್ತು 2019 ರಲ್ಲಿ ನಾವು ಈ ಲೋಕಸಭೆಯಲ್ಲೂ ಮೋಸ ಹೋಗಿದ್ದೇವೆ. ಭಾರತದ ನಾಗರಿಕರಾಗಲು ಮುಸ್ಲಿಮರು ಯಾವಾಗಲೂ ಭಾರೀ ಬೆಲೆ ತೆರಬೇಕಾಗಿತ್ತು. ನಾನು ಬಾಬರ್, ಔರಂಗಜೇಬ್ ಅಥವಾ ಜಿನ್ನಾ ಅವರ ವಕ್ತಾರನೇ? ಮರ್ಯಾದಾ ಪುರುಷೋತ್ತಮ್ ರಾಮನನ್ನು ನಾನು ಗೌರವಿಸುತ್ತೇನೆ, ಆದರೆ ನನ್ನ ಜನರು ನಾಥೂರಾಮ್ ಗೋಡ್ಸೆಯನ್ನು ದ್ವೇಷಿಸುತ್ತಾರೆ, ರಾಮನನ್ನು ಪ್ರೀತಿಸುವ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದರು ಎಂದರು.