Author: AIN Author

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತ ಹೊಂದಿ ಮೊದಲ ಮೇಯರ ಉಪಮೇಯರ ಅಧಿಕಾರದ‌‌ ನಂತರ ಎರಡನೆ ಅವಧಿಯ ಮೇಯರ ಉಪಮೇಯರ ಚುನಾವಣೆ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಅಧೀಕೃತ ಅಭ್ಯರ್ಥಿಯಾಗಿ ವಾರ್ಡ ಸಂಖ್ಯೆ 54ರಿಂದ ಆಯ್ಕೆಯಾಗಿದ್ದ ಪಾಲಿಕೆ ಸದಸ್ಯರು ಸರಸ್ವತಿ ವಿನಾಯಕ ಧೋಂಗಡಿಯವರು ಪಕ್ಷ ಜಾರಿ ಮಾಡಿದ ವಿಪ್ ಉಲ್ಲಂಘಿಸಿ ಮೇಯರ ಉಪಮೇಯರ ಚುನಾವಣೆ ಸಂದರ್ಭದಲ್ಲಿ ಭಾಗವಹಿಸದೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರು . ಸದರಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರು ಸಂಜಯ ಕಪಟಕರ ಅವರು ಪ್ರಾದೇಶಿಕ ಆಯುಕ್ತರಿಗೆ ಲಿಖಿತ ದೂರು ನೀಡಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಪಾಲಿಕೆ ಸದಸ್ಯರು ಸರಸ್ವತಿ ವಿನಾಯಕ ಧೋಂಗಡಿ ವಿರುದ್ದ ಕ್ರಮ ಜರುಗಿಸಲು ಆಗ್ರಹಿಸಿದ್ದರು.ಉನ್ನತ ತನಿಖೆ‌ನಡೆಸಿದ ಪ್ರಾದೇಶಿಕ ಆಯುಕ್ತರು, ಎಸ ಬಿ ಶೆಟ್ಟೆಣ್ಣವರ ಇಂದು ಆದೇಶ ನೀಡಿ ಕರ್ನಾಟಕ ಸ್ಥಳಿಯ ಪ್ರಾಧಿಕಾರದ ಪಕ್ಷಾಂತರ ಕಾಯ್ದೆಯಡಿ ಪಾಲಿಕೆ ಸದಸ್ಯರು ಸರಸ್ವತಿ ವಿನಾಯಕ ಧೋಂಗಡಿಯವರು ಪಕ್ಷ…

Read More

ಹುಬ್ಬಳ್ಳಿ: ಫೆಬ್ರವರಿ 4 ರಂದು ಕಲಘಟಗಿ ಪೊಲೀಸರು ಇಸ್ಪೀಟ್‌ ಆಟ ಆಡುತ್ತಿದ್ದ 11 ಜನರನ್ನು ಬಂಧಿಸಿದ್ದರು. ಇವರೆಲ್ಲಾ ಹೊಲದಲ್ಲಿ ಇಸ್ಪೀಟ್‌ ಆಡುವಾಗ ಏಕಾಏಕಿ ದಾಳಿಮಾಡಿದ ಪೊಲೀಸರು, ಅವರನ್ನು ಬಂಧಿಸಿದ್ದಾರೆ. ಬಳಿಕ ಅವರನ್ನು ಮನಬಂದಂತೆ ಥಳಿಸಿ, ಅವರಿಂದ ಸುಮಾರು 49 ಸಾವಿರ ರೂಪಾಯಿ ಹಣವನ್ನು ಕಸಿದುಕೊಳ್ತಾರೆ. ನಿಮ್ಮನ್ನು ಬಿಟ್ಟು ಕಳಿಸಬೇಕು ಎಂದ್ರೆ ಹಣಕೊಡಿ ಎಂದು ಪೊಲೀಸರು ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಾಂತೇಶ್‌ ಎಂಬುವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗ್ತಿದೆ. ಫೋನ್‌ ಪೇಮೂಲಕ ಹಣ ಹಾಕಿಸಿಕೊಂಡಿದ್ದು, ಕೊಡುವುದು ತಡವಾದ ಹಿನ್ನೆಲೆ ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲೇ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಹಲ್ಲೆಗೊಳಗಾದ ಉಮೇಶ್ ಕೊರವಾರ ಈ ಸಂಬಂಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇನ್ನೂ ಆರೋಪಿ ಉಮೇಶ್‌ ಮಾನವ ಹಕ್ಕು ಆಯೋಗಕ್ಕೆ ಪೊಲೀಸರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

Read More

ಹುಬ್ಬಳ್ಳಿ;ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಮುಂದೆ ನಡೆಯಬಹುದಾದ ದೊಡ್ಡ ದುರಂತವೊಂದು ಕಿ ಮ್ಯಾನ್ ಸಮಯಪ್ರಜ್ಞೆಯಿಂದ ತಪ್ಪಿರುವ ನಡೆದಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ರೈಲು ನಿಲ್ದಾಣದ ಸಮೀಪ ಪೆಟ್ರೋಲ್, ಡಿಸೇಲ್ ತುಂಬಿಕೊಂಡು ಹೊರಟಿದ್ದ ದೇಸೂರು ಬಿಟಿಪಿಎನ್ ರೈಲಿನಲ್ಲಿ ಏಕಾಏಕಿ ರೈಲ್ವೆ ಗಾಲಿಯ ಎಕ್ಸೆಲ್’ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಅಲ್ಲಿಯೇ ಇದ್ದ ಕೀ ಮ್ಯಾನ್ ಬಾಲಚಂದ್ರ ರೆಡ್ಡಿ ಎಂಬಾತರು ಗಮನಿಸಿದ್ದು, ಕೂಡಲೇ ರೈಲನ್ನು ನಿಲ್ಲಿಸಿ, ಹೊತ್ತಿಕೊಂಡ ಬೆಂಕಿಯನ್ನು ಹಾರಿಸಿದ್ದಾರೆ. ಇದರಿಂದಾಗಿ ಮುಂದೆ ನಡೆಯಬಹುದಾಗಿದ್ದ ದೊಡ್ಡ ಅನಾಹುತವೊಂದು ಕೀ ಮ್ಯಾನ್ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ.

Read More

ಮಂಡ್ಯ :- ಚುನಾವಣೆ ಪೂರ್ವದಲ್ಲಿ ಎಲ್ಲಾ ಪಕ್ಷಗಳು ಪ್ರಣಾಳಿಕೆಯನ್ನು ಬಿಡುಗಡೆ ಮಾಡ್ತಾರೆ ಆದರೆ, ನಾವು ಕೊಟ್ಟ ಎಲ್ಲಾ 5 ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಜಾರಿಗೆ ತಂದಿದ್ದೇವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಇಲಾಖೆಗಳ ಸೌಲಭ್ಯ ಬಗ್ಗೆ ಮಾಹಿತಿ ನೀಡುವ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕಳೆದ 8 ತಿಂಗಳಿಂದ ಜಿಲ್ಲೆಗೆ ಗ್ಯಾರಂಟಿ ಯೋಜನೆಯ ಜತೆಗೆ ಲೋಕೋಪಯೋಗಿ, ನೀರಾವರಿ ಸೇರಿದಂತೆ ಇನ್ನಿತರೆ ಇಲಾಖೆಗಳ ಮೂಲಕ ಅಭಿವೃದ್ಧಿಗೆ ಜಿಲ್ಲೆಗೆ 1000 ಕೋಟಿ ರೂ ಅನುದಾನ ನೀಡಿದೆ. 5 ಗ್ಯಾರಂಟಿ ಯೋಜನೆಗಳ ಮೂಲಕ ಮಾರ್ಚ್ ಅಂತ್ಯದವರೆಗೆ 56 ಸಾವಿರ ಕೋಟಿ ರೂ ಅನುದಾನವನ್ನು ಸಾರ್ವಜನಿಕರಿಗೆ ನೀಡಿದೆ. ಮುಂದಿನ ಒಂದು ವರ್ಷಕ್ಕೆ 69 ಸಾವಿರ ಕೋಟಿ ಅನುದಾನ ಬೇಕಾಗುತ್ತದೆ…

Read More

ನವದೆಹಲಿ: ರಾಜ್ಯಸಭೆ ಚುನಾವಣೆಗೆ ಇದೀಗ BJP ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿದ್ದು, ಮಾಜಿ ಸಚಿವ ಸೋಮಣ್ಣಗೆ ರಾಜ್ಯಸಭೆ ಟಿಕೆಟ್​ ಕೈತಪ್ಪಿದೆ. ವಿ.ಸೋಮಣ್ಣ ಅವರು ಟಿಕೆಟ್​ ಆಕಾಂಕ್ಷಿಯಾಗಿದ್ದರು. ಅವರ ಬದಲು ನಾರಾಯಣ ಭಾಂಡಗೆಗೆ ಟಿಕೆಟ್​​ ನೀಡಲಾಗಿದೆ. ಜೊತೆಗೆ ಬಿಹಾರದಲ್ಲಿ ಡಾ.ಧರ್ಮಶೀಲಾ ಗುಪ್ತಾ ಹಾಗೂ ಡಾ.ಭೀಮಸಿಂಗ್​ ಸೇರಿ ಇಬ್ಬರಿಗೆ ರಾಜ್ಯಸಭೆ ಟಿಕೆಟ್ ನೀಡಲಾಗಿದೆ. ಇನ್ನುಳಿದಂತೆ ಛತ್ತೀಸ್​ಗಢದಲ್ಲಿ ರಾಜಾ ದೇವೇಂದ್ರಪ್ರತಾಪ್​ ಸಿಂಗ್​, ಹರಿಯಾಣದಲ್ಲಿ ಸುಭಾಷ್​ ಬಾರ್ಲಾಗೆ ಹಾಗೂ ಉತ್ತರ ಪ್ರದೇಶದಲ್ಲಿ ಆರ್​.ಪಿ.ಎನ್​ ಸಿಂಗ್​ಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ 1.ಧರ್ಮಶೀಲಾ ಗುಪ್ತಾ: ಬಿಹಾರ 2.ಡಾ.ಭೀಮ್ ಸಿಂಗ್: ಬಿಹಾರ 3.ರಾಜಾ ದೇವೇಂದ್ರ ಪ್ರತಾಪ್ ಸಿಂಗ್: ಛತ್ತೀಸಗಢ್ 4.ಸುಭಾಷ್ ಬರಲಾ: ಹರಿಯಾಣ 5.ನಾರಾಯಾಣ ಭಾಂಡಗೆ: ಕರ್ನಾಟಕ 6.ಆರ್​​ಪಿಎನ್​​​ ಸಿಂಗ್: ಉತ್ತರ ಪ್ರದೇಶ 7.ಸುಭಾಂಶು ತ್ರಿವೇದಿ: ಉತ್ತರ ಪ್ರದೇಶ 8.ಚೌಧರಿ ತೇಜ್​ವೀರ್ ಸಿಂಗ್: ಉತ್ತರ ಪ್ರದೇಶ 9.ಸಾಧನಾ ಸಿಂಗ್: ಉತ್ತರ ಪ್ರದೇಶ 10.ಅಮರಪಾಲ್ ಮೌರ್ಯ: ಉತ್ತರ ಪ್ರದೇಶ 11.ಸಂಗೀತಾ ಬಲ್ವಂತ್: ಉತ್ತರ ಪ್ರದೇಶ 12.ನವೀನ್ ಜೈನ್: ಉತ್ತರ ಪ್ರದೇಶ 13.ಮಹೇಂದ್ರ…

Read More

ಕ್ಯಾನ್ಬೆರಾ:  ಆಸೀಸ್‌ (Australia Under19s) ತವರಿನಲ್ಲೇ ಸೇಡು ತೀರಿಸಿಕೊಳ್ಳುವ ಸದವಕಾಶ ಭಾರತಕ್ಕೆ ಬಂದೊದಗಿದೆ. ಆಸೀಸ್‌ ತಂಡವನ್ನು ಮಣಿಸಿ ವಿಶ್ವಕಪ್‌ ಸೋಲಿನ ಸೇಡು ತೀರಿಸಿಕೊಳ್ಳುವಂತೆ ಶತಕೋಟಿ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ. ಕ್ರೀಡಾಂಗಣದಲ್ಲೂ ನೆರೆದಿರುವ ಟೀಂ ಇಂಡಿಯಾ ಅಭಿಮಾನಿಗಳು ಆಸೀಸ್‌ಗೆ ತಿರುಗೇಟು ಕೊಡುವಂತೆ ಪೋಸ್ಟರ್‌ ಹಿಡಿದು ಆಟಗಾರರನ್ನು ಹುರಿದುಂಬಿಸುತ್ತಿದ್ದಾರೆ.  19 ವರ್ಷದೊಳಗಿನವರ ವಿಶ್ವಕಪ್‌ ಫೈನಲ್‌ (ICC Under-19 World Cup Final) ಪಂದ್ಯವು ಇಲ್ಲಿನ ಬೆನೋನಿಯಲ್ಲಿರುವ ವಿಲೋಮೂರ್ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 253 ರನ್‌ ಗಳಿಸಿ, ಭಾರತಕ್ಕೆ 254 ರನ್‌ಗಳ ಗುರಿ ನೀಡಿದೆ. https://ainlivenews.com/bcci-notice-to-give-rest-to-jaspreet-bumrah/ ಆಸೀಸ್‌ ಪರ ಹ್ಯಾರಿ ಡಿಕ್ಸನ್ 56 ಎಸೆತಗಳಲ್ಲಿ 42 ರನ್‌ ಗಳಿಸಿದ್ರೆ, ಹಗ್ ವೈಬ್ಜೆನ್ 48 ರನ್‌, ಹರ್ಜಾಸ್ ಸಿಂಗ್ 55 ರನ್‌ (3 ಬೌಂಡರಿ, 3 ಸಿಕ್ಸರ್‌), ರಿಯಾನ್ ಹಿಕ್ಸ್ 20 ರನ್‌, ರಾಫ್ ಮ್ಯಾಕ್‌ಮಿಲನ್ 2 ರನ್‌, ಚಾರ್ಲಿ ಆಂಡರ್ಸನ್…

Read More

ಕೋಲ್ಕತ್ತಾ: ಉತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ತೃಣಮೂಲ ಕಾಂಗ್ರೆಸ್ (TMC) ನಾಯಕ ಸಿದ್ದಿಕುಲ್ಲಾ ಚೌಧರಿ (Siddiqulla Chowdhury) ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಮಸೀದಿಯಲ್ಲಿ ಪೂಜೆಯನ್ನು ನಿಷೇಧಿಸುವಂತೆ ಕೋಲ್ಕತ್ತಾದಲ್ಲಿ ಜಮಿಯತ್ ಉಲೇಮಾ-ಎ-ಹಿಂದ್ ರ‍್ಯಾಲಿಯಲ್ಲಿ ಚೌಧರಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ವಾರಣಾಸಿಯ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡಿದೆ. ಇದು ಸಜಂಜಸವಲ್ಲ. ಯೋಗಿ ಆದಿತ್ಯನಾಥ್ (Yogi Adityanath) ಅವರು ಪಶ್ಚಿಮ ಬಂಗಾಳಕ್ಕೆ ಬಂದರೆ ನಾವು ಅವರನ್ನು ಸುತ್ತುವರಿಯುತ್ತೇವೆ ಎಂದು ಎಚ್ಚರಿಸಿದ್ದಾರೆ. https://ainlivenews.com/bcci-notice-to-give-rest-to-jaspreet-bumrah/ ಹಿಂದೂ ಆರಾಧಕರು ಬಲವಂತವಾಗಿ ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque) ಪೂಜೆ ಪ್ರಾರಂಭಿಸಿದ್ದಾರೆ. ಹೀಗಾಗಿ ಅವರು ತಕ್ಷಣವೇ ಅಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳ ಈ ಕ್ರಮಕ್ಕೆ ಏನಾದರೂ ಅರ್ಥ ಇದೆಯಾ ಎಂದು ಪ್ರಶ್ನಿಸಿದರು. ಅವರು ಬಂಗಾಳಕ್ಕೆ ಬಂದರೆ ಅವರನ್ನು ಹೊರಗೆ ಹೋಗಲು ನಾವು ಬಿಡಲ್ಲ ಎಂದು ಕಿಡಿಕಾರಿದರು. 

Read More

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಿಂಗಳಿಗೆ ರೂ. 15 ಸಾವಿರ ಪ್ರೋತ್ಸಾಹಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿರುವ ಆಶಾ ಕಾರ್ಯಕರ್ತೆಯರು, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಇದೇ ಪೆಬ್ರವರಿ 13 ಮತ್ತು 14ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ‘ವಿಧಾನಸೌಧ ಚಲೋ’ ಅಹೋರಾತ್ರಿ ಹೋರಾಟಹಮ್ಮಿಕೊಂಡಿದ್ದಾರೆ. ಇಲ್ಲಿದೆ ಬೇಡಿಕೆಗಳು ಪ್ರೋತ್ಸಾಹಧನಕ್ಕೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಆಗುತ್ತಿರುವ ವಂಚನೆ ತಡೆಯಲು ಆರ್.ಸಿ.ಎಚ್. ಪೋರ್ಟಲ್ ಅನ್ನು ವೇತನ ಪಾವತಿ ಪ್ರಕ್ರಿಯೆಯಿಂದ ಬೇರ್ಪಡಿಸಬೇಕು.  ಮೊಬೈಲ್ ಬಳಕೆ ಬಾರದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.  ಮೊಬೈಲ್ ಬಳಸಿ ದತ್ತಾಂಶ ಸಂಗ್ರಹಿಸುವವರಿಗೆ ಪ್ರೋತ್ಸಾಹಧನ ಒದಗಿಸಬೇಕು.   ಆರ್.ಸಿ.ಎಚ್. ಪೋರ್ಟಲ್‌ನಲ್ಲಿನ ವಿವಿಧ ಸಮಸ್ಯೆಗಳಿಂದಾಗಿ ಹಲವು ವರ್ಷಗಳಿಂದ ಬಾಕಿಯಿರುವ ಪ್ರೋತ್ಸಾಹಧನವನ್ನು ನೀಡಲು ಕೂಡಲೇ ಕ್ರಮಕೈಗೊಳ್ಳಬೇಕು‌  2019-21ರವರೆಗಿನ ಕೋವಿಡ್ ವಿಶೇಷ ಪ್ರೋತ್ಸಾಹಧನವನ್ನು ಪಾವತಿಸಬೇಕು.  ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಪಿಎಫ್, ಇಎಸ್‌ಐ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು.   60 ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ₹ 3…

Read More

ಬೆಂಗಳೂರು: ಬೆಂಗಳೂರಿನ ಕೆಲವು ಭಾಗಗಳಲ್ಲಿ ಫೆ. 16 ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ರಂದು ವಿಧಾನ ಪರಿಷತ್ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಫೆ. 14ರ ಪ್ರೇಮಿಗಳ ದಿನಾಚರಣೆಯಂದು ಮದ್ಯಪಾನಕ್ಕೆ ನಿಷೇಧ ಹೇರಲಾಗಿದ್ದು, ಈ ಬೆಳವಣಿಗೆಗೆ ಎಫ್ & ಬಿ ಉದ್ಯಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಫೆ. 16 ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ರಂದು ವಿಧಾನ ಪರಿಷತ್ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಫೆ. 14ರ ಸಂಜೆ 5ರಿಂದ ಫೆ. 16ರ ಮಧ್ಯರಾತ್ರಿವರೆಗೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. https://ainlivenews.com/bcci-notice-to-give-rest-to-jaspreet-bumrah/ ಈ ಬಗ್ಗೆ ಮಾತನಾಡಿದ ನ್ಯಾಷನಲ್ ರೆಸ್ಟೋರೆಂಟ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ, ಪಾಪ್ಯೂಲರ್ ನೈಬರ್ ಹುಡ್ ಪಬ್-1522 ಸಂಸ್ಥಾಪಕ ಚೇತರ್ ಹೆಗಡೆ ಅವರು ಪ್ರೇಮಿಗಳ ದಿನದಂದು ಹೆಚ್ಚೆಚ್ಚು ಜನರು ರೆಸ್ಟೋರೆಂಟ್ ಗಳಿಗೆ ಬರುತ್ತಾರೆ. ಇದಕ್ಕಾಗಿಯೇ ನಾವು ತಿಂಗಳಾನುಗಟ್ಟಲೆಯಿಂದ ಸಿದ್ಧತೆಗಳ ಆರಂಭಿಸಿದ್ದೆವು. ಆದರೆ, ಸರ್ಕಾರ ಈ ನಿರ್ಧಾರ…

Read More

ನವಿರಾದ ಪ್ರೇಮಕಥೆ ಜೂನಿ ಸಿನಿಮಾಗೆ ವಿಮರ್ಶಕರ ವಲಯದಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವೈಭವ್ ಮಹಾದೇವ್ ಸಾರಥ್ಯದ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಹಾಗೂ ರಿಷಿಕಾ ಜೋಡಿಯಾಗಿ ನಟಿಸಿದ್ದರು. ಟ್ರೇಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಜೂನಿ ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಮೊದಲ ದಿನ ಒಳ್ಳೆ ಓಪನಿಂಗ್ ಪಡೆದುಕೊಂಡ ಚಿತ್ರಕ್ಕೀಗ ಪ್ರೇಕ್ಷಕರ ಕೊರತೆ ಎದುರಾಗಿದೆ. ಈ ಬಗ್ಗೆ ವಿಡಿಯೋ ಮೂಲಕ ಬೇಸರ ವ್ಯಕ್ತಪಡಿಸಿರುವ ಪೃಥ್ವಿ, ದಿಯಾ ಸಿನಿಮಾವನ್ನು ಒಟಿಟಿಯಲ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ. ಅದೇ ತರ ಜೂನಿ ಸಿನಿಮಾವನ್ನು ಮಾಡಬೇಡಿ. ಥಿಯೇಟರ್ ನಲ್ಲೇ ಬಂದು ನೋಡಿ ಎಂದು ಪ್ರೇಕ್ಷಕರಿಗೆ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ಹೊಸಬರು ಹೊಸ ಪ್ರಯೋಗ ಮಾಡ್ತಾರೆ. ಅವರಿಗೆ ಬೆಂಬಲವಾಗಿ‌ ನಿಲ್ಲಬೇಕು. ಒಳ್ಳೆ ರಿವ್ಯೂ ಬಂದಾಗ ಜನ ಥಿಯೇಟರ್ ಗೆ ಬಂದು ಚಿತ್ರ ವೀಕ್ಷಿಸಬೇಕು. ಜೂನಿ ಈ ವರ್ಷದ ಅದ್ಭುತ ಸಿನಿಮಾಗಳಲ್ಲಿ ಒಂದು.‌ ಮಾನಸಿಕ ರೋಗ ಇರುವ ಹುಡುಗಿಯಾಗಿ ರಿಷಿಕಾ ಹಾಗೂ ಆಕೆಯನ್ನು ಹುಚ್ಚನಂತೆ ಪ್ರೀತಿಸುವ ಪಾರ್ಥನಾಗಿ ಪೃಥ್ವಿ ಅಮೋಘವಾಗಿ…

Read More