Author: AIN Author

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ (Foeticide) ಪ್ರಕರಣದಲ್ಲಿ ಸಿಐಡಿ (CID) ಬಹುತೇಕ ತನಿಖೆ ಮುಗಿಸಿದೆ. ಭ್ರೂಣ ಪತ್ತೆಗೆ ಬಳಸುತ್ತಿದ್ದ ಸ್ಕ್ಯಾನಿಂಗ್ ಯಂತ್ರಗಳ ಮೂಲ ಸಿಐಡಿ ತನಿಖೆಯಲ್ಲೂ ಕೂಡ ಪತ್ತೆಯಾಗಿಲ್ಲ. ಹೀಗಾಗಿ ಸರ್ಕಾರದಿಂದ ಅನುಮತಿ ಪಡೆದು ಆರೋಗ್ಯ ಇಲಾಖೆಗೆ (Health Department) ವರದಿ ಕೊಡಲು ಸಿದ್ಧತೆ ಮಾಡಿಕೊಂಡಿದೆ. https://ainlivenews.com/good-news-for-vehicle-owners-important-information-about-hsrp-number-plate-from-state-govt/ ಸ್ಕ್ಯಾನಿಂಗ್ ಯಂತ್ರಗಳ ಮಾರಾಟ ಹಾಗೂ ಬಳಕೆ ಅಕ್ರಮವಾಗಿದ್ದು, ಆದರೆ ಭ್ರೂಣ ಪತ್ತೆಗೆ ಬಳಸುತ್ತಿದ್ದ ಯಂತ್ರಗಳು ತಂದಿದ್ದು ಎಲ್ಲಿಂದ ಎಂಬುದೇ ನಿಗೂಢವಾಗಿದೆ. ಬೈಯಪ್ಪನಹಳ್ಳಿ ಪೊಲೀಸರು ಚೆನ್ನೈ ಮೂಲದ ವೈದ್ಯ ತುಳಸಿರಾಮ್, ಮೈಸೂರಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯ ಡಾ. ಚಂದನ್ ಬಲ್ಲಾಳ್, ಆತನ ಪತ್ನಿ ಮೀನಾ, ಮೈಸೂರಿನ ಖಾಸಗಿ ಆಸ್ಪತ್ರೆಯ ರಿಸೆಪ್ಶನಿಸ್ಟ್ ರಿಜ್ಮಾ, ಲ್ಯಾಬ್ ಟೆಕ್ನಿಶಿಯನ್ ನಿಸ್ಸಾರ್ ಎಂಬಾತನ ಬಂಧನ ಆರೋಪಿಗಳು ಮಂಡ್ಯದ ಆಲೆಮನೆಯಲ್ಲಿ ಸ್ಕ್ಯಾನಿಂಗ್ ಯಂತ್ರಗಳನ್ನಿಟ್ಟು ಭ್ರೂಣ ಪತ್ತೆ ಮಾಡಿ ಹತ್ಯೆ ಮಾಡಲಾಗುತ್ತಿತ್ತು. ಕೇವಲ ಮೂರೇ ತಿಂಗಳಲ್ಲಿ 245 ಭ್ರೂಣ ಹತ್ಯೆ ಮಾಡಿದ್ದು ಬೆಳಕಿಗೆ ಬಂದಿತ್ತು. ಒಂದೊಂದು…

Read More

ಲಕ್ನೋ: ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರ್-ಬಸ್ ನಡುವೆ ಡಿಕ್ಕಿಯಾಗಿ ಕನಿಷ್ಠ ಐವರು ಸಜೀವ ದಹನವಾಗಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಥುರಾದ ಮಹಾವನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ (Divider) ಡಿಕ್ಕಿ ಹೊಡೆದ ಕಾರು, ನಂತರ ಅದೇ ಮಾರ್ಗವಾಗಿ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. https://ainlivenews.com/attention-students-you-will-get-scholarship-up-to-rs-25000-per-year-from-lic/ ಈ ವೇಳೆ ಕಾರಿನಲ್ಲಿದ್ದ ಐವರು ಸುಟ್ಟು ಕರಕಲಾಗಿದ್ದಾರೆ. ಆದ್ರೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ (Accident) ಸಂಭವಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಎರಡೂ ವಾಹನಗಳು ಅಗ್ನಿಗೆ ಆಹುತಿಯಾಗಿವೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಅಪಘಾತಕ್ಕೀಡಾದ ಬಸ್ ಆಗ್ರಾದಿಂದ ನೋಯ್ಡಾಗೆ ತೆರಳುತ್ತಿತ್ತು.

Read More

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಸಿಲಿಕಾನ್‌ ಸಿಟಿಯ ಬೈಕ್‌ವೊಂದರ ಮೇಲೆ ಬರೋಬ್ಬರಿ 300 ಪ್ರಕರಣ ದಾಖಲಾಗಿದ್ದು, ಒಟ್ಟು 3 ಲಕ್ಷ ರೂ. ದಂಡ ಬಿದ್ದಿದೆ. ಬೆಂಗಳೂರಲ್ಲಿ ಅತಿ ಹೆಚ್ಚು ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್‌ ಇದು ಎಂಬ ಕುಖ್ಯಾತಿಯನ್ನೂ ಪಡೆದಿದೆ. ಬೈಕ್ ಬೆಲೆ 30,000 ರೂ., ಆದರೆ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿರೋದರಲ್ಲಿ ಬೆಂಗಳೂರಿಗೆ ಮೊದಲನೇಯವರು ಸುಧಾಮ ನಗರದ ವೆಂಕಟರಮನ್. ಇವರ, KA05KF7969 ನಂಬರಿನ ಆಕ್ಟಿವಾ ಹೊಂಡಾ ಬೈಕ್‌ನ ಮೇಲೆ ಬರೋಬ್ಬರಿ 300 ಕೇಸ್‌ಗಳು ದಾಖಲಾಗಿದೆ. https://ainlivenews.com/good-news-for-vehicle-owners-important-information-about-hsrp-number-plate-from-state-govt/ ಸಂಚಾರಿ ನಿಯಮ ಉಲ್ಲಂಘನೆ ಮಾಡಿ 300 ಕೇಸ್ ಹಾಕಿಸಿಕೊಂಡಿರುವ ವೆಂಕಟರಮನ್‌ ನಗರದಲ್ಲಿ ನಂಬರ್ ಒನ್ ಸಂಚಾರಿ ನಿಯಮ ಉಲ್ಲಂಘನೆ ಮಾಡಿರೋ ಅಪಖ್ಯಾತಿಗೆ ಒಳಾಗಿದ್ದಾರೆ. ಒನ್ ವೇ ಸಂಚಾರ, ಸಿಗ್ನಲ್ ಜಂಪ್, ‌ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾವಣೆ, ಫುಟ್‌ಪಾಥ್ ರೈಡಿಂಗ್.. ಪೊಲೀಸ್ ಮ್ಯಾನ್ಯೂವಲ್‌ನಲ್ಲಿ ಯಾವ್ಯಾವ ಕಾನೂನುಗಳು ಉಲ್ಲಂಘನೆ ಎಂದು ಎನಿಸಿಕೊಳ್ಳುತ್ತೋ ಅದೆಲ್ಲಾ ಈ ವೆಂಕಟರಾಮನ್ ಮಾಡಿಬಿಟ್ಟಿದ್ದಾರೆ. ಎಸ್.ಆರ್ ನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವೆಡೆ…

Read More

ಬೆಂಗಳೂರು: ಸಂಘಪರಿವಾರದ ಹೋರಾಟಗಾರ, ಬಿಜೆಪಿ ಕಟ್ಟಾಳು ನಾರಾಯಣಸಾ ಭಾಂಡಗೆ (Narayana Krishanasa Bhandage) ಅವರನ್ನ ಬಿಜೆಪಿ ಹೈಕಮಾಂಡ್ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿದೆ. ಬಿಜೆಪಿ ಘೋಷಣೆ ಬೆನ್ನಲ್ಲೇ ಅವರ ಮನೆಯಲ್ಲಿ ಸಂಭ್ರಮ‌ ಮನೆ‌ ಮಾಡಿದೆ. ರಾಜ್ಯಸಭಾ ಸ್ಥಾನಕ್ಕೆ ನನ್ನ ಹೆಸರು ಘೋಷಣೆಯಾಗುತ್ತೆ ಎಂದು ನಾನು ಭಾವಿಸಿರಲಿಲ್ಲ. ನನ್ನ ಹೋರಾಟ ಹಾಗೂ ಹಿರಿತನ ಮನಗಂಡು ಪಕ್ಷದ ಹಿರಿಯರು ನನಗೆ ರಾಜ್ಯಸಭಾ ಸ್ಥಾನ ನೀಡಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನ ಬೆಳೆಸಿ, ಗುರುತಿಸುವುದು ಬಿಜೆಪಿಯಲ್ಲಿ ಮಾತ್ರ ಎಂದು ನಾರಾಯಣಸಾ ಹೇಳಿದ್ದಾರೆ. https://ainlivenews.com/c-p-met-former-prime-minister-deve-gowda-yogeshwar/ ನಾರಾಯಣಸಾ ಭಾಂಡಗೆ ಸಂಘದಲ್ಲಿ 40 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ತಮ್ಮ 17 ನೇ ವಯಸ್ಸಿಗೆ ಆರ್‌ಎಸ್‌ಎಸ್‌ ಸೇರ್ಪಡೆಯಾಗಿದ್ದರು. ಬಾಗಲಕೋಟೆಯಲ್ಲಿ ಎಬಿವಿಪಿ ಸಂಸ್ಥಾಪಕ ಸದಸ್ಯರೂ ಆಗಿದ್ದರು. ವಿಶ್ವ ಹಿಂದೂ ಪರಿಷತ್‌ನಲ್ಲೂ ಸೇವೆ ಸಲ್ಲಿಸಿದ್ದಾರೆ. 1973 ರಲ್ಲಿ ಅಂದಿನ ಜನಸಂಘ ಸೇರ್ಪಡೆ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಇಂದಿರಾ ಗಾಂಧಿ ಅವರು ಆಲಮಟ್ಟಿ ಜಲಾಶಯಕ್ಕೆ ಭೇಟಿ ಕೊಟ್ಟಾಗ ಕಪ್ಪು ಬಾವುಟ ತೋರಿಸಿ ವಿರೋಧ ವ್ಯಕ್ತಪಡಿಸಿ ಬಂಧನಕ್ಕೆ ಒಳಗಾಗಿದ್ದರು. ರಾಮಮಂದಿರ…

Read More

ಹೊಸಕೋಟೆ: ತೋಟದಲ್ಲಿ ಕಟ್ಟಿಹಾಕಿದ್ದ ಪಿಟ್ ಬುಲ್ ನಾಯಿ ಮೇಲೆ ಚಿರತೆ ದಾಳಿ ಮಾಡಿ ಬಲಿ ಪಡೆದಿರುವ ಘಟನೆ ಹೊಸಕೋಟೆ ತಾಲೂಕಿನ ಹಲಸಿನಕಾಯಿಪುರ ಗ್ರಾಮದಲ್ಲಿ ನಡೆದಿದೆ. ರಾಮಾಂಜಿ ಅನ್ನೋ ರೈತನಿಗೆ ಸೇರಿದ ನಾಯಿ ಇದಾಗಿದ್ದು, ಬೀನ್ಸ್, https://ainlivenews.com/attention-students-you-will-get-scholarship-up-to-rs-25000-per-year-from-lic/ ಟೊಮ್ಯಾಟೊ ಬೆಳೆಗಳನ್ನು ಜಿಂಕೆಗಳು ತಿಂದು ಹಾಕುತ್ತವೆ ಎಂದು ತೋಟದಲ್ಲಿ ಪಿಟ್ ಬುಲ್ ನಾಯಿಯನ್ನ ಕಟ್ಟಿಹಾಕಲಾಗಿತ್ತು. ರಾತ್ರಿ ಗ್ರಾಮದ ಸಮೀಪದಲ್ಲೇ ಇರುವ ಅರಣ್ಯ ವಲಯದಿಂದ ಆಗಮಿಸಿರೋ ಚಿರತೆ ನಾಯಿಯನ್ನ ಬಲಿ ಪಡೆದು ಎಸ್ಕೆಪ್ ಆಗಿದೆ ಎನ್ನಲಾಗಿದೆ.ಸದ್ಯ ಚಿರತೆ ಹಾವಳಿಯಿಂದ ಗ್ರಾಮದ ರೈತರಲ್ಲಿ ಆತಂಕ ಮನೆಮಾಡಿದೆ.

Read More

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ 40% ಕಮಿಷನ್ ನಡೆಯುತ್ತಿದೆ ಕೆಂಪಣ್ಣ ಆರೋಪಕ್ಕೆ ಶಾಸಕ  ಜಿ‌ಟಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,   ಕಾಂಗ್ರೆಸ್ ನಲ್ಲಿ ಕಮಿಷನ್ ಇನ್ನೂ ಜಾಸ್ತಿ ಆಗ್ತಾ ಇದೆ ಕೆಂಪಣ್ಣ ಹಿರಿಯ ಮನುಷ್ಯ ದುಡಕಲ್ಲ 40% ಅಂತಾ ಹೇಳಿ ಬಿಜೆಪಿ ಸರ್ಕಾರವ್ನ ಸೋಲಿಸಿದ್ದೀರಿ 40% ಗಿಂತ ಜಾಸ್ತಿ ನಡೀತಾ ಇದೆ ಕೆಂಪಣ್ಣ ಬಾಯಿ ಮುಚ್ಚಿಕೊಳ್ಳಲ್ಲ ಯಾರೇ ಇರಲಿ ಕೆಂಪಣ್ಣ ನವ್ರು ಪ್ರಾಮಾಣಿಕವಾಗಿ ಮಾತನಾಡ್ತಾರೆ ಸಿಎಂ, ಡಿಸಿಎಂ ಯಾರೂ ಕೇಳ್ತಾ ಇಲ್ಲ ಎಂದರು. ಹಾಗೆ  ಅಮಿತ್ ಶಾ ಮೀಟಿಂಗ್ ವಿಚಾರ ಬಗ್ಗೆಯೂ ಮಾತನಾಡಿ ಮೈತ್ರಿ ವಿಚಾರ ಹೈಕಮಾಂಡ್ ತೀರ್ಮಾನ ಅಂತಾ ಹೇಳಿದ್ದಾರೆ ಸೀಟು ಹಂಚಿಕೆ ಬಗ್ಗೆ ಅಪಸ್ವರ ಎತ್ತಬಾರದು ಅಂತಾ ಹೇಳಿದ್ದಾರೆ ನಾವೆಲ್ಲರೂ  ಒಟ್ಟಾಗಿದ್ದೇವೆ ಬಿಎಸ್ ವೈ, ಅಶೋಕ್ ಸೇರಿ ಬಹಳ ಮಂದಿ ನಾಯಕರು ಬಿಜೆಪಿಯಲ್ಲಿದ್ದಾರೆ ದೇವೇಗೌಡ್ರು, ಕುಮಾರಸ್ವಾಮಿ ಜೆಡಿಎಸ್ ನಲ್ಲಿ ಅವ್ರು ತೀರ್ಮಾನ ಮಾಡ್ತಾರೆ ನಾವ್ಯಾರೂ ರೆಕಮಂಡ್ ಮಾಡೋಕೆ ಹೋಗಲ್ಲಎಂದರು.

Read More

ಹುಬ್ಬಳ್ಳಿ: ದೆಹಲಿಯ ಕಿಸಾನ್ ಮೋರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಕರ್ನಾಟಕದ 70 ಮಂದಿ ರೈತರನ್ನು ಮಧ್ಯ ಪ್ರದೇಶದ ಭೋಪಾಲ್​ನಲ್ಲಿ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. ಧಾರವಾಡ ಜಿಲ್ಲೆಯ 16 ರೈತರು ಕೂಡ ಇದರಲ್ಲಿ ಸೇರಿದ್ದಾರೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್  ನೇತೃತ್ವದಲ್ಲಿ ರೈತರು ದೆಹಲಿಗೆ ತೆರಳುತ್ತಿದ್ದರು. ದೆಹಲಿಯ‌ ಜಂತರ್​ ಮಂತರ್​​ನಲ್ಲಿ ಮಂಗಳವಾರ ಕಿಸಾನ್ ಮೋರ್ಚಾ ವತಿಯಿಂದ ಕಾರ್ಯಕ್ರಮ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗವಹಿಸುವುದಕ್ಕಾಗಿ ರಾಜ್ಯದ ರೈತರು ನಿಜಾಮುದ್ದೀನ್ ಎಕ್ಸಪ್ರೆಸ್ ರೈಲು ಮೂಲಕ ತೆರಳುತ್ತಿದ್ದರು. ಸದ್ಯ ವಶಕ್ಕೆ ಪಡೆಯಲಾಗಿರುವ ರೈತರನ್ನು ಕಲ್ಯಾಣ ಮಂಟಪವೊಂದರಲ್ಲಿ ಇರಿಸಿಕೊಳ್ಳಲಾಗಿದೆ. ಅಲ್ಲಿಯೇ ‘ರೈತ ವಿರೋಧಿ ಮಧ್ಯಪ್ರದೇಶ ಪೊಲೀಸರಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿ ರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ರೈತರ ಪ್ರತಿಭಟನೆ ಹಮ್ಮಿಕೊಂಡಿದೆ. ಪ್ರತಿಭಟನೆಗೆ 200ಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು ದೆಹಲಿಯಲ್ಲಿ…

Read More

ಬೆಂಗಳೂರು:  ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು ಬರೋಬ್ಬರಿ ಎಂಟೇ ತಿಂಗಳಿಗೆ 150 ಕೋಟಿ ದಾಟಿದ ನಾರಿಯರ ಸಂಚಾರ ಸರ್ಕಾರದ ಮೊದಲ ಗ್ಯಾರೆಂಟಿಗೆ 150 ಕೋಟಿ ಮಹಿಳೆಯರ ರೆಸ್ಪಾನ್ಸ್ ಜೂನ್ 11, 2023 ರಿಂದ 2924 ಫೆ, 11ವರೆಗೆ 150 ಮಹಿಳೆಯರ ಪ್ರಯಾಣ ನಾಲ್ಕೂ ನಿಗಮಗಳ ಬಸ್ ಗಳಲ್ಲಿ ಇಲ್ಲಿವರೆಗೆ ನೂರೈವತ್ತು ಕೋಟಿ ಮಹಿಳೆಯರಿಂದ ಶಕ್ತಿ ಪ್ರದರ್ಶನ KSRTC, BMTC ಸೇರಿ ಎಲ್ಲಾ ಸಾರಿಗೆ ನಿಗಮಗಳ ಮೂಲಕ ಲಕ್ಷ ಲಕ್ಷ ಮಹಿಳೆಯರ ಪ್ರಯಾಣ ಶಕ್ತಿ ಯೋಜನೆ ಜಾರಿಯಾಗಿ ಎಂಟು ತಿಂಗಳಿಗೆ 3599 ಕೋಟಿ ವ್ಯಯ ಪ್ರತಿ‌ನಿತ್ಯ‌ ಲಕ್ಷ ಲಕ್ಷ ಮಹಿಳಾ ಮಣಿಗಳ ಟ್ರಾವೆಲ್ ನಿಂದ 3599 ಕೋಟಿ ವ್ಯಯ ಕಳೆದ 244 ದಿನಗಳಲ್ಲಿ 150,81,70,976 ಮಹಿಳಾ ಪ್ರಯಾಣಿಕರು ಸಂಚಾರ ʼ 2023 ಜೂನ್ 11ರಿಂದ 2024 ಫೆ 11 ವರೆಗೆ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ ಕೆಎಸ್ ಆರ್ ಟಿಸಿ – 45,27,44,511 ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ-…

Read More

ಬಾಗಲಕೋಟೆ: ಅಯೋಧ್ಯೆ ರಾಮಮಂದಿರ ಮಂಡಲರಾಧನೆ ಪೂಜೆಗೆ ಜಿಲ್ಲೆಯ ಮುಧೋಳ ನಗರದ ಅರ್ಚಕರನ್ನು ಆಯ್ಕೆ ಮಾಡಲಾಗಿದೆ. ಮೂಲತಃ ಮುಧೋಳ ತಾಲೂಕಿನ ಮಾಚಕನೂರು ನಿವಾಸಿಯಾದ ಗುರುನಾಥ ಜೋಷಿ ಅವರು ರಾಮಮಂದಿರದ ಮಂಡಲರಾಧನೆ ಆಯ್ಕೆಯಾಗಿದ್ದಾರೆ. ಸದ್ಯ ಮೂಧೋಳ ನಗರದಲ್ಲಿ ವಾಸವಿದ್ದಾರೆ. ಇವರು ಮುರಗೋಡ ಚಿದಂಬರ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಯನ ಮಾಡಿದ್ದು, ಶುಕ್ಲ ಯಜುರ್ವೇದ ಅಧ್ಯಯನವನ್ನು ಮಾಡಿದ್ದಾರೆ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳ ಮೂಲಕ ಜೋಷಿಯವರು ಆಯ್ಕೆಯಾಗಿದ್ದಾರೆ.  ಜೋಷಿಯವರು ಪ್ರಸ್ತುತ ಮುಧೋಳ ನಗರದಲ್ಲಿ ಸದ್ಗುರು ಶ್ರೀ ಚಿದಂಬರ ವೈದಿಕ ಜ್ಯೋತಿಷ್ಯಾಲಯವನ್ನು ನಡೆಸುತ್ತಿದ್ದಾರೆ. https://ainlivenews.com/are-you-keeping-peeled-garlic-in-the-fridge-stop-now-and-avoid-the-risk/ ಮೂಲತಃ ಅರ್ಚಕ ವೃತ್ತಿ ಕುಟುಂಬದ ಹಿನ್ನೆಲೆ ಹೊಂದಿರುವ ಇವರು ಈ ಹಿಂದೆ ನಗರದ ಸಾಯಿ ಬಾಬಾ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಅಯೋಧ್ಯೆ ರಾಮಮಂದಿರದಲ್ಲಿ 48 ದಿನಗಳ ಕಾಲ ಮಂಡಲಾರಾಧನೆ ನಡೆಯಲಿದೆ. ಇದೇ ಫೆ.16 ಮತ್ತು 16 ರಂದು ನಡೆಯುವ ಎರಡು ದಿನಗಳ ಮಂಡಲಾರಾಧನೆ ಪೂಜೆಯಲ್ಲಿ ಗುರುನಾಥ ಜೋಷಿಯವರು ಭಾಗಿಯಾಗಲಿದ್ದಾರೆ.

Read More

ಬೆಂಗಳೂರು: ಕೆಲ ದಿನಗಳ ಹಿಂದೆ ಟೊಮೆಟೋ, ಈರುಳ್ಳಿ ಶತಕ ಬಾರಿಸಿದ್ದವು. ಆದರೆ ಇದೀಗ ಗ್ರಾಹಕರಿಗೆ ಬೆಳ್ಳುಳ್ಳಿ ಶಾಕ್ ಎದುರಾಗಿದೆ. ಬೆಳ್ಳುಳ್ಳಿ ಕೆ.ಜಿಗೆ ನೂರಲ್ಲ, ಇನ್ನೂರಲ್ಲ ಬರೋಬ್ಬರಿ ಅರ್ಧ ಸಾವಿರವಾಗಿದೆ. ಈ ವರ್ಷ ಸರಿಯಾಗಿ ಮಳೆಯಾಗದ ಕಾರಣ ಬೆಳ್ಳುಳ್ಳಿ ಬೆಲೆ ಸರಿಯಾಗಿ ಬಂದಿಲ್ಲ.ಅದರಿಂದ ಬೆಳ್ಳುಳ್ಳಿ ಬೆಳೆ ದುಬಾರಿಯಾಗಿದೆ. ಕೆ.ಜಿಗೆ ಹಾಪ್ ಕಾಮ್ಸ್‍ನಲ್ಲಿ 500ರ ಗಡಿ ದಾಟಿದೆ.  ಬಿಡಿಸಿದ ಬೆಳ್ಳುಳ್ಳಿ 540 ರೂ. ಆಗಿದ್ರೆ, ಉಂಡೆ ಬೆಳ್ಳುಳ್ಳಿಗೆ ಕೆ.ಜಿಗೆ 492 ರೂ. ಇದೆ. ಬೆಳ್ಳುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದರೆ ಈ ವರ್ಷ ಸರಿಯಾದ ಮಳೆಯಾಗಿಲ್ಲ. ಅಕಾಲಿಕ ಮಳೆ, ಹವಾಮಾನ ವೈಪರೀತ್ಯ ಹಿನ್ನೆಲೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇಷ್ಟು ದಿನಗಳ ಕಾಲ ನಾಸಿಕ್, ಪೂನಾದಿಂದ ಬರುತ್ತಿದ್ದ ಬೆಳ್ಳುಳ್ಳಿಯ ರಫ್ತು ಕಡಿಮೆಯಾಗಿದೆ. ರಾಜ್ಯದಲ್ಲಿ ಬೆಳಗಾವಿ ಭಾಗಗಳಿಂದ ಬರೋ ಬೆಳ್ಳುಳ್ಳಿ ಸಹ ಕಡಿಮೆಯಾಗಿದೆ. ಹೀಗಾಗಿ ಬೆಳ್ಳುಳ್ಳಿ ಒಗ್ಗರಣೆ ಘಾಟು ಜೋರಾಗಿದೆ. ಬೆಳ್ಳುಳ್ಳಿ ಹೊಸ ಬೆಳೆ ಬರೋವರೆಗೂ ರೇಟ್ ಕಡಿಮೆಯಾಗೋ ಸಾಧ್ಯತೆಯಿಲ್ಲ. ಇದ್ರಿಂದಾಗಿ ಗೃಹಿಣಿಯರು ಅರ್ಧ ಕೆ.ಜಿ, ಒಂದು ಕೆಜಿ ಕೊಳ್ಳೋ…

Read More