Author: AIN Author

ಮುಂಬೈ: ಮುಸ್ಲಿಂ ಸಮುದಾಯವು ತಮ್ಮ ಮನೆಗಳಲ್ಲಿ ಒಲೆಗಳನ್ನು ಉರಿಸುವ ಹಿಂದುತ್ವದ ಬ್ರ್ಯಾಂಡ್ ಅನ್ನು ಬೆಂಬಲಿಸುತ್ತದೆ. ಆದರೆ ಅವರ ಮನೆಗಳನ್ನು ಸುಡುವ ಬಿಜೆಪಿ ತಿರಸ್ಕರಿಸುತ್ತದೆ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ. ಮುಂಬೈನಲ್ಲಿ ಶಿವಸೇನಾ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ಮುಸ್ಲಿಂ ಸಮುದಾಯವು ನಮ್ಮೊಂದಿಗೆ ಬರುತ್ತಿದೆ. ನಾನು ಶಿವಸೇನೆಯ ಪಕ್ಷದ ಮುಖ್ಯಸ್ಥ ಮತ್ತು ‘ಹಿಂದೂ ಹೃದಯ ಸಾಮ್ರಾಟ್’ನ ಮಗ ಎಂದು ನಿಮಗೆ ತಿಳಿದಿಲ್ಲವೇ? ನಾನೇ ಕಟ್ಟಾ ಹಿಂದೂ ಆಗಿದ್ದು, ಯಾಕೆ ನನ್ನ ಜೊತೆ ಬರುತ್ತಿಯಾ ಅಂತ ನಾನು ಅವರನ್ನು (ಮುಸ್ಲಿಮರು) ಕೇಳುತ್ತೇನೆ. ನಿಮ್ಮ ಹಿಂದುತ್ವಕ್ಕೂ ಬಿಜೆಪಿಯ ಹಿಂದುತ್ವಕ್ಕೂ ವ್ಯತ್ಯಾಸವಿದೆ ಎಂದು ನಮಗೆ ತಿಳಿದಿದೆ. ನಿಮ್ಮ ಹಿಂದುತ್ವ ನಮ್ಮ ಮನೆಯಲ್ಲಿ ಒಲೆ ಉರಿಸುತ್ತದೆ. https://ainlivenews.com/kadidya-water-threat-to-bangalore-is-there-any-other-alternative-system-apart-from-kaveri/ ಬಿಜೆಪಿ ಮನೆ ಸುಟ್ಟು ಹಾಕುತ್ತದೆ ಎಂಬುದು ಮುಸ್ಲಿಮರ ಅಭಿಪ್ರಾಯ ಎಂದು ಠಾಕ್ರೆ ತಿಳಿಸಿದ್ದಾರೆ.  ರಾಮ ನಮ್ಮ ಹೃದಯದಲ್ಲಿದ್ದಾನೆ. ಇದು ನಮ್ಮ ಹಿಂದುತ್ವ ಮತ್ತು ನಾವು ದೇಶಭಕ್ತ ಹಿಂದೂಗಳು ಎಂದರಲ್ಲದೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಮುಂಬರುವ ಲೋಕಸಭೆ…

Read More

ಬೆಂಗಳೂರು: “ನಮ್ಮ ಸರ್ಕಾರ ಇಡೀ ದೇಶಕ್ಕೆ ಕರ್ನಾಟಕ ಮಾದರಿ ಯನ್ನು ಪರಿಚಯಿಸಿದೆ. ಬಸವಣ್ಮನವರ ನುಡಿದಂತೆ ನಡೆಯಬೇಕು ಎನ್ನುವ ತತ್ವದಂತೆ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. HSRP Number plate: ವಾಹನ ಮಾಲೀಕರಿಗೆ ಗುಡ್ ನ್ಯೂಸ್..! ರಾಜ್ಯ ಸರ್ಕಾರದಿಂದ HSRP ನಂಬರ್ ಪ್ಲೇಟ್ ಕುರಿತು ಮಹತ್ವದ ಮಾಹಿತಿ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ನಂತರ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಡಿಸಿಎಂ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು. “ನಾವು ಆರಂಭಿಸಿದ ಗ್ಯಾರಂಟಿಗಳನ್ನು ನೋಡಿ ಪ್ರಧಾನಿಗಳು ಈಗ ಅದನ್ನೇ ಪ್ರಚಾರಕ್ಕೆ ಬಳಸುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಯಾವುದೇ ಸರ್ಕಾರಗಳು ಮಾಡಲಾಗದನ್ನು ನಾವು ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಜಾರಿ ಮಾಡಿದ್ದೇವೆ. ಇದನ್ನು ವಿರೋಧ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ.” ‘ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಎಂದು ರಾಜ್ಯ ಸರ್ಕಾರದ ಘೋಷಣೆ ಕೇಸರಿ ಯಾರ ಮನೆಯ ಆಸ್ತಿಯಲ್ಲ: ಬಿಜೆಪಿ ನಾಯಕರು ಕೇಸರಿ ಶಾಲು ಧರಿಸಿ ಸದನಕ್ಕೆ ಬಂದ ಬಗ್ಗೆ ಕೇಳಿದಾಗ,…

Read More

ಬೆಂಗಳೂರು: 2 ಮತ್ತು 4ನೇ ಶನಿವಾರ ಕಬ್ಬನ್ ಪಾರ್ಕ್​​ನೊಳಗೆ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಫೆಬ್ರವರಿ 8 ರಂದು ತೋಟಗಾರಿಕಾ ಇಲಾಖೆ ಆದೇಶ ನೀಡಿದ್ದು, ಪ್ರವಾಸಿಗರು ಹಾಗೂ ಆ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸಂತಸ ನೀಡಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ಸುಗಮ ಸಂಚಾರಕ್ಕಾಗಿ ಕಬ್ಬನ್ ಪಾರ್ಕ್ ಆವರಣದೊಳಗೆ ಹೈಕೋರ್ಟ್‌ನಿಂದ ಸಿದ್ದಲಿಂಗಯ್ಯ ವೃತ್ತ ಮತ್ತು ಸಿದ್ದಲಿಂಗಯ್ಯ ವೃತ್ತದಿಂದ ಹೈಕೋರ್ಟ್​ ಭಾಗದವರೆಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಲ್ಲಿ ಫೆ.14ಕ್ಕೆ ಮದ್ಯ ಮಾರಾಟಕ್ಕೆ ಬ್ರೇಕ್‌ : ಪ್ರೇಮಿಗಳಿಗೆ ಫುಲ್‌ ಶಾಕ್! ಮೂರು ತಿಂಗಳ ಕಾಲ ಪ್ರಾಯೋಗಿಕ ಆಧಾರದ ಮೇಲೆ ಈ ಅವಕಾಶ ನೀಡಲಾಗಿದೆ. ಕಬ್ಬನ್ ಪಾರ್ಕ್ ಒಳಗೆ ಸಂಚಾರಕ್ಕೆ ಅವಕಾಶ ನೀಡುವುದರಿಂದ ಹೊರಗಿನ ರಸ್ತೆಗಳಲ್ಲಿನ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಗಲಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಅನುಚೇತ್ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಕಬ್ಬನ್ ಪಾರ್ಕ್‌ನೊಳಗೆ ಸಂಚಾರಕ್ಕೆ ಸಾಕಷ್ಟು ಸ್ಥಳಾವಕಾಶವಿದೆ ಎಂದು ಅನುಚೇತ್ ಹೇಳಿದ್ದಾರೆ. ‘ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಎಂದು ರಾಜ್ಯ ಸರ್ಕಾರದ…

Read More

ಹುಬ್ಬಳ್ಳಿ: ಫೆ.14 ರಂದು ವ್ಯಾಲೆಂಟೈನ್‍ನ ಪ್ರೀತಿಯ ಸಂಕೇತವಾಗಿ ವಿಶ್ವದಾದ್ಯಂತ ಪ್ರೇಮಿಗಳ ದಿನದ ಸಂಭ್ರಮ ಮನೆಮಾಡಿದ್ದರೆ, ನಗರದ ಸಂಸ್ಕಾರ ಶಾಲೆಯಲ್ಲಿ ಅಜ್ಜ-ಅಜ್ಜಿಯರ ದಿನಾಚರಣೆ ಆಚರಿಸಲು ಉದ್ದೇಶ ಹೊಂದಿದ್ದು ಇದನ್ನ ಅಜ್ಜ-ಅಜ್ಜಿಯರ ಹರ್ಷೋತ್ಸವ ದಿನವಾನ್ನಾಗಿ ಆಚರಿಸಲಾಗುವುದು ಶಾಲಾ ಮುಖ್ಯಸ್ಥ ಮಹೇಂದ್ರ ಸೀಂಘಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು, ಮಕ್ಕಳಲ್ಲಿ ಮನೆಯ ಹಿರಿಯ ಜೀವಗಳಿಗೆ ಗೌರವ, ಪ್ರೀತಿಯನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಮತ್ತು ಹಿರಿಯರಿಗೂ ತಮ್ಮ ವೃದ್ಧಾಪ್ಯದಲ್ಲಿ ಸಂತಸದ ಕ್ಷಣಗಳನ್ನು ಮೆಲುಕು ಹಾಕುವ ಸುಂದರ ಘಳಿಗೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ. ಕಾರ್ಯಕ್ರಮವನ್ನು ನಗರದ ಹಿರಿಯರಾದ ಮುತ್ಸದ್ಧಿ ಚೇತನ, ಮೂರುಸಾವಿರ ಮಠ ವಿದ್ಯವರ್ಧಕ ಸಂಘದ ಮಾಜಿ ಅಧ್ಯಕ್ಷರಾದ 97 ವರ್ಷದ ಉ.ಒ. ಚಿಕ್ಕಮಠ ಉದ್ಘಾಟಿಸಲಿದ್ದಾರೆ. 1945 ರಿಂದ 1983ರ ವರೆಗೆ ಭಾರತೀಯ ನೌಕಾ ಸೇನೆಯಲ್ಲಿ ಸುದೀರ್ಘ ಸೇವೆಸಲ್ಲಿಸಿ ನಿವೃತ್ತಿಯಾದ ಹಾನರರಿ ಲೆಪ್ಟಿನೆಂಟ್ ವಸಂತ ಲಿಂಗೊ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಜ್ಜ ಅಜ್ಜಿಯರಿಗಾಗಿ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ತಮ್ಮ ವಯಸ್ಸಿನ ಅಂತರವನ್ನು ಮೀರಿ…

Read More

ಹುಬ್ಬಳ್ಳಿ: ಮಕ್ಕಳ ಆರೋಗ್ಯ, ಕಿರಿಯ ಸದಸ್ಯರ ಯೋಗಕ್ಷೇಮಕ್ಕಾಗಿ ಅರೋಗ್ಯ ಸೌಲಭ್ಯಗಳು ಮತ್ತು ಸೇವೆಗಳನ್ನು ಹೆಚ್ಚಿಸುವಲ್ಲಿ ಕೋಠಾರಿ ಮಾನವ ಸೇವಾ ಕೇಂದ್ರವು ಪ್ರೋತ್ಸಾಹದಾಯಕವಾಗಿದೆ ಎಂದು ಕಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ಎಸ್ ಎಫ್ ಕಮ್ಮಾರ ಸಂತಸ ವ್ಯಕ್ತಪಡಿಸಿದರು. ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ದಿ. ಶ್ರೀಮತಿ ರೇಷ್ಮಿ ದೇವಿ ಸೋಹನಲಾಲ ಕೋಠಾರಿಯವರ ಸ್ಮರಣಾರ್ಥ ಕೋಠಾರಿ ಪರಿವಾರದರು ನೂತನವಾಗಿ ಉನ್ನತದ ರ್ಜೆಗೇರಿಸಿರುವ ಕೋಠಾರಿ ಮಾನವ ಸೇವಾ ಕೇಂದ್ರ ಸುಧಾರಿತ ಮಕ್ಕಳ ತೀವ್ರ ನಿಗಾ ಘಟಕ (ಪಿಡಿಯಾಟ್ರಿಕ್ ಐಸಿಯು) ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಯಾಗಿ ಆಗಮಿಸಿ ಮಾತನಾಡಿದರು, ಕಡಿಮೆ ಸಮಯದಲ್ಲಿ ಇಂತಹ ಕೇಂದ್ರ ನಿರ್ಮಾಣ ಮಾಡಿಕೊಟ್ಟ ಕೊಠಾರಿ ಕುಟುಂಬಕ್ಕೆ ಕಿಮ್ಸ್ ಅಭಾರಿಯಾಗಿದೆ. ಹೆಚ್ಚಿನ ದಾನಿಗಳು ಇಂತಹ ಕಾರ್ಯಕ್ಕೆ ಮುಂದಾದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಮಣಕವಾಡದ ಶ್ರೀಗುರು ಅನ್ನದಾನೇಶ್ವರ ಮಹಾಂತಮಠದ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ,ಸೋಹನಲಾಲ್ ಕೊಠಾರಿಯವರು ಬಡವರ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು. ಬಂಗಾರ ಧರಿಸಿದವರು,…

Read More

ಬೆಂಗಳೂರು: ಜಗಜ್ಯೋತಿ ಬಸವೇಶ್ವರ ಎಂದು ಪ್ರಖ್ಯಾತರಾಗಿರುವ ಬಸವಣ್ಣನವರನ್ನು ಸರ್ಕಾರವು ಬಸವಣ್ಣನವರನ್ನು ‘ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಎಂದು ಘೋಷಣೆ ಮಾಡಿದೆ. ಬೆಂಗಳೂರಿಗೆ ಕಾದಿದ್ಯಾ ಜಲ ಗಂಡಾಂತರ: ಕಾವೇರಿ ಬಿಟ್ಟರೆ ಬೇರೆ ಪರ್ಯಾಯ ವ್ಯವ್ಯಸ್ಥೆ ಇಲ್ವಾ? ರಾಜ್ಯದ ಸರ್ಕಾರಿ ಕಛೇರಿಗಳಲ್ಲಿರುವ ಸರ್ಕಾರವು ಅನುಮೋದಿಸಿರುವ ಬಸವಣ್ಣನವರ ಭಾವಚಿತ್ರಗಳಲ್ಲಿ “ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಎಂದು ಮುದ್ರಿಸಿ ಅಳವಡಿಸಲು ಕ್ರಮ ವಹಿಸುವುದು. ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಬಸವಣ್ಣನವರ ಚಿಂತನೆಗಳು ಹಾಗೂ ಸರ್ಕಾರದ ಉದ್ದೇಶಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನಗಳನ್ನು ಹೊರಡಿಸಬೇಕೆಂದು ಸೂಚಿಸಿದೆ. Mudhol Priest: ರಾಮ ಮಂದಿರ ಮಂಡಲಾರಾಧನೆಗೆ ಮುಧೋಳ ನಗರದ ಅರ್ಚಕ ಆಯ್ಕೆ.! 12 ಶತಮಾನದ ವಚನ ಚಳುವಳಿ ಹಾಗು ಸಾಮಾಜಿಕ ನ್ಯಾಯದ ನಾಯಕತ್ವ ವಹಿಸಿದ್ದ ಇವರು ಮನುಧರ್ಮಶಾಸ್ತ್ರದ ಶ್ರೇಣೀಕೃತ ಸಮಾಜವನ್ನು ವಿರೋಧಿಸಿ ಎಲ್ಲರೂ ಸಮಾರು ಎಂಬ ಸಮಾನತೆಯನ್ನು ಮುನ್ನಡೆಸಿದ್ದರು.

Read More

ಬೆಂಗಳೂರು: ಮುಂಜಾನೆ ಕೂಲ್ ಆಗಿರೋ ಸಿಲಿಕಾನ್ ಸಿಟಿ ಮಧ್ಯಾಹ್ನ ಹೊತ್ತಿದೆ ಕಾವೇರಿರುತ್ತೆ. ಸಿಲಿಕಾನ್ ಸಿಟಿಯ ವಾತಾವರಣ ಉಷ್ಣಾಂಶ ಹೆಚ್ಚಿಸಿಕೊಳುತ್ತಿದ್ದು ಜನ ಜೀವನವನ್ನು ಅಸ್ತವ್ಯಸ್ತ ಮಾಡಿದೆ, ಇದರ ಜೊತೆಗೆ ಜನ ಸೂರ್ಯದೇವನಿಗೆ ಹಿಡಿ ಶಾಪ ಹಾಕಲು ಶುರು ಮಾಡಿದದ್ದು‌ ಬೇಸಿಯ ಬಿಸಿ ಜನರನ್ನು ಕಾಡಲು ಆರಂಭಿಸಿದೆ.ಹಾಗಿದ್ರೆ ಸಿಲಿಕಾನ್ ಸಿಟಿಯಲ್ಲಿ ವಾತಾವರಣದ ತಾಪಮಾನ ಹೇಗಿದೆ ಅನ್ನೋದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ ರಾಜ್ಯದಲ್ಲಿ ಸಂಪೂರ್ಣ ಬೇಸಿಗೆ ಆರಂಭ ಆಗುವುದಕ್ಕೂ ಮುನ್ನವೇ ಬೇಸಿಗೆ ಧಗೆ ಜನರನ್ನು ಹೈರಾಣುಗೊಳಿಸಿದೆ. ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಜನ ತತ್ತರಿಸೋ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ರಾಜ್ಯದ ಹಲವೂ ಭಾಗಗಳಲ್ಲಿ ಈಗಾಗಲೇ ನೀರಿಗೆ ಹಾಹಾಕಾರ ಆರಂಭವಾಗಿದ್ದು‌ ಇದರ ಜೊತೆ ಬಿಸಿಲಿನ ಶಾಕಕ್ಕೆ ಹಲವಾರು ತೊಂದರೆಗಳು ಶುರುವಾಗಿದೆ. ಇನ್ನೂ ತಂಪಾದ ವಾತಾವರಣವನ್ನ ಹೊಂದಿರಿವ ಸಿಲಿಕಾನ್ ಸಿಟಿ ಕೂಡ ಈ ಬಾರಿ ಸುಡಲು ಆರಂಭಿಸಿದ್ದೆ. ಬೆಂಗಳೂರಲ್ಲಿ ಫೆ.14ಕ್ಕೆ ಮದ್ಯ ಮಾರಾಟಕ್ಕೆ ಬ್ರೇಕ್‌ : ಪ್ರೇಮಿಗಳಿಗೆ ಫುಲ್‌ ಶಾಕ್! ಸಿಲಿಕಾನ್ ಸಿಲಿಕಾನ್ ಗರಿಷ್ಟ ಉಷ್ಣಾಂಶ ತಾಪಮಾನವನ್ನು ಕಳೆದ ವಾರ…

Read More

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಗಂಡಾಂತರಕ್ಕೆ ಹತ್ತಿರವಾಗುತ್ತಿದೆ. ಮಿತಿಮೀರಿದ ನಗರೀಕರಣದಿಂದಾಗಿ ಪ್ರಕೃತಿಯೇ ಮಾಯವಾಗಿ ಪ್ರಾಕೃತಿಕ ವಿಕೋಪಕ್ಕೆ ಕಾರಣಮವಾಗುತ್ತಿದೆ. ಇದರ ಮಧ್ಯೆಯೇ ಜಲಸಂಪನ್ಮೂಲ ಇಲಾಖೆ ನೀಡಿರುವ ಮಾಹಿತಿ ನಗರದ ಮೇಲ್ಮೈ ಜಲಸಂಪನ್ಮೂಲ ಯಾವ ರೀತಿ ಹದಗೆಟ್ಟಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಲ್ಲಿ ಫೆ.14ಕ್ಕೆ ಮದ್ಯ ಮಾರಾಟಕ್ಕೆ ಬ್ರೇಕ್‌ : ಪ್ರೇಮಿಗಳಿಗೆ ಫುಲ್‌ ಶಾಕ್! ಹೌದು, ಬೆಂಗಳೂರು ಈಗಾಗಲೇ ಮಹಾನಗರವಾಗಿ ಬೆಳೆದಿದ್ದು, ಸುಮಾರು 1.30 ಕೋಟಿಗೂ ಹೆಚ್ಚು ಜನಸಂಖ್ಯೆಗೆ ಮೂಲಭೂತ ಸೌಕರ್ಯ ಒದಗಿಸೋಕೆ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಅದರಲ್ಲಿಯೂ ಜೀವನ ನಡೆಸಲು ಅತ್ಯಗತ್ಯವಾಗಿ ಬೇಕಾದ ನೀರನ್ನು ಹೊಂದಿಸುವುದು ಇನ್ನಷ್ಟು ಕಷ್ಟಕರವಾಗ್ತಿದೆ. ಇತ್ತ ನೀರು ಪೂರೈಕೆಗೆ ಕಾವೇರಿ ನೀರು ಬಿಟ್ಟರೆ ಜಲಮಂಡಳಿಗೆ ಪರ್ಯಾಯ ಮೂಲಗಳೇ ಇಲ್ಲವಾಗುತ್ತಿದೆ. ಇದರ ಮಧ್ಯೆಯೇ ಮೇಲ್ಮೈ ಜಲಸಂಪನ್ಮೂಲದ ಸ್ಥಿತಿ ಗತಿ ಬಗ್ಗೆ ಜಲಸಂಪನ್ಮೂಲ ಇಲಾಖೆ ನೀಡಿರುವ ಮಾಹಿತಿ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಏನೆಂದರೆ 2022ರಿಂದ 2023ರವರಿಗೆ ಬರೋಬ್ಬರಿ ಶೇಕಡಾ. 47ರಷ್ಟು ಮಳೆಯ ಪ್ರಮಾಣ ಕುಸಿತವಾಗಿದೆ ಅನ್ನೋದು. ( ಅಳತೆ ಮಿಲಿ ಮೀಟರ್…

Read More

ಗದಗ: ಸರ್ಕಾರ ನಾಡಿನ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಒತ್ತಾಯಿಸಿ ಗದಗ-ಬೆಟಗೇರಿ ನಗರಸಭೆಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ರಾಜ್ಯ ಸರ್ಕಾರದ ವಿರುಧ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯಿಂದ ರೈತರು ಕಂಗಾಲಾಗಿದ್ದಾರೆ. 175ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ತಾಲೂಕು ಘೋಷಣೆ ಮಾಡಿದೆ ಪರಿಹಾರ ಸಿಕ್ಕಿಲ್ಲ, ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು. ಬಜೆಟ್‌ ನಲ್ಲಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಸಣ್ಣ ಮತ್ತು ಮಧ್ಯಮ ರೈತರ ಸಾಲಗಳನ್ನು ಸಂಪೂರ್ಣ ಮನ್ನ ಮಾಡಬೇಕು.  ಕೃಷಿ ಪಂಪ್ ಸೆಟ್‌ಗಳಿಗೆ ಕನಿಷ್ಠ 12 ತಾಸು ತ್ರೀ ಫೇಸ್ ವಿದ್ಯುತ್ ನೀಡಬೇಕು. ಇನ್ನೂ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ತಕ್ಷಣದಿಂದಲೆ ಬಿಡುಗಡೆ ಮಾಡಿ ರೈತರು ಪಡೆದಿರುವ ಕೃಷಿ ಯಂತ್ರೋಪಕರಣಗಳ ಹಾಗೂ ಟ್ಯಾಕ್ಟರ್ ಸಾಲಗಳ ವಸುಲಾತಿಯನ್ನು ಕನಿಷ್ಠ ಒಂದು ವರ್ಷ ತಡೆಹಿಡಿಯಬೇಕು. ಬರಪೀಡಿತ ಪ್ರದೇಶವೆಂದು ಸಾರಿರುವ ಪ್ರದೇಶಗಳಲ್ಲಿ ಬರ ಪರಿಹಾರವನ್ನು ತಕ್ಷಣ ನೀಡಬೇಕು. ಕೃಷಿ…

Read More

ಗದಗ: ಗದಗ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಫೆ.15, 16 ಮತ್ತು 17 ರಂದು ಮೌನಯೋಗಿ ಚಿಕೇನಕೊಪ್ಪ ಶ್ರೀ ಚನ್ನವೀರ ಶರಣರ 29 ನೇ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಜರುಗಲಿದೆ. ಆ ಕುರಿತು ಗದಗ ನಗರದ ಪತ್ರಿಕಾಭವನದಲ್ಲಿ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಸುದ್ದಿಗೋಷ್ಠಿ ನಡೆಸಿ ಮಾನಾಡಿದ್ರು.  ಫೆ.15 ರಂದು ಬೆಳಿಗ್ಗೆ ಷಟಸ್ಥಲ ಧ್ವಜಾರೋಹಣ ಜರುಗಲಿದ್ದು ಸಂಜೆ ಸಂಜೆ ರಥದ ಕಳಸ ಆಗಮಿಸುವುದು ಮತ್ತು ಲಘು ರಥೋತ್ಸವ ಹಾಗೂ ಮಹಾತ್ಮರ ಜೀವನ ದರ್ಶನ ಮಂಗಲೋತ್ಸವ ಜರುಗುವುದು. ಫೆ. 16 ರಂದು ಶ್ರೀ ಚನ್ನವೀರ ಶರಣರ 29 ನೇ ಪುಣ್ಯಸ್ಮರಣೋತ್ಸವ ಹಾಗೂ ಸಾಮೂಹಿಕ ವಿವಾಹಗಳು ಜರುಗುವವು. ಸಂಜೆ ಮಹಾರಥೋತ್ಸವ ಹಾಗೂ ಧಾರ್ಮಿಕ ಚಿಂತನಾಗೋಷ್ಠಿ ನಡೆಯಲಿವೆ. ಕೊಪ್ಪಳದ ಗವಿಮಠದ ಪೂಜ್ಯ ಶ್ರೀ ಗವಿಸಿಧ್ಧೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು. ಫೆ. 17 ರಂದು ಕಡುಬಿನ ಕಾಳಗ, ಮಲ್ಲಕಂಬ ಪ್ರದರ್ಶನ, ಹಾಸ್ಯ ಸಂಜೆ ಕಾರ್ಯಕ್ರಮ, ಸಿಡಿಮದ್ದು ಸುಡುವ ಕಾರ್ಯಕ್ರಮ ನಡೆಯಲಿವೆ ಭಕ್ತಾದಿಗಳು ಆಗಮಿಸಬೇಕೆಂದು ತಿಳಿಸಿದ್ರು. ಪತ್ರಿಕಾಗೋಷ್ಠಿಯಲ್ಲಿ…

Read More