Author: AIN Author

ಬೆಂಗಳೂರು:- ಟಿಕೆಟ್ ರಹಿತ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಬಿಸಿ ಮುಟ್ಟಿಸಿದ್ದು, ಪ್ರಯಾಣಿಕರಿಂದ ಬರೋಬ್ಬರಿ 5,71,286 ರೂ. ದಂಡ ವಸೂಲಿ ಮಾಡಿದೆ. ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 44521 ವಾಹನಗಳನ್ನು ತನಿಖೆಗೊಳಪಡಿಸಿ 3391 ಪ್ರಕರಣಗಳನ್ನು ಪತ್ತೆಹಚ್ಚಿದ್ದು, 3712 ಟಿಕೆಟ್​ ರಹಿತ ಪ್ರಯಾಣಿಕರಿಂದ 5.71.286 ರೂ. ದಂಡದ ರೂಪದಲ್ಲಿ ವಸೂಲಿ ಮಾಡಿದ್ದಾರೆ. ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 81,583 ರೂ ಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಹಾಗೂ ತಪ್ಪಿತಸ್ಥರ ವಿರುದ್ಧ ಇಲಾಖೆ ಸೂಕ್ತ ಕ್ರಮವನ್ನು ಜರುಗಿಸಲಾಗಿದೆ. ಆದ್ದರಿಂದ ಸಾರ್ವಜನಿಕ ಪ್ರಯಾಣಿಕರು, ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್​, ಪಾಸ್ ಪಡೆದು ಪ್ರಯಾಣ ಮಾಡುವಂತೆ, ನಿಗಮವು ಪ್ರಯಾಣಿಕರಲ್ಲಿ ಕೋರಿದೆ. ಇತ್ತೀಚೆಗೆ ಕೆಎಸ್​ಆರ್​ಟಿಸಿಗೆ ಮತ್ತೆ ಪ್ರತಿಷ್ಠಿತ SKOCH ಪ್ರಶಸ್ತಿ ಒಲಿದುಬಂದಿತ್ತು. ಕಾರ್ಮಿಕ ಕಲ್ಯಾಣ, ಶಕ್ತಿ ಯೋಜನೆಗಳಿಗೆ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಇತ್ತೀಚೆಗಷ್ಟೇ, ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ತನ್ನ ಸಿಬ್ಬಂದಿಗಳಿಗಾಗಿ 1 ಕೋಟಿ ಸಾರಿಗೆ ಸುರಕ್ಷಾ ವಿಮಾ ಯೋಜನೆ ಜಾರಿ ಮಾಡಿದ ಕೆಎಸ್​ಆರ್​​ಟಿಸಿಗೆ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ ಬೆನ್ನಲ್ಲೇ ಈ ಪ್ರಶಸ್ತಿ…

Read More

ಮಂಗಳೂರು:- ಜೈ ಶ್ರೀರಾಮ್‌ ಘೋಷಣೆ ಕೂಗಿದ ಮಕ್ಕಳಿಗೆ ಶಿಕ್ಷಕಿ ಧಮ್ಕಿ ಹಾಕಿರುವ ಘಟನೆ ಜರುಗಿದೆ. ಮಂಗಳೂರಿನ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ವಿರುದ್ಧ ವಿದ್ಯಾರ್ಥಿಗಳು, ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದರು. ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದರು. ಈ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಲಾಗಿದೆ ಎನ್ನುವ ಆಡಿಯೋವನ್ನು ತೋರಿಸಿ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ. ಜೆರೋಸಾ ಶಾಲೆಯಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಮಕ್ಕಳಿಗೆ ಧಮ್ಕಿ ಹಾಕಲಾಗಿದೆ ಎಂದು ವಾಯ್ಸ್ ಮೆಸೇಜ್ ತೋರಿಸಿ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿ ಆದೇಶಿಸಿದೆ. ಶ್ರೀರಾಮನಿಗೆ ಅವಹೇಳ ಮಾಡಿದ ಶಿಕ್ಷಕಿ ವಿರುದ್ಧ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಪೋಷಕರು ಶಾಲೆಗೆ ಮುತ್ತಿಗೆ ಹಾಕಿದರು. ಶಾಲೆ ವಿರುದ್ಧ ಆಕ್ರೋಶ ಭುಗಿಲೇಲುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮುಖ್ಯ ಶಿಕ್ಷಕಿ,…

Read More

ಮಂಡ್ಯ:- ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಚರ್ಚೆಗೆ ನಿಖಿಲ್ ಕುಮಾರಸ್ವಾಮಿ ಅವರು ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾನು ಹಾಗೂ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಬೇಕೆಂದು ಕಾರ್ಯಕರ್ತರ, ಮುಖಂಡರ ಒತ್ತಡ ಇದೆ. ಆದರೆ ನನ್ನ ಮಾತು ಎಲ್ಲಾ ಸಮಯದಲ್ಲೂ ಒಂದೇ, ನಾನು ಮಂಡ್ಯ ಕ್ಷೇತ್ರದ ಆಕಾಂಕ್ಷಿಯಲ್ಲ. ಮಂಡ್ಯ ಕ್ಷೇತ್ರದಿಂದ ನಾನು ಸ್ಪರ್ಧಿಸಲ್ಲ. ಯಾವುದೇ ಒತ್ತಡ ಬಂದರೂ ನಾನು ಲೋಕಸಭಾ ಚುನಾವಣೆಗೆ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು. ಎನ್​ಡಿಎ ಮೈತ್ರಿಕೂಟದಲ್ಲಿ ಯಾವ ರೀತಿ ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ಆಗಿದೆ. ನನ್ನ ಪ್ರವಾಸ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಕೋಲಾರ, ಹಾಸನ, ಮೈಸೂರು ಸೇರಿದಂತೆ ಎಲ್ಲಾ ಕಡೆ ಪ್ರವಾಸ ಮಾಡುತ್ತೇನೆ. ನಾನು ಈ ಹಿಂದೆ ಮಂಡ್ಯ ಅಭ್ಯರ್ಥಿ ಆಗಿದ್ದ ಕಾರಣ ಮಂಡ್ಯದಲ್ಲಿ ಹೆಚ್ಚೆಚ್ಚು ಓಡಾಡಲು ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಕ್ಷೇತ್ರಗಳಿಗೂ ಭೇಟಿ ನೀಡುತ್ತೇನೆ ಎಂದು ಹೇಳಿದರು. ಇನ್ನು ಇದೇ ವೇಳೆ ಮೈತ್ರಿಗೆ ಬಿಜೆಪಿ ನಾಯಕರ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು,…

Read More

ಬೇಸಿಗೆಯಲ್ಲಿ ನಾವು ನಮ್ಮ ಆಹಾರಕ್ರಮದಲ್ಲಿ ಬದಲಾಣೆ ಮಾಡಬೇಕು, ದೇಹದಲ್ಲಿ ನೀರಿನಂಶ ಕಾಪಾಡುವ ಹಾಗೂ ದೇಹವನ್ನು ತಂಪಾಗಿಡುವ ಆಹಾರಗಳ ಕಡೆಗೆ ಹೆಚ್ಚಿ ಒತ್ತು ಕೊಡಬೇಕು. 1. ಜೀರಿಗೆ ಇದು ದೇಹವನ್ನು ತಂಪಾಗಿ ಇಡುತ್ತದೆ, ಆದ್ದರಿಂದ ಬೇಸಿಗೆಯಲ್ಲಿ ಅಡುಗೆಯಲ್ಲಿ ತಪ್ಪದೆ ಬಳಸಿ. ಇದು ದೇಹದಲ್ಲಿ ಉಷ್ಣಾಂಶ ಕಡಿಮೆ ಮಾಡುತ್ತದೆ, ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ. ಅಲ್ಲದೆ ಇದರಲ್ಲಿ ಆಯಂಟಿಆಕ್ಸಿಡೆಂಟ್‌ ಅಧಿಕವಿರುತ್ತದೆ, ಆದ್ದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಹೊಟ್ಟೆಉಬ್ಬುವುದು, ಹಿಟ್ಟೆಯ ಸೆಳೆತ ಈ ರೀತಿ ಬೇಸಿಗೆಯಲ್ಲಿ ಕಾಡುವ ಸಾಮಾನ್ಯ ಸಮಸ್ಯೆಗಳಿಂದಲೂ ಮುಕ್ತಿ ನೀಡುವುದು. 1 ಚಮಚ ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ ಆ ನೀರನ್ನು ಕುಡಿಯಿರಿ. 2. ಚಿಯಾ ಬೀಜ ಚಿಯಾ ಬೀಜ ಕೂಡ ಬೇಸಿಗೆಗೆ ತುಂಬಾನೇ ಒಳ್ಳೆಯದು, ಇದರಲ್ಲಿ ನಾರಿನಂಶವಿದೆ ಅಲ್ಲದೆ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಅಲ್ಲದೆ ದೇಹದಲ್ಲಿ ನೀರಿನಂಶ ಕಾಪಾಡಲು ಕೂಡ ಚಿಯಾ ಬೀಜ ಸಹಕಾರಿ. ಅಲ್ಲದೆ ಈ ಬೀಜದಲ್ಲಿ ಒಮೆಗಾ 3 ಕೊಬ್ಬಿನಂಶ ಇರುವುದರಿಂದ ಬೇಸಿಗೆಯಲ್ಲಿ ತುಂಬಾ ಒಳ್ಳೆಯದು, ಇದನ್ನು ಜ್ಯೂಸ್‌ನಲ್ಲಿ…

Read More

ಬೆಂಗಳೂರು:- ವಾಹನಗಳಿಗೆ ಸುರಕ್ಷಿತ ನಂಬರ್ ಪ್ಲೇಟ್ ಹಾಕಿಸುವ ಮುನ್ನ ಎಚ್ಚರದಿಂದಿರಿ. ಏಕೆಂದರೆ ವಂಚನೆ ಮಾಡುವ ಜಾಲ ದೊಡ್ಡದಿದೆ..! ಯಾವುದೇ ರೀತಿಯ ಅಪ್ಡೇಟ್ ಆಗಲಿ ಕಡೆ ಗಳಿಗೆಯಲ್ಲಿಯೇ ಎಲ್ಲರೂ ಓಡಾಡುವುದು. ಇದೀಗ ಅಂಥದ್ದೇ ಟೆನ್ಶನ್ ವಾಹನ ಮಾಲೀಕರಿಗೆ ಸೃಷ್ಟಿಯಾಗಿದೆ. ತಮ್ಮ ತಮ್ಮ ವಾಹನಗಳಿಗೆ ಅತಿ ಸುರಕ್ಷಿತ ನಂಬರ್ ಪ್ಲೇಟ್ (HSRP) ಹಾಕಿಸಬೇಕಾಗಿದೆ. ಅದಕ್ಕೆ ಐದು ದಿನಗಳು ಮಾತ್ರ ಸಮಯವಿದೆ. ಈ ಐದು ದಿನಗಳ ಒಳಗೆ ನಂಬರ್ ಪ್ಲೇಟ್ ಹಾಕಿಸಬೇಕಾಗಿದೆ. ವಂಚನೆ ಮಾಡುವವರು ದಾರಿಗಳನ್ನು ಹುಡುಕುತ್ತಲೇ ಇರುತ್ತಾರೆ. ಇದೀಗ ನಂಬರ್ ಪ್ಲೇಟ್ ವಿಚಾರವನ್ನೇ ಬಂಡವಾಳವಾಗಿಸಿಕೊಂಡಿದ್ದಾರೆ. ಈ ಮೂಲಕ ವಂಚನೆ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಫೆಬ್ರವರಿ 17ರ ಒಳಗೆ ಈ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅನ್ನು ಹಾಕಿಸಬೇಕಾಗುತ್ತದೆ. ಇಲ್ಲವಾದರೇ ಭಾರೀ ಮೊತ್ತದೆ ದಂಡ ಬೀಳಲಿದೆ. ಹೀಗಾಗಿ ವಾಹನ ಸವಾರರು ಎದ್ದು ಬಿದ್ದು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಆನ್ಲೈನ್ ಮೂಲಕ ರಿಜಿಸ್ಟರ್ ಮಾಡಿಸಿಕೊಳ್ಳುತ್ತಿದ್ದಾರೆ. ಇದು ವಂಚನೆ ಕೋರರಿಗೆ ಬಹಳ ಸುಲಭದ ಮಾರ್ಗವಾಗಿ ಬಿಟ್ಟಿದೆ. ಹಿರಿಯ ನಾಗರಿಕರನ್ನು…

Read More

ನವದೆಹಲಿ:- ಕೇಂದ್ರ ಸರ್ಕಾರವು ಬರೋಬ್ಬರಿ 1.4 ಲಕ್ಷ ಮೊಬೈಲ್ ನಂಬರ್ ಬ್ಲಾಕ್ ಮಾಡಿದೆ. ಡಿಜಿಟಲ್ ವಂಚನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸಿದೆ. ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ ನೇತೃತ್ವದಲ್ಲಿ ಶುಕ್ರವಾರ ಹಣಕಾಸು ಸೇವಾ ವಲಯದಲ್ಲಿ ಸೈಬರ್ ಭದ್ರತೆ (Cyber Security) ಕುರಿತು ನಡೆದ ಸಭೆಯಲ್ಲಿ ಎಪಿಐ ಏಕೀಕರಣದ ಮೂಲಕ ನಾಗರಿಕ ಹಣಕಾಸು ಸೈಬರ್ ವಂಚನೆ (Cyber Fraud) ವರದಿ ಮತ್ತು ನಿರ್ವಹಣಾ ವ್ಯವಸ್ಥೆ (ಸಿಎಫ್‌ಸಿಎಫ್‌ಆರ್‌ಎಂಎಸ್) ವೇದಿಕೆಯಲ್ಲಿ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಪೊಲೀಸ್, ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ನಡುವೆ ಪರಿಣಾಮಕಾರಿ ಸಹಯೋಗವನ್ನು ಸಕ್ರಿಯಗೊಳಿಸುವ ವೇದಿಕೆಯನ್ನು ಕೇಂದ್ರೀಕರಿಸಲು ರಾಷ್ಟ್ರೀಯ ಸೈಬರ್‌ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್‌ಸಿಆರ್‌ಪಿ) ನೊಂದಿಗೆ ಸಿಎಫ್‌ಸಿಎಫ್‌ಆರ್‌ಎಂಎಸ್ ಪ್ಲಾಟ್‌ಫಾರ್ಮ್‌ನ ಏಕೀಕರಣ, ನೈಜ-ಸಮಯದ ಮೇಲ್ವಿಚಾರಣೆ ಮತ್ತು ಮೋಸದ ಚಟುವಟಿಕೆಗಳನ್ನು ತಡೆಗಟ್ಟಲು ಅವಕಾಶ ನೀಡುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ನಿಯಮಿತ 10-ಅಂಕಿಯ ಸಂಖ್ಯೆಗಳ ಬಳಕೆಯನ್ನು ಹಂತಹಂತವಾಗಿ ತೆಗೆದುಹಾಕುವ…

Read More

ಸಾಕಷ್ಟು ಕಂಪನಿಗಳು ಮಹಿಳೆಯರಿಗೆ ಪಿರಿಯಡ್ಸ್ ಸಮಯದಲ್ಲಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುತ್ತದೆ. ಕೆಲಸಗಾರರು ಖುಷಿಯಾದ್ರೆ, ಸಂತೋಷದಿಂದ ಇದ್ರೆ ಅವರು ಸರಿಯಾಗಿ ಕೆಲಸ ಮಾಡ್ತಾರೆ. ಇದ್ರಿಂದ ಕಂಪನಿಗೆ ಲಾಭ ಸಿಗುತ್ತದೆ. ಈ ಗುಟ್ಟನ್ನು ಅರಿತಿರುವ ಬಹುತೇಕ ಕಂಪನಿಗಳು ಕೆಲಸಗಾರರ ಆರೋಗ್ಯ, ಆರ್ಥಿಕ ಸ್ಥಿತಿ ಬಗ್ಗೆಯೂ ಗಮನ ನೀಡುತ್ತದೆ. ಆರೋಗ್ಯ ವಿಮೆ ಅಥವಾ ಅನಾರೋಗ್ಯದ ಪರಿಸ್ಥಿತಿಯಲ್ಲಿ ಉದ್ಯೋಗಿಗಳಿಗೆ ಹಣದ ಸಹಾಯ ಮಾಡುವ ಕಂಪನಿಗಳೂ ಸಾಕಷ್ಟಿವೆ. ಹೆರಿಗೆ (Childbirth) ಸಮಯದಲ್ಲಿ ಮೂರು ತಿಂಗಳು ವೇತನ ಸಹಿತ ರಜೆಯನ್ನು ಕಂಪನಿಗಳು ನೀಡುವುದು ನಿಮಗೆ ಗೊತ್ತು. ಆದ್ರೆ ಈ ಕಂಪನಿ (Company) ಮಕ್ಕಳನ್ನು ಹೆರಲು ಉದ್ಯೋಗಿ (employee) ಗಳಿಗೆ ಹಣದ ಸಹಾಯ ಮಾಡುತ್ತದೆ. ಹತ್ತೋ, ಇಪ್ಪತ್ತೋ ಸಾವಿರ ಅಲ್ಲ, ಮಕ್ಕಳನ್ನು ಪಡೆಯಲು ಬಯಸಿರುವ ಉದ್ಯೋಗಿಗಳಿಗೆ ಕಂಪನಿ ಲಕ್ಷಾಂತರ ರೂಪಾಯಿ ಸಹಾಯ ಮಾಡುತ್ತದೆ. ಮಕ್ಕಳನ್ನು ಹೆರಲು ಹಣ ಸಹಾಯ : ಮಕ್ಕಳನ್ನು ಪಡೆಯಲು ಉದ್ಯೋಗಿಗಳಿಗೆ ಹಣದ ಸಹಾಯ ಮಾಡುವ ಕಂಪನಿ ಹೆಸರು ಬೋಯಂಗ್ ಗ್ರೂಪ್ ( Booyoung Group).…

Read More

ಹಾವೇರಿ: ಬಿ.ವೈ.ವಿಜಯೇಂದ್ರನಿಂದ ನನಗೇನೂ ಆಗಬೇಕಾಗಿಲ್ಲ ಎಂದು ಹೇಳುವ ಮೂಲಕ ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ಅವರು vಸಿಡಿಮಿಡಿಗೊಂಡರು, ಅಪ್ಪ-ಮಕ್ಕಳ ಜೊತೆಗೆ ನಾನು ರಾಜಿಯಾಗಬೇಕಾ? ನನಗೆ ರಾಜಿ ಅವಶ್ಯಕತೆ ಇಲ್ಲ. ಬಿ.ವೈ.ವಿಜಯೇಂದ್ರನಿಂದ ನನಗೇನೂ ಆಗಬೇಕಾಗಿಲ್ಲ. ವಿಜಯೇಂದ್ರ ಜತೆ ನನ್ನದು ಯಾವುದೇ ವ್ಯವಹಾರವಿಲ್ಲ. ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿ ಆಗಬೇಕಷ್ಟೇ. ವಿಜಯೇಂದ್ರ ಅವರ ಉದ್ದೇಶ ಏನು. ವಿ.ಸೋಮಣ್ಣ ಅವರ ಮೇಲೆ ಏನು ಮಾಡಿದ್ದಾರೆ? ವಿಜಯಪುರದಲ್ಲಿ ಏನ್ ಮಾಡಿದ್ದಾರೆ ಎಲ್ಲಾ ಗೊತ್ತು. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೋಲಿಸುವುದಕ್ಕೆ ಏನು ಮಾಡಿದ್ದಾರೆ. ಇವರ ಎಲ್ಲಾ ಇತಿಹಾಸ ಗೊತ್ತಿದೆ. ಲೋಕಸಭೆ ಚುನಾವಣೆ ಬಳಿಕ ಹೇಳುತ್ತೇನೆ ಎಂದು ಮತ್ತೆ ವಿಜಯೇಂದ್ರ ವಿರುದ್ಧ ಅಟ್ಯಾಕ್ ಮಾಡಿದ್ದಾರೆ. https://ainlivenews.com/a-man-in-bangalore-saw-youtube-and-committed-theft-with-the-police/ ಹೆದರಿಕೊಂಡು ಓಡಿ ಹೋಗಿ ರಾಜಿ ಆದ ಅನ್ನಬೇಡಿ. ವಿಜಯೇಂದ್ರಗೂ ಅಂಜಲ್ಲ ಅವರ ಅಪ್ಪನಿಗೂ ಅಂಜಲ್ಲ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ನಾವೇನು ಬೇರೆಯವರಿಗೆ ಓಟ್ ಹಾಕು ಅಂತ ಹೇಳಲ್ಲ. ಅವರನ್ನು ಕೇಳಿ ಯಾರ್ಯಾರಿಗೆ ಓಟ್ ಹಾಕಬೇಡಿ ಅಂತ ಹೇಳಿದ್ದರು. ಸೋಮಣ್ಣನ ಎರಡು ಕಡೆ ನಿಲ್ಲಿಸಿ…

Read More

ಬೆಂಗಳೂರು: ಅಯೋಧ್ಯೆ ರಾಮ ಮಂದಿರಯಾದ ಬಳಿಕ‌ ಇದೀಗ ಎಲ್ಲೆಡೆ ರಾಮ ನಾಮ ಶುರುವಾಗಿದೆ.. ಶ್ರೀರಾಮನಿಗಾಗಿ ಮಂದಿರ ನಿರ್ಮಾಣ ಮಾಡಿದ್ರೆ, ಹಲವು ಕಡೆ ರಾಮನಿಗಾಗಿ ಹಾಡುಗಳನ್ನು ರಚನೆ ಮಾಡಿದ್ದಾರೆ.. ಇದೀಗ ಇದೇ ಸಾಲಿಗೆ ಕರ್ನಾಟಕದ ಕಲಾದೇಗುಲ ಸ್ಟುಡಿಯೋ ಸೇರಿದೆ. ಎಸ್, ಶ್ರೀರಾಮ‌ ಎಂದ್ರೆ ಸಾಕು ಮೈಯೆಲ್ಲಾ ರೋಮಾಂಚನ ಆಗುವುದು ಪಕ್ಕಾ.. ಇದೀಗ ಕಲಾದೇಗುಲ ಸ್ಟುಡಿಯೋ ಬಾಲರಾಮನಿಗಾಗಿ ವಿಶೇಷವಾಗಿ ಹಾಡುಗಳನ್ನು ರಚಿಸಿದ್ದಾರೆ. https://youtu.be/q5pI3fulAME?si=CFNoA7gxPpbMuDmm ಇನ್ನೂ ಈ ಹಾಡುಗಳು ‘ಬಾಲ ರಾಮ ‘ ಎಂಬ ಟೈಟಲ್‌ನಲ್ಲೇ ನಿರ್ಮಾಣ ಮಾಡಲಾಗಿದೆ. ಕಲಾದೇಗುಲ ಸ್ಟುಡಿಯೋ ನಿರ್ಮಾಣ ಮಾಡಿರುವ ಈ ಹಾಡುಗಳು ಜಾತ್ಯಾತೀತ ಸಂದೇಶ ಸಾರುತ್ತದೆ. ಕಲಾದೇಗುಲ ಶ್ರೀನಿವಾಸ್ ಸಂಗೀತ ರಚನೆ ಮಾಡಿದ್ದಾರೆ. ಈ ಹಾಡುಗಳಿಗೆ ಹಿನ್ನೆಲೆ ಗಾಯಕರಾಗಿ ಫಯಾಜ್ ಖಾನ್ ಹಾಡಿದ್ರೆ, ಹಿನ್ನೆಲೆ ಸಂಗೀತ ದೀಪಕ್ ಅವರು‌ ಮಾಡಿದ್ದಾರೆ. ಇನ್ನೂ ಈ ಹಾಡನ್ನು ಮಹೇಶ್ ಕುಮಾರ್ ಸಂಯೋಜಿಸಿದ್ರೆ, ಜಯಶೀಲನ್ ನೃತ್ಯ ಸಂಯೋಜಿಸಿದ್ದಾರೆ.

Read More

ನವದೆಹಲಿ: ಭಾರತ ಸರ್ಕಾರಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದ್ದು, ಗೂಢಚರ್ಯೆ ಪ್ರಕರಣದಲ್ಲಿ ಕತಾರ್‌ ಜೈಲಿನಲ್ಲಿದ್ದ 8 ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳು ಬಿಡುಗಡೆಯಾಗಿದ್ದಾರೆ. ಎಂಟು ಮಂದಿ ಪೈಕಿ ಏಳು ಮಂದಿ 18 ತಿಂಗಳ ಜೈಲು ವಾಸದ ನಂತರ ಈಗಾಗಲೇ ಭಾರತಕ್ಕೆ (India) ಮರಳಿದ್ದಾರೆ. ಕತಾರ್‌ನಲ್ಲಿ ಬಂಧಿತರಾಗಿರುವ ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯರ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ. ಎಂಟು ಮಂದಿಯಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಈ ಪ್ರಜೆಗಳ ಬಿಡುಗಡೆಗೊಳಿಸಲು ಕಾರಣರಾದ ಕತಾರ್‌ ರಾಜ್ಯದ ಅಮೀರ್‌ ಅವರ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಸೌರಭ್ ವಸಿಷ್ಟ, ಕಮಾಂಡರ್ ಪೂರ್ಣೇಂದು ತಿವಾರಿ, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಾಕಾಳ, ಕಮಾಂಡರ್ ಸಂಜೀವ್ ಗುಪ್ತಾ, ಕಮಾಂಡರ್ ಅಮಿತ್ ನಾಗ್ಪಾಲ್ ಮತ್ತು ನಾವಿಕ ರಾಗೇಶ್ ಅವರು ಕತಾರ್ ಸೇನಾ ಪಡೆಗಳಿಗೆ ತರಬೇತಿ ನೀಡುವ ಓಮನ್ ಮೂಲದ ಸಂಸ್ಥೆಯಲ್ಲಿ ಕೆಲಸ…

Read More