Author: AIN Author

ಬೆಂಗಳೂರು: ಸರ್ಕಾರ, ವಕ್ಫ್‌ ಆಸ್ತಿಗಳಿಗೆ ಕಾಂಪೌಂಡ್‌ ಕಟ್ಟಿಸಿಕೊಡಲು 31 ಕೋಟಿ ರೂಪಾಯಿ ಉಡುಗೊರೆ ನೀಡಲು ಮುಂದಾಗಿದೆ ಎಂದು ಪ್ರತಿಪಕ್ಷದ ನಾಯಕ ಆರ್‌ ಅಶೋಕ್‌  ರಾಜ್ಯ ಸರ್ಕಾರದ ವಿರುದ್ಧ  ಕಿಡಿಕಾರಿದ್ದಾರೆ. ಬರದಿಂದ ಹೈರಾಣಾಗಿರುವ ರೈತರಿಗೆ ನೆರವು ನೀಡಲು ಹಣವಿಲ್ಲ ಎಂದು ಗಾಯದ ಮೇಲೆ ಬರೆ ಎಳೆಯುತ್ತಿರುವ ಸಿಎಂ ಸಿದ್ದರಾಮಯ್ಯ (Siddaramaiah) ಸರ್ಕಾರ, ವಕ್ಫ್‌ ಆಸ್ತಿಗಳಿಗೆ ಕಾಂಪೌಂಡ್‌ ಕಟ್ಟಿಸಿಕೊಡಲು 31 ಕೋಟಿ ರೂಪಾಯಿ ಉಡುಗೊರೆ ನೀಡಲು ಮುಂದಾಗಿದೆ.   ಸುಕನ್ಯಾ ಸಮೃದ್ಧಿ ಯೋಜನೆ ಹೊಂದಿದ್ದೀರಾ: ಹಾಗಿದ್ರೆ ಈ ಕೆಲಸ ಮಾಡಲೇಬೇಕು, ಇಲ್ಲದಿದ್ರೆ ಖಾತೆ ನಿಷ್ಕ್ರೀಯ ಲಜ್ಜೆಗೆಟ್ಟ ಕಾಂಗ್ರೆಸ್‌ ಸರ್ಕಾರಕ್ಕೆ ನಾಡಿಗೆ ಅನ್ನ ನೀಡುವ ರೈತರ ಹಿತರಕ್ಷಣೆಗಿಂತ ಮುಸ್ಲಿಮರ ಓಲೈಕೆ ಮಾಡಿ ತಮ್ಮ ವೋಟ್ ಬ್ಯಾಂಕ್ ರಕ್ಷಣೆ ಮಾಡಿಕೊಳ್ಳುವುದೇ ಆದ್ಯತೆಯಾಗಿದೆ. ರಾಜ್ಯ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿ ರಾಜ್ಯದ ಒಟ್ಟು 416 ವಕ್ಫ್‌ ಆಸ್ತಿಗಳ (Waqf Property) ಸಂರಕ್ಷಣೆಗಾಗಿ ಕಾಂಪೌಂಡ್‌ ಗೋಡೆ ನಿರ್ಮಾಣ ಮಾಡಲು 31.84 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.

Read More

ನವದೆಹಲಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಗಳಲ್ಲಿ ಕಾನ್‌ಸ್ಟೇಬಲ್‌ಗಳ ನೇಮಕಾತಿಗಾಗಿ ಪರೀಕ್ಷೆಯನ್ನು ಇದೇ ಮೊದಲ ಬಾರಿಗೆ ಹಿಂದಿ (Hindi) ಮತ್ತು ಇಂಗ್ಲಿಷ್ (English) ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ‌. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ದೇಶಾದ್ಯಂತ 128 ನಗರಗಳಲ್ಲಿ ಸುಮಾರು 48 ಲಕ್ಷ ಅಭ್ಯರ್ಥಿಗಳಿಗೆ ಫೆಬ್ರವರಿ 20ರಿಂದ ಮಾರ್ಚ್ 7 ರ ವರೆಗೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amitshah) ಮಾರ್ಗದರ್ಶನದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು 13 ಪ್ರಾದೇಶಿಕ ಭಾಷೆಗಳಲ್ಲಿ ಸಿಎಪಿಎಫ್ ಗಳ ನೇಮಕಾತಿಗಾಗಿ ಕಾನ್‌ಸ್ಟೇಬಲ್‌ (ಸಾಮಾನ್ಯ ಕರ್ತವ್ಯ) ಪರೀಕ್ಷೆ ನಡೆಸಲು ನಿರ್ಧರಿಸಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸ್ಥಳೀಯ ಯುವಕರ ಭಾಗವಹಿಸುವಿಕೆ ಹೆಚ್ಚಿಸಲು ಮತ್ತು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸಲು ಕೇಂದ್ರ ಗೃಹ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  https://ainlivenews.com/in-this-scheme-just-264-rs-deposit-rs-5000-every-month-get-a-pension/ ಕಾನ್‌ಸ್ಟೇಬಲ್‌…

Read More

ಬೆಂಗಳೂರು : ರಾಜ್ಯ ಕಾಂಗ್ರೆಸ್​ ಸರ್ಕಾರ ಪಾಪರ್ ಆಗಿದೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಪಕೀರ್ತಿಯ ಮಾಡೆಲ್ ಕರ್ನಾಟಕ ಮಾಡೆಲ್ ಆಗಿದೆ. ಅಭಿವೃದ್ಧಿ, ಆಡಳಿತದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕುಟುಕಿದ್ದಾರೆ. Lok sabha Election: ಮಂಡ್ಯ ಕ್ಷೇತ್ರದಿಂದ ಹಿಂದೆ ಸರಿದ್ರಾ ನಿಖಿಲ್‌ ಕುಮಾರಸ್ವಾಮಿ: ಇದರ ಉದ್ದೇಶವೇನು? ರಾಜ್ಯಪಾಲರು ಭಾಷಣದಲ್ಲಿ ಕರ್ನಾಟಕ ಮಾಡೆಲ್ ಜನಪ್ರಿಯವಾಗಿದೆ ಎಂದು ಉಲ್ಲೇಖಿಸಿದ್ದಾರೆ. ದೇಶದಲ್ಲೇ ಅಳವಡಿಸಿಕೊಳ್ಳಲಾಗ್ತಿದೆ ಎಂದು ಹೇಳಿದ್ದಾರೆ. ಸರ್ಕಾರದಲ್ಲಿ ಅವ್ಯವಸ್ಥೆ, ಭ್ರಷ್ಟಾಚಾರ ಆಡಳಿತ, ಬರದ ನಿರ್ವಹಣೆ ವಿಫಲ, ಫೈಲ್​ಗಳ ವಿಲೇವಾರಿ ಆಗ್ತಿಲ್ಲ. ಗ್ಯಾರಂಟಿಗಳ ಅನುಷ್ಠಾನ ಅವರು ಹೇಳಿದ ಮಟ್ಟಕ್ಕೆ ಅನುಷ್ಠಾನ ಆಗಿಲ್ಲ ಎಂದು ಟೀಕಿಸಿದ್ದಾರೆ. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಬಸ್​ಗಳ ಸಂಖ್ಯೆ ಕಡಿಮೆ ಆಗಿದೆ. NDRF ಗೈಡ್ ಲೈನ್ಸ್ ನಲ್ಲಿ ರಾಜ್ಯಕ್ಕೆ ಸಿಗಬೇಕಾದ ಹಣ ಸಿಗುತ್ತದೆ. ಇವರು ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ..? ಎಷ್ಟು ಹಣ ಖರ್ಚು ಮಾಡಿದ್ದಾರೆ..? ಕೇಂದ್ರದಿಂದ…

Read More

ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election) ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮತ್ತೆ ಮಂಡ್ಯದಿಂದ (Mandya) ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಬಾರಿ ನಿಖಿಲ್‌ ಮಂಡ್ಯ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. Gruhalakshmi Scheme: ನಿಮ್ಮ ಖಾತೆಗೆ ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ವಾ..? ಈ ದಿನದಂದು ಖಾತೆಗೆ ಬರಲಿದೆ 5,6 ನೇ ಕಂತಿನ ಹಣ ಬಿಜೆಪಿ (BJP) ಜೊತೆ ಜೆಡಿಎಸ್‌ (JDS) ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಜಿಲ್ಲೆಯ ಜೆಡಿಎಸ್‌ ನಾಯಕರು ಮಂಡ್ಯದಿಂದಲೇ ನಿಖಿಲ್‌ ಸ್ಪರ್ಧೆ ಮಾಡಬೇಕೆಂದು ಒತ್ತಡ ಹೇರಿದ್ದರು. ಅಷ್ಟೇ ಅಲ್ಲದೇ ನಿಖಿಲ್‌ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎಂಂಬ ಮಾತು ಜೆಡಿಎಸ್‌ ವಲಯದಲ್ಲಿ ಕೇಳಿ ಬಂದಿತ್ತು. ಆದರೆ ಈಗ ಈ ಎಲ್ಲಾ ಮಾತುಗಳಿಗೆ ನಿಖಿಲ್‌ ಪೂರ್ಣವಿರಾಮ ಹಾಕಿದ್ದು ಮಂಡ್ಯದಿಂದ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಮಂಡ್ಯದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ನಿಖಿಲ್‌ ಹೇಳುವುದರ ಹಿಂದೆ ಹಲವು ಅಂಶಗಳು ಇರಬಹುದು ಎಂದು ವಿಮರ್ಶಿಸಲಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ…

Read More

ಗೃಹಿಣಿಯರಿಗೆ ಮಾಸಿಕ 2000 ರೂ.ಗಳನ್ನು ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಶೇ.ನೂರರಷ್ಟು ಯಶಸ್ವಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಐದು ಗ್ಯಾರಂಟಿಗಳಲ್ಲಿ ಪ್ರತಿ ಕುಟುಂಬದ ಯಜಮಾನಿಗೆ ಧನಸಹಾಯ ನೀಡುವ ಈ ಗೃಹಲಕ್ಷ್ಮಿ ಯೋಜನೆ ಈ ಐದು ಗ್ಯಾರಂಟಿಗಳಲ್ಲಿ ಇದೂ ಒಂದಾಗಿದೆ.  ಆಗಸ್ಟ್ 30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಈ ಯೋಜನೆಗೆ ಚಾಲನೆ ನೀಡಿದ್ದರು. ಜಾರಿಗೊಂಡ ನಂತರ ಶೇ.88ರಷ್ಟು ಗೃಹಿಣಿಯರು ಮೊದಲ ತಿಂಗಳ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ನಂತರದ ಕಂತು ತಲುಪಿಲ್ಲ ಎಂದು ರಾಜ್ಯದ ಬಹುತೇಕ ಜಿಲ್ಲೆ ಮತ್ತು ತಾಲ್ಲೂಕುಗಳ ಗೃಹಿಣಿಯರು ಹೇಳಿಕೊಂಡಿದ್ದಾರೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆಯ 5 ಕಂತುಗಳನ್ನು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೆ 6ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆಯನ್ನು ಆರಂಭಿಸಿದೆ. 5ನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ ಅಂದ್ರೆ ಈ ಕೆಲಸ ಮಾಡಿ ಈಗಾಗಲೇ ಸರ್ಕಾರ ತಿಳಿಸಿರುವಂತೆ 5ನೇ ಕಂತಿನ ಹಣ ನಿಮ್ಮ…

Read More

ಗಾಂಧಿನಗರ: ಇದೇ ಮೊದಲ ಬಾರಿಗೆ ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದ ಜನರಿಗಾಗಿ ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಅವರು ಹೊನಲು ಬೆಳಕಿನ ಕ್ರಿಕೆಟ್‌ ಟೂರ್ನಿಯನ್ನ ಆಯೋಜಿಸಿದ್ದು, ಅಧಿಕೃತವಾಗಿ ಚಾಲನೆಗೊಂಡಿದೆ. ಟೀಂ ಇಂಡಿಯಾ ಆಟಗಾರ ಹಾರ್ದಿಕ್‌ ಪಾಂಡ್ಯ, ಅಮಿತ್‌ ಶಾ ಜೊತೆಗೂಡಿ ʻಗಾಂಧಿನಗರ ಲೋಕಸಭಾ ಪ್ರೀಮಿಯರ್‌ ಲೀಗ್‌ʼಗೆ (Lok Sabha Premier League) ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರಭಾಯ್‌ ಪಟೇಲ್ ಸಹ ಸಾಥ್‌ ನೀಡಿದ್ದಾರೆ ಇಂಗ್ಲೆಂಡ್‌ ಟೀಂಗೆ ಬಿಗ್‌ ಶಾಕ್: ಮೂರು ಪಂದ್ಯಗಳಿಂದಲೂ ಹೊರಬಿದ್ದ ಪ್ರಮುಖ ಸ್ಪಿನ್ನರ್‌ ʻಖೇಲೋ ಇಂಡಿಯಾʼ ಮಾದರಿಯಲ್ಲಿ ಕ್ರೀಡಾ ಉತ್ಸಾಹ ಬೆಳೆಸುವ ನಿಟ್ಟಿನಲ್ಲಿ ʻಖೇಲೋ ಗಾಂಧಿನಗರʼ ಘೋಷವಾಕ್ಯದ ಅಡಿಯಲ್ಲಿ ಟೂರ್ನಿ ಆಯೋಜಿಸಲಾಗಿದೆ. ವೆಜಲ್‌ಪುರ, ಘಟ್ಲೋಡಿಯಾ, ನಾರಣಪುರ, ಸಬರಮತಿ, ಗಾಂಧಿನಗರ ಉತ್ತರ, ಮಾನ್ಸಾ ಮತ್ತು ಸನಂದ್ ಸೇರಿ ಏಳು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ರಿಕೆಟ್‌ ಟೂರ್ನಿಯು 13 ಮೈದಾನಗಳಲ್ಲಿ 21 ದಿನಗಳ ಕಾಲ ನಡೆಯಲಿದೆ. ಒಟ್ಟು 1,078 ತಂಡಗಳ ನಡುವೆ ಲೀಗ್‌ ಪಂದ್ಯಗಳು…

Read More

ನವದೆಹಲಿ: ಕರ್ನಾಟಕದಿಂದ ತಮಿಳಿನಾಡಿಗೆ ಫೆಬ್ರವರಿಯಿಂದ ಮಾರ್ಚ್ ಅವಧಿಗೆ 2.50 ಟಿಎಂಸಿ ನೀರು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ನೀಡಿದೆ. ದೆಹಲಿಯಲ್ಲಿ ಸಭೆ ನಡೆಸಿದ ಸಮಿತಿ ಸಸ್ಯವರ್ಗ, ಪ್ರಾಣಿಸಂಕುಲ ಮತ್ತು ಪರಿಸರ ಸಂರಕ್ಷಣೆಗಾಗಿ ಪರಿಸರದ ಹರಿವನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶಿಸಿದೆ. ಸಭೆಯಲ್ಲಿ ದಿನಾಂಕ 01.06.2023 ರಿಂದ 09.02.2024 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು 52.43% ಇದ್ದು, ಅನಿಯಂತ್ರಿತ ಜಲಾನಯನ ಪ್ರದೇಶದಿಂದ ಉಂಟಾಗುವ ಕೊಡುಗೆಯನ್ನು ಹೊರತುಪಡಿಸಿ ಬಿಳಿಗುಂಡ್ಲು ತಲುಪಲು ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಕರ್ನಾಟಕ ಹೇಳಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು 7.61 ಟಿಎಂಸಿ ಬಾಕಿ ಉಳಿಸಿಕೊಂಡ ನೀರಿನ ಜೊತೆಗೆ, ಫೆಬ್ರವರಿ 2024 ರಿಂದ ಮೇ 2024 ರ ತಿಂಗಳುಗಳಿಗೆ, https://ainlivenews.com/in-this-scheme-just-264-rs-deposit-rs-5000-every-month-get-a-pension/ ಕರ್ನಾಟಕವು ಪ್ರತಿ ತಿಂಗಳು 2.50 ಟಿಎಂಸಿಯಂತೆ ಪರಿಸರ ಹರಿವನ್ನು ನಿರಂತರವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿತು. ಅಂತಿಮವಾಗಿ ಫೆಬ್ರವರಿ 2024 ಮತ್ತು ಮಾರ್ಚ್ 2024…

Read More

ರಾಜ್‌ಕೋಟ್‌: ಇದೇ ಫೆ.15ರಿಂದ ಇಂಗ್ಲೆಂಡ್‌ ವಿರುದ್ಧ ಇಲ್ಲಿ ನಡೆಯಲಿರುವ 3ನೇ ಟೆಸ್ಟ್‌ ಪಂದ್ಯದಿಂದ ಟೀಂ ಇಂಡಿಯಾ ಬ್ಯಾಟಿಂಗ್‌ ಪಿಲ್ಲರ್‌ ಕೆ.ಎಲ್‌ ರಾಹುಲ್‌ ಹೊರಗುಳಿದಿದ್ದಾರೆ. ಆದ್ರೆ ಕೆ.ಎಲ್‌ ರಾಹುಲ್‌ (KL Rahul) ಅವರ ಸ್ಥಾನಕ್ಕೆ ಬಿಸಿಸಿಐ (BCCI) ಮತ್ತೊಬ್ಬ ಕನ್ನಡಿಗನಿಗೆ ಮಣೆ ಹಾಕಿದೆ. IPL 2024: RCB ತಂಡಕ್ಕೆ ಮತ್ತೆ ಎಂಟ್ರಿ ಕೊಡ್ತಾರಾ ಮಾಜಿ ಆಟಗಾರ!? ಇಂಗ್ಲೆಂಡ್‌ ವಿರುದ್ಧದ 3ನೇ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲು ಕನ್ನಡಿಗ ಕೆ.ಎಲ್‌ ರಾಹುಲ್‌ ಹಾಗೂ ಆಲ್‌ರೌಂಡರ್‌ ರವೀಂದ್ರ ಜಡೇಜಾ (Ravindra Jadeja) ಅವರನ್ನು ಫಿಟ್‌ನೆಸ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಜಡೇಜಾ ಪಾಲ್ಗೊಳ್ಳುವಿಕೆಗೆ ಬಿಸಿಸಿಐ ಗ್ರೀನ್‌ ಸಿಗ್ನಲ್‌ ನೀಡಿದ್ದು, ಫಿಟ್‌ನೆಸ್‌ ಸಾಬೀತುಪಡಿಸುವಲ್ಲಿ ವಿಫಲರಾದ ಕೆ.ಎಲ್‌ ರಾಹುಲ್‌ ಅವರನ್ನು ಪಂದ್ಯದಿಂದ ಹೊರಗಿಡಲಾಗಿದೆ. ಅಲ್ಲದೇ ಕೆ.ಎಲ್‌ ರಾಹುಲ್‌ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗನನ್ನೇ ಆದ ದೇವದತ್‌ ಪಡಿಕ್ಕಲ್‌ (Devdutt Padikkal) ಅವರಿಗೆ ಸ್ಥಾನ ನೀಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಸದ್ಯ ವಿರಾಟ್‌ ಕೊಹ್ಲಿ (Virat Kohli) ಅವರ ಅನುಪಸ್ಥಿತಿಯಿಂದ ಟೀಂ…

Read More

ಸಾಮಾನ್ಯವಾಗಿ ಮೊಬೈಲ್, ಕಂಪ್ಯೂಟರ್ ಅಥವಾ ಯಾವುದಾದರೂ ಎಲೆಕ್ಟ್ರಿಕ್ ಉಪಕರಣಗಳಿಗೆ ಚಿಪ್ ಅಳವಡಿಸೋದನ್ನ ಕೇಳಿದ್ದೀರಿ. ಆದರೆ ಮನುಷ್ಯನ ಮಿದುಳಿಗೆ ಚಿಪ್ ಅಳವಡಿಸುವ ಬಗ್ಗೆ ಕೇಳಿದ್ದೀರಾ? ಹೌದು, ಅಂತಹ ಸಾಹಸಕ್ಕೆ ಕೈಹಾಕಿ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ (Elon Musk) ಯಶಸ್ವಿಯಾಗಿದ್ದಾರೆ. ಮಾನವನ ಮಿದುಳಿಗೆ ಚಿಪ್ಪಾ? ಯಾರು ಇದನ್ನ ತಯಾರಿಸಿದ್ದು? ಏಕೆ ಅಳವಡಿಸುತ್ತಾರೆ? ಹೇಗೆ? ಇದರಿಂದ ಏನು ಪ್ರಯೋಜನ ಎಂಬ ಪ್ರಶ್ನೆಗಳು ಮೂಡುವುದು ಸಹಜ. ನಿಜಕ್ಕೂ ಇದೊಂದು ಕುತೂಹಲಕಾರಿ ವಿಷಯ. ಮಿದುಳಿಗೆ ಅಳವಡಿಸುವ ಚಿಪ್ ಬಗ್ಗೆ ತಿಳಿಯುವ ಮೊದಲು ಮಿದುಳಿನ ಬಗ್ಗೆ ತಿಳಿದುಕೊಳ್ಳೋಣ. ಏನಿದು ಮಿದುಳು? ಮಿದುಳು ಮನುಷ್ಯನ ಬದುಕಿನಲ್ಲಿ ಬಲು ಮುಖ್ಯ ಅಂಗ. ಇದನ್ನ ದೇಹದ ಕಂಟ್ರೋಲ್ ಯೂನಿಟ್ ಎಂದರೆ ತಪ್ಪಾಗಲಾರದು. ದೇಹದಲ್ಲಿರುವ ಪ್ರತಿಯೊಂದು ಅಂಗದ ಚಟುವಟಿಕೆಯನ್ನೂ ಇದು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲ, ಹೊರ ಜಗತ್ತಿನ ಆಗುಹೋಗುಗಳನ್ನು ಅರ್ಥೈಸುವ ಅಂಗವೂ ಹೌದು. ನಮ್ಮ ಪಂಚೇಂದ್ರಿಯಗಳು ಗ್ರಹಿಸಿ ಕಳುಹಿಸುವ ಸಂದೇಶಗಳನ್ನು ಪಡೆದು ಏನಾಗುತ್ತಿದೆ ಎಂಬುದು ನಮಗೆ ಅರಿವಿಗೆ ಬರುವಂತೆ ಮಾಡುತ್ತದೆ. ಮಿದುಳಿನ ಆ ಮೂರು…

Read More

”ಫಾರ್ ರಿಜಿಸ್ಟ್ರೇಷನ್” ಸ್ಯಾಂಡಲ್ವುಡ್ನಲ್ಲಿ ಹಲವು ವಿಚಾರಗಳಿಂದ ಸದ್ದು ಮಾಡುತ್ತಿರುವ ಹೊಸ ಸಿನಿಮಾ. ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ನಟಿಸಿರುವ ಬಹುನಿರೀಕ್ಷಿತ ಚಿತ್ರದ ಮೊದಲ ನೋಟ ಅನಾವರಣಗೊಂಡಿದೆ. ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದ ಸಂಘದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.. ವಾಲಗದ ಮೂಲಕ ಇಡೀ ಚಿತ್ರತಂಡ ಸುದ್ದಿಗೋಷ್ಠಿಗೆ ಎಂಟ್ರಿ ಕೊಟ್ಟಿದ್ದು, ವಿಶೇಷವಾಗಿತ್ತು. ನಿರ್ದೇಶಕರಾದ ಶಶಾಂಕ್ ಹಾಗೂ ಚೇತನ್ ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿ ನಟ ಪೃಥ್ವಿ ಅಂಬಾರ್ ಮಾತನಾಡಿ, ಫಾರ್ ರಿಜಿಸ್ಟ್ರೇಷನ್ ಎರಡು ಸಹಪಾಠಿಗಳ ಪ್ರಯತ್ನ ಇದು. ಇಬ್ಬರು ನವೀನ್ ಅವರ ಕನಸಿನ ಕೂಸು ಇದು. ತುಂಬಾ ಹಾರ್ಡ್ ವರ್ಕ್ ಆಗಿದೆ. ಈ ಚಿತ್ರಕ್ಕಾಗಿ. ಫಾರ್ ರಿಜಿಸ್ಟ್ರೇಷನ್ ಬಗ್ಗೆ ಗೊತ್ತಿರಬಹುದು. ಜಾಗ, ಗಾಡಿ ಅದು ಇದು ಅಂತಾ. ಮನಸ್ಸಿನಲ್ಲಿ ಸಂಬಂಧಗಳು ರಿಜಿಸ್ಟ್ರೇಷನ್ ಆಗಬೇಕು. ಅನ್ನೋದು ನಮ್ಮ ಆಸೆ. ಟ್ರೇಲರ್ ನೋಡಿದ್ದೀರಾ? ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಸಿನಿಮಾ ಎಲ್ಲರಿಗೂ ಹತ್ತಿರವಾಗುತ್ತದೆ. ಎಲ್ಲಾ ಪಾತ್ರ…

Read More