ಗಾಂಧಿನಗರ: ಇದೇ ಮೊದಲ ಬಾರಿಗೆ ಗುಜರಾತ್ನ ಗಾಂಧಿನಗರ ಲೋಕಸಭಾ ಕ್ಷೇತ್ರದ ಜನರಿಗಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿಯನ್ನ ಆಯೋಜಿಸಿದ್ದು, ಅಧಿಕೃತವಾಗಿ ಚಾಲನೆಗೊಂಡಿದೆ.
ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ, ಅಮಿತ್ ಶಾ ಜೊತೆಗೂಡಿ ʻಗಾಂಧಿನಗರ ಲೋಕಸಭಾ ಪ್ರೀಮಿಯರ್ ಲೀಗ್ʼಗೆ (Lok Sabha Premier League) ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯ್ ಪಟೇಲ್ ಸಹ ಸಾಥ್ ನೀಡಿದ್ದಾರೆ
![Demo](https://ainlivenews.com/wp-content/uploads/2023/12/spoorthi-1.jpg)
ಇಂಗ್ಲೆಂಡ್ ಟೀಂಗೆ ಬಿಗ್ ಶಾಕ್: ಮೂರು ಪಂದ್ಯಗಳಿಂದಲೂ ಹೊರಬಿದ್ದ ಪ್ರಮುಖ ಸ್ಪಿನ್ನರ್
ʻಖೇಲೋ ಇಂಡಿಯಾʼ ಮಾದರಿಯಲ್ಲಿ ಕ್ರೀಡಾ ಉತ್ಸಾಹ ಬೆಳೆಸುವ ನಿಟ್ಟಿನಲ್ಲಿ ʻಖೇಲೋ ಗಾಂಧಿನಗರʼ ಘೋಷವಾಕ್ಯದ ಅಡಿಯಲ್ಲಿ ಟೂರ್ನಿ ಆಯೋಜಿಸಲಾಗಿದೆ.
ವೆಜಲ್ಪುರ, ಘಟ್ಲೋಡಿಯಾ, ನಾರಣಪುರ, ಸಬರಮತಿ, ಗಾಂಧಿನಗರ ಉತ್ತರ, ಮಾನ್ಸಾ ಮತ್ತು ಸನಂದ್ ಸೇರಿ ಏಳು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ರಿಕೆಟ್ ಟೂರ್ನಿಯು 13 ಮೈದಾನಗಳಲ್ಲಿ 21 ದಿನಗಳ ಕಾಲ ನಡೆಯಲಿದೆ. ಒಟ್ಟು 1,078 ತಂಡಗಳ ನಡುವೆ ಲೀಗ್ ಪಂದ್ಯಗಳು ನಡೆಯಲಿದ್ದು, 16,100 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಪ್ರತಿ ಪಂದ್ಯಕ್ಕೆ 10 ಓವರ್ ಮೀಸಲಾಗಿರುತ್ತದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)