Author: AIN Author

ಉತ್ತರ ಪ್ರದೇಶ: ದೆಹಲಿ ಮುಖ್ಯಮಂತ್ರಿ  ಅವರು ಕುಟುಂಬ ಸಮೇತರಾಗಿ ಅಯೋಧ್ಯೆಯ ಐತಿಹಾಸಿಕ ರಾಮಮಂದಿರಕ್ಕೆ ಭೇಟಿ ನೀಡಿ ಭಗವಾನ್‌ ರಾಮಲಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಭವ್ಯ ದೇವಾಲಯಕ್ಕೆ ಭೇಟಿ ನೀಡಿದರು. ಉಭಯ ನಾಯಕರ ಕುಟುಂಬದವರೂ ಜೊತೆಗಿದ್ದರು. ರಾಮಲಲ್ಲಾಗೆ ಪ್ರಾರ್ಥನೆ ಸಲ್ಲಿಸಿದ ನಂತರ ನಾನು ವರ್ಣಿಸಲಾಗದ ಶಾಂತತೆಯನ್ನು ಅನುಭವಿಸಿದೆ. ಪ್ರತಿದಿನ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಜನರ ಪ್ರೀತಿ ಮತ್ತು ಭಕ್ತಿಯನ್ನು ನೋಡುವುದು ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಎಲ್ಲರ ಒಳಿತಿಗಾಗಿ ನಾನು ಪ್ರಾರ್ಥಿಸಿದ್ದೇನೆ ಎಂದು ಸಿಎಂ ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ. https://ainlivenews.com/are-you-suffering-from-blood-pressure-the-benefits-of-eating-papaya-fruit/ ರಾಮಲಲ್ಲಾನ ದರ್ಶನ ಪಡೆಯುವುದು ನನ್ನ ಬಹುದಿನಗಳ ಆಸೆಯಾಗಿತ್ತು. ದೇಶದ ಕ್ಷೇಮಕ್ಕಾಗಿ ಪ್ರಾರ್ಥಿಸಿದ್ದೇನೆ ಎಂದು ಪಂಜಾಬ್ ಸಿಎಂ ಮಾನ್ ಹೇಳಿದ್ದಾರೆ. ಅಯೋಧ್ಯೆಯ ದೇವಾಲಯದಲ್ಲಿ ರಾಮಲಲ್ಲಾನ ‘ಪ್ರಾಣ ಪ್ರತಿಷ್ಠಾಪನೆ’ ಜ.22 ರಂದು ನೆರವೇರಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ ನಡೆದಿತ್ತು.  

Read More

ಬೆಂಗಳೂರು : ಒಂದು ನಯಾ ಪೈಸೆ ಕೊಡದೆ ಯಾವ ಬಿಲ್ ಕೂಡ ಪಾಸ್ ಆಗಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪರೋಕ್ಷವಾಗಿ ಕಮಿಷನ್ ಆರೋಪ ಮುಂದುವರಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗ ಕಮಿಷನ್ ಪರ್ಸೆಂಟೇಜ್ ಕಡಿಮೆ ಆಗಿದೆ. ಆದರೆ, ಎಷ್ಟು ಕಡಿಮೆ ಆಗಿದೆ ಗೊತ್ತಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರಿಸಿದರು. Loksabha Election: ಲೋಕಸಭೆ ಚುನಾವಣೆಗೆ ನಾನು ನಿಲ್ಲಲ್ಲ, ನಿಖಿಲ್ ಕೂಡ ನಿಲ್ಲಲ್ಲ: ಹೆಚ್.ಡಿ. ದೇವೇಗೌಡ ಸ್ಪಷ್ಟನೆ ಬಿಬಿಎಂಪಿ ಬಿಲ್ ಕ್ಲಿಯರ್ ಮಾಡಿಕೊಡುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ನಮಗೆ ಭರವಸೆ ಕೊಟ್ಟಿದ್ದಾರೆ. ಶೀಘ್ರವೇ ಎಲ್ಲಾ ಬಾಕಿ ಬಿಲ್ ಕ್ಲಿಯರ್ ಮಾಡುತ್ತೇನೆ ಎಂದು ಹೇಳಿದ್ದಾರೆ. ನಮಗೆ ಇನ್ನೂ ಸಾವಿರಾರು ಕೋಟಿ ರೂಪಾಯಿ ಬಿಲ್ ಬಾಕಿ ಉಳಿದಿದೆ. ಅವೆಲ್ಲವನ್ನೂ ರಾಜ್ಯ ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡುವ ವಿಶ್ವಾಸ ನಮಗಿದೆ ಎಂದು ಹೇಳಿದರು. 600 ಕೋಟಿಯಲ್ಲಿ ಎಷ್ಟು ಪರ್ಸೆಂಟೇಜ್ ಕೊಟ್ಟಿದ್ದೀರಿ? ಎಂಬ ಪ್ರಶ್ನೆಗೆ, ಒಂದೊಂದೇ ಬಿಲ್ ಕ್ಲಿಯರ್ ಆಗುತ್ತಿದೆ,…

Read More

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ನಲ್ಲಿ ಯವಕನೊಬ್ಬ ಹೋರಿಹಬ್ಬ ದಲ್ಲಿ ಸಾವನ್ನಪ್ಪಿದ್ದಾರೆ. ಈತನ ಮೂಲತಃ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕು ಹೊಸಮಳಲಿ ಗ್ರಾಮದ ನಿವಾಸಿಯಾಗಿದ್ಧಾನೆ. ಹೆಸರು ಪುನೀತ್ ಆಚಾರ್, ವಯಸ್ಸು 19 ಎಂದು ಗೊತ್ತಾಗಿದೆ. ಈತ ಐಟಿಐ ವಿದ್ಯಾರ್ಥಿಯಾಗಿದ್ದು ಹೋರಿಹಬ್ಬ ನೋಡಲು ಅಂತ ಬಂದಿದ್ದ ಎಂದು ಗೊತ್ತಾಗಿದೆ. https://ainlivenews.com/are-you-suffering-from-blood-pressure-the-benefits-of-eating-papaya-fruit/ ಶಿಕಾರಿಪುರ ತಾಲ್ಲೂಕು ಕಲ್ಮನೆಯಲ್ಲಿ ಹೋರಿಹಬ್ಬ ಆಯೋಜಿಸಲಾಗಿತ್ತು. ತುಂಬಾ ಜೋರಾಗಿ ನಡೆಯುವ ಹೋರಿಹಬ್ಬ ನೋಡಲು ಸಾವಿರಾರು ಮಂದಿ ಬರುತ್ತಾರೆ. ಅದರಂತೆ ಪುನೀತ್ ಕೂಡ ಬಂದಿದ್ದ. ಆಕಸ್ಮಿಕವಾಗಿ ಬೆದರಿದ ಹೋರಿ ಓಡುವ ಸಂದರ್ಭದಲ್ಲಿ ಪುನೀತ್​ಗೆ ತಿವಿದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪುನೀತ್​ರನ್ನ ಸ್ಥಳೀಯರು ಆ್ಯಂಬುಲೆನ್ಸ್​ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಾಗಲೇ ಪುನೀತ್ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ.

Read More

ಬೆಂಗಳೂರು: ಸರ್ಕಾರ ಹುಕ್ಕಾ ಬಾರ್ ಗಳನ್ನ ಬ್ಯಾನ್ ಮಾಡಿದ್ದೇ ತಡ ಸಿಸಿಬಿ ಮಹಾಬೇಟೆ ಶುರುವಾಗಿದೆ .ಅಕ್ರಮವಾಗಿ ಹುಕ್ಕಾ ಬಾರ್ ನಡೆಸ್ತದಿದ ಅವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಕೋಟಿ ಕೋಟಿ ಮೌಲ್ಯದ ನಿಕೋಟಿನ್ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಸರ್ಕಾರ ರಾಜ್ಯದಲ್ಲಿ ಹುಕ್ಕಾ ಬಾರ್ ಗಳನ್ನ ಬಂದ್ ಮಡಿ ಆದೇಶ ಹೊರಡಿಸಿದೆ.ಅದಾಗಿಯೊ ಅಲ್ಲಲ್ಲಿ ಅಕ್ರಮವಾಗಿ ಹುಕ್ಕಾ ಸ್ಪಾಟ್ ಗಳು ತಲೆ‌ ಎತ್ತಿವೆ..ನಿಷೇಧಿತ ತಂಬಾಕು ಪದಾರ್ಥಗಳನ್ನ ಮಾರಾಟ ಮಾಡಿ‌ ಹಣ ಮಾಡ್ತಿವೆ.ಇಂತಹ ಅಕ್ರಮ ಹುಕ್ಕಾಬಾರ್ ಮೇಲೆ ಸಿಸಿಬಿ ಪೊಲೀಸರು ಸವಾರಿ ಮಾಡಿದ್ದಾರೆ. Election Fight: ರಾಜ್ಯಸಭೆ, ಲೋಕಸಭೆ ಚುನಾವಣೆ: ವೀರಶೈವ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡುವಂತೆ ಒತ್ತಡ ಅಬ್ಬಬ್ಬಾ ನೋಡಿದ್ರಾ ಗೋಡೌನ್ ನಲ್ಲಿ ಅದ್ಹೇಗೆ ಕಂತೆ ಕಂತೆಯಾಗಿ ತಂಬಾಕು ವಸ್ತುಗಳನ್ನ ಜೋಡಿಸಿಟ್ಟಿದ್ದಾರೆ ಅಂತಾ ಇದೆಲ್ಲ ಹುಕ್ಕಾ ಬಾರ್ ನಲ್ಲಿ ಬಳಸೊ ನಸರ್ಕಾರದಿಂದ ನಿಷೇಧ ಗೊಂಡಿರೊ ಅಫ್ಜಲ್ ಎಂಬ ಹೆಸರಿನ ಮೊಲಾಸಿಸ್,ದಿಲ್ ಬಾಗ್,ಜೆಡ್ ಎಲ್ -01,ಆಕ್ಷನ್ -7,ಬಾದ್ ಷಾ,ಮಹಾ ರಾಯಲ್ -717 ಉತ್ಪನ್ನಗಳು.ಇದೆಲ್ಲವನ್ನು ಹೆಚ್ಚಿನ ಹಣಕ್ಕೆ…

Read More

ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಿ ನಟಿಸುತ್ತಿರುವ, ರವಿರಾಜ್ ನಿರ್ಮಾಣದ ಹಾಗೂ ಎಂ.ಶಶಿಧರ್ ನಿರ್ದೇಶನದ “ಅಜಾಗ್ರತ” ಚಿತ್ರಕ್ಕೆ ನೂರು ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಹೈದರಾಬಾದ್ ಹಾಗೂ ಮುಂಬೈನಲ್ಲಿ ಚಿತ್ರೀಕರಣವಾಗಿದೆ. ಕೆಲವು ಮಾತಿನ ಭಾಗದ ಹಾಗೂ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಈ ತಿಂಗಳ ಕೊನೆಗೆ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಇತ್ತೀಚಿಗೆ ನಿರ್ದೇಶಕ ಶಶಿಧರ್ ಅವರ ಹುಟ್ಟುಹಬ್ಬ ಹಾಗೂ ಚಿತ್ರ ನೂರು ದಿನಗಳ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿದೆ. ಈ ಎರಡು ಸಂಭ್ರಮಗಳನ್ನು ಸಂಭ್ರಮಿಸಲು ನಿರ್ಮಾಪಕ ರವಿರಾಜ್ ಹಾಗೂ ರಾಧಿಕಾ ಕುಮಾರಸ್ವಾಮಿ ಅವರು ನಿರ್ದೇಶಕರಿಂದ ನೂರು ಕೇಜಿ ಕೇಕ್ ಕಟ್ ಮಾಡಿಸಿದರು. ಇಡೀ ಚಿತ್ರತಂಡ ಈ ಸಂದರ್ಭದಲ್ಲಿ ಭಾಗಿಯಾಗಿತ್ತು. ಬಾಲಿವುಡ್ ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ಅಭಿನಯಿಸುತ್ತಿದ್ದಾರೆ. ಹೆಸರಾಂತ ನಟ ಬಾಬಿ ಸಿಂಹ ಸಹ ಈಗ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ರಾವ್ ರಮೇಶ್‌, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್,…

Read More

ಬೆಂಗಳೂರು: ವ್ಯಕ್ತಿಯೊಬ್ಬ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿಯ ಕೈ ಬೆರಳನ್ನೇ ಕಚ್ಚಿದ ಪ್ರಸಂಗವೊಂದು ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆ ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಬಳಿ ಜರುಗಿದೆ. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಜೊತೆಗೆ ವ್ಯಕ್ತಿಯ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿದೆ. Vidhanaparishath: ಕೇಂದ್ರ ಸರ್ಕಾರ ಪ್ರಚಾರಕ್ಕೋಸ್ಕರ ಭಾರತ್‌ ರೈಸ್‌ ಅಕ್ಕಿ ನೀಡುತ್ತಿದೆ: KH ಮುನಿಯಪ್ಪ ಕಿಡಿ! ನಡೆದಿದ್ದೇನು..?: 28 ವರ್ಷದ ಸಯ್ಯದ್ ಸಫಿ ಎಂಬಾತ ಹೆಲ್ಮೆಟ್‌ ಇಲ್ಲದೇ ಸ್ಕೂಟಿ ಚಲಾಯಿಸುತ್ತಿದ್ದ. ಇದನ್ನು ಗಮನಿಸಿದ ಟ್ರಾಫಿಕ್‌ ಪೊಲೀಸ್‌ ಆತನನ್ನು ತಡೆದಿದ್ದಾರೆ. ಬಳಿಕ ಪೇದೆ ಆತನ ಬಳಿಯಿಂದ ಕೀ ಕಿತ್ತುಕೊಂಡಿದ್ದಾರೆ. ಹೆಡ್ ಕಾನ್‌ಸ್ಟೆಬಲ್ ಸಿದ್ದರಾಮೇಶ್ವರ ಕೌಜಲಗಿ ಅವರು ಟ್ರಾಫಿಕ್‌ ಉಲ್ಲಂಘಿಸಿದ ಪ್ರಕರಣ ದಾಖಲಿಸಿಕೊಳ್ಳಲು ವೀಡಿಯೋ ಮಾಡಿದ್ದಾರೆ. ಕೀ ಕಿತ್ತುಕೊಂಡಿದ್ದಕ್ಕೆ ಸಿಟ್ಟಿಗೆದ್ದ ಯುವಕ, ಟ್ರಾಫಿಕ್‌ ಪೊಲೀಸ್‌ ಕೈ ಬೆರಳನ್ನೇ ಕಚ್ಚಿದ್ದಾನೆ. ಇತ್ತ ಹೆಡ್ ಕಾನ್‌ಸ್ಟೆಬಲ್‌ನ ಫೋನ್ ಕಿತ್ತುಕೊಂಡ ಸಯ್ಯದ್ ಸಫಿ, ತನ್ನ ವೀಡಿಯೋ ಯಾಕೆ ರೆಕಾರ್ಡ್‌ ಮಾಡುತ್ತಿದ್ದೀರಿ ಎಂದು…

Read More

ಬಳ್ಳಾರಿ: ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಸಾರ್ವಜನಿಕರಿಗೆ ಅರಿವು ಮೂಡಿಸಲು ಹಮ್ಮಿಕೊಂಡಿರುವ “ಸಂವಿಧಾನ ಜಾಗೃತಿ ಜಾಥಾ”ವು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಸಂಚರಿಸುತ್ತಿದೆ. ಸೋಮವಾರದಂದು ಕುರುಗೋಡು ಪಟ್ಟಣಕ್ಕೆ ಆಗಮಿಸಿದ್ದ ಸಂವಿಧಾನ ಜಾಗೃತಿ ಜಾಥಾವನ್ನು ತಾಲ್ಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿ ವರ್ಗದವರು, ನೇತಾರರ ವೇಷ ಭೂಷಣಗಳನ್ನು ಧರಿಸಿದ ವಿದ್ಯಾರ್ಥಿಗಳು, ಹಲಗೆ ಮತ್ತು ಡೊಳ್ಳು ಕಲಾವಿದರು, ಹಗಲು ವೇಷಗಾರರು, ಸುಡುಗಾಡು ಸಿದ್ಧರ ವೇಷ ಧರಿಸಿದ ಸುಡುಗಾಡು ಸಿದ್ಧರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಗ್ರಾಮದ ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಎಲ್ಲಾ ಸೇರಿ ಅತ್ಯಂತ ಸಂಭ್ರಮ, ಸಡಗರದಿಂದ ಸ್ವಾಗತಿಸಿದರು. ಜಾಥಾವು ಕುರುಗೋಡು ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಮೆರವಣಿಗೆ ಮೂಲಕ ಸಾಗಿತು. ಜಾಥಾದೊಂದಿಗೆ ಶಾಲಾ ಮಕ್ಕಳ ಸೈಕಲ್ ಜಾಥಾ, ಹೂವಿನ ಸೂಸುಗ ಧರಿಸಿ ಕಳಶ ಹಿಡಿದು ಹೆಂಗಳೆಯರು, ಹಗಲು ವೇಷಧಾರಿಗಳು, ಸುಡುಗಾಡು ಸಿದ್ಧರು, ಡೊಳ್ಳು…

Read More

ಬೆಂಗಳೂರು: ಭಾರತ್   ಅಕ್ಕಿಯನ್ನು ಕೇಂದ್ರ ಸರ್ಕಾರ ಪ್ರಚಾರಕ್ಕೋಸ್ಕರ ನೀಡುತ್ತಿದೆ ಎಂದು ಆಹಾರ ಮತ್ತು ನಾಗರೀಕ ಸಚಿವ ಮುನಿಯಪ್ಪ ಕಿಡಿಕಾರಿದ್ದಾರೆ. Loksabha Election: ಲೋಕಸಭೆ ಚುನಾವಣೆಗೆ ನಾನು ನಿಲ್ಲಲ್ಲ, ನಿಖಿಲ್ ಕೂಡ ನಿಲ್ಲಲ್ಲ: ಹೆಚ್.ಡಿ. ದೇವೇಗೌಡ ಸ್ಪಷ್ಟನೆ ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ಬಿಜೆಪಿಯ ರವಿಕುಮಾರ್ (Ravikumar)  ಅವರು ಜನರು ಹಸಿವಿನಿಂದ ಬಳಲುತ್ತಿದ್ದಾರೆ ಅಂತ ಪ್ರಸ್ತಾಪ ಮಾಡಿದ್ದರು. ಇದಕ್ಕೆ ಮುನಿಯಪ್ಪನವರು ಉತ್ತರಿಸಿ, ನಾವು ಅಕ್ಕಿ ಕೇಳಿದ್ದಾಗ ಕೇಂದ್ರ ಸರ್ಕಾರ ಕೊಡಲಿಲ್ಲ. ಈಗ ಭಾರತ್ ಅಕ್ಕಿ ಹೆಸರಿನಲ್ಲಿ 1 ಕೆಜಿಗೆ 29 ರೂ.ಗೆ ನಷ್ಟ ಮಾಡಿಕೊಂಡು ಅಕ್ಕಿ ಕೊಡ್ತಿದೆ. ಪ್ರಚಾರಕ್ಕಾಗಿ ಕೇಂದ್ರ ಅಕ್ಕಿ ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ನಾವು ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಿ ಎಂದು ಕೇಳಿದಾಗ ನಮಗೆ ಅಕ್ಕಿ ಕೊಡಲಿಲ್ಲ. ನಾವು 34 ರೂಪಾಯಿಗೆ ಕೊಡ್ತೀವಿ ಅಂದರೂ ಕೊಡಲಿಲ್ಲ. ನಾವು ಬೇರೆ ರಾಜ್ಯದಿಂದ ಅಕ್ಕಿ ತರುವ ಪ್ರಯತ್ನ ಮಾಡಿದ್ರು ಆಗಲಿಲ್ಲ. ಹಾಗಾಗಿ ನಾವು 34 ರೂಪಾಯಿ ಹಣವನ್ನು ಫಲಾನುಭವಿಗಳಿಗೆ ನೀಡುತಿದ್ದೇವೆ. ಕೇಂದ್ರ…

Read More

ಬೆಂಗಳೂರು : ಲೋಕಸಭೆಗೆ ನೀವು, ಕುಮಾರಸ್ವಾಮಿ, ನಿಖಿಲ್ ನಿಲ್ಲಬೇಕು ಎಂದು ಕಳಕಳಿಯಿಂದ ಹೇಳಿದ್ದಾರೆ. ನಾನು ನಿಲ್ಲಲ್ಲ, ನಿಖಿಲ್ ಕೂಡ ನಿಲ್ಲಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದ ಎಂಟೂ ಕ್ಷೇತ್ರದಲ್ಲೂ ಓಡಾಟ ನಡೆಸುತ್ತೇವೆ ಎಂದು ಹೇಳಿದರು. APY- Atal Pension Yojana: ಈ ಯೋಜನೆಯಲ್ಲಿ ಜಸ್ಟ್ 264 ರೂ. ಠೇವಣಿ ಮಾಡಿ, ಪ್ರತಿ ತಿಂಗಳು 5,000 ರೂ. ಪಿಂಚಣಿ ಪಡೆಯಿರಿ! ರಾಜ್ಯಾದ್ಯಂತ ಓಡಾಡಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಕಾರ್ಯಕರ್ತರೊಂದಿಗೆ ಸಭೆ ಮಾಡಿ ಮಾತನಾಡಿದ್ದಾರೆ. ಇಲ್ಲಿನ ಸಭೆಯಲ್ಲಿ ನಾವು ಮೂವರಲ್ಲಿ ಒಬ್ಬರು ನಿಲ್ಲಿ ಎಂದು ಒತ್ತಾಯ ಮಾಡಿದ್ದಾರೆ ಎಂದು ತಿಳಿಸಿದರು. ಜೆಡಿಎಸ್ ಹಾಗೂ ಬಿಜೆಪಿ ಪ್ರಶ್ನೆ ಅಲ್ಲ. ಎನ್​ಡಿಎ ಕೂಟದಲ್ಲಿ ನಾವು ಇದ್ದೇವೆ. ಅಂತಿಮವಾಗಿ ಪ್ರಧಾನಿ ಮೋದಿ, ಜೆ.ಪಿ. ನಡ್ಡಾ, ಕುಮಾರಸ್ವಾಮಿ, ಯಡಿಯೂರಪ್ಪ ಎಲ್ಲರೂ ಸಮಾಲೋಚನೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದು ದೇವೇಗೌಡ ಹೇಳಿದರು

Read More

ಚಿಕ್ಕೋಡಿ:ನಿದ್ರೆಗೆ ಜಾರಿದ ಗ್ರಾಮ ಲೆಕ್ಕಧಿಕಾರಿ ಸಿದ್ದು ಹತ್ತರಕಿ ಹೌದು ರಾಯಭಾಗ ತಾಲೂಕಿನ ಮುಗಳಖೊಡ ಗ್ರಾಮ ಲೆಕ್ಕಧಿಕಾರಿ ಅಕ್ಷರಶ ಚಿರನಿದ್ರೆಗೆ ಜಾರಿದಂತಿದೆ ಯಾಕೆ ಅಂತೀರಾ ಈ ಸ್ಟೋರಿ ನೋಡಿ ಮುಗಳಖೊಡ ಪುರಸಭೆ ವ್ಯಾಪ್ತಿಯಲ್ಲಿ ಹಲವಾರು ಕಡೆ ಸಾರ್ವಜನಿಕ ಸರ್ಕಾರಿ ಜಾಗವಿದೆ ಆದ್ರೆ ಅದು ಕೆಲ ಬಲಿಷ್ಠ ಕೈಗಳ ಮುಷ್ಟಿಯಲ್ಲಿದ್ದಂತೆ ಕಾಣುತ್ತಿದೆ, ಸಾರ್ವಜನಿಕ ಸರ್ಕಾರಿ ಜಾಗೆಯನ್ನು ಹಲವಾರು ಜನರು ತಮ್ಮ ಸ್ವಂತ ಜಾಗೆ ಎಂಬಂತೆ ಬಳಕೆ ಮಾಡುತ್ತಿದ್ದರೂ ತಮಗೆ ಏನು ಸಂಬಂಧ ಇಲ್ಲಾ ಅಂಬಂತೆ ವರ್ತನೆ ಮಾಡುತ್ತಿದ್ದಾರೆ ಈ ಗ್ರಾಮ ಲೆಕ್ಕಧಿಕಾರಿ ಸಾರ್ವಜನಿಕ ಜಾಗದ ಕುರಿತು ಸಾಕಷ್ಟು ಬಾರಿ ಸಿದ್ದು ಹತ್ತರಕಿ ತಲಾಟಿಯವರ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗುತ್ತಿಲ್ಲ ಅನ್ನೋದು ವಿಪರ್ಯಾಸ ಸಂಗತಿಯಾಗಿದೆ ಸರ್ಕಾರಿ ಜಾಗೆಯಲ್ಲಿ ಬಲಿಷ್ಠ ಕೈಗಳು ಅರಿಶಿನ ಒಣಗಿಸಲು ಬಳಸುತ್ತಿದ್ದಾರೆ ಇದರಿಂದ ಹಲವಾರು ಕಡೆಗಳಲ್ಲಿ ರಸ್ತೆ ಬಂದ ಕೂಡ ಆಗಿದೆ. ಪಟ್ಟಣದ ಪ್ರಮುಖ ರಸ್ತೆಗಳು ಪಕ್ಕ ಕೂಡ ಅರಿಸಿನ ಒಣಗಿಸುತ್ತಿರುವದರಿಂದ ಸಂಚಾರಕ್ಕೆ ತೊಂದ್ರೆ ಆಗುತ್ತಿದೆ. ಈ ಜ್ವಲಂತ ಸಮಸ್ಸೆ ಮುಂದಿನ…

Read More