ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ನಲ್ಲಿ ಯವಕನೊಬ್ಬ ಹೋರಿಹಬ್ಬ ದಲ್ಲಿ ಸಾವನ್ನಪ್ಪಿದ್ದಾರೆ. ಈತನ ಮೂಲತಃ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕು ಹೊಸಮಳಲಿ ಗ್ರಾಮದ ನಿವಾಸಿಯಾಗಿದ್ಧಾನೆ. ಹೆಸರು ಪುನೀತ್ ಆಚಾರ್, ವಯಸ್ಸು 19 ಎಂದು ಗೊತ್ತಾಗಿದೆ. ಈತ ಐಟಿಐ ವಿದ್ಯಾರ್ಥಿಯಾಗಿದ್ದು ಹೋರಿಹಬ್ಬ ನೋಡಲು ಅಂತ ಬಂದಿದ್ದ ಎಂದು ಗೊತ್ತಾಗಿದೆ.
ರಕ್ತದೊತ್ತಡ ಕಾಡುತ್ತಿದೆಯೇ: ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಸಿಗುತ್ತೆ ಪ್ರಯೋಜನ!
ಶಿಕಾರಿಪುರ ತಾಲ್ಲೂಕು ಕಲ್ಮನೆಯಲ್ಲಿ ಹೋರಿಹಬ್ಬ ಆಯೋಜಿಸಲಾಗಿತ್ತು. ತುಂಬಾ ಜೋರಾಗಿ ನಡೆಯುವ ಹೋರಿಹಬ್ಬ ನೋಡಲು ಸಾವಿರಾರು ಮಂದಿ ಬರುತ್ತಾರೆ. ಅದರಂತೆ ಪುನೀತ್ ಕೂಡ ಬಂದಿದ್ದ. ಆಕಸ್ಮಿಕವಾಗಿ ಬೆದರಿದ ಹೋರಿ ಓಡುವ ಸಂದರ್ಭದಲ್ಲಿ ಪುನೀತ್ಗೆ ತಿವಿದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪುನೀತ್ರನ್ನ ಸ್ಥಳೀಯರು ಆ್ಯಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಾಗಲೇ ಪುನೀತ್ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ.