Author: AIN Author

ಗಗನಕ್ಕೇರಿರುವ ಬೆಳ್ಳುಳ್ಳಿ ದರದಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಬೆಂಗಳೂರಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮಧ್ಯಪ್ರದೇಶದಿಂದ ಅತಿಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಪೂರೈಕೆಯಾಗುತ್ತದೆ. ಪ್ರತಿದಿನ 3 ಸಾವಿರದಿಂದ 4 ಸಾವಿರ ಚೀಲ (ಪ್ರತಿ ಚೀಲ 50 ಕೆ.ಜಿ) ಆವಕವಾಗುತ್ತಿದೆ. ಎರಡು ದಿನಗಳ ಹಿಂದೆ ‘ಎ’ ದರ್ಜೆಯ ಹೈಬ್ರೀಡ್‌ ಬೆಳ್ಳುಳ್ಳಿಯ ಸಗಟು ಧಾರಣೆಯು ಪ್ರತಿ ಕೆ.ಜಿಗೆ ₹330ರಿಂದ ₹340 ಇತ್ತು. ಸದ್ಯ ₹300ಕ್ಕೆ ಇಳಿಕೆಯಾಗಿದೆ. ಮಧ್ಯಪ್ರದೇಶದಲ್ಲಿ ಬೆಳ್ಳುಳ್ಳಿ ಕೊಯ್ಲು ಆರಂಭವಾಗಿದೆ. ಹಾಗಾಗಿ, ಆವಕ ಹೆಚ್ಚಾಗುತ್ತಿರುವುದರಿಂದ ಸಗಟು ದರದಲ್ಲಿ ಇಳಿಕೆಯಾಗಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಜವಾರಿ ಬೆಳ್ಳುಳ್ಳಿ ಪ್ರತಿ ಕೆ.ಜಿಗೆ ₹450 ದಾಟಿದೆ. ಹೈಬ್ರೀಡ್‌ ಬೆಳ್ಳುಳ್ಳಿ ಕೆ.ಜಿಗೆ ₹400ರಿಂದ ₹430 ಇದೆ. ರಾಜ್ಯದಲ್ಲಿ ಡಿಸೆಂಬರ್‌ ಎರಡನೇ ವಾರದಲ್ಲಿ ಬೆಳ್ಳುಳ್ಳಿ ದರವು ಏರಿಕೆಯ ಹಾದಿ ಹಿಡಿದಿತ್ತು. ಅಂದಿನಿಂದ ಇಲ್ಲಿಯವರೆಗೂ ಬೆಲೆ ಇಳಿಕೆಯಾಗಿಲ್ಲ. ಯಶವಂತಪುರದ ಮಾರುಕಟ್ಟೆಯಿಂದ ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಳ್ಳುಳ್ಳಿ ಪೂರೈಕೆಯಾಗುತ್ತದೆ. ಬೆಂಗಳೂರು ನಗರ ಸೇರಿದಂತೆ…

Read More

ಕೋಲ್ಕತ್ತಾ: ಸೇತುವೆ ಏರಿ ಆತ್ಮಹತ್ಯೆ (Suicide) ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಹುಚ್ಚಾಟ ನಡೆಸುತ್ತಿದ್ದ ವ್ಯಕ್ತಿಗೆ ಬಿರಿಯಾನಿ (Biriyani) ಆಫರ್ ನೀಡಿ ಪೊಲೀಸರು ರಕ್ಷಣೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ  (West Bengal) ನಡೆದಿದೆ. ಕೋಲ್ಕತ್ತಾ ಮೂಲದ 40 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಗರದಲ್ಲಿರುವ ಸೇತುವೆಯನ್ನು ಏರಿ ಬೆದರಿಕೆ ಹಾಕಿ ಹುಚ್ಚಾಟ ನಡೆಸಿದ್ದಾರೆ. ಹೆಂಡತಿಯಿಂದ ಬೇರ್ಪಟ್ಟ ಕಾರಣ ತೀವ್ರ ಮಾನಸಿಕ ಒತ್ತಡಕ್ಕೆ ತುತ್ತಾಗಿದ್ದರು. ಇತ್ತ ವ್ಯವಹಾರದಲ್ಲಿಯೂ ಅರ್ಥಿಕ ನಷ್ಟಗಳಿಂದ ಸಮಸ್ಯೆ ಎದುರಿಸುತ್ತಿದ್ದರು. ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ವ್ಯಕ್ತಿ ಮಧ್ಯಾಹ್ನ 3:20ರ ಸುಮಾರಿಗೆ ವಾಹನದಲ್ಲಿ ಹಿರಿಯ ಮಗಳನ್ನು ಸೈನ್ಸ್ ಸಿಟಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸೇತುವೆಯ ಬಳಿ ವಾಹನ ನಿಲ್ಲಿಸಿದ್ದಾರೆ. https://ainlivenews.com/indias-senior-test-cricketer-former-captain-dattajirao-gaikwad-passed-away/ ಮೊಬೈಲ್ ಫೋನ್ ರಸ್ತೆಯ ಮೇಲೆ ಬಿದ್ದುಹೋಗಿದೆ ನಾನು ಅದನ್ನ ಹುಡುಕಿಕೊಂಡು ಬರುತ್ತೇನೆ ಎಂದು ಮಗಳಿಗೆ ಹೇಳಿ ಹೋಗಿದ್ದಾರೆ. ನಂತರ ಸೇತುವೆ ಮೇಲೆ ಹತ್ತಿ ಅಲ್ಲಿಂದ ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕಿ ನೆರೆದಿದ್ದ ಜನರ ಮಂದೆ ಹುಚ್ಚಾಟ…

Read More

ಬೆಂಗಳೂರು:- ನಗರದ ಯಲಹಂಕದಲ್ಲಿ 85 ಕೋಟಿ ಮೌಲ್ಯದ ಆಸ್ತಿಯ ಅಕ್ರಮ ಒತ್ತುವರಿಯನ್ನು ಬಿಬಿಎಂಪಿ ತೆರವುಗೊಳಿಸಿದೆ. ಕಂದಾಯ ಇಲಾಖೆ ಹಾಗೂ ಪೊಲೀಸರ ಸಹಕಾರದೊಂದಿಗೆ ಯಲಹಂಕದಲ್ಲಿ 2.75 ಎಕರೆ ಪ್ರದೇಶದಲ್ಲಿದ್ದ 85 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಅಕ್ರಮ ಒತ್ತುವರಿಯನ್ನು ಬಿಬಿಎಂಪಿ ಮಂಗಳವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು. ಬಿಬಿಎಂಪಿ ಹೇಳಿಕೆ ಪ್ರಕಾರ, ಅತಿಕ್ರಮಣದಾರರು ಒತ್ತುವರಿ ಮಾಡಿಕೊಂಡ ಜಾಗದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ಹಾಕಿಕೊಂಡು ವಾಣಿಜ್ಯ ಸಂಸ್ಥೆಗಳನ್ನೂ ನಡೆಸುತ್ತಿದ್ದರು. 140 ಪೊಲೀಸ್ ಸಿಬ್ಬಂದಿ ಮತ್ತು 70 ಕಾರ್ಮಿಕರು ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ನಾಲ್ಕು ಜೆಸಿಬಿಗಳು ಮತ್ತು 12 ಟ್ರ್ಯಾಕ್ಟರ್‌ಗಳನ್ನು ಈ ಉದ್ದೇಶಕ್ಕಾಗಿ ಬಳಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

Read More

ನವದೆಹಲಿ:- ಆಮ್ ಆದ್ಮಿ ಪಕ್ಷವು ಗೋವಾ, ಗುಜರಾತ್​, ಅಸ್ಸಾಂನಲ್ಲಿ ಲೋಕಸಭಾ ಅಭ್ಯರ್ಥಿಗಳ ಘೋಷಿಸಿ ಕಾಂಗ್ರೆಸ್​ಗೆ ಸಂದೇಶ ರವಾನಿಸಿದೆ. ಗುಜರಾತ್‌ನಲ್ಲಿ ಎರಡು ಸ್ಥಾನಗಳಿಗೆ ಮತ್ತು ಮುಂಬರುವ ಲೋಕಸಭೆ ಚುನಾವಣೆಗೆ ಗೋವಾದಲ್ಲಿ ಒಂದು ಸ್ಥಾನಕ್ಕೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಗೋವಾ ಮತ್ತು ಗುಜರಾತ್‌ನಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೆಹಲಿಯಲ್ಲಿ 7 ಲೋಕಸಭಾ ಸ್ಥಾನಗಳ ಪೈಕಿ ಕೇವಲ 1 ಸ್ಥಾನವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡುವುದಾಗಿ ಈಗಾಗಲೇ ತಿಳಿಸಿದೆ. ಈ ಒಂದು ಸ್ಥಾನಕ್ಕೂ ಕಾಂಗ್ರೆಸ್​ ಅರ್ಹವಿಲ್ಲ ಆದರೆ ಮೈತ್ರಿ ಧರ್ಮ ಬಿಡಬಾರದೆಂದು ಒಂದು ಸ್ಥಾನ ನೀಡುತ್ತಿದ್ದೇವೆ ಎಂದು ಎಎಪಿ ಹೇಳಿದೆ. ಕಳೆದ ವಾರ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಅಸ್ಸಾಂನ ಗುವಾಹಟಿ, ಸೋನಿತ್‌ಪುರ ಮತ್ತು ದಿಬ್ರುಗಢ ಲೋಕಸಭಾ ಕ್ಷೇತ್ರಗಳಿಂದ ತನ್ನ ಅಭ್ಯರ್ಥಿಗಳನ್ನು ಏಕಪಕ್ಷೀಯವಾಗಿ ಘೋಷಿಸಿತು. ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಅಭ್ಯರ್ಥಿಗಳ ಅರ್ಹತೆ…

Read More

ಬೆಂಗಳೂರು:- ಭಿಕ್ಷುಕನೊಬ್ಬನ ಯಡವಟ್ಟಿನಿಂದ ಇಡೀ ಏರಿಯಾದ ಜನರು ಆತಂಕಗೊಂಡ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿತ್ತು.ಒಂದು ಕ್ಷಣ ಎಲ್ಲರೂ ಉಸಿರು ಬಿಗಿ ಹಿಡಿಯುವಂತ ಸ್ಥಿತಿ ನಿರ್ಮಾಣವಾಗಿತ್ತು. ಎಟಿಎಂ ಮಷೀನ್ ಬಳಿ ಭಿಕ್ಷುಕ ಇಟ್ಟು ಹೋದ ಬಾಕ್ಸ್​ನಿಂದ ಭಾರೀ ಸಮಸ್ಯೆ ಉದ್ಭಾವಿಸಿತ್ತು. ಫೆಬ್ರವರಿ 12 ರಂದು ಮಿನರ್ವ ಸರ್ಕಲ್ ಬಳಿ ನಡೆದಿದ್ದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿ 12ರ ಬೆಳಿಗ್ಗೆ ಹತ್ತು ಘಂಟೆ ಸುಮಾರಿಗೆ ಮಿನರ್ವ ಸರ್ಕಲ್ ಬಳಿ ಹೈ ಡ್ರಾಮಾ ನಡೆದಿದೆ. ಭಿಕ್ಷುಕನೋರ್ವ ಕೋಟಕ್ ಮಹೇಂದ್ರ ಬ್ಯಾಂಕ್​ ಎಟಿಎಂನ ಪಕ್ಕದಲ್ಲಿ ಬಾಕ್ಸ್ ಇಟ್ಟು ಪರಾರಿಯಾಗಿದ್ದ. ಆ ಬಾಕ್ಸ್ ಗಳನ್ನು ಎಟಿಎಂ ಒಳಭಾಗದಲ್ಲಿ ಹಣವನ್ನು ತುಂಬಲು ಉಪಯೋಗ ಮಾಡಲಾಗುತ್ತೆ. ಇಂತಹ ಮೂರು ಬಾಕ್ಸ್​ಗಳನ್ನು ಇಟ್ಟು ಭಿಕ್ಷುಕ ಓಡಿ ಹೋಗಿದ್ದ. ಎಟಿಎಂ ಬಳಿ ಬಾಕ್ಸ್ ಇರುವುದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್​ಗೆ ಅನುಮಾನ ಹುಟ್ಟಿಕೊಂಡಿತ್ತು. ಒಂದು ಕ್ಷಣ ಶಾಕ್​ಗೆ ಒಳಗಾಗಿದ್ದು ತಕ್ಷಣವೇ ಪೊಲೀಸರಿಗೆ…

Read More

ಬೆಂಗಳೂರು:- ಇಂದಿನಿಂದ ಎರಡು ದಿನಗಳ ಕಾಲ ಬಾರ್, ಪಬ್, ಕೆಲ ರೆಸ್ಟೋರೆಂಟ್ ಬಂದ್ ಮಾಡಲಾಗಿದೆ. ಸಂಜೆ 5 ರಿಂದ ಫೆಬ್ರವರಿ 16 ಸಂಜೆ 5ರ ವರೆಗೂ ಮದ್ಯಪಾನ ನಿಷೇಧ ಮಾಡಲಾಗಿದೆ. ಫೆಬ್ರವರಿ 16 ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ವಿಧಾನ ಪರಿಷತ್ತಿ ಉಪಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಫೆಬ್ರವರಿ 14 ರಿಂದಲೇ ಮದ್ಯಪಾನ ನಿಷೇಧ ಮಾಡಲಾಗಿದೆ. ಪ್ರೇಮಿಗಳ ದಿನಾಚರಣೆಯಂದು ಮದ್ಯಪಾನ ನಿಷೇಧ ಕೆಲ‌ ಸಂಘಟನೆಗಳಿಂದ ಅಸಮಾಧಾನ ಹೊರ ಹಾಕಲಾಗಿದೆ. ಹೋಟೆಲ್ ಹಾಗೂ ಬಾರ್ ಅಸೋಸಿಯೇಷನ್ ನಿಂದ ಅಸಮಾಧಾನ ಹೊರ ಹಾಕಲಾಗಿದೆ.

Read More

ಬೆಂಗಳೂರು:- ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರಿನಲ್ಲಿ ಚಳಿಗಾಳಿ ಇದ್ದು, ಮೋಡಕವಿದ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆ ಶೀತ ಗಾಳಿ ಇತ್ತು. ಮುಂದಿನ 48 ಗಂಟೆಗಳಲ್ಲಿ ಗರಿಷ್ಠ ತಾಪಮಾನವು ಹಲವೆಡೆ 2-3 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಮಂಡ್ಯದಲ್ಲಿ 13.0 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್​ಎಎಲ್​ನಲ್ಲಿ 31.1 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 15.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 32.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 17.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 32.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 17.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 31.4 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಹೊನ್ನಾವರದಲ್ಲಿ 33.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.9 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 36.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.3 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ,…

Read More

ಬೆಂಗಳೂರು:- ಮೂರು ರಾಜಕೀಯ ಪಕ್ಷಗಳಲ್ಲೂ ಲೋಕಸಭಾ ಚುನಾವಣಾ ಕಾವು ಏರತೊಡಗಿದೆ. ಇದರ ನಡುವೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ಕೂಡ ತೀವ್ರಗೊಂಡಿದೆ. ಅಭ್ಯರ್ಥಿಗಳ ಆಯ್ಕೆ ನಿಟ್ಟಿನಲ್ಲಿ ಇಂದು ಕಾಂಗ್ರೆಸ್ ಸಭೆ ನಡೆಸಲಿದೆ. ಬಿಜೆಪಿ ಮಂಗಳವಾರವಷ್ಟೇ ಒಂದು ಸುತ್ತಿನ ಸಭೆ ನಡೆಸಿದೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರ ಗೆದ್ದಿತ್ತು. ಆದ್ರೆ ಈ ಬಾರಿ ಗ್ಯಾರಂಟಿ ಯೋಜನೆಗಳ ಅಸ್ತ್ರ ಬಿಟ್ಟಿದೆ. ಇದನ್ನೇ ಮುಂದಿಟ್ಟು 15ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪ್ಲ್ಯಾನ್ ಮಾಡಿದೆ. ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಸರತ್ತು ನಡೆಸುತ್ತಿದೆ. ಹಾಲಿ ಸಚಿವರು, ಇಲ್ಲವೇ ಸಚಿವರ ಮಕ್ಕಳು, ಸಹೋದರರು, ಸಂಬಂಧಿಗಳು, ಮಾಜಿ ಸಂಸದರು ಹೀಗೆ ಹಲವರು ಹೆಸರುಗಳನ್ನು ಲಿಸ್ಟ್ ಮಾಡಿಕೊಂಡಿದೆ. ಈ ಮಧ್ಯೆ ಇಂದು ರಾಜ್ಯಸಭೆ ಮತ್ತು ಲೋಕಸಭೆಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕೆಪಿಸಿಸಿ ಕಚೇರಿಯಲ್ಲಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಮೀಟಿಂಗ್ ನಡೆಯಲಿದ್ದು ರಾಜ್ಯಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿಯಲ್ಲೂ…

Read More

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗಿಂತ ಬೆನ್‌ ಫೋಕ್ಸ್‌ ಅತ್ಯುತ್ತಮ ವಿಕೆಟ್‌ ಕೀಪಿಂಗ್‌ ಕೌಶಲವನ್ನು ಹೊಂದಿದ್ದಾರೆಂದು ಇಂಗ್ಲೆಂಡ್‌ ಮಾಜಿ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್ ಅಲೆಕ್‌ ಸ್ಟೀವರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶಾಖಪಟ್ಟಣಂನಲ್ಲಿ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ವಿರುದ್ದ 106 ರನ್‌ಗಳ ಸೋಲು ಅನುಭವಿಸಿರುವ ಇಂಗ್ಲೆಂಡ್‌, ಮೂರನೇ ಟಸ್ಟ್‌ನಲ್ಲಿ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದೆ. ಈ ಸರಣಿಯಲ್ಲಿ ಬೆನ್‌ ಫೋಕ್ಸ್ ಅವರು ಅತ್ಯುತ್ತಮ ವಿಕೆಟ್‌ ಕೀಪರ್‌ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂಎಸ್‌ ಧೋನಿ ಬಿರುಸಾಗಿ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಆದರೆ, ಎಂಎಸ್‌ ಧೋನಿಗಿಂತ ಬೆನ್‌ ಫೋಕ್ಸ್‌ ಇನ್ನೂ ಹೆಚ್ಚಿನ ಬಿರುಸಾಗಿ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಎಂಸ್‌ ಧೋನಿ ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ 256 ಕ್ಯಾಚ್‌ಗಳು ಹಾಗೂ 38 ಸ್ಟಂಪ್‌ ಔಟ್‌ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 123 ಸ್ಟಂಪ್ಸ್‌ ಹಾಗೂ 32 ಕ್ಯಾಚ್‌ಗಳು ಮತ್ತು ಟಿ20ಐ ಕ್ರಿಕೆಟ್‌ನಲ್ಲಿ 57 ಕ್ಯಾಚ್‌ಗಳು ಹಾಗೂ 34 ಸ್ಟಂಪ್‌ ಔಟ್‌ ಮಾಡಿದ್ದಾರೆ. “ಎಂಎಸ್‌…

Read More

ಮಂಡ್ಯ:- ಸಕ್ಕರೆ ನಾಡು ಮಂಡ್ಯದಲ್ಲಿ ವಿಚಾರಣೆ ನೆಪದಲ್ಲಿ ಮಹಿಳೆ ಮೇಲೆ PSI ಹಲ್ಲೆ ನಡೆಸಿದ್ದು, ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಡ್ಯ ಪೂರ್ವ ಠಾಣೆ PSI ಅಯ್ಯನಗೌಡ ಎಂಬುವವರು ಮಂಡ್ಯ ನಗರದ ರೂಪಾದೇವಿ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ರೂಪಾ ಅವರಿಗೆ ಸೇರಿದ್ದ ಹಸು ಮಹಿಳಾ ಪೇದೆ ಸ್ಕೂಟರ್​ಗೆ ಅಡ್ಡ ಬಂದಿತ್ತು. ಈ ವೇಳೆ ಮಹಿಳಾ ಪೇದೆ ವನಜಾಕ್ಷಿ ನಿಯಂತ್ರಣ ತಪ್ಪಿ ಗಾಡಿಯಿಂದ ಬಿದ್ದು ಗಾಯಗೊಂಡಿದ್ದರು. ಚಿಕಿತ್ಸೆ ಪಡೆದ ಬಳಿಕ ರೂಪಾ ಅವರು ತಮಗೆ ಪರಿಹಾರ ನೀಡುವಂತೆ ವನಜಾಕ್ಷಿ ಒತ್ತಡ ಹಾಕಿದ್ದರು. ಹಣ ನೀಡದಿದ್ದಕ್ಕೆ ವಿಚಾರಣೆ ನೆಪದಲ್ಲಿ ಪೊಲೀಸ್ ಠಾಣೆಗೆ ಕರೆಸಿ ಹಲ್ಲೆ ನಡೆಸಲಾಗಿದೆ. ಮಂಡ್ಯದ ಪೂರ್ವ ಠಾಣೆ ಪಿಎಸ್​ಐ ಅಯ್ಯನಗೌಡ ವಿರುದ್ಧ ಹಲ್ಲೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಇನ್ನು ಪೊಲೀಸರ ಥಳಿತದಿಂದ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಅಧಿಕಾರ ದುರುಪಯೋಗಪಡಿಸಿಕೊಂಡು ಮಹಿಳೆ ಕೈ ಕಾಲಿಗೆ ಹಿಗ್ಗಾಮುಗ್ಗ ಥಳಿಸಿರುವ ಆರೋಪ ಕೇಳಿ…

Read More