ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗಿಂತ ಬೆನ್ ಫೋಕ್ಸ್ ಅತ್ಯುತ್ತಮ ವಿಕೆಟ್ ಕೀಪಿಂಗ್ ಕೌಶಲವನ್ನು ಹೊಂದಿದ್ದಾರೆಂದು ಇಂಗ್ಲೆಂಡ್ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಅಲೆಕ್ ಸ್ಟೀವರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶಾಖಪಟ್ಟಣಂನಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ದ 106 ರನ್ಗಳ ಸೋಲು ಅನುಭವಿಸಿರುವ ಇಂಗ್ಲೆಂಡ್, ಮೂರನೇ ಟಸ್ಟ್ನಲ್ಲಿ ಕಮ್ಬ್ಯಾಕ್ ಮಾಡಲು ಎದುರು ನೋಡುತ್ತಿದೆ. ಈ ಸರಣಿಯಲ್ಲಿ ಬೆನ್ ಫೋಕ್ಸ್ ಅವರು ಅತ್ಯುತ್ತಮ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ
![Demo](https://ainlivenews.com/wp-content/uploads/2023/12/spoorthi-1.jpg)
ಎಂಎಸ್ ಧೋನಿ ಬಿರುಸಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಆದರೆ, ಎಂಎಸ್ ಧೋನಿಗಿಂತ ಬೆನ್ ಫೋಕ್ಸ್ ಇನ್ನೂ ಹೆಚ್ಚಿನ ಬಿರುಸಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಎಂಸ್ ಧೋನಿ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 256 ಕ್ಯಾಚ್ಗಳು ಹಾಗೂ 38 ಸ್ಟಂಪ್ ಔಟ್ ಮಾಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 123 ಸ್ಟಂಪ್ಸ್ ಹಾಗೂ 32 ಕ್ಯಾಚ್ಗಳು ಮತ್ತು ಟಿ20ಐ ಕ್ರಿಕೆಟ್ನಲ್ಲಿ 57 ಕ್ಯಾಚ್ಗಳು ಹಾಗೂ 34 ಸ್ಟಂಪ್ ಔಟ್ ಮಾಡಿದ್ದಾರೆ.
“ಎಂಎಸ್ ಧೋನಿ ತ್ವರಿತ ಕೈಗಳಿಂದ ವಿಕೆಟ್ ಕೀಪಿಂಗ್ ನಿರ್ವಹಿಸುತ್ತಿದ್ದರು. ಆದರೆ ಬೆನ್ ಫೋಕ್ಸ್ ಸ್ಟಂಪ್ಗಳ ಹಿಂದೆ ಇನ್ನಷ್ಟು ವೇಗವಾಗಿದ್ದಾರೆ, ಯಾರ ಕೈನಿಂದ ಸಾಧ್ಯವಾಗದ ಕೆಲಸವನ್ನು ಬೆನ್ ಫೋಕ್ಸ್ ಮಾಡುತ್ತಾರೆ. ವಿಕೆಟ್ ಕೀಪಿಂಗ್ ವೇಳೆ ಇವರ ಕೈ ಅತ್ಯಂತ ವೇಗದಿಂದ ಕೂಡಿರುತ್ತದೆ. ಅವರು ಈ ಪ್ರತಿಭೆಯನ್ನು ಸ್ವಾಭಾವಿಕವಾಗಿ ಪಡೆದಿದ್ದಾರೆ,” ಎಂದು ಸ್ಟೀವರ್ಟ್ ತಿಳಿಸಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)