Author: AIN Author

ಗದಗ:- ನರೇಂದ್ರ ಮೋದಿಯವರು ಜಾತಿ ಹಿಡಿದು ರಾಜಕೀಯ ಮಾಡಿಲ್ಲ ಎಂದು ಗದಗದಲ್ಲಿ ಬಿಜೆಪಿ ಮುಖಂಡ ರವಿ ದಂಡಿನ ಪ್ರತಿಕ್ರಿಯೆ ನೀಡಿದ್ದಾರೆ. ತೇಲಿ ಸಮಾಜ ಮೇಲ್ಜಾತಿ ಆದರೂ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಓಬಿಸಿಯಲ್ಲಿ ಸೇರಿಸಿದ್ದಾರೆ ಅಂತ ಮೋದಿ ವಿರುದ್ಧ ರಾಹುಲ್ ಗಾಂಧಿ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗಲೇ ತೇಲಿ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದೆ. ತೇಲಿ ಸಮಾಜ ಅಂದ್ರೆ ಕರ್ನಾಟಕದಲ್ಲಿ ಗಾಣಿಗ ಸಮಾಜ. ನರೇಂದ್ರ ಮೋದಿಯವರು ಜಾತಿ ಹಿಡಿದು ರಾಜಕೀಯ ಮಾಡಿಲ್ಲ. ಮೋದಿಯವರು ಆರ್.ಎಸ್.ಎಸ್.ನ ಕಾರ್ಯಕರ್ತರಾಗಿ ಸಣ್ಣಪುಟ್ಟ ಕೆಲಸ ಮಾಡಿ ಗುರ್ತಿಸಿಕೊಂಡು ಬೆಳೆದವರು ಗುಜರಾತ್ ಮುಖ್ಯಮಂತ್ರಿ ಆಗಿ, ಬಳಿಕ ಪ್ರಧಾನ ಮಂತ್ರಿ ಆಗಿದ್ದಾರೆ. ಅವರು ಯಾವತ್ತೂ ಜಾತಿ ವಿಷಯ ಎತ್ತಿಲ್ಲ. ಮೋದಿಯವರು ಯಾವಾಗಲೂ ಸಬ್ ಕಾ ಸಾಥ್, ಸಬ್ ಕಾ ವಿಕಾಸ ಅಡಿಯಲ್ಲಿ ಎಲ್ಲಾ ವರ್ಗಗಳನ್ನ ಒಗ್ಗೂಡಿಸುವ ಕೆಲಸ ಮಾಡ್ತಿದ್ದಾರೆ. ಮೋದಿಯವರ ಕಾಲದಲ್ಲಿಯೇ ಶಾಶ್ವತವಾಗಿ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡಿದ್ದಾರೆ ಎಂದರು

Read More

ಕಲಬುರ್ಗಿ:- ವಸಂತ ಪಂಚಮಿ ಹಿನ್ನಲೆ ವಿದ್ಯಾರ್ಥಿಗಳು ವಿವಿಯಲ್ಲಿ ಸರಸ್ವತಿ ಪೂಜೆ ಮಾಡೋ ವೇಳೆ ಮತ್ತೊಂದು ವಿಚಾರಧಾರೆಯ ಗುಂಪು ಅಡ್ಡಿಪಡಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಡಗಂಚಿ ಬಳಿಯ ಸೆಂಟ್ರಲ್ ವಿವಿಯಲ್ಲಿ ಘಟನೆ ನಡೆದಿದ್ದು ಎರಡು ವಿಭಿನ್ನ ವಿದ್ಯಾರ್ಥಿಗಳ ಗುಂಪಿನ ನಡುವೆ ವಾಗ್ವಾದ ನಡೆದಿದೆ..ಇದೇನು ವಿವಿನಾ ಅಥವಾ ಗುಡಿನಾ ಅಂತ ಒಂದು ಗುಂಪು ಪ್ರಶ್ನೆ ಮಾಡಿದೆ.ವಾಗ್ವಾದದ ನಡುವೆಯೇ ವಿದ್ಯಾರ್ಥಿಗಳು ಸರಸ್ವತಿ ಪೂಜೆ ಮಾಡಿದ್ದಾರೆ. ಮಾಹಿತಿ ಪಡೆದ ಪೋಲೀಸರು ಕ್ಯಾಂಪಸ್ ಗೆ ಎಂಟ್ರಿ ಕೊಟ್ಟು ಚರ್ಚೆ ಮಾಡಿದ್ದಾರೆ…

Read More

ನವದೆಹಲಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ  ಅವರ ಮೊಮ್ಮಗ ವಿಭಾಕರ್ ಶಾಸ್ತ್ರಿಯವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರ ಸಮ್ಮುಖದಲ್ಲಿ ಅವರು ಬಿಜೆಪಿ ಸೇರ್ಪಡೆಯಾದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಾಜಿ ಪ್ರಧಾನಿಯವರ ಕನಸಿನ ಜೈ ಜವಾನ್, ಜೈ ಕಿಸಾನ್ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಬಿಜೆಪಿಯಲ್ಲಿ ನನ್ನ ಅಜ್ಜ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯಲು ನನಗೆ ಅವಕಾಶ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಪಕ್ಷದ ನಾಯಕರ ನಿರ್ದೇಶನದಂತೆ ನಾನು ಕೆಲಸ ಮಾಡುತ್ತೇನೆ ಎಂದಿದ್ದಾರೆ.  https://ainlivenews.com/this-is-the-habit-of-working-with-a-laptop-on-the-lap/ ಐ.ಎನ್.ಡಿ.ಐ.ಎ ಮೈತ್ರಿಕೂಟಕ್ಕೆ ಯಾವುದೇ ಸಿದ್ಧಾಂತವಿಲ್ಲ ಆದರೆ ಮೋದಿಜಿಯನ್ನು ಸೋಲಿಸುವ ಗುರಿಯನ್ನು ಹೊಂದಿದೆ. ಕಾಂಗ್ರೆಸ್ ಸಿದ್ಧಾಂತ ಏನೆಂಬುದನ್ನು ರಾಹುಲ್ ಗಾಂಧಿಯವರು ಹೇಳಬೇಕು ಎಂದು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನಗಾಗಿ ಬಿಜೆಪಿಯ ಬಾಗಿಲು ತೆರೆದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ನಡ್ಡಾ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಮತ್ತು ಬ್ರಜೇಶ್…

Read More

ಕೆಲವು ಒಣಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದಂತೆ. ಇದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆಯಂತೆ. ಇದರಲ್ಲಿ ಕಬ್ಬಿಣಾಂಶವಿದ್ದು, ಇದು ರಕ್ತ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆದರೆ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆಯಂತೆ. ಅಂಜೂರ : ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಅಂಶ ಕಂಡುಬರುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಜೀರ್ಣಕ್ರಿಯೆಯಲ್ಲಿ ಸಮಸ್ಯೆಯಾಗುತ್ತದೆಯಂತೆ. ಇದರಿಂದ ಹೊಟ್ಟೆಯ ಸೆಳೆತ, ನೋವು ಉಂಟಾಗುತ್ತದೆಯಂತೆ. ವಾಲ್ನಟ್ಸ್ : ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲ ಸಮೃದ್ಧವಾಗಿದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಜೀರ್ಣಕ್ರಿಯೆಲ್ಲಿ ಸಮಸ್ಯೆಯಾಗುತ್ತದೆಯಂತೆ. ಖರ್ಜೂರ : ಇದರಲ್ಲಿ ನೈಸರ್ಗಿಕ ಸಕ್ಕರೆಯಂಶ ಹೆಚ್ಚಾಗಿರುತ್ತದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆಯಂತೆ.

Read More

ನವದೆಹಲಿ: ಬೆಂಬಲ ಬೆಲೆ ಕಾನೂನು ಜಾರಿ ಸೇರಿ ವಿವಿಧ ಬೇಡಿಕೆಗೆಗಳ ಈಡೇರಿಸುವಂತೆ ರೈತರು ದೆಹಲಿ ಚಲೋ (Delhi chalo) ಪ್ರತಿಭಟನೆ ಆರಂಭಿಸಿದ್ದು ರಾಷ್ಟ್ರ ರಾಜಧಾನಿ ತೆರಳದಂತೆ ತಡೆಯಲು ಹರ್ಯಾಣ ಪೊಲೀಸರು (Hariyana Police)  ರೈತರ (Farmers) ಮೇಲೆ ಅಶ್ರವಾಯು, ಜಲಫಿರಂಗಿ ಪ್ರಯೋಗ ಮಾಡಿದ್ದು, ಲಘು ಲಾಠಿ ಪ್ರಹಾರ ಕೂಡಾ ನಡೆಸಲಾಗಿದೆ. ಪೊಲೀಸರ ವರ್ತನೆ ಖಂಡಿಸಿ ದೇಶಾದ್ಯಾಂತ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ತೀರ್ಮಾನ ಮಾಡಿವೆ. ಈ ಬಗ್ಗೆ ಮಾಹಿತಿ ನೀಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್, ರೈತರ ಮೇಲೆ ನಡೆಸಿರುವ ಪೈಶಾಚಿಕ ದೌರ್ಜನ್ಯವನ್ನು ಖಂಡಿಸಲು ದೇಶದಾದ್ಯಂತ ಪ್ರತಿಭಟಿಸಿ ಗ್ರಾಮೀಣ ಮಟ್ಟದಲ್ಲಿ ರಸ್ತೆ ಬಂದ್ ಮಾಡಲು ತಿರ್ಮಾನಿಸಿದೆ. ಎಲ್ಲಾ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ರಾಜ್ಯಾದ್ಯಂತ ಶುಕ್ರವಾರ ರಂದು ಬೆಳಿಗ್ಗೆ 11 ರಿಂದ 1 ಗಂಟೆವರೆಗೂ ರಸ್ತೆ ಬಂದ್ ಚಳುವಳಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.  https://ainlivenews.com/the-urge-to-climb-the-bridge-for-suicide-aadre-is-the-man-who-goes-down-for-the-biryani/ ಇದೇ ವೇಳೆ ಮೋದಿ ಸರ್ಕಾರದ ಬಗ್ಗೆ ಮಾತನಾಡಿ, ರೈತರ ಸಂಘಟನೆಗಳ ದೆಹಲಿ ಚಲೋ ಮೆರವಣಿಗೆಯನ್ನು ತಡೆಯಲು ಪ್ರಭುತ್ವ ಅಧಿಕಾರದ…

Read More

ತುಮಕೂರು: ಮಾಜಿ ಸಚಿವ ಮಾಧುಸ್ವಾಮಿ ಕೂಡ ತುಮಕೂರಿನಿಂದ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ನಾನು ಕೂಡ ಪ್ರಬಲ ಟಿಕೆಟ್‌ ಆಕಾಂಕ್ಷಿ ಎನ್ನುವ ಮೂಲಕ ಹೈಕಮಾಂಡ್‌ಗೆ ನೇರವಾಗಿಯೇ ಸಂದೇಶ ರವಾನಿಸಿದ್ದಾರೆ. ಜೊತೆಗೆ ವಿ ಸೋಮಣ್ಣಗೆ ಟಾಂಗ್‌ ಕೊಟ್ಟ ಮಾಧುಸ್ವಾಮಿ, ಅವರು ಎಲ್ಲ ಕ್ಷೇತ್ರದಲ್ಲೂ ಆಕ್ಟೀವ್‌ ಆಗಿರುತ್ತಾರೆ, ಅವರ ಸ್ಪರ್ಧೆ ಬಗ್ಗೆ ಗೊತ್ತಿಲ್ಲ, ನಾನಂತು ತುಮಕೂರು ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿ ಎಂದು ಒತ್ತಿ ಒತ್ತಿ ಹೇಳಿದ್ದಾರೆ..ಇವರಿಬ್ಬರು ಸ್ಪರ್ಧೆಗೇನೋ ರೆಡಿಯಾಗಿದ್ದಾರೆ.  ಆದ್ರೆ . ಸೋಮಣ್ಣಗೆ ಹೊರಗಿನವರೆಂಬ ಕಾರ್ಡ್‌ ವಿಲನ್‌ ಆಗಿದ್ದರೆ, ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿಗೆ ಒಳಒಪ್ಪಂದದ ಚಿಂತೆ ಇದೆ. ಜೊತೆಗೆ ಬಣ ರಾಜಕಾರಣದ ದೊಡ್ಡಮಟ್ಟದ ಹೊಡೆತ ಕೂಡ ಬೀಳಲಿದೆ. ಅಭಿವೃದ್ಧಿ ಕಾರ್ಯಕ್ರಮಗಳ ಹೊರತಾಗಿಯೂ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ನೋವು ಜೆ.ಸಿ. ಮಾಧುಸ್ವಾಮಿಯವರಿಗಿದೆ. ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರನ್ನು ಕರೆತರುವ ಯೋಚನೆ ಕೂಡ ಜಿಲ್ಲಾ ಬಿಜೆಪಿ ನಾಯಕರಲ್ಲಿದೆ. https://ainlivenews.com/is-it-good-if-a-lizard-falls-on-me-ominous-here-is-the-answer/ ಎಚ್‌ಡಿಕೆ ಸ್ಪರ್ಧಿಸಿದರೆ ನೇರ ಹಣಾಹಣಿ ಕಟ್ಟಿಟ್ಟ ಬುತ್ತಿ. ಆದರೆ ಮುದ್ದಹನುಮೇಗೌಡರೆದುರು ಸ್ಪರ್ಧೆಗೆ ಸ್ವತಃ ಕುಮಾರಸ್ವಾಮಿ ನೂರುಬಾರಿ…

Read More

ಧಾರವಾಡ: ಭಾರತದ ಇತಿಹಾಸದಲ್ಲೇ ಫೆ.14 ಅತ್ಯಂತ ಕರಾಳ ದಿನ ಎಂಬುದು ಪುನಃ ಪುನಃ ನೆನಪಿಗೆ ಬರಲಿದೆ. ಏಕೆಂದರೆ ಐದು 5 ವರ್ಷಗಳ ಹಿಂದೆ ಭಾರತೀಯ ಸೇನೆ ಭದ್ರತಾಪಡೆಗಳ ಮೇಲೆ ನಡೆದ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು(40 CRPF jawans martyred) ಎಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮಹ್ಮದ್ ಇಸ್ಮಾಯಿಲ್ ತಮಟಗಾರ(Mahmud Ismail Tamtagara) ಹೇಳಿದರು. ನಗರದ ಅಂಜುಮನ್ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ(Anjuman College of Arts, Commerce and Science) ಬುಧವಾರ ನಡೆದ ಕರಾಳ ದಿನಾಚರಣೆ ಕಾರ್ಯಕ್ರಮದಲ್ಲಿ(Dark Day Program) ಅವರು ಮಾತನಾಡಿದರು. ನಂತರ ಹುತಾತ್ಮ ಯೋಧರಿಗೆ ಗೌರವ( Tribute to Martyred Warriors) ಸಲ್ಲಿಸಿದರು. ಅಂಜುಮಾನ್ ಕಾಲೇಜ್ ಪ್ರಾಂಶುಪಾಲರಾದ ಡಾ.ಎನ್.ಎಂ.ಮಾಕಂದರ(Dr. N. M. Makandara) ಅವರು ಸ್ವಾಗತಿಸಿ,  ಕಾರ್ಯಕ್ರಮದಲ್ಲಿ ಡಾ. ಸೈಯದ್ ಖದೀರ್ ಎ(Dr. Syed Qadeer) ಸರ್ಗಿರೋ ಕಾರ್ಯದರ್ಶಿ ಪತ್ರಿಕೂದ್ಯಮದ ಮುಖ್ಯಸ್ಥ ಡಾ .ಎಸ್ ಎಸ್ ಅದೋನಿ(Dr. SS Adoni), ಡಾ.ನಾಗರಾಜ ಗುದಾಗನವರ(Dr. Nagaraja…

Read More

ಬೆಂಗಳೂರು: ಮಾಜಿ ಸಚಿವ ಗೋಪಾಲಯ್ಯಗೆ (K. Gopalaiah) ಮಾಜಿ ಕಾರ್ಪೊರೇಟರ್ ಪದ್ಮರಾಜ್ (Padmaraj) ಕೊಲೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ ಅರೆಸ್ಟ್‌ ಆಗಿದ್ದರು ಈಗ ಜಾಮೀನು ಮೂಲಕ  ಹೊರಬಂದಿದ್ದಾರೆ. ಜಾಮೀನು ಪಡೆದ ಬಳಿಕ ಮಾಜಿ ಕಾಪೋರೇಟರ್ ಪದ್ಮರಾಜ್ ಹೊರಬಂದಿದ್ದು ಆರ್.‌ ಅಶೋಕ್‌ ವಿರುದ್ಧ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. Gruha Lakshmi Scheme: ಅರ್ಜಿ ಸಲ್ಲಿಸಿದ್ರೂ 2000 ರೂ. ಬಂದಿಲ್ಲವೇ..? ಇದು ಕೂಡ ಕಾರಣ ಆಗಿರಬಹುದು.! ಈಗಲೇ ಸರಿಪಡಿಸಿ ನಾನ್ಯಾರಿಗೂ ಕೊಲೆ ಬೆದರಿಕೆ ಹಾಕಿಲ್ಲ..ಎಲ್ಲವನ್ನೂ ಮಂಜುನಾಥ್ ಸ್ವಾಮಿ ನೋಡ್ಕೋತಾನೆ ಕಂಟ್ರಾಕ್ಟ್ ಕೆಲಸ ಕ್ಕೆ ಸಂಬಂಧ ಹಣ ಕೊಟ್ಟಿದ್ದೆ.. 15 ಲಕ್ಷ ಕೊಟ್ಟಿದ್ದೆ, ಕೆಲಸ ಕೊಡಿಸಲಿಲ್ಲಅದಕ್ಕೆ ಕೋಪಗೊಂಡು ಪೋನ್ ಮಾಡಿ ಮಾತಾಡಿದೆಎಂದರು ಹಾಗೆ 2010 ರಲ್ಲಿ ಮೇಯರ್ ಮಾಡ್ತೀನಿ ಅಂತ ಆರ್.ಅಶೋಕ್ 1 ಕೋಟಿ ಪಡೆದಿದ್ರು ಹಣ ವಾಪಸ್ ಕೇಳಿದ್ರೆ ಕೊಟ್ಟಿರಲಿಲ್ಲ.. ಇದೇ ಸಿಟ್ಟಿಗೇ ಇವತ್ತು ಅಶೋಕ್ ಮಾತಾಡಿದ್ದಾರೆ ಎಂದು ಆರ್.‌ ಅಶೋಕ್‌ ವಿರುದ್ಧ ಹೊಸ ಬಾಂಬ್‌ ಹಾಕಿದ್ದಾರೆ. ಇದರ ಬಗ್ಗೆ ಆರ್‌ ಅಶೋಕ್‌…

Read More

ಬೆಂಗಳೂರು: ಕಾಂಗ್ರೆಸ್‌ನ (Congress) ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಮುಂಬರುವ ರಾಜ್ಯಸಭಾ ಚುನಾವಣೆಗೆ ರಾಜಸ್ಥಾನದಿಂದ ಬುಧವಾರ ನಾಮಪತ್ರ ಸಲ್ಲಿಸಿದರು . ಇದರ ಬೆನ್ನಲ್ಲೇ ಕಾಂಗ್ರೆಸ್​ ಕರ್ನಾಟಕದಿಂದ ಮೂವರ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಸೈಯ್ಯದ್​​ ನಾಸೀರ್ ಹುಸೇನ್, ಜಿ.ಸಿ ಚಂದ್ರಶೇಖರ್​ ಹಾಗೂ ಅಜಯ್ ಮಾಕನ್​ಗೆ ಈ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈಗಾಗಲೇ ಬಿಜೆಪಿ ರಾಜ್ಯಸಭೆ ಎಲೆಕ್ಷನ್​​ಗೆ ತನ್ನ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಸದ್ಯ ಕಾಂಗ್ರೆಸ್​ ಕೂಡ ಮೂವರ ಹೆಸರುಗಳನ್ನು ಅನೌನ್ಸ್ ಮಾಡಿದೆ.

Read More

ಕಂಪ್ಲಿ : ಕಂಪ್ಲಿ ತಾಲ್ಲೂಕಿನಲ್ಲಿ ಜಿಲ್ಲೆಯಲ್ಲಿ “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದ್ದು, ಬುಧವಾರರಂದು ಕಂಪ್ಲಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಮಾರ್ಗದಲ್ಲಿ ಸಂಚರಿಸಿತು. ಸಂಚಾರದಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನದ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು. ಜಾಥಾವನ್ನು ಪ್ರತೀ ಗ್ರಾಮಗಳಲ್ಲಿಯೂ ಕಳಶ ಹಿಡಿದು, ಪೂರ್ಣ ಕುಂಭ ಹೊತ್ತ ಮಹಿಳೆಯರು, ನೇತಾರರ ವೇಷ ಭೂಷಣಗಳನ್ನು ಧರಿಸಿದ ವಿದ್ಯಾರ್ಥಿಗಳು, ಹಲಗೆ ಮತ್ತು ಡೊಳ್ಳು ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಗ್ರಾಮದ ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ಕಂಪ್ಲಿ ತಾಸಿಲ್ದಾರ್ ಎಸ್ ಶಿವರಾಜ್ ಶಿವಪುರ್ ಅವರ ಮಾತನಾಡಿ ರಾಜ್ಯ ಸರ್ಕಾರವು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ನಮ್ಮ ಸಂವಿಧಾನವು ಪ್ರಪಂಚದಲ್ಲಿಯೇ…

Read More