Author: AIN Author

ಬೆಂಗಳೂರು:- ನನ್ನ ತೆರಿಗೆ ನನ್ನ ಹಕ್ಕು’ಅಭಿಯಾನದ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಅಂಕಿ-ಸಂಖ್ಯೆ ಸಮೇತ ಸಿಎಂ ಸಿದ್ದರಾಮಯ್ಯ ಅವರು ಉತ್ತರಿಸಿದ್ದಾರೆ. ಟ್ವೀಟರ್ ನಲ್ಲಿ ಲೈವ್ ನಲ್ಲಿ ಮಾತನಾಡಿದ ಅವರು, ಕಾರ್ಪೊರೇಟ್ ಕಂಪನಿಗಳ ಮೇಲಿನ ತೆರಿಗೆ ಪ್ರಮಾಣ ಶೇ.22.5ಕ್ಕೆ ಇಳಿಸಿದರು. ಜನಸಾಮಾನ್ಯರ ಮೇಲೆ ತೆರಿಗೆ ಪ್ರಮಾಣ ಹೆಚ್ಚಳ ಮಾಡಿದ್ದಾರೆ. ಸಾಮಾನ್ಯರಿಂದ ತೆರಿಗೆ ವಸೂಲಿ ಹೆಚ್ಚು ಮಾಡುತ್ತಲೇ ಹೋಗುತ್ತಿದ್ದಾರೆ. ನಮ್ಮ ಸಂಸದರು ದೆಹಲಿಯಲ್ಲಿ ಈ ಅನ್ಯಾಯವನ್ನು ಪ್ರಶ್ನಿಸುವುದೇ ಇಲ್ಲ. ಸಾಮಾನ್ಯ ಜನರ ಖರ್ಚಿನ ಮೇಲೆ ಹಾಕುವ GST ಪ್ರಮಾಣ ಕಡಿಮೆಮಾಡಿ. ಶ್ರೀಮಂತರು ಬಳಸುವ ಐಷಾರಾಮಿ ವಸ್ತುಗಳ ಮೇಲೆ GST ಹೆಚ್ಚಿಸಬೇಕು. ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಅರ್ಥ ಮಾಡಿಕೊಳ್ಳಬೇಕು. ಮೋದಿ ಗುಜರಾತ್ ಸಿಎಂ ಆಗಿದ್ದಾಗ 50% ತೆರಿಗೆ ಪಾಲು ಕೊಡಿ ಎಂದಿದ್ದರು. ರಾಜ್ಯಗಳು ಭಿಕ್ಷುಕರಾ ಎಂದು ನರೇಂದ್ರ ಮೋದಿಯವರು ಕೇಳಿದ್ದರು. ಕೇಂದ್ರ ಸರ್ಕಾರಕ್ಕೆ ಒಂದು ರೂಪಾಯಿ ತೆರಿಗೆಯನ್ನೂ ಕೊಡುವುದಿಲ್ಲ, ಎಲ್ಲವನ್ನೂ ರಾಜ್ಯವೇ ಇಟ್ಟುಕೊಳ್ಳುತ್ತೇವೆ ಎಂದು ಇದೇ ಮೋದಿ ಹೇಳಿದ್ದರು. ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ…

Read More

ಬೆಂಗಳೂರು:- ರಾಜ್ಯ ಬಿಜೆಪಿ ಘಟಕವೂ ಕನ್ನಡಿಗರಿಗೆ ಹೂವಿಟ್ಟಿದ್ದು ಸಾಕು ಎಂಬ ಸರ್ಕಾರದ ವಿರುದ್ಧ ಲೆಕ್ಕ ಕೊಡಿ ಅಭಿಯಾನ ಹಮ್ಮಿಕೊಂಡಿದೆ ಕನ್ನಡಿಗರಿಗೆ ಹೂವಿಟ್ಟಿದ್ದು ಸಾಕು, ಲೆಕ್ಕ ಕೊಡಿ ಎಂಬ ಅಭಿಯಾನವನ್ನು ಬಿಜೆಪಿ ಆರಂಭಿಸಿದೆ. ರಾಜ್ಯ ಸರ್ಕಾರದ ಹಲವು ಘೋಷಣೆಗಳನ್ನು ಉಲ್ಲೇಖಿಸಿ ಸುಳ್ಳು ಹೇಳುವ ಬದಲು ನಿಜವಾದ ಲೆಕ್ಕ ಕೊಡಿ ಎಂದು ಕೇಳಿದ್ದಾರೆ. ಎಕ್ಸ್‌ನಲ್ಲಿ ಮೂರು ಪೋಸ್ಟ್‌ಗಳನ್ನು ಹಾಕಿರುವ ಬಿಜೆಪಿ ರೈತರಿಗೆ, ಮಹಿಳೆಯರಿಗೆ ಪ್ರಣಾಳಿಕೆಯಲ್ಲಿ ಘೋಷಿಸಿದ ಕಾರ್ಯಕ್ರಮಗಳು ಏನಾದವು? ಅವುಗಳ ಬಗ್ಗೆ ಸರಿಯಾದ ಮಾಹಿತಿ ಕೊಡಿ ಎಂದು ಕೇಳಿದೆ. ಸಿಎಂ ಸಿದ್ದರಾಮಯ್ಯನವರೇ, ಯುವಕರಿಗೆ, ಶ್ರಮಿಕರಿಗೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ನೀವು ನೀಡಿದ ಆಶ್ವಾಸನೆಗಳೆಲ್ಲವೂ ಆಶ್ವಾಸನೆಯಾಗಿಯೇ ಉಳಿದಿವೆ. ನುಡಿದಂತೆ ನಡೆದಿದ್ದೇವೆ ಎಂದು ಸುಳ್ಳಿನ ಜಾಹಿರಾತು ನೀಡುವ ಬದಲು, ಜನರಿಗೆ ನೀವು ಖರ್ಚು ಮಾಡಿದ ಹಣದ ಬಗ್ಗೆ ಲೆಕ್ಕ ನೀಡಿ. ಸಿದ್ದರಾಮಯ್ಯ ಅವರೇ, ದಲಿತ-ಹಿಂದುಳಿದ ಸಮುದಾಯಗಳಿಗೆ, ಮಹಿಳೆಯರಿಗೆ, ಮಕ್ಕಳಿಗೆ ನೀವು ಚುನಾವಣಾಪೂರ್ವ ನೀಡಿದ ಭರವಸೆಗಳೆಲ್ಲವೂ ಬರೀ ಬೋಗಸ್‌ ಎಂದು ಸಾಬೀತಾಗಿದೆ. ಸುಳ್ಳು ಹೇಳಿದ್ದು ಸಾಕು, ಜನತೆಗೆ ಅಸಲಿ…

Read More

ಹುಬ್ಬಳ್ಳಿ:- ಕಾಂಗ್ರೆಸ್ ದಲಿತ ದ್ರೋಹಿ ಪಕ್ಷ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಎಸ್ಸಿ, ಎಸ್ಟಿ ಜನಾಂಗಕ್ಕೆ ಅವಕಾಶವೇ ಸಿಗಲಾರದಂತಹ ಪರಿಸ್ಥಿತಿ ಸೃಷ್ಟಿಸಿದ ದಲಿತ-ದ್ರೋಹಿ ಪಕ್ಷ ಕಾಂಗ್ರೆಸ್ ಎಂದರು. ಜಮ್ಮು, ಕಾಶ್ಮೀರದಂತಹ ಪ್ರಮುಖ ರಾಜ್ಯದಲ್ಲಿ ಎಸ್ಸಿ, ಎಸ್ಟಿಗಳಿಗೆ ಮನ್ನಣೆಯೇ ಇಲ್ಲದಂತಹ ಪರಿಸ್ಥಿತಿಗೆ ನೂಕಿತ್ತು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು ಆ ರಾಜ್ಯದಲ್ಲಿ ಇದೀಗ ಎಲ್ಲವನ್ನೂ ಸರಿ ಮಾಡಿದ್ದೇವೆ. ಎಸ್ಸಿ, ಎಸ್ಟಿಗಳಿಗೆ ಮತ್ತು ಒಬಿಸಿಗಳಿಗೆ ಆರಕ್ಷಣೆ ಒದಗಿಸಿದೆ. ಸ್ವಲ್ಪ ತಡವಾದರೂ ಪರಿಣಾಮಕಾರಿ ಆಗಿ ಕಾನೂನು ಮತ್ತು ಸಂವಿಧಾನಾತ್ಮಕ ಕ್ರಮಗಳನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಲಾಢ್ಯ ಭಾರತವನ್ನು ಕಟ್ಟುವ ಸಂಕಲ್ಪವನ್ನು ಬಿಜೆಪಿ ಹೊಂದಿದೆ. ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಪ್ರತಿಪಾದಿಸಿದರು. ಡಾ. ಭೀಮರಾವ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲೆಂದು ಅವರ ಜನ್ಮಸ್ಥಳ, ಶಿಕ್ಷಣ ಸ್ಥಳ, ಪರಿನಿಬ್ಬಾಣ ಸ್ಥಳ, ದೀಕ್ಷಾ ಭೂಮಿ, ಚೈತ್ಯ ಭೂಮಿಗಳನ್ನು ಪಂಚತೀರ್ಥಗಳನ್ನಾಗಿ…

Read More

ಹೊಸ ಚಪ್ಪಲಿಗಳನ್ನು ಧರಿಸಿದಾಗ ಅದು ಕಾಲುಗಳನ್ನು ಕಚ್ಚಿ ಗಾಯ ಅಥವಾ ಗುಳ್ಳೆಗಳು ಮೂಡುವಂತೆ ಮಾಡುತ್ತದೆ. ಇದರಿಂದ ನಡೆಯಲು ಕಷ್ಟವಾಗುತ್ತದೆ. ಹಾಗಾಗಿ ಈ ಗಾಯ ಬೇಗ ವಾಸಿಯಾಗಲು ಈ ಮನೆಮದ್ದನ್ನು ಬಳಸಿ. ಇದರಿಂದ ಗಾಯ ಬಹಳ ಬೇಗನೆ ವಾಸಿಯಾಗುತ್ತದೆ. ಹಾಗೇ ಕರ್ಪೂರವನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಗಾಯ ಮತ್ತಷ್ಟು ಬೇಗನೆ ಗುಣವಾಗುತ್ತದೆ ಮತ್ತು ತುರಿಕೆ ಕಡಿಮೆಯಾಗುತ್ತದೆಯಂತೆ. ಹಾಗೇ ಗಾಯಗಳ ಮೇಲೆ ಜೇನುತುಪ್ಪವನ್ನು ಹಚ್ಚಿ. ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ಗಾಯಕ್ಕೆ ಸೋಂಕು ತಗುಲದಂತೆ ತಡೆಯುತ್ತದೆ. ಇದರಿಂದ ಗಾಯ ಬೇಗ ವಾಸಿಯಾಗುತ್ತದೆ. ಹಾಗೇ ಅರಿಶಿನವು ಗಾಯವನ್ನು ತ್ವರಿತವಾಗಿ ಗುಣಪಡಿಸುತ್ತದೆ. ಯಾಕೆಂದರೆ ಇದರಲ್ಲಿ ಆಯಂಟಿ ಸೆಪ್ಟಿಕ್ ಗುಣಗಳಿವೆ. ಇದರಿಂದ ಗಾಯದ ಊತ, ಉರಿ ಕಡಿಮೆಯಾಗಿ ಬೇಗನೆ ವಾಸಿಯಾಗುತ್ತದೆಯಂತೆ.

Read More

ಮಂಡ್ಯ:- ವಿಚಾರಣೆ ನೆಪದಲ್ಲಿ ಠಾಣೆಗೆ ಕರೆತಂದು ಮಹಿಳೆ ಮೇಲೆ​ ಹಲ್ಲೆ ನಡೆಸಿದ ಪಿಎಸ್ಐ ಸಸ್ಪೆಂಡ್ ಮಾಡಲಾಗಿದೆ ಇಲ್ಲಿನ ಪೂರ್ವ ಠಾಣೆ ಪಿಎಸ್​ಐ ಅಯ್ಯನಗೌಡ ಎಂಬುವವರು ದರ್ಪ ಮೆರೆದಿದ್ದು, ಮಂಡ್ಯದ ಅಶೋಕ್ ನಗರ ನಿವಾಸಿ ರೂಪದೇವಿ ಎಂಬಾಕೆಯ ಮೇಲೆ ಪೊಲೀಸ್​ಠಾಣೆಯಲ್ಲಿಯೇ ಹಲ್ಲೆ ನಡೆಸಿದ್ದಾರೆ. ಈ ಹಿನ್ನಲೆ ಪಿಎಸ್ಐ ವಿರುದ್ದ ಮಹಿಳೆಯ ತಾಯಿ ಗೌರಮ್ಮ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಪಿಎಸ್​ಐರನ್ನ ಅಮಾನತು ಮಾಡಿ ಮಂಡ್ಯ ಎಸ್​ಪಿ ಯತೀಶ್ ಆದೇಶ ಮಾಡಿದ್ದಾರೆ ಸಂತ್ರಸ್ಥ ಮಹಿಳೆ ರೂಪದೇವಿ ಅವರು ತನ್ನ ಕುಟುಂಬಸ್ಥರ ಜೊತೆ ಮಂಡ್ಯದ ಅಶೋಕ್ ನಗರದಲ್ಲಿ ವಾಸವಿದ್ದು, ನಗರ ಪ್ರದೇಶದಲ್ಲೇ ಹಸುಗಳನ್ನು ಸಾಕಾಣಿಕೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಆದರೆ, ರಸ್ತೆಯಲ್ಲಿ ಹಸುಗಳನ್ನ ಬಿಡುತ್ತಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಏಕಾಏಕಿ ಜೀಪ್​ನಲ್ಲಿ ಬಂದ್ದಿದ್ದ ಮಂಡ್ಯದ ಪೂರ್ವ ಠಾಣೆ ಪಿಎಸ್​ಐ ಅಯ್ಯನಗೌಡ, ಯಾವುದೇ ಮಹಿಳೆ ಪೇದೆ ಇಲ್ಲದೇ ಜೀಪ್​ನಲ್ಲಿಯೇ ರೂಪದೇವಿಯನ್ನ ಠಾಣೆಗೆ ಕರೆದುಕೊಂಡು ಹೋಗಿ ಠಾಣೆಯಲ್ಲಿಯೇ ಹಲ್ಲೆ ಮಾಡಿದ್ದಾರೆ. ಇನ್ನು ಈ…

Read More

ಬೆಂಗಳೂರು:-ರಾಜ್ಯ ಸರ್ಕಾರಿ ನೌಕರರಿಗೆ ಫೆ.27, 28ರಂದು ವಿಶೇಷ ಸಾಂದರ್ಭಿಕ ರಜೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಫೆಬ್ರವರಿ 27ರಂದು ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಹಾಗೂ ಪ್ರಜಾಸ್ನೇಹಿ ಕಾರ್ಯಾಗಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ನೌಕರರಿಗೆ ಫೆ.27ರಂದು ರಜೆ ನೀಡಿದರೆ, ಇತರೆ ಬೇರೆ-ಬೇರೆ ಜಿಲ್ಲೆಗಳಿಂದ ಬರುವ ನೌಕರರಿಗೆ ಎರಡು ದಿನ ಅಂದರೆ ಫೆ.27 ಮತ್ತು 28ರಂದು ರಜೆ ನೀಡಲಾಗಿದೆ. ಬೆಂಗಳೂರು ನಗರದ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಫೆ. 27ರಂದು ಬೆಳಗ್ಗೆ 10.30ಕ್ಕೆ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ನಡೆಯಲಿದೆ. ಇದರಲ್ಲಿ ಲಕ್ಷಾಂತರ ನೌಕರರು ಭಾಗಿಯಾಗುವ ನಿರೀಕ್ಷೆ ಇದೆ. ಹೀಗಾಗಿ ಸಮ್ಮೇಳನದಲ್ಲಿ ಭಾಗವಹಿಸಲು ಅನುಕೂಲವಾಗಲು ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತಗೊಳಿಸಿ ಬೆಂಗಳೂರು…

Read More

ಬೆಂಗಳೂರು:- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರ್ ಅಶೋಕ್ ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಕರ್ನಾಟಕ 3 ನೇ ಸ್ಥಾನದಲ್ಲಿದೆ ಎಂದರು. ಬೆಂಗಳೂರು ಈಗ ಅಪರಾಧಗಳ ರಾಜಧಾನಿ, ಸೈಬರ್ ಅಪಾರಾಧಗಳ ಕೇಂದ್ರ ಎಂಬ ಕುಖ್ಯಾತಿಗೆ ಒಳಗಾಗಿದೆ. ಒಂದೇ ವರ್ಷದಲ್ಲಿ 432 ಕೋಟಿ ರೂ.ನಷ್ಟು ಸೈಬರ್ ವಂಚನೆ ನಡೆದಿದೆ. ಬಿಜೆಪಿ ಅವಧಿಯ 2020-21 ರಲ್ಲಿ 6,422 ಸೈಬರ್ ಅಪರಾಧ ಪ್ರಕರಣ ದಾಖಲಾಗಿತ್ತು. 2023 ರಲ್ಲಿ 17,623 ಪ್ರಕರಣ ದಾಖಲಾಗಿದೆ. ಬೆಂಗಳೂರು ಈಗ ಸೇಫ್ ಸಿಟಿ ಬದಲು ಕ್ರೈಂ ಸಿಟಿ ಎಂಬ ಹೆಸರು ಪಡೆದಿದೆ. ಕೆಎಫ್ ಡಿ ಮೊದಲಾದ ಸಂಘಟನೆಗಳ ಮೇಲಿದ್ದ ಪ್ರಕರಣ ಹಿಂಪಡೆದಿರುವುದರಿಂದ ದುಷ್ಕರ್ಮಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ ಎಂದರು. ಗುಪ್ತಚರ ದಳ ಹಾಗೂ ಪೊಲೀಸ್ ಇಲಾಖೆಯಿಂದ ಕಾನೂನು ಕಾಪಾಡುವ ಕೆಲಸ ನಡೆಯುತ್ತಿಲ್ಲ. ಸರ್ಕಾರ ಈ ಬಗ್ಗೆ ಎಚ್ಚರ ವಹಿಸಬೇಕಿದೆ.‌ ಮಾಜಿ ಸಚಿವ ಕೆ.ಗೋಪಾಲಯ್ಯ (K Gopalaiah) ಅವರಿಗೆ ಬೆದರಿಕೆ ಬಂದಿರುವುದು ಕಾನೂನು ಅವ್ಯವಸ್ಥೆಗೆ…

Read More

ಚಾಮರಾಜನಗರ:- ಕೊಳ್ಳೇಗಾಲದ ನರೀಪುರದ ಸಮೀಪ ಕ್ಯಾಂಟರ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅಪಾರ ಪ್ರಮಾಣದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ 1.10 ಕೋಟಿ ರೂ. ಮೌಲ್ಯದ 221 ಕೆ.ಜಿ ಗಾಂಜಾ ಜಪ್ತಿಯಾಗಿದೆ. ಗಾಂಜಾ ಮಾರಾಟ ಮಾಡುತ್ತಿದ್ದ ಸೆಂದಿಲ್ ಕುಮಾರ್, ವಿನಯ್ ಹಾಗೂ ಉಮಾ ಶಂಕರ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳು ಕ್ಯಾಂಟರ್‍ನಲ್ಲಿ ಫ್ಲೈವುಡ್ ತುಂಬಿಕೊಂಡು ಅದರ ಮಧ್ಯ ಭಾಗದಲ್ಲಿ ನಾಲ್ಕು ಚೀಲಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು. ಆಂಧ್ರದ ವಿಶಾಖ ಪಟ್ಟಣಂನಿಂದ ದಕ್ಷಿಣ ಕನ್ನಡಕ್ಕೆ ಈ ಫ್ಲೈವುಡ್ ಶೀಟ್‍ಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಆರೋಪಿಗಳು ಪರ್ಮಿಟ್ ತೆಗೆದುಕೊಂಡಿದ್ದರು. ಅಧಿಕಾರಿಗಳು ತಡೆದರೆ ಈ ಅನುಮತಿ ಪತ್ರ ತೋರಿಸಿ ಪಾರಾಗುತ್ತಿದ್ದರು ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೊಳ್ಳೆಗಾಲ ಗ್ರಾಮಾಂತರ ಠಾಣೆ ಪೊಲೀಸರು ವಾಹನವನ್ನು ತಡೆದಿದ್ದಾರೆ. ಈ ವೇಳೆ ಆರೋಪಿಗಳು ಕ್ಯಾಂಟರ್‍ನ್ನು ಓವರ್ ಸ್ಪೀಡ್ ಆಗಿ ಚಲಾಯಿಸಿ ಪಾರಾಗಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಕ್ಯಾಂಟರ್‍ನ್ನು 10 ಕಿಮೀ…

Read More

ಶಿವಮೊಗ್ಗ:- ಬಿಜೆಪಿ ನಾಯಕರಿಗೆ ಕಿತಾಪತಿ ಮಡೋದು ಬಿಟ್ಟರೆ ಬೇರೇನೂ ಗೊತ್ತು ಎಂದು ಮಧು ಬಂಗಾರಪ್ಪ ಪ್ರಶ್ನೆ ಮಾಡಿದ್ದಾರೆ. ರಾಜ್ಯ ಭೀಕರ ಬರದಿಂದ ತತ್ತರಿಸಿರುವಾಗ ಕರ್ನಾಟಕ ಸರ್ಕಾರ ಮಂತ್ರಿಗಳಿಗಾಗಿ ಐಷಾರಾಮಿ ಕಾರು ಕೊಂಡಿರುವುದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ಷೇಪಣೆ ಎತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದರು. ಬರಗಾಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯವರು 10 ಕೇಜಿ ಅಕ್ಕಿ ಕೋಡೋದನ್ನ ನಿಲ್ಲಿಸಿದ್ದಾರಾ? ಮಹಿಳೆಯರಿಗೆ ರೂ. 2,000 ಕೊಡೋದನ್ನು ನಿಲ್ಲಿಸಿದ್ದಾರಾ? ಶಕ್ತಿ ಯೋಜನೆ ನಿಂತಿದೆಯಾ? ಬರ ಅಂತ ಯಾವ ಯೋಜನೆಯನ್ನೂ ಸರ್ಕಾರ ನಿಲ್ಲಿಸಲ್ಲ, 35-40 ಕಾರುಗಳನ್ನು ಖರೀದಿಸಿದರೆ, ಖಜಾನೆ ಖಾಲಿಯಾಗುತ್ತದೆ ಅಂತ ಬಿಜೆಪಿ ನಾಯಕರು ಹೇಳುತ್ತಾರೆ, ಇಂಥ ಕಿತಾಪತಿ ಮಡೋದನ್ನು ಬಿಟ್ಟರೆ ಬೇರೇನೂ ಅವರಿಗೆ ಗೊತ್ತಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

Read More

ಚಾಮರಾಜನಗರ:- ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ನಾನು ಟಿಕೆಟ್ ಆಕಾಂಕ್ಷಿಯೇ ಅಲ್ಲ, ಒಂದು ವೇಳೆ ಪಕ್ಷದ ವರಿಷ್ಠರು ಹೇಳಿದರೆ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಇಂದು ಮಾಧ್ಯಗಳೊಂದಿಗೆ ಮಾತನಾಡಿದ ಶೆಟ್ಟರ್, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಗೊಂದಲದ ಬಗ್ಗೆಯೂ ಮಾತನಾಡಿದ್ದು, ಪ್ರೀತಂಗೌಡ ಹೇಳಿಕೆ ವೈಯುಕ್ತಿಕವಾಗಿದೆ, ಪಕ್ಷದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ, ವರಿಷ್ಠರು ಏನು ಹೇಳುತ್ತಾರೆ ಅದಕ್ಕೆ ಎಲ್ಲರೂ ತಲೆ ಭಾಗಲೇಬೇಕು ಎಂದು‌ ನಿಲುವು ವ್ಯಕ್ತಪಡಿಸಿದರು. ಈ ಬಗ್ಗೆ ಅಮಿತ್ ಶಾ ಅವರು ಸಭೆಯಲ್ಲಿ ಏನು ಹೇಳಿರಬಹುದು ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ, ಅವರು ಪ್ರಮುಖವಾಗಿ ಸುತ್ತೂರು ಮಠದ ಕಾರ್ಯಕ್ರಮಕ್ಕೆ ಬಂದಿದ್ದರು, ಆ ಸಮಯದಲ್ಲಿ ಪಕ್ಷ ಸಂಘಟನೆ ಬಗ್ಗೆ ಕೆಲವು ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ, ಆ ಸಂದರ್ಭದಲ್ಲಿ ನಾನು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಕಾರಣ ಅಮಿತ್ ಶಾ ಅವರನ್ನು ಭೇಟಿ…

Read More