Author: AIN Author

ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ ಟಾಪ್/‌ ಕಂಪ್ಯೂಟರ್‌ ಮೂಲಕ ಕೆಲಸ ಮಾಡುವುದು ಅನಿವಾರ್ಯವಾದ ಕಾರಣ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ನಾವು ತಿನ್ನುವ ಆಹಾರದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕು. ನಾವು ತಿನ್ನುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ ಎಂಬಂತೆ ಆರೋಗ್ಯಯುತ ಆಹಾರ ಪದ್ಧತಿ ಅನುಸರಿಸಿಕೊಂಡರೆ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು. ಕಣ್ಣಿನ ಆರೋಗ್ಯ ಹೆಚ್ಚಿಸಲು ಯಾವೆಲ್ಲಾ ಆಹಾರಗಳನ್ನು ದಿನನಿತ್ಯ ಸೇವಿಸಬೇಕು ಎಂದು ತಿಳಿದುಕೊಳ್ಳೋಣ. ಬಾದಾಮ್: ಬಾದಾಮ್‌ ನಲ್ಲಿ ಹೆಚ್ಚಿನ ಪೋಷಕಾಂಶಗಳು ಇದ್ದು, ʼವಿಟಮಿನ್​ ಇʼ ಹಾಗೂ ವಿಟಮಿನ್‌ ಎ ಅಂಶ ಒಳಗೊಂಡಿದೆ. ʼವಿಟಮಿನ್ ಇʼ​ ಆರೋಗ್ಯಯುತ ಟಿಕ್ಯೂ, ಅನಿಶ್ಚಿತ ಮೆಲೆಕ್ಯೂಲ್​ ರಕ್ಷಣೆ ಮಾಡುತ್ತದೆ. ʼವಿಟಮಿನ್​ ಎʼ ಆರೋಗ್ಯಕರ ಟಿಶ್ಯೂಗಳ ನಿರ್ವಹಣೆಗೆ ಪ್ರಯೋಜನಕಾರಿ. ದಿನನಿತ್ಯ ನಿಯಮಿತ ಪ್ರಮಾಣದಲ್ಲಿ ಬಾದಾಮ್ ಸೇವನೆ‌ ಮಾಡಿದರೆ ಕ್ಯಾಟರಾಕ್ಟ್​ನಂತಹ ವಯೋ ಸಂಬಂಧಿತ ಕಾಯಿಲೆಗಳನ್ನು ದೂರವಿಡಬಹುದು. ಒಣದ್ರಾಕ್ಷಿ: ಇದರಲ್ಲಿರುವ ಪಾಲಿಫೆನಾಲಿಕ್ ಫೈಟೊನ್ಯೂಟ್ರಿಯಂಟ್ ಅಂಶ ಕಣ್ಣುಗಳ ಆರೋಗ್ಯಕ್ಕೆ ಅತ್ಯುತ್ತಮ. ದೃಷ್ಟಿಗೆ ಹಾನಿಯುಂಟು ಮಾಡುವ ಫ್ರೀ…

Read More

ರಾಂಚಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಟೀಂ ಇಂಡಿಯಾ (Team India) ಯುವ ಆರಂಭಿಕ ಯಶಸ್ವಿ ಜೈಸ್ವಾಲ್‌ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ (ICC Test Ranking) 14 ಸ್ಥಾನ ಜಿಗಿದು, ಟಾಪ್‌-20 ಸ್ಥಾನಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 29ನೇ ಸ್ಥಾನದಲ್ಲಿದ್ದ 22 ವರ್ಷದ ಯಶಸ್ವಿ ಜೈಸ್ವಾಲ್‌ (Yashasvi Jaiswal) 699 ಅಂಕಗಳೊಂದಿಗೆ 14 ಸ್ಥಾನ ಮೇಲಕ್ಕೆ ಜಿಗಿದು 15ನೇ ಸ್ಥಾನ ಪಡೆದುಕೊಂಡಿದ್ದಾರೆ. 12ನೇ ಸ್ಥಾನದಲ್ಲಿದ್ದ ರಿಷಭ್‌ ಪಂತ್‌ 706 ಅಂಕಗಳೊಂದಿಗೆ 14ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನೂ 13ನೇ ಸ್ಥಾನದಲ್ಲಿದ್ದ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) 731 ಅಂಕಗಳೊಂದಿಗೆ 12ನೇ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಟಾಪ್‌-10 ಪಟ್ಟಿಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಹೊರತುಪಡಿಸಿ ಮತ್ಯಾರು ಸ್ಥಾನ ಗಳಿಸಿಲ್ಲ. 752 ಅಂಕ ಗಳಿಸಿರುವ ವಿರಾಟ್‌ 7ನೇ ಸ್ಥಾನದಲ್ಲಿದ್ದರೆ, 893 ಅಂಕ ಪಡೆದಿರುವ ಕಿವೀಸ್‌ನ ಕೇನ್‌ ವಿಲಿಯಮ್ಸನ್‌ ಅಗ್ರಸ್ಥಾನದಲ್ಲಿದ್ದಾರೆ ಭಾರತ ಹಾಗೂ ಇಂಗ್ಲೆಂಡ್ (Ind vs Eng) ನಡುವಿನ ಟೆಸ್ಟ್ ಪಂದ್ಯಗಳಲ್ಲಿ…

Read More

ಜೂನ್ 1 ರಿಂದ ವೆಸ್ಟ್ ಇಂಡೀಸ್ ಹಾಗೂ ಅಮೇರಿಕ ಜಂಟಿ ಆತಿಥ್ಯದಲ್ಲಿ 2024ರ ಚುಟುಕು ವಿಶ್ವಕಪ್ ನಡೆಯಲಿದ್ದು  2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆಂದು ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿದೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ ಫೆಬ್ರವರಿ 23 ರಂದು ಮಹಿಳಾ ಪ್ರೀಮಿಯರ್ ಲೀಗ್‌ ಟೂರ್ನಿಗೆ ಚಾಲನೆ: ಪೂರ್ಣ ವೇಳಾಪಟ್ಟಿ ಹೀಗಿದೆ ಸುದೀರ್ಘ ಕಾಲದ ನಂತರ ಟಿ20 ತಂಡಕ್ಕೆ ಮರಳಿದ್ದ ಹಿಟ್‌ಮ್ಯಾನ್ ರೋಹಿತ್ ಶರ್ಮಾ, ತಮ್ಮ ನಾಯಕತ್ವದಲ್ಲಿ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ್ದರು. ಮಿಡ್ ಡೇ ಜೊತೆ ನಡೆಸಿದ ಸಂವಾದದಲ್ಲಿ ಟೀಮ್ ಇಂಡಿಯಾದ ಅನುಭವಿ ಆರಂಭಿಕ ಆಟಗಾರ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲು ಸೂಕ್ತ ಆಯ್ಕೆ ಆಗಿದೆ ಎಂದು ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲು ರೋಹಿತ್ ಶರ್ಮಾ ಉತ್ತಮ ಆಯ್ಕೆಯಾಗಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯಾವ ರೀತಿ ಸತತವಾಗಿ 10 ಪಂದ್ಯಗಳಲ್ಲಿ ಭಾರತ…

Read More

ಮಿತಿಗಿಂತ ಹೆಚ್ಚಾಗಿ ನಿಂಬೆ ನೀರು ಕುಡಿಯುವುದರಿಂದ ಕೆಲವು ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಗೆ ನಿಂಬೆ ನೀರು ಕುಡಿಯುವುದರಿಂದ ಅಜೀರ್ಣದಂತಹ ಸಮಸ್ಯೆಗಳಿಂದ ದೂರವಿರಬಹುದು ಹಾಗೂ ದೇಹ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗೆಂದು ಮಿತಿಗಿಂತ ಹೆಚ್ಚಾಗಿ ನಿಂಬೆ ನೀರು ಕುಡಿಯುವುದರಿಂದ ಕೆಲವು ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದು. ನಿಂಬೆಹಣ್ಣುಗಳಲ್ಲಿ ಸಿಟ್ರಸ್ ಅಂಶ ಸಾಕಷ್ಟಿದೆ. ಇದನ್ನು ಅತಿಯಾಗಿ ಸೇವನೆ ಮಾಡುವುದರಿಂದ ಹಲ್ಲಿನ ಸೂಕ್ಷ್ಮತೆ ನಾಶವಾಗುತ್ತದೆ. ಹಾಗಾಗಿ ನಿಂಬೆರಸವನ್ನು ಸೇವಿಸಿದ ಬಳಿಕ ಹಲ್ಲುಜ್ಜುವುದು ಒಳ್ಳೆಯದು. ಅಥವಾ ನಿಂಬೆರಸದೊಂದಿಗೆ ಸಾಕಷ್ಟು ಪ್ರಮಾಣದ ನೀರು ಕುಡಿಯುವುದು ಮುಖ್ಯ. ಸಿಟ್ರಸ್ ಹಣ್ಣುಗಳು ಮೈಗ್ರೇನ್ ಗೆ ಕಾರಣವಾಗುತ್ತದೆ. ಇದರಿಂದ ತಲೆನೋವು ಹೆಚ್ಚಬಹುದು. ಅತಿಯಾದ ನಿಂಬೆರಸ ಸೇವನೆಯಿಂದ ಎದೆ ಉರಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿರುವವರು ನಿಂಬೆರಸದಿಂದ ದೂರವಿದ್ದಷ್ಟು ಒಳ್ಳೆಯದು. ನಿಂಬೆರಸ ಅತಿಯಾದ ಸೇವನೆಯಿಂದ ಬಾಯಿ ಹುಣ್ಣು ಕಾಣಿಸಿಕೊಳ್ಳಬಹುದು. ತರಕಾರಿ ಅಥವಾ ಯಾವುದೇ ವಸ್ತುವನ್ನು ಬೇಯಿಸುವಾಗ ನಿಂಬೆರಸ ಹಿಂಡುವುದರಿಂದ ಅದರ ನಿಜವಾದ ಲಾಭ ದೊರೆಯದೆ ಹೋಗಬಹುದು.…

Read More

ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡವು ಅಭಿಯಾನ ಮುಗಿಸಿದೆ. ಹರಿಯಾಣ ಸ್ಟೀಲರ್ಸ್‌ ತಂಡವನ್ನು ಆಲೌಟ್‌ ಮಾಡಿದ ಬೆಂಗಳೂರು ಬುಲ್ಸ್‌ 14 ಅಂಕಗಳಿಂದ ಗೆದ್ದು, ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಮುಗಿಸಿದೆ. ಈ ಫಲಿತಾಂಶದೊಂದಿಗೆ ಒಟ್ಟಾರೆ 53 ಅಂಕ ಗಳಿಸಿದ ಬೆಂಗಳೂರು ಬುಲ್ಸ್‌ 12 ತಂಡಗಳ ಅಂಕಪಟ್ಟಿಯಲ್ಲಿ 8ನೇ ಸ್ಥಾನ ಪಡೆಯಿತು. ಅತ್ತ ಹರಿಯಾಣ ಐದನೇ ಸ್ಥಾನದೊಂದಿಗೆ ಪ್ಲೇಆಫ್‌ ಹಂತದಲ್ಲಿ ಸೆಣಸಾಟ ನಡೆಸಲು ವೇದಿಕೆ ಸಿದ್ದಪಡಿಸಿಕೊಂಡಿತು. ತೌವ್‌ ದೇವಿಲಾಲ್‌ ಒಳಾಂಗಣ ಕ್ರೀಡಾಂಗಣದಲ್ಲಿನಡೆದ ಪಂದ್ಯದಲ್ಲಿ ಬುಲ್ಸ್‌ 53-39 ಅಂಕಗಳಿಂದ ಸ್ಟೀಲರ್ಸ್‌ಗೆ ಆಘಾತ ನೀಡಿತು. ಸ್ಟೀಲರ್ಸ್‌ ಪರ ತೇಜಸ್‌ (11) ಗರಿಷ್ಠ ಅಂಕ ಗಳಿಸಿದರೆ, ಬುಲ್ಸ್‌ ಪರ ಸುಶೀಲ್‌ 22 ಅಂಕ ಗಳಿಸಿ ಜಯದಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಮುನ್ನಡೆಯ ಗಳಿಸುವ ವಿಶ್ವಾಸದೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಇತ್ತಂಡಗಳು ರಕ್ಷ ಣಾತ್ಮಕ ಆಟಕ್ಕೆ ಒತ್ತು ನೀಡಿದವು. ಆದಾಗ್ಯೂ 26-25ರಲ್ಲಿ ಮೇಲುಗೈ ಸಾಧಿಸಿದ ಹರಿಯಾಣ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ…

Read More

ಕರ್ನಾಟಕದ ಮೆಕ್ಕೆಜೋಳ ಕಣಜ ದಾವಣಗೆರೆ, ಬರದ ಸಿಡಿಲಿಗೆ ಬರಿದಾಗಿದೆ. ಇದರ ನೇರ ಪರಿಣಾಮ ಮೆಕ್ಕೆಜೋಳವನ್ನೇ ಅವಲಂಬಿಸಿರುವ ಉದ್ದಿಮೆಗಳ ಮೇಲಾಗಿದೆ ಪ್ರತಿ ವರ್ಷ ಸುಮಾರು 15 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಈ ಪೈಕಿ ದಾವಣಗೆರೆ ಜಿಲ್ಲೆಒಂದರಲ್ಲೇ 1.4 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಮೆಕ್ಕೆಜೋಳ ಆವರಿಸುತ್ತದೆ. ಆದರೆ, ಪ್ರಸಕ್ತ ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಕೇವಲ 162 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಈ ಹಿಂದೆ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆಗಿರಲಿಲ್ಲ, ಬಿತ್ತನೆ ಆದ ಬೆಳೆಯೂ ಮಳೆ ಇಲ್ಲದೆ ಒಣಗಿ ಇಳುವರಿ ಬಂದಿಲ್ಲ. ಈ ನಡುವೆ 162 ಹೆಕ್ಟೇರ್‌ನಲ್ಲಿ ಬೋರ್‌ವೆಲ್‌ ನೀರು ಬಳಸಿ ಮೆಕ್ಕೆಜೋಳ ಬೆಳೆದಿದ್ದಾರೆ. ಆದರೆ, ಬಿಸಿಲು ಅತಿಯಾಗಿರುವ ಕಾರಣ ಇಳುವರಿ ನಿರೀಕ್ಷಿಸುವಂತಿಲ್ಲ. ಜತೆಗೆ ರೋಗಗಳ ಹಾವಳಿ, ಸಾಮಾನ್ಯವಾಗಿ ಮುಂಗಾರಿನಲ್ಲಿ ಬಿತ್ತಿದ ಮೆಕ್ಕೆಜೋಳದ ಒಕ್ಕಲು ನವೆಂಬರ್‌, ಡಿಸೆಂಬರ್‌ನಲ್ಲಿ ಶುರುವಾಗಿ, ಜನವರಿ ಅಂತ್ಯದವರೆಗೂ ನಡೆಯುತ್ತದೆ. ಸಾಮಾನ್ಯವಾಗಿ ಹಿಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ‘ಸೀಡ್ಸ್‌’ ತಳಿಗಳನ್ನು ಬಿತ್ತನೆಗೆ ನೀಡಿ,…

Read More

ಫೆಬ್ರವರಿ 23 ರಂದು ರಾಂಚಿಯಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ ಪಂದ್ಯದ ಭಾರತ ತಂಡದಿಂದ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರನ್ನು ಕೈ ಬಿಡಲಾಗಿದೆ. ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಇವರ ಸ್ಥಾನಕ್ಕೆ ಮುಖೇಶ್‌ ಕುಮಾರ್‌ ಅವರನ್ನು ಮತ್ತೇ ತಂಡಕ್ಕೆ ಕರೆಸಿಕೊಳ್ಳಲಾಗಿದೆ. “ರಾಂಚಿಯಲ್ಲಿ ನಡೆಯುವ ನಾಲ್ಕನೇ ಟೆಸ್ಟ್‌ ಪಂದ್ಯದ ಭಾರತ ತಂಡದಿಂದ ಜಸ್‌ಪ್ರೀತ್‌ ಬುಮ್ರಾ ಅವರನ್ನು ಕೈ ಬಿಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಅವರು ಆಡಿದ್ದ ಕ್ರಿಕೆಟ್‌ ಅನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ,” ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಫೆಬ್ರವರಿ 23 ರಂದು ಮಹಿಳಾ ಪ್ರೀಮಿಯರ್ ಲೀಗ್‌ ಟೂರ್ನಿಗೆ ಚಾಲನೆ: ಪೂರ್ಣ ವೇಳಾಪಟ್ಟಿ ಹೀಗಿದೆ ಜಸ್‌ಪ್ರೀತ್‌ ಬುಮ್ರಾ ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಆಟಗಾರರು ಕೂಡ ನಾಲ್ಕನೇ ಟೆಸ್ಟ್‌ ಪಂದ್ಯದ ಭಾರತ ತಂಡದಲ್ಲಿದ್ದಾರೆ. ಎರಡನೇ ಟೆಸ್ಟ್‌ ಪಂದ್ಯದ ಬಳಿಕ ವೇಗಿ ಮುಖೇಶ್‌ ಕುಮಾರ್‌ ಅವರನ್ನು ಭಾರತ ಟೆಸ್ಟ್‌ ತಂಡದಿಂದ ಬಿಡುಗಡೆಗೊಳಿಸಿ ಬಂಗಾಳ ಪರ ರಣಜಿ ಟ್ರೋಫಿ ಪಂದ್ಯ ಆಡಲು ಅವಕಾಶ…

Read More

ಚಂಡೀಗಢ: ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಸಾವನ್ನಪ್ಪಿದ ಹಿನ್ನೆಲೆ ಪೊಲೀಸರೊಂದಿಗೆ ಘರ್ಷಣೆ ಉಂಟಾಗಿದ್ದು, ಎರಡು ದಿನ ಮೆರವಣಿಗೆ ಬಂದ್ ಮಾಡಲಾಗಿದೆ. 23 ವರ್ಷದ ಶುಭಕರಣ್ ಸಿಂಗ್ ಮೃತ ರೈತ. ಇವರು ಬಟಿಂಡಾ ನಗರದ ನಿವಾಸಿಯಾಗಿದ್ದಾರೆ. ಪೊಲೀಸರು ರೈತರನ್ನು ಚದುರಿಸಲು ಅಶ್ರುವಾಯು ಸೇರಿದಂತೆ ವಿವಿಧ ರೀತಿಯ ಕ್ರಮಗಳನ್ನು ಅನುಸರಿಸುತ್ತಿದ್ದರು, ಈ ವೇಳೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ರೈತರೊಬ್ಬರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಧರಣಿ, ಸತ್ಯಾಗ್ರಹ ಮುಂದುವರಿಯಲಿದ್ದರೂ ಎರಡು ದಿನಗಳ ಕಾಲ ದೆಹಲಿಗೆ ಬರುವ ತಮ್ಮ ಪ್ರತಿಭಟನಾ ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ದಾರೆ. ಸದ್ಯ ಮೃತ ರೈತನಿಗೆ ಗುಂಡು ತಗುಲಿದೆ ಎಂದು ಪಟಿಯಾಲ ಆಸ್ಪತ್ರೆಯ (Patiyala H ವೈದ್ಯರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನಿಸಿದ್ದು, ಮರಣೋತ್ತರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ ಖಾನೌರಿ ಗಡಿ ಪ್ರತಿಘಟನೆಯಲ್ಲಿ ಭಾಗವಹಿಸಿದ್ದ ರೈತರ ಪೈಕಿ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಒಬ್ಬರು ಆಸ್ಪತ್ರೆಗೆ ಕರೆತರುತ್ತಿದ್ದ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರ ಆರೋಗ್ಯ…

Read More

ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ, ದೇಹದಲ್ಲಿ ನೀರಿನಂಶ ಕಾಪಾಡುತ್ತದೆ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತದೆ, ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಕಣ್ಣುಗಳಿಗೆ ಒಳ್ಳೆಯದು, ಹೀಗೆ ಇವುಗಳನ್ನು ತಿನ್ನುವುದರಿಂದ ದೊರೆಯುವ ಪ್ರಯೋಜನಗಳು ಒಂದಾ.. ಎರಡಾ, ಆದರೆ ಇಷ್ಟೆಲ್ಲಾ ಗುಣಗಳು ಸಿಗಬೇಕೆಂದರೆ ಅವುಗಳಿಗೆ ರಾಸಾಯನಿಕ ಬಳಸಬಾರದಷ್ಟೇ… ಮಾರುಕಟ್ಟೆಗೆ ಬರುವ ಎಲ್ಲಾ ಕಲ್ಲಗಡಿ ಹಣ್ಣುಗಳು ರಾಸಾಯನಿಕ ಮುಕ್ತ ಎಂದು ಹೇಳಲು ಸಾಧ್ಯವಿಲ್ಲ. ಬೇಗನೆ ಹಾಳಾಗಬಾರದು, ಒಳಭಾಗ ಕೆಂಪು ಬಣ್ಣದಲ್ಲಿ ಇರಬೇಕು ಹೀಗೆ ನಾನಾ ಕಾರಣಗಳಿಗಾಗಿ ಕಲ್ಲಂಗಡಿಗೆ ರಾಸಾಯನಿಕ ಹಾಕುತ್ತಾರೆ. ಇಂಥ ಹಣ್ಣುಗಳು ನೋಡಿದರೆ ತುಂಬಾ ಕೆಂಪಾಗಿ ಇರುತ್ತದೆ, ಆದರೆ ಕಲ್ಲಂಗಡಿ ಹಣ್ಣಿನ ಯಾವುದೇ ರುಚಿ ಇರಲ್ಲ, ಇನ್ನು ಹಣ್ಣು ಸಿಹಿಯಾಗಲಿ ಎಂದು ಕೂಡ ರಾಸಾಯನಿಕ ಬಳಸುತ್ತಾರೆ. ಇಂಥ ಹಣ್ಣುಗಳು ಆರೋಗ್ಯಕ್ಕೆ ತುಂಬಾನೇ ಕೆಟ್ಟದ್ದು… ಬೀಜ ನೋಡಿ ಹೇಳಬಹುದು ಕಲ್ಲಂಗಡಿ ಹಣ್ಣು ಚೆನ್ನಾಗಿ ಬಲಿತಿರಬೇಕು, ಆದರೆ ಎಳೆಯ ಕಲ್ಲಂಗಡಿ ಹಣ್ಣು ತಂದು ಅದಕ್ಕೆ ರಾಸಾಯನಿಕ ಹಾಕಿ ಹಣ್ಣು ಮಾಡುತ್ತಾರೆ, ಹೀಗೆ…

Read More

ಬೆಂಗಳೂರು:-ಮಾರ್ಚ್ 3ರಂದು ರಾಜ್ಯಾದ್ಯಂತ ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಟಿ.ಕೆ.ಅನಿಲ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ದಡಾರ-ರುಬೆಲ್ಲಾ ನಿರ್ಮೂಲನೆ ಹಾಗೂ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತಾದ ಟಾಸ್ಕ್ ಪೋರ್ಸ್ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದಡಾರ ಮಕ್ಕಳ ಮಾರಾಣಾಂತಿಕ ಕಾಯಿಲೆಯಾಗಿದ್ದು, ದಡಾರ ವಿರುದ್ಧ ಲಸಿಕೆ ಪಡೆದರೆ ಇದರಿಂದ ಸಂಭವಿಸುವ ಸಾವನ್ನು ಶೇ.94ರಷ್ಟು ತಡೆಯಬಹುದು. ರುಬೆಲ್ಲಾ ಒಂದು ಬಗೆಯ ವೈರಾಣು ಬಗೆಯ ವೈರಾಣು ಸೋಕಿತ ಕಾಯಿಲೆಯಾಗಿದ್ದು, ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಈ ಸೋಂಕು ಸಂಭವಿಸಬಹುದಾಗಿದೆ. ಇದರಿಂದ ಹುಟ್ಟುವ ಮಕ್ಕಳಲ್ಲಿ ದೈಹಿಕ, ಮಾನಸಿಕ ನ್ಯೂನತೆ ಸಂಭವಿಸಬಹುದು. ರಾಜ್ಯದಲ್ಲಿ 2023ನೆ ಸಾಲಿನಲ್ಲಿ 231ರುಬೆಲ್ಲಾ ಪ್ರಕರಣಗಳು ದಾಖಲಾಗಿವೆ. ಮಾರ್ಚ್ 3ರಂದು ರಾಜ್ಯಾದ್ಯಂತ 0-5 ವಯೋಮಾನದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಿಗಧಿತ ಬೂತ್, ಅಂಗನವಾಡಿ ಮುಂತಾದ ಸ್ಥಳಗಳಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾ.ಪಂ.ಹಾಗೂ ತಾ.ಪಂ., ನಗರ ಮಟ್ಟಗಳಲ್ಲೂ ಪೋಲಿಯೋ ಲಸಿಕೆ ಬಗ್ಗೆ…

Read More