Author: AIN Author

ಬೆಂಗಳೂರು: ಅಂದೊಂದು ಸಣ್ಣ ಕುಟುಂಬ ಗಂಡ-ಹೆಂಡತಿ ಮಗು, ಜೊತೆಗೆ ಎರಡು ನಾಯಿಗಳು. ಮದುವೆಯಾಗಿ 11 ವರ್ಷದ ಬಳಿಕ ಮಗುವಾಗಿತ್ತು. ಮಗುವಾಗೋ ಮೊದಲು ಈ ದಂಪತಿಗೆ ಮಕ್ಕಳಂತೆ ಇದ್ದಿದ್ದು ಆ ಶ್ವಾನಗಳು. ಎಲ್ಲೇ‌ ಹೊರಗೆ ಹೊದರೂ ಜೊತೆಯಲ್ಲಿ ನಾಯಿ ಇದ್ದೆ ಇರ್ತಿತ್ತು. ಹೀಗೆ ಕಳೆದ ಮಾರ್ಚ್ 8 ರ ಶಿವರಾತ್ರಿಗೆ ಹಾಸನದ ಪುರದಮ್ಮ ದೇವಾಲಯಕ್ಕೆ ಕುಟುಂಬ ಸಮೇತ ಹೋಗಿದ್ದ ಈ ದಂಪತಿ ತಮ್ಮ ಪ್ರೀತಿಯ ಶ್ವಾನವೊಂದನ್ನು ಮಿಸ್ (Dog Missing) ಮಾಡಿಕೊಂಡಿದ್ದಾರೆ. Killer BMTC: ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ರಸ್ತೆ ದಾಟುವ ವೇಳೆ ಡಿಕ್ಕಿ ಹೊಡೆದ ಬಸ್ ಸಾಕು ಪ್ರಾಣಿಗಳ‌ ಜೊತೆಗಿನ ಸಂಬಂಧವೇ ಬೇರೆಯದ್ದಾಗಿರುತ್ತದೆ. ಮೂರು ವರ್ಷದಿಂದ ಸಾಕಿದ್ದ ಡಂಬೂ ಎಂಬ ನಾಯಿ ಕಳೆದ ಶಿವರಾತ್ರಿ ಹಬ್ಬದ ದಿನ ಹಾಸನ ಅರಸೀಕೆರೆ ಹೈವೇಯಲ್ಲಿ ಮಿಸ್ ಆಗಿಬಿಟ್ಟಿದೆ. ದೇವಸ್ಥಾನಕ್ಕೆ ಅಂತಾ ಹೋಗಿದ್ದ ಅಶೋಕ್, ಅಶ್ವಿನಿ ದಂಪತಿ ಬರುವಾಗ ಹೈವೇಯಲ್ಲಿ ರೆಸ್ಟ್ ಗೆ ಅಂತಾ ಕಾರ್ ನಿಲ್ಲಿಸಿದ್ದಾಗ ಡಂಬೂ ಕೂಡ ಕಾರಿನಿಂದ ಇಳಿದಿದ್ದ. ಆದರೆ ಅದೇ…

Read More

ಕಲಬುರಗಿ: ಕಲಬುರಗಿಯಲ್ಲಿ ಉಂಟಾಗಿರುವ ತೀವ್ರ ಬರಗಾಲ ಹಿನ್ನಲೆ ಜನರ ಸಂಕಷ್ಟಕ್ಕೆ ದನಿಯಾಗುವ ನಿಟ್ಟಿನಲ್ಲಿ ಟ್ರಾಮಾ ಕೇರ್ ಉಚಿತ ಚಿಕಿತ್ಸೆ ನೀಡಲು ಕಲಬುರಗಿಯ ಶಾಂತಾ ಹಾಸ್ಪಿಟಲ್ ನಿರ್ಧರಿಸಿದೆ..ಈ ಉಚಿತ ಚಿಕಿತ್ಸೆ ವ್ಯವಸ್ಥೆಯನ್ನ ಖುದ್ದು ಶಾಂತಾ ಆಸ್ಪತ್ರೆಯ ಮುಖ್ಯಸ್ಥ ಡಾ.ಸಂಜೀವ್ ಪಾಟೀಲ್ ಹೇಳಿದ್ದಾರೆ. ಆರ್ಥಿಕ ತೊಂದರೆ ಇರುವ ಯಾರೇ ನೋವು ಹೇಳಿಕೊಂಡು ಬಂದ್ರೂ ಟ್ರಾಮಾ ಕೇರ್ ಚಿಕಿತ್ಸೆ ನೀಡ್ತಿದ್ದೇವೆ.ವಿಶೇಷವಾಗಿ ಅಫಜಲಪುರ ಕ್ಷೇತ್ರದ ಜನರಿಗೆ ಎಲ್ಲ ರೀತಿಯ ಉಚಿತ ಚಿಕಿತ್ಸೆಯನ್ನ ಈಗಾಗಲೇ ಕಳೆದ 20 ದಿನಗಳಿಂದ ನೀಡುತ್ತಿರೋದು ನಮಗೆ ಹೆಮ್ಮೆಯ ಸಂಗತಿ ಅಂತ ಡಾ.ಸಂಜೀವ್ ಪಾಟೀಲ್ ಹೇಳಿದ್ದಾರೆ…

Read More

ಕೋಲಾರ: ಊರಿನ ಗ್ರಾಮಸ್ಥರು ಸುಮಾರು ನಲವತ್ತು ವರ್ಷಗಳಿಂದ ಕ್ರೀಡಾ ಚಟುವಟಿಕೆಗಳಿಗೆ ಬಳಸುತ್ತಿದ್ದ ಗೋಮಾಳ ಜಮೀನಿಗೆ ಫೆನ್ಸಿಂಗ್ ಹಾಕಿ ವಸತಿ ಶಾಲೆಗೆ ನೀಡಲು ಬಂದಿದ್ದ ಅಧಿಕಾರಿಗಳನ್ನು ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೋಲಾರ ತಾಲ್ಲೂಕಿನ ಗಾಜಲದಿನ್ನೆ ಗ್ರಾಮದಲ್ಲಿ ನಡೆದಿದೆ.   ನಲವತ್ತು ವರ್ಷಗಳಿಂದ ಗಾಜಲದಿನ್ನೆ  ಗ್ರಾಮಸ್ಥರು ಪೇಟೆಚಾಮನಹಳ್ಳಿ ಸೇರಿದ ಸರ್ವೇ ನಂಬರ್  71ರಲ್ಲಿನ ಐದು ಎಕರೆ ಗೋಮಾಳ ಜಮೀನನ್ನು ಆಟದ ಮೈದಾನವಾಗಿ ಬಳಸಿಕೊಂಡು ಯುವಕರು ಕ್ರಿಡಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ, ಜಮೀನನ್ನು ಸಾರ್ವಜನಿಕ ಆಟದ ಮೈದಾನ ಎಂದು ಖಾತೆ ಮಾಡಿಕೊಳ್ಳಲು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ, ಇದೀಗ ಏಕಾಏಕಿ ಅಟದ ಮೈದಾನ ಜಮೀನನ್ನು ಡಾ.ಎಪಿಜಿ ಅಬ್ದುಲ್ ಕಲಾಂ ವಸತಿ ಶಾಲೆಗೆ ಹಸ್ತಾಂತರ ಮಾಡಿ ಗುರುತು ಹಾಕಲು ಅಧಿಕಾರಿಗಳು ಗುತ್ತಿಗೆದಾರರು ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿ ಗಾಜಲದಿನ್ನೆ ಗ್ರಾಮಸ್ಥರು ಫೆನ್ಸಿಂಗ್ ಹಾಕುವುದನ್ನು ತಡೆದು ಪ್ರತಿಭಟಿಸಿದರು.  ‌ಸೆಲ್ವಮಣಿ ಜಿಲ್ಲಾಧಿಕಾರಿಯಾಗಿದ್ದ ವೇಳೆ ದೊಡ್ದ ಹಸಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಗಾಜಲದಿನ್ನೆ ಗ್ರಾಮದ ಹೊರವಲಯದಲ್ಲಿರುವ,  ಸರ್ವೇ 71…

Read More

ಬೆಂಗಳೂರು:  ದಿನೇ ದಿನೆ ಬಿಎಂಟಿಸಿ ಬಸ್‌ಗೆ (BMTC) ಬಲಿಯಾಗುತ್ತಿರುವವರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂತಹದೇ ಒಂದು ಪ್ರಕರಣ ಗುರುವಾರವೂ ನಡೆದಿದೆ.  ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್‌ಗೆ (Bike) ಡಿಕ್ಕಿ ಹೊಡೆದ ಪರಿಣಾಮ  ರಸ್ತೆ ದಾಟುವ ವೇಳೆ  ವ್ಯಕ್ತಿಗೆ ಡಿಕ್ಕಿ ಹೊಡೆದ ಬಸ್‌ ಈ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಾಮಾಕ್ಷಿಪಾಳ್ಯ ಬಳಿ ಇರುವ ಹೌಸಿಂಗ್ ಬೋರ್ಡ್ ಬಳಿ ನಡೆದಿದೆ. BIGG BREAKING: ಬಾಲಿವುಡ್‌ ಬಿಗ್‌ ಬಿ ಅಮಿತಾಭ್ ಬಚ್ಚನ್‌ʼಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಬಸ್ ಚೇತನ್( 35) ವರ್ಷ ಬಲಿಯಾದ ವ್ಯಕ್ತಿಯಾಗಿದ್ದು  ರಸ್ತೆ ದಾಟುವ ವೇಳೆ ನಡೆದ ಘಟನೆ ನಡೆದಿದ್ಆಂದು ಧ್ರ ಮೂಲದ ಚೇತನ್ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದು ನೆನ್ನೆ ರಾತ್ರಿ ನಡೆದ ಘಟನೆಯಾಗಿದೆ. ಶಿವಕುಮಾರ್ ಎಂಬ ಚಾಲಕನನ್ನ ವಶಕ್ಕೆ ಪಡೆದ ಪೊಲೀಸರು ಚಾಲಕನನ್ನ ವಶಕ್ಕೆ ಪಡೆದು ಬಸ್ ನ್ನು ಸೀಝ್ ಮಾಡಿದ ಪೊಲೀಸರು ಕಾಮಾಕ್ಷಿಪಾಳ್ಯ ಬಳಿ ಇರುವ ಹೌಸಿಂಗ್ ಬೋರ್ಡ್ ಬಳಿ…

Read More

ಬೆಂಗಳೂರು: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ‌, ಟ್ರಾಫಿಕ್‌ ಸಂಕಷ್ಟಗಳಿಗೆ ಪರಿಹಾರ ರೂಪವಾಗಿ ಬಂದಿರುವ ನಮ್ಮ ಮೆಟ್ರೋದ ಮೂರನೇ ಹಂತದ ಯೋಜನೆಯ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. BIGG BREAKING: ಬಾಲಿವುಡ್‌ ಬಿಗ್‌ ಬಿ ಅಮಿತಾಭ್ ಬಚ್ಚನ್‌ʼಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು ಬೆಂಗಳೂರಿನ ಜೆ.ಪಿ. ನಗರದಿಂದ ಹೆಬ್ಬಾಳವನ್ನು ಸಂಪರ್ಕಿಸುವ ಸುಮಾರು 44 ಕಿ.ಮೀ. ಉದ್ದದ ಹೊರ ವರ್ತುಲ ಮೆಟ್ರೋ ರಿಂಗ್‌ ರೋಡ್‌ ಇದಾಗಿದೆ. ಈ ಯೋಜನೆಯನ್ನು ಸುಮಾರು 15,611 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮೆಟ್ರೋ ಮೂರನೇ ಹಂತ ಹಲವು ಪ್ರಮುಖ ಭಾಗಗಳನ್ನು ಸಂಪರ್ಕಿಸುತ್ತದೆ. ಹೆಬ್ಬಾಳ – ಗೊರುಗುಂಟೆಪಾಳ್ಯ-ಕನಕಪುರ ರಸ್ತೆ, ಜೆಪಿ ನಗರ ಮೆಟ್ರೋ ನಿಲ್ದಾಣಗಳು ಇದರಲ್ಲಿ ಬರಲಿವೆ. ಇದಕ್ಕೆ ಬೇಕಾಗುವ ಖರ್ಚಿನ ಮೊತ್ತದಲ್ಲಿ ಶೇ. 15-16 ಭಾಗವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಉಳಿದ ಶೇ. 85 ಭಾಗವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಸಂಪುಟ ಸಭೆಯ ಬಳಿಕ ವಿವರ ನೀಡಿದ ಕಂದಾಯ ಸಚಿವ ಕೃಷ್ಣ…

Read More

ಹೊಸಪೇಟೆ: ಗ್ಯಾರಂಟಿ ಮೂಲಕ ಗೆಲ್ಲಬಹುದು ಅಂತ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ರಾಹುಲ್ ಗಾಂಧಿ ಮೋದಿವರಿಗೆ ಭೂಮಿ ಆಕಾಶದಷ್ಟು ವ್ಯತ್ಯಾಸ ಇದೆ ಎಂದು ಹೊಸಪೇಟೆಯಲ್ಲಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ 50 ವರ್ಷ ಆಳ್ವಿಕೆ ಮಾಡಿದೆ. ಕಾಂಗ್ರೆಸ್ ಪಾರ್ಟಿಗೆ ಸೆಟ್ಟರ್ ಹಾಕುವ ಪರಿಸ್ಥಿತಿ ಬಂದಿದೆ. ಗ್ಯಾರಂಟಿಗಳ ಹೆಸರಲ್ಲಿ ಕಾಂಗ್ರೆಸ್ ನವರು ರಾಜಕಾರಣ ಮಾಡ್ತಿದ್ದಾರೆ ಬಡವರು, ರೈತರು ಯಾವ ರೀತಿ ಬದುಕುತ್ತಿದ್ದಾರೆ ಅನ್ನೋದೇ ಕಾಂಗ್ರೆಸ್ ಗೆ ಗೊತ್ತಿದ್ದಿಲ್ಲ, ಇವತ್ತು ರೈತರ ಬಗ್ಗೆ, ಬಡವರ ಬಗ್ಗೆ ನೆನಪಿಸಿಕೊಳ್ತಿದ್ದಾರೆ ಎಂದು ಹೇಳಿದರು. ಇನ್ನೂ ಮೋದಿ ಅವರು ಒಳ್ಳೆಯ ಕ್ರೆಡಿಬಿಲಿಟಿ ಇಟ್ಕೊಂಡಿದ್ದಾರೆ. 70 ವರ್ಷ ಸ್ವಾತಂತ್ರ್ಯ ಬಂದಾಗಿನಿಂದ 10 ವರ್ಷ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕಾಣ್ತಿದ್ದೇವೆ. ರಾಹುಲ್ ಗಾಂಧಿ ಅಂತವರು ಬಂದ್ರೆ ಗ್ಯಾರಂಟಿ ಮೂಲಕ ಮಾತ್ರ ಅಧಿಕಾರಕ್ಕೆ ಬರಬಹುದು. ಬಿಜೆಪಿ ಸುನಾಮಿ, ಅಲೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕೊಚ್ಚಿ ಹೋಗುತ್ತದೆ. ಜಮ್ಮು – ಕಾಶ್ಮೀರದಲ್ಲಿ 370 ತೆಗೆದು ಹಾಕಿ ಮೋದಿ ಅವರು ಇತಿಹಾಸ ನಿರ್ಮಸಿದ್ದಾರೆ.…

Read More

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ’ ಎಂದು ಆರೋಪಿಸಲಾದ ಪ್ರಕರಣದಲ್ಲಿ ಬಂಧಿತ ಮೂವರಿಗೆ ನಗರದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಲೋಕಸಭೆ ಟಿಕೆಟ್ ಹಂಚಿಕೆ ಅಭಿಪ್ರಾಯ ಸಂಗ್ರಹಿಸಿ ಒಮ್ಮತದ ನಿರ್ಧಾರ: ಡಿಸಿಎಂ ಡಿ.ಕೆ. ಶಿವಕುಮಾರ್ ಈ ಕುರಿತಂತೆ ಬಂಧಿತರಾದ ದೆಹಲಿಯ ಕಿಶನ್ ಗಂಜ್‌ನ ಮೊಹಮ್ಮದ್ ಇಲ್ತಾಜ್, ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮ್ಮದ್ ಶಫಿ ನಾಶಿಪುಡಿ, ಬೆಂಗಳೂರಿನ ಜಯಮಹಲ್ ನಿವಾಸಿ ಡಿ.ಎಸ್.ಮುನಾವರ್ ಅಹ್ಮದ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 39ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವಿ.ವಿಜೇತ್ ಪುರಸ್ಕರಿಸಿದ್ದಾರೆ. ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ, ಆರೋಪಿಗಳು ₹1 ಲಕ್ಷ ಮೊತ್ತದ ಮುಚ್ಚಳಿಕೆ ನೀಡಬೇಕು, ಇಬ್ಬರು ವ್ಯಕ್ತಿಗಳು ಜಾಮೀನು ಒದಗಿಸಬೇಕು, ಆರೋಪಿಗಳು ಭಾರತ ಬಿಟ್ಟು ಹೋಗಬಾರದು, ವಿಚಾರಣಾ ನ್ಯಾಯಾಲಯದ ಮುದ್ದತುಗಳಿಗೆ ಹಾಜರಾಗಬೇಕು ಮತ್ತು ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಕೂಡದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

Read More

ಬೆಂಗಳೂರು: “ಲೋಕಸಭೆ ಅಭ್ಯರ್ಥಿ ಆಯ್ಕೆ ಸಂಬಂಧ ಸ್ಥಳೀಯ ಮಟ್ಟದಲ್ಲಿ ವಿಚಾರ, ಅಭಿಪ್ರಾಯಗಳನ್ನು ಸಂಗ್ರಹಿಸಿ ಹೈಕಮಾಂಡ್ ನಾಯಕರಿಗೆ ಕಳುಹಿಸುವುದು ನಮ್ಮ ಕರ್ತವ್ಯ. ನಾವು ಅದನ್ನು ಮಾಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಉತ್ತರಿಸಿದರು. ಕಾಂಗ್ರೆಸ್ ಚುನಾವಣೆ ಸಮಿತಿ (ಸಿಇಸಿ) ಸಭೆ ಸೋಮವಾರಕ್ಕೆ ಮುಂದೂಡಿಕೆಯಾಗಿರುವ ಬಗ್ಗೆ ಕೇಳಿದಾಗ, “ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿದ್ದಾರೆ. ಅವರು ವೈದ್ಯರಿಂದ ಸಮಯ ಪಡೆದಿದ್ದ ಕಾರಣ ಇಲ್ಲಿಗೆ ಆಗಮಿಸಿದ್ದಾರೆ ಎಂದರು. BIGG BREAKING: ಬಾಲಿವುಡ್‌ ಬಿಗ್‌ ಬಿ ಅಮಿತಾಭ್ ಬಚ್ಚನ್‌ʼಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು ಬಿಜೆಪಿಯಲ್ಲಿನ ಟಿಕೆಟ್ ಗೊಂದಲದ ಬಗ್ಗೆ ಕೇಳಿದಾಗ, “ಬಿಜೆಪಿ ಪಕ್ಷದ ಟಿಕೆಟ್ ವಿಚಾರವನ್ನು ಅವರ ಪಕ್ಷದವರು ನೋಡಿಕೊಳ್ಳುತ್ತಾರೆ” ಎಂದರು. ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಬಗ್ಗೆ ಕೇಳಿದಾಗ “ತಡವಾಗಿ ಸುದ್ದಿ ತಿಳಿಯಿತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ…

Read More

ಕೊಪ್ಪಳ: ಟಿಕೆಟ್ ಕೈತಪ್ಪಿದ್ರು ಕ್ಷೇತ್ರದಲ್ಲಿ ಸಂಸದ ಕರಡಿ ಸಂಗಣ್ಣ ಪುಲ್‌ ಆಕ್ಟಿವ್ ಆಗಿದ್ದಾರೆ. ಸಿಂಧನೂರು ರೈಲ್ವೆ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರೋ ಸಿಂಧನೂರಿನ,  ಯಶವಂತಪುರ – ಕಾರಟಗಿ ಎಕ್ಸ್ಪ್ರೆಸ್ ರೈಲು ಸಿಂಧನೂರು ವರೆಗೆ ವಿಸ್ತರಣೆಗೆ ಹಸಿರು ನಿಶಾನೆ ತೋರಿಸುವ ಮೂಲಕ  ಚಾಲನೆ ನೀಡಲಾಗಿದ್ದು, ಕೊಪ್ಪಳ ಬಿಜೆಪಿ ಟಿಕೆಟ್ ‌ನ್ನು ಕರಡಿ ಸಂಗಣ್ಣಗೆ ನೀಡದ ಹೈಕಮಾಂಡ್, ವೈದ್ಯ ಡಾ. ಕೆ ಬಸವರಾಜ್ ಗೆ ಸಿಕ್ಕಿದೆ.

Read More

ಹುಬ್ಬಳ್ಳಿ: ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗ್ತಿದೆ‌. 6 ಸಾವಿರ ಕೋಟಿಗೂ ಅಧಿಕ ಹಣ ಬಿಜೆಪಿಗೆ ದೇಣಿಗೆ ಹೋಗಿದೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ‘ಚುನಾವಣೆ ದಿನಾಂಕ ಕೂಡ ಯಾವಾಗ ಬೇಕಾದರೂ ಘೋಷಣೆ ಆಗಬಹುದು. ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ ಎನ್ನುವುದು ಪ್ರಶ್ನೆಯಾಗಿದೆ. ಚುನಾವಣಾ ಆಯೋಗದ ಅಧಿಕಾರಿ ರಾಜೀನಾಮೆ ನೀಡಿರೋದು ಇದಕ್ಕೆಲ್ಲ ಕಾರಣ” ಎಂದರು. “ಮೋದಿ ಸರ್ಕಾರ ಬಂದ ಮೇಲೆ ನ್ಯಾಯಾಧೀಶರನ್ನು ಹೊರಹಾಕಿದ್ದಾರೆ. ಚುನಾವಣಾ ಆಯೋಗದಿಂದ ಹೊರಹಾಕಿದ್ದಾರೆ. ಹೀಗಾಗಿ ನಿಷ್ಪಕ್ಷಪಾತ ಆಗೋಕೆ ಎಲ್ಲಿ ಸಾಧ್ಯ? ಸ್ವಾಯತ್ತ ಸಂಸ್ಥೆಗಳು ಬಿಜೆಪಿ ಅನುಸಾರ ನಡೆಯಬೇಕು. ಇದು ದೇಶದಲ್ಲಿ ನಡೆಯುತ್ತಿದೆ. ಆಯೋಗ, ಸಂಸ್ಥೆ ಎಲ್ಲವೂ ಬಿಜೆಪಿ ಪರವಾಗಿದೆ. ಇದರಲ್ಲಿ ಚುನಾವಣಾ ಆಯೋಗವೂ ಒಂದು. ಚುನಾವಣಾ ಆಯೋಗ ಬಿಜೆಪಿ ಪರವಾಗಿದೆ ಎಂದು ಪರೋಕ್ಷವಾಗಿ ವಾಗ್ದಾಳಿ” ನಡೆಸಿದರು. https://ainlivenews.com/the-benefits-of-drinking-warm-milk-mixed-with-a-spoonful-of-honey/ “ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗ್ತಿದೆ‌. 6 ಸಾವಿರ ಕೋಟಿಗೂ ಅಧಿಕ ಹಣ ಬಿಜೆಪಿಗೆ ದೇಣಿಗೆ ಹೋಗಿದೆ. ಬಿಜೆಪಿ ಪಕ್ಷಕ್ಕೆ ಅನೇಕ ದೊಡ್ಡ ದೊಡ್ಡ ಕಂಪನಿಗಳು…

Read More