Author: AIN Author

ಬೆಂಗಳೂರಿನಲ್ಲಿ ಬಿಎಂಟಿಸಿ ಆಯ್ತು ಈಗ ಕೆ ಎಸ್ ಆರ್ ಟಿಸಿ ಸರದಿ , ನಗರದಲ್ಲಿಕೆ ಎಸ್ ಆರ್ ಟಿಸಿ ಬಸ್ ಗೆ ವ್ಯಕ್ತಿ ಬಲಿಯಾದ ಘಟನೆ ಯಶವಂತಪುರ ಮೆಟ್ರೋ ನಿಲ್ದಾಣ ಬಳಿ ಘಟನೆ ನಾಗಸಂದ್ರ ಏರಿಯಾದ ರಾಜೇಂದ್ರ (45) ಮೃತ ದುರ್ದೈವಿಯಾಗಿದ್ದು  ಎಡಬದಿಯಲ್ಲಿ ಬೈಕ್ ನಲ್ಲಿ ಬರ್ತಿದ್ದ ವ್ಯಕ್ತಿ ಈ ವೇಳೆ ಬಲಬದಿಯಲ್ಲಿ ಬರ್ತಿದ್ದ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಹಿಂಬದಿ ಚಕ್ರಕ್ಕೆ ಸಿಲುಕಿ ಸಾವು ತಲೆ ಮೇಲೆ ಬಸ್ ಹರಿದ ಹಿನ್ನಲೆ ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿ ಯಶವಂತಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ,ಭೇಟಿ ಪರಿಶೀಲನೆ

Read More

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರನ್ನು (HD Devegowda) ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ (CP Yogeshwar) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭಾನುವಾರ ಸಂಜೆ ಪದ್ಮನಾಭನಗರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ಮಾಡಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿ, ಜೆಡಿಎಸ್‌ (BJP-JDS) ಮೈತ್ರಿ ಮಾಡಿಕೊಂಡಿರುವ ಕಾರಣ ಬೆಂಗಳೂರು ಗ್ರಾಮಾಂತರ (Bengaluru Rural) ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎನ್ನುವ ಕುತೂಹಲ ಮೂಡಿದೆ. ಈ ಹಿನ್ನೆಲೆಯಲ್ಲಿ ಯೋಗೇಶ್ವರ್‌ ಭೇಟಿ ಮಹತ್ವ ಪಡೆದುಕೊಂಡಿದೆ https://ainlivenews.com/good-news-for-vehicle-owners-important-information-about-hsrp-number-plate-from-state-govt/ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಯೋಗೇಶ್ವರ್‌ ಸೋತಿದ್ದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕುಣಿಗಲ್‌, ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್‌, ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ಕ್ಷೇತ್ರಗಳು ವ್ಯಾಪ್ತಿಗೆ ಬರುತ್ತದೆ. 8 ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್‌ ಇದ್ದರೆ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಚನ್ನಪಟ್ಟಣದಲ್ಲಿ ಜೆಡಿಎಸ್‌ ಶಾಸಕ ಹೆಚ್‌ಡಿ ಕುಮಾರಸ್ವಾಮಿ ಇದ್ದಾರೆ.

Read More

ಬೆಂಗಳೂರು: ಬಿಬಿಎಂಪಿಯಲ್ಲಿ ಮತ್ತೆ ವಿಭಜನೆ ಚರ್ಚೆಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಬಿಬಿಎಂಪಿ ಹೋಳವಾಗುವ ಚರ್ಚೆ ಪಾಲಿಕೆ ವಿಭಜನೆ ದೃಷ್ಟಿಯಿಂದ ಬಿಜೆಪಿ ರಚಿಸಿದ್ದ ಸಮಿತಿ ಜೊತೆ ಪಾಲಿಕೆ ಮತ್ತೆ ಸಭೆ ಬಿಬಿಎಂಪಿ ಇಬ್ಬಾಗ ಮಾಡುತ್ತ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರದಲ್ಲಿ ಬಿಬಿಎಂಪಿ ವಿಭಜನೆಗಾಗಿ ಬಿ.ಎಸ್ ಪಾಟೀಲ್ ನೇತೃತ್ವದಲ್ಲಿ ನಗರ ಯೋಜನಾ ತಜ್ಞರ ಸಮಿತಿ ರಚನೆ ಮಾಡಲಾಗಿತ್ತು. ನಂತರ ವಿಧಾನಸಭೆ ಚುನಾವಣೆ ಹಾಗೂ ಕಾಂಗ್ರೆಸ್ ನಾಯಕರು ವಿರೋಧಕ್ಕೆ ಈ ಯೋಜನೆಯನ್ನು ಕೈಬಿಡಲಾಗಿತ್ತು.ಅದರೀಗ ಅದೇ ಕಾಂಗ್ರೆಸ್ ಸರ್ಕಾರ ಈ ಸಮಿತಿಗೆ ಮರು ಜೀವ ಕೊಡೋಕೆ ಮುಂದಾಗುವ ಸಂಭವಿದೆ. ಮೊದಲು ಬಿಬಿಎಂಪಿಯನ್ನು ಆಡಳಿತಾತ್ಮಕ ಸುಧಾರಣೆಯ ಬಗ್ಗೆ ವರದಿ ಕೊಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಸೂಚಿಸಿದ್ದಾರೆಬಿಜೆಪಿ ಅವಧಿಯಲ್ಲಿ ಇದಕ್ಕೆ ಭಾರೀ ವಿರೋಧ ವ್ಯಕ್ತ ಪಡಿಸಿದ್ದ ಕಾಂಗ್ರೆಸ್ ಈಗ ಆಡಳಿತಾತ್ಮಕ ಸುಧಾರಣೆ ಎಂದು ಮತ್ತೆ ವಿಭಜನೆ ಸಮಿತಿ ಜೊತೆ ಸಭೆ ನಡೆಸಿ ಕಾರ್ಯಸಾಧ್ಯತೆಯ ವರದಿ ಕೊಡುವಂತೆ ಸೂಚಿಸಿದೆ. ಕಳೆದ ಅವಧಿಯಲ್ಲಿ ಲಂಡನ್ ಮಾದರಿಯಲ್ಲಿ ಬೆಂಗಳೂರು ಅಧಿಕಾರ ವಿಭಜಿಸಿದರೆ ಉತ್ತಮ ಎಂಬ…

Read More

ಕೀನ್ಯಾ: ವಿಶ್ವ ಮ್ಯಾರಥಾನ್ ರೆಕಾರ್ಡ್ ಹೋಲ್ಡರ್ ಕೆಲ್ವಿನ್ ಕಿಪ್ಟಮ್ ಹಾಗೂ ಅವರ ತರಬೇತುದಾರ ಗೆರ್ವೈಸ್ ಹಕಿಜಿಮಾನಾ ಅವರು ಪಶ್ಚಿಮ ಕೀನ್ಯಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಪಘಾತದ ವೇಳೆ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು ಓರ್ವ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾನುವಾರ ರಾತ್ರಿ  ಗಂಟೆಗೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದರು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು, ಒಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಇಬ್ಬರು ಕಿಪ್ಟಮ್ ಮತ್ತು ಅವರ ತರಬೇತುದಾರರು” ಎಂದು ಎಲ್ಜಿಯೊ ಮರಕ್ವೆಟ್ ಕೌಂಟಿಯ ಪೊಲೀಸ್ ಕಮಾಂಡರ್ ಪೀಟರ್ ಮುಲಿಂಗೆ ಹೇಳಿದರು. ಕಿಪ್ಟಮ್ ಅಕ್ಟೋಬರ್‌ನಲ್ಲಿ ನಡೆದ ಚಿಕಾಗೋ ಮ್ಯಾರಥಾನ್‌ನಲ್ಲಿ 2:00:35 ರಲ್ಲಿ ತಲುಪಿ ವಿಶ್ವ ದಾಖಲೆಮಾಡಿದರು.

Read More

ಬೆಸ್ತರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ‌ ಸೇರಿಸುವ ವಿಚಾರಕ್ಕೆ ನಾನು ನಿಮ್ಮ ಜೊತೆಗಿದ್ದು, ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು. ಅವರು ಗಂಗಾ ಪರಮೇಶ್ವರಿ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತಾಡಿದರು. ಯಾವ ಅಂಶಗಳನ್ನು ಸೇರಿಸಿ ಕಳುಹಿಸಬೇಕು ಎನ್ನುವುದನ್ನು‌ ಮನದಟ್ಟು ಮಾಡಿಕೊಂಡು‌ ಕುಲಶಾಸ್ತ್ರೀಯ ಅಧ್ಯಯನದ ವರದಿಯಲ್ಲಿ ಕಳುಹಿಸಕೊಡಬೇಕು ಎಂದರು. ಮಾದಿಗರ ಒಳ‌ಮೀಸಲಾತಿ‌ ಕೊಡಬೇಕು ಎಂಬ ಹೋರಾಟಕ್ಕೆ 35 ವರ್ಷಗಳು, ನಿಮ್ಮ ಹೋರಾಟ 26 ವರ್ಷಗಳಾಗಿವೆ. ನಿಮ್ಮ ಕಡತ ದೆಹಲಿಗೆ ಹೋದಾಗ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದರು. ಆಗ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಷಯದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ‌ ನಡೆಯುವ ವಾದ ವಿವಾದಗಳನ್ನು ಗಮನಿಸುತ್ತಿದ್ದೆ, https://ainlivenews.com/are-you-keeping-peeled-garlic-in-the-fridge-stop-now-and-avoid-the-risk/ ನನಗೆ ಬದ್ದತೆ ಇತ್ತು.ನನಗೆ ಈ ಸಮಾಜಕ್ಕೆ ಹೇಗಾದರೂ ನ್ಯಾಯ ಕೊಡಿಸಬೇಕು ಎಂದು ನನ್ನ ಮನಸಿನಲ್ಲಿದೆ. ರಾಯಚೂರು ಗುಲ್ಬರ್ಗಾ ದಿಂದ ಬಂದು ಜನರು ಮೀಸಲಾತಿಗಾಗಿ‌ ಭಿಕ್ಷೆ ಬೇಡುತ್ತಾರೆ. ಆರ್ಟಿಕಲ್ 64 ರಲ್ಲಿ‌ ವಿಶೇಷ ಸೌಲತ್ತನ್ನು ಕೊಡಬೇಕು ಎಂದಿದೆ. ಅದರಂತೆ ಸೇರ್ಪಡೆಯನ್ನು ನಾವು ಪಡೆಯಲು ಮುಂದಾಗಬೇಕು ಎಂದರು.

Read More

ಬೆಂಗಳೂರು: ವೃದ್ದನ ಮೇಲೆ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿರುವ ಘಟನೆ ಬೆಂಗಳೂರಿನ ಮಹದೇವಪುರ ಬಳಿ ನಡೆದಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಸ್ತೆ ಮೇಲೆ ವೃದ್ಧ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಏಕಾಏಕಿ ಎರಡು ನಾಯಿಗಳು ದಾಳಿ ಮಾಡಿವೆ. ಈ ವೇಳೆ ವೃದ್ಧನ ಕಾಲು ಪರಚಿವೆ. ಮತ್ತೋರ್ವ ವ್ಯಕ್ತಿ ಬಂದು ಓಡಿಸೋವರೆಗೂ ವೃದ್ಧನ ಮೇಲೆ ನಾಯಿ ದಾಳಿ ಮಾಡಿದೆ. ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ಸೋಷಿಯಲ್ ಮೀಡಿಯಾದಲ್ಲಿ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ. ನಗರದಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದೆ. ವೃದ್ಧರು ಭಯದಲ್ಲೇ ನಡೆದಾಡುವಂತಾಗಿದೆ ಹೀಗಾಗಿ ಬೀದಿ ನಾಯಿಗಳ ಬಗ್ಗೆ ಕ್ರಮಕೈಗೊಳ್ಳಿ ಅಂತಾ ಮನವಿ ಮಾಡಿದ್ದಾರೆ.

Read More

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಇಂದು ಅಯೋಧ್ಯೆಯ ರಾಮಮಂದಿರಕ್ಕೆ (Ram Mandir) ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆಮ್ ಆದ್ಮಿ ಪಕ್ಷದ (AAP) ನಾಯಕ ಅವರ ಪತ್ನಿ ಮತ್ತು ಕುಟುಂಬಸ್ಥರೊಂದಿಗೆ ಭೇಟಿ ನೀಡಲಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಕೂಡ ಪವಿತ್ರ ತಾಣಕ್ಕೆ ಭೇಟಿ ನೀಡಲಿದ್ದಾರೆ.  https://ainlivenews.com/are-you-keeping-peeled-garlic-in-the-fridge-stop-now-and-avoid-the-risk/ ಜ.22 ರಂದು ನಡೆದ ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭಕ್ಕೆ ತನಗೆ ಔಪಚಾರಿಕ ಆಹ್ವಾನ ಬಂದಿಲ್ಲ ಎಂದು ಕೇಜ್ರಿವಾಲ್ ಈ ಹಿಂದೆ ಹೇಳಿದ್ದರು. ಅವರು ತಮ್ಮ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಲು ಬಯಸಿದ್ದಾರೆ ಎನ್ನಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜ.22 ರಂದು ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ ನೆರವೇರಿತು. ಇದಾದ ಬಳಿಕ ಪಕ್ಷಾತೀತವಾಗಿ ನಾಯಕರು ಕೂಡ ಪವಿತ್ರ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.

Read More

ಬೆಂಗಳೂರು:  ಕರ್ನಾಟಕ ವಿಧಾನ ಮಂಡಲದ ಬಜೆಟ್ ಅಧಿವೇಶನ  ಆರಂಭವಾಗಿದ್ದು  ಜಂಟಿ ಅಧಿವೇಶನ ಉದ್ದೇಶಿಸಿ  ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್ ಮಾತನಾಡಿದರು. ಅಧಿವೇಶನದಲ್ಲಿ ಮಾತನಾಡಿದ ಅವರು, ಸರ್ಕಾರವು ನಡೆ ನುಡಿಗಳಗಳನ್ನು ಒಂದಾಗಿಸಿಕೊಂಡು ಕೆಲಸ ಮಾಡುತ್ತಿದೆ. ಕರ್ನಾಟಕ ಮಾದರಿಯನ್ನು ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಅನುಸರಿಸುತ್ತಾ ಬಂದಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಡವರಿಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಾಂತ್ವನವನ್ನು ಒದಗಿಸಿವೆ ಎಂದು ಹೇಳಿದರು. https://ainlivenews.com/good-news-for-vehicle-owners-important-information-about-hsrp-number-plate-from-state-govt/ ಸರ್ಕಾರವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಎರಡು ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ ಬಂದು ಮಧ್ಯಮ ವರ್ಗದ ಸ್ಥಿತಿಗೆ ಏರುತ್ತಿವೆ. ಸರ್ಕಾರದ ಒಂದು ನಿರ್ಣಯದಿಂದ ರಾಜ್ಯದ 5 ಕೋಟಿಗೂ ಹೆಚ್ಚು ಜನರು ಮಧ್ಯಮ ವರ್ಗದ ಸ್ಥಿತಿಗೆ ಬಂದಿರುವುದು ಜಾಗತಿಕ ದಾಖಲೆಯಾಗಿದೆ ಎಂದು ರಾಜ್ಯಪಾಲರು ಹೇಳಿದರು.

Read More

ಬೆಂಗಳೂರು:ಇಂದಿನಿಂದ ವಿಧಾನಮಂಡಲ ಬಜೆಟ್ ಅಧಿವೇಶನ ಆರಂಭಗೊಂಡಿದ್ದು ಬಿಜೆಪಿ ಶಾಸಕರೆಲ್ಲರೂ ಕೇಸರಿ ಶಾಲು ಧರಿಸಿಕೊಂಡು ಹಾಜರಾಗಿದ್ದಾರೆ. https://ainlivenews.com/good-news-for-vehicle-owners-important-information-about-hsrp-number-plate-from-state-govt/ ಆರೋಪ ಪ್ರತ್ಯಾರೋಪಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳು ಸಜ್ಜಾಗಿವೆ. ಬಜೆಟ್ ಅಧಿವೇಶನ ಆಗಿರುವುದರಿಂದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಜನರ ನಿರೀಕ್ಷೆಯೂ ಹೆಚ್ಚಿದೆ. ಇತ್ತೀಚಿಗಷ್ಟೆ ಕೇಂದ್ರದ ಬಜೆಟ್ ಮಂಡನೆಯಾಗಿದೆ. ಅನುದಾನ ತಾರತಮ್ಯ ವಿಚಾರಕ್ಕೆ ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದ್ದರು. ಕೇಂದ್ರ ಸರ್ಕಾರ ರಾಜ್ಯದ ತೆರಿಗೆ ಪಾಲು ನೀಡಿಲ್ಲ ಎಂದು ಕೈ ನಾಯಕರು ದಿಲ್ಲಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದರು. ತೆರಿಗೆ ವಿಚಾರಕ್ಕೆ ವಾಗ್ಯುದ್ಧ ಮುಂದುವರಿದಿರುವ ಬೆನ್ನಲ್ಲೇ ರಾಜ್ಯದಲ್ಲಿ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಇದರೊಂದಿಗೆ ಮತ್ತೊಂದು ಸುತ್ತಿನ ಸಮರಕ್ಕೆ ವೇದಿಕೆ ಸಜ್ಜಾಗಿದೆ.

Read More

ಕಲಬುರಗಿ: ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಸ್ನೇಹಿತನನ್ನೆ ಚಾಕುವಿನಿಂದ ಇರಿದು ಕೊಂದ ಮೂವರು ಮಿತ್ರ ದ್ರೋಹಿಗಳನ್ನ ಕಲಬುರಗಿ ಪೋಲೀಸರು ಲಾಕ್ ಮಾಡಿದ್ದಾರೆ. ಚೌಕ್ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸುನೀಲ್ ಸಿಂಗ್ ಸೊಹೇಲ್ & ಭಗತ್ ಸಿಂಗ್‌ ಸಿಕ್ಕಿಬಿದ್ದಿದ್ದಾರೆ. ಫೆಬ್ರವರಿ 6 ರಂದು ಸೈಯದ್ ಚಿಂಚೋಳಿ ಕ್ರಾಸ್ ಬಳಿ ರೋಹನ್ ಎಂಬಾತನ ಕೊಲೆಯಾಗಿತ್ತು.ನಾಲ್ಕು ಜನ ಸ್ನೇಹಿತರು ಸೇರಿ ಕೊಲೆ ಮಾಡಿದ್ದು ಈ ಪೈಕಿ ಮೂವರ ಬಂವನವಾಗಿದ್ದು ಇನ್ನೊರ್ವ ಆರೋಪಿಗಾಗಿ ತಲಾಷ್ ನಡೆದಿದೆ..ಕೊಟ್ಟ ಹಣ ವಾಪಸ್ ಕೊಡುವಂತೆ ಕೇಳಿದಕ್ಕೆ ಸ್ನೇಹಿತನನ್ನೇ ಇರಿದು ಕೊಲೆ ಮಾಡಿದ್ರು ಪಾಪಿಗಳು..

Read More