Author: AIN Author

ಮಂಡ್ಯ:-ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಇಂದಿನಿಂದ ಜಾರಿ ಮಾಡಲಾಗಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಅಧಿಕಾರಿಗಳಿಗೆ ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.ಎಸ್.ಎಸ್.ಟಿ, ಎಫ್.ಎಸ್.ಟಿ ತಂಡಗಳು ಕಾರ್ಯಾನ್ಮುಖರಾಗಬೇಕು. ಜಿಲ್ಲೆಯಲ್ಲಿ ನಡೆಯುವ ರಾಜಕೀಯ ಪ್ರಚಾರ ಸಭೆ, ಸಮಾರಂಭ ರ್ಯಾಲಿಗಳಲ್ಲಿ ಭಾಗವಹಿಸಿ ವರದಿಗಳನ್ನು ಸಲ್ಲಿಸಬೇಕು ಎಂದರು. ಸರ್ಕಾರಿ ಕಟ್ಟಡ, ಸಾರ್ವಜನಿಕ ಸ್ಥಳಗಳ ಮೇಲೆ ಇರುವ ರಾಜಕೀಯ ವ್ಯಕ್ತಿಗಳು ಬಳಸಿ ಪ್ರಚಾರ ಮಾಡಿರುವ ಜಾಹೀರಾತು ಪಲಕ, ಪ್ಲೆಕ್ಸ್ , ಪೋಸ್ಟರ್ ಗಳನ್ನು ಕೂಡಲೇ ಸ್ಥಳೋಯ ಸಂಸ್ಥೆಗಳು ತೆರವುಗೊಳಿಸಬೇಕು. ಸರ್ಕಾರದ ಎಲ್ಲಾ ವೆಬ್ ಸೈಟ್ ಗಳಲ್ಲಿ ರಾಜಕೀಯ ವ್ಯಕ್ತಿಗಳ ಭಾವಚಿತ್ರಗಳನ್ನು ತೆರವುಗೊಳಿಸಬೇಕು . ಇದಕ್ಕೆ ಸಂಬಂಧಿಸಿದಂತೆ ಎನ್.ಐ.ಸಿ ಅಧಿಕಾರಿಗಳು ಪರಿಶೀಲಸಬೇಕು ಎಂದರು. ಚೆಕ್ ಪೋಸ್ಟಗಳ ಸಿದ್ದತೆ ಈಗಾಗಲೇ ಪ್ರಾರಂಭವಾಗಿದ್ದು, ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕು. ಸಿ.ಸಿ.ಟಿ.ವಿ. ಅಳವಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು…

Read More

ಚಾಮರಾಜನಗರ:- ನಗರದ ಎಸ್.ಸಿ ಮೀಸಲು ಕ್ಷೇತ್ರದ ಅಭ್ಯರ್ಥಿ ಬಾಲರಾಜ್ ಗೆ ಮಾಜಿ ಸಚಿವ ಎನ್.ಮಹೇಶ್ ಬೆಂಬಲ ಸೂಚಿಸಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಅಮಿತ್ ಶಾ ಅವರಲ್ಲಿ ಮನವಿ ಮಾಡಿದ್ದೆ. ರಾಜ್ಯದ ವೀಕ್ಷಕರ‌ ಅಭಿಪ್ರಾಯ ಸಂಗ್ರಹದಲ್ಲೂ ಸ್ಥಳೀಯರ ಪರ ಒಲವು ವ್ಯಕ್ತವಾಗಿತ್ತು. ಹೀಗಾಗಿ ಬಿಜೆಪಿ ಅಭ್ಯರ್ಥಿಯಾಗಿ ಬಾಲರಾಜ್ ಆಯ್ಕೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಾಲರಾಜ್ ನನ್ನ ಪರ ಕೆಲಸ ಮಾಡಿದ್ದರು ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಪರ ಒಲವಿದೆ. ಕಳೆದ ಬಾರಿ ವಿ.ಶ್ರೀನಿವಾಸ್ ಪ್ರಸಾದ್ ಹೋರಾಟ ಮಾಡಿ ಬಿಜೆಪಿಗೆ ಮೊದಲ ಗೆಲುವು ತಂದು ಕೊಟ್ಟಿದ್ದರು. ಈ ಬಾರಿ ನಾವು ಒಟ್ಟಾಗಿ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ. ಆ ಗೆಲುವನ್ನು ವಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ಅರ್ಪಿಸುತ್ತೇವೆ ಎಂದು ಎನ್.ಮಹೇಶ್ ಹೇಳಿಕೆ ನೀಡಿದ್ದಾರೆ.

Read More

ಕೋಲಾರ :- ಮಲಬಾರ್ ಗೊಲ್ಡ್ ಅಂಡ್ ಡೈಮಂಡ್ ನೂತನ ಶಾಖೆ ಆರಂಭವಾಗಿದ್ದು, ನೂತನ ಶಾಖೆಯನ್ನು ನಗರದ ಎಂಬಿ ರಸ್ತೆ ಡಬಲ್ ವಾಟರ್ ಟ್ಯಾಂಕ್ ಎದುರು ಕೆಜಿಎಫ್ ಸಿನಿಮಾ ಮೂಲಕ ಮನೆ ಮಾತಾಗಿರುವ ಶ್ರೀನಿಧಿ ಶೆಟ್ಟಿ ಉದ್ಘಾಟನೆ ಮಾಡಿದ್ದಾರೆ. ಇದೇ ವೇಳೆ ಜಿಲ್ಲೆಯ ಮೊದಲ ಮಲಬಾರ್ ಗೋಲ್ಡ್ ಸ್ಟೋರ್, ಸ್ಟೋರ್ ನ ಮೊದಲ ಗ್ರಾಹರಿಗೆ ಶ್ರೀನಿಧಿ ಶೆಟ್ಟಿ ಆಬರಗಳ ವಿತರಣೆ ಮಾಡಿದ್ದಾರೆ. ಹೊಸ ಉದ್ಘಾಟನೆಗೆ ಪ್ರತಿ ಖರೀದಿಗೆ ಬೆಳ್ಳಿ ನಾಣ್ಯ ಕೊಡುಗೆ ಯಾಗಿ ಕೊಡಲಾಗುತ್ತಿದ್ದು, ಕೋಲಾರದಲ್ಲಿ‌ ಮಲಬಾರ್ ಗ್ರೂಫ್ ನಿಂದ ೩೪ ನೇ ಸ್ಟೋ ಉದ್ಘಾಟನೆಗೊಂಡಿದೆ.

Read More

ಕೋಲಾರ:- ವಿವಿಧ ಬೇಡಿಕೆ ಈಡೇರಿಸದ ಆಡಳಿತ ಮಂಡಳಿ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರ ಮೇಲೆ ಹೊರಗಿನವರಿಂದ ಹಲ್ಲೆ ಆರೋಪ ಕೇಳಿ ಬಂದಿರುವ ಘಟನೆ ಕೋಲಾರದ ವೇಮಗಲ್ ಕೈಗಾರಿಕಾ ವಲಯದಲ್ಲಿ ಜರುಗಿದೆ. ಮಹಿಂದ್ರಾ ಏರೋಸ್ಪೇಸ್ ಕಾರ್ಖಾನೆ ಎದುರು ಕಾರ್ಮಿಕರು ಆಕ್ರೋಶ ಹೊರ ಹಾಕಿದ್ದಾರೆ. ಕಳೆದ ೧೫ ದಿನಗಳಿಂದ ಪ್ರತಿದಿನ ತಮ್ಮ‌ಪಾಳಿ ಆರಂಭಕ್ಕೂ ಮುನ್ನ ಪ್ರತಿಭಟನೆ ನಡೆಯುತ್ತಿದ್ದು, ನಂತರ ಯತಾ ಪ್ರಕಾರ ತಮ್ಮ ಕರ್ಥವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇಂದು ರೌಡಿಗಳಿಂದ ನಮ್ಮ‌ಮೇಲೆ‌ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿರುವ ಕಾರ್ಮಿಕರು ವೇಮಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ತಿಕ್ಕಾಟ ಮುಂದುವರಿದಿದೆ.

Read More

ವಿಜಯಪುರ: MP ಟಿಕೆಟ್ ಸಿಗದ ಹಿನ್ನೆಲೆ ಕೆ ಎಸ್ ಈಶ್ವರಪ್ಪ ಅಸಾಮಾಧಾನ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಚಲುವಾದಿ ನಾರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈಶ್ವರಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು. ಅವೇಶದಲ್ಲಿ ಒಂದು ಮಾತನಾಡಿರುತ್ತಾರೆ. ನನಗೂ ಟಿಕೆಟ್ ಸಿಗಲಿಲ್ಲ ಎಂದರೆ ನಾನು ಹಾಗೆ ಮಾತನಾಡುತ್ತಿದ್ದೆ. ಯಾವುದೇ ಕಾರಣಕ್ಕೂ ಅವರು ಸ್ವತಂತ್ರವಾಗಿ ನಿಲ್ಲಲ್ಲ. ಯಾಕೆಂದರೆ ಅವರಲ್ಲಿ ದೊಡ್ಡತನವಿದೆ. ಮನೆಯವರಿಗೂ ಅವರು ಉತ್ತರ ಕೊಡಬೇಕಲ್ಲ. ಮಗ ಟಿಕೇಟ್ ಕೊಡಿಸಲೇಬೇಕು ಎಂದು ಹಠ ಹಿಡಿದ್ದರು. ಈ ತೀರ್ಮಾನ ಮಾಡಿದ್ದು ಯಡಿಯೂರಪ್ಪನವರು ಅಥವಾ ವಿಜಯೇಂದ್ರ ಅಲ್ಲ. ಸೆಂಟ್ರಲ್ ನವರು ತೀರ್ಮಾನ ಮಾಡಿದ್ದಾರೆ. ಸಾಧಕ ಬಾಧಕ ಅವರು ಪರಿಶೀಲನೆ ಮಾಡಿಯೇ ಮಾಡಿದ್ದಾರೆ. ನಾವೆಲ್ಲರೂ ಸೇರಿ ಪಕ್ಷ ಕಟ್ಟೋಣ. ಮತ್ತೆ ನಮ್ಮ ಸರ್ಕಾರ ಬಂದು ಮತ್ತೊಮ್ನೆ ಮೋದಿ ಅವರನ್ನು ಪ್ರಧಾನಿ‌ ಮಾಡುವ ನಿಟ್ಟಿನಲ್ಲಿ ನಾವೆಲ್ಲವೂ ಪ್ರಯತ್ನಿಸುತ್ತೇವೆ ಎಂದು ಚಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

Read More

ಮಂಡ್ಯ : ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಓ ಹಾಗೂ ಮಧ್ಯವರ್ತಿ ಲೋಕಾ ಬಲೆಗೆ ಬಿದ್ದಿದ್ದಾರೆ. ಮಂಡ್ಯದ ಮದ್ದೂರು ತಾಲ್ಲೂಕಿನ ಹೊಸಕೆರೆ ಗ್ರಾ.ಪಂ ಅಲ್ಲಿ ಘಟನೆ ಜರುಗಿದೆ. ಹೊಸಕೆರೆ ಗ್ರಾ.ಪಂ ಪಿಡಿಓ ಮಂಜಮ್ಮ, ಮಧ್ಯವರ್ತಿ ಅಭಿಷೇಕ್ ಲಂಚಕ್ಕೆ ಬೇಡಿಕೆ ಇಟ್ವು ಸಿಕ್ಕಿಬಿದ್ದವರು ಎಂದು ಹೇಳಲಾಗಿದೆ. ಕೊತ್ತನಹಳ್ಳಿ ಗ್ರಾಮ ಕೃಷ್ಣೇಗೌಡ ಬಳಿ ನಿವೇಶನವೊಂದರ ಖಾತೆ ಮಾಡಿಕೊಡಲು 1 ಲಕ್ಷದ 20 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ದೂರು ದಾಖಲಿಸಿ ತನಿಖೆ ಕೈಗೊಂಡ ಲೋಕಾ ಪೊಲೀಸರು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು, ಡಿಎಸ್‌ಪಿ ಸುನೀಲ್ ಕುಮಾರ್, ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ, ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿದೆ.

Read More

ಕಲಬುರಗಿ:- ಜಿಲ್ಲೆಗೆ ಆಗಮಿಸಿದ ಪ್ರಧಾನಿ ಮೋದಿಯವರಿಗೆ ಇವತ್ತು ಸಂಸದ ಉಮೇಶ್ ಜಾಧವ್ ಮುತ್ತಿನ ಹಾರ ನೀಡಿ ಗೌರವಿಸಿ ನಂತ್ರ ಆಶೀರ್ವಾದ ಮಾಡುವಂತೆ ಕೇಳಿದ್ರು.. ಈವೇಳೆ ನಸುನಕ್ಕ ನಮೋ ಜಾಧವ್ ಬೆನ್ನಿಗೆ ಗುದ್ದಿದರು..ನಗರದ ಎನ್ ವಿ ಮೈದಾನದಲ್ಲಿ ನಡೆದ ಮತ್ತೊಮ್ಮೆ ಮೋದಿ ಸಂಕಲ್ಪ ಸಮಾವೇಶದಲ್ಲಿ ಇಂತಹದೊಂದು ಅಪರೂಪದ ಸೀನ್ ಕಂಡುಬಂತು. ಸರದಿ ಸಾಲಲ್ಲಿ ಬಂದು ಸನ್ಮಾನಿಸಿದ ಜಾಧವ್ ತಲೆಬಾಗಿ ನಮಸ್ಕರಿಸಿದ ವೇಳೆ ಮೋದಿ ಜಾಧವ್ ಬೆನ್ನಿಗೆ ಗುದ್ದಿ ಏನೋ ಹೇಳುತ್ತಾ ನಸುನಕ್ಕರು…

Read More

ಹುಬ್ಬಳ್ಳಿ: ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದ್ದೇ ಬಿಜೆಪಿಯವರು.​ ಹಿಂದೆ ಕಾಂಗ್ರೆಸ್ ಆಡಳಿತ ನಡೆಸಿತ್ತು. ಯಾವತ್ತೂ ಇಷ್ಟು ಪ್ರಮಾಣದ ಸಾಲ ಮಾಡಿರಲಿಲ್ಲ. ಹಾಗಾಗಿ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಬಿಜೆಪಿಯವರಿಗಿಲ್ಲ” ಎಂದು ಪೂರ್ವ ಕ್ಷೇತ್ರದ ಶಾಸಕರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಅವರು ಹೇಳಿದರು. ಅವರು, ಗುರುವಾರ ವಾರ್ಡ್ ಸಂಖ್ಯೆ 78ರಲ್ಲಿ ಬರುವ ರಣದಮ್ಮ ಕಾಲೋನಿಯಲ್ಲಿ 5ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಒಳಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಿ ಮಾತನಾಡಿದರು. ರಾಜ್ಯ ಕಾಂಗ್ರೆಸ್​ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ಸೇರಿದಂತೆ ಯಾವುದೇ ನಿಯಮಿತ ಅಭಿವೃದ್ಧಿ ಕಾಮಗಾರಿ ಹಾಗೂ ಕಾರ್ಯಕ್ರಮಕ್ಕೆ ಹಣದ ಕೊರತೆ ಇಲ್ಲ. ಗ್ಯಾರಂಟಿಗಳಿಗಾಗಿ ರಾಜ್ಯದ ಅಭಿವೃದ್ಧಿಗಳು ಕುಂಠಿತಗೊಂಡಿವೆ ಅನ್ನೋದು ಸುಳ್ಳು. ಬಿಜೆಪಿ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು. ಯಾವುದೇ ಒಂದು ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಕ್ಷೇತ್ರದ ಜನರ ಸಹಕಾರ ಹಾಗೂ ಜನಪ್ರತಿನಿಧಿಗಳ ನಡುವೆ ಸಾಮರಸ್ಯ ಬೇಕು.…

Read More

ಕಲಬುರ್ಗಿ:- ವರಿಷ್ಠರು ಎಲ್ಲವನ್ನು ಗಮನದಲ್ಲಿಟ್ಟಿಕೊಂಡೇ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಮಾಧ್ಯಮಗಳಿಗೆ ಎಲ್ಲಿಂದ ಮಾಹಿತಿ ಲಭ್ಯಾವಾಗುತ್ತದೆಯೋ ಗೊತ್ತಿಲ್ಲ, ಆದರೆ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಅಂಶಗಳ ವಿವರ ಕೇಂದ್ರ ಸಂಸದೀಯ ಮಂಡಳಿ ಮತ್ತು ವರಿಷ್ಠರಾದ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಳಿಯಲ್ಲಿದ್ದು ಅವರು ಎಲ್ಲವನ್ನು ಗಮನದಲ್ಲಿಟ್ಟಿಕೊಂಡೇ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದಾರೆ, ಅವರ ತೀರ್ಮಾನಗಳನ್ನು ತಾವ್ಯಾರೂ ಪ್ರಶ್ನಿಸಲಾಗಲ್ಲ ಎಂದು ಬೊಮ್ಮಾಯಿ ಹೇಳಿದರು. ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದ ಅವರು 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಸಿದ್ದರಾಮಯ್ಯ ಜಾರಿಗೊಳಿಸಲೇ ಬೇಕು ಎಂದರು. ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ, ಆಯೋಗದ ಶಿಫಾರಸ್ಸಿನಂತೆ ಶೇಕಡ 17 ರಷ್ಟು ತಾತ್ಕಾಲಿಕ ಪರಿಹಾರವನ್ನು ಕೊಟ್ಟಾಗಿದೆ, ಅಂತಿಮ ಶಿಫಾರಸ್ಸನ್ನು ಈಡೇರಿಸುವ ಬಾಧ್ಯತೆ ಸರ್ಕಾರದ ಮೇಲಿದೆ, ಆದರೆ ಆಗ ದೊಡ್ಡ ದೊಡ್ಡ ಭಾಷಣ ಮಾಡುತ್ತಿದ್ದ ಸಿದ್ದರಾಮಯ್ಯ ಬಜೆಟ್ ನಲ್ಲಿ ಈ ಬಾಬತ್ತಿಗೆ ಹಣವನ್ನು ಮೀಸಲಿಟ್ಟಿಲ್ಲ ಎಂದು ಬೊಮ್ಮಾಯಿ ಹೇಳಿದರು.

Read More

ನೆಲಮಂಗಲ: ಅವರೆಲ್ಲ ರಾತ್ರಿ ಸಮಯದಲ್ಲಿ ಹಾಗೂ ಬೆಳಗ್ಗಿನ ಜಾವದಲ್ಲಿ ಹಳ್ಳಿ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ರೀಲ್ಸ್ ಗಾಗಿ ಭಯಾನಕ ವೀಲಿಂಗ್ ಮಾಡುತ್ತಿದ್ದ ಪುಂಡರು, ಜನರ ದೂರಿನ ಆಧಾರದ ಮೇಲೆ ಪೌರುತ್ತರಾದ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಚರಣೆ ನಡೆಸಿ ವೀಲಿಂಗ್ ಪುಂಡರನ್ನ ವಶಕ್ಕೆ ಪಡೆದಿದ್ದಾರೆ. ಎಲ್ಲಿ ಏನಾಯಿತು ಅಂತೀರ ಹಾಗಾದರೆ ಈ ಸ್ಟೋರಿ ನೋಡಿ. ಹೀಗೆ ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಕೇವಲ ಮೊಬೈಲ್ ಸ್ಟೇಟಸ್ ಹಾಗೂ ರೀಲ್ಸ್ ಮಾಡುವ ಶೋಕಿಗಾಗಿ ನಂಬರ್ ಪ್ಲೇಟ್ ಇಲ್ಲದ ಬೈಕ್ ಗಳಲ್ಲಿ ಡೆಡ್ಲಿ ವೀಲಿಂಗ್ ಮಾಡುತ್ತಿದ್ದು, ಸಾರ್ವಜನಿಕರ ದೂರಿನ ಹಿನ್ನೆಲೆ ಕಾರ್ಯಚರಣೆ ಮುಂದಾದ ಪೊಲೀಸರಿಗೆ ಶಾಕ್. ಸಾಕಷ್ಟು ಬಾರಿ ಈ ಪುಂಡರನ್ನ ವಶಕ್ಕೆ ಪಡೆಯುವ ವೇಳೆ ಕ್ಷಣಮಾತ್ರದಲ್ಲಿ ಎಸ್ಕೇಪ್ ಆಗುತ್ತಿದ್ದರು, ಬೆಳಗ್ಗೆ ನಾಲ್ಕು ಗಂಟೆಗೆ ಕಾರ್ಯಚರಣೆ ಆಂಭಿಸಿದ ಸಿಪಿಐ ರಾಜೀವ್ ನೇತೃತ್ವದಲ್ಲಿ ಕಾರ್ಯಚರಣೆ ಇಳಿದ ಸಿಬ್ಬಂದಿಗಳು ನೆಲಮಂಗಲ ತಾಲೂಕಿನ ಇಸ್ಲಾಂಪುರ ಹಾಗೂ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಭಯಾನಕ ಡೆಲ್ಲಿ ವೀಲಿಂಗ್ ಮಾಡುತ್ತಿದ್ದ 13 ಬೈಕ್ ಹಾಗೂ 20…

Read More