Author: AIN Author

ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂದೆ-ತಾಯಿಯೊಂದಿಗೆ ಇರದ ಪರಿಣಾಮ ಅವರಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಮಕ್ಕಳನ್ನು ಭಾವನಾತ್ಮಕವಾಗಿ ಹೆತ್ತವರೊಂದಿಗೆ ಸಂಪರ್ಕಿಸಲು ಬಯಸಿದರೆ ಮತ್ತು ಅವರಿಗೆ ಮೌಲ್ಯಗಳನ್ನು ಕಲಿಸಲು ಬಯಸಿದರೆ ಸ್ಲೀಪ್ ಟಾಕ್ ಥೆರಪಿಯ ಸಹಾಯವನ್ನು ತೆಗೆದುಕೊಳ್ಳಬಹುದು. ಈ ಥೆರಪಿ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ. ಸ್ಲೀಪ್ ಟಾಕ್ ಥೆರಪಿಯನ್ನು 2 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಚಿಕಿತ್ಸೆಯಲ್ಲಿ ಪೋಷಕರು ಮಲಗುತ್ತಿರುವ ಮಗುವಿನೊಂದಿಗೆ ಮಾತನಾಡಬಹುದು. ಸ್ವಲ್ಪ ಸಮಯದವರೆಗೆ ಮಗು ಜಾಗೃತ ಮನಸ್ಸಿನಲ್ಲಿ ಉಳಿಯುತ್ತದೆ. ಮಗು ಅರೆ ನಿದ್ರೆ ಮತ್ತು ಅರೆ ಎಚ್ಚರಾವಸ್ಥೆಯಲ್ಲಿದ್ದಾಗ ಸ್ಲೀಪ್‌ ಟಾಕ್‌ ಮಾಡಬೇಕು. ಈ ಸಮಯದಲ್ಲಿ ಮಗು ನಿಮ್ಮ ಮಾತುಗಳನ್ನು ಕೇಳುವುದು ಮತ್ತು ಅರ್ಥಮಾಡಿಕೊಳ್ಳುವುದು ಯೋಗ್ಯವಾಗಿದೆ. ಅಂತಹ ಸಮಯದಲ್ಲಿ ಹೆತ್ತವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಾಗ ಮಕ್ಕಳು ಯಾವುದೇ ಹಸ್ತಕ್ಷೇಪವಿಲ್ಲದೆ ನಿಮ್ಮ ಮಾತನ್ನು ಕೇಳುತ್ತಾರೆ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ನಿಮ್ಮ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳುವ ಮೂಲಕ ಭಾವನಾತ್ಮಕವಾಗಿ ಸಂಪರ್ಕ ಸಾಧಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಮಕ್ಕಳ ವೈದ್ಯರ ಪ್ರಕಾರ,…

Read More

ಬೆಂಗಳೂರು:- ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲಾ ರಾಜ್ಯದಲ್ಲೂ ಕೇಸರಿ ಅರಳಿಸಲು ಸನ್ನದ್ಧವಾಗಿರುವ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಕಲಬುರಗಿ, ಶಿವಮೊಗ್ಗವನ್ನು ಪ್ರಚಾರದ ಕಣವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ರಾಜ್ಯದಲ್ಲಿ ಪ್ರಧಾನಿ ಮೋದಿ ಅವರು ಶರಣರ ನೆಲ ಕಲಬುರಗಿ ಹಾಗೂ ಮಲೆನಾಡು ಶಿವಮೊಗ್ಗದಲ್ಲಿ ರಣಕಹಳೆ ಮೊಳಗಿಸಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಕಮಲ ಅರಳಿಸಲು ಕಲಬುರಗಿ ಹಾಗೂ ಶಿವಮೊಗ್ಗ ಜಿಲ್ಲೆಯನ್ನು ಏಕೆ ಆಯ್ಕೆ ಮಾಡಿಕೊಂಡರು ಎಂಬ ವಿಷಯ ಕುತೂಹಲ ಹೆಚ್ಚಿಸಿದೆ. ಮೋದಿ ಕರ್ನಾಟಕದಲ್ಲಿ ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ಪ್ರಚಾರ ಶುರು ಮಾಡುವ ಮೂಲಕ ಎರಡು ಸಮುದಾಯಗಳಿಗೆ ಸಂದೇಶ ನೀಡಲಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಲಿಂಗಾಯತ ಸಮುದಾಯಗಳ ಮೇಲೆ ಮೋದಿ ಪ್ರಚಾರ ಪ್ರಭಾವ ಬೀರಲಿದೆ. ಕಲಬುರಗಿ, ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಭದ್ರಕೋಟೆಯಾಗಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ವಕ್ಷೇತ್ರ ಹಾಗೂ ಭದ್ರಕೋಟೆ ಆಗಿರುವ ಕಲಬುರಗಿಯಿಂದ ಸ್ಪರ್ಧೆ ಮಾಡ್ತಿಲ್ಲ. ಖರ್ಗೆ ಸ್ಪರ್ಧೆಯ…

Read More

ಹರಿಯಾಣ:- ‘ಬಾಯ್ಲರ್ ಸ್ಪೋಟ’ಗೊಂಡು ಭೀಕರ ದುರಂತ ಸಂಭವಿಸಿದ ಘಟನೆ ಹರಿಯಾಣದಲ್ಲಿ ಜರುಗಿದ್ದು, 100ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಜರುಗಿದೆ. ಘಟನೆಯಲ್ಲಿ ಸುಮಾರು ಮಂದಿ ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಬಾಯ್ಲರ್ ಸ್ಪೋಟದಲ್ಲಿ ಗಾಯಗೊಂಡಿರುವಂತ ಕೆಲವರ ಸ್ಥಿತಿ ಗಂಭೀರವಾಗಿದ್ದು, ಏತನ್ಮಧ್ಯೆ, ರೋಹ್ಟಕ್ ಪಿಜಿಐಎಂಎಸ್ ನಿರ್ದೇಶಕ ಡಾ.ಎಸ್.ಎಸ್.ಲೋಹ್ಚಾಬ್, ಆಘಾತ ಕೇಂದ್ರದ ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೇ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ತಿಳಿಸಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ ಲೈಫ್ ಲಾಂಗ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ನಂತರ ಹಲವಾರು ಅಗ್ನಿಶಾಮಕ ಎಂಜಿನ್ಗಳು ಮತ್ತು ಆಂಬ್ಯುಲೆನ್ಸ್ಗಳನ್ನು ಕಾರ್ಖಾನೆಗೆ ಆಗಮಿಸಿ, ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎನ್ನಲಾಗಿದೆ.

Read More

ಹುಬ್ಬಳ್ಳಿ: ಇಂದು ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟ ಆಗಿದ್ದು ಜೂನ್ 4 ಕ್ಕೆ ಫಲಿತಾಂಶ ಇದ್ದು ಭಾರತೀಯ ಜನತಾ ಪಕ್ಷ ಇಡೀ ದೇಶದಲ್ಲಿ ಸಂಪೂರ್ಣವಾಗಿ ನಾವು ಚುನಾವಣೆಗೆ ಸನ್ನದ್ಧ ರಾಗಿದ್ದು ಸಂಪೂರ್ಣ ಚುನಾವಣಾ ಆಯೋಗ ಎಲ್ಲಾ ವಿಷಯಗಳಗಳನ್ನ ಗಮನಿಸಿ ಹೆಚ್ಚು ಮತದಾನ ಆಗುವಂತೆ ಅಳೆದು ತೋಗಿ ದಿನಾಂಕ ಪ್ರಕಟ ಮಾಡಿದ್ದಾರೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಹೇಳಿದರು. ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಈ ಚುನಾವಣೆಯಲ್ಲಿ ಮೊದಲೇ ತಯಾರಿ ಆಗಿರುವುದರಿಂದ ಯಾವುದೇ ತೊಂದರೆ ಇಲ್ಲ ಅತ್ಯುತ್ತಮ ಆಗಿದೆ‌ ಹತ್ತು ವರ್ಷಗಳಲ್ಲಿ ಒಳ್ಳೆಯ ಕೆಲಸ ಆಗಿದ್ದ ನಿಯತ್ತು ಕೂಡಾ ಒಳ್ಳೆಯುದು ಆಗಿದೆ. ಆದ್ದರಿಂದ ಭಾರತೀಯ ಜನತಾ ಪಕ್ಷ ಒಬ್ಬಂಟಿಯಾಗಿ ಕನಿಷ್ಠ ಪಕ್ಷ 370 ಸ್ಥಾನ ಗೆಲ್ಲುತ್ತೇವೆ. ಎನ್ ಡಿಎ ಅಲೈನ್ಸ್ 400 ಕ್ಕೋ ಹೆಚ್ಚು ಸ್ಥಾನ ಪಡೆಯುತ್ತೇವೆ ಎಂದರು. ಮುಂದಿನ ದಿನಗಳಲ್ಲಿ ಗರಿಬ್ ಹಠಾವೋ ಸೇರಿದಂತೆ ಅನೇಕ ಸುಳ್ಳು ಸುಳ್ಳು ಹೇಳಿಕೊಂಡು ಬಂದಿದ್ದರು ಅದಕ್ಕೆ…

Read More

ಹುಬ್ಬಳ್ಳಿ: ಕೆ.ಎಸ್. ಈಶ್ವರಪ್ಪ ಸೇರಿದಂತೆ ರಾಜ್ಯದ ಹಲವು ನಾಯಕರ ಅಸಮಾಧಾನವನ್ನು ಶಮನ ಮಾಡುವ ಪ್ರಯತ್ನ ಜಾರಿಯಲ್ಲಿದೆ. ಭಾನುವಾರದ ಸಂಜೆಯೊಳಗೆ ಎಲ್ಲವೂ ತಿಳಿಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಲಭಿಸದಿದ್ದಾಗ ಬೇಸರ ಸಹಜ. ಆದರೆ, ಬೇಸರಗೊಂಡವರು ಹೊರಗಿನವರಲ್ಲ. ಅವರ ಮನ ಒಲಿಸುವ ಕಾರ್ಯ ನಿರಂತರವಾಗಿದೆ. ರಾಷ್ಟಿçÃಯ ನಾಯಕರು ಎಲ್ಲವನ್ನೂ ಸರಿ ಪಡಿಸಲಿದ್ದಾರೆ ಎಂದರು. ಈಗಾಗಲೇ ಚುನಾವಣಾ ದಿನಾಂಕ ಘೋಷಣೆಯಾಗಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಕನಿಷ್ಟ ೨೫ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ರಾಷ್ಟçದಲ್ಲಿ ಪ್ರಧಾನಿ ಮೋದಿ ಅವರ ಕೈ ಬಲಪಡಿಸುತ್ತೇವೆ. ರಾಜ್ಯದಿಂದ ಮೋದಿ ಅವರಿಗೆ ಬಹುದೊಡ್ಡ ಕೊಡುಗೆ ನೀಡುವ ಸಂಕಲ್ಪ ಮಾಡಿದ್ದೇವೆ. ಸ್ವಂತ ಬಲದಿಂದ ದೇಶದಲ್ಲಿ ೪೦೦ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮೂರನೇ ಬಾರಿಗೆ ಮೋದಿ ಮೋದಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಂದಿನಿAದಲೇ ರಾಜ್ಯ ಪ್ರವಾಸ ಆರಂಭಿಸಿದ್ದೇನೆ. ಎಸ್.ಸಿ./ಎಸ್.ಟಿ ಹಾಗೂ ಓಬಿಸಿ ವರ್ಗಗಳ…

Read More

ಕೋಲಾರ: ದೇಶದೆಲ್ಲೆಡೆ ಆರೋಗ್ಯ ಕ್ಷೇತ್ರದ ಪ್ರಗತಿಗಾಗಿ ಸೇವೆ ಸಲ್ಲಿಸುತ್ತಿರುವ ಔಷಧ ಮಾರಾಟ ಪ್ರತಿನಿಧಿಗಳಿಗೆ ಅಗತ್ಯವಿರುವ ಸವಲತ್ತುಗಳು, ವೇತನ ಮೊದಲಾದವು ಸಿಗುವಂತೆ ಮಾಡಲು ಸೂಕ್ತವಾಗಿರುವ ಕಾಯಿದೆ-ಕಾನೂನು ರೂಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ರಾಜ್ಯ ಔಷಧಿ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಆಗ್ರಹಿಸಿದರು. ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ ಶನಿವಾದದಿಂದ ಆರಂಭಗೊಂಡಿರುವ ಎರಡು ದಿನಗಳ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ 27ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿ, ಔಷಧ ಮಾರಾಟ ಪ್ರತಿನಿಧಿಗಳ ಪಾತ್ರ ಬಹುಮುಖ್ಯವಾಗಿದೆ, ಆದರೆ ಸರಿಯಾದ ಸಂಬಳ ಸಿಗುತ್ತಿಲ್ಲ, ಔಷಧ ಕಂಪನಿಗಳು ಶೋಷಣೆ ಮಾಡುತ್ತಿವೆ ಎಂದರು. ಬೇರೆ ಕಂಪನಿಗಳಿಗಿಂತಲೂ ಔಷಧ ಕಂಪನಿಗಳಿಗಿಂತಲೂ ಔಷಧ ಕಂಪನಿಗಳು ವಿಭಿನ್ನವಾಗಿವೆ, ಬೇರೆಡೆ ಗ್ರಾಹಕರೇ ಖರೀದಿಸುವುದನ್ನು ನಿರ್ಧರಿಸುತ್ತಾರೆ, ಆದರೆ ಇಲ್ಲಿ ರೋಗಿಯೇ ಖರೀದಿದಾರನಾದರೂ ನಿರ್ಧರಿಸುವುದು ವೈದ್ಯರು. ಹೀಗಾಗಿ ಔಷಧ ಪ್ರತಿನಿಧಿಗಳು ಬಹುಮುಖ್ಯವಾಗಿ ಬೇಕು ಎಂದು ನುಡಿದರು. ಅಧ್ಯಕ್ಷ ಜಾನ್‌ವೆಸ್ಲೆ ಮಾತನಾಡಿ, ಕ್ಷೇತ್ರದಲ್ಲಿ ತೀವ್ರ ಪೈಪೋಟಿಯಿರುವುದರಿಂದ ಕಂಪನಿಗಳಿಂದ ಪ್ರತಿನಿಧಿಗಳು ಶೋಷಣೆಗೊಳಗಾಗುತ್ತಿದ್ದಾರೆ, ಸೇವಾ…

Read More

ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಕೆ.ಎಸ್.ಜೈನ್ ಅವರು ಇಂದು ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ನಿಲ್ದಾಣಗಳ ಅಭಿವೃದ್ಧಿ ಕಾರ್ಯಗಳ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ನೈಋತ್ಯ ರೈಲ್ವೆ ವಲಯದಲ್ಲಿ ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳು ನವೀಕರಣಕ್ಕೆ ಒಳಗಾಗುತ್ತಿವೆ, ಇದು ಸಿಲಿಕಾನ್ ಸಿಟಿಯ ಹೆಚ್ಚಿದ ಸಾರಿಗೆ ಅಗತ್ಯಗಳನ್ನು ಪೂರೈಸುವ ಸಲುವಾಗಿ ಗಣನೀಯ ಬದಲಾವಣೆಯಾಗಿದ್ದು, ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ರೈಲ್ವೆ ನಿಲ್ದಾಣ ಮತ್ತು ಕೆಎಸ್ಆರ್ ಬೆಂಗಳೂರು ಮತ್ತು ವೈಟ್ಫೀಲ್ಡ್ ನಡುವಿನ ಚತುಷ್ಪಥ ಕಾಮಗಾರಿಯನ್ನು ಅವರು ಪರಿಶೀಲಿಸಿದರು. ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಪ್ಲಾಟ್ ಫಾರ್ಮ್ ಗಳು, ಟ್ರ್ಯಾಕ್ ಗಳು, ಕಟ್ಟಡಗಳು ಮತ್ತು ಇತರ ರಚನೆಗಳ ಸ್ಥಿತಿ, ಪ್ಲಾಟ್ ಫಾರ್ಮ್ ಗಳು, ಕಾಯುವ ಪ್ರದೇಶಗಳು, ವಿಶ್ರಾಂತಿ ಕೊಠಡಿಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ನಿಲ್ದಾಣದ ಆವರಣದ ಸ್ವಚ್ಛತೆ, ಪ್ರಯಾಣಿಕರ ಸೌಲಭ್ಯಗಳಾದ ಆಸನ, ಬೆಳಕು, ಸಂಕೇತಗಳು, ಟಿಕೆಟ್ ಕೌಂಟರ್ ಗಳು, ಲಿಫ್ಟ್, ಎಸ್ಕಲೇಟರ್ ಗಳು, ಪ್ರಯಾಣಿಕರ ಸೇವೆಗಳಾದ ಟಿಕೆಟಿಂಗ್, ಮಾಹಿತಿ ಡೆಸ್ಕ್…

Read More

ಗದಗ:- ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂದಿಸಿದಂತೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ನ್ಯಾಯಸಮ್ಮತವಾಗಿ ಹಾಗೂ ನಿರ್ಭೀತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು. ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ ಕುರಿತು ಜರುಗಿದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, 65-ಶಿರಹಟ್ಟಿ, 66-ಗದಗ & 67-ರೋಣ ವಿಧಾನಸಭಾ ಕ್ಷೇತ್ರಗಳು 10-ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಇನ್ನುಳಿದ 68-ನರಗುಂದ ವಿಧಾನಸಭಾ ಕ್ಷೇತ್ರವು 3-ಬಾಗಲಕೋಟ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ ಎಂದರು. 10-ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಜಿಲ್ಲಾಧಿಕಾರಿಗಳು, ಹಾವೇರಿ ಹಾಗೂ 3-ಬಾಗಲಕೋಟ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಜಿಲ್ಲಾಧಿಕಾರಿಗಳು, ಬಾಗಲಕೋಟ ಇವರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುವರು. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು- 65 ಶಿರಹಟ್ಟಿ ; 66-ಗದಗ ಉಪವಿಭಾಗಾಧಿಕಾರಿಗಳು ಗದಗ -66; , ಡಿಯುಡಿಸಿ ಯೋಜನಾ ನಿರ್ದೇಶಕರು ರೋಣ-67…

Read More

ರಾಯಚೂರು:- ನಿರುದ್ಯೋಗಿಗಳಿಗೆ ಖುಷಿ ಸುದ್ದಿ ಸಿಕ್ಕಿದ್ದು, ರಾಜ್ಯದ ಹಟ್ಟಿ ಚಿನ್ನದ ಗಣಿಯಲ್ಲಿದೆ ವಿವಿಧ ಹುದ್ದೆ ಖಾಲಿ ಇದೆ. ಹೀಗಾಗಿ ಆಸಕ್ತರು ಕೂಡಲೇ ಅಪ್ಲೈ ಮಾಡಬಹುದಾಗಿದೆ. ಸ್ಥಳೀಯೇತರ ವೃಂದದ ಅರ್ಹ ಅಭ್ಯರ್ಥಿಗಳಿಂದ ಕಂಪನಿಯ ವೆಬ್‌ಸೈಟ್ ನಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 19-03-2024 ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 03-05-2024 ಅರ್ಜಿ ಶುಲ್ಕ ಪ.ಜಾ., ಪ.ಪಂ., ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಶೇಷಚೇತನ ಅಭ್ಯರ್ಥಿಗಳಾದಲ್ಲಿ ರೂ.100/-, ಹಿಂದುಳಿದ ವರ್ಗದ (ಪ್ರವರ್ಗ 2ಎ, 2ಬಿ, 3ಎ & 3ಬಿ) ಅಭ್ಯರ್ಥಿಗಳಾದಲ್ಲಿ ರೂ.300/- ಮತ್ತು ಸಾಮಾನ್ಯ ಅಭ್ಯರ್ಥಿಗಳಾದಲ್ಲಿ ರೂ.600/- ಮೊತ್ತದ ಶುಲ್ಕವನ್ನು (ಬ್ಯಾಂಕ್ ಶುಲ್ಕವನ್ನು ಹೊರತುಪಡಿಸಿ) ಆನ್ ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪೇಮೆಂಟ್ ಗೇಟ್ ವೇ ಮೂಲಕ ಪಾವತಿಸಬೇಕು. ವಿಶೇಷ ಸೂಚನೆ 1) ವೃತ್ತಿ /ಕಂಪ್ಯೂಟರ್ ಆಧಾರಿತ ಪರೀಕ್ಷೆ (Computer Based Test – CBT) ನಡೆಸುವ ದಿನಾಂಕ ಹಾಗೂ ಸ್ಥಳದ ಮಾಹಿತಿಯನ್ನು ಸಂಬಂಧಿಸಿದವರಿಗೆ ಕಂಪನಿಯ…

Read More

ಹಾವೇರಿ:- ಕರ್ನಾಟಕ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಒಟ್ಟು ಎರಡು ಹಂತದಲ್ಲಿ ಚುನಾವಣೆ ನಡೆಯಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದದ್ದು ದಿನಾಂಕ ಏಪ್ರಿಲ್ 12 ಕ್ಕೆ ಅದಿಸೂಚನೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಹೇಳಿದರು. ಏಪ್ರಿಲ್ 19 ರಂದು ನಾಮ ಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು,ಏಪ್ರಿಲ್ 20 ನಾಮ ಪತ್ರಗಳನ್ನು ಪರಿಶೀಲಿಸಲು ಕೊನೆಯ ದಿನವಾಗಿರುತ್ತದೆ. ಅಲ್ಲದೆ ಏಪ್ರಿಲ್ 22 ನಾಮ ಪತ್ರ ಹಿಂಪಡೆಯಲು ಅಂತಿಮ ದಿನಾವಾಗಿದೆ. ಮೇ 5 ಎರಡನೇ ಹಂತದ ಮತದಾನದ ನಡೆಯಲಿದೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ದಿನಾಂಕ 16-03-2023 ರ ವರೆಗೆ ಒಟ್ಟು 17,77,877 ಮತದಾರು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 8,95,366 ಪುರಾಷ ಮತದಾರರು ಹಾಗೂ 8,82,430 ಮಹಿಳಾ ಮತದಾರರು ಹಾಗೂ 81 ಜನ ಇತರೇ ಮತದಾರರಿದ್ದಾರೆ. ಜಿಲ್ಲೆಯಲ್ಲಿ 15521 ಮದಾರರು 85 ವರ್ಷ ಪೂರೈಸಿದ ಮತದಾರರಿದ್ದಾರೆ.27434 ಪಿ ಡಬ್ಲ್ಯೂ ಡಿ ಮತದಾರರಿದ್ದಾರೆ ಹಾಗೂ 1607 ಸೇವಾ ನಿರತ ಮತದಾರರಿದ್ದಾರೆ ಹಾಗೆಯೇ 50658…

Read More