ಹಾವೇರಿ:- ಕರ್ನಾಟಕ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಒಟ್ಟು ಎರಡು ಹಂತದಲ್ಲಿ ಚುನಾವಣೆ ನಡೆಯಲ್ಲಿದೆ.
ಹಾವೇರಿ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದದ್ದು ದಿನಾಂಕ ಏಪ್ರಿಲ್ 12 ಕ್ಕೆ ಅದಿಸೂಚನೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಹೇಳಿದರು. ಏಪ್ರಿಲ್ 19 ರಂದು ನಾಮ ಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು,ಏಪ್ರಿಲ್ 20 ನಾಮ ಪತ್ರಗಳನ್ನು ಪರಿಶೀಲಿಸಲು ಕೊನೆಯ ದಿನವಾಗಿರುತ್ತದೆ. ಅಲ್ಲದೆ ಏಪ್ರಿಲ್ 22 ನಾಮ ಪತ್ರ ಹಿಂಪಡೆಯಲು ಅಂತಿಮ ದಿನಾವಾಗಿದೆ.
ಮೇ 5 ಎರಡನೇ ಹಂತದ ಮತದಾನದ ನಡೆಯಲಿದೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ದಿನಾಂಕ 16-03-2023 ರ ವರೆಗೆ ಒಟ್ಟು 17,77,877 ಮತದಾರು ನೋಂದಾಯಿಸಿಕೊಂಡಿದ್ದಾರೆ.
ಅದರಲ್ಲಿ 8,95,366 ಪುರಾಷ ಮತದಾರರು ಹಾಗೂ 8,82,430 ಮಹಿಳಾ ಮತದಾರರು ಹಾಗೂ 81 ಜನ ಇತರೇ ಮತದಾರರಿದ್ದಾರೆ. ಜಿಲ್ಲೆಯಲ್ಲಿ 15521 ಮದಾರರು 85 ವರ್ಷ ಪೂರೈಸಿದ ಮತದಾರರಿದ್ದಾರೆ.27434 ಪಿ ಡಬ್ಲ್ಯೂ ಡಿ ಮತದಾರರಿದ್ದಾರೆ ಹಾಗೂ 1607 ಸೇವಾ ನಿರತ ಮತದಾರರಿದ್ದಾರೆ ಹಾಗೆಯೇ 50658 ಮತದಾರರು ಹೊಸದಾದ ಯುವ ಮತದಾರರಾಗಿದ್ದಾರೆ.
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಕುಂದು ಕೊರತೆಗಳನ್ನು ಪರಿಹರಿಸಲು 24*7 ಮಾದರಿಯಲ್ಲಿ 1950 ಸಹಾಯವಾಣಿ ಆರಂಭಿಸಲಾಗಿದೆ. ಅಲ್ಲದೆ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಬಾಗಳಲ್ಲಿ 28 ಚಕ್ ಪೋಸ್ಟ್ ತೆರೆಯಲಾಗಿದೆ. 1982 ಮತಗಟ್ಟೆಯನ್ನು ತೆರೆಯಲಾಗಿದೆ. ನೀತ ಸಂಹಿತೆ ಮುಗಿಯುವತನಕ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.