Author: AIN Author

ಬೆಂಗಳೂರು: ಗೋಬಿ ಮಂಚೂರಿಯನ್ ಆಯ್ತು ಕಾಟನ್ ಕ್ಯಾಂಡಿದು ಕಥೆ ಮುಗೀತು ಈಗ ಏನಿದ್ದರೂ ಗರಿ ಗರಿ ಕಬಾಬ್ ನದ್ದೇ ಮಾತುಕತೆ.. ಯಾಕೆ ಈಗ ಕಬಾಬ್ ಬಗ್ಗೆ ಮಾತನಾಡುತ್ತಿದ್ದೇವೆ ಅನ್ಕೊಂಡ್ರಾ? ಈ ಸ್ಟೋರಿ ನೋಡಿ.. ಇತ್ತೀಚಿಗೆ ಬಾರಿ ಸುದ್ದಿಯಾದ ವಿಚಾರ ಏನಂದ್ರೆ ಅದು ಗೋಬಿ ಮಂಚೂರಿಯನ್ ಬ್ಯಾನ್ ಎಂಬ ವಿಚಾರ.. ಈಗಾಗಲೇ ಗೋಬಿ ಮಂಚೂರಿಯನ್ ಗೆ ಬಳಸುವಂತಹ ಬಣ್ಣಗಳನ್ನು  ಸರ್ಕಾರ  ಈಗಾಗಲೇ  ಬ್ಯಾನ್ ಮಾಡಿದೆ.. ಆದರೆ ನಾನ್ ವೆಜ್ ಪ್ರಿಯರು  ಅದೇ ರೀತಿ ಬಣ್ಣ ಕಟ್ಟಿರುವ ರಾಸಾಯನಿಕ ಅಂಶದಿಂದ ಕೂಡಿರುವ ಕಲರ್ ಕಲರ್ ಕಬಾಬ್ ಗಳನ್ನು ಮಿತಿಯಿಲ್ಲದೆ ಬಳಸುತ್ತಿದ್ದಾರೆ.. ಯೆಸ್.. ಸಾಮಾನ್ಯವಾಗಿ ನಾನ್ ವೆಜ್ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಕಬಾಬ್.. ಅದರಲ್ಲೂ ವಿಶೇಷವಾಗಿ ಕಬಾಬ್ ನಲ್ಲಿ ವೆರೈಟಿ ವೆರೈಟಿ ಕಬಾಬ್ ಗಳಿದೆ.. ಇತ್ತೀಚಿಗೆ ಟ್ರೆಂಡಿಂಗ್ ಆದ ಬೆಳ್ಳುಳ್ಳಿ ಕಬಾಬ್, ಚಿಕನ್ 65, ತಂದೂರಿ ಚಿಕನ್ , ಚಿಕನ್ ಟಿಕ್ಕಾ, ಚಿಕನ್ ಲಾಲಿಪಪ್ ಹೀಗೆ ಹತ್ತು ಹಲವಾರು ವೆರೈಟಿಗಳು ನಾನ್-ವೆಜ್ ಪ್ರಿಯರಿಗೆ ಸಖತ್ ಇಷ್ಟವಾಗುತ್ತೆ..…

Read More

ಬೆಂಗಳೂರು: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗ್ತಿದ್ದಂತೆ ಅಖಾಡ ರಂಗೇರಿದೆ, 3 ರಾಜಕೀಯ ಪಕ್ಷಗಳಲ್ಲಿ ತಂತ್ರಗಾರಿಕೆ ಜೋರಾಗ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ಸೀಟ್ ಫೈನಲ್ ಮಾಡೋಕೆ ದೆಹಲಿಯಲ್ಲಿ ಕೊನೆಯ ಹಂತದ ಸರ್ಕಸ್ ನಡೆಸ್ತಿದ್ರೆ, ಕಾಂಗ್ರೆಸ್- ಬಿಜೆಪಿ ನಾಯಕರು ಇನ್ನುಳಿದ ಕ್ಷೇತ್ರಗಳ ಲಿಸ್ಟ್ ಫೈನಲ್ ಮಾಡೋಕೆ ಪ್ರಯತ್ನಪಡ್ತಿದ್ದಾರೆ. ನಾಳೆ‌ ಬಿಜೆಪಿಯ ಸೆಕೆಂಡ್ ಲಿಸ್ಟ್ ಘೋಷಣೆಯಾಗೋ ಸಾಧ್ಯತೆ ಇದ್ರೆ, ಕಾಂಗ್ರೆಸ್ ಲಿಸ್ಟ್ ಗೆ 3-4 ದಿನ ಕಾಯಬೇಕಾಗಿದೆ. ಮಂಡ್ಯ ಅಖಾಡ ಈ ಭಾರಿಯೂ ರಂಗೇರ್ತಿದ್ದು ನಿಖಿಲ್ ಕುಮಾರಸ್ವಾಮಿ ಸ್ಫರ್ಧೆ ಬಹುತೇಕವಾಗಿದ್ದು ಸಂಸದೆ ಸುಮಲತಾ ನಡೆ ಇನ್ನೂ ನಿಗೂಡವಾಗಿದೆ..‌‌ ನಿನ್ನೆ ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ ಕರ್ನಾಟಕದಲ್ಲಿ 2 ಹಂತಗಳಲ್ಲಿ ಎಲೆಕ್ಷನ್ ನಡಿತಿದ್ದು ಏಫ್ರಿಲ್ 26 ರಂದು ಹಳೇ ಮೈಸೂರು ಭಾಗ, ಮೇ‌7 ರಂದು ಉತ್ತರ ಕರ್ನಾಟಕ ಭಾಗದಲ್ಲಿ ಮತದಾನ ನಡೆಯಲಿದೆ. ಸದ್ಯ ರಾಜ್ಯ ಬಿಜೆಪಿ 20 ಕ್ಷೇತ್ರಗಳ ಮೊದಲ ಲಿಸ್ಟ್ ಬಿಡುಗಡೆ ಮಾಡಿದ್ರೆ, ಕಾಂಗ್ರೆಸ್ 8 ಕ್ಷೇತ್ರಗಳನ್ನು ಘೋಷಣೆ ಮಾಡಿದೆ ಇನ್ನುಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ…

Read More

ಮಂಡ್ಯ: ಯಾರೋ ಒಬ್ಬರ ಮಾತು ಕೇಳಿ ನಮ್ಮ ಪಕ್ಷದಲ್ಲಿ ಟಿಕೆಟ್ ಕೊಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ‘ಎಲ್ಲದಕ್ಕೂ ಕ್ಷೇತ್ರದ ಜನ ಮತ್ತು ರಾಜ್ಯದ ಜನ ಉತ್ತರ ಕೊಡುತ್ತಾರೆ. ನಾನು ಹೆಚ್ಚಿಗೆ ಮಾತಾಡಲು ಇಷ್ಟ ಪಡಲ್ಲ. ಈಶ್ವರಪ್ಪ ಅವರು ನಮ್ಮ ಪಕ್ಷದ ಹಿರಿಯರು, ಅವರ ಜೊತೆ ಮಾತಾಡ್ತೇವೆ. ಅವರು ನೋವಿನಲ್ಲಿ ಇದ್ದಾರೆ, https://ainlivenews.com/great-job-opportunities-for-puc-passers-salary-%e2%82%b963000-per-month-apply-now/ ಎಲ್ಲವೂ ಸುಸೂತ್ರವಾಗಿ ಬಗೆಹರಿಯಲಿದೆ ಎಂದರು. ಇನ್ನು ಯಾರೋ ಒಬ್ಬರ ಮಾತು ಕೇಳಿ ನಮ್ಮ ಪಕ್ಷದಲ್ಲಿ ಟಿಕೆಟ್ ಕೊಡಲ್ಲ, ಕೇಂದ್ರದ ವರಿಷ್ಠರು ಎಲ್ಲರೂ ಕೂತು ಚರ್ಚೆ ಮಾಡಿ ಟಿಕೆಟ್ ಕೊಟ್ಟಿದ್ದಾರೆ. ಎಲ್ಲರ ಒಮ್ಮತದ ತೀರ್ಮಾನದಿಂದ ಅಭ್ಯರ್ಥಿ ಘೋಷಣೆ ಆಗಿದೆ. ಒಬ್ಬರ ತೀರ್ಮಾನದಿಂದ ಅಭ್ಯರ್ಥಿಗಳ ಆಯ್ಕೆ ಆಗಿಲ್ಲ ಎಂದು ಈಶ್ವರಪ್ಪ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು.  

Read More

ಮನೆಯಲ್ಲೇ ಕುಳಿತು ʻVOTER IDʼ ಫೋಟೋ ಬದಲಾಯಿಸುವುದು ಹೇಗೆ ಎಂಬುವ ವಿಚಾರ ತಿಳಿದುಕೊಳ್ಳಲು ಈ ಸುದ್ದಿ ಪೂರ್ತಿ ಓದಿ ಲೋಕಸಭಾ ಚುನಾವಣೆಗೆ ಇನ್ನೇನು ಕ್ಷಣಗಣನೆ ಶುರುವಾಗಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಇತರ ಪಕ್ಷಗಳು ಸಕಲ ಸಿದ್ಧತೆ ಕೈಗೊಳ್ಳುತ್ತಿದೆ. ಅದರಂತೆ ಮತ ಹಾಕುವ ಹಕ್ಕು ಪ್ರತಿಯೊಬ್ಬನ ನಾಗರೀಕನಿಗೂ ಇರುತ್ತದೆ. ನೀವು ಚುನಾವಣೆಯ ಸಮಯದಲ್ಲಿ ಮತ ಚಲಾಯಿಸಲು ಬಯಸಿದರೆ, ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗುತ್ತದೆ.ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ತಪ್ಪು ಫೋಟೋ ಅಥವಾ ಮಸುಕು ಇದ್ದರೆ. ಅಥವಾ ನಿಮ್ಮ ಫೋಟೋ ನಿಮಗೆ ಇಷ್ಟವಾಗದಿದ್ದರೆ ಮತ್ತು ನಿಮ್ಮ ಫೋಟೋ ಬದಲಾಗಬೇಕೆಂದು ನೀವು ಬಯಸಿದರೆ ನೀವು ಇದನ್ನು ಮಾಡಬಹುದು.ಮತದಾರರ ಗುರುತಿನ ಚೀಟಿಯ ಫೋಟೋವನ್ನು ನೀವು ಸುಲಭವಾಗಿ ಬದಲಾಯಿಸುವ ಸಂಪೂರ್ಣ ಪ್ರಕ್ರಿಯೆಯನ್ನು ನಾವು ನಿಮಗೆ ಹೇಳುತ್ತಿದ್ದೇವೆ. ಮತದಾರರ ಗುರುತಿನ ಚೀಟಿಯಲ್ಲಿನ ಫೋಟೋವನ್ನು ಆನ್ಲೈನ್ನಲ್ಲಿ ಅಂದರೆ ಮನೆಯಲ್ಲಿ ಕುಳಿತು ಬದಲಾಯಿಸಬಹುದು. ಇದಕ್ಕಾಗಿ, ನೀವು ಹೊಸ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಹೊಂದಿರಬೇಕು. ಮತದಾರರ ಗುರುತಿನ ಚೀಟಿಯಲ್ಲಿ ಫೋಟೋವನ್ನು…

Read More

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಸೇರಿ 20 ಸೀಟ್ ಗೆಲ್ಲುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮಾರ್ಚ್​​ 19ರಂದು ಸಭೆ ಇದ್ದು ಅಂದೇ ತೀರ್ಮಾನಿಸುತ್ತೇವೆ. ಆದರೆ, ನಾವು ಮಾ.20ರಂದು ಕಾಂಗ್ರೆಸ್​ ಅಭ್ಯರ್ಥಿಗಳ 2ನೇ ಪಟ್ಟಿ  ಘೋಷಣೆ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇಂದು ಭಾರತ್ ಜೋಡೋ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯುತ್ತಿದೆ. ನಾವೆಲ್ಲ ಆ ಕಾರ್ಯಕ್ರಮಕ್ಕೆ ಮುಂಬೈಗೆ ಹೋಗುತ್ತಿದ್ದೇವೆ. ಶಿವಾಜಿ ಪಾರ್ಕ್​​ನಲ್ಲಿ ಕಾರ್ಯಕ್ರಮ ಇದೆ. ಹೀಗಾಗಿ ಮಾ. 20ರಂದು ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. https://ainlivenews.com/great-news-for-ksrtc-staff-order-for-payment-of-arrears/ ಗ್ಯಾರಂಟಿ ಅಧ್ಯಕ್ಷರನ್ನ ಪ್ರತಿ ತಾಲೂಕಿನಲ್ಲಿ ಮಾಡಿದ್ದೇವೆ. ಅವರದೆಲ್ಲ ಒಂದು ಸಭೆ ಕರೆಯುತ್ತೇವೆ. ಮಾ. 21 ರಂದು ಸಭೆ ಕರೆಯಬೇಕು ಎಂದು ತೀರ್ಮಾನ ಮಾಡಿದ್ದೇವೆ. ಸರ್ಕಾರ ಯಾರನ್ನೆಲ್ಲ ಗ್ಯಾರಂಟಿ ಸಮಿತಿಗೆ ನೇಮಕ ಮಾಡಿದೆ ಅವರನೆಲ್ಲ ನಾವು ಇಲ್ಲಿಗೆ ಕರಿಯುತ್ತೇವೆ. ಅವರಿಗೆಲ್ಲಾ ಚುನಾವಣೆ ಜವಾಬ್ದಾರಿ ಕೊಡುತ್ತೇವೆ. ಈ ಚುನಾವಣೆಯಲ್ಲಿ ನಾಮಿನೇಶನ್ ಮಾಡುವುದು ಅಷ್ಟೆ ಅಲ್ಲಾ, ಪಕ್ಷಕ್ಕೂ ದುಡಿಯಬೇಕು ಎಂದು ಹೇಳಿದರು.

Read More

ರಕ್ತದಾನದಿಂದ ನಿರ್ದಿಷ್ಟವಾಗಿ ಬರುವ ಆರೋಗ್ಯ ಪ್ರಯೋಜನಗಳ ಕುರಿತು ತಿಳಿದುಕೊಳ್ಳುವುದರ ಜೊತೆಗೆ ಯಾರು ರಕ್ತದಾನ ಮಾಡಬಾರದು ಎಂಬುದನ್ನು ಕೂಡ ತಿಳಿದುಕೊಳ್ಳಬೇಕು. ರಕ್ತವನ್ನು ನೀಡಲು ನೀವು ಆರೋಗ್ಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. ತರಬೇತಿ ಪಡೆದ ಸಿಬ್ಬಂದಿ ಈ ತಪಾಸಣೆ ನಡೆಸುತ್ತಾರೆ. ಈ ವೇಳೆ ನಾಡಿಮಿಡಿತ, ರಕ್ತದೊತ್ತಡ, ದೇಹದ ಉಷ್ಣತೆ, ಹಿಮೋಗ್ಲೋಬಿನ್ ಮಟ್ಟಗಳನ್ನು ಪರಿಶೀಲಿಸಲಾಗುತ್ತದೆ. ರಕ್ತದಾನ ಮಹಾದಾನ ಎನ್ನಲಾಗುತ್ತದೆ. ರಕ್ತದಾನದಿಂದ ಮನುಷ್ಯನ ಜೀವ ಉಳಿಸುವ ಅವಕಾಶ ಇರುತ್ತದೆ. ನೀವು ರಕ್ತದಾನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ. ಸಂಪೂರ್ಣ ರಕ್ತವನ್ನು ದಾನ ಮಾಡಲು ನೀವು 17 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. ಕೆಲವು ರಾಜ್ಯಗಳು ಪೋಷಕರ ಒಪ್ಪಿಗೆಯೊಂದಿಗೆ 16ನೇ ವಯಸ್ಸಿನಲ್ಲಿ ಕೂಡ ರಕ್ತದಾನ ಮಾಡಲು ನಿಮಗೆ ಅವಕಾಶ ನೀಡುತ್ತವೆ. ರಕ್ತದಾನ ಮಾಡಲು ನೀವು ಕನಿಷ್ಟ 110 ಪೌಂಡ್‌ಗಳ ತೂಕವನ್ನು ಹೊಂದಿರಬೇಕು ಮತ್ತು ಉತ್ತಮ ಆರೋಗ್ಯವನ್ನು ಹೊಂದಿರಬೇಕು. ನೀವು ಒಮ್ಮೆ ರಕ್ತದಾನ ಮಾಡಿದ ನಂತರ ಕನಿಷ್ಠ 8 ವಾರಗಳು ಕಾಯಬೇಕು. ಪ್ಲೇಟ್‌ಲೆಟ್ ದಾನವನ್ನು ಪ್ರತಿ 7…

Read More

ವಿಜಯನಗರ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟಿದ ದಿನ ಇಂದು. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಅಪ್ಪು ಸ್ಮಾರಕದ ಬಳಿ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದು ಅಗಲಿದ ದಿವ್ಯ ಚೇತನಕ್ಕೆ ನಮನ ಸಲ್ಲಿಸಿದ್ದಾರೆ.  ಅದೇ ರೀತಿ ಹೊಸಪೇಟೆಯ ಡಾ. ಪುನೀತ್ ರಾಜ್‍ಕುಮಾರ್ ಪುತ್ಥಳಿಗೆ ಅಭಿಮಾನಿಗಳು ಪೂಜೆ ನೆರೆವೆರೆಸಿದ್ದಾರೆ. ನೃತ್ಯ ಅಕಾಡೆಮಿಯ ಹುಡುಗರಿಂದ ಹಾಡು, ಡ್ಯಾನ್ಸ್ ಜೋರಾಗಿದ್ದು, ಅಪ್ಪು ಪ್ರತಿಮೆ ಎದುರು ಕೇಕ್ ಕತ್ತರಿಸಿ  ಅಪ್ಪುಗೆ ಜೈಕಾರ ಹಾಕಿದ್ದಾರೆ. ಕಿಚಡಿ ವಿಶ್ವ, ಜೋಗಿ ತಾಯಪ್ಪ ಸೇರಿದಂತೆ ನೂರಾರು ಅಭಿಮಾನಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

Read More

ಬಳ್ಳಾರಿ,ಮಾ.17: ಲೋಕಸಭೆ ಸಾರ್ವತ್ರಿಕ ಚುನಾವಣೆ 2024 ರ ಚುನಾವಣೆ ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ (ಮಾ.16 ರಿಂದ) ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಸಾರ್ವಜನಿಕ ಸಭೆ, ಸಮಾರಂಭ, ರ್ಯಾಲಿ ನಡೆಸಲು, ಸಂಚಾರಿ ವಾಹನ, ಧ್ವನಿವರ್ಧಕ, ಹೆಲಿಕಾಪ್ಟರ್ ಹಾಗೂ ಹೆಲಿಪ್ಯಾಡ್ ಮತ್ತು ಇನ್ನಿತರೆÀ ನಿಯಮಗಳಿಗೆ ಸುವಿಧಾ ತಂತ್ರಾಂಶ ಮೂಲಕವೇ ಅನುಮತಿ ಪಡೆಯಬೇಕು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು. ಭಾನುವಾರದಂದು, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಲೋಕಸಭೆ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿಯಂತೆ 2024ರ ಏಪ್ರಿಲ್ 12 (ಶುಕ್ರವಾರ) ಅಧಿಸೂಚನೆ ಹೊರಡಿಸುವುದು. ನಾಮಪತ್ರ ಸಲ್ಲಿಸಲು ಏಪ್ರಿಲ್ 19ರ ಶುಕ್ರವಾರ ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ 20ರ ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 22ರ ಸೋಮವಾರ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, 2024ರ ಮೇ 07 ರ ಮಂಗಳವಾರ ಮತದಾನ ದಿನ, ಜೂನ್ 04ರ ಮಂಗಳವಾರ ಮತ ಎಣಿಕೆ ಹಾಗೂ 06-05-2024ರ ಗುರುವಾರದಂದು…

Read More

ಬಳ್ಳಾರಿ,ಮಾ.17 ಲೋಕಸಭೆ ಚುನಾವಣೆ-2024ರ ಅಂಗವಾಗಿ ಎರಡು ಹಂತದ ಚುನಾವಣೆಯು ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ (ಮಾ.16 ರಿಂದ) ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. 09-ಬಳ್ಳಾರಿ (ಪ.ಪಂ) ಲೋಕಸಭೆ ಕ್ಷೇತ್ರದ ಚುನಾವಣೆಯು ಎರಡನೇಯ ಹಂತದಲ್ಲಿ ಮೇ 07 ರಂದು ಮತದಾನ ಮತ್ತು ಜೂ.04 ರಂದು ಮತಎಣಿಕೆ ನಡೆಯಲಿದ್ದು, ನ್ಯಾಯ ಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು. ಲೋಕಸಭೆ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರದಂದು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಲೋಕಸಭೆ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿಯಂತೆ 2024ರ ಏಪ್ರಿಲ್ 12 (ಶುಕ್ರವಾರ) ಅಧಿಸೂಚನೆ ಹೊರಡಿಸುವುದು. ನಾಮಪತ್ರ ಸಲ್ಲಿಸಲು ಏಪ್ರಿಲ್ 19ರ ಶುಕ್ರವಾರ ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ 20ರ ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 22ರ ಸೋಮವಾರ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, 2024ರ ಮೇ 07 ರ ಮಂಗಳವಾರ…

Read More

ಹಾವೇರಿ: ಮೋದಿಯವರು ಬಂದು ಹೋದ ಮೇಲೆ ದೊಡ್ಡ ಸಂಚಲನ ಸೃಷ್ಟಿಯಾಗಿದೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. ಹಾನಗಲ್​ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ನಿರೀಕ್ಷೆ ಮೀರಿ ಜನರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬೆಂಬಲ ನೀಡದ ಜನರೂ ಈಗ ಬೆಂಬಲಿಸುತ್ತಿದ್ದಾರೆ. ಬಿಜೆಪಿ ಅಲೆ ಇಡೀ ಕರ್ನಾಟಕದಲ್ಲಿ ಇದೆ. ನಿನ್ನೆ ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದ ನಂತರ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿದೆ.  ಅವರು ನಾಳೆ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಇನ್ನೂ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಮತ್ತು ನಂತರ ಪ್ರಧಾನಿ ಮೋದಿ ಬಂದು ಹೋಗುವುದರಿಂದ ಬಿಜೆಪಿ ಅಭ್ಯರ್ಥಿಗಳಿಗೆ ಮತದಾರರಿಂದ ದೊಡ್ಡ ಪ್ರಮಾಣದ ಬೆಂಬಲ ಮತದಾರರರಿಂದ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತಮಗೆ ಬೇಕಾದಂತೆ ಚುನಾವಣೆ ವೇಳಾಪಟ್ಟಿ ಮಾಡಿಕೊಂಡಿದ್ದಾರೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು…

Read More