ವಿಜಯನಗರ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟಿದ ದಿನ ಇಂದು. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಅಪ್ಪು ಸ್ಮಾರಕದ ಬಳಿ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದು ಅಗಲಿದ ದಿವ್ಯ ಚೇತನಕ್ಕೆ ನಮನ ಸಲ್ಲಿಸಿದ್ದಾರೆ.
ಅದೇ ರೀತಿ ಹೊಸಪೇಟೆಯ ಡಾ. ಪುನೀತ್ ರಾಜ್ಕುಮಾರ್ ಪುತ್ಥಳಿಗೆ ಅಭಿಮಾನಿಗಳು ಪೂಜೆ ನೆರೆವೆರೆಸಿದ್ದಾರೆ. ನೃತ್ಯ ಅಕಾಡೆಮಿಯ ಹುಡುಗರಿಂದ ಹಾಡು, ಡ್ಯಾನ್ಸ್ ಜೋರಾಗಿದ್ದು, ಅಪ್ಪು ಪ್ರತಿಮೆ ಎದುರು ಕೇಕ್ ಕತ್ತರಿಸಿ ಅಪ್ಪುಗೆ ಜೈಕಾರ ಹಾಕಿದ್ದಾರೆ. ಕಿಚಡಿ ವಿಶ್ವ, ಜೋಗಿ ತಾಯಪ್ಪ ಸೇರಿದಂತೆ ನೂರಾರು ಅಭಿಮಾನಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.