Author: AIN Author

ಬೆಂಗಳೂರು:- ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗಾಗಿ ಇಂದು ಚೆನ್ನೈಗೆ ತೆರಳಲಿದ್ದಾರೆ. ಈ ಹಿನ್ನೆಲೆ “x” ಮಾಡಿರುವ ಪರಿಷತ್ ಸದಸ್ಯ ಶರವಣ ಅವರು, ಶೀಘ್ರವೇ ಗುಣಮುಖರಾಗಿ ಬರಲಿ ಎಂದು ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಹಾರೈಸಿದ್ದಾರೆ. ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗಾಗಿ ಚೆನ್ನೈ ಗೆ ತೆರಳುತ್ತಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಶೀಘ್ರವೇ ಗುಣಮುಖರಾಗಿ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು X ನಲ್ಲಿ ಟಿಎ ಶರವಣ ಅವರು ಬರೆದುಕೊಂಡಿದ್ದಾರೆ. https://twitter.com/SharavanaTa/status/1769907220769382487?t=amkM9VZrJc9ZEkXiK9CMXw&s=19 ಇನ್ನೂ ಇಂದು ಚೆನ್ನೈ ಗೆ ತೆರಳಲಿರುವ ಹೆಚ್ ಡಿ ಕುಮಾರಸ್ವಾಮಿ ಅವರು, ಆರೋಗ್ಯ ತಪಾಸಣೆ, ಪರೀಕ್ಷೆಗಳ ನಂತರ ಮಾರ್ಚ್ 21ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಚಿಕಿತ್ಸೆ ಬಳಿಕ ಮಾರ್ಚ್ 24ರ ವರೆಗೆ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಚೆನ್ನೈನಿಂದ ವಾಪಸ್ ಆದ ನಂತರ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ.ಹಾಸನ, ಮಂಡ್ಯ, ಕೋಲಾರ ಕ್ಷೇತ್ರದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಅಭ್ಯರ್ಥಿಗಳ ಹೆಸರನ್ನು ಕೂಡ…

Read More

ಬೆಂಗಳೂರು:- 2024 ರ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ಆದರೆ, ಆರಂಭದಲ್ಲಿಯೇ ಮೈತ್ರಿಯಲ್ಲಿ ಬಿರುಕು ಮೂಡಿದ್ದು, ಬಿಜೆಪಿ ನಾಯಕರ ನಡವಳಿಕೆಗಳು ಜೆಡಿಎಸ್‌ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಕ್ಷೇತ್ರ ಹಂಚಿಕೆ ವಿಚಾರ ಹಾಗೂ ಬಿಜೆಪಿ ನಾಯಕರ ನಡವಳಿಕೆಗಳು ಜೆಡಿಎಸ್‌ ನಾಯಕರನ್ನು ಕೆರಳಿಸಿದ್ದು, ಕೋರ್‌ ಕಮಿಟಿ ಸಭೆಯಲ್ಲಿ ಮುಖಂಡರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. https://ainlivenews.com/love-breakup-a-young-man-committed-suicide/ ಆರಂಭದಲ್ಲಿಯೇ ನಮ್ಮನ್ನು ಬಿಜೆಪಿ ನಿರ್ಲಕ್ಷ್ಯ ಮಾಡುತ್ತಿದೆ. ಚುನಾವಣಾ ಸಭೆ, ಪ್ರಚಾರವನ್ನು ಬಿಜೆಪಿ ನಮ್ಮನ್ನು ಬಿಟ್ಟು ಮಾಡುತ್ತಿದೆ. ಯಾವ ಸಭೆಗೂ ನಮ್ಮನ್ನು ಬಿಜೆಪಿಯವರು ಕರೆಯುತ್ತಿಲ್ಲ. ಏಕಪಕ್ಷೀಯವಾಗಿ ಇಪ್ಪತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಈ ಬಗ್ಗೆ ಜೆಡಿಎಸ್ ವರಿಷ್ಠರನ್ನು ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸಮ್ಮುಖದಲ್ಲಿಯೇ ಜೆಡಿಎಸ್‌ ಮುಖಂಡರು, ಚುನಾವಣಾ ಉಸ್ತುವಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ಇಂಥ ನಡವಳಿಕೆ ನಿರೀಕ್ಷೆ ಮಾಡಿರಲಿಲ್ಲ. ಕೋಲಾರ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಬಿಜೆಪಿ ಮೀನಾಮೇಷ ಎಣಿಸುತ್ತಿದೆ. ಕೇವಲ…

Read More

ಆನೇಕಲ್:- ಪ್ರೀತಿ ಮಾಡಿದ ಯುವತಿ ಕೈ ಕೊಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಆನೇಕಲ್ ತಾಲೂಕಿನ ಹುಲಿಮಂಗಳ ನಂಜಪುರ ರಸ್ತೆಯಲ್ಲಿ ಜರುಗಿದೆ. ಇಂದ್ರ ಕುಮಾರ್ ಮತ್ತು ರಾಧಾ ದಂಪತಿಗಳ ಪುತ್ರ ಹರ್ಷಿತ್ ಮನೆಯಲ್ಲಿ ನೇಣಿಗೆ ಶರಣಾದ ಯುವಕ ಎನ್ನಲಾಗಿದೆ. ಕಳೆದ ಒಂದುವರೆ ವರ್ಷದಿಂದ ಹರ್ಷಿತ್ ಹಾಗೂ ತುಮಕೂರು ಮೂಲದ ಮೇಘ ಆನೇಕಲ್ ಎ ಎಸ್ ಪಿ ಕಾಲೇಜಿನಲ್ಲಿ ಓದುವಾಗ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಯುವತಿ ಮೇಘ ತನ್ನ ಅತ್ತೆ ಮತ್ತು ಮಾವನ ಮನೆಯಲ್ಲಿ ವಾಸವಾಗಿದ್ಲು. ಆದರೆ ಇತ್ತೀಚಿಗೆ ಬೇರೆಯವರೊಂದಿಗೆ ಮೇಘ ಸಲುಗೆ ಇಂದ ಇದ್ದಳು. ಅಲ್ಲದೇ ಮೇಘ ಬಿಡುವಂತೆ ಅನಾಮಿಕ ವ್ಯಕ್ತಿಯಿಂದ ಹರ್ಷಿತ್ ಗೆ ಕರೆ ಕೂಡ ಬಂದಿತ್ತು. ಇದರಿಂದ ಮನನೊಂದ ಯುವಕ ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬೆಂಗಳೂರು:- ನಗರದ ಕೆಲವು ಬೋರ್‌ವೆಲ್‌ಗಳು ನಿರ್ವಹಣೆ ಕೊರತೆ ಹಾಗೂ ತಾಂತ್ರಿಕ ದೋಷದಿಂದ ಕೆಲಸ ಮಾಡುವುದನ್ನು ನಿಲ್ಲಿಸಿವೆ. ನೀರು ಸಿಗದಿದ್ದಾಗ ಬೋರ್‌ವೆಲ್‌ಗಳನ್ನು ಆನ್ ಮಾಡಿ ಪಂಪ್‌ಸೆಟ್‌ಗಳನ್ನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ಓಡಿಸಲಾಗಿದೆ. ಇದರಿಂದ ಬೋರ್‌ವೆಲ್‌ಗಳ ಕಾರ್ಯ ಸ್ಥಗಿತಗೊಂಡಿವೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ಡಾ. ರಾಮಪ್ರಸಾತ್ ಮನೋಹರ್ ವಿ ತಿಳಿಸಿದರು. ರೊಬೊಟಿಕ್ ತಂತ್ರಜ್ಞಾನವು BWSSB ಪಂಪ್ ಸೆಟ್‌ನ ಸ್ಥಿತಿ ತಿಳಿಯುತ್ತದೆ. ಮತ್ತು ಅಧಿಕಾರಿಗಳು ಕೂತ ಜಾಗದಿಂದಲೇ ಬೋರ್​ವೆಲ್​ಗಳನ್ನು ಆನ್ ಮತ್ತು ಆಫ್ ಸಹ ಮಾಡಬಹುದು. ನಿರಂತರ ಮೇಲ್ವಿಚಾರಣೆಯಿಂದ ಬೋರ್‌ವೆಲ್‌ಗಳು ಪದೇ ಪದೇ ಹಾಳಾಗುವುದನ್ನು ತಡೆಯಬಹುದು. ಮತ್ತು ನಾಗರಿಕರಿಗೆ ಉಂಟಾಗುವ ಅನಾನುಕೂಲತೆಯನ್ನು ಕಡಿಮೆ ಮಾಡಬಹದು. ನಗರದಲ್ಲಿನ ಬೋರ್‌ವೆಲ್‌ಗಳ ಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಸಿ, ನಿಷ್ಕ್ರಿಯಗೊಂಡವುಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಿಷ್ಕ್ರಿಯ ಬೋರ್‌ವೆಲ್‌ಗಳನ್ನು ಮಳೆನೀರು ಕೊಯ್ಲು (RWH) ರಚನೆಗಳಾಗಿ ಪರಿವರ್ತಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಬೋರ್‌ವೆಲ್‌ನಿಂದ ನೀರು ಬರುತ್ತಿರದಿದ್ದರೇ ಮತ್ತು ಅವುಗಳನ್ನು ಪುನರುಜ್ಜೀವನಗೊಳಿಸಲು ನಮಗೆ ಸಾಧ್ಯವಾಗದಿದ್ದರೆ, ಅವುಗಳನ್ನು ಮಳೆನೀರು ಕೊಯ್ಲಿಗೆ ಪರಿವರ್ತಿಸಬಹುದು ಎಂದು ಹೇಳಿದರು.

Read More

ಬೆಂಗಳೂರು: ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್‌ ಭಾರತ ತಂಡದಲ್ಲಿ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ಗಳಾಗಿ ಸಂಜು ಸ್ಯಾಮ್ಸನ್‌ ಹಾಗೂ ಧ್ರುವ್‌ ಜುರೆಲ್‌ ಅವರು ಆಯ್ಕೆಯಾಗಲಿದ್ದಾರೆಂದು ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಆಕಾಶ್‌ ಚೋಪ್ರಾ ಭವಿಷ್ಯ ನುಡಿದಿದ್ದಾರೆ “ಭಾರತ ಟಿ20 ವಿಶ್ವಕಪ್‌ ತಂಡಕ್ಕೆ ವಿಕೆಟ್‌ ಕೀಪರ್‌ಗಳಿಗೆ ಸಾಕಷ್ಟು ಆಯ್ಕೆಗಳೀವೆ. ಈ ಸಲ ಐಪಿಎಲ್‌ನಲ್ಲಿ ಯಶಸ್ವಿ ಜೈಸ್ವಾಲ್‌ಗೆ ಆರೆಂಜ್ ಕ್ಯಾಪ್‌ ಗೆಲ್ಲುವ ಅವಕಾಶವಿದೆ. ಇನ್ನು ಜೋಸ್‌ ಬಟ್ಲರ್‌ ಕೂಡ ಈ ಬಾರಿ ಪ್ರಾಬಲ್ಯ ಸಾಧಿಸುವ ಸಾದ್ಯತೆ ಇದೆ. ಟಿ20 ವಿಶ್ವಕಪ್‌ ಭಾರತ ತಂಡಕ್ಕೆ ಆಯ್ಕೆಯಾಗಲು ಸಂಜು ಸ್ಯಾಮ್ಸನ್‌ಗೂ ಚಾನ್ಸ್‌ ಇದೆ. ಇದರ ಜೊತೆಗೆ ಧ್ರುವ್ ಜುರೆಲ್‌ಗೂ ಕೂಡ ಅವಕಾಶವಿದೆ,” ಎಂದು ಆಕಾಶ್‌ ಚೋಪ್ರಾ ತಮ್ಮ ಅಧಿಕೃತ ಯುಟ್ಯೂಬ್‌ ಚಾನೆಲ್‌ನಲ್ಲಿ ತಿಳಿಸಿದ್ದಾರೆ. ಐಪಿಎಲ್‌ ಟೂರ್ನಿಯ ರಾಜಸ್ಥಾನ್‌ ರಾಯಲ್ಸ್ ತಂಡದಲ್ಲಿ ಸಂಜು ಸ್ಯಾಮ್ಸನ್ ಹಾಗೂ ಧ್ರುವ್‌ ಜುರೆಲ್‌ ಆಡುತ್ತಿದ್ದಾರೆ. ಇವರಿಬ್ಬರ ಜೊತೆಗೆ ಜೋಸ್‌ ಬಟ್ಲರ್‌ ಹಾಗೂ ಯಶಸ್ವಿ ಜೈಸ್ವಾಲ್ ಅವರು ಕೂಡ ಈ ತಂಡದಲ್ಲಿದ್ದು 2008ರ ಬಳಿಕ…

Read More

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಹೆಚ್ಚಾಗಿ ಕಾಡುತ್ತಿದೆ. ಕೆಲವು ಬಗೆಯ ಕ್ಯಾನ್ಸರ್ ಮೊದಲ ಹಂತದಲ್ಲೇ ಕೆಲವು ಲಕ್ಷಣಗಳನ್ನು ತೋರಿಸುತ್ತದೆ ಇನ್ಕೆಲವು ರೀತಿಯ ಕ್ಯಾನ್ಸರ್ ಅನ್ನು ಬೇಗ ಗುರುತಿಸಲು ಸಾಧ್ಯವಾಗುವುದಿಲ್ಲ. ಅವು ಯಾವುದೇ ರೀತಿಯ ರೋಗಲಕ್ಷಣಗಳನ್ನೂ ಹೊಂದಿರುವುದಿಲ್ಲ. ಯಾವುದೇ ರೋಗಲಕ್ಷಣಗಳನ್ನು ತೋರಿಸದೇ ಇರುವ ಕ್ಯಾನ್ಸರ್ ಪೈಕಿ ಕೊಲೊರೆಕ್ಟಲ್ ಕ್ಯಾನ್ಸರ್ ಕೂಡ ಒಂದು. ಕೊಲೊರೆಕ್ಟಲ್ ಕ್ಯಾನ್ಸರ್ ಗೆ ಒಳಗಾದ ವ್ಯಕ್ತಿ ಪ್ರಾಥಮಿಕ ಹಂತದಲ್ಲಿ ಯಾವುದೇ ಗುಣಲಕ್ಷಣಗಳನ್ನು ಹೊಂದುವುದಿಲ್ಲ. ಹಾಗೊಮ್ಮೆ ಅದು ಕೆಲವು ಲಕ್ಷಣಗಳನ್ನು ತೋರಿಸಿದರೂ ಅದು ಸಾಮಾನ್ಯ ಸಂಗತಿಯೆಂದು ಅನೇಕ ಮಂದಿ ಕಡೆಗಣಿಸುತ್ತಾರೆ. ಜೋ ಫರಾಟ್ಜಿಸ್ ಎನ್ನುವ ವ್ಯಕ್ತಿಯೊಬ್ಬ ಕೊಲೊರೆಕ್ಟಲ್ ಕ್ಯಾನ್ಸರ್ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಕೊಲೊರೆಕ್ಟಲ್ ಕ್ಯಾನ್ಸರ್ ನ ಆರಂಭಿಕ ಚಿಹ್ನೆಗಳು, ರೋಗನಿರ್ಣಯ, ಚಿಕಿತ್ಸೆಯ ಬಗ್ಗೆ ಅವರು ಹೇಳಿದ್ದಾರೆ. 34 ವರ್ಷದ ಜೋ ಫರಾಟ್ಜಿಸ್ ಅವರಿಗೆ ಮೊದಮೊದಲು ಹೊಟ್ಟೆನೋವು ಕಾಣಿಸಿಕೊಳ್ಳಲು ಆರಂಭವಾಯಿತು. ಅವರು ಬಾಗಿದಾಗಲೆಲ್ಲ ಹೊಟ್ಟೆಯ ಕೆಳಗಡೆ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ಈ ರೀತಿಯ ನೋವು ನಿರಂತರವಾಗಿ ಇರುತ್ತಿರಲಿಲ್ಲ ವಾರಕ್ಕೊಮ್ಮೆ ಅಥವಾ ಎರಡು…

Read More

ರಾತ್ರಿ ತುಂಬಾ ಲೇಟಾಗಿ ಮಲಗೋದು ಆರೋಗಕ್ಕೆ ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿದ್ರೆ ಮಾತ್ರ ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಅಧ್ಯಯನದ ಪ್ರಕಾರ, ಪ್ರತಿದಿನ 1.5 ಗಂಟೆಗಳ ತಡವಾಗಿ ಮಲಗುವುದು ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ ನಿದ್ರಾಹೀನತೆಯು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಪ್ರತಿದಿನ ಒಂದು ನಿರ್ದಿಷ್ಟ ಸಮಯದಲ್ಲಿ ಮಲಗುವವರಿಗೆ ಹೃದ್ರೋಗ ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನವು ಕಂಡುಹಿಡಿದಿದೆ. ನಿದ್ರೆಯ ಕೊರತೆಯು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅತಿಯಾದ ಒತ್ತಡವು ನಿದ್ರೆಯ ಸಮಸ್ಯೆಗಳನ್ನ ಉಂಟು ಮಾಡಬಹುದು. ಆದ್ದರಿಂದ, ಒತ್ತಡವನ್ನ ನಿರ್ವಹಿಸುವುದು ಬಹಳ ಮುಖ್ಯ. ಧ್ಯಾನ, ಯೋಗ, ವಾಕಿಂಗ್ ಇತ್ಯಾದಿ ನಿಮ್ಮ ಒತ್ತಡವನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ವ್ಯಾಯಾಮ ಮುಖ್ಯ, ವ್ಯಾಯಾಮವು ದೇಹವನ್ನ ಆರೋಗ್ಯವಾಗಿರಿಸುತ್ತದೆ. ಅಲ್ಲದೇ, ಇದು ದೇಹದಲ್ಲಿ ಸಂತೋಷದ ಹಾರ್ಮೋನುಗಳನ್ನು ಸೃಷ್ಟಿಸುತ್ತದೆ. ಇದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಆದ್ರೆ, ವ್ಯಾಯಾಮದ ನಂತರ ತಕ್ಷಣ ಮಲಗುವುದು ತಪ್ಪು. ನಿದ್ರೆಯ ವಿಳಂಬವು ಸೆಲ್ಯುಲಾರ್ ಹಾನಿ, ಉರಿಯೂತ ಮತ್ತು ಹೃದ್ರೋಗದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ…

Read More

ನಿಂಬೆ ಹಣ್ಣನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಉಪಯೋಗ ಮಾಡಿಯೇ ಮಾಡುತ್ತೇವೆ.ಅಡುಗೆಗೆ ಉಪಯೋಗಿಸಿದ ನಿಂಬೆಹಣ್ಣನ್ನು ಆಮೇಲೆ ಬಿಸಾಕುತ್ತಿರ? ಹಾಗಿದ್ದರೆ ಇದನ್ನು ಓದಿರಿ… ಅಡುಗೆ ಮಾಡುವಾಗ ರಸ ಹಿಂಡಿದ ಮೇಲೆ ಉಳಿಯುವ ನಿಂಬೆ ಹಣ್ಣಿನ್ನು ಸುಮ್ಮನೇ ಕಸದ ಬುಟ್ಟಿಗೆ ಹಾಕಬೇಕಿಲ್ಲ. ರಸ ಹಿಂಡಿದರೂ ನಿಂಬೆ ಹಣ್ಣಿನ ಉಪಯೋಗ ಹಲವಾರು ಇದೆ. ಕ್ಯಾನ್ಸರ್ ವಿರುದ್ಧ ಹೋರಾಟ ಬೆಹಣ್ಣಿನ ಸಿಪ್ಪೆ ಪೈಬರ್ ಹಾಗೂ ಸಮೃದ್ಧವಾದ ವಿಟಮಿನ್ ಎ ಸತ್ವವನ್ನು ಒಳಗೊಂಡಿದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತದೆ. ನಿಂಬೆ ಹಣ್ಣಿನ ಸಿಪ್ಪೆ ಒಣಗಿಸಿ ಪುಡಿ ಮಾಡಿ ಜೇನುತುಪ್ಪ ಅಥವಾ ಮೊಸರಿನೊಂದಿಗೆ ಸೇವಿಸಿದರೆ ಒಳ್ಳೆಯದು. ಜಿಡ್ಡಿನ ಪಾತ್ರೆಗೆ ಜಿಡ್ಡಿನ ಪಾತ್ರೆ ಎಷ್ಟು ಸಾಬೂನು ಹಾಕಿದರೂ ಅದು ಹೋಗಲ್ಲ. ಅದಕ್ಕೆ ರಸ ಹಿಂಡಿ ಬಾಕಿಯಾದ ನಿಂಬೆ ಹಣ್ಣಿನ ತುಂಡು ಬಳಸಿ ಜಿಡ್ಡು ಇರುವ ಪಾತ್ರೆಗೆ ಚೆನ್ನಾಗಿ ಉಜ್ಜಿ. ಇದರಿಂದ ಕೊಳೆಯೂ ಹೋಗುತ್ತದೆ. ಶೂ ಪಾಲಿಶ್ ಆಫೀಸ್ ಗೆ ಹೋಗುವ ವೇಳೆಗೆ ಶೂ ಪಾಲಿಶ್ ಆಗಿಲ್ಲ. ಪಾಲಿಶ್ ಖಾಲಿಯಾಗಿದೆ ಎಂದಾದರೆ ಉಳಿದ…

Read More

ಬಂಗಾರಪೇಟೆ ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಒಂಟಿ ಆನೆಯ ಉಪಟಳ ಹೆಚ್ಚಾಗಿದ್ದು, ರೈತರು ಬೆಳೆದ ಅಫಾರ ಪ್ರಮಾಣದ ವಿವಿಧ ಬೆಳೆಗಳು ನಾಶವಾಗಿದ್ದು ಬೆಳೆ ಕಳೆದುಕೊಂಡ ರೈತರು ತಲೆಯ ಮೇಲೆ ಕೈ ಇಟ್ಟು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕಿನ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಒಂಟಿ ಕಾಡಾನೆ ಬೀಡು ಬಿಟ್ಟಿದ್ದು, ನಿತ್ಯ ಒಂದಲ್ಲಾ ಒಂದು ಕಾಡಂಚಿನ ಗ್ರಾಮದಲ್ಲಿ ಆನೆ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸುತ್ತಿದೆ. ಗುರುವಾರ ತಡರಾತ್ರಿ ದೋಣಿಮೊಡಗು ಮತ್ತು ಬಲಮಂದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಡಿ ಗ್ರಾಮಗಳಲ್ಲಿ ಲಗ್ಗೆ ಇಟ್ಟು ರೈತರ ಬೆಳೆಗಳನ್ನು ನಾಶಮಾಡಿದೆ. ದಾಳಿಯಿಂದ ಕದಿರಿನತ್ತ ಗ್ರಾಮದ ರೈತರಾದ ಶ್ರೀರಾಂ, ವೆಂಕೋಬ್ ರಾವ್, ಸೋಮೋಜಿ ರಾವ್ ಸೇರಿದಂತೆ ಇತರೆ ರೈತರು ಬೆಳೆದಿದ್ದ ರಾಗಿ ಬೆಳೆಯನ್ನು ನಾಶಮಾಡಿದೆ. ಕನುಮನಹಳ್ಳಿ ಗ್ರಾಮದ ರೈತ ಪಾರಿರಾವ್‌ರವರ ರಾಗಿ ಬೆಳೆಯನ್ನು ನಾಶ ಮಾಡುವುದರ ಜೊತೆಗೆ ಬೋರ್‌ವೆಲ್ ಅನ್ನು ನಾಶಪಡಿಸಿದೆ. ಕೊಳಮೂರು ಗ್ರಾಮದ ರೈತ ಈಶ್ವರ್ ರಾವ್ ರವರಿಗೆ ಸೇರಿದ ಟೊಮ್ಯಾಟೊ ಮತ್ತು ಹನಿ ನೀರಾವರಿ…

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿಗೆ ಜಲಕಂಟಕ ಎದುರಾಗಿರುವುದು ಅಕ್ಷರಶಃ ಸತ್ಯ. ಕುಡಿಯುವ ನೀರಿಗಾಗಿ ರಾಜಧಾನಿ ಬೆಂಗಳೂರು ಮಂದಿ ಪಡುತ್ತಿರುವ ಪಾಡು ದೇವರಿಗೆ ಪ್ರೀತಿ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಸಿದ್ದರಾಮಯ್ಯ, ಹಲವು ಮಾಹಿತಿ ಪಡೆದಿದ್ದಾರೆ. ಬಳಿಕ ಮಾತನಾಡಿ, ಬೆಂಗಳೂರಿಗೆ ಅಗತ್ಯ ಇರುವ ನೀರಿನಲ್ಲಿ 1,450 ಎಂಎಲ್‌ಡಿ ಕಾವೇರಿ ನದಿಯಿಂದ ಮತ್ತು 650 ಎಂಎಲ್‌ಡಿ ನಗರದ ಬೋರ್‌ವೆಲ್‌ಗಳಿಂದ ಪೂರೈಸಲಾಗುತ್ತಿದೆ. 500 ಎಂಎಲ್‌ಡಿ ನೀರಿನ ಕೊರತೆ ಇದೆ ಎಂದು ಅವರು ತಿಳಿಸಿದ್ದಾರೆ. ಭವಿಷ್ಯದಲ್ಲಿ ನೀರಿನ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಸರ್ಕಾರ ತಜ್ಞರ ಸಮಿತಿಯನ್ನು ರಚಿಸಲಿದೆ ಎಂದು ಅವರು ಹೇಳಿದ್ದಾರೆ. ನೀರು ವ್ಯರ್ಥವಾಗುವುದನ್ನು ತಡೆಯಲು ಅಧಿಕಾರಿಗಳು 143 ಕಾರ್ಯಪಡೆ ತಂಡಗಳನ್ನು ನಿಯೋಜಿಸಿದ್ದಾರೆ ಮತ್ತು ಇವುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ನಾಗರಿಕರು ನೀರು ಪೋಲು ಮಾಡುವುದಕ್ಕೆ ಸಂಬಂಧಿಸಿದ ದೂರುಗಳನ್ನು ಸಹಾಯವಾಣಿ 1916 ಅಥವಾ ವಾಟ್ಸಾಪ್‌ನಲ್ಲಿ ಸಲ್ಲಿಸಬಹುದು. ಬಂದಿರುವ ದೂರುಗಳನ್ನು ತಕ್ಷಣವೇ ಪರಿಹರಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ನಗರದಲ್ಲಿ 14,000 ಬೋರ್‌ವೆಲ್‌ಗಳ ಪೈಕಿ 6,900 ಬೋರ್‌ವೆಲ್‌ಗಳು…

Read More