ಬೆಂಗಳೂರು:- ನಗರದ ಕೆಲವು ಬೋರ್ವೆಲ್ಗಳು ನಿರ್ವಹಣೆ ಕೊರತೆ ಹಾಗೂ ತಾಂತ್ರಿಕ ದೋಷದಿಂದ ಕೆಲಸ ಮಾಡುವುದನ್ನು ನಿಲ್ಲಿಸಿವೆ. ನೀರು ಸಿಗದಿದ್ದಾಗ ಬೋರ್ವೆಲ್ಗಳನ್ನು ಆನ್ ಮಾಡಿ ಪಂಪ್ಸೆಟ್ಗಳನ್ನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ಓಡಿಸಲಾಗಿದೆ. ಇದರಿಂದ ಬೋರ್ವೆಲ್ಗಳ ಕಾರ್ಯ ಸ್ಥಗಿತಗೊಂಡಿವೆ ಎಂದು ಬಿಡಬ್ಲ್ಯುಎಸ್ಎಸ್ಬಿ ಅಧ್ಯಕ್ಷ ಡಾ. ರಾಮಪ್ರಸಾತ್ ಮನೋಹರ್ ವಿ ತಿಳಿಸಿದರು.
ರೊಬೊಟಿಕ್ ತಂತ್ರಜ್ಞಾನವು BWSSB ಪಂಪ್ ಸೆಟ್ನ ಸ್ಥಿತಿ ತಿಳಿಯುತ್ತದೆ. ಮತ್ತು ಅಧಿಕಾರಿಗಳು ಕೂತ ಜಾಗದಿಂದಲೇ ಬೋರ್ವೆಲ್ಗಳನ್ನು ಆನ್ ಮತ್ತು ಆಫ್ ಸಹ ಮಾಡಬಹುದು. ನಿರಂತರ ಮೇಲ್ವಿಚಾರಣೆಯಿಂದ ಬೋರ್ವೆಲ್ಗಳು ಪದೇ ಪದೇ ಹಾಳಾಗುವುದನ್ನು ತಡೆಯಬಹುದು. ಮತ್ತು ನಾಗರಿಕರಿಗೆ ಉಂಟಾಗುವ ಅನಾನುಕೂಲತೆಯನ್ನು ಕಡಿಮೆ ಮಾಡಬಹದು. ನಗರದಲ್ಲಿನ ಬೋರ್ವೆಲ್ಗಳ ಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಸಿ, ನಿಷ್ಕ್ರಿಯಗೊಂಡವುಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಿಷ್ಕ್ರಿಯ ಬೋರ್ವೆಲ್ಗಳನ್ನು ಮಳೆನೀರು ಕೊಯ್ಲು (RWH) ರಚನೆಗಳಾಗಿ ಪರಿವರ್ತಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಬೋರ್ವೆಲ್ನಿಂದ ನೀರು ಬರುತ್ತಿರದಿದ್ದರೇ ಮತ್ತು ಅವುಗಳನ್ನು ಪುನರುಜ್ಜೀವನಗೊಳಿಸಲು ನಮಗೆ ಸಾಧ್ಯವಾಗದಿದ್ದರೆ, ಅವುಗಳನ್ನು ಮಳೆನೀರು ಕೊಯ್ಲಿಗೆ ಪರಿವರ್ತಿಸಬಹುದು ಎಂದು ಹೇಳಿದರು.