Author: AIN Author

ಬೆಂಗಳೂರು:- ಅಕ್ರಮ ಆಸ್ತಿ ಗಳಿಕೆ ಆರೋಪದಡಿ ರಾಜ್ಯದ ಹಲವಡೆ ಲೋಕಾಯುಕ್ತ ದಾಳಿ ನಡೆಸಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಪ್ರಕಾಶ್ ಆರ್. ರೇವಣಕರ್ ಅವರ ಕಾರವಾರದ ಐಶ್ವರ್ಯ ರೆಸಿಡೆನ್ಸಿಯಲ್​​ನಲ್ಲಿರುವ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. https://ainlivenews.com/a-fire-broke-out-in-a-warehouse-electrical-items-were-burnt/ ಬೀದರ್​ ಜಿಲ್ಲೆಯಲ್ಲಿ ಭಾಲ್ಕಿ ಕಾರಂಜಾ ವಿಭಾಗದ ಎಲೆಕ್ಟ್ರಿಕಲ್ ಎಂಜಿನಿಯರ್​ ಶಿವಕುಮಾರ್​ ಸ್ವಾಮಿ ಅವರಿಗೆ ಸೇರಿದ ಬೀದರ್​ ನಗರದ ಅಗ್ರಿಕಲ್ಚರ್ ಕಾಲೋನಿಯಲ್ಲಿರುವ ಮನೆ, ಕಲಬುರಗಿ ನಗರದ ಎಂ.ಬಿ. ಕಾಲೋನಿಯಲ್ಲಿರುವ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ರಾಮನಗರ ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ PDO ಮೇಲೆ ಲೋಕಾಯುಕ್ತ ದಾಳಿ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಯತೀಶ್ ಚಂದ್ರ ರಾಮನಗರ ತಾಲೂಕಿನ ಬಿಡದಿಯ ಮಂಚನಾಯಕನಹಳ್ಳಿ ಗ್ರಾ.ಪಂ PDO ರಾಜ್ಯದ ಅತಿ ಶ್ರೀಮಂತ ಪಂಚಾಯತಿ ಎಂಬ ಹೆಗ್ಗಳಿಕೆ ಪಡೆದಿರುವ ಪಂಚಾಯತಿ ಈಗಲ್ಟನ್ ರೆಸಾರ್ಟ್ ನಿಂದ ಪಿಡಿಓ‌ ಯತೀಶ್ ವಶಕ್ಕೆ ಪಡೆದು ವಿಚಾರಣೆ…

Read More

ನೆಲಮಂಗಲ: ನಗರದ ಗೋದಾಮೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ವಿವಿಧ ಬಗೆಯ ಎಲೆಕ್ಟ್ರಿಕ್ ವಸ್ತುಗಳು ಹೊತ್ತಿ ಉರಿದ ಘಟನೆ ಜರುಗಿದೆ. https://ainlivenews.com/fir-registered-against-15-bjp-workers-in-chikmagalur/#google_vignette ನೆಲಮಂಗಲದ ಅಡಕಿಮಾರನಹಳ್ಳಿ ಬಳಿ ಘಟನೆ ಜರುಗಿದೆ. ತಡ ರಾತ್ರಿ 2 ಗಂಟೆಗೆ ಟ್ರೆಡಿಷನ್ ಕಾಗ್ರೋ ಎಂಬ ಹೆಸರಿನ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಗೋದಾಮಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಿಕ್ ವಸ್ತುಗಳು ಸಂಪೂರ್ಣ ಬೆಂಗಿಗಾಹುತಿಯಾಗಿದೆ. ನಾಲ್ಕು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಿಕ್ಕಮಗಳೂರು:- ಮೋದಿ ಅಂತ ಹೇಳುವ ಯುವಕರ ಕಪಾಳಕ್ಕೆ ಹೊಡೆಯಿರಿ ಎಂಬ ತಂಗಡಗಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ FIR ದಾಖಲಾಗಿದೆ. ಚುನಾವಣಾ ಅಧಿಕಾರಿಗಳ ದೂರಿನ ಆಧಾರದ ಮೇಲೆ 15ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಕಾರ್ಯಕರ್ತರ ಸಭೆ ನಡೆಸಲು ಮಾರ್ಚ್​ 26 ರಂದು ಕೆ.ಜೆ.ಜಾರ್ಜ್ ಮತ್ತು ಜಯಪ್ರಕಾಶ್ ಹೆಗ್ಡೆ ನಗರಕ್ಕೆ ಬಂದಿದ್ದರು. ಆದ್ರಿಕ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಯುತ್ತಿರುವ ಮಾಹಿತಿ ತಿಳಿದು, ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಮೋದಿ ಭಾವಚಿತ್ರ ಹಿಡಿದು ಕಾಂಗ್ರೆಸ್​ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ಎಲ್ಲರನ್ನೂ ಬಂಧಿಸಿ ಕರೆದೊಯ್ದಿದ್ದರು. ಇನ್ನೂ ಮೋದಿ ಸರ್ಕಾರ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿತ್ತು. ಆದರೆ, ಉದ್ಯೋಗ ಕೊಡಿ ಎಂದರೆ ಪಕೋಡ ಮಾರಿ ಎನ್ನುತ್ತಾರೆ ಮೋದಿ. ಹತ್ತು ವರ್ಷದಲ್ಲಿ ಇಪ್ಪತ್ತು…

Read More

ಬೆಂಗಳೂರು:- ನಗರದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಧಾನಿ ಬೆಂಗಳೂರಿನ ಐದು ಕಡೆ ಎನ್​​ಐಎ ದಾಳಿ ಮಾಡಿದೆ. https://ainlivenews.com/ipl-2024-points-table-do-you-know-the-position-of-csk-rcb-who-are-at-the-top/#google_vignette ಶಂಕಿತ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು ಬೆಂಗಳೂರಿನ ಇಬ್ಬರು ಶಂಕಿತರನ್ನು ಶನಿವಾರ (ಮಾ.23) ಸಂಜೆ ವಶಕ್ಕೆ ಪಡೆದುಕೊಂಡಿರುವ ವಿಚಾರ ಮಂಗಳವಾರ ತಿಳಿದುಬಂದಿತ್ತು. ಚೆನ್ನೈನ ಮೂರು ಕಡೆ ಕೂಡ ಎನ್​ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪ್ರಕರಣ ಸಂಬಂಧ ಶಂಕಿತರ ಶೋಧ ನಡೆಸಿದೆ. ಉಗ್ರರಿಗೆ ಹಣದ ನೆರವು, ಉಗ್ರರ ಪರ ಹಣ ಸಂಗ್ರಹ ಆರೋಪದ ಮೇಲೆ ಶಂಕಿತರ ಮನೆಗಳಲ್ಲಿ ಶೋಧ ನಡೆಸಿದೆ.

Read More

ಬೆಂಗಳೂರು: ಈ ಬೇಸಿಗೆಯಲ್ಲಿ ಹೊರ ಹೋಗಿ ಬಂದರೆ ಸಾಕು ಫುಲ್ ಸುಸ್ತು. ಮನೆಗೆ ಬಮದ ಕೂಡಲೆ ತಣ್ಣಗೆ ನಿಂಬೆ ಹಣ್ಣಿನ ಶರಬತ್ತು ಕುಡಿಯಬೇಕು ಎನಿಸಿದರೇ ಈಗ ಅದೂ ಕೂಡ ಆಗುವುದಿಲ್ಲ!. ಏಕೆಂದರೆ ದಿನ ದಿನಕ್ಕೂ ಗಗನಕ್ಕೆ ಏರುತ್ತಿದೆ ನಿಂಬೆ ಹಣ್ಣಿನ ಬೆಲೆ.ಸದ್ಯ ಬೆಂಗಳೂರಿನಲ್ಲಿ ನಿಂಬೆ ಹಣ್ಣಿನ ಬೆಲೆ ಇವತ್ತು ಇದ್ದಂತೆ ನಾಳೆ ಇರುವುದಿಲ್ಲ. ಜನರ ನಿಂಬೆಹಣ್ಣಿನ ಮೇಲಿರುವ ಒಲವು ಕಡಿಮೆಯಾಗುತ್ತಿದೆ.. ಅದ್ಯಾಕೆ ಅಂತೀರಾ ಹಾಗಿದ್ರೆ ಈ ಸ್ಟೋರಿ ನೋಡಿ.. ಬೇಸಿಗೆಯ ಬಿಸಿಲಿಗೆ ನಾಲಿಗೆಗೆ ತಂಪಾದ ನಿಂಬೆ ಶರಬತ್ತು ಬಿದ್ರೆ ಸಾಕು ದೇಹ ತಂಪಾದಂತಾಗುತ್ತೆ.. ಆದ್ರೆ.. ಶರಬತ್ತು, ಲೈಮ್ ಸೋಡಾ ಕುಡಿಯುವುದು ಅಂದುಕೊಂಡಷ್ಟು ಸುಲಭವಲ್ಲ. ಒಂದು ಕೆಜಿ ಟೊಮೆಟೋ ಬೆಲೆಗೆ ಒಂದೇ ಒಂದು ನಿಂಬೆ ಹಣ್ಣು ಸಿಗುವಂತಾಗಿದೆ ಪರಿಸ್ಥಿತಿ. ಒಂದು ಕೆಜಿ ಟೊಮೆಟೋ ಬೆಲೆ 10 ರಿಂದ 12 ರೂಪಾಯಿಯಿದೆ. ಹಾಗೆ ಒಂದು ನಿಂಬೆ ಹಣ್ಣಿನ ಬೆಲೆ ಕೂಡ 12 ರೂಪಾಯಿಯಾಗಿದೆ. ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ.. https://ainlivenews.com/stay-away-from-these-foods-to-keep-your-body-healthy-this-summer/ ಮಾರುಕಟ್ಟೆಯಲ್ಲಿ ಒಂದು…

Read More

ಬಾದಾಮಿ: ಈ ಬಾರಿ ಬೇಸಿಗೆಯ ಹಂಗಾಮಿನಲ್ಲಿ ಶೇಂಗಾ ಬೆಳೆಗೆ ಪಾನಪಟ್ಟಿ ಹುಳುವಿನ ಬಾಧೆಯಿಂದ ಬೆಳೆ ಕುಂಠಿತಗೊಂಡಿದ್ದು, ಇಳುವರಿಯೂ ಕಡಿಮೆಯಾಗಿದೆ. ಇಳುವರಿ ಕಡಿಮೆಯಾದರೆ ಮಾರುಕಟ್ಟೆಯಲ್ಲಿ ದರ ಹೆಚ್ಚಾಗಬೇಕಿತ್ತು. ಆದರೆ ದರವೂ ಕುಸಿದಿದ್ದರಿಂದ ರೈತರಿಗೆ ನಿರಾಸೆಯಾಗಿದೆ. ಬೇಸಿಗೆಯ ಹಂಗಾಮಿನ ನೀರಾವರಿ ಪ್ರದೇಶದಲ್ಲಿ ಬಾದಾಮಿ ತಾಲ್ಲೂಕಿನಲ್ಲಿ 5,100 ಹೆಕ್ಟೇರ್ ಮತ್ತು ಗುಳೇದಗುಡ್ಡ ತಾಲ್ಲೂಕಿನಲ್ಲಿ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ‘ಆರಂಭದಲ್ಲಿ ಶೇಂಗಾ ಬೆಳೆ ಬಂದಾಗ ಕ್ವಿಂಟಲ್‌ಗೆ ₹ 6,000 ಇದ್ದ ಬೆಲೆ ಈಗ ₹4,000ಕ್ಕೆ ಕುಸಿದಿದೆ. ಚೀಲಕ್ಕೆ ₹3,500 ಇದ್ದದ್ದು ಈಗ ₹2,200ಕ್ಕೆ ಇಳಿದಿದೆ. ಬಿತ್ತನೆ ಮಾಡುವಾಗ ಶೇಂಗಾ ಬೀಜವನ್ನು ಕ್ವಿಂಟಲ್‌ಗೆ ₹10,000ಕ್ಕೂ ಅಧಿಕ ಬೆಲೆಗೆ ತಂದು ಬಿತ್ತನೆ ಮಾಡುತ್ತೇವೆ. ಆದರೆ ಬೆಳೆ ಬಂದ ಕೂಡಲೇ ದರ ಕಡಿಮೆಯಾಗಿದೆ’ ಎಂದು ರೈತರು ಅಳಲು ತೋಡಿಕೊಂಡರು. ‘ಫೆಬ್ರುವರಿಯಲ್ಲಿ ಮಾರುಕಟ್ಟೆಯಲ್ಲಿ ಚೀಲಕ್ಕೆ ₹4,000ಕ್ಕೆ ಖರೀದಿಸಿದ ವರ್ತಕರು, ಮಾರ್ಚ್‌ನಲ್ಲಿ ಚೀಲಕ್ಕೆ ₹3,000ಕ್ಕೆ ಖರೀದಿಸುತ್ತಾರೆ. ಇದರಿಂದ ರೈತರು ಬದುಕುವುದು ಕಷ್ಟವಾಗಿದೆ’ ಎಂದು ರೈತ ಕೋನಪ್ಪ ಬೇಸರ ವ್ಯಕ್ತಪಡಿಸಿದರು. ಇಲ್ಲಿನ ಎಪಿಎಂಸಿ…

Read More

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 4 ಅಂಕಗಳೊಂದಿಗೆ ಮೊದಲ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಎರಡೂ ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಿರುವ ಕಾರಣ ಸಿಎಸ್​ಕೆ ತಂಡದ ನೆಟ್​ ರನ್​ ರೇಟ್ +1.979 ಕ್ಕೇರಿದೆ. https://ainlivenews.com/drunken-car-driving-a-young-woman-attacked-the-auto-driver-who-questioned-him/ ಇನ್ನು ಆಡಿರುವ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 20 ರನ್​ಗಳಿಂದ ಸೋಲುಣಿಸಿರುವ ರಾಜಸ್ಥಾನ್ ರಾಯಲ್ಸ್ ತಂಡ 2 ಪಾಯಿಂಟ್ಸ್​​ನೊಂದಿಗೆ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆರ್​ಆರ್ ತಂಡದ ಪ್ರಸ್ತುತ ನೆಟ್ ರನ್​ ರೇಟ್ +1.000. ಹಾಗೆಯೇ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4 ರನ್​ಗಳಿಂದ ರೋಚಕ ಜಯ ಸಾಧಿಸಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ. ಕೆಕೆಆರ್ ತಂಡದ ಪ್ರಸ್ತುತ ನೆಟ್ ರನ್ ರೇಟ್ +0.200 ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್​ಗಳಿಂದ ಗೆದ್ದು ಬೀಗಿದ್ದ ಪಂಜಾಬ್ ಕಿಂಗ್ಸ್…

Read More

ಅಹಮಾದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ಭಾನುವಾರ ನಡೆದಿದ್ದ 2024ರ ಇಂಡಿಯನ್ ಪ್ರೀಮಿಯರ್‌ ಲೀಗ್ (ಐಪಿಎಲ್) ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್‌ ಪಾಂಡ್ಯ ಅವರನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. https://youtube.com/shorts/sNhXP3Av2CM?feature=share 2021ರ ಐಪಿಎಲ್‌ ಟೂರ್ನಿಯ ಬಳಿಕ ಹಾರ್ದಿಕ್‌ ಪಾಂಡ್ಯ 2022ರ ಟೂರ್ನಿಗೆ ಗುಜರಾತ್‌ ಟೈಟನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಆ ಮೂಲಕ ಚೊಚ್ಚಲ ಆವೃತ್ತಿಯಲ್ಲಿಯೇ ಗುಜರಾತ್ ತಂಡವನ್ನು ಹಾರ್ದಿಕ್‌ ಚಾಂಪಿಯನ್‌ ಮಾಡಿದ್ದರು ಹಾಗೂ 2023ರಲ್ಲಿ ರನ್ನರ್‌ ಅಪ್ ಮಾಡಿದ್ದರು. ಆದರೆ, ಇದೀಗ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದಾರೆ. ಆದರೆ, ಟಾಸ್‌ಗೆ ಆಗಮಿಸುತ್ತಿರುವಾಗ ಹಾರ್ದಿಕ್ ಪಾಂಡ್ಯ ಅವರನ್ನು ‘ರೋಹಿತ್‌…ರೋಹಿತ್‌’ ಎಂದು ಕರೆಯುವ ಮೂಲಕ ಫ್ಯಾನ್ಸ್‌ ರೇಗಿಸಿದ್ದಾರೆ. ತಮ್ಮ ಮಾಜಿ ತಂಡ ಗುಜರಾತ್‌ ಟೈಟನ್ಸ್ ನೂತನ ನಾಯಕ ಶುಭಮನ್ ಗಿಲ್‌ ಅವರ ಜೊತೆ ಟಾಸ್‌ಗೆ ಪಿಚ್‌ ಬಳಿ ನಡೆದುಕೊಂಡು ಬರುತ್ತಿದ್ದಾಗ, ರೊಚ್ಚಿಗೆದ್ದ ಅಭಿಮಾನಿಗಳು ರೋಹಿತ್‌…ರೋಹಿತ್..ರೋಹಿತ್… ಎಂದು ಜೋರಾಗಿ ಕೂಗುವ ಮೂಲಕ ಹಾರ್ದಿಕ್‌ ಪಾಂಡ್ಯ ಅವರನ್ನು ಟ್ರೋಲ್‌…

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಸದಾಶಿವನಗರ ರಸ್ತೆಯಲ್ಲಿ ಕಳೆದ ರಾತ್ರಿ ಕಠಪೂರ್ತಿ ಕುಡಿದು ಕಾರು ಚಲಾಯಿಸಿ ಯುವತಿ ನಡುರಸ್ತೆಯಲ್ಲಿ ರಂಪಾಟ ಮಾಡಿರುವ ಘಟನೆ ಜರುಗಿದೆ https://ainlivenews.com/monkey-disease-on-the-rise-death-toll-rises-to-four-in-kafinada/ ಪ್ರಶ್ನೆ ಮಾಡಿದಕ್ಕೆ ಯುವತಿ ಆಟೋ ಚಾಲಕನ ಮೈ ಕೈ ಪರಚಿ ಗಾಯಪಡಿಸಿದ್ದಾಳೆ. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಂಠಪೂರ್ತಿ ಕುಡಿದು ಯುವತಿಯೋರ್ವಳು ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಿದ್ದಳು. ಆಟೋ ಚಾಲಕ ನಿಶಾಂತ್ ಎಂಬುವವರು ಅಡ್ಡಾದಿಡ್ಡಿ ವಾಹನ ಚಾಲನೆ ಬಗ್ಗೆ ಪ್ರಶ್ನಿಸಿದಕ್ಕೆ ಯುವತಿ ಹಾಗೂ ಯುವತಿ ಜೊತೆಯಿದ್ದ ಯುವಕ ಇಬ್ಬರೂ ಆಟೋ ಚಾಲಕನ ಜೊತೆ ಗಲಾಟೆಗೆ ಇಳಿದಿದ್ದಾರೆ. ಈ ವೇಳೆ ಯುವತಿ ನಿಶಾಂತ್ ಮೇಲೆ ಹಲ್ಲೆ ನಡೆಸಿದ್ದಾಳೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಅಷ್ಟೇ ಅಲ್ಲದೆ ಆಟೋ ಡ್ರೈವರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾಳೆ. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಬೇಸಿಗೆಯಲ್ಲಿ ನಮ್ಮ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು. ಅದರಲ್ಲೂ ಕೆಲವೊಂದು ಆಹಾರವನ್ನು ನಮ್ಮ ಡಯಟ್‌ನಲ್ಲಿ ಸೇರಿಸಿದರೆ ಬೇಸಿಗೆಯಲ್ಲಿ ಆರೋಗ್ಯ ಕಾಪಾಡಬಹುದು ನೋಡಿ: ಇಲ್ಲಿ ನಾವು ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ದೊರೆಯುವ 8 ಪ್ರಯೋಜನಗಳ ಬಗ್ಗೆ ಹೇಳಿದ್ದೇವೆ ನೋಡಿ: ದೇಹದಲ್ಲಿ ನೀರಿನಂಶ ಕಾಪಾಡಿ, ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರ ಹಾಕುವಲ್ಲಿ ಸಹಾಯ ಮಾಡುತ್ತೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಸೆಕೆಗೆ ತ್ವಚೆಯಲ್ಲಿ ತುರಿಕೆ ಬರುವುದನ್ನು ತಡೆಯುತ್ತದೆ. ಡಾರ್ಕ್‌ ಸರ್ಕಲ್‌ ಸಮಸ್ಯೆ ನಿವಾರಣೆಯಾಗುತ್ತದೆ. ಬಿಸಿಲಿನಲ್ಲಿ ಸುತ್ತಾಡಿ ಬಂದ ಮೇಲೆ ಇದರಿಂದ ತವಚೆ ಮೇಲೆ ಮೆಲ್ಲಗೆ ಮಸಾಜ್‌ ಮಾಡಿದರೆ ಟ್ಯಾನ್‌ ಆಗುವುದನ್ನು ತಪ್ಪಿಸಬಹುದು. ದೇಹವನ್ನು ತಂಪಾಗಿ ಇಡುತ್ತದೆ. ಮುಖದ ತಾಜಾತನ ಕಾಪಾಡುತ್ತದೆ. ಉಗುರು ಹಾಗೂ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.  

Read More