Author: AIN Author

ನವದೆಹಲಿ:- ಚುನಾವಣೆಗೆ ಸ್ಪರ್ಧಿಸಲು ಅಗತ್ಯ ಹಣ ತನ್ನ ಬಳಿ ಇಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. https://ainlivenews.com/bomb-threat-to-prestigious-restaurant-in-bengaluru/ ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಆಂಧ್ರಪ್ರದೇಶ ಅಥವಾ ತಮಿಳುನಾಡಿನಿಂದ ಸ್ಪರ್ಧಿಸುವ ಆಯ್ಕೆಯನ್ನು ನೀಡಿದ್ದರು ಎಂದು ಅವರು ಹೇಳಿದರು. ನಾನು ವಾರಗಳವರೆಗೆ ಆಲೋಚನೆ ಮಾಡಿ ನನ್ನ ನಿರ್ಧಾರ ತಿಳಿಸಿದೆ, ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ, ನನ್ನ ವಾದವನ್ನು ಅಂಗೀಕರಿಸಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ , ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಸಂಬಳ, ನನ್ನ ಗಳಿಕೆ ಮತ್ತು ನನ್ನ ಉಳಿತಾಯ ನನ್ನದೇ ಹೊರತು ಭಾರತದ ಕನ್ಸಾಲಿಡೇಟೆಡ್ ಫಂಡ್ ಅಲ್ಲ ಎಂದರು. ಏಪ್ರಿಲ್ 19 ರಿಂದ ಪ್ರಾರಂಭವಾಗುವ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹಲವಾರು ಅಸ್ತಿತ್ವದಲ್ಲಿರುವ ರಾಜ್ಯಸಭಾ ಸದಸ್ಯರನ್ನು ಕಣಕ್ಕಿಳಿಸಿದೆ. ಇವರಲ್ಲಿ ಪಿಯೂಷ್ ಗೋಯಲ್, ಭೂಪೇಂದರ್ ಯಾದವ್, ರಾಜೀವ್ ಚಂದ್ರಶೇಖರ್, ಮನ್ಸುಖ್ ಮಾಂಡವಿಯಾ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸೇರಿದ್ದಾರೆ.

Read More

ಬೆಂಗಳೂರು : ಹಣ್ಣುಗಳ ರಾಜ ಅಂತಲೇ ಫೇಮಸ್​ ಆಗಿರೋ ಮಾವಿನ ಹಣ್ಣು ಸಿಲಿಕಾನ್ ಸಿಟಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ವಿವಿಧ ತಳಿಯ, ರುಚಿಯಾದ ಮಾವಿನ ಹಣ್ಣುಗಳು ಕಣ್ಮನ ಸೆಳೆದು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ಆದರೆ, ದರ ಮಾತ್ರ ಮುಗಿಲು ಮುಟ್ಟಿದೆ. ಪ್ರತಿ ವರ್ಷ ಯುಗಾದಿಯ ಮಾಗಿ ಚಳಿ ಬಳಿಕ ಮಾರುಕಟ್ಟೆಗೆ ಆಗಮಿಸುವ ವಿವಿಧ ತಳಿಯ ಮಾವಿನ ಹಣ್ಣುಗಳು ತನ್ನದೇ ಆದ ಬಣ್ಣ ಹಾಗೂ ರುಚಿಯನ್ನ ಹೊಂದಿವೆ. ಮಕ್ಕಳು, ಯುವಕರು, ವೃದ್ಧರು, ಸೇರಿದಂತೆ ಎಲ್ಲ ವಯೋಮಾನದವರು ಇಷ್ಟ ಪಡುವ ಹಣ್ಣು ಇದಾಗಿದೆ. https://ainlivenews.com/what-are-the-benefits-of-eating-cucumber-in-summer-here-are-the-full-details/ ಸದ್ಯ ಮಾರುಕಟ್ಟೆಯಲ್ಲಿ ಮಲ್ಲಿಕಾ, ಆಪೂಸ್‌ ತಳಿಯ ಮಾವಿನ ಹಣ್ಣುಗಳು ದೊರೆಯುತ್ತಿದ್ದು, ಬೇಸಿಗೆಯಲ್ಲಿ ಬಸವಳಿದ ದೇಹಕ್ಕೆ ಚೈತನ್ಯ ನೀಡಲು ತಯಾರಾಗಿವೆ. ಇನ್ನು ಮಾವಿನ ಸೀಸನ್ ಆರಂಭದಲ್ಲೇ ಮಾರ್ಕೆಟ್​​ನಲ್ಲಿ ಮಾವಿನಹಣ್ಣು ಎಂಟ್ರಿಕೊಟ್ಟಿದೆ. ಅಲ್ಫನ್ಜೋ, ಮಲ್ಲಿಕಾ, ಬಾದಾಮಿ, ರಸ್ಪುರಿ ಮತ್ತು ಇತರ ತಾಜಾ ತಾಜಾ ಮಾವಿನ ಹಣ್ಣಿಗೆ ಮಾವು ಪ್ರಿಯರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.‌ ಪ್ರತಿ ಕೆಜಿ ಮಾವಿಗೆ 150 ರೂ. ರಿಂದ…

Read More

ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ 2024ರ ಐಪಿಎಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅತ್ಯಂತ ನಿಖರತೆಯಿಂದ ಬೌಲಿಂಗ್ ಸಂಘಟಿಸಿದ್ದರು ಎಂದು ಭಾರತ ತಂಡದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡ ನಾಯಕ ಶಿಖರ್ ಧವನ್ (45 ರನ್) ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 176 ರನ್ ಗಳಿಸಿತ್ತು. ಪರಿಣಾಮಕಾರಿ ಬೌಲಿಂಗ್ ಸಂಘಟಿಸಿದ್ದ ಮೊಹಮ್ಮದ್ ಸಿರಾಜ್ , ಅಪಾಯಕಾರಿ ಬ್ಯಾಟರ್‌ಗಳಾದ ಜಾನಿ ಬೈರ್‌ಸ್ಟೋವ್ ಹಾಗೂ ಜಿತೇಶ್ ಶರ್ಮಾ ವಿಕೆಟ್ ಪಡೆದು ಪಂಜಾಬ್ ಕಿಂಗ್ಸ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದ್ದರು. ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯದ ಕುರಿತು ಕ್ರಿಕ್‌ಬಝ್ ಜೊತೆ ಸಂವಾದ ನಡೆಸಿದ ವೀರೇಂದ್ರ ಸೆಹ್ವಾಗ್, ಆರ್‌ಸಿಬಿ ತಂಡದ ವೇಗದ ವಿಭಾಗವನ್ನು ಮೊಹಮ್ಮದ್ ಸಿರಾಜ್ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ. 6.50ರ ಎಕಾನಮಿಯಲ್ಲಿ ಸಿರಾಜ್ 2 ವಿಕೆಟ್ ಪಡೆದರೆ, ಯುವ ವೇಗಿಯಶ್ ದಯಾಳ್ 4 ಓವರ್‌ಗಳಲ್ಲಿ…

Read More

ಬೆಂಗಳೂರು:- ನಗರದ ರಾಮೇಶ್ವರಂ ಕೆಫೆ ಸ್ಪೋಟ ಬೆನ್ನಲ್ಲೇ ಮತ್ತೊಂದು ಪ್ರತಿಷ್ಠಿತ ರೆಸ್ಟೋರೆಂಟ್​​​​ಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಮಹದೇವಪುರದ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್​​​​ಗೆ ಬೆದರಿಕೆ ಕರೆ ಬಂದಿದ್ದು, ಶೀಘ್ರದಲ್ಲೇ ರೆಸ್ಟೋರೆಂಟ್​ನಲ್ಲಿ ಬಾಂಬ್ ಸ್ಫೋಟವಾಗುತ್ತೆ ಎಂದು ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. https://ainlivenews.com/karnataka-weather-chance-of-rain-in-these-districts-of-karnataka-today/ ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ತಿಳಿದುಬಂದ ಸತ್ಯಾಂಶ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಮಹದೇವಪುರ ಠಾಣಾ ವ್ಯಾಪ್ತಿಯ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್​ಗೆ ತಡರಾತ್ರಿ ಕರೆ ಬಂದಿದ್ದು, ಶೀಘ್ರದಲ್ಲೇ ಬಾಂಬ್ ಸ್ಫೋಟವಾಗುತ್ತದೆ ಎಂದು ಬೆದರಿಕೆ ಹಾಕಿ ಕಾಲ್ ಕಟ್ ಮಾಡಲಾಗಿದೆ. ಕೂಡಲೇ ರೆಸ್ಟೋರೆಂಟ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಾತ್ರಿ ಇಡೀ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅನುಮಾನ ಮೂಡಿದ ಹಿನ್ನೆಲೆ ಇಂದಿರಾನಗರ ಬ್ರಾಂಚ್​ನಲ್ಲಿ ಕೆಲಸ ಮಾಡುತ್ತಿದ್ದ ವೇಲು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪೊಲೀಸರೇ ಶಾಕ್ ಆಗಿದ್ದಾರೆ. ಸಂಬಳ ಕೊಡದ ಹಿನ್ನೆಲೆ ತಾನು ರೆಸ್ಟೋರೆಂಟ್​ಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದಾಗಿ ವೇಲು ಬಾಯಿಬಿಟ್ಟಿದ್ದಾನೆ.

Read More

ಬೇಸಿಗೆ ಕಾಲದಲ್ಲಿ ನಾವು ಎಲ್ಲಾದರೂ ಹೊರಗಡೆ ಹೋದಾಗ ಎದುರಾಗುವ ವಿಪರೀತ ಶಕೆ ಹಾಗೂ ಬೆವರಿನ ಕಾರಣದಿಂದ ದೇಹಕ್ಕೆ ತಂಪಾದ ಮತ್ತು ಆರೋಗ್ಯಕರವಾದ ಯಾವುದಾದರೂ ಪಾನೀಯವನ್ನು ಕುಡಿಯಬೇಕು ಎಂದು ಮನಸ್ಸಿಗೆ ಬಂದರೆ ಅದು ಎಳನೀರು ಅಥವಾ ಕಬ್ಬಿನ ರಸವೇ ಆಗಿರುತ್ತದೆ. ಇದರಲ್ಲಿ ಅನೇಕ ಬಗೆಯ ಪೌಷ್ಠಿಕಾಂಶಗಳು ಸಿಗುವ ಹೊರತಾಗಿಯೂ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಗುಣಲಕ್ಷಣ ಇದೆ. ಕಾಮಾಲೆ ರೋಗದಿಂದ ಬಳಲುತ್ತಿರುವವರಿಗೆ ಮತ್ತು ರಕ್ತಹೀನತೆ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಇದು ಪರಿಹಾರ ಒದಗಿಸುತ್ತದೆ https://ainlivenews.com/more-hair-fall-in-summer-do-you-know-the-role-of-flax-seeds/ ಮೂತ್ರಪಿಂಡದ ಆರೋಗ್ಯಕ್ಕೆ ಪ್ರಯೋಜನಕಾರಿ ಕಬ್ಬಿನ ರಸವನ್ನು ನಿಯಮಿತವಾಗಿ ಬಳಸುವುದರಿಂದ ಮೂತ್ರದ ಹರಿವು ಸ್ಪಷ್ಟ ಮತ್ತು ವೇಗವಾಗಿರುತ್ತದೆ. ಇದು ಮೂತ್ರಪಿಂಡವು ತನ್ನ ಕೆಲಸವನ್ನು ಸರಿಯಾಗಿ ಮಾಡಲು ಸಹಾಯ ಮಾಡುತ್ತದೆ. ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿ ಕಬ್ಬಿನ ರಸವನ್ನು ನಮ್ಮ ಯಕೃತ್ತಿಗೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವೈದ್ಯರು ಸಾಮಾನ್ಯವಾಗಿ ಜಾಂಡೀಸ್ ರೋಗಿಗಳಿಗೆ ಕಬ್ಬಿನ ರಸವನ್ನು ಕುಡಿಯಲು ಸಲಹೆ ನೀಡುತ್ತಾರೆ. ಅದು ಅವರಿಗೆ ಪರಿಹಾರವನ್ನು ನೀಡುತ್ತದೆ. ಕಬ್ಬಿನ ರಸವನ್ನು ಪ್ರತಿದಿನ…

Read More

ಬೆಂಗಳೂರು:- ಇಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. ಇಂದು ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್​1 ರಿಂದ ಮೂರು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ. https://ainlivenews.com/police-raid-houses-of-rowdies-in-whitefield-division/#google_vignette ಉತ್ತರ ಕನ್ನಡ, ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರು, ಶಿವಮೊಗ್ಗ, ವಿಜಯನಗರದಲ್ಲಿ ಒಣಹವೆ ಮುಂದುವರೆಯಲಿದೆ. ಚಿಕ್ಕೋಡಿಯಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ 40.6 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ, ಚಾಮರಾಜನಗರದಲ್ಲಿ 17.5 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದೆ, ಎಚ್​ಎಎಲ್​ನಲ್ಲಿ 35.4 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ…

Read More

ಆಧುನಿಕ ಕ್ರಿಕೆಟ್ ಜಗತ್ತಿನ ದಿಗ್ಗಜ ವಿರಾಟ್ ಕೊಹ್ಲಿ ಬೆಂಗಳೂರು ಫ್ರಾಂಚೈಸಿಯೊಂದಿಗೆ ಟ್ರೋಫಿ ಗೆಲ್ಲಲು ಅರ್ಹರಾಗಿದ್ದಾರೆ ಎಂದು ಇಂಗ್ಲೆಂಡ್ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಹೇಳಿದ್ದಾರೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಆರ್ ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, 49 ಎಸೆತಗಳಲ್ಲೇ 77ರನ್ ಗಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 35 ವರ್ಷದ ಬ್ಯಾಟಿಂಗ್ ಸ್ಟಾರ್ ನ ಪ್ರದರ್ಶನವನ್ನು ಕೊಂಡಾಡಿರುವ ಬ್ರಾಡ್, ಆತ ವಿಶ್ವದ ಶ್ರೇಷ್ಠ ಫಿನಿಶರ್ ಗಳಲ್ಲಿ ಒಬ್ಬರು ಎಂದು ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಇಂಗ್ಲೆಂಡ್ ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್, ಆಧುನಿಕ ಕ್ರಿಕೆಟ್ ಜಗತ್ತಿನ ದಿಗ್ಗಜರಾಗಿರುವ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಐಪಿಎಲ್ ಟ್ರೋಫಿ ಗೆಲ್ಲಲು ಅರ್ಹ ಆಟಗಾರರಾಗಿದ್ದಾರೆ ಎಂದು ಹೇಳಿದ್ದಾರೆ.

Read More

ಬೆಂಗಳೂರು:- ಚುನಾವಣೆ ಬಂತಂದ್ರೆ ಸಾಕು ಹೆಚ್ಚು ಆ್ಯಕ್ಟಿವ್ ಆಗೊ ಪುಡಾರಿಗಳು ಮತದಾರರ ಮೇಲೆ ಪರಿಣಾಮ ಬೀರೊ ಕೆಲಸ ಮಾಡ್ತಾರೆ. ಬೆದರಿಕೆ ಒಡ್ಡಲು ಮುಂದಾಗ್ತಾರೆ. ಹಾಗಾಗಿ ಲೋಕಸಭೆ ಚುನಾವಣೆ ಸಮೀಪಿಸ್ತಿದ್ದಂತೆ ರೌಡಿಶೀಟರ್ ಗಳ ಬೆವರಿಳಿಸಲು ನಗರ ಪೊಲೀಸರು ಮುಂದಾಗಿದ್ದಾರೆ. https://ainlivenews.com/addiction-to-drugs-is-increasing-in-women-here-is-the-reason/ ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದಲ್ಲಿ ಬೆಳಗ್ಗೆ ನಾಲ್ಕು ಗಂಟೆಗೆ ಪೊಲೀಸರು ದಾಳಿ ನಡೆಸಿದ್ದು, ವಿಭಾಗದ ಎಲ್ಲ ಪೊಲೀಸರಿಂದ ದಾಳಿ ನಡೆದಿದೆ. ಈಗಾಗಲೇ ಹಲವು ರೌಡಿಶೀಟರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸುಮಾರು 200 ಕ್ಕೂ ಹೆಚ್ಚು ಜನ ರೌಡಿಗಳ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ಇನ್ನೂ ಬೆಂಗಳೂರು ನಗರಕ್ಕೂ ಈ ರೌಡಿಸಂಗೂ ಇರುವ ನಂಟು ಇಂದು ನಿನ್ನೆಯದಲ್ಲ. ಅದ್ರಲ್ಲೂ ರಾಜಕಾರಣಿಗಳ ನೆರಳಲ್ಲಿ ಬೆಳಿತಿರೊ ನಟೋರಿಯಸ್ ಗಳ ಸಂಖ್ಯೆಗೇನು ಕಡಿಮೆ ಇಲ್ಲ. ಚುನಾವಣೆ ಬಂತಂದ್ರೆ ಸಾಕು ಹೆಚ್ಚು ಆ್ಯಕ್ಟಿವ್ ಆಗೊ ಪುಡಾರಿಗಳು ಮತದಾರರ ಮೇಲೆ ಪರಿಣಾಮ ಬೀರೊ ಕೆಲಸ ಮಾಡ್ತಾರೆ. ಬೆದರಿಕೆ ಒಡ್ಡಲು ಮುಂದಾಗ್ತಾರೆ. ಹಾಗಾಗಿ…

Read More

ಇಂದಿನ ಕಾಲಘಟ್ಟದಲ್ಲಿ ಯುವ ಸಮೂಹ ಅದರಲ್ಲಿ ಯುವತಿಯರೂ ಸಹ ಮದ್ಯ, ಗಾಂಜಾ, ಚರಸ್, ಸಿಗರೇಟಿನ ಮೋಹಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. https://ainlivenews.com/do-this-before-going-to-bed-at-night-to-control-diabetes/ ಪೋಷಕರು ಮತ್ತು ಕುಟುಂಬ ಸದಸ್ಯರು ನಿಯಮಿತವಾಗಿ ಮಾದಕ ದ್ರವ್ಯ ಸೇವಿಸುವವರಾಗಿದ್ದರೆ ಈ ರೀತಿಯ ಪ್ರವೃತ್ತಿಯು ಮಗ ಮತ್ತು ಮಗಳಲ್ಲಿ ಕಂಡುಬರುತ್ತದೆ. ಮಹಿಳೆಯ ಮಾನಸಿಕ ಸ್ಥಿತಿಯು ಸಹ ಈ ಚಟಕ್ಕೆ ಮತ್ತೊಂದು ಕಾರಣವಾಗಿದೆ. ಹೌದು.. ಆತ್ಮಸ್ಥೈರ್ಯ ಕಡಿಮೆ ಇರುವವರು ಯಾವುದೇ ಸಂದರ್ಭದಲ್ಲೂ ಆತಂಕಕ್ಕೆ ಒಳಗಾಗುತ್ತಾರೆ. ಸಾಮಾನ್ಯವಾಗಿ ಇಂತಹವರಿಗೆ ಮಾನಸಿಕ ಗಟ್ಟಿತನ ಕಡಿಮೆ ಇರುತ್ತದೆ. ಮಾನಸಿಕ ಶಕ್ತಿಯ ಕೊರತೆಯಿಂದ ಚಟಗಳ ಬಲೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಖಿನ್ನತೆಯಿಂದ ಅನೇಕ ಮಹಿಳೆಯರು ವ್ಯಸನದ ಬಲೆಗೆ ಬೀಳುತ್ತಾರೆ. ವಿಘಟನೆ ಅಥವಾ ವೃತ್ತಿಜೀವನದಲ್ಲಿ ಅಪೇಕ್ಷಿತ ಯಶಸ್ಸು ಸಿಗದ ಕಾರಣ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಅದರಿಂದ ಹೊರಬರಲು ಅನೇಕ ಜನರು ಈ ರೀತಿಯ ತಪ್ಪು ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಮಾದಕ ವ್ಯಸನದಲ್ಲಿ ವ್ಯಕ್ತಿತ್ವ ಅಸ್ವಸ್ಥತೆಗಳು ಕೂಡ ಒಂದು ಅಂಶವಾಗಿರಬಹುದು. ಅನೇಕ ಜನರು ತಮ್ಮ ಸ್ನೇಹಿತರು ಮತ್ತು ನೆರೆಹೊರೆಯವರು…

Read More

ಬೆಂಗಳೂರು:- ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲ್ ಮೂರು ಬಾರಿ ಸಂಸದರಾಗಿದ್ದಾರೆ. ಆದ್ರೆ, ಈ ಬಾರಿ ಹೈಕಮಾಂಡ್ ಹೊಸ ಮುಖಕ್ಕೆ ಮಣೆ ಹಾಕಿದೆ. ಹೀಗಾಗಿ ಬೇಸರದಲ್ಲಿರುವ ಕಟೀಲ್ ಗೆ ಹೈಕಮಾಂಡ್ ಮಹತ್ವದ ಜವಬ್ದಾರಿ ನೀಡಿದೆ. https://ainlivenews.com/do-this-before-going-to-bed-at-night-to-control-diabetes/ ಕಟೀಲ್ ರನ್ನು ಕೇರಳ ಲೋಕಸಭಾ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಇದರ ಜೊತೆ ತೆಲಂಗಾಣ ಮತ್ತು ಮಹಾರಾಷ್ಟ್ರ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಕರ್ನಾಟಕದ ಬಿಜೆಪಿ ನಾಯಕರುಗಳಿಗೆ ನೀಡಲಾಗಿದೆ. ತೆಲಂಗಾಣ ಲೋಕಸಭಾ ಚುನಾವಣೆಯ ಬಿಜೆಪಿ ಉಸ್ತುವಾರಿಯಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು ನಿರ್ಮಲ್‌ ಕುಮಾರ್ ‌ಸುರಾನಾ ಅವರನ್ನು ಮಹಾರಾಷ್ಟ್ರ ಬಿಜೆಪಿ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

Read More