Author: AIN Author

ಗದಗ:- ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಗದಗ ನಗರದ ಸಾಯಿ ಬಡಾವಣೆಯಲ್ಲಿ ಕೃಷಿ ಅಧಿಕಾರಿ ಸಹದೇವ ಯರಗೊಪ್ಪರ ಮನೆ ಮೇಲೆ ರೇಡ್ ನಡೆದಿದ್ದು, ಗದಗ ಮೂಲದ ಸಹದೇವ ಯರಗೊಪ್ಪ ಮನೆ ಸೇರಿದಂತೆ ಏಳು ಜಾಗದಲ್ಲಿ ತನಿಖೆ ನಡೆದಿದೆ. https://ainlivenews.com/ccb-police-operation-accused-of-selling-ganja-arrested/ ಗದಗನ ರೋಣ ತಾಲೂಕಿನ ಮೆಣಸಗಿಯ ಸ್ವಗೃಹದಲ್ಲೂ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಆದಾಯ ಮೀರಿ ಆಸ್ತಿ ಗಳಿಕೆ ಅನುಮಾನದ ಹಿನ್ನೆಲೆ ಈ ದಾಳಿ ನಡೆದಿದೆ. ಲೋಕಾಯುಕ್ತ ಎಸ್ ಪಿ ಸತೀಶ್ ಚಿಟಗುಬ್ಬಿ ನೇತೃತ್ವದಲ್ಲಿ ಡಿವೈಎಸ್ ಪಿ ವಿಜಯ್ ಬಿರಾದಾರ್, ಸಿಪಿಐ ರವಿ ಪುರುಷೋತ್ತಮ, ಅಯ್ಯನಗೌಡರ್, ದೀಪಾಲಿ, ಅಮರಶೆಟ್ಟರ್, ಗನಾಳ, ತಿಮಮಾಳ, ಇನ್ಸಪೆಕ್ಟರ್ ಸಾಹುಬಾಯಿ ತೇಲಿ ಸೇರಿದಂತೆ ಸಿಬ್ಬಂದಿಯಿಂದ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.

Read More

ಪಾರು ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮನ ಗೆದ್ದಿರುವ ಆದಿ ಊರೂಫ್ ಶರತ್ ಪದ್ಮನಾಭ್ ನಾಯಕನಾಗಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಶರತ್ ನಾಯಕನಾಗಿ ಬಣ್ಣ ಹಚ್ಚಿರುವ ಚೊಚ್ಚಲ ಸಿನಿಮಾಗೆ ಅನಿಮಾ ಎಂಬ ಶೀರ್ಷಿಕೆ ಇಡಲಾಗಿದೆ. ಅನಿಮಾ ಎಂದರೆ ಪ್ರತಿಬಿಂಬ ಕಾಣದ ಕನ್ನಡಿ ಎಂದರ್ಥ. ಅನಿಮಾಗೆ ವರ್ಧನ್ ಎಂ ಎಚ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ರೈತರ ಕುರಿತ ಹೊನ್ನು ಬಿತ್ಯಾರು ಎಂಬ ಕಿರುಚಿತ್ರ ಮಾಡಿದ್ದ ವರ್ಧನ್ ಈ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಟೈಟಲ್ ಪೋಸ್ಟರ್ ವಿಭಿನ್ನವಾಗಿದ್ದು, ದಟ್ಟ ಕಾಡಿನ ಮಧ್ಯೆ ಸಾಗುತ್ತಿರುವ ಕಾರು ನಾನಾ ಕಥೆಯನ್ನು ಬಿಚ್ಚಿಡುತ್ತಿದೆ,. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಿಮಾ ಸಿನಿಮಾ ಕೊನೆ ಹಂತದ ಚಿತ್ರೀಕರಣದಲ್ಲಿದೆ. ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹುಲಿಯೂರು ದುರ್ಗ ಸುತ್ತಮುತ್ತ ಈಗಾಗ್ಲೇ ಶೂಟಿಂಗ್ ನಡೆಸಲಾಗಿದೆ. ಎ ಡ್ರೀಮರ್ಸ್ ಸ್ಟುಡಿಯೋ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗ್ತಿದೆ. ಶರತ್ ನಾಯಕನಾಗಿ ನಟಿಸ್ತಿದ್ದು, ಅನುಷಾ ಕೃಷ್ಣ ನಾಯಕಿಯರಾಗಿ ಬಣ್ಣ…

Read More

ಮಂಗಳೂರು:- ಜಿಲ್ಲೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. https://ainlivenews.com/the-fight-that-started-over-the-issue-of-water-ended-in-murder/ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಕುಡುಪು ಪೆದಮಲೆ ಗ್ರಾಮದ ನಿವಾಸಿ ನಿಶಾಂತ್ ಶೆಟ್ಟಿ ಬಂಧಿತ ಆರೋಪಿ. ಈತನಿಂದ 1.50 ಲಕ್ಷ ಮೌಲ್ಯದ 6 ಕೆ.ಜಿ ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ಖರೀದಿಸಿ ತಂದು ಸಣ್ಣ ಸಣ್ಣ ಪ್ಯಾಕೆಟ್ ಮಾಡಿಕೊಂಡು ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಈತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಒಳಪೇಟೆಯಲ್ಲಿ ಗೂಡ್ಸ್ ಟೆಂಪೋದಲ್ಲಿ ಗಾಂಜಾ ಸಾಗಿಸುವಾಗ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಟ್ಟು 9.11 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಯಾದಗಿರಿ:- ಕುಡಿಯುವ ನೀರಿಗಾಗಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಜರುಗಿದೆ. ನೀರಿನ ವಿಚಾರವಾಗಿ ಅಜ್ಜಿ ಜೊತೆ ಆರೋಪಿತರು ಜಗಳ ತೆಗೆದಿದ್ದಾರೆ. ಅಜ್ಜಿ ಜೊತೆ ಜಗಳ ಮಾಡಿದಕ್ಕೆ ಮೊಮ್ಮಗ ಮದ್ಯ ಪ್ರವೇಶ ಮಾಡಿ ನೀವು ಯಾಕೆ ಜಗಳ‌ ಮಾಡಿದ್ದಿರಿ ಎಂದು ಪ್ರಶ್ನೆ ಮಾಡಿದ್ದಾನೆ. https://ainlivenews.com/bangalore-mysore-highway-toll-increase-from-a1/ ಪಶ್ನೆ ಮಾಡಿದಕ್ಕೆ ಸಂಬಂಧಿಕರಿಂದಲೇ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಹಣಮಂತ ಹಾಗೂ ಹಣಮವ್ವ ಸೇರಿ ಚಾಕು ಇರಿದು ಕೊಲೆ ಮಾಡಲಾಗಿದೆ. ನಂದಕುಮಾರ ಕಟ್ಟಿಮನಿ ( 21)ಕೊಲೆಯಾದ ಯುವಕ ಎನ್ನಲಾಗಿದೆ. ಕೊಲೆಯಾದ ನಂದಕುಮಾರ ತಮ್ಮ ಅಜ್ಜಿ ಜೊತೆ ಜಗಳ ಮಾಡಿದಕ್ಕೆ ಆರೋಪಿತರಿಗೆ ಪ್ರಶ್ನೆ ಮಾಡಿದ್ದ. ಈ ವೇಳೆ ನಂದಕುಮಾರ ತಾಯಿಗು ಹಲ್ಲೆ ನಡೆಸಲಾಗಿದೆ. ಹುಣಸಗಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.

Read More

ಬೆಂಗಳೂರು:- ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ದರ ಹೆಚ್ಚಳವಾಗಲಿದೆ. ಸಗಟು ಬೆಲೆ ಸೂಚ್ಯಂಕ (WPI) ಪ್ರಕಾರ ಟೋಲ್ ಶುಲ್ಕ ಶೇಕಡಾ 3 ರಿಂದ 14 ರಷ್ಟು ಹೆಚ್ಚಾಗಿದೆ. ಈ ಶುಲ್ಕ 2025ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ 7 (ಬೆಂಗಳೂರು-ಹೈದರಾಬಾದ್) ಟೋಲ್ ಶುಲ್ಕಗಳು 3% ಹೆಚ್ಚಿಸಲಾಗಿದೆ, STRR ಬಳಸುವ ವಾಹನಗಳು 14% ಹೆಚ್ಚು ಪಾವತಿಸಬೇಕಾಗುತ್ತದೆ. https://ainlivenews.com/rest-mandatory-for-drivers-ksrtc-put-double-duty-brakes/ 2023ರ ನವೆಂಬರ್ 17 ರಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) STRR ನ 39.6-ಕಿಮೀ ದೊಡ್ಡಬಳ್ಳಾಪುರ-ಹೊಸಕೋಟೆ ವಿಭಾಗಕ್ಕೆ ಟೋಲ್ ಸಂಗ್ರಹಿಸಲು ಪ್ರಾರಂಭಿಸಿದ ಕೇವಲ ಆರು ತಿಂಗಳ ಒಳಗೆಯೇ ಶುಲ್ಕ ಹೆಚ್ಚಳವಾಗಿದೆ. ಈ ಬಗ್ಗೆ NHAI ಯ ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ ಬ್ರಹ್ಮಂಕರ್ ಪ್ರತಿಕ್ರಿಯೆ ನೀಡಿದ್ದು, ಟೋಲ್ ಪರಿಷ್ಕರಣೆಯು “ವಾರ್ಷಿಕ, ರಾಷ್ಟ್ರವ್ಯಾಪಿ” ವ್ಯಾಯಾಮವಾಗಿದೆ ಎಂದು ತಿಳಿಸಿದ್ದಾರೆ. ಎಸ್‌ಟಿಆರ್‌ಆರ್‌ನ ದಾಬಾಸ್ ಪೇಟೆ-ದೊಡ್ಡಬಳ್ಳಾಪುರ ವಿಭಾಗದಲ್ಲಿ (42 ಕಿಮೀ) ಟೋಲ್ ಶುಲ್ಕವನ್ನು ಏಪ್ರಿಲ್‌ನಲ್ಲಿ ಪರಿಚಯಿಸಲಾಗುವುದು ಎಂದು…

Read More

ಬೆಂಗಳೂರು:-ತನ್ನ ಬಸ್ ಚಾಲಕರಿಗೆ ಡಬಲ್ ಡ್ಯೂಟಿಯಿಂದ KSRTC ಮುಕ್ತಿ ನೀಡಿದೆ. ಅಲ್ಲದೆ, ವಿಶ್ರಾಂತಿ ಪಡೆಯುವುದು ಕಡ್ಡಾಯ ಎಂದು ಆದೇಶಿಸಲಾಗಿದೆ. ಇಂದಿನಿಂದ ರಾತ್ರಿ ಮತ್ತು ದೂರದ ಪ್ರಯಾಣದ ನಂತರ ಚಾಲಕರು ವಿಶ್ರಾಂತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಎಂಟು ಗಂಟೆಗಳಿಗಿಂತ ಹೆಚ್ಚು ಡ್ಯೂಟಿ ಮಾಡಿಸುವಂತಿಲ್ಲ. 8 ಗಂಟೆಗಿಂತ ಅಧಿಕ ಮತ್ತು ರಾತ್ರಿ ವೇಳೆ ಹೆಚ್ಚುವರಿ ಡ್ಯೂಟಿ ಮಾಡಿದರೆ ನಾಲ್ಕೈದು ಗಂಟೆಗಳ ಕಾಲ ವಿಶ್ರಾಂತಿಗೆ ಅವಕಾಶ ನೀಡಬೇಕು. ವಾರದಲ್ಲಿ ಕೆಲಸದ ಅವಧಿ 48 ಗಂಟೆ ದಾಟುವಂತಿಲ್ಲ ಎಂದು ಸೂಚಿಸಲಾಗಿದೆ. https://ainlivenews.com/mp-ganeshamurthy-who-tried-to-commit-suicide-by-consuming-pesticides-died/ ಕೆಎಸ್​ಆರ್​ಟಿಸಿ ಬಸ್​ಗಳಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಏನೆಂಬುದನ್ನು ಪತ್ತೆಹಚ್ಚಲು ಸಮಿತಿ ರಚನೆ ಮಾಡಲಾಗಿತ್ತು. ಅದರಂತೆ ಡಬಲ್ ಡ್ಯೂಟಿ ಮತ್ತು ರಾತ್ರಿ ವಿಶ್ರಾಂತಿಯನ್ನು ನೀಡದಿರುವುದರಿಂದ ನಿದ್ದೆಗೆಟ್ಟು ಬಸ್ ಚಲಾಯಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತಿವೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಮಿತಿಯು ಕೆಎಸ್​ಆರ್​ಟಿಸಿಗೆ ವರದಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ, ವರದಿ ಆಧರಿಸಿ ಕೆಎಸ್​ಆರ್​ಟಿಸಿ ಬಸ್ ಚಾಲಕರಿಗೆ ಡಬಲ್​ ಡ್ಯೂಟಿಗೆ ಬ್ರೇಕ್ ಹಾಕಿ ವಿಶ್ರಾಂತಿಗೆ ಅವಕಾಶ ನೀಡಲಾಗಿದೆ.

Read More

ಕೊಯಮತ್ತೂರು:- ಕಳೆದ ಎರಡು ದಿನಗಳ ಹಿಂದೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಡಿಎಂಕೆ ಸಂಸದ ಗಣೇಶಮೂರ್ತಿ ನಿಧನರಾಗಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಈರೋಡ್‌ನಿಂದ ಡಿಎಂಕೆ ಟಿಕೆಟ್‌ನಲ್ಲಿ ಆಯ್ಕೆಯಾದ ಗಣೇಶಮೂರ್ತಿ ಅವರಿಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿತ್ತು ಆಸ್ಪತ್ರೆಗೆ ದಾಖಲಿಸಿದ ಬಳಿಕ ಕೀಟನಾಶಕ ಸೇವಿಸಿರುವ ವಿಚಾರ ಬೆಳಕಿಗೆ ಬಂದಿತ್ತು. https://ainlivenews.com/protest-against-the-scourge-of-wind-fan-vehicles/ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಇಬ್ಬರು ವೈದ್ಯರು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಮಧ್ಯಾಹ್ನ 2.30 ರ ಸುಮಾರಿಗೆ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಡಿಎಂಕೆ ನಾಯಕ ದುರೈ ವೈಕೋ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಣೇಶಮೂರ್ತಿ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಇಸಿಎಂಒ ಚಿಕಿತ್ಸೆಯಲ್ಲಿದೆ ಎಂದು ಹೇಳಿದ್ದಾರೆ. ಸಚಿವ ಎಸ್.ಮುತ್ತುಸಾಮಿ, ಮೊಡಕುರಿಚಿಯ ಬಿಜೆಪಿ ಶಾಸಕ ಡಾ.ಸಿ.ಸರಸ್ವತಿ, ಎಐಎಡಿಎಂಕೆಯ ಕೆ.ವಿ.ರಾಮಲಿಂಗಂ ಮುಂತಾದ ರಾಜಕೀಯ ಮುಖಂಡರು ಆಸ್ಪತ್ರೆಗೆ ಧಾವಿಸಿ ಗಣೇಶಮೂರ್ತಿ ಅವರ ಆರೋಗ್ಯ ವಿಚಾರಿಸಿದರು. ಅವರ ಈ ನಿರ್ಧಾರಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ ಎಂದು ಹೇಳಲಾಗಿದೆ.

Read More

ಗದಗ: ವಿಂಡ್ ಫ್ಯಾನ್ ವಾಹನಗಳ ಹಾವಳಿ ಖಂಡಿಸಿ ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮಸ್ಥರು ವಿಂಡ್ ಫ್ಯಾನ್ ಸಾಮಗ್ರಿ ಹೊತ್ತೊಯ್ಯೋ ವಾಹನಗಳನ್ನು ತಡೆದು ನಿಲ್ಲಿಸಿ ಪ್ರತಿಭಟನೆಯನ್ನ ನಡೆಸಿದ್ದಾರೆ. https://ainlivenews.com/always-indebted-to-the-party-congress-candidate-radhakrishna-doddamani/ ಕೆಲ ದಿನಗಳಿಂದ ಗ್ರಾಮದಲ್ಲಿ ಭಾರಿ ಗಾತ್ರದ ವಿಂಡ್ ಫ್ಯಾನ್ ವಾಹನಗಳು ಓಡಾಡುತ್ತಿದ್ದು ಇದರಿಂದ ಗ್ರಾಮದ ಎಲ್ಲ ರಸ್ತೆಗಳು ಹಾಳಾಗಿ ಹೋಗಿವೆ. ವಿಂಡ್ ಫ್ಯಾನ್ ಹಾವಳಿಯಿಂದ ಜನರಿಗೆ ಬಹಳ ತೊಂದರೆಯಾಗುತ್ತಿದೆ ವಿಂಡ್ ಫ್ಯಾನುಗಳ ಭಾರಿ ಗಾತ್ರದ ವಾಹನಗಳು ಗ್ರಾಮದಲ್ಲಿ ಓಡಾಡಬಾರದು ಜೊತೆಗೆ ಈಗಾಗಲೇ ಹಾಳು ಮಾಡಿರುವ ರಸ್ತೆಗಳನ್ನು ದುರಸ್ತಿ ಮಾಡಿಕೊಡುವಂತೆ ಪಟ್ಟು ಹಿಡಿದಿದ್ರು. ವಿಂಡ್ ಫ್ಯಾನ್ ವಾಹನಗಳನ್ನು ತಡೆದು ನಿಲ್ಲಿಸಿ ಪ್ರತಿಭಟನೆಯನ್ನ ನಡೆಸಿದ್ರು.

Read More

ಕಲಬುರ್ಗಿ :- ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಪಕ್ಷಕ್ಕೆ ಸದಾ ಋಣಿಯಾಗಿರುವುದಾಗಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಹೇಳಿದರು. https://ainlivenews.com/a-case-in-point-is-the-rameswaram-cafe-in-bangalore/#google_vignette ಕಲಬುರ್ಗಿಯ ಕಾಂಗ್ರೆಸ್ ಪಕ್ಷದ ಕಚೇರಿ ಆವರಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಬೇರೆಯವರ ಬಗ್ಗೆ ಮಾತನಾಡುವುದಕ್ಕಿಂತ ನಮ್ಮ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ ಮತ ಕೇಳಬೇಕು ಎಂದ್ರು. ಕಲಬುರ್ಗಿ ಕ್ಷೇತ್ರಕ್ಕೆ ಇತಿಹಾಸವಿದೆ. ಹೆಸರಾಂತ ಮಹನೀಯರು ಇಲ್ಲಿ ಆಯ್ಕೆಯಾಗಿ ಹೋಗಿದ್ದಾರೆ. ನನ್ನನ್ನು ಈಗ ಅಭ್ಯರ್ಥಿಯಾಗಿ ಮಾಡಿದ್ದಾರೆ. ನೀವೆಲ್ಲ ನನಗೆ ಆರಿಸಿ ಕಳಿಸಿ ಎಂದು ಮನವಿ ಮಾಡಿದ್ರು.

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಎನ್​ಐಎ ವಶಕ್ಕೆ ಪಡೆದಿದೆ. ಶಂಕಿತರ ಜೊತೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಮತ್ತಿಬ್ಬರನ್ನು ವಶಕ್ಕೆ ಪಡೆದಿದೆ. ಸದ್ಯ ವಶಕ್ಕೆ ಪಡೆಯಲಾಗಿರುವ ಇಬ್ಬರು ನಿಷೇಧಿತ ‘ಅಲ್​ ಹಿಂದ್​ ಟ್ರಸ್ಟ್’​​ ಜೊತೆ ನಂಟು ಹೊಂದಿದ್ದರು. https://ainlivenews.com/srh-failed-to-break-this-special-record-of-rcb-despite-a-brilliant-batting/ ರಾಮೇಶ್ವರಂ ಕೆಫೆ ಸ್ಫೋಟ ಮತ್ತು ಹಿಂದಿನ ಕೆಲವು ಸ್ಫೋಟ ಪ್ರಕರಣಗಳ ನಡುವೆ ಸಾಮ್ಯತೆ ಇರುವುದರಿಂದ ಹಳೇ ಸ್ಫೋಟ ಪ್ರಕರಣಗಳಲ್ಲಿ ಶಾಮೀಲಾದ ಹಲವರ ಮೇಲೆ ಎನ್​ಐ ನಿಗಾ ಇರಿಸಿದೆ. ಈಗಾಗಲೇ ಜೈಲಿನಲ್ಲಿರುವ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದ ಎನ್ಐಎ, ತಲೆಮರೆಸಿಕೊಂಡಿರುವ ಇನ್ನೂ ಹಲವರ ಮೇಲೆ ಕಣ್ಣಿಟ್ಟಿದೆ. ಶಂಕಿತರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ನೆರವು ನೀಡಿದವರ ಮೇಲೂ ನಿಗಾ ಇಟ್ಟಿದೆ. ಸದ್ಯ ಉಗ್ರ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವವರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗುತ್ತಿದೆ. ಶಂಕಿತ ವ್ಯಕ್ತಿಗಳಿಂದ ಸ್ಫೋಟ ನಡೆಸಿದವರ ಬಗ್ಗೆ ಸುಳಿವು ಸಿಗುವ ಸಾಧ್ಯತೆ ಇದೆ. ತಾಂತ್ರಿಕವಾಗಿ ಅಥವಾ ಮೌಖಿಕವಾಗಿ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ. ಹೀಗಾಗಿ…

Read More