Author: AIN Author

ಚೆನ್ನೈ: ತಮಿಳುನಾಡಿನ ಈರೋಡ್‌ನ ಹಾಲಿ ಲೋಕಸಭಾ ಸಂಸದ ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK) ಎ.ಗಣೇಶಮೂರ್ತಿ (Ganeshamurthi) ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎಂಡಿಎಂಕೆ ನಾಯಕ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮಾ.24 ರಂದು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಈರೋಡ್‌ನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಪ್ರಾಥಮಿಕ ತಪಾಸಣೆಯ ನಂತರ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಬಳಿಕ ಅವರನ್ನು ಸಮೀಪದ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇಂದು ಮುಂಜಾನೆ 5:05 ರ ಹೊತ್ತಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆ ದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೂರು ಬಾರಿ ಸಂಸದರಾಗಿದ್ದ ಗಣೇಶಮೂರ್ತಿ ಅವರು ಎಂಡಿಎಂಕೆ ಶ್ರೇಣಿಯಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದರು. https://ainlivenews.com/to-be-under-sugar-cholesterol-weight-control-you-should-eat-pulses/ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಈರೋಡ್ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷವು ಟಿಕೆಟ್ ನೀಡಲು ನಿರಾಕರಿಸಿದ್ದಕ್ಕಾಗಿ ಅವರು ಅಸಮಾಧಾನಗೊಂಡಿದ್ದರು. ಡಿಎಂಕೆ ಈರೋಡ್‌ನಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ತಿರುಚ್ಚಿ ಕ್ಷೇತ್ರವನ್ನು ಎಂಡಿಎಂಕೆಗೆ ನೀಡಲು ನಿರ್ಧರಿಸಿದೆ. ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಅವರ ಪುತ್ರ ದುರೈ ವೈಕೋ ಅವರನ್ನು ತಿರುಚ್ಚಿಯಿಂದ…

Read More

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಸಹೋದರ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಶೀರ್ವಾದ ಪಡೆದಿದ್ದಾರೆ. ರಾಮನಗರಕ್ಕೆ ಹೊರಡುವ ಮೊದಲು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಅಣ್ಣ ಡಿ.ಕೆ. ಶಿವಕುಮಾರ್ ಹಾಗೂ ಅತ್ತಿಗೆ ಉಷಾ ಶಿವಕುಮಾರ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಬಳಿಕ ಡಿಕೆಶಿ ಹಾಗೂ ಡಿ.ಕೆ. ಸುರೇಶ್ ಅವರು ಕನಕಪುರಕ್ಕೆ ತೆರಳಿದ್ದಾರೆ. ಕನಕಪುರದ ಕೆಂಕೇರಮ್ಮ ದೇವಾಲಯಕ್ಕೆ ಆಗಮಿಸಿ, ನಾಮಪತ್ರ ಸಲ್ಲಿಕೆಗೂ ಮುನ್ನ ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಡಿಕೆಶಿ ತಾಯಿ ಗೌರಮ್ಮ, ಪತ್ನಿ ಉಷಾ, ಮಗಳು ಐಶ್ವರ್ಯ ಜೊತೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇವತ್ತು ಡಿ.ಕೆ ಸುರೇಶ್ ಅವರಿಗೆ ಮೊದಲ ಬಿ ಫಾರಂ ಕೊಟ್ಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿ, ನಾನು ನಮ್ಮ ಮನೆ ದೇವರು ಕೆಂಕೇರಮ್ಮ, ಕಬ್ಬಾಳಮ್ಮ ದೇವಸ್ಥಾನಕ್ಕೆ ತೆರಳಿ ಆಶಿರ್ವಾದ ಪಡೆಯುತ್ತೇವೆ. ನಂತರ…

Read More

ಹೈದರಾಬಾದ್‌: ಸಿಕ್ಸರ್‌ ಬೌಂಡರಿಗಳ ಆಟದಲ್ಲಿ ಸನ್‌ರೈಸರ್ಸ್‌ ಹೈದಾಬಾದ್‌ (Sunrisers Hyderabad) ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ 31 ರನ್‌ಗಳ ಜಯ ಸಾಧಿಸಿದೆ. ಗೆಲ್ಲಲು 278 ರನ್‌ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 246 ರನ್‌ ಹೊಡೆದು ಸತತ ಎರಡನೇ ಸೋಲನ್ನು ಅನುಭವಿಸಿತು. ಎರಡು ತಂಡಗಳು ಮೊತ್ತ 500 ರನ್‌ಗಳ ಗಡಿಯನ್ನು ದಾಟಿದ್ದು ವಿಶೇಷ. https://ainlivenews.com/sunrisers-hyderabad-beat-rcbs-record/ ಮೂರು ದಾಖಲೆ ಸೃಷ್ಟಿ: ಒಟ್ಟು 523 ರನ್‌ ಸಿಡಿದಿದ್ದು ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲು. ಇಂದಿನ ಪಂದ್ಯದಲ್ಲಿ 31 ಬೌಂಡರಿ, 38 ಸಿಕ್ಸ್‌ ಸಿಡಿಯಲ್ಪಟ್ಟಿದೆ. ಐಪಿಎಲ್‌ನಲ್ಲಿ ಇಷ್ಟು ಬೌಂಡರಿ, ಸಿಕ್ಸ್‌ ಚಚ್ಚುವ ಮೂಲಕ ಮತ್ತೊಂದು ದಾಖಲೆ ಬರೆಯಲಾಗಿದೆ. ಇಂದಿನ ಪಂದ್ಯದಲ್ಲಿ ಹೈದರಾಬಾದ್‌ 277 ರನ್‌ ಹೊಡೆಯುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಗೆ ಹೈದರಾಬಾದ್‌ ಪಾತ್ರವಾಯಿತು. ಈ ಹಿಂದೆ ಅತಿ ಹೆಚ್ಚು ರನ್‌ ಸಿಡಿಸಿದ ದಾಖಲೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ…

Read More

ನವದೆಹಲಿ: ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ. ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್‌ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್‌ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್‌ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ. https://ainlivenews.com/to-be-under-sugar-cholesterol-weight-control-you-should-eat-pulses/ ಮಹಾನಗರಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ: ದೆಹಲಿಯಲ್ಲಿ ಪೆಟ್ರೋಲ್ ಬೆಲೆ 94.76…

Read More

ಹೈದರಾಬಾದ್‌: ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಬ್ಯಾಟರ್‌ಗಳರು ಸಿಕ್ಸರ್‌, ಬೌಂಡರಿಗಳನ್ನು ಸಿಡಿಸಿದ ಪರಿಣಾಮ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ಐಪಿಎಲ್‌ನಲ್ಲಿ (IPL) ಹೊಸ ದಾಖಲೆ ಬರೆದಿದೆ. ಮೂರು ವಿಕೆಟ್‌ ನಷ್ಟಕ್ಕೆ 277 ರನ್‌ ಹೊಡೆಯುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಗೆ ಎಸ್‌ಆರ್‌ಹೆಚ್‌ (SRH) ಪಾತ್ರವಾಯಿತು. ಈ ಹಿಂದೆ ಅತಿ ಹೆಚ್ಚು ರನ್‌ ಸಿಡಿಸಿದ ದಾಖಲೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಹೆಸರಿನಲ್ಲಿ ಇತ್ತು.  2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ 5 ವಿಕೆಟ್‌ ನಷ್ಟಕ್ಕೆ 263 ರನ್‌ ಹೊಡೆದಿತ್ತು. ಈ ಪಂದ್ಯದಲ್ಲಿ ಕ್ರಿಸ್‌ ಗೇಲ್‌ ಔಟಾಗದೇ 175 ರನ್‌ ಚಚ್ಚಿದ್ದರು. https://ainlivenews.com/sehwag-praised-mohammad-siraj-with-open-voice-the-reason/ ಟಾಸ್‌ ಸೋತು ಬ್ಯಾಟ್‌ ಮಾಡಿದ ಹೈದರಾಬಾದ್‌ ಬ್ಯಾಟರ್‌ಗಳು ಆರಂಭದಿಂದಲೇ ಚಚ್ಚಲು ಆರಂಭಿಸಿದರು. ಮೊದಲ ವಿಕೆಟಿಗೆ 4.1 ಓವರ್‌ಗಳಲ್ಲಿ 45 ರನ್‌ ಬಂದಿತ್ತು. ಎರಡನೇ ವಿಕೆಟಿಗೆ ಟ್ರಾವಿಸ್‌ ಹೆಡ್‌ ಮತ್ತು ಅಭಿಷೇಕ್‌ ಶರ್ಮಾ 23 ಎಸೆತಗಳಲ್ಲಿ 68…

Read More

ಬೆಂಗಳೂರು : ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಅಧಿಕೃತ ಚಾಲನೆ ಸಿಗಲಿದೆ. ಇಂದಿನಿಂದ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು. ಏಪ್ರಿಲ್ 4 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 5 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 8 ರಂದು ನಾಮಪತ್ರ (ಉಮೇದುವಾರಿಕೆ) ವಾಪಸ್ ಪಡೆಯಲು ಕೊನೆಯ ದಿನವಾಗಿದೆ. https://ainlivenews.com/a-case-in-point-is-the-rameswaram-cafe-in-bangalore/ ರಾಜ್ಯದಲ್ಲಿ ಒಟ್ಟು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 26 ರಂದು ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ಎರಡನೇ ಹಂತದ ಮತದಾದನ ಮೇ 7 ರಂದು ನಡೆಯಲಿದೆ. ಜೂನ್​ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭ ಇಂದು ರಾಜ್ಯದ ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆಶರಂಭವಾಗಲಿದೆ. ಏಪ್ರಿಲ್​…

Read More

ನವದೆಹಲಿ: ಅಸ್ಸಾಂ ರಾಜಕಾರಣಿಯೊಬ್ಬರು ನೋಟುಗಳನ್ನೇ ಹಾಸಿಗೆ ಮಾಡಿಕೊಂಡು ಅದರ ಮೇಲೆ ಮಲಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಅಸ್ಸಾಂನ ಉದಲಗಿರಿ ಜಿಲ್ಲೆಯ ಭೈರಗುರಿಯಲ್ಲಿ ಗ್ರಾಮ ಸಭೆ ಅಭಿವೃದ್ಧಿ ಸಮಿತಿಯ (VCDC) ಅಧ್ಯಕ್ಷ ಬೆಂಜಮಿನ್ ಬಾಸುಮತರಿ (Benjamin Basumatary) 500 ರೂ. ನೋಟಿನಲ್ಲಿ ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. https://twitter.com/PramodBoroBTR/status/1772907264078189040?ref_src=twsrc%5Etfw%7Ctwcamp%5Etweetembed%7Ctwterm%5E1772907264078189040%7Ctwgr%5Ebc99ef11a90e2ce057ed1eb44268b8884976bb90%7Ctwcon%5Es1_&ref_url=https%3A%2F%2Fpublictv.in%2Fcorruption-accused-assam-politician-seen-sleeping-on-bed-of-notes%2F ಬೋಡೋಲ್ಯಾಂಡ್‌ನ ನಾಯಕ ಬೆಂಜಮಿನ್ ಬಾಸುಮತರಿ ಮೇಲೆ ಪ್ರಧಾನ ಮಂತ್ರಿಗಳ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಮತ್ತು ನರೇಗಾ ಯೋಜನೆಯಲ್ಲಿ ಬಡ ಫಲಾನುಭವಿಗಳಿಂದ ಲಂಚ ಪಡೆದ ಆರೋಪ ಇದೆ. ಫೋಟೋಗೆ ಸ್ಪಷ್ಟನೆ: ಫೋಟೋ ನೋಡಿ ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (UPPL) ಪಕ್ಷ ಸ್ಪಷ್ಟನೆ ನೀಡಿದೆ. ಪಿಪಿಎಲ್ ಮುಖ್ಯಸ್ಥ ಪ್ರಮೋದ್ ಬೋರೋ ಈ ವ್ಯಕ್ತಿಗೂ ಪಕ್ಷಕ್ಕೂ ಈಗ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಬೆಂಜಮಿನ್ ಬಾಸುಮತರಿ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 2024ರ ಜನವರಿ 10 ರಂದು…

Read More

ರಾಮನಗರ: ಡಿ. ಕೆ ಸುರೇಶ್ ರವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇಂದು 11 ಗಂಟೆಗೆ ರಾಮನಗರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ, https://ainlivenews.com/to-be-under-sugar-cholesterol-weight-control-you-should-eat-pulses/ ಗೃಹ ಸಚಿವರಾದ ಜಿ ಪರಮೇಶ್ವರ್ ಗ್ಯಾರಂಟಿ ಅನುಷ್ಠಾನಗಳ ರಾಜ್ಯ ಅಧ್ಯಕ್ಷರಾದ ಶ್ರೀ ಹೆಚ್ ಎಂ ರೇವಣ್ಣ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಒಳಪಡುವ  ಶಾಸಕರುಗಳಾದ ಶ್ರೀ  ಇಕ್ಬಾಲ್ ಹುಸೇನ್ ಶ್ರೀ ಹೆಚ್.ಸಿ ಬಾಲಕೃಷ್ಣ ರವರು ಶ್ರೀ ಬಿ.ಶಿವಣ್ಣ, ಶ್ರೀ ಹೆಚ್.ಡಿ ರಂಗನಾಥ್, ವಿಧಾನ ಪರಿಷತ್ ಸದಸ್ಯರಾದ ಶ್ರೀ  ಎಸ್ ರವಿ ಭಾಗಿಯಾಗಲಿದ್ದಾರೆ.

Read More

ಚಿತ್ರದುರ್ಗ: ಹಿರಿಯೂರಿನ ಎರಡು ಕಡೆಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸ್ ಮತ್ತು ಎಫ್ ಎಸ್ಟಿ ತಂಡದ ಅಧಿಕಾರಿಗಳು ದಾಳಿ‌ ನಡೆಸಿ ಅಧಿಕೃತ ದಾಖಲೆ ಇಲ್ಲದ 3.55 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನದ ಒಡವೆಗಳು ಹಾಗೂ 6.80 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ಹಿರಿಯೂರಿನ  ನಗರದಲ್ಲಿ ಪೊಲೀಸರು ಅನುಮಾನಸ್ಪದವಾಗಿ ಚೀಲವಿಡಿದು ಓಡಾಡುತ್ತಿದ್ದವರನ್ನು ವಿಚಾರಿಸಿ ಬ್ಯಾಗ್ ನ್ನು ಪರಿಶೀಲಿಸಿದಾಗ ಬ್ಯಾಗಿನಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿದ್ದ 3.55 ಕೋಟಿಗೂ ಹೆಚ್ಚಿನ ಮೌಲ್ಯದ ಚಿನ್ನದ ಒಡವೆಗಳು ಸಿಕ್ಕಿವೆ.  ದಾವಣಗೆರೆಯಿಂದ ಹಿರಿಯೂರಿನ ರಂಗನಾಥ ಜೂಯೆಲರ್ಸ್ ಗೆ ಕೊಡಲು ತಂದಿರುವುದಾಗಿ ಹೇಳಿದರೂ ಅವುಗಳಿಗೆ ಅಧಿಕೃತ ದಾಖಲೆಗಳಿಲ್ಲ. ಆದ್ದರಿಂದ ಒಡವೆಗಳನ್ನು  ಪೊಲೀಸರು ವಶಪಡಿಸಿಕೊಂಡು ತಾಲೂಕು‌ ಖಜಾನೆಗೆ ಒಪ್ಪಿಸಿದ್ದಾರೆ. ಇನ್ನೊಂದೆಡೆ ಮಸ್ಕಲ್ ಬಳಿ ಎಫ್ ಎಸ್ಟಿ ತಂಡದ ಅಧಿಕಾರಿಗಳು ಐಚೇರ್ ವಾಹನ ತಡೆದು ಪರಿಶೀಲಿಸಿದಾಗ ಅದರಲ್ಲಿ 6.80 ಸಾವಿರ ನಗದು ಸಿಕ್ಕಿದೆ. https://ainlivenews.com/to-be-under-sugar-cholesterol-weight-control-you-should-eat-pulses/ ಇದು ಆಂಧ್ರ ಪ್ರದೇಶದ ನಂದ್ಯಾಲದಿಂದ ಶೇಂಗಾ ಮಾರಾಟ ಮಾಡಲು ಬಬ್ಬೂರಿಗೆ ಬಂದಿದ್ದು, ಶೇಂಗಾ ಮಾರಾಟ ಮಾಡಿದಾಗ ಬಂದಿರುವ ಹಣ ಎಂದು‌ ಹೇಳಲಾಗುತ್ತಿದೆ. ಆದರೆ ಇದಕ್ಕೂ…

Read More

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, ಮಾಜಿ ಸಚಿವ ಗೋವಿಂದ್ ಕರಜೋಳ ಗೆ ಟಿಕೆಟ್ ನೀಡಿದೆ. ಹೌದು  ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಅವರ ಬದಲಿಗೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ್ ಎಂ ಕಾರಜೋಳ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕೇಂದ್ರ ಸಮಾಜ ಕಲ್ಯಾಣ ಮತ್ತು ಸಬಲೀಕರಣ ರಾಜ್ಯ ಸಚಿವರಾಗಿರುವ ನಾರಾಯಣಸ್ವಾಮಿ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಹೀಗಾಗಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಪಕ್ಷದ ಮೂಲಗಳ ತಿಳಿಸಿವೆ. ಚಿತ್ರದುರ್ಗ ಮೂಲದವರಲ್ಲದ ನಾರಾಯಣಸ್ವಾಮಿ ಈ ಹಿಂದೆ ಬೆಂಗಳೂರು ಸಮೀಪದ ಆನೇಕಲ್‌ನಿಂದ ಶಾಸಕರಾಗಿದ್ದರು. https://ainlivenews.com/to-be-under-sugar-cholesterol-weight-control-you-should-eat-pulses/ ಇನ್ನು ಒಟ್ಟು 28 ಕ್ಷೇತ್ರಗಳ ಪೈಕಿ ಬಿಜೆಪಿ ತಾನು ಸ್ಪರ್ಧಿಸಲಿರುವ ಎಲ್ಲಾ 25 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿದೆ.ಉಳಿದ ಮೂರು ಸ್ಥಾನಗಳಾದ ಮಂಡ್ಯ, ಹಾಸನ ಮತ್ತು ಕೋಲಾರದಲ್ಲಿ ಎನ್‌ಡಿಎ ಮೈತ್ರಿಕೂಟ ಪಕ್ಷವಾದ ಜೆಡಿಎಸ್ ಸ್ಪರ್ಧಿಸಲಿದೆ.

Read More