Author: AIN Author

ಬೆಂಗಳೂರು: ಮಾ.1 ರಂದು ಐಟಿಪಿಎಲ್ ಬಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಉಗ್ರರ ಕೃತ್ಯ ಎನ್ನುವುದು ಬಯಲಾಗಿತ್ತು. ಆದರೆ ಕೃತ್ಯ ಎಸಗಿದವರು ಮಾತ್ರ ಪತ್ತೆ ಇರಲಿಲ್ಲ. ಸತತ ಹಲವು ದಿನಗಳ ಕಾರ್ಯಾಚರಣೆ ಬಳಿಕ ಉಗ್ರ ಗುಂಪಿನ ಸಂಚುಕೋರನನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಜಾಮಿಲ್ ಷರೀಫ್ ಬಂಧಿತ ವ್ಯಕ್ತಿ. https://ainlivenews.com/playing-among-friends-a-young-man-who-died-in-a-black-blast/ ಬಂಧಿತ ಮುಜಾಮಿಲ್ ಷರೀಫ್ 7 ದಿನ ಎನ್‌ಐಎ ಕಸ್ಟಡಿಗೆ ನಿನ್ನೆ NIA ವಿಶೇಷ ಕೋರ್ಟಿಗೆ ಹಾಜರುಪಡಿಸಿದ್ದ ಅಧಿಕಾರಿಗಳು ಏಪ್ರಿಲ್ 3ರವರೆಗೂ ಎನ್‌ಐಎ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಬಾಂಬ್ ತಯಾರಿಕೆಯ ಪ್ರಮುಖ ಆರೋಪಿ ಮುಜಾಮಿಲ್ ಬಾಂಬರ್‌ಗೆ ಸಹಾಯ ಮಾಡಿದ್ದ ಆರೋಪಿ ಮುಜಾಮಿಲ್ ಷರೀಫ್ ಮುಜಾಮಿಲ್ ಷರೀಫ್ ಸ್ಪೋಟಕ್ಕೆ ಬೇಕಾದ ವಸ್ತುಗಳು ಹಾಗೂ ಬೇಕಾದ ಸಹಾಯವನ್ನು ದುಷ್ಕೃತ್ಯ ಎಸಗಿದವರಿಗೆ ಸರಬರಾಜು ಮಾಡಿದ್ದ ಎನ್ನಲಾಗಿದೆ. ಈತ ಒಂದೂವರೆ ವರ್ಷಗಳ‌ ಹಿಂದೆ ಬೆಂಗಳೂರಿನ ಬಸವೇಶ್ವರ ನಗರದ ಹೋಟಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಎನ್‌ಐಎ ನಡೆಸಿದ ತನಿಖೆ ವೇಳೆ ಮುಜಾಮಿಲ್‌ ಷರೀಫ್‌, ಬಾಂಬ್‌ ಸ್ಫೋಟಕ್ಕೆ…

Read More

ನವದೆಹಲಿ: ಆದಾಯ ತೆರಿಗೆ ಇಲಾಖೆಯಿಂದ (Income Tax Department) ಕಾಂಗ್ರೆಸ್‌ಗೆ (Congress) ಡಿಮ್ಯಾಂಡ್‌ ನೋಟಿಸ್‌ ಬಂದಿದೆ. ಚುನಾವಣೆ ಹೊತ್ತಲ್ಲಿ ದಂಡ, ಬಡ್ಡಿ ಸೇರಿದಂತೆ 1,700 ಕೋಟಿ ರೂಪಾಯಿ ಕಟ್ಟುವ ಅನಿವಾರ್ಯತೆ ಕಾಂಗ್ರೆಸ್‌ ಮುಂದಿದೆ. ತೆರಿಗೆ ನೋಟಿಸ್‌ಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಅದಾದ ಒಂದು ದಿನದ ನಂತರ ಆದಾಯ ತೆರಿಗೆ ಇಲಾಖೆಯಿಂದ 1,700 ಕೋಟಿ ರೂ. ಮೊತ್ತದ ಡಿಮ್ಯಾಂಡ್‌ ನೋಟಿಸ್‌ನ್ನು ಕಾಂಗ್ರೆಸ್ ಸ್ವೀಕರಿಸಿದೆ. https://ainlivenews.com/according-to-vastu-if-you-keep-bamboo-like-this-in-your-house-it-is-good-luck/ ಹೊಸ ಸೂಚನೆಯು 2017-18 ರಿಂದ 2020-21 ರವರೆಗಿನ ದಂಡ ಮತ್ತು ಬಡ್ಡಿಯನ್ನು ಒಳಗೊಂಡಿರುತ್ತದೆ. ಆದಾಯ ತೆರಿಗೆ ಅಧಿಕಾರಿಗಳು 200 ಕೋಟಿ ರೂ. ದಂಡವನ್ನು ವಿಧಿಸಿ ಮತ್ತು ಅದರ ಹಣವನ್ನು ಸ್ಥಗಿತಗೊಳಿಸಿದ ನಂತರ ಕಾಂಗ್ರೆಸ್ ಈಗಾಗಲೇ ಹಣದ ಕೊರತೆಯನ್ನು ಎದುರಿಸುತ್ತಿದೆ. ಪ್ರಕರಣದಲ್ಲಿ ಪಕ್ಷವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇದೆ. ಏಪ್ರಿಲ್ 19 ರಿಂದ ಪ್ರಾರಂಭವಾಗುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯು ತೆರಿಗೆ ಅಧಿಕಾರಿಗಳನ್ನು ವಿಪಕ್ಷಗಳ ವಿರುದ್ಧ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ನಮ್ಮನ್ನು…

Read More

ಬೆಂಗಳೂರು ಗ್ರಾಮಾಂತರ:  ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ವೇಳೆ ಚುನಾವಣಾಧಿಕಾರಿಗಳಿಂದ ಚೆಕ್ ಪೋಸ್ಟ್ ಬಳಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ   2 ಲಕ್ಷ ರೂಪಾಯಿ ನಗದು  ಪತ್ತೆಯಾಗಿದ್ದು ವಶಕ್ಕೆ ಪಡೆದಿದ್ದಾರೆ. https://ainlivenews.com/playing-among-friends-a-young-man-who-died-in-a-black-blast/ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಚೆಕ್ ಪೋಸ್ಟ್ ನಲ್ಲಿ ಹಣ ಪತ್ತೆಯಾಗಿದ್ದು  ಮಧುರೆ ಗ್ರಾಮದ ಕಿರಣ್ ಕುಮಾರ್ ಎಂಬುವವರಿಗೆ ಸೇರಿದ ಎರಡು ಲಕ್ಷ ನಗದು ವಶಕ್ಕೆ ಸಮರ್ಪಕ ದಾಖಲೆಗಳನ್ನು ಒದಗಿಸಿದ ಹಿನ್ನೆಲೆ ಹಣ ಸೀಜ್ ಮಾಡಿದ ಚುನಾವಣ ಸಿಬ್ಬಂದಿ ದೊಡ್ಡ ಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಿಕುಂಟೆ ಚೆಕ್ ಪೋಸ್ಟ್  ಬಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಚೆಕ್ ಪೋಸ್ಟ್

Read More

ಬೆಂಗಳೂರು : ಅವರಿಬ್ಬರು ಬೆಸ್ಟ್ ಫ್ರೆಂಡ್ಸ್​. ಒಂದಷ್ಟು ಕಾಮಿಡಿ, ಹುಡುಗಾಟ ಮಾಡಿಕೊಂಡು ಹ್ಯಾಪಿ ಆಗಿದ್ರು. ಆದರೆ, ಆ ಹುಡುಗಾಟವೇ ಸ್ನೇಹಿತನ ಉಸಿರು ನಿಲ್ಲಿಸಿದೆ! ಹೌದು, ಸ್ವಲ್ಪ ಎಚ್ಚರ ತಪ್ಪಿದ್ರೆ ಮೋಜಿನಾಟವೂ ಮಸಣಕ್ಕೆ ದಾರಿಯಾಗಬಲ್ಲದು. ಸಿಲಿಕಾನ್​ ಸಿಟಿಯಲ್ಲಿ ನಡೆದ ಘನಘೋರ ಘಟನೆಯೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. https://ainlivenews.com/b-y-vijayendra-draped-bjp-shawl-for-jds-youth-leaders/ ಏರ್​​ಪ್ರೆಶರ್​ ಪೈಪ್​​​ನಿಂದ ಗುದದ್ವಾರಕ್ಕೆ ಗಾಳಿ ಹಿಡಿದ ಪರಿಣಾಮ ಸ್ನೇಹಿತ ಸಾವನ್ನಪ್ಪಿರುವ ವಿಚಿತ್ರ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ. ಯೋಗಿಶ್ ಮೃತ (28) ಮೃತ ಯುವಕ. ಮುರಳಿ ಎಂಬಾತನೇ ಸ್ನೇಹಿತ ಸಾವಿಗೆ ಕಾರಣನಾದ ಯುವಕ. ಏರ್ ಪ್ಲೇಷರ್ ಪೈಪ್ ನಿಂದ ಇಬ್ಬರು ಆಟ ಆಡಲು ಮುಂದಾಗಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ಇದೇ ಮಾರ್ಚ್ 25ರಂದು ಮೃತ ಯೋಗಿಶ್ ಥಣಿಸಂದ್ರದ CNS ಬೈಕ್​ ಸರ್ವೀಸ್​ ಸೆಂಟರ್​​ನಲ್ಲಿ ಬೈಕ್ ಸರ್ವೀಸ್ ಮಾಡಿಸಲು ಹೋಗಿದ್ದ. ತನ್ನ ಸ್ನೇಹಿತ ಮುರಳಿ ಕೂಡ ಸರ್ವೀಸ್ ಸೆಂಟರ್ ಬಳಿ ಬಂದಿದ್ದ. ಈ ವೇಳೆ ಇಬ್ಬರೂ ಏರ್​​ಪ್ರೆಶರ್​ ಪೈಪ್​​​ನಿಂದ ಆಟ ಆಡಲು ಮುಂದಾಗಿದ್ದರು. ಮೊದಲಿಗೆ…

Read More

ಶ್ರೀನಗರ: ವಾಹನವೊಂದು 300 ಅಡಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ 10 ಜನ ಸಾವಿಗೀಡಾದ ಘಟನೆ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ನಡೆದಿದೆ. ರಾಂಬನ್ ಜಿಲ್ಲೆಯ ಬ್ಯಾಟರಿ ಚೆಶ್ಮಾ ಎಂಬ ಸ್ಥಳದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರೆಲ್ಲ ಶ್ರೀನಗರಕ್ಕೆ ತೆರಳುತ್ತಿದ್ದ ವಲಸೆ ಕಾರ್ಮಿಕರು ಎಂದು ತಿಳಿದು ಬಂದಿದೆ. https://ainlivenews.com/according-to-vastu-if-you-keep-bamboo-like-this-in-your-house-it-is-good-luck/ ಭಾರೀ ಮಳೆಯ ನಡುವೆ, ರಾಜ್ಯ ವಿಪತ್ತು ನಿರ್ವಹಣಾ ಕಾರ್ಯಕರ್ತರು ಮತ್ತು ಪೊಲೀಸರು ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕಾರ್ಮಿಕರ ಸಾವಿಗೆ ಸಂತಾಪ ಸೂಚಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.

Read More

ಬೆಂಗಳೂರು: ಲೋಕಸಭಾ ಚುನಾವಣೆ- 2024 ಕ್ಕೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಲು ಸಮನ್ವಯ ಸಭೆಯನ್ನು ನಡೆಸಿದ್ದಾರೆ . ಈ ವೇಳೆ ಲೋಕಸಭಾ ಚುನಾವಣೆಯನ್ನು ಒಟ್ಟಿಗೆ ಎದುರಿಸೋ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ. https://ainlivenews.com/apart-from-modi-there-is-no-other-good-leader-for-the-country-hd-deve-gowda/ ಸಮನ್ವಯ ಸಭೆಯನ್ನು ನಗರದ ರೇಡಿಸನ್ ಬ್ಲೂ ಹೋಟೆಲ್ನಲ್ಲಿ ಏರ್ಪಾಡಿಸಲಾಗಿದ್ದು ಇದೇ ವೇಳೆ ಪ್ರಮುಖವಾಗಿ ಬಿಜೆಪಿ, ಜೆಡಿಎಸ್ ಯುವ ನಾಯಕರು ಒಟ್ಟಿಗೆ ಕೈ ಕುಲುಕುತ್ತಾ ಕಾಲ ಕಳೆದಿದ್ದು ವಿಶೇಷವಾಗಿತ್ತು ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಜೊತೆ ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟಿದ್ದು ಮಾತ್ರ ಇನ್ನೊಂದು ವಿಶೇಷವಾಗಿತ್ತು. ಅಂದಹಾಗೆ ಬಿ.ವೈ ವಿಜಯೇಂದ್ರ ಅವರಿಗೂ ಜೆಡಿಎಸ್ ಪಕ್ಷದ ಶಾಲು ನೀಡುವ ಮೂಲಕ ಎರಡೂ ಪಕ್ಷದ ನಾಯಕರು ತಮ್ಮಲ್ಲಿ ಎಷ್ಟು ಸಮನ್ವಯತೆ ಇದೆ ಅನ್ನೋದನ್ನ ಸಾರಿದರು. ಬಿಜೆಪಿ, ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ,…

Read More

ಬೆಂಗಳೂರು ಗ್ರಾಮಾಂತರ:  ದೊಡ್ಡಬಳ್ಳಾಪುರದಲ್ಲಿ ಹೂವಿನ ಬೆಳೆಗೆ ಅಳವಡಿಸಿದ್ದ ಡ್ರಿಪ್ ಪೈಪ್‌, ಸೇವಂತಿ ಹೂವಿನ ಸಸಿಗಳನ್ನು ಕಿಡಿಗೇಡಿಗಳು ನಾಶಪಡಿಸಿರುವ ಘಟನೆ ತಾಲೂಕಿನ ಕೆಳಗಿನಜೂಗಾನಹಳ್ಳಿ‌ ಗ್ರಾಮದಲ್ಲಿ ತಡ ರಾತ್ರಿ ನಡೆದಿದೆ. ಗ್ರಾಮದ ರೈತ ಗಂಗಪ್ಪ ತಮ್ಮ ಜಮೀನಿನಲ್ಲಿ ತಿಂಗಳ ಹಿಂದೆ ಸಾವಿರಾರು ರೂಪಾಯಿ‌ ಖರ್ಚು ಮಾಡಿ ಸೇವಂತಿ ಹೂ‌ವಿನ ಸಸಿಗಳನ್ನು ತಮ್ಮ ಜಮೀನಿನಲ್ಲಿ ನಾಟಿ ಮಾಡಿದ್ದರು. ರೈತನ ಏಳಿಗೆ ಸಹಿಸಲಾಗದೆ ತಡ ರಾತ್ರಿ ಕಿಡಿಗೇಡಿಗಳು ಹೂವಿನ ಬೆಳೆಗೆ ಹಾಕಿದ್ದ ಡ್ರಿಪ್ ಪೈಪ್‌ ಗಳನ್ನು‌ ಹೊಡೆದು ಹಾಕಿದ್ದು, ಸೇವಂತಿ ಮತ್ತು ಬಟನ್ಸ್ ಸಸಿಗಳನ್ನು ನಾಶಪಡಿಸಿದ್ದಾರೆ. ಕೃತ್ಯ ಮುಂಜಾನೆ ಬೆಳಕಿಗೆ ಬಂದಿದ್ದು, ಒಂದು ಸಸಿಗೆ ಮೂರು ರೂಪಾಯಿ ಕೊಟ್ಟು ತಂದಿದ್ದೆ.ಫಸಲಿಗೆ ಬರುವ ಸಸಿಗಳನ್ನು ಕಿಡಿಗೇಡಿಗಳು ನಾಶ ಪಡಿಸಿದ್ದಾರೆ,ನಮಗೆ ನ್ಯಾಯ ಮತ್ತು ರಕ್ಷಣೆ ಬೇಕೆಂದು ಎಂದು ತಮ್ಮ ಅಳಲನ್ನು ತೋಡಿಕೊಂಡರು.

Read More

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. ಭಾರತೀಯ ಜನತಾದಳ ಪಾರ್ಟಿ ಮತ್ತು ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ಲೋಕಸಭಾ ಚುನಾವಣೆ- 2024 ಕ್ಕೆ ಸಂಬಂಧಿಸಿದಂತೆ ಸಮನ್ವಯ ಸಭೆಯನ್ನು ರೇಡಿಸನ್ ಬ್ಲೂ ಹೋಟೆಲ್ನಲ್ಲಿ ಏರ್ಪಡಿಸಲಾಯಿತು. ಸಮನ್ವಯ ಸಭೆಯಲ್ಲಿ ಲೋಕಸಭಾ ಚುನಾವಣೆಯನ್ನು ಒಟ್ಟಿಗೆ ಎದುರಿಸೋ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ. ಪ್ರಮುಖವಾಗಿ ಬಿಜೆಪಿ, ಜೆಡಿಎಸ್ ಯುವ ನಾಯಕರು ಒಟ್ಟಿಗೆ ಕೈ ಕುಲುಕುತ್ತಾ ಕಾಲ ಕಳೆದಿದ್ದು ವಿಶೇಷವಾಗಿತ್ತು. ಬಿಜೆಪಿ, ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಹೆಚ್‌.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್‌.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪರಿಷತ್‌ ಸದಸ್ಯ ಟಿ.ಎ.ಶರವಣ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ ಬಿ.ವೈ ವಿಜಯೇಂದ್ರ ಅವರಿಗೂ ಜೆಡಿಎಸ್ ಪಕ್ಷದ ಶಾಲು ನೀಡುವ ಮೂಲಕ ಎರಡೂ ಪಕ್ಷದ ನಾಯಕರು ತಮ್ಮಲ್ಲಿ ಎಷ್ಟು ಸಮನ್ವಯತೆ ಇದೆ ಅನ್ನೋದನ್ನ ಸಾರಿದರು.

Read More

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra siddaramaiah) ನೀಡಿದ ವಿವಾದಾತ್ಮಕ ಹೇಳಿಕೆಯನ್ನ ಬಿಜೆಪಿ ನಾಯಕರು (BJP Leaders) ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಯತೀಂದ್ರ ವಿರುದ್ಧ ಕೇಸ್‌ ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. https://ainlivenews.com/record-high-temperature-in-bengaluru-40-degrees-likely-to-rise-in-next-two-days/ ಬೆಂಗಳೂರಿನಲ್ಲಿಂದು ಬಿಜೆಪಿ-ಜೆಡಿಎಸ್‌ ಮೈತ್ರಿ (BJP JDS Alliance) ಸಮ್ಮಿಲನ ಸಭೆಗೆ ಉಭಯ ಪಕ್ಷಗಳ ನಾಯಕರು ಆಗಮಿಸುತ್ತಿದ್ದಾರೆ. ಸಭೆಗು ಮುನ್ನ ಬಿಜೆಪಿ ನಾಯಕರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಯತೀಂದ್ರ ವಿರುದ್ಧ ಕಿಡಿ ಕಾರಿದ್ದಾರೆ ಅಪ್ಪನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಹೀಗೆ. ಯತೀಂದ್ರ ಎಂದಾದ್ರೂ ಪಕ್ಷದ ಕೆಲಸ ಮಾಡಿದ್ದಾರಾ? ಅಮಿತ್‌ ಶಾ1982ರಲ್ಲಿ ಬೂತ್‌ ಅಧ್ಯಕ್ಷ ಆಗಿದ್ದರು. ಆಗ ಇವರಪ್ಪ ಇನ್ನೂ ಎಂಎಲ್‌ಎ ಕೂಡ ಆಗಿರಲಿಲ್ಲ. ಅಪ್ಪನ ದುಡ್ಡಿನಿಂದ ಶಾಸಕ ಆದವರು ಯತೀಂದ್ರ. ಆದ್ರೆ ನಾವು ವಿದ್ಯಾರ್ಥಿಗಳಾಗಿದ್ದಾಗಲೇ ನಾಯಕರಾಗಿದ್ದೆವು. ನಮ್ಮ ಮೇಲೂ ಸುಳ್ಳು ಕೇಸ್‌ ಹಾಕಿ ಗೂಂಡಾ ಕಾಯ್ದೆ ಹಾಕಿದ್ದರು. ಹಾಗಾದ ಮಾತ್ರಕ್ಕೆ ನಾನೂ ಗೂಂಡಾನಾ? ಅಪ್ಪನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಸಾಮಾನ್ಯ ಕಾರ್ಯಕರ್ತರ ಕಷ್ಟ…

Read More

ದಾವಣಗೆರೆ: ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕು. ಅವರಿಗೆ ಮಾತನಾಡುವ ಶಕ್ತಿ ಇಲ್ಲ ಎಂದು ಸಂಸದ ಸಿದ್ದೇಶ್ವರ್‌ ಪತ್ನಿ ವಿರುದ್ಧ ಶಾಸಕ ಶಾಮನೂರು ಶಿವಶಂಕರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ. ದಾವಣಗೆರೆ ಬಂಟರ ಭವನದಲ್ಲಿ ನಡೆದ ಕಾಂಗ್ರೆಸ್‌ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ ಮಾತನಾಡಿ ಈ ಹೇಳಿಕೆ ನೀಡಿದ್ದಾರೆ. ದಾವಣಗೆರೆ ಬಿಜೆಪಿ ಮಹಿಳಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ ಅವರನ್ನು ಟೀಕಿಸುವ ಭರದಲ್ಲಿ ಶಾಮನೂರು ಈ ಹೇಳಿಕೆ ನೀಡಿದ್ದಾರೆ. ದಾವಣಗೆರೆ ಬಿಜೆಪಿ ಅಭ್ಯರ್ಥಿ ದಾವಣಗೆರೆಯಿಂದ ಗೆದ್ದು ಮೋದಿಗೆ ಕಮಲದ ಹೂ ಅರ್ಪಿಸುತ್ತೇನೆ ಅಂತಾರೆ. ಮೊದಲು ದಾವಣಗೆರೆ ಜಿಲ್ಲೆಯ ಸಮಸ್ಯೆ ತಿಳಿಯಲಿ ಎಂದು ಶಾಮನೂರು ಟಾಂಗ್‌ ಕೊಟ್ಟಿದ್ದಾರೆ. https://ainlivenews.com/according-to-vastu-if-you-keep-bamboo-like-this-in-your-house-it-is-good-luck/ ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕು. ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವ ಶಕ್ತಿ ಅವರಿಗಿಲ್ಲ. ಹೀಗಾಗಿ ನಮ್ಮ ‘ಕೈ’ ಮೇಲಿದೆ ಎಂಬುದನ್ನು ನಾವು ತೋರಿಸಬೇಕು ಎಂದು ಬಿಜೆಪಿ ಅಭ್ಯರ್ಥಿಯನ್ನು ಟೀಕಿಸುವ ಭರದಲ್ಲಿ ಶಾಮನೂರು ಈ ಹೇಳಿಕೆ ನೀಡಿದ್ದಾರೆ. ವಿರೋಧ ಪಕ್ಷದವರು ಮೋದಿ.. ಮೋದಿ ಅಂತಾರೆ. ಆದರೆ…

Read More