ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರದಲ್ಲಿ ಹೂವಿನ ಬೆಳೆಗೆ ಅಳವಡಿಸಿದ್ದ ಡ್ರಿಪ್ ಪೈಪ್, ಸೇವಂತಿ ಹೂವಿನ ಸಸಿಗಳನ್ನು ಕಿಡಿಗೇಡಿಗಳು ನಾಶಪಡಿಸಿರುವ ಘಟನೆ ತಾಲೂಕಿನ ಕೆಳಗಿನಜೂಗಾನಹಳ್ಳಿ ಗ್ರಾಮದಲ್ಲಿ ತಡ ರಾತ್ರಿ ನಡೆದಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಗ್ರಾಮದ ರೈತ ಗಂಗಪ್ಪ ತಮ್ಮ ಜಮೀನಿನಲ್ಲಿ ತಿಂಗಳ ಹಿಂದೆ ಸಾವಿರಾರು ರೂಪಾಯಿ ಖರ್ಚು ಮಾಡಿ ಸೇವಂತಿ ಹೂವಿನ ಸಸಿಗಳನ್ನು ತಮ್ಮ ಜಮೀನಿನಲ್ಲಿ ನಾಟಿ ಮಾಡಿದ್ದರು.
ರೈತನ ಏಳಿಗೆ ಸಹಿಸಲಾಗದೆ ತಡ ರಾತ್ರಿ ಕಿಡಿಗೇಡಿಗಳು ಹೂವಿನ ಬೆಳೆಗೆ ಹಾಕಿದ್ದ ಡ್ರಿಪ್ ಪೈಪ್ ಗಳನ್ನು ಹೊಡೆದು ಹಾಕಿದ್ದು, ಸೇವಂತಿ ಮತ್ತು ಬಟನ್ಸ್ ಸಸಿಗಳನ್ನು ನಾಶಪಡಿಸಿದ್ದಾರೆ.
ಕೃತ್ಯ ಮುಂಜಾನೆ ಬೆಳಕಿಗೆ ಬಂದಿದ್ದು, ಒಂದು ಸಸಿಗೆ ಮೂರು ರೂಪಾಯಿ ಕೊಟ್ಟು ತಂದಿದ್ದೆ.ಫಸಲಿಗೆ ಬರುವ ಸಸಿಗಳನ್ನು ಕಿಡಿಗೇಡಿಗಳು ನಾಶ ಪಡಿಸಿದ್ದಾರೆ,ನಮಗೆ ನ್ಯಾಯ ಮತ್ತು ರಕ್ಷಣೆ ಬೇಕೆಂದು ಎಂದು ತಮ್ಮ ಅಳಲನ್ನು ತೋಡಿಕೊಂಡರು.
![](https://ainlivenews.com/wp-content/uploads/2024/01/Ad-Banner-copy-scaled.jpg)