Author: AIN Author

ಬೆಂಗಳೂರು: ಐಪಿಎಲ್​ನಲ್ಲಿಂದು RCB vs LSG ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇಂದಿನ ಪಂದ್ಯದಲ್ಲಿ ಆರ್​ಸಿಬಿ ಗೆಲ್ಲಲೇ ಬೇಕು.  ಹೌದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೇಂಟ್ಸ್ ತಂಡಗಳು ಮುಖಾಮುಖಿಯಾಲಿದ್ದು,ಇಂದು ರೋಚಕ ಪಂದ್ಯ ನಡೆಯುವ ನಿರೀಕ್ಷೆಗಳು ಇವೆ. ಪಾಯಿಂಟ್ಸ್ ಟೇಬಲ್​ನಲ್ಲಿ ಮೇಲಕ್ಕೆ ಬರಲು ಆರ್​ಸಿಬಿ ಈ ಪಂದ್ಯ ಗೆಲ್ಲಲೇ ಬೇಕು ಇದುವರೆಗೂ ಆಡಿರುವ ಮೂರು ಪಂದ್ಯಗಳಿಂದ ಎರಡು ಅಂಕ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.ಮತ್ತೊಂದೆಡೆ, ಲಕ್ನೋ ಎರಡು ಪಂದ್ಯದಿಂದ 2 ಅಂಕಗಳನ್ನು ಹೊಂದಿ ಆರನೇ ಸ್ಥಾನದಲ್ಲಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ಮೇಲೇಳಲು ಆರ್​ಸಿಬಿ ಈ ಪಂದ್ಯ ಗೆಲ್ಲಲೇ ಬೇಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ವೆಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್ , ಮೊಹಮ್ಮದ್…

Read More

ಮೈಸೂರು: ಪಕ್ಷದ ತತ್ವ-ಸಿದ್ಧಾಂತ ಮತ್ತು ನಾಯಕತ್ವವನ್ನು ಒಪ್ಪಿಕೊಂಡು ಬರುವ ಬೇರೆ ಪಕ್ಷಗಳ ನಾಯಕರಿಗೆ ಸ್ವಾಗತವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯ  ಅವರು ಅಮಿತ್ ಶಾ ಅವರ ಬಗ್ಗೆ ಸಿಬಿಐ ಕೋರ್ಟಿಗೆ ಸಲ್ಲಿಸಿರುವ ವರದಿಯನ್ನು ಆಧಾರವಾಗಿಟ್ಟುಕೊಂಡು ಕಾಮೆಂಟ್ ಮಾಡಿದ್ದಾರೆಯೇ ಹೊರತು ಅವರನ್ನು ಅವಮಾನಿಸಿಬೇಕೆಂಬ ಉದ್ದೇಶದಿಂದ ಯಾವುದನ್ನೂ ಹೇಳಿಲ್ಲ ಎಂದರು. ರಾಜ್ಯದ ಹಿರಿಯ ರಾಜಕಾರಣಿ ಮತ್ತು ಹಾಲಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ರನ್ನು ತಾವು ಭೇಟಿಯಾಗಿಲ್ಲ, https://ainlivenews.com/big-update-for-credit-card-holders-change-in-rule-from-april-1/ ಆದರೆ ಸಚಿವರಾದ ಹೆಚ್ ಸಿ ಮಹದೇವಪ್ಪ ಮತ್ತು ಕೆ ವೆಂಕಟೇಶ್ ಭೇಟಿಯಾಗಿರುವರೆಂದು ಹೇಳಿದ ಸಿದ್ದರಾಮಯ್ಯ, ಅವರು ಏನು ಭರವಸೆ ನೀಡಿದ್ದಾರೆನ್ನುವುದನ್ನು ಅವರಿಬ್ಬರಿಗೆ ಕೇಳಬೇಕು, ಫೋನಲ್ಲೂ ತಾನು ಅವರೊಂದಿಗೆ ಮಾತಾಡಿಲ್ಲ ಎಂದರು. ಅಪರೇಶನ್ ಹಸ್ತದ ಬಗ್ಗೆ ಮಾರ್ಮಿಕವಾಗಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಕ್ಷದ ತತ್ವ-ಸಿದ್ಧಾಂತ ಮತ್ತು ನಾಯಕತ್ವವನ್ನು ಒಪ್ಪಿಕೊಂಡು ಬರುವ ಬೇರೆ ಪಕ್ಷಗಳ ನಾಯಕರಿಗೆ ಸ್ವಾಗತವಿದೆ ಎಂದು ಹೇಳಿದರು.

Read More

ರಾಜಸ್ಥಾನ್ ರಾಯಲ್ಸ್ ವಿರುದ್ಧದ IpL ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ಸೋಲಿಗೆ ನಾಯಕ ಹಾರ್ದಿಕ್ ಪಾಂಡ್ಯ ಔಟಾಗಿದ್ದು ಪ್ರಮುಖ ಕಾರಣವಾಯಿತು. ಇಲ್ಲಿಂದು ಪಂದ್ಯ ಪುನಃ ಆರ್​ಆರ್ ಕಡೆ ವಾಲಿತು. ಇದರ ನಡುವೆ ಆತಿಥೇಯ ಅಭಿಮಾನಿಗಳು ಪದೇ ಪದೇ ಪಾಂಡ್ಯ ಅವರನ್ನು ಗೇಲಿ ಮಾಡುತ್ತಿದ್ದರು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ, ನನ್ನ ವಿಕೆಟ್ ಪಂದ್ಯವನ್ನು ಬದಲಾಯಿಸಿತು, ನಾವು ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎಂದು ಹೇಳಿದ್ದಾರೆ. https://ainlivenews.com/a-person-died-due-to-doctors-negligence/ ಇದು ಕಠಿಣ ರಾತ್ರಿ. ಈ ಪಂದ್ಯದಲ್ಲಿ ನಾವು ಬಯಸಿದ ರೀತಿಯಲ್ಲಿ ಆರಂಭ ಪಡೆದುಕೊಂಡಿಲ್ಲ. ನಾವು 150 ಅಥವಾ 160 ರನ್ ಗಳಿಸುವ ಅವಕಾಶವನ್ನು ಹೊಂದಿದ್ದೆವು ಎಂದು ನಾನು ಭಾವಿಸುತ್ತೇನೆ, ಆದರೆ ನನ್ನ ವಿಕೆಟ್ ಆಟವನ್ನು ಬದಲಾಯಿಸಿತು. ನಾನು ಇನ್ನಷ್ಟು ಉತ್ತಮವಾಗಿ ಏನಾದರು ಮಾಡಬಹುದಿತ್ತು,” ಎಂದು ಪಾಂಡ್ಯ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಪಿಚ್ ಆರಂಭದಲ್ಲಿ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿತ್ತು. ಇದನ್ನು…

Read More

ಯಾದಗಿರಿ:- ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಬಲಿಯಾಗಿದ್ದಾನೆ. https://ainlivenews.com/vishwanath-is-like-our-brother-there-is-no-difference/ ವಾಂತಿ ಮತ್ತು ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ವನದುರ್ಗ ಗ್ರಾಮದ ಭೀಮರಾಯ (60) ಎಂಬುವವರನ್ನು ಕುಟುಂಬಸ್ಥರು ಶಹಾಪುರ‌ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಇಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಸೂಚನೆ ನೀಡಿದ್ದಾರೆ. ಅದರಂತೆ ರೋಗಿ ಭೀಮರಾಯ ಅವರ ಪುತ್ರ ತಕ್ಷಣವೇ ಯಾದಗಿರಿ ಜಿಲ್ಲಾಸ್ಪತ್ರೆಗೆ ತಂದೆಯನ್ನು ಕರೆದುಕೊಂಡು ಬಂದು ಸೇರಿಸಿದ್ದಾರೆ. ಆದರೆ ರೋಗಿ ಆಸ್ಪತ್ರೆಯಲ್ಲಿ ದಾಖಲಾಗಿ ಎರಡು ಗಂಟೆ ಕಳೆದರೂ ವೈದ್ಯರು ಚಿಕಿತ್ಸೆ ನೀಡಿಲ್ಲ. ಕಾಲಿಗೆ ಬಿದ್ದು ಅಂಗಲಾಚಿದರೂ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಕೊನೆಗೆ ರೋಗಿ ನರಳಿ ನರಳಿ ಆಸ್ಪತ್ರೆಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆಂದು ಭೀಮರಾಯ ಅವರ ಪುತ್ರ ಆರೋಪಿಸಿದ್ದಾರೆ. ಆಸ್ಪತ್ರೆ ಮುಂದೆ ಶವ ಇಟ್ಟು ಆಕ್ರೋಶ ಹೊರ ಹಾಕಿದ್ದಾರೆ

Read More

ನೆಲಮಂಗಲ:- ವಿಶ್ವನಾಥ್ ನಮ್ಮ ಸಹೋದರರಂತೆ, ಭಿನ್ನಾಭಿಪ್ರಾಯ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಹೇಳಿಕೆ ನೀಡಿದ್ದಾರೆ. https://ainlivenews.com/fire-accident-in-auto-mobile-shop/ ಈ ಸಂಬಂಧ ನೆಲಮಂಗಲದಲ್ಲಿ ಮಾತನಾಡಿದ ಅವರು, ವಿಶ್ವನಾಥ್ ರವರು ನಮ್ಮ ನಮ್ಮ ನಾಯಕರು. ಎಲ್ಲಾ ನಮ್ಮ ‌ನಾಯಕರು ಒಟ್ಟಿಗೆ ಇದ್ದಾರೆ. ನಮ್ಮ ಎರಡು ಪಕ್ಷದ ನಾಯಕರು ಒಂದೇ ಕುಟುಂಬದ ಸದಸ್ಯರು. ಎರಡು ಪಕ್ಷದ ಒಗ್ಗಟ್ಟು ಹೆಚ್ಚಿಗೆ ಆಗಿದೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನನ್ನ ಗೆಲವು ನೂರಕ್ಕೆ ನೂರು. ವಿಶ್ವನಾಥ್ ನಮ್ಮ ಸಹೋದರ ಸಮಾನರು. ಸಣ್ಣ‌ ಪುಟ್ಟ ವಿಚಾರ ನಾವು ಬಗೆ ಹರಿಸಿಕೊಳ್ಳುತ್ತೇವೆ. ಯಾರಿಂದ ನನಗೆ ಸರ್ಟಿಫಿಕೇಟ್ ಬೇಕಾಗಿಲ್ಲ ಭಗವಂತ ಇದ್ದಾನೆ ಎಂದು ವಿಶ್ವಾನಾಥ್ ಹೇಳಿಕೆಗೆ ಸುಧಾಕರ್ ತಿರುಗೇಟು ಕೊಟ್ಟಿದ್ದಾರೆ.

Read More

ಬೆಂಗಳೂರು:- ನಗರದ ಜೆ.ಸಿ.ರೋಡ್ ನ ಆಟೋ ಮೊಬೈಲ್ ಶಾಪ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ರಾತ್ರಿ 10:30 ಕ್ಕೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. https://ainlivenews.com/arent-police-constables-hats-worth-a-dime-what-is-it-home-minister/ ಜರ್ನಲಿಸ್ಟ್ ಕಾಲೋನಿಯಲ್ಲಿರುವ ಶಶಿಕಲಾ ಬಿಲ್ಡಿಂಗ್ ನಲ್ಲಿದ್ದ ಆಟೊಮೊಬೈಲ್ ಶಾಪ್ ನಲ್ಲಿ ಈ ಅವಘಡ ಸಂಭವಿಸಿದೆ. ಶಾಪ್ ನಲ್ಲಿದ್ದ ಟಯರ್ ,ಆಯಲ್ ನಿಂದಾಗಿ ಬೆಂಕಿ ಮತ್ತಷ್ಟು ತೀವ್ರತೆ ಪಡೆದುಕೊಂಡಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ 4 ವಾಹನಗಳಿಂದ ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಬೆಂಕಿ ನಂದಿಸುವ ಕಾರ್ಯ ನೋಡಲು ಗುಂಪು ಗುಂಪಾಗಿ ಜನ ನಿಂತ ದೃಶ್ಯ ಕಂಡು ಬಂದಿದೆ. ಕೂಡಲೇ ಜನರನ್ನ ಸ್ಥಳದಿಂದ ಪೊಲೀಸರು ಚದುರಿಸಿದ್ದಾರೆ. ಸದ್ಯ ಯಾವುದೇ ಪ್ರಾಣ ಹಾನಿ ಯಾಗಿಲ್ಲ ಎನ್ನಲಾಗಿದೆ.

Read More

ಬೆಂಗಳೂರು:- ಮಾನ್ಯ ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆ ನೋಡಲೇಬೇಕಾದ ಸ್ಟೋರಿ ಇದು. https://ainlivenews.com/bajrang-dal-found-a-vehicle-transporting-illegal-cows/ ಪೊಲೀಸ್ ಪೇದೆಗಳ ಟೋಪಿಗಳಿಗೆ ಕಿಂಚಿತ್ತೂ ಬೆಲೆ ಇಲ್ವಾ ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ರಸ್ತೆ ಬದಿಯಲ್ಲಿ ಮದ್ಯದ ಬಾಟಲಿಗಳ ಮಧ್ಯೆ ಕಸದಂತೆ ಪೊಲೀಸ್ ಪೇದೆ ಟೋಪಿಗಳು ಬಿದ್ದು ನಾರುತ್ತಿವೆ. ರೇಸ್ ಕೋರ್ಸ್ ರಸ್ತೆಯ ಸಚಿವರುಗಳ ಅಧಿಕೃತ ನಿವಾಸದ ಬಳಿಯೇ ಇಂತಹ ನಾಚಿಕೆಗೇಡಿನ ಘಟನೆ ಜರುಗಿದೆ. ಸಾರ್ವಜನಿಕರ ರಕ್ಷಣೆಗೆ ಇರುವ ಪೊಲೀಸರ ಸಮವಸ್ತ್ರಕ್ಕೆ ರಕ್ಷಣೆ ಇಲ್ಲವಾ ಎಂಬ ಪ್ರಶ್ನೆ ಉದ್ಭವಿಸಿದೆ

Read More

ತುಮಕೂರು:-ಅಕ್ರಮ ಗೋವುಗಳ ಸಾಗಣೆ ಮಾಡುತ್ತಿದ್ದ ವಾಹನವನ್ನು ಬಜರಂಗದಳ ಪತ್ತೆಹಚ್ಚಿದೆ. ತುಮಕೂರಿನ ಟೋಲ್ ಬಳಿ 20 ಗೋವುಗಳ ಸಾಗಾಟ ಬೆಳಕಿಗೆ ಬಂದಿದೆ. https://ainlivenews.com/a-childless-woman-is-sure-to-conceive-if-she-sleeps-with-this-piece-of-rock/ ಚಿತ್ರದುರ್ಗದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆ ಅಕ್ರಮ ಸಾಗಾಣೆ ಆರೋಪ ಕೇಳಿ ಬಂದಿದೆ. ಕಂಟೇನರ್ ನಲ್ಲಿ 20 ಗೋವುಗಳನ್ನು ಹಿಂಸಾತ್ಮಕ ರೀತಿ ಅಕ್ರಮ ಕಸಾಯಿ ಖಾನೆಗೆ ಸಾಗಿಸುವ ವೇಳೆ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಕಂಟೇನರ್ ತಪಾಸಣೆ ವೇಳೆ ಬಜರಂಗದಳ ಕಾರ್ಯಕರ್ತರಿಂದ ಗೋವುಗಳ ರಕ್ಷಣೆ ಮಾಡಲಾಗಿದೆ. ಗೋ ಹತ್ಯೆ ನಿಷೇಧ ಕಾನೂನು ಕಾಯ್ದೆ 2020ರ ಅನ್ವಯ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಬೆಂಗಳೂರು:- ಸಣ್ಣ ಬಂಡೆಗಳಿಗೆ ಜನ್ಮ ನೀಡುವ ಪರ್ವತ ಉತ್ತರ ಪೋರ್ಚುಗಲ್‌ನಲ್ಲಿದೆ. ಇದನ್ನು ಗರ್ಭಿಣಿ ಕಲ್ಲು ಎಂದೂ ಕರೆಯುತ್ತಾರೆ. ಸುಮಾರು ಒಂದು ಕಿಲೋಮೀಟರ್ ಉದ್ದ ಮತ್ತು 600 ಮೀಟರ್ ಅಗಲವಿರುವ ಈ ಪರ್ವತವು ಗ್ರಾನೈಟ್ ಕಲ್ಲುಗಳಿಂದ ಮಾಡಲ್ಪಟ್ಟಿದೆ, ಇದರ ಬಂಡೆಗಳು ಸುಮಾರು 300 ಮಿಲಿಯನ್ ವರ್ಷಗಳಷ್ಟು ಹಳೆಯವು. 2 ರಿಂದ 12 ಸೆಂಟಿಮೀಟರ್‌ಗಳ ನಡುವಿನ ಬಂಡೆಗಳು ಸಾಮಾನ್ಯವಾಗಿ ಮೇಲ್ಭಾಗದಿಂದ ಚಾಚಿಕೊಂಡಿರುತ್ತವೆ. ಇವನ್ನು ನೋಡಿದರೆ ಮಲೆನಾಡಿನ ಮಕ್ಕಳೇನೋ ಅನ್ನಿಸುತ್ತದೆ.. https://ainlivenews.com/ban-on-parking-in-these-places-in-bangalore/ ಈ ಬಂಡೆಗಳನ್ನು ಹತ್ತಿರದಿಂದ ನೋಡಿದಾಗ ಸಣ್ಣ ಅಂಡಾಕಾರದ ಕಲ್ಲಿನ ಉಂಡೆಗಳಿಂದ ಸುತ್ತುವರಿದಿರುವಂತೆ ತೋರುತ್ತದೆ. ಈ ಬಂಡೆಗಳ ಹೊರ ಪದರವು ಬಯೋಟೈಟ್‌ನಿಂದ ಮಾಡಲ್ಪಟ್ಟಿದೆ, ಇದು ಅಭ್ರಕದ ಪ್ರಕಾರವಾಗಿದೆ. ಮಳೆ ಅಥವಾ ಇಬ್ಬನಿ ನೀರು ಅದರ ಬಿರುಕುಗಳಿಗೆ ಸಿಲುಕಿದಾಗ, ಚಳಿಗಾಲ ಬಂದಾಗ ಈ ಸಣ್ಣ ಬಂಡೆಗಳು ಸಂಪೂರ್ಣವಾಗಿ ಹೆಪ್ಪುಗಟ್ಟುತ್ತವೆ. ಈ ಪರ್ವತವನ್ನು ನೋಡಿದರೆ ದೊಡ್ಡ ಗ್ರಾನೈಟ್ ಕಲ್ಲುಗಳು ಈ ಚಿಕ್ಕ ಬಂಡೆಗಳನ್ನು ಹೊರಕ್ಕೆ ತಳ್ಳುತ್ತಿರುವಂತೆ ತೋರುತ್ತದೆ. ಈ ಪರ್ವತದಿಂದ ಇಂತಹ ಸಣ್ಣ ಬಂಡೆಗಳು ಹೇಗೆ ಹೊರಬರುತ್ತವೆ…

Read More

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು vs ಲಕ್ನೋ ಸೂಪರ್​ ಜೈಂಟ್ಸ್ ಪಂದ್ಯ ಇಂದು ನಡೆಯಲಿದೆ. ಪಂದ್ಯ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಡೆಯವರೆಗೆ ರಸ್ತೆ ಬಳಕೆದಾರರ ಅನುಕೂಲ ಮಾಡಿಕೊಡುವ ಸಲುವಾಗಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್​ ಇಲಾಖೆ ತಿಳಿಸಿದೆ. https://ainlivenews.com/april-10-secondary-pu-result/ ಪಂದ್ಯ ನಡೆಯುವ ಹಿನ್ನೆಲೆಯಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲಯಗಡೆಯನ್ನು ನಿಷೇಧಿಸಲಾಗಿದೆ. ಆದರೆ ಕ್ರಿಕೆಟ್​ ಪ್ರೇಮಿಗಳ ಅನುಕೂಲಕ್ಕಾಗಿ ಸಾರ್ವಜನಿಕ ವಾಹನಗಳ ನಿಲುಗಡೆಗೆ ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ. ರಾತ್ರಿ 7:30ಕ್ಕೆ RCB vs LSG ಪಂದ್ಯ ಆರಂಭವಾಗಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮಧ್ಯಾಹ್ನ 3 ಗಂಟೆಯಿಂದಲೆ ಕ್ರೀಡಾಂಗಣ ಸುತ್ತಮುತ್ತ ವಾಹನ ನಿಲುಗಡೆ ನಿಷೇಧಿಸಲಾಗಿದೆ ಕ್ವೀನ್ಸ್​ ರಸ್ತೆ, ಎಂಜಿ ರಸ್ತೆ, ಕಬ್ಬನ್​ ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್​ ಸ್ಟ್ರೀಟ್​ ರಸ್ತೆ, ಸೆಂಟ್​ ಮಾರ್ಕ್ಸ್​ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಿ ಬಾ ರಸ್ತೆ, ಅಂಬೇಡ್ಕರ್​ ವೀದಿ ರಸ್ತೆ, ಟ್ರಿನಿಟಿ ವೃತ್ತ,…

Read More