Author: AIN Author

ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಸ್ಟಾರ್ ಸೋನುಗೌಡಗೆ ಜಾಮೀನು ದೊರೆತಿದೆ. https://ainlivenews.com/food-poisoning-in-mangalore-case-increase/ ಇದೀಗ ಸೋನುಗೌಡ ಅವರಿಗೆ ಏಪ್ರಿಲ್ 4 ಅಂದರೆ ನಿನ್ನೆ ಅವರಿಗೆ ಜಾಮೀನು ಸಿಕ್ಕಿದೆ. ಇಂದು ಮಧ್ಯಾಹ್ನ ಅವರು ಬಿಡುಗಡೆ ಆಗೋ ಸಾಧ್ಯತೆ ಇದೆ. ಪಿಡಿಜೆ ಕೋರ್ಟ್ ಸೋನು ಗೌಡಗೆ ಜಾಮೀನು ಮಂಜೂರು ಮಾಡಿದೆ​​. 1 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ ಮೇಲೆ ಅವರಿಗೆ ಜಾಮೀನು ನೀಡಲು ಕೋರ್ಟ್ ಒಪ್ಪಿದೆ. ಈ ಷರತ್ತುಗಳನ್ನು ಪಾಲಿಸಿದ ಬಳಿಕ ಅವರು ಬಿಡುಗಡೆ ಆಗಲಿದ್ದಾರೆ ಎನ್ನಲಾಗಿದೆ.

Read More

ಮಂಗಳೂರು:- ಮಂಗಳೂರಿನಲ್ಲಿ ಫುಡ್ ಪಾಯಿಸನ್ ಕೇಸ್ ಹೆಚ್ಚಳವಾಗುತ್ತಿದ್ದು, ನೀರು ಕುಡಿಯುವಾಗ ಎಚ್ಚರ ಇರಲಿ ಎಂದು ತಜ್ಞರು ಸಲಹೆ ಕೊಟ್ಟಿದ್ದಾರೆ. ಹೆಚ್ಚುತ್ತಿರುವ ಬಿಸಿಲಿನ ತಾಪ ಮತ್ತು ನೀರಿನ ಗುಣಮಟ್ಟದಲ್ಲಿನ ಬದಲಾವಣೆಗಳು ಈ ಸಮಸ್ಯೆಗೆ ಕಾರಣವಾಗಿರಬಹುದು ಎಂದು ಆರೋಗ್ಯ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಕ್ಕಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 100 ಮಂದಿ ಫುಡ್​ ಪಾಯಿಸನ್ ಅಥವಾ ವಿಷಾಹಾರ ಸಮಸ್ಯೆಯಿಂದ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿರುವುದಾಗಿ ವರದಿಯಾಗಿದೆ. https://ainlivenews.com/traffic-ban-on-bannerghatta-main-road-for-one-year/ ವಿವಿಧ ಕಾರಣಗಳಿಂದ ನಾವು ಸೇವಿಸುವ ಆಹಾರ ವಿಷವಾಗಿ ಪರಿಣಮಿಸುತ್ತದೆ. ಆದರೂ ಕಲುಷಿತ ನೀರು ಮುಖ್ಯ ಕಾರಣ ಎಂದು ಆಯುರ್ ಸ್ಪರ್ಶ ಆಸ್ಪತ್ರೆಯ ಆಹಾರ ಮತ್ತು ಪೌಷ್ಟಿಕಾಂಶ ತಜ್ಞೆ ಸೌಜನ್ಯ ಸತೀಶ್ ಶಂಕರ್ ವಿವರಿಸಿದ್ದಾರೆ. ತಾಪಮಾನ ಪ್ರಮಾಣ ಹೆಚ್ಚುತ್ತಿರುವಾಗ ಹೆಚ್ಚು ನೀರನ್ನು ಸೇವಿಸುವುದು ಅತ್ಯಗತ್ಯ. ಆದರೆ ಅದರ ಶುದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಕಲುಷಿತ ನೀರು ಸೇವನೆ ಮುಖ್ಯ ಕಾರಣವಾಗುತ್ತದೆ. ಇಷ್ಟೇ ಅಲ್ಲದೆ, ಆಹಾರದಲ್ಲಿರುವ ಕಲ್ಮಶಗಳು, ಆಹಾರದಲ್ಲಿನ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು,…

Read More

ಬೆಂಗಳೂರು:- ಲಕ್ಕಸಂದ್ರ ಮೆಟ್ರೋ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಅನುಕೂಲವಾಗುವ ಉದ್ದೇಶದಿಂದ ಇಂದಿನಿಂದ ಬನ್ನೇರುಘಟ್ಟ ರಸ್ತೆಯ 1 ಕಿಲೋ ಮೀಟರ್ ಸಂಚಾರ ಬಂದ್ ಮಾಡಲಾಗುವುದು ಎಂದು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ. https://ainlivenews.com/night-operation-hasta-jds-leaders-of-channapatnam-join-kai/ ಬನ್ನೇರುಘಟ್ಟ ರಸ್ತೆಯ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಏಪ್ರಿಲ್ 5 ರಿಂದ ಒಂದು ವರ್ಷದವರೆಗೆ ಮುಚ್ಚಲಾಗುತ್ತಿದೆ. ಲಕ್ಕಸಂದ್ರ ಮೆಟ್ರೋ ನಿಲ್ದಾಣವು 21.26 ಕಿ.ಮೀ ಪಿಂಕ್ ಲೈನ್‌ನ ಭಾಗವಾಗಿದ್ದು, ಮುಂದಿನ ವರ್ಷ ತೆರೆಯಲಿದೆ. ಮೈಕೋ ಬಂಡೆ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ ಡೈರಿ ಸರ್ಕಲ್‌ನಿಂದ ವಾಹನಗಳಿಗೆ ಹೋಗುವ ರಸ್ತೆಯನ್ನು ಏಪ್ರಿಲ್ 1 ರಂದು ಮುಚ್ಚಲು ಪ್ರಾರಂಭಿಸಬೇಕಾಗಿತ್ತು. ಆದರೆ, ನಾಲ್ಕು ದಿನ ಹಿಂದಕ್ಕೆ ತಳ್ಳಲಾಯಿತು. ಜೊತೆಗೆ ಸವಾರರ ದೃಷ್ಟಿಯಿಂದ, ಟ್ರಾಫಿಕ್ ಪೊಲೀಸರು ವಾಹನ ಬಳಕೆದಾರರಿಗೆ ಈ ಕೆಳಗಿನ ತಿರುವುಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಡೈರಿ ವೃತ್ತದಿಂದ ಆನೆಪಾಳ್ಯ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ಮೈಕೋ ಬಂಡೆ ಸಿಗ್ನಲ್ ಬಳಿ ಬಲ ತಿರುವು ಪಡೆದು ನ್ಯೂ ಮೈಕೋ ಲಿಂಕ್ ರಸ್ತೆ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ…

Read More

ಬೆಂಗಳೂರು:- ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಜೆಡಿಎಸ್ ಪಕ್ಷದಿಂದ ಆಯ್ಕೆಯಾದ ನಗರಸಭೆ ಅಧ್ಯಕ್ಷ ಸೇರಿದಂತೆ 9 ಮಂದಿ ಸದಸ್ಯರು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ತಡರಾತ್ರಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಚನ್ನಪಟ್ಟಣ ನಗರಸಭೆಯ ಅಧ್ಯಕ್ಷ ಪ್ರಶಾಂತ್, ಸದಸ್ಯರಾದ ರೇವಣ್ಣ, ಸತೀಶ್ ಬಾಬು, ಶ್ರೀನಿವಾಸಮೂರ್ತಿ, ಲೋಕೇಶ್, ನಾಗೇಶ್, ಸೈಯದ್ ರಫೀಕ್, ಅಭಿದಾಭಾನು, ಭಾನುಪ್ರಿಯಾ ಸೇರಿದಂತೆ ಪಕ್ಷೇತರ ಸದಸ್ಯೆಯಾದ ಉಮಾ ಎಂಬವರು ಬೆಂಗಳೂರಿನ ಡಿಸಿಎಂ ನಿವಾಸದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದಾರೆ. https://ainlivenews.com/rain-is-likely-in-more-than-25-districts-of-karnataka-after-april-8/ ಈ ಮೂಲಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಬಿಗ್ ಶಾಕ್ ಕೊಟ್ಟಿದ್ದಾರೆ. ಚನ್ನಪಟ್ಟಣ ನಗರಸಭೆಯ ಒಟ್ಟು ಜೆಡಿಎಸ್ ಸದಸ್ಯರ ಪೈಕಿ ಮೂರನೇ ಒಂದರಷ್ಟು ಮಂದಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದು, ತಮ್ಮನ್ನು ಕಾಂಗ್ರೆಸ್ ಸದಸ್ಯರೆಂದು ಪರಿಗಣಿಸಿ ನಗರಸಭೆಯಲ್ಲಿ ತಮಗೆ ಕಾಂಗ್ರೆಸ್ ಸದಸ್ಯರ ಜೊತೆ ಕೂರಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಮೂಲಕ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಕರೆಸಿ ಶಕ್ತಿ ಪ್ರದರ್ಶನ ಮಾಡಿದ್ದ…

Read More

ಬೆಂಗಳೂರು:- ಏಪ್ರಿಲ್ 8ರ ಬಳಿಕ ಕರ್ನಾಟಕದ 25 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್​ 8 ರಂದು ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. https://ainlivenews.com/sweet-news-for-farmers-the-price-of-sheep-and-goats-has-increased/ ಏಪ್ರಿಲ್​ 9ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಯಾದಗಿರಿ, ಹಾವೇರಿ, ರಾಯಚೂರು, ವಿಜಯಪುರ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ, ಹಾಸನ, ಕೊಡಗು, ಚಿತ್ರದುರ್ಗ, ಶಿವಮೊಗ್ಗ, ಮಂಡ್ಯ, ಮೈಸೂರು, ರಾಮನಗರ, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಮುಂದಿನ 3 ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತಷ್ಟು ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದೆ, ಎಚ್​ಎಎಲ್​ನಲ್ಲಿ 35.9 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.5 ಡಿಗ್ರಿ ಸೆಲ್ಸಿಯಸ್​…

Read More

ರೈತರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ರಂಜಾನ್, ಯುಗಾದಿ ಹಿನ್ನೆಲೆ, ಕುರಿ, ಮೇಕೆ ಬೆಲೆ ಏರಿಕೆ ಆಗಿದೆ. ಈ ಹಿಂದೆ 20 ಕೆ.ಜಿ.ತೂಕದ ಕುರಿ ₹ 13 ಸಾವಿರ ಇದ್ದದ್ದು ಈಗ ₹ 15 ಸಾವಿರಕ್ಕೆ ಏರಿಕೆಯಾಗಿದೆ. https://ainlivenews.com/is-it-a-habit-to-eat-breakfast-without-brushing-your-teeth-in-the-morning/ ಒಂದು ಮೇಕೆಗೆ ₹ 12 ಸಾವಿರ ಇದ್ದದ್ದು ₹ 14 ಸಾವಿರಕ್ಕೆ ಏರಿಕೆಯಾಗಿದೆ ಎರಡೂ ಹಬ್ಬಗಳು ಒಂದೇ ಬಾರಿಗೆ ಬಂದಿರುವ ಕಾರಣ, ಕುರಿ, ಮೇಕೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವರ್ಷದ ತೊಡಕಿಗೆ ಉತ್ತಮ ಬೆಲೆ ಸಿಗುತ್ತದೆ ಎನ್ನುವ ಕಾರಣದಿಂದಲೇ ಕೆಲವು ರೈತರು, ಕುರಿ, ಮೇಕೆಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದಾರೆ. ಹಲವರು ಈಗಾಗಲೇ ತೂಕದ ಆಧಾರದಲ್ಲಿ ಮಾರಾಟ ಮಾಡುತ್ತಿದ್ದಾರೆ. 25 ಕೆ.ಜಿ.ಗಿಂತಲೂ ಹೆಚ್ಚು ತೂಕ ಬರುವ ಕುರಿಯನ್ನು ₹ 20 ಸಾವಿರದವರೆಗೂ ರೈತರು ಮಾರಾಟ ಮಾಡುತ್ತಿದ್ದಾರೆ.‌ ಮಟನ್ ಬೆಲೆ ಏರಿಕೆ ಸಂಭವ: ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಕುರಿ ಹಾಗೂ ಒಂದು ಮೇಕೆ ಮಾಂಸ ₹ 700 ಇದೆ. ವರ್ಷ‌ದ ತೊಡಕು ಹಾಗೂ ರಂಜಾನ್ ಹಿನ್ನೆಲೆಯಲ್ಲಿ ಈ…

Read More

ಸಾಕಷ್ಟು ಮಂದಿ ಬೆಳಿಗ್ಗೆ ಎದ್ದ ತಕ್ಷಣ, ಹಲ್ಲು ಶುಚಿ ಮಾಡದೆ, ಟೀ, ತಿಂಡಿ ತಿನ್ನುವ ಅಭ್ಯಾಸ ಇರುತ್ತದೆ. ಆದರೆ ಈ ಅಭ್ಯಾಸ ಇದ್ರೆ ಇಂದೇ ಬಿಟ್ಟುಬಿಡಿ. ಬೆಳಗ್ಗೆ ಎದ್ದು ಮೊದಲು ಹಲ್ಲುಜ್ಜುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಹಲ್ಲುಗಳನ್ನು ಉಜ್ಜದಿರುವುದು ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್‌ ತರಿಸಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ https://ainlivenews.com/important-message-for-rcb-team-kotru-abd/ ನಿಮ್ಮ ಬಾಯಿ ಆರೋಗ್ಯ ಕಾಪಾಡಿಕೊಳ್ಳದಿದ್ದರೆ ಹೃದ್ರೋಗ ಹಾಗೂ ಮಧುಮೇಹದಂಥಹ ಕಾಯಿಲೆಗಳು ಬರುತ್ತವೆ ಎಂದು ಈಗಾಗಲೇ ವೈದ್ಯರು ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ. ಇದೀಗ ಹಲ್ಲುಗಳನ್ನು ಉಜ್ಜದೇ ಬಾಯಿ ಆರೋಗ್ಯ ಕಡೆಗಣಿಸಿದರೆ ಕರುಳಿನ ಕ್ಯಾನ್ಸರ್‌ ಬರಬಹುದು ಎಂಬ ಆಘಾತಕಾರಿ ಅಂಶ ಹೊರಬದ್ದಿದೆ ನೇಚರ್ ನಿಯತಕಾಲಿಕದಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ, ಸುಮಾರು 50 ಪ್ರತಿಶತದಷ್ಟು ಕರುಳಿನ ಕ್ಯಾನ್ಸರ್ ಪ್ರಕರಣಗಳಲ್ಲಿ ಬಾಯಿಯಲ್ಲಿ ಕಂಡುಬರುವ ನಿರ್ದಿಷ್ಟ ಸೂಕ್ಷ್ಮಜೀವಿಯೇ ಇದಕ್ಕೆ ಕಾರಣ ಎಂಬುದನ್ನು ಬಹಿರಂಗಪಡಿಸಲಾಗಿದೆ ಬಾಯಿಯಲ್ಲಿ ಕಂಡುಬರುವ ಸೂಕ್ಷ್ಮಜೀವಿಗಳು ಕೆಳ ಕರುಳಿಗೆ ಸಂಚರಿಸಿ ಹೊಟ್ಟೆಯಲ್ಲಿನ ಎಲ್ಲಾ ರೀತಿಯ ಆಸಿಡಿಕ್‌ ವಾತಾವರಣದಲ್ಲೂ ಜೀವಂತಾಗಿಯೇ ಇದ್ದು ನಂತರ ಕೊಲೊರೆಕ್ಟಲ್…

Read More

ಸಾಮಾನ್ಯವಾಗಿ ನಮ್ಮ ಭಾರತದಲ್ಲಿ ಆಪಲ್ ಕೃಷಿ ಎಂದ ತಕ್ಷಣ ಕಾಶ್ಮೀರವೇ ನೆನಪಾಗುವುದು. ಇದುವರೆಗೂ ನಮ್ಮ ಮನಸ್ಸಿನಲ್ಲಿ ಎಂತಹ ಭಾವನೆ ಹುಟ್ಟಿದೆ ಎಂದರೆ ಕಾಶ್ಮೀರದ ವಾತಾವರಣ ಮಾತ್ರ ಆಪಲ್ ಬೆಳೆಯಲು ಸೂಕ್ತವಾಗಿದೆ ಎಂದು ಆದರೆ ಇದು ತಪ್ಪು ಇತರೆ ಭಾಗಗಳಲ್ಲೂ ಕೂಡ ಆಪಲ್ ಬೆಳೆಯಬಹುದು ಎನ್ನುವುದನ್ನು ನಮ್ಮ ರಾಜ್ಯದ ಕೋಲಾರ ಜಿಲ್ಲೆಯ ರೈತರೊಬ್ಬರು ಸಾಧಿಸಿ ತೋರಿಸಿಕೊಟ್ಟಿದ್ದಾರೆ. ಮಗ ಹೇಳಿದ ಒಂದು ಮಾತಿನಿಂದ ಪ್ರೇರಣೆಗೊಂಡು ಕೃಷಿಯಲ್ಲಿಯೇ ಬಹಳ ದುಡ್ಡು ಮಾಡುವ ರೀತಿ ಪ್ಲಾನ್ ಮಾಡಬೇಕು ಎಂದುಕೊಂಡ ರೈತನ ಮನಸ್ಸಿನಲ್ಲಿ ಹುಟ್ಟಿದ ಒಂದೇ ಆಲೋಚನೆ ಆಪಲ್ ಕೃಷಿಯನ್ನೇ ಮಾಡಬೇಕು ಎಂದು ಅದಕ್ಕಾಗಿ ಇವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಲ್ಲೂ ಕೂಡ ಅಪಲ್ ಕೃಷಿ ಮಾಡುವುದಕ್ಕೆ ಮಾಹಿತಿ ಕೇಳಿದಾಗ ಅದರ ಬದಲು ಹಣ್ಣು ಅಥವಾ ಹೂವಿನ ಖುಷಿ ಮಾಡುವಂತೆ ಸಲಹೆ ನೀಡಿದ್ದರಂತೆ ಅಧಿಕಾರಿಗಳು ಆದರೂ ಹಠ ಬಿಡದೆ ಈ ರೈತ ತಾನೇ ಹಲವು ಮಾಹಿತಿಗಳನ್ನು ಕಲೆ ಹಾಕಲು ಶುರು ಮಾಡಿದರು. ಅವರ…

Read More

IPL ಸೀಸನ್ 17 ರಲ್ಲಿ ತವರಿನಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಆರ್‌ಸಿಬಿ ಮುಂದಿನ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡವನ್ನು ಅವರ ತವರಿನಲ್ಲಿ ಎದುರಿಸಲಿದೆ. ಆರ್‌ಆರ್ ವಿರುದ್ಧದ ಪಂದ್ಯಕ್ಕೆ ಮುನ್ನ ಆರ್‌ಸಿಬಿ ತಂಡಕ್ಕೆ ಮಾಜಿ ಆಟಗಾರ, ಬ್ಯಾಟಿಂಗ್ ದಿಗ್ಗಜ ಎಬಿ ಡಿ ವಿಲಿಯರ್ಸ್ ಮಹತ್ವದ ಸಂದೇಶ ರವಾನಿಸಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಅವರಿಗೆ ವಿಶೇಷ ಸಂದೇಶ ನೀಡಿದ್ದಾರೆ. https://ainlivenews.com/alliance-leaders-have-conspired-to-defeat-me/ ಆರ್‌ಸಿಬಿ ತಂಡದಲ್ಲಿ ಸದ್ಯ ಫಾರ್ಮ್‌ನಲ್ಲಿರುವ ಬ್ಯಾಟರ್ ವಿರಾಟ್ ಕೊಹ್ಲಿ ಒಬ್ಬರೇ. ಮಧ್ಯಮ ಕ್ರಮಾಂಕದ ಓವರ್ ಗಳಲ್ಲಿ ಅವರು ಕ್ರೀಸ್‌ನಲ್ಲಿರಬೇಕು ಎಂದು ಎಬಿಡಿ ಸಲಹೆ ನೀಡಿದ್ದಾರೆ. ಅವರ ಸುತ್ತ ಉಳಿದ ಬ್ಯಾಟರ್ ಗಳು ಸ್ಫೋಟಕ ಇನ್ನಿಂಗ್ಸ್ ಆಡಬೇಕು ಎಂದು ಹೇಳಿದರು ವಿರಾಟ್ ಕೊಹ್ಲಿ ಈ ಬಾರಿ ಐಪಿಎಲ್‌ನಲ್ಲಿ ನಾಲ್ಕು ಪಂದ್ಯಗಳಲ್ಲಿ 67.66 ಸರಾಸರಿಯಲ್ಲಿ ಎರಡು ಅರ್ಧಶತಕಗಳೊಂದಿಗೆ 203 ರನ್ ಗಳಿಸಿದ್ದಾರೆ. ಹೆಚ್ಚು ರನ್ ಗಳಿಸಿದ ಅವರು ಪ್ರಸ್ತುತ ಆರೆಂಜ್ ಕ್ಯಾಪ್ ಹೊಂದಿದ್ದಾರೆ. .ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ, ಡಿವಿಲಿಯರ್ಸ್, “ವಿರಾಟ್ ಕೊಹ್ಲಿ…

Read More

ತುಮಕೂರು:- ನನ್ನನ್ನು ಸೋಲಿಸಲು ಮೈತ್ರಿ ನಾಯಕರು ಸಂಚು ರೂಪಿಸಿದ್ದಾರೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕನ್ನಡ ನಾಡಿನ ಅಭಿವೃದ್ಧಿಗಾಗಿ, ರೈತರ ಪ್ರಗತಿಗಾಗಿ ಅಲ್ಲ. ನನ್ನನ್ನು ಸೋಲಿಸಿ ದೇವೇಗೌಡರ ಮಗ ಮತ್ತು ಅಳಿಯನ ಗೆಲುವಿಗಾಗಿ ಎಂದರು. https://ainlivenews.com/hd-revanna-contest-in-mandya-who-is-this-man-standing-against-kumaraswamy/ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹತ್ತು ವರ್ಷ, ಎಂಟು ತಿಂಗಳು ಮೂರು ಬಾರಿ ಸಂಸದನಾಗಿ ಆಯ್ಕೆಯಾಗಿ ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಚುನಾವಣೆಗಾಗಿ ರಾಜಕಾರಣ ಮಾಡದೇ ಅಭಿವೃದ್ಧಿಗಾಗಿ ಶ್ರಮಿಸಿರುವೆ. ತಾಲ್ಲೂಕಿಗೆ ಹೇಮಾವತಿ ನೀರಿನ ವಿಚಾರದಲ್ಲಿ 25 ವರ್ಷಗಳಿಂದ ಅನ್ಯಾಯವಾಗಿದೆ. 950 ಕೋಟಿ ರೂ. ವೆಚ್ಚದ ಸಂಪರ್ಕ ಕಾಲುವೆ ಯೋಜನೆ ಅನುಷ್ಠಾನದ ಮೂಲಕ ಇದನ್ನು ಸರಿಪಡಿಸಲಾಗಿದೆ ಎಂದರು. ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟ ಹೆಚ್‌.ಡಿ.ಕುಮಾರಸ್ವಾಮಿ ಅವರ ಬಾವನನ್ನು ಜೆಡಿಎಸ್‌ನಿಂದ ಕಣಕ್ಕಿಳಿಸದೇ, ಬಿಜೆಪಿಯಿಂದ ಕಣಕ್ಕಿಳಿಸಿ ನನ್ನನ್ನು ಸೋಲಿಸಲು ಸಂಚು ರೂಪಿಸಿದ್ದಾರೆ ಎಂದು ಟೀಕಿಸಿದರು.

Read More