Author: AIN Author

ಗದಗ: ಆರ್​ಎಸ್ಎಸ್ ಗಣವೇಷಧಾರಿಯಾಗಿಯೇ ಕಾರ್ಯಕರ್ತರೊಬ್ಬರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾರ್ಯಕರ್ತನ ತಲೆ ಮೇಲಿದ್ದ ಕಪ್ಪು ಟೋಪಿ ತೆಗೆದು, ಖಾದಿಯ ಗಾಂಧಿ ಟೋಪಿ ಹಾಕಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿಂಗಬಸಪ್ಪ ಬಾಣದ್ ಕಾಂಗ್ರೆಸ್ ಸೇರಿದ ಕಾರ್ಯಕರ್ತ. ನಿಂಗಬಸಪ್ಪ ಬಾಣದ್ ಅವರು ಮೂವತ್ತು ವರ್ಷದಿಂದ ಆರ್​​ಎಸ್​ಎಸ್ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಇದೀಗ ಸಚಿವ ಶಿವಾನಂದ್ ಪಾಟೀಲ್, ಮಾಜಿ ಸಚಿವ ಬಿಆರ್ ಯಾವಗಲ್, ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್, ಮಾಜಿ ಶಾಸಕ ಎಸ್​​ಜಿ ನಂಜಯ್ಯನಮಠ ಸಮ್ಮುಖದಲ್ಲಿ  ಕಾಂಗ್ರೆಸ್ ಸೇರ್ಪಡೆಯಾದರು. ಸಮಾವೇಶದ ವೇದಿಕೆಗೆ ಗಣವೇಷಧಾರಿಯಾಗಿಯೇ ಆಗಮಿಸಿದ ನಿಂಗಬಸಪ್ಪ ಅವರಿಗೆ ಗಾಂಧಿ ಟೋಪಿ ಹಾಕಿ, ಪಕ್ಷದ ಬಾವುಟ ನೀಡಿ ಕಾಂಗ್ರೆಸ್​ಗೆ ಬರಮಾಡಿಕೊಳ್ಳಲಾಯ್ತು.

Read More

ಗದಗ: ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಪರ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಸಮಾವೇಶ ನಡೆಸಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಬಾಗಲಕೋಟೆಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನರಗುಂದದಲ್ಲಿ ಸಮಾವೇಶವಾಗಿದ್ದು,‌ ಮಗಳ ಪರ ಪ್ರಚಾರದ ಅಖಾಡದಲ್ಲಿ ಸಚಿವ ಶಿವಾನಂದ ಪಾಟೀಲ ಭಾಗಿಯಾಗಿದ್ದಾರೆ. ಮಾಜಿ ಸಚಿವ ಬಿಆರ್ ಯಾವಗಲ್, ಕಾಂಗ್ರೆಸ್ ಮುಖಂಡ ಎಸ್ ಆರ್ ಪಾಟೀಲ, ಪ್ರವೀಣ್ ಯಾವಗಲ್ ಭಾಗಿಯಾಗಿದ್ದಾರೆ.

Read More

ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ನಡುರಸ್ತೆಯಲ್ಲೇ ಪತಿಯೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಭೀಕರ ಘಟನೆ ನಡೆದಿದೆ. ಹಲ್ಲೆಗೊಳಗಾದ ಪತ್ನಿ ಗೀತಾ, ಮುಂಡರಗಿ ಅಂಚೆ ಕಚೇರಿಯಲ್ಲಿ ಅಂಚೆ ಸಹಾಯಕಿಯಾಗಿ ಸೇವೆಸಲ್ಲಿಸುತ್ತಿದ್ದರು. ಹಲವು ತಿಂಗಳಿಂದ ಗಂಡ ಬೇಲೂರಪ್ಪ ಮತ್ತು ಹೆಂಡತಿ ನಡುವೆ ಜಗಳವಿತ್ತು. ಈ ಹಿನ್ನಲೆ ಇಂದು ಸಿಟ್ಟಿಗೆದ್ದ ಗಂಡ, ನಡುರಸ್ತೆಯಲ್ಲೇ‌ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಮಚ್ಚು ಹಿಡಿದುಕೊಂಡು ಗಂಡ ಅಲ್ಲೇ ನಿಂತಿದ್ದಾನೆ. ಈ ಹಿನ್ನಲೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಗೀತಾಳನ್ನು ಆಸ್ಪತ್ರೆಗೆ ಸಾಗಿಸಲು ಹಿಂದೇಟು ಹಾಕಿದ್ದಾರೆ. ಅಂಚೆ ಸಹಾಯಕಿ ಗೀತಾ ಸ್ಥಿತಿ ಚಿಂತಾಜನಿಕವಾಗಿದ್ದು, ಸ್ಥಳಕ್ಕೆ ಮುಂಡರಗಿ ಪೊಲೀಸರು ದೌಡಾಯಿಸಿದ್ದಾರೆ.

Read More

ವಿಜಯಪುರ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆರ್ಟ್ಸ್ ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ಎಸ್ ಎಸ್ ಪಿ ಯು ಕಾಲೇಜಿನ ವೇದಾಂತ ನಾವಿ ರಾಜ್ಯಕ್ಕೆ ಎರಡನೇ ಸ್ಥಾನ ಬಂಧಿದ್ದಾರೆ. ನಗರದ ಎಸ್ ಎಸ್ ಪಿ ಯು ಕಾಲೇಜಿನ ವೇದಾಂತ ನಾವಿ ಆರ್ಟ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾನೆ. ಮೂಲತಃ ಜಮಖಂಡಿ ತಾಲೂಕಿನ ಕಲ್ಲಬೀಳಗಿ ಗ್ರಾಮದ ವೇದಾಂತ ನಾವಿ ಉತ್ತನ ಸಾಧನೆ ಮಾಡಿದ್ದಾನೆ. ಆರ್ಟ್ಸ್ ವಿಭಾಗದಲ್ಲಿ ಸೌಂದರ್ಯಾ ಹಚಡದ 9 ನೇ ಸ್ಥಾನ ಪಡೆದಿದ್ದು, ಜಿಲ್ಲೆಯ ಸಿಂದಗಿ ತಾಲೂಕಿನ ಮಲಘಾಟಣ ಗ್ರಾಮದ ಶರಣ ಬಸವೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ. ದ್ವೀತಿಯ ಪಿಯುಸಿ ಫಲಿತಾಂಶದಲ್ಲಿ ಶೇ97ರಷ್ಟು ತೇರ್ಗಡೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಶೇ.96.80ರಷ್ಟು ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆಗೆ ಎರಡನೇ ಸ್ಥಾನದಲ್ಲಿದ್ದರೇ, ಶೇ.94.89ರಷ್ಟು ಫಲಿತಾಂಶದೊಂದಿಗೆ ವಿಜಯಪುರ ಜಿಲ್ಲೆಗೆ 3ನೇ ಸ್ಥಾನದಲ್ಲಿದೆ.

Read More

ತುಮಕೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ವಿದ್ಯಾರ್ಥಿನಿ ಜ್ಞಾನವಿ 600ಕ್ಕೆ 597 ಅಂಕ ಪಡೆಯುವ ಮೂಲಕ ಫಸ್ಟ್​​ ರ್ಯಾಂಕ್​ ಬಂದಿದ್ದಾರೆ. ಒಟ್ಟಾರೆಯಾಗಿ ಈ ಸಲದ 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಆ ಪೈಕಿ. 3.3 ಲಕ್ಷ ಬಾಲಕರು, 3.6 ಲಕ್ಷ ಬಾಲಕಿಯರು ತೇರ್ಗಡೆಯಾಗಿದ್ದಾರೆ. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗಗಳ ಪೈಕಿ ವಾಣಿಜ್ಯ ವಿಭಾಗದಲ್ಲಿಯೂ ಯುವತಿಯರೇ ಮೇಲುಗೈ ಸಾಧಿಸಿದ್ದಾರೆ. ವಾಣಿಜ್ಯದಲ್ಲಿ ವಿಭಾಗದಲ್ಲಿ ಈ ಸಲ 1,74,315 ಲಕ್ಷ ವಿದ್ಯಾರ್ಥಿಗಳು ಈ ಸಲದ ಪರೀಕ್ಷೆ ಬರೆದಿದ್ದರು. ತುಮಕೂರಿನ ಜ್ಞಾನವಿ ಈ ಬಾರಿಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾರೆ. ಒಟ್ಟು 597 ಅಂಕ ಪಡೆದು ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.

Read More

ಬಳ್ಳಾರಿ: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಅದರಲ್ಲಿ ಪ್ರತಿ ಮನೆ ಒಡತಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆ ಸಹ ಒಂದಾಗಿದ್ದು, ಈ ಯೋಜನೆಯ ಹಣ ಬಹಳಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ. ಅದರಂತೆ ಇದೀಗ ಗ್ಯಾರಂಟಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಗ್ರಾಮದ ದಂಪತಿ ಟಿವಿ ಖರೀದಿಸಿದ್ದಾರೆ. https://www.youtube.com/watch?v=Bi0LjX_i_N4&ab_channel=AINKannada ಬಳ್ಳಾರಿಯ ಸಂಗನಕಲ್ಲು ಗ್ರಾಮದ ಮಹಿಳೆ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಟಿವಿ ಖರೀದಿಸಿದ್ದಾರೆ. ಹೌದು, ಬರೊಬ್ಬರಿ 13,600 ರೂ ಮೌಲ್ಯದ ಟಿವಿ ಖರೀದಿ ಮಾಡಿದ್ದು, ಯುಗಾದಿ ಹಬ್ಬಕ್ಕೆ ಟಿವಿ ಖರೀದಿಸಿ ಸಂತಸ ವ್ಯಕ್ತಪಡಿಸಿದರು.

Read More

ಬೆಂಗಳೂರು:  ವೈ ಎಸ್ ಶರ್ಮಿಲಾ ರೆಡ್ಡಿ ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿದರು. ದಿಢೀರ್ ಭೇಟಿಗೆ ಕಾರಣವೇನು ಅನ್ನೋದು ಇನ್ನೂ ಗೊತ್ತಿಲ್ಲ. ಆಂಧ್ರಪ್ರದೇಶದಲ್ಲಿ ತಮ್ಮ ಸಹೋದರನ ವಿರುದ್ಧ ಒಂದು ದೊಡ್ಡ ಶಕ್ತಿಯಾಗಿ ಬೆಳೆದಿರುವ ಶರ್ಮಿಳಾ ಇದೇ ವರ್ಷ ಜನವರಿ ತಿಂಗಳು ಮೊದಲ ವಾರದಲ್ಲಿ ರಾಹುಲ್ ಗಾಂಧಿಯವರ ಸಮ್ಮುಖ ಕಾಂಗ್ರೆಸ್ ಪಕ್ಷ ಸೇರಿದ್ದರು. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/  ಅವರು ಪಕ್ಷಕ್ಕೆ ಸೇರಿದ ಕೂಡಲೇ ಎಐಸಿಸಿ ಅವರನ್ನು ಆಂದ್ರಪ್ರದೇಶ ಕಾಂಗ್ರೆಸ್ ಘಟಕದ ಉಸ್ತುವಾರಿಯನ್ನು ವಹಿಸಿಕೊಟ್ಟಿತ್ತು. ಕಾಂಗ್ರೆಸ್ ಸೇರುವ ಮೊದಲು ಶರ್ಮಿಳಾ ಯುವಜನ ಶ್ರಮಿಕ ರೈತು ತೆಲಂಗಾಣ ಪಕ್ಷವನ್ನು ಸ್ಥಾಪಿಸಿ ಆಂಧ್ರಪ್ರದೇಶದ ಜೊತೆ ತೆಲಂಗಾಣಲ್ಲೂ ಪಕ್ಷ ಸಂಘಟನೆಯ ಕೆಲಸ ಮಾಡಿದ್ದರು.

Read More

ಬೆಂಗಳೂರು: ವಿದ್ಯಾರ್ಥಿ ಜೀವನದ ಟರ್ನಿಂಗ್ ಪಾಯಿಂಟ್, ಭವಿಷ್ಯದ ಹಾದಿಯ ಮೆಟ್ಟಿಲು ಅಂತೆಲ್ಲ ಕರೆಯಲ್ಪಡುವ ದ್ವೀತಿಯ ಪಿಯುಸಿ ಫಲಿತಾಂಶ ಇಂದು ಹೊರಬಿದ್ದಿದೆ. ಪರೀಕ್ಷೆ ಬರೆದು ರಿಸಲ್ಟ್ ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಕೊನೆಗೂ ತಮ್ಮ ಶ್ರಮದ ಫಲ ಸಿಕ್ಕಿದೆ. ಪಿಯುಸಿ ಪರೀಕ್ಷೆಯಲ್ಲಿ ಯಾವ ಜಿಲ್ಲೆಗೆ ಯಾವ ಪಟ್ಟ ಒಲಿದಿದೆ,ಯಾರ ಕೊರಳಿಗೆ ರ್ಯಾಂಕ್ ಅನ್ನೋ ವಿಜಯಮಾಲೆ ದಕ್ಕಿದೆ ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. 2023-24 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಈ ಬಾರಿ 6 ಲಕ್ಷದ 81 ಸಾವಿರದ 79ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ರು,ಇದರಲ್ಲಿ 5 ಲಕ್ಷದ 52ಸಾವಿರದ 690 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ 97.37%  ಮೂಲಕ ಪ್ರಥಮ ಸ್ಥಾನಕಾಯ್ದುಕೊಂಡಿದ್ರೆ. ಗದಗ 72.86% ಫಲಿತಾಂಶದ ಮೂಲಕ ಕೊನೆ ಸ್ಥಾನ ಪಡೆದಿದ್ದು,ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ಈ ಬಾರಿ ಬೆಂಗಳೂರಿನ ಎನ್‌ಎಂ‌ಕೆಆರ್‌ವಿ ಕಾಲೇಜಿನ ಮೇದಾ, ವಿಜಯಪುರದ ವೇದಾಂತ್, ಹಾಗೂ ಬಳ್ಳಾರಿಯ ಕವಿತಾ ಆರ್ಟ್ಸ್‌ ವಿಭಾಗದಲ್ಲಿ 600ಕ್ಕೆ 596 ಅಂಕ…

Read More

ಮೈಸೂರು: ಬಿಜೆಪಿಯಿಂದ ಎರಡೂ ಕಾಲು ಹೊರಗಿಟ್ಟು ಕಾಂಗ್ರೆಸ್ ಗೆ ಜೊತೆಗೆ ಸಖ್ಯ ಬೆಳೆೆಸಿಕೊಂಡಿದ್ದ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಇದೀಗ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಗೆ ಮತ ಹಾಕುತ್ತೇನೆ, ಜೊತೆಗೆ ಅವರ ಪರ ಪ್ರಚಾರ ಮಾಡ್ತೇನೆ ಎಂದು ಹೇಳಿದ್ದಾರೆ. ಇದೇವೇಳೆ ಶಿಕ್ಷಣ ಇಲಾಖೆ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬದಲಾಯಿಸಲು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಯದುವೀರ್ ಪರ ಬ್ಯಾಟಿಂಗ್ ನಡೆಸಿದರು. ಯದುವೀರ್ ಅವರ ಪರ ಪ್ರಚಾರಕ್ಕೆ ಹೋಗುತ್ತೇನೆ. ಯದುವೀರ್ ಗೆ ಟಿಕೆಟ್ ಕೊಟ್ಟ ಬಳಿಕ, ನನಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ರೆ ನಾನು ಚುನಾವಣೆಗೆ ನಿಲ್ಲುತ್ತಿರಲಿಲ್ಲ. ರಾಜಕಾರಣ ನಿಂತ ನೀರಲ್ಲ, ಹರಿಯುವ ಗಂಗೆ. ರಾಜಕೀಯ ಧ್ರುವೀಕರಣ ಆಗುತ್ತಿದೆ. ಒಂದು ವೋಟನ್ನ ಯದುವೀರ್ ಗೆ ಹಾಕುವ ಮೂಲಕ ಮಹರಾಜರ ಋಣ ತೀರಿಸಬೇಕು. ಎಂದರು. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ಇದೇ ವೇಳೆ ನಾನು ಬಿಜೆಪಿ ಎಂಎಲ್ ಸಿ…

Read More

ರಾಮನಗರ: ಹೊಸತೊಡಕು ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಅಭ್ಯರ್ಥಿ ಹೆಚ್‌.ಡಿ ಕುಮಾರಸ್ವಾಮಿಯವರು (HD Kumaraswamy) ಬಿಡದಿ ತೋಟದ ಮನೆಯಲ್ಲಿ  ಏರ್ಪಡಿಸಿದ್ದ ಔತಣಕೂಟವನ್ನು ರದ್ದು ಮಾಡಲಾಗಿದೆ. ಹೆಚ್‍ಡಿಕೆ ಬಿಡದಿ ತೋಟದ ಮನೆಯಲ್ಲಿ ಔತಣಕೂಟದ ಜೊತೆಗೆ ಒಕ್ಕಲಿಗ ನಾಯಕರ ಸಭೆಯನ್ನು ಇಂದು ಕರೆಯಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಚುನಾವಣಾಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಊಟದ ವ್ಯವಸ್ಥೆ, ಚೇರ್, ಪೆಂಡಾಲ್ ಪರಿಶೀಲನೆ ನಡೆಸಿದರು. ಅಲ್ಲದೇ 50ಕ್ಕೂ ಹೆಚ್ಚು ಮಂದಿ ಸೇರಿದ್ರೆ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆಗುತ್ತೆ. ಕುಟುಂಬಸ್ಥರಿಗೆ ಮಾತ್ರ ಊಟದ ವ್ಯವಸ್ಥೆ ಮಾಡಬಹುದು. ಆದರೆ ರಾಜಕೀಯ ನಾಯಕರು, ಮುಖಂಡರು ಬರುವ ಹಾಗಿಲ್ಲ. ಒಂದು ವೇಳೆ ರಾಜಕೀಯ ಮುಖಂಡರು ಬಂದ್ರೆ ಎಲ್ಲವನ್ನೂ ಸೀಜ್ ಮಾಡಿ ಕೇಸ್ ಮಾಡುವುದಾಗಿ ಎಚ್ಚರಿಕೆ ನೀಡಿದರು. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ಸದ್ಯ ಒಳಗೆ ಯಾವುದೇ ರಾಜಕೀಯ ಮುಖಂಡರು, ನಾಯಕರು ಇಲ್ಲ. ಒಂದು ಎಂಸಿಸಿ ಟೀಂ ಇಲ್ಲೇ ಇದ್ದು ಎಲ್ಲವನ್ನೂ ಪರಿಶೀಲನೆ ನಡೆಸಲಿದೆ. ನೀತಿ ಸಂಹಿತೆ ಉಲ್ಲಂಘನೆ ಆದ್ರೆ ಕಾನೂನು ರೀತಿಯ ಕ್ರಮವಹಿಸುತ್ತೇವೆ ಎಂದು ಸಹಾಯಕ ಚುನಾವಣಾ ಅಧಿಕಾರಿ ರಮೇಶ್…

Read More