ವಿಜಯಪುರ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆರ್ಟ್ಸ್ ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ಎಸ್ ಎಸ್ ಪಿ ಯು ಕಾಲೇಜಿನ ವೇದಾಂತ ನಾವಿ ರಾಜ್ಯಕ್ಕೆ ಎರಡನೇ ಸ್ಥಾನ ಬಂಧಿದ್ದಾರೆ.
ನಗರದ ಎಸ್ ಎಸ್ ಪಿ ಯು ಕಾಲೇಜಿನ ವೇದಾಂತ ನಾವಿ ಆರ್ಟ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾನೆ. ಮೂಲತಃ ಜಮಖಂಡಿ ತಾಲೂಕಿನ ಕಲ್ಲಬೀಳಗಿ ಗ್ರಾಮದ ವೇದಾಂತ ನಾವಿ ಉತ್ತನ ಸಾಧನೆ ಮಾಡಿದ್ದಾನೆ. ಆರ್ಟ್ಸ್ ವಿಭಾಗದಲ್ಲಿ ಸೌಂದರ್ಯಾ ಹಚಡದ 9 ನೇ ಸ್ಥಾನ ಪಡೆದಿದ್ದು, ಜಿಲ್ಲೆಯ ಸಿಂದಗಿ ತಾಲೂಕಿನ ಮಲಘಾಟಣ ಗ್ರಾಮದ ಶರಣ ಬಸವೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ.
![Demo](https://ainlivenews.com/wp-content/uploads/2023/12/spoorthi-1.jpg)
ದ್ವೀತಿಯ ಪಿಯುಸಿ ಫಲಿತಾಂಶದಲ್ಲಿ ಶೇ97ರಷ್ಟು ತೇರ್ಗಡೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಶೇ.96.80ರಷ್ಟು ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆಗೆ ಎರಡನೇ ಸ್ಥಾನದಲ್ಲಿದ್ದರೇ, ಶೇ.94.89ರಷ್ಟು ಫಲಿತಾಂಶದೊಂದಿಗೆ ವಿಜಯಪುರ ಜಿಲ್ಲೆಗೆ 3ನೇ ಸ್ಥಾನದಲ್ಲಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)